ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗಿದ್ದು (Bengaluru Rains), ಭಾರೀ ಅವಾಂತರಗಳನ್ನೂ ಸೃಷ್ಟಿಸಿದೆ. ಭಾರೀ ಮಳೆಗೆ ಆಕಾಶದೆತ್ತರಕ್ಕೆ ಬೆಳೆದಿದ್ದ ಮರಗಳು ನೆಲ ಕಚ್ಚಿವೆ. ಆಟೋ, ಕಾರು, ಮನೆಗಳ ಮೇಲೆ ಬಿದ್ದು ಜಖಂ ಆಗಿವೆ.
ಬಸವೇಶ್ವರನಗರದ 17ನೇ ಕ್ರಾಸ್ ಬಳಿ ಮನೆ ಮುಂದೆ ಕಾರು ಪಾರ್ಕ್ ಮಾಡಿದ್ದ ಕಾರಿನ (Car) ಮೇಲೆ ಮರ ಬಿದ್ದಿದ್ದು, ರಸ್ತೆಯಲ್ಲಿ ವಾಹನಗಳು ಓಡಾಡದ ಪರಿಸ್ಥಿತಿ ನಿರ್ಮಾಣ ಆಗಿದೆ. ಮಳೆ ಬಂದು ನಿಂತರೂ ಹಲವೆಡೆ ಮನೆಯಲ್ಲೇ ಗೃಹಬಂಧನವಾಗಿ ಇರಬೇಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವೇಶ್ವರ ನಗರದ (Basaveshwaranagara) ಶಾರದಾ ಕಾಲೋನಿಯ ಬಳಿ ಬೃಹತ್ ಮರ ಮನೆ ಮೇಲೆ ಬಿದ್ದಿದೆ.
ನಗರದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೆಗಳು ಧರೆಗುರುಳಿವೆ. ಕರ್ನಾಟಕ ಲೇಔಟ್, ಬೆಮೆಲ್ ಲೇಔಟ್, ಕಿರ್ಲೋಸ್ಕರ್ ಕಾಲೋನಿ ಹಾಗೂ ಕುರುಬರಹಳ್ಳಿ ಮೇನ್ ರೋಡ್ ನಲ್ಲಿ ಮರಗಳು ಬಿದ್ದಿದ್ದು, ಬೆಳ್ಳಂ ಬೆಳಗ್ಗೆ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಕಮಲಾನಗರದ ವಾಟರ್ ಟ್ಯಾಂಕ್ ಮುಖ್ಯ ರಸ್ತೆಯಲ್ಲಿಯೂ ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಸಕ ಕೆ. ಗೋಪಾಲಯ್ಯ ಸಹ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬುರ್ಖಾ ವಿದ್ಯಾರ್ಥಿನಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ: ಪ್ರತಾಪ್ ಸಿಂಹ
ಬೆಂಗಳೂರು: ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ (Bengaluru) ಶೂನ್ಯ ಮಳೆ (Zero Rainfall ) ದಾಖಲಾಗಿದೆ.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ 7.1ಮಿ.ಮೀ ಹಾಗೂ ಮಾರ್ಚ್‌ನಲ್ಲಿ 14.7ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಎರಡು ತಿಂಗಳಿನಲ್ಲಿ ಒಂದು ಹನಿಯು ಮಳೆಯಾಗದೇ ಶೂನ್ಯ ದಾಖಲೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ. ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ
ಚೆನ್ನೈ: ಭಾರೀ ನಷ್ಟ ಉಂಟು ಮಾಡಿದ ತೀವ್ರ ಸ್ವರೂಪದ ಮಿಚಾಂಗ್ ಚಂಡಮಾರುತ (Cyclone Michaung) ಆಂಧ್ರದ ಬಾಪಟ್ಲಾ ಸಮೀಪ ತೀರವನ್ನು ತಾಕಿದೆ. ತೂಫಾನ್ ಪರಿಣಾಮ ಕೋಸ್ತಾ ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳು ಮಾತ್ರವಲ್ಲದೇ ಕೆಲ ಊರುಗಳೂ ಜಲಾವೃತವಾಗಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತಿರುಮಲ ತಿರುಪತಿ (Tirumala Temple) ಜಲಮಯವಾಗಿದ್ದು, ಜಲಪಾತಗಳಿಗೆ ಜೀವಕಳೆ ಪಡೆದಿವೆ. ಕಾಳಹಸ್ತಿ ಜಲದಿಗ್ಬಂಧನದಲ್ಲಿದೆ. ಸಮುದ್ರದಲ್ಲಿ ಅಲೆಗಳಂತೂ ಎರಡು ಮೀಟರ್ ಎತ್ತರದವರೆಗೂ ಏಳುತ್ತಿದ್ದವು. ಮತ್ತೊಂದ್ಕಡೆ, ಚೆನ್ನೈ (Chennai Rain) ಮೇಲೆ ಮಿಚಾಂಗ್ ಪ್ರಭಾವ ಕಡಿಮೆ ಆಗಿದೆ. ಆದ್ರೆ ಕೆಲವು ಕಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇದನ್ನೂ ಓದಿ: ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ – ಠಾಣೆ ಎದುರೇ ಹಾರ ಬದಲಿಸಿದ ಜೋಡಿ
ನಟ ವಿಶಾಲ್ (Actor Vishal) ನಿವಾಸ ಜಲಾವೃತವಾಗಿದೆ. ವಿಶಾಲ್ ಮನೆಯಲ್ಲಿದ್ದ ನಟ ಅಮೀರ್ ಖಾನ್‌ರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಇಂದು (ಡಿ.6) ಸಹ ಆಂಧ್ರ, ತಮಿಳುನಾಡು, ಒಡಿಶಾದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಒಡಿಶಾ ಕೂಡ ಅಲರ್ಟ್ ಆಗಿದ್ದು, ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ 26 ಜನ ಮೀನುಗಾರರ ರಕ್ಷಣೆ
ರಾಜ್ಯದಲ್ಲಿ 5 ದಿನ ಮಳೆ ಸಾಧ್ಯತೆ: ಕರ್ನಾಟಕದ ಹಲವು ಭಾಗದಲ್ಲಿ ಮೂರ್ನಾಲ್ಕು ದಿನದಿಂದ ಚಳಿಯ ವಾತಾವರಣವಿದೆ. ಮುಂದಿನ ಐದು ದಿನಗಳ ಕಾಲ ಅಲ್ಲಲ್ಲಿ ಮಳೆಯಾಗುವ (Rain In Karnataka) ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಪಾಂಡಿಚೇರಿ ರಾಜ್ಯಗಳಲ್ಲಿ ಆಗುತ್ತಿರುವ ಮಿಚಾಂಗ್ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಆಗುವ ಸಾಧ್ಯತೆಗಳಿಲ್ಲ.
ಆದಾಗ್ಯೂ ಕರ್ನಾಟಕದ ಕರಾವಳಿ ಜಿಲ್ಲೆಗಳೂ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಡಿಸೆಂಬರ್ 10ರವರಗೆ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಡಿಸೆಂಬರ್ 7 ರ ಗುರುವಾರದಂದು ಉತ್ತರ ಒಳನಾಡಿನ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗಬಹುದು. ಅದೇ ರೀತಿ ಕರಾವಳಿ ಜಿಲ್ಲೆಯಲ್ಲಿ ಮಾತ್ರ ಮಳೆ ಸಾಧ್ಯತೆ ಕಡಿಮೆ. ಈ ಭಾಗದಲ್ಲಿ ಒಣ ಹವೆಯ ವಾತಾವರಣ ಇರುವ ಸಾಧ್ಯತೆಗಳು ಅಧಿಕವಾಗಿವೆ.
ಡಿಸೆಂಬರ್ 8ರ ಶುಕ್ರವಾರದಂದು ಕರ್ನಾಟಕ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳು, ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಇದೆ. ಎಲ್ಲೆಡೆ ಒಣ ಹವೆಯ ವಾತಾವರಣ ಇರಲಿದೆ.
ಡಿಸೆಂಬರ್ 9ರ ಶನಿವಾರದಂದು ಕರಾವಳಿ ಭಾಗದ ಮೂರೂ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಗಳಿವೆ. ಅದೇ ರೀತಿ ಬೆಂಗಳೂರು, ಮೈಸೂರು,ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು. ಆದರೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶನಿವಾರ ಒಣಹವೆಯ ವಾತಾವರಣ ಕಂಡು ಬರಲಿದೆ.
ಡಿಸೆಂಬರ್ 10ರ ಭಾನುವಾರದಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಆದರೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹಾವೇರಿ: ರಾಜ್ಯದಲ್ಲಿ ಬಿಟ್ಟೂ ಬಿಡದೆ ಮಳೆ (Heavy Rains) ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಸರ್ಕಾರಿ, ಖಾಸಗಿ ಅಂಗನವಾಡಿ ಕೇಂದ್ರಗಳು, ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ, ಪ್ರೌಢಶಾಲೆ (Schools) ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಗುರುವಾರ (ಇಂದು) ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು, ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (PU College) ರಜೆ ಘೋಷಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಪದವಿ, ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೇ ಧಾರವಾಡ (Dharwad), ಬೆಳಗಾವಿ (Belagavi), ಉಡುಪಿ (Udupi), ಕೊಪ್ಪಳ (Koppal) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳೂ ಸೇರಿದಂತೆ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿ:
ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಖಾನಾಪುರ ತಾಲೂಕಿನಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು ಜನರು ಮುಂಜಾಗ್ರತಾ ವಹಿಸುವಂತೆ ಸೂಚನೆ ನೀಡಲಾಗಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ಪಶ್ಚಿಮ ಭಾಗದಲ್ಲಿ ಸರಿ ಸುಮಾರು 14, ಉಪನದಿಗಳು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲ ಗ್ರಾಮದ ಜನರು ತಮ್ಮ ಜೀವವನ್ನ ಪಣಕ್ಕಿಟ್ಟು ತಾತ್ಕಾಲಿಕ ಸೇತುವೆಗಳನ್ನ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಖಾನಾಪುರ ತಾಲೂಕಿನ ಗವಾಳಿ, ಕೊಂಗಳಾ, ಪಾಸ್ತೋಲಿ ಗ್ರಾಮಗಳಲ್ಲಿ ಜನ ಸೇತುವೆ ನಿರ್ಮಾಣ ಮಾಡಿಕೊಂಡಿದ್ದು, ದಿನದೂಡುತ್ತಿದ್ದಾರೆ. ಸದ್ಯ ಅಂಗನವಾಡಿ ಕೇಂದ್ರಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಮುಂದುವರೆದ ಮಳೆಯಾರ್ಭಟ – ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ
ಮಂಗಳೂರು:
ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಕಡಲ ಅಬ್ಬರವೂ ಹೆಚ್ಚಾಗಿದ್ದು ಮಂಗಳೂರಿನ ಉಳ್ಳಾಲ ಕಡಲ ತೀರದಲ್ಲಿ ಅರಬ್ಬೀ ಸಮುದ್ರ ಭೋರ್ಗರೆಯುತ್ತಿದೆ. ಜಿಲ್ಲೆಯ ಎಲ್ಲಾ ಜೀವ ನದಿಗಳು ತುಂಬಿ ಹರಿದು ಸಮುದ್ರ ಸೇರುತ್ತಿದ್ದು, ಮಳೆ ಹಾಗೂ ನೆರೆಯಿಂದ ನದಿಯಲ್ಲಿ ಬರೋ ಮಣ್ಣು ಮಿಶ್ರಿತ ನೀರು ಸಮುದ್ರಕ್ಕೆ ಸೇರಿ ಕಡಲ ತೀರದ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಕಡಲ ತೀರದಲ್ಲಿ ಜೀವರಕ್ಷಕ ದಳ, ಗೃಹರಕ್ಷಕ ದಳ ಹಾಗೂ ಪೊಲೀಸರು ಪಹರೆ ಕಾಯುತ್ತಿದ್ದಾರೆ. ಸದ್ಯ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ
ಕೊಡಗು:
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಎಲ್ಲಿ ನೋಡಿದ್ರು ಹೆಚ್ಚಾಗಿ ಕಾವೇರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಹಾರಂಗಿ ಜಲಾಶಯ ಕ್ಕೂ ಒಳಹರಿವು ಹೆಚ್ಚಾಗಿದು ಕುಶಾಲನಗರದ ಅನೇಕ ಬಡಾವಣೆಗಳಿಗೆ ಕೃತಕ ಪ್ರವಾಹ ಉಂಟಾಗುವ ಅಂತಕ ಎದುರಾಗಿದೆ. ಹೀಗಾಗಿ ಹಾರಂಗಿ ಡ್ಯಾಂನಲ್ಲೇ ಕಾವೇರಿ ನದಿಗೆ ಹೊರ ಹರಿವು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬಡಾವಣೆಗಳಿಗೆ ಯಾವುದೇ ರೀತಿಯ ತೊಂದರೆ ಅಗದಂತೆ ಅಧಿಕಾರಿಗಳು ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡುತ್ತಿದ್ದಾರೆ.
ಮಡಿಕೇರಿ: ಅದು 2019.. ಕೊಡಗು (Kodagu) ಜಿಲ್ಲೆಯಲ್ಲಿ ಮಹಾಮಳೆಯ ಸಮಯ. ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಗೆ ಅ ಊರಿನಲ್ಲಿ ಬೆಟ್ಟವೇ ಕುಸಿದು ಸಾವು-ನೋವುಗಳು ಸಂಭವಿಸಿದವು. ಅದರಲ್ಲೂ ವ್ಯಕ್ತಿಯೊಬ್ಬರ ಹೆಂಡತಿ-ಮಕ್ಕಳು ಭೂಕುಸಿತದಿಂದ ಮರಣ ಹೊಂದಿದರು. ಅ ಘಟನೆಯಿಂದ ಹೊರಗೆ ಬಾರದೇ ಇರುವ ಅ ಊರಿನ ಜನರು ಇಂದಿಗೂ ಸಣ್ಣಮಳೆ ಬಂದರೂ ಭಯಪಡುತ್ತಾರೆ. ಅದರೆ ಅ ವ್ಯಕ್ತಿ ಮಾತ್ರ ತನ್ನ ಹೆಂಡತಿ-ಮಕ್ಕಳ ಮೇಲಿನ ಆಪಾರವಾದ ಪ್ರೀತಿಗಾಗಿ ಅವರಿಗೆ ಬಂದ ಪರಿಹಾರದ ಹಣದಲ್ಲಿ ಬಡ ಜನರಿಗೆ ಒಂದು ಸೂರು ಕಲ್ಪಿಸುವ ಮೂಲಕ ಜಿಲ್ಲೆಯ ಜನರಿಗೆ ಮಾದರಿಯಾಗಿದ್ದಾರೆ.
2019 ರಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಮಹಾಮಳೆಗೆ ದುರ್ಘಟನೆಯೊಂದು ನಡೆದುಹೋಗಿತ್ತು. ಭಾರೀ ಮಳೆ ಇರುವ ಹಿನ್ನೆಲೆಯಲ್ಲಿ ಮನೆಯ ಮುಂದೆ ಪ್ರವಾಹ ಬರುತ್ತದೆ ಎಂದು ಬೆಟ್ಟದ ಮೇಲೆ ಆಶ್ರಯ ಪಡೆಯಲು ಹೊರಟಿದ್ದ ಜನರಿಗೆ ಪ್ರಕೃತಿಯೇ ಮುನಿಸಿಕೊಂಡು ಆ ಬೆಟ್ಟ ಪ್ರದೇಶವೇ ಭೂಕುಸಿತವಾಗಿತ್ತು. ಸುಮಾರು 10 ಜನರು ಮಣ್ಣಿನ ಅವಶೇಷಗಳಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಶವಗಳ ಹುಡುಕಾಟವು ಸುಮಾರು ವಾರಗಟ್ಟಲೇ ನಡೆಯಿತು. ಇದನ್ನೂ ಓದಿ: ಭೂಕಂಪ, ಸುನಾಮಿ ಸಂಭವಿಸಿದರೂ ಜಪಾನ್‌ನಲ್ಲಿ ಜಾಸ್ತಿ ಹಾನಿಯಾಗಲ್ಲ ಯಾಕೆ? ದೇಶ ಹೇಗೆ ಎದುರಿಸುತ್ತೆ?
ಅಂದು ಈ ಗ್ರಾಮದ ಪ್ರಭು ಕುಮಾರ್ ಎಂಬವರು ತನ್ನ ಹೆಂಡತಿ ಅನಸೂಯ ಹಾಗೂ ಮಕ್ಕಳಾದ ಅಮೃತ ಅದಿತಿಯನ್ನು ಕಳೆದುಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣವನ್ನು ಮೃತಪಟ್ಟವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಪರಿಹಾರದ ಹಣವನ್ನು ಪಡೆದ ಪ್ರಭುಕುಮಾರ್, ಹೆಂಡತಿ-ಮಕ್ಕಳ ಹೆಸರಿನಲ್ಲಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿ, ತೋಟದ ಕಾರ್ಮಿಕರಾಗಿ ಸಂಕಷ್ಟದ ಬದುಕು ನಡೆಸುತ್ತಿರುವ ಬೋಜು, ಬೊಳ್ಳಕ್ಕಿ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ಹೆಂಡತಿ-ಮಕ್ಕಳ ಆಸೆಯಂತೆ ಬಡವರ್ಗದ ಜನರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ತನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾರೆ.
ಈ ತೋರಾ ಗ್ರಾಮದಲ್ಲೇ ಚಿಕ್ಕ ತೋಟವನ್ನು ಹೊಂದಿರುವ ಬೋಜು, ಬೊಳ್ಳಚ್ಚಿ ಅವರ ಮಕ್ಕಳಾದ ಶರಣು, ಶಾಂತಿ ಕುಟುಂಬ ಚಿಕ್ಕ ಮತ್ತು ಹಳೆಯದಾದ ಹುಲ್ಲಿನ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿತ್ತು. ಇದನ್ನು ಗಮನಿಸಿದ ಪ್ರಭುಕುಮಾರ್ 80 ಸಾವಿರ ವೆಚ್ಚದಲ್ಲಿ ಸಿಮೆಂಟ್ ಕಾಂಪೌಂಡ್ ಗೋಡೆಗಳನ್ನು ಬಳಸಿ, ಸಿಮೆಂಟ್ ಶೀಟುಗಳನ್ನು ಹೊದಿಸಿ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತಾಗುತ್ತಿದ್ದ ನೆಲ, ಹುಲ್ಲಿನ ಸಂದಿಗಳಿಂದ ತೊಟ್ಟಿಕ್ಕುವ ನೀರ ಹನಿಗಳಲ್ಲಿ ನೆನೆಯುತ್ತಲೇ ಬದುಕು ದೂಡುತ್ತಿತ್ತು ಶರಣು, ಶಾಂತಿ ಕುಟುಂಬ. ಇವರನ್ನು ಕಂಡಾಗಲೆಲ್ಲಾ ಪ್ರಭುಕುಮಾರ್ ಪತ್ನಿ ಅನಸೂಯ ಮಮ್ಮಲ ಮರುಗುತಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೇ ತನ್ನ ಮೊದಲ ಮಡದಿಯ ಸವಿನೆನಪಿಗಾಗಿ ಸೂರೊಂದನ್ನು ನಿರ್ಮಿಸಿಕೊಟ್ಟು, ಹೆಂಡತಿ-ಮಕ್ಕಳ ಆಶಯ ಈಡೇರಿಸುವ ಕೆಲಸ ಮಾಡಿದ್ದಾರೆ. ಮನೆ ಕಲ್ಪಿಸಿಕೊಟ್ಟ ಪ್ರಭು ಅವರ ಕಾರ್ಯಕ್ಕೆ ಈ ಬಡ ಕುಟುಂಬ ಚಿರರುಣಿ ಎನ್ನುತ್ತಿದ್ದಾರೆ. ಇದನ್ನೂ ಓದಿ: ತುಳುನಾಡಿನ ಕಾರಣಿಕ ದೈವ ಕೊರಗಜ್ಜ ಗುಡಿಗೇ ಬೆಂಕಿಯಿಟ್ಟ!
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ (Dakshina Kannada Rain) ಹಿನ್ನೆಲೆಯಲ್ಲಿ ಗುರುವಾರವೂ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ (School-College Holiday) ರಜೆ ಘೋಷಿಸಲಾಗಿದೆ.
ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜು.6 ರಂದು ರಜೆ ಘೋಷಿಸಲಾಗಿದೆ.
ಶಿಮ್ಲಾ: ಈ ವರ್ಷ ಜೂನ್ ತಿಂಗಳಲ್ಲಿ ಹಿಮಾಚಲ ಪ್ರದೇಶದ (Himachal Pradesh) ರಾಜಧಾನಿಯಲ್ಲಿ 324.9 ಮಿಮೀ ಮಳೆ ದಾಖಲಾಗಿದೆ. ಇದು ಕಳೆದ 20 ವರ್ಷಗಳಲ್ಲೇ ಜೂನ್ (June) ತಿಂಗಳಲ್ಲಿ ಶಿಮ್ಲಾದಲ್ಲಿ (Shimla) ಸುರಿದ 2ನೇ ದಾಖಲೆಯ ಮಳೆಯಾಗಿದೆ (Rain) ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 2008ರ ಜೂನ್‌ನಲ್ಲಿ ಶಿಮ್ಲಾದಲ್ಲಿ 570.2 ಮಿಮೀ ಮಳೆಯಾಗಿತ್ತು.
ಹವಾಮಾನ ಇಲಾಖೆ ಗುರುವಾರ ಉತ್ತರಾಖಂಡದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿತ್ತು. ಮುಂದಿನ 2 ದಿನಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರ್ಯಾಣದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದಿದೆ. ಈ ನಡುವೆ ಮುಂದಿನ 4 ದಿನಗಳಲ್ಲಿ ಗೋವಾ, ಗುಜರಾತ್ ಹಾಗೂ ಮಹಾರಾಷ್ಟ್ರದ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಎರಡು ಮದ್ಯದ ಬಾಟಲ್ ಕೊಂಡೊಯ್ಯಲು ಅನುಮತಿ
ಚೆನ್ನೈ: ಕೆಲ ದಿನಗಳಿಂದ ತಮಿಳುನಾಡಿನಲ್ಲಿ (Tamil Nadu)ಮಳೆಯ ಅಬ್ಬರ (Heavy Rain) ಜೋರಾಗಿದ್ದು ದೇವಸ್ಥಾನಗಳಿಗೂ ನೀರು ನುಗ್ಗಿದೆ. ಇದರಿಂದ ದೇವಸ್ಥಾನದಲ್ಲಿ (Temple) ನಡೆಯಬೇಕಿದ್ದ ಎಷ್ಟೋ ಮದುವೆಗಳು ವಿಳಂಬವಾಗಿದ್ದು, ವಧುವರರು ಸರ್ಕಾರದ ಮೊರೆ ಹೋಗಿದ್ದಾರೆ.
#WATCH | Tamil Nadu: 5 weddings that were scheduled at Anjineyar temple in Pulianthope were delayed due to rainfall today. Couples lined up for wedding ceremonies were drenched as they walked through the water logged inside the temple. These weddings were scheduled months ago. pic.twitter.com/OA96wQEiz2
ಪುಲಿಯನ್‌ತೋಪ್‌ನ ಆಂಜಿನೇಯರ್ ದೇವಸ್ಥಾನದಲ್ಲಿ (Anjineyar Temple) ನಡೆಯಬೇಕಿದ್ದ 5 ಮದುವೆಗಳು ಮಳೆಯಿಂದಾಗಿ ವಿಳಂಬವಾಗಿವೆ. ಶುಕ್ರವಾರ ಭಾರೀ ಮಳೆಯ ನಡುವೆಯೂ ದೇವಸ್ಥಾನಕ್ಕೆ ಬಂದ ನವ ಜೋಡಿ ಮಳೆಯಲ್ಲೂ ಹರಸಾಹಸ ನಡೆಸಿ ಮದುವೆಯಾಗಿದೆ. ಬಳಿಕ ದೇವಸ್ಥಾನ ಜಲಾವೃತವಾಗಿದೆ, ನಾವೂ ಒದ್ದೆಯಾಗಿದ್ದೇವೆ, ದೇವಸ್ಥಾನದ ಆವರಣ ಮತ್ತು ಇತರ ಸಾರ್ವಜನಿಕ ಪ್ರದೇಶಗಳನ್ನು ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ (Tamilnadu Government) ಮನವಿ ಮಾಡುತ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಮಾಡೆಲ್ ಆಗಲು ಪೊಲೀಸ್ ಉದ್ಯೋಗ ಬಿಡಲ್ಲ ಎಂದ ವಿಶ್ವಸುಂದರಿ ಡಯಾನಾ
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶಾಲಾ ಕಾಲೇಜುಗಳನ್ನು (Schools, College) ಬಂದ್ ಮಾಡಲಾಗಿದೆ. ಚೆನ್ನೈನ (Chennai) ತಿರುವಲ್ಲೂರ್, ಕಾಂಚಿಪುರಂ, ರಾಣಿಪೇಟ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಹತ್ಯೆಯ ಭಯ – ಜಿ20 ಶೃಂಗಸಭೆಯಲ್ಲಿ ಭಾಗವಹಿಸಲ್ಲ ಎಂದ ಪುಟಿನ್
ಈಗಾಗಲೇ ರಾಜ್ಯದಲ್ಲಿ ಮಳೆಗೆ ಮೂರು ಜೀವಗಳು ಬಲಿಯಾಗಿದೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕೆಲವು ಜಿಲ್ಲೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಕರ್ನಾಟಕದ ಕಾಶ್ಮೀರ ಎಂದೇ ಕರೆಯಲ್ಪಡುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ (Himavad Gopalaswamy Hills) ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ಬಂದ್?
ಗುಡಿಬಂಡೆ-ಪೇರೇಸಂದ್ರ ಮಾರ್ಗ, ಗುಡಿಬಂಡೆ ಹಂಪಸಂದ್ರ-ಬಾಗೇಪಲ್ಲಿ ಮಾರ್ಗ, ಗುಡಿಬಂಡೆ-ಲಕ್ಕೇನಹಳ್ಳಿ ಮಾರ್ಗ, ರಾಮಪಟ್ಟಣ ನವಿಲುಗುರ್ಕಿ ಮಾರ್ಗ, ಗುಡಿಬಂಡೆ ಅಮಾನಿ ಭೈರಸಾಗರ ಮಾರ್ಗಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಲದಿಗ್ಬಂಧನವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಕಾರ್ಯವೈಖರಿ ಹೊಗಳಿದ ಕಾಂಗ್ರೆಸ್ ನಾಯಕ, ರಾಜಸ್ಥಾನ ಸಿಎಂ ಗೆಹ್ಲೋಟ್
ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಕೇಂದ್ರಕ್ಕೆ ಬರಲು ಗೌರಿಬಿದನೂರು ಮಾರ್ಗ ಬಳಸಬೇಕಿದೆ. ಬಾಗೇಪಲ್ಲಿಯಲ್ಲೂ ಭರ್ಜರಿ ಮಳೆಯಾಗಿರುವುದರಿಂದ ಪಟ್ಟಣದ ಟಿಬಿ ಕ್ರಾಸ್ ಬಳಿ ಅಂಡರ್ ಪಾಸ್ ಜಲಾವೃತವಾಗಿ ವಾಹನ (Vehicle) ಸವಾರರು ಪರದಾಡುತ್ತಿದ್ದಾರೆ. ಇದರಿಂದ ಬಾಗೇಪಲ್ಲಿಗೆ ತೆರಳಲು ಎಲ್ಲೋಡು ಮಾರ್ಗ ಕಲ್ಪಿಸಲಾಗಿದೆ. ಕಾರೊಂದು ಜಲಾವೃತವಾಗಿ ಅಂಡರ್ ಪಾಸ್‌ನಲ್ಲೇ ಕೆಟ್ಟುನಿಂತಿದೆ. ಬಾಗೇಪಲ್ಲಿ-ಪುಟ್ಟಪರ್ತಿ ಮಾರ್ಗದಲ್ಲಿ ಕುಶಾವತಿ ಮೈದುಂಬಿ ಹರಿಯುತ್ತಿದ್ದು, ಪುಟ್ಟಪರ್ತಿ ಮಾರ್ಗದ ಸಂಚಾರ ಬಂದ್ ಆಗಿದೆ. ಗುಡಿಬಂಡೆ ತಾಲ್ಲೂಕು ನಿಲಗುಂಬ ಗ್ರಾಮ ಸೇರಿ ಹಲವೆಡೆ ಮನೆಗಳು ಕುಸಿದಿರುವ ಮಾಹಿತಿಯಿದೆ.
Live Tv
[brid partner=56869869 player=32851 video=960834 autoplay=true]