Tag: Rainfall

  • ಕೊಡಗಿನಲ್ಲಿ ಈ ಬಾರಿಯೂ ಪ್ರವಾಹ, ಭೂಕುಸಿತದ ಆತಂಕ – 2,965 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ!

    ಕೊಡಗಿನಲ್ಲಿ ಈ ಬಾರಿಯೂ ಪ್ರವಾಹ, ಭೂಕುಸಿತದ ಆತಂಕ – 2,965 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ!

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಪ್ರತಿ ಮಳೆಗಾಲ ಬಂದ್ರೆ ಸಾಕು ಜಿಲ್ಲೆಯ ಜನರಲ್ಲಿ ಅದೇನೋ ಆತಂಕ ಮನೆಮಾಡಿಬಿಡುತ್ತೆ. ಅದರಲ್ಲೂ ಇದೀಗ ಜಿಲ್ಲಾಡಳಿತ ನೀಡಿರೋ ಆ ಸ್ಥಳಗಳಲ್ಲಿ ಮತ್ತೆ ಪ್ರವಾಹ, ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸೂಕ್ಷ್ಮ ಪ್ರದೇಶಗಳೆಂದು ಗುರುತು ಮಾಡಿರುವ ಸ್ಥಳದಿಂದ ಜನರನ್ನ ಸುರಕ್ಷಿತ ಸ್ಥಳ ಮತ್ತು ಕಾಳಜಿ ಕೇಂದ್ರಗಳಿಗೆ ಕಳುಹಿಸಲು ತಯಾರಿ ನಡೆಸಿದೆ.

    ಹೀಗಾಗಿ ಮುಂಬರುವ ಮಳೆಗಾಲದಲ್ಲಿ ಗುಡ್ಡಗಾಡು ಜನರಿಗೆ ಮತ್ತೆ 2018-19ರ ಆ ಕರಾಳ ದಿನಗಳ ಜೊತೆಗೆ ಮಳೆಯ ಆತಂಕವೂ ಎದುರಾಗಿದೆ.

    ಕೊಡಗು ಜಿಲ್ಲೆಯಲ್ಲಿ ಸದ್ಯ 45 ಕಡೆ ಸಂಭವನೀಯ ಭೂಕುಸಿತ ಹಾಗೂ 44 ಕಡೆಯಲ್ಲಿ ಸಂಭವನೀಯ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತುಮಾಡಿದೆ. ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ.

    ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ. 2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

    ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆ ಸುರಿಯುತ್ತಿದ್ದು, ಒಂದು ರೀತಿಯ ಭಯ ಸೃಷ್ಟಿಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಲಿದ್ದು, ಜಿಲ್ಲೆಗೆ ಅಪಾಯ ತಂದೊಡ್ಡುತ್ತಾ ಎನ್ನುವ ಭೀತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ನಿಭಾಯಿಸಲು ಈಗಾಗಲೇ ಕೊಡಗು ಜಿಲ್ಲಾಡಳಿತ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಂಡಿದೆ‌.

    ಇನ್ನೂ 2018 ರಿಂದ ನಿರಂತರವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ. ಭೂಕುಸಿತ ಪ್ರವಾಹ ಜಲಸ್ಫೋಟ. ಸರಣಿ ಭೂಕಂಪಗಳು ಕಳೆದ ವರ್ಷದವರೆಗೂ ಅಲ್ಲಲ್ಲಿ ಭೂಕುಸಿತ ರಸ್ತೆ ಬಿರುಕು ಭೂ ಕುಸಿತ ಉಂಟಾಗುವ ಸ್ಥಳಗಳಲ್ಲಿ ವಾಸ ಮಾಡುವ ಜನರಿಗೆ ನೋಟಿಸ್ ಕೊಟ್ಟಿರುವುದನ್ನು ಗಮನಿಸಿದೇವೆ‌. ಈ ಬಾರಿಯೂ ಅದೇ ಆತಂಕ ಎದುರಾಗಿದೆ.

  • ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ನಿರ್ಮಾಣಕ್ಕೆ ಅವಕಾಶವಿಲ್ಲ – ಹೊಸ ಕಾನೂನು ತರುತ್ತೇನೆ ಎಂದ ಡಿಕೆಶಿ

    ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ನಿರ್ಮಾಣಕ್ಕೆ ಅವಕಾಶವಿಲ್ಲ – ಹೊಸ ಕಾನೂನು ತರುತ್ತೇನೆ ಎಂದ ಡಿಕೆಶಿ

    ನೆಲಮಹಡಿಯಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಿ; ಡಿಸಿಎಂ

    ಬೆಂಗಳೂರು: ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ (ಅಂಡರ್ ಗ್ರೌಂಡ್) ನಿರ್ಮಾಣ ಮಾಡಿ ವಾಹನ ಪಾರ್ಕಿಂಗ್‌ಗೆ (Basement Parking) ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ಇದಕ್ಕೆ ಹೊಸ ಕಾನೂನು ತರುತ್ತೇನೆ. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿಟಿಎಂ 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್ ಪಾಳ್ಯದಲ್ಲಿ ಮನಮೋಹನ್ ಕಾಮತ್ ಹಾಗೂ ದಿನೇಶ್ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳ ಜೊತೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಭಾರತದ ದಾಳಿಗೆ ಬೆಚ್ಚಿ ಬಚ್ಚಿಟ್ಟುಕೊಂಡಿದ್ದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ತಗ್ಗು ಪ್ರದೇಶಗಳಲ್ಲಿ ಬೇಸ್ಮೆಂಟ್‌ ಹೊರತು ಪಡಿಸಿ ನೆಲ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿ ಯೋಜನೆ ರೂಪಿಸುವ ಆಲೋಚನೆಯಿದೆ. ಅದರಂತೆ ಜನರು ವಾಸಕ್ಕೆ ಮನೆ ನಿರ್ಮಾಣ‌ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಕನ್ನಡ ಮಾತಾಡಿ ಅಂದಿದ್ದಕ್ಕೆ SBI ಬ್ಯಾಂಕ್ ಮ್ಯಾನೇಜರ್ ಕಿರಿಕ್ – ಯಾವತ್ತೂ ಕನ್ನಡ ಮಾತಾಡಲ್ಲ ಅಂತ ದರ್ಪ!

    ಅಂಡರ್‌ಗ್ರೌಂಡ್‌ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಮೂಲಕ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸ್ ಹಾಗೂ ಸಹಾಯ ಮಾಡಲು ಬಂದ ವ್ಯಕ್ತಿಗಳಿಗೂ ವಿದ್ಯುತ್‌ ಶಾಕ್‌ ತಗುಲಿದೆ. ವೇಳೆ ಮೃತಪಟ್ಟ ನಾಗರಿಕರಿಗೆ ಪರಿಹಾರ ನೀಡಲಾಗುವುದು. ಮಳೆಯ ಅವಘಡದಿಂದ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳು ಸಹ ಮೃತಪಟ್ಟಿದ್ದು ಇದಕ್ಕೂ ಪರಿಹಾರ ನೀಡಲಾಗುವುದು. ನಮ್ಮ ಅಧಿಕಾರಿಗಳಿಗೆ ದಿನಪೂರ್ತಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಬಿಬಿಎಂಪಿ ಹಾಗೂ ಜಲಮಂಡಳಿಯವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿನ ಬಗ್ಗೆ ಕೇಳಿದಾಗ, ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ವಾರ್ ರೂಮಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ಮಾಧ್ಯಮಗಳೇ ಒಮ್ಮೆ ಬಂದು ನೋಡಿ. ಎಲ್ಲರೂ ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಮತ್ತೆ ಸವಾಲು ಹಾಕಿದ್ರೆ, ನಾವು ಮಾತಿನಿಂದಲ್ಲ.. ಬೆಂಕಿ, ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ಪ್ರತಿಕ್ರಿಯಿಸ್ತೇವೆ – ಮುದಿತ್ ಮಹಾಜನ್

    ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ವಿವರಿಸಿದರು.

  • ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಬೆಂಗಳೂರಲ್ಲಿ ಮಳೆ ಎಫೆಕ್ಟ್‌; ಕಾರಿನ ಮೇಲೆ ಬಿದ್ದ ಮರದ ಕೊಂಬೆ – ಬೈಕ್‌ ಸವಾರ ಜಸ್ಟ್‌ ಮಿಸ್‌

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru Rains) ರಾತ್ರಿ ಸುರಿದ ಮಳೆ ಹಲವು ಅವಾಂತರ ಸೃಷ್ಟಿಸಿದೆ. ಎಲೆಕ್ಟ್ರಾನಿಕ್‌ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಕಾರಿನ ಮೇಲೆ ಮರದ ಕೊಂಬೆ ಬಿದ್ದಿತು. ಈ ವೇಳೆ ಬೈಕ್‌ ಸವಾರ ಜಸ್ಟ್‌ ಮಿಸ್‌ ಆಗಿದ್ದಾರೆ.

    ರಸ್ತೆಯಲ್ಲಿ ವಾಹನಗಳು ಓಡಾಡುವಾಗ ಮರದ ಕೊಂಬೆ ಬಿದ್ದಿದೆ. ಇಬ್ಬರು ಬೈಕ್‌ ಸವಾರರು ಪಾಸ್‌ ಆದ ಕೆಲವೇ ಸೆಕೆಂಡುಗಳಲ್ಲಿ ಕೊಂಬೆ ಬಿದ್ದಿದೆ. ಅವರ ಹಿಂದೆಯೇ ಬರುತ್ತಿದ್ದ ಕಾರಿನ ಮೇಲೆ ಕೊಂಬೆ ಬಿದ್ದಿತು. ಘಟನೆಯ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ – ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

    ಪೀಣ್ಯದಲ್ಲೂ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೃಹತ್‌ ಮರವೊಂದು ನೆಲಕ್ಕುರುಳಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್‌ ಕಂಬ ನೆಲಕ್ಕುರುಳಿದೆ. ಪರಿಣಾಮ ಪೀಣ್ಯ ಇಂಡಸ್ಟ್ರೀಸ್ ಭವನದಿಂದ ಹೆಚ್‌ಎಂಟಿ ಲೇಔಟ್ ಕಡೆಗೆ ಹೋಗುವ ರಸ್ತೆ ರಸ್ತೆ ಬಂದ್‌ ಆಯಿತು. ವಾಹನ ಸವಾರರು ಪರದಾಡುವಂತಾಯಿತು.

    ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುತ್ತಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

  • ಶಿರಸಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ – 20 ಎಕರೆಗೂ ಹೆಚ್ಚು ಅಡಿಕೆ ತೋಟಕ್ಕೆ ಹಾನಿ

    ಶಿರಸಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ – 20 ಎಕರೆಗೂ ಹೆಚ್ಚು ಅಡಿಕೆ ತೋಟಕ್ಕೆ ಹಾನಿ

    ಕಾರವಾರ: ಶಿರಸಿಯಲ್ಲಿ (Shirsi) ನಿನ್ನೆ ಸುರಿದ ಭಾರಿ ಮಳೆಗೆ ಹಲವು ಭಾಗದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಗೇರಿಯಲ್ಲಿ ಉಪೇಂದ್ರ ಹೆಗಡೆ ಎಂಬವರಿಗೆ ಸೇರಿದ ಅಡಿಕೆ ನೀರಿನಲ್ಲಿ ಕೊಚ್ಚಿ ಹೋಗಿದೆ.

    ಅಡಿಕೆ ಸುಗ್ಗಿ ನಡೆಸಿ ಕೆಂಪಡಿಕೆಯನ್ನು ಮನೆ ಮುಂದೆ ಒಣಗಿಸಲು ಹಾಕಿದ್ದರು. ಮಳೆ ಅಬ್ಬರಕ್ಕೆ ಲಕ್ಷಾಂತರ ರೂ. ಮೌಲ್ಯದ ಅಡಿಕೆ ನೀರು ಪಾಲಾಗಿದೆ. ಮಳೆಯಿಂದ ಸುಮಾರು 20 ಎಕರೆಗೂ ಹೆಚ್ಚು ಅಡಿಕೆ ತೋಟ ಹಾನಿಯಾಗಿದ್ದು, ಭತ್ತದ ಬೆಳೆಗಳು ಸಹ ಮಳೆಗೆ ಹಾನಿಯಾಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪನ: ಜೋರು ಶಬ್ದಕ್ಕೆ ಹೆದರಿ ಮನೆಯಿಂದಾಚೆ ಓಡಿ ಬಂದ ಜನ!

    ಶಿರಸಿಯಲ್ಲಿ ನಿನ್ನೆ ಸಂಜೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಲಂಡಕನಹಳ್ಳಿ, ನರೇಬೈಲಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನರೇಬೈಲಿನ ಕಿರು ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.

    ಈ ಭಾಗದ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಇದನ್ನೂ ಓದಿ: ಬೆಂಗಳೂರು ಮಳೆಯ ಸಮಸ್ಯೆಗೆ ಪರಿಹಾರ ಕೊಡದ ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ: ಸುರೇಶ್ ಬಾಬು

  • ಬೆಂಗಳೂರಲ್ಲಿ ಮತ್ತೆ ಮಳೆ – ರಸ್ತೆಗಳು ಜಲಾವೃತ, ಹಲವೆಡೆ ಜನಜೀವನ ಅಸ್ತವ್ಯಸ್ತ

    ಬೆಂಗಳೂರಲ್ಲಿ ಮತ್ತೆ ಮಳೆ – ರಸ್ತೆಗಳು ಜಲಾವೃತ, ಹಲವೆಡೆ ಜನಜೀವನ ಅಸ್ತವ್ಯಸ್ತ

    – ಮನೆಗಳಿಗೆ ನುಗ್ಗಿದ ಮಳೆ ನೀರು
    – ಕೆಂಗೇರಿ, ಆರ್.ಆರ್ ನಗರ ಸುತ್ತಮುತ್ತ ಜೋರು ಮಳೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆಯ ಸಿಂಚನವಾಗಿದೆ. ಚಂಡಮಾರುತದ ಎಫೆಕ್ಟ್‌ನಿಂದ ಭರ್ಜರಿಯಾಗಿ ಸುರಿದ ಬಳಿಕ ಮಳೆ ಎರಡು ದಿನ ಬಿಡುವು ಕೊಟ್ಟಿತ್ತು. ಈಗ ಬೆಳ್ಳಂಬೆಳಗ್ಗೆ ತುಂತುರು ಮಳೆ ಸುರಿದಿದೆ.

    ಶನಿವಾರ ಬೆಳಗ್ಗೆಯಿಂದಲೇ ಮಳೆ ಶುರುವಾಯಿತು. ನಂತರ ರಾತ್ರಿ ವೇಳೆಗೆ ಕೊಂಚ ಬಿಡುವು ನೀಡಿತ್ತು. ಇಂದು ಮತ್ತೆ ಬೆಳಗ್ಗೆಯೇ ತುಂತುರು ಮಳೆ ಶುರುವಾಗಿದೆ. ನಗರದ ಬಹುತೇಕ ಭಾಗದಲ್ಲಿ ತುಂತುರು ಮಳೆ ಹನಿಯುತ್ತಿದೆ. ಇದನ್ನೂ ಓದಿ: ಮುಡಾ ಮೇಲಿನ ಇ.ಡಿ ದಾಳಿ ಅಂತ್ಯ – ಸತತ 29 ಗಂಟೆ ಅಧಿಕಾರಿಗಳಿಗೆ ಡ್ರಿಲ್‌

    ಎಲ್ಲೆಲ್ಲಿ ಪರಿಸ್ಥಿತಿ ಹೇಗೆ?
    ಕುಮಾರಸ್ವಾಮಿ ಲೇಔಟ್: ನಿನ್ನೆ ಸುರಿದ ಮಳೆಗೆ ಕುಮಾರಸ್ವಾಮಿ ಲೇಔಟ್ ರಸ್ತೆ ಜಲಾವೃತವಾಗಿದೆ. ಸುಮಾರು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಆದರೆ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ.

    ಎಲೆಕ್ಟ್ರಾನಿಕ್ ಸಿಟಿ ಟು ಸಿಲ್ಕ್ ಬೋರ್ಡ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಬೊಮ್ಮನಹಳ್ಳಿಯಿಂದ ಸಿಲ್ಕ್ ರೋಡ್ ಜಂಕ್ಷನ್ ರೋಡ್ ಟ್ರಾಫಿಕ್ ಜಾಮ್ ಆಗಿದೆ. ರೋಡ್ ಮೇಲೆ ನೀರು ನಿಂತಿರುವ ಹಿನ್ನೆಲೆ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ಮಾಡಲಾಗದೇ ವಾಹನ ಸವಾರರು ಪರದಾಡಿದ್ದಾರೆ.

    ಸರ್ಜಾಪುರ: ರಾತ್ರಿ ಸುರಿದ ಮಳೆಗೆ ಪರಪ್ಪನ ಅಗ್ರಹಾರ ಸರ್ಜಾಪುರ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ನಾಗನಾಥಪುರ ಬಳಿ ರಸ್ತೆಯಲ್ಲಿ ನೀರು ತುಂಬಿದೆ. ಪ್ರತಿ ಬಾರಿ ಮಳೆ ಬಂದರೂ ಸಹ ಇದೇ ಪರಿಸ್ಥಿತಿ ಇದೆ. ಮಳೆ ಹಿನ್ನೆಲೆ ಸಂಪೂರ್ಣ ರಸ್ತೆ ಗುಂಡಿಮಯವಾಗಿದೆ. ರಸ್ತೆ ಯಾವುದು, ಗುಂಡಿ ಯಾವುದೂ ಕಾಣದ ಪರಿಸ್ಥಿತಿಯಲ್ಲಿ ವಾಹನ ಸವಾರರಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಟಿಕೆಟ್ ಆಯ್ಕೆ ಕಗ್ಗಂಟು – ದೋಸ್ತಿ ನಾಯಕರಲ್ಲಿ ಮೂಡದ ಒಮ್ಮತದ ನಿರ್ಧಾರ

    ಸಾಯಿ ಲೇಔಟ್: ಇಂದು ಕೂಡ ಸಾಯಿ ಲೇಔಟ್ ಜಲಾವೃತಗೊಂಡಿದೆ. 500 ಮನೆಗಳಿರುವ ಪ್ರತಿಷ್ಠಿತ ಬಡಾವಣೆಯಲ್ಲಿ 10 ವರ್ಷಗಳಿಂದ ಅದೇ ಜಲ ಸಂಕಷ್ಟವಿದೆ. ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ರಸ್ತೆಯಲ್ಲೇ ಕೊಳಕು ನೀರು ನಿಂತಿದೆ. ಮೊನ್ನೆಯಷ್ಟೇ ಫೈರ್ ಇಂಜಿನ್ ಬಂದು ನೀರು ಹೊರ ಹಾಕಿತ್ತು. ಈಗ ಮತ್ತೇ ರಸ್ತೆಯಲ್ಲಿ ನೀರು ತುಂಬಿ ಜನ ಹೈರಾಣಾಗಿದ್ದಾರೆ. ಮೊನ್ನೆಯ ಮಳೆಯಿಂದ ನೀರು ತುಂಬಿ ಮನೆಯ ಫರ್ನಿಚರ್, ದುಬಾರಿ ಐಟೆಮ್ಸ್ ಹಾಳಾಗಿದೆ.

    ರಾತ್ರಿ ಸುರಿದ ಮಳೆಗೆ ಕಾರು ಶೋರೂಂಗೆ ಮಳೆ ನೀರು ನುಗ್ಗಿದೆ. ಮೈಸೂರು ರಸ್ತೆಯ ಜಯರಾಮ ವೃತ್ತದ ಬಳಿ ಘಟನೆ ನಡೆದಿದೆ. ರಸ್ತೆ ತುಂಬ ಭಾರಿ ಪ್ರಮಾಣದ ಮಳೆ ನೀರು ನಿಂತಿದೆ. ರಸ್ತೆ ಮತ್ತು ಪಕ್ಕದಲ್ಲಿರುವ ಕಾರುಗಳು ನೀರಿನಲ್ಲಿ ಜಲಾವೃತಗೊಂಡಿವೆ.

    ಕೆಂಗೇರಿ, ಆರ್.ಆರ್ ನಗರ ಸುತ್ತಮುತ್ತ ಜೋರು ಮಳೆಯಾಗಿದೆ. ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಹಳ್ಳಿ ಭಾಗದಲ್ಲೂ ಮಳೆ ಆರ್ಭಟ ಮುಂದುವರಿದಿದೆ. ಮನೆಗಳಿಗೆ ಮಳೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಬೆಳ್ಳಂಬೆಳಗ್ಗೆ ಎಲೆಕ್ಟ್ರಾನ್ ಸಿಟಿ ಫ್ಲೈಓವರ್ ಜಾಮ್ ಆಗಿತ್ತು. ಮಳೆ ಪರಿಣಾಮ ಸುಮಾರು ಐದು ಕಿಲೋಮೀಟರ್‌ಗೂ ಹೆಚ್ಚು ವಾಹನ ದಟ್ಟಣೆ ಕಂಡುಬAತು.

  • ಇಂದು ಸಹ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ಇಂದು ಸಹ ಬೆಂಗಳೂರು ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    – ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ತತ್ತರ; ಧಾರಾಕಾರ ಮಳೆಗೆ ಹಲವೆಡೆ ಅವಾಂತರ
    – ಧರೆಗುರುಳಿದ ಬೃಹತ್ ಮರ, ರಸ್ತೆಗಳಲ್ಲಿ ಉಕ್ಕಿ ಹರಿದ ಮಳೆ ನೀರು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಯು ಭಾರೀ ಅನಾಹುತವನ್ನುಂಟು ಮಾಡಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಾಂಪೌAಡ್ ಕುಸಿತ ಪರಿಣಾಮ 16 ಮನೆಗಳಿಗೆ ಜಲದಿಗ್ಬಂಧನ ಉಂಟಾಗಿದೆ.

    ಎಡೆಬಿಡದೆ ಸುರಿದ ಮಳೆಗೆ ಕೆ.ಆರ್. ಮಾರ್ಕೆಟ್‌ನ ರಸ್ತೆಯೆಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋದರು. ವಾಹನ ಸವಾರರು ಪರದಾಡಿದರು.

    ಒಂದಡೆ ಮಳೆ, ಮತ್ತೊಂದೆಡೆ ಟ್ರಾಫಿಕ್ ಜಾಮ್ ಆಯಿತು. ಬಳ್ಳಾರಿ ರಸ್ತೆ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಇತ್ತ ಮಲ್ಲೇಶ್ವರಂ 17 ನೇ ಕ್ರಾಸ್ ಕ್ಲೌಡ್‌ನೈನ್ ಆಸ್ಪತ್ರೆ ಎದುರು ಬೃಹತ್ ಮರವೊಂದು ಧರೆಗುರುಳಿದೆ. ಮರದಡಿ ರಸ್ತೆಯ ಪಕ್ಕ ಪಾರ್ಕ್ ಮಾಡಲಾಗಿದ್ದ ಕಾರುಗಳು ಜಖಂಗೊಂಡಿವೆ. ಕರೆಂಟ್ ಸ್ಥಗಿತಗೊಂಡು, ರಸ್ತೆ ಸಂಚಾರ ಬಂದ್ ಆಗಿತ್ತು.

    ಇಂದೂ ಸಹ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಭಾರೀ ಮಳೆಯಾಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಅ.10 ಭಾರೀ ಮಳೆಯಾಗಬಹುದು. ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದೆ.

  • ರಾಜ್ಯದ ಹವಾಮಾನ ವರದಿ: 07-09-2024

    ರಾಜ್ಯದ ಹವಾಮಾನ ವರದಿ: 07-09-2024

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇಂದಿನಿಂದ 5 ದಿನಗಳ ಕಾಲ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡು ಭಾಗಗಳಲ್ಲಿ ಹಲವೆಡೆ ಮಳೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ತಲುಪುವ ಸಾಧ್ಯತೆಯಿದೆ.

    ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಲಘುವಾಗಿ ಮಧ್ಯಮ ಮಳೆ ಹಾಗೂ ನಿರಂತರ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರ ಮತ್ತು ಸ್ಥಳೀಯ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-20
    ಮಂಗಳೂರು: 28-24
    ಶಿವಮೊಗ್ಗ: 27-21
    ಬೆಳಗಾವಿ: 26-21
    ಮೈಸೂರು: 29-21

    ಮಂಡ್ಯ: 30-22
    ಮಡಿಕೇರಿ: 22-17
    ರಾಮನಗರ: 29-22
    ಹಾಸನ: 26-19
    ಚಾಮರಾಜನಗರ: 29-21
    ಚಿಕ್ಕಬಳ್ಳಾಪುರ: 27-20


    ಕೋಲಾರ: 28-21
    ತುಮಕೂರು: 28-21
    ಉಡುಪಿ: 28-24
    ಕಾರವಾರ: 28-25
    ಚಿಕ್ಕಮಗಳೂರು: 25-19
    ದಾವಣಗೆರೆ: 28-22

    ಹುಬ್ಬಳ್ಳಿ: 27-21
    ಚಿತ್ರದುರ್ಗ: 27-21
    ಹಾವೇರಿ: 28-22
    ಬಳ್ಳಾರಿ: 30-23
    ಗದಗ: 28-22
    ಕೊಪ್ಪಳ: 29-22

    ರಾಯಚೂರು: 30-23
    ಯಾದಗಿರಿ: 30-23
    ವಿಜಯಪುರ: 29-22
    ಬೀದರ್: 27-22
    ಕಲಬುರಗಿ: 29-23
    ಬಾಗಲಕೋಟೆ: 30-23

  • ಬೀದರ್‌ನಲ್ಲಿ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿ – ವಾರದಲ್ಲಿ ಬರೋಬ್ಬರಿ 90ಕ್ಕೂ ಅಧಿಕ ಮನೆಗಳು ಕುಸಿತ

    ಬೀದರ್‌ನಲ್ಲಿ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿ – ವಾರದಲ್ಲಿ ಬರೋಬ್ಬರಿ 90ಕ್ಕೂ ಅಧಿಕ ಮನೆಗಳು ಕುಸಿತ

    ಬೀದರ್: ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ಎಫೆಕ್ಟ್‌ಗೆ ಒಂದೇ ವಾರದಲ್ಲಿ ಬರೋಬ್ಬರಿ 91ಕ್ಕೂ ಅಧಿಕ ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿಗಳು ಕುಸಿದು ಬಿದ್ದು ಜನರು ಕಂಗಾಲಾಗಿದ್ದಾರೆ.

    ಇಂದು ಸುರಿದ ಧಾರಾಕಾರ ಮಳೆಗೆ ಒಂದೇ ಗ್ರಾಮದ ಅಂಚೆ ಕಚೇರಿ ಸೇರಿದಂತೆ 5ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಳೆಯ ರಗಳೆಗೆ ಗಡಿ ಜಿಲ್ಲೆ ಬೀದರ್‌ನ ಜನರು ತತ್ತರಿಸಿ ಹೋಗಿದ್ದಾರೆ. ಇದನ್ನೂ ಓದಿ: ಊಟ, ಹಾಸಿಗೆ ಕೊಡ್ತಾರೆ ಮಲಗಿ ಹೋಗೋಣ ಅಂತಾ ಪ್ರತಿಭಟನೆ ಮಾಡ್ತಿದ್ದಾರೆ: ಲಕ್ಷ್ಮಣ ಸವದಿ

    ಗಡಿ ಜಿಲ್ಲೆ ಬೀದರ್‌ನಲ್ಲಿ ಸತತ ಒಂದು ವಾರಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಬೀದರ್ ತಾಲೂಕಿನ ಸಿಂಧೋಲ್ ಗ್ರಾಮದಲ್ಲಿ 5ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಗ್ರಾಮದ ಅಬ್ದುಲ್ ರಜಾಕ್, ರಜಿಯಾ ಬೇಗಂ, ಪುಷ್ಪಾವತಿ, ಸುಜಾತ ಎಂಬವರ ಮನೆಗಳು ಸೇರಿದಂತೆ ಅಂಚೆ ಕಚೇರಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡು ಜನರು ವಾಸ ಮಾಡಲು ಬೇರೆ ಮನೆಗಳು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಮಾಡಿದರಷ್ಟೇ ತುತ್ತಿನ ಚೀಲ ತುಂಬುತ್ತೆ. ಆದರೆ ವರುಣನ ಅಬ್ಬರದಿಂದ ಇತ್ತ ಕೆಲಸವೂ ಇಲ್ಲ. ತಿನ್ನೋಕೆ ಅನ್ನವೂ ಇಲ್ಲದೇ ಜನ ಪರದಾಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮ, ಮುಡಾ ಹಗರಣ; ಸರ್ಕಾರದ ವಿರುದ್ಧ ವಿಪಕ್ಷ ನಾಯಕರಿಂದ ಅಹೋರಾತ್ರಿ ಧರಣಿ

    ಧಾರಾಕಾರವಾಗಿ ಸುರಿಯುತ್ತಿರೋ ಮಳೆಯಿಂದ 90ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಬಸವಕಲ್ಯಾಣದಲ್ಲಿ 23, ಬೀದರ್‌ನಲ್ಲಿ 13, ಭಾಲ್ಕಿಯಲ್ಲಿ 12, ಹುಮ್ನಾಬಾದ್‌ನಲ್ಲಿ 11, ಚಿಟಗುಪ್ಪದಲ್ಲಿ 12, ಔರಾದ್‌ನಲ್ಲಿ 11, ಕಮಲನಗರದಲ್ಲಿ 4 ಹಾಗೂ ಹುಲಸೂರಿನಲ್ಲಿ 5 ಮನೆಗಳು ನೆಲಕಚ್ಚಿವೆ. ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಮನೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಿದ್ದಾರೆ.

  • ಕೊಡಗಿನಲ್ಲಿ ಧಾರಾಕಾರ ಮಳೆ; ಜು.18 ರಂದು ಶಾಲೆಗಳಿಗೆ ರಜೆ

    ಕೊಡಗಿನಲ್ಲಿ ಧಾರಾಕಾರ ಮಳೆ; ಜು.18 ರಂದು ಶಾಲೆಗಳಿಗೆ ರಜೆ

    – 2 ದಿನ ರೆಡ್ ಅಲರ್ಟ್ ಘೋಷಣೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜು.18 ಮತ್ತು 19 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚು ಮಳೆ ಸುರಿದಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯ ಭಾಗಮಂಡಲದಲ್ಲಿ 7 ಇಂಚು ಮಳೆಯಾಗಿದೆ.

    ಶಾಲೆಗಳಿಗೆ ರಜೆ
    ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜು.18 ರಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗನವಾಡಿ ಹಾಗೂ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರಜೆ ಘೋಷಿಸಿದ್ದಾರೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1347.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 594.88 ಮಿ.ಮೀ ಮಳೆಯಾಗಿತ್ತು. ಇದನ್ನೂ ಓದಿ: ಉಡುಪಿಯ ಹಲವೆಡೆ ನೆರೆ ಪರಿಸ್ಥಿತಿ; ಹಾಸನ, ಕೊಡಗಿನನಲ್ಲಿ ಭೂಕುಸಿತದ ಅವಾಂತರ; ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ!

    ಬ್ರಹ್ಮಗಿರಿಯ ತಪ್ಪಲಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಏರ್ಪಟ್ಟಿರುವ ಕಾವೇರಿಯ ಪ್ರವಾಹದಿಂದ ನದಿ ಪಾತ್ರದ ಹಲ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಬಿರುಮಳೆಯಿಂದ ಜಿಲ್ಲೆಯಾದ್ಯಂತ ಅವಘಡಗಳ ಸರಮಾಲೆ ಮುಂದುವರೆದಿದೆ. ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಕಿರು ತೊರೆಗಳು ಉಕ್ಕಿ ಹರಿದು ಕಾವೇರಿಯ ಪ್ರವಾಹದ ಮಟ್ಟ ಮತ್ತಷ್ಟು ಹೆಚ್ಚಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆ ಹಾಗೂ ಮಡಿಕೇರಿಯನ್ನು ಸಂಪರ್ಕಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಗ್ರಾಮೀಣರ ಬದುಕು ಅಸ್ತವ್ಯಸ್ತಗೊಂಡಿದೆ.

    ಸೇತುವೆ ಮುಳುಗಡೆ
    ದಕ್ಷಿಣ ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದು ಪ್ರವಾಹ ಏರ್ಪಟ್ಟಿದೆ. ಇದರ ಪರಿಣಾಮ ಶ್ರೀಮಂಗಲ-ನಾರಿ ಸೇತುವೆ ಮುಳುಗಡೆಯಾಗಿದ್ದು, ಸಮಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ಬೇತ್ರಿ ಸೇತುವೆ ಮೇಲೆ ನೀರು ಬರಲು ಇನ್ನು ಕೆಲವೆ ಅಡಿ ಬಾಕಿ ಉಳಿದಿದೆ. ಮಳೆಯ ಪ್ರಮಾಣ ಹೆಚ್ಚಿದಲ್ಲಿ ಸೇತುವೆ ಮುಳುಗಡೆಯಾಗುವ ಸಂಭವವಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಭೂಕುಸಿತ ದುರಂತ – ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದ ಕೇಂದ್ರ ಸಚಿವ ಹೆಚ್‌ಡಿಕೆ

    ಕಾವೇರಿ ನದಿ ಪಾತ್ರದಲ್ಲಿ ಬರುವ ನಾಪೋಕ್ಲುವಿನಿಂದ ಮೂರ್ನಾಡುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ, ರಸ್ತೆಯ ಮೇಲೆ 4 ಅಡಿಯಷ್ಟು ಪ್ರವಾಹದ ನೀರು ಆವರಿಸಿದ್ದು, ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಚೆರಿಯಪರಂಬು- ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಾಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

    ಈ ಹಿನ್ನೆಲೆ ವಾಹನ ಸಂಚಾರ ನಾಪೋಕ್ಲು, ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಬಳಸು ಹಾದಿಯನ್ನು ಅವಲಂಬಿಸುವಂತಾಗಿದೆ. ನಾಪೋಕ್ಲು-ಕೊಟ್ಟಮುಡಿ ಬೆಟ್ಟಗೇರಿ ಮಡಿಕೇರಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಮಳೆಯ ಅಬ್ಬರ ಇದೇ ರೀತಿ ಮುಂದುವರೆದರೆ ನಾಪೋಕ್ಲು- ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.

  • ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

    ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

    ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಅಂಕೋಲ ತಾಲೂಕಿನ ಅಚವೆ ಗ್ರಾಮದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತ (Vibhuti Falls) ವೀಕ್ಷಣೆಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ವಿಭೂತಿ ಜಲಪಾತ ತುಂಬಿ ಹರಿಯುತ್ತಿದೆ. ಇದರಿಂದ ಪ್ರತಿ ಕ್ಷಣದಲ್ಲಿ ನೀರಿನ ಪ್ರಮಾಣ ಸಹ ಏರಿಳಿತವಾಗುತ್ತಿದ್ದು, ಹರಿದು ಬರುವ ನೀರಿನಲ್ಲಿ ವಿಷಜಂತುಗಳು, ಮರದ ದಿಮ್ಮಿಗಳು ತೇಲಿಬರುತ್ತಿವೆ. ಅಪಾಯವಿರುವುದರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಕಳೆದ ವರ್ಷ ಸಹ ಜುಲೈ ತಿಂಗಳಿಂದ ಮಳೆಗಾಲ ಮುಗಿಯುವ ವರೆಗೂ ನಿಷೇಧ ಹೇರಲಾಗಿತ್ತು. ವಿಭೂತಿ ಜಲಪಾತ ಅಂಕೋಲ ತಾಲೂಕಿನ ಗಡಿಯಲ್ಲಿ ಬರುತ್ತದೆ. ಇಲ್ಲಿನ ಜಲಪಾತ ಬೀಳುವ ಸ್ಥಳವು ಸುಣ್ಣದ ರೂಪದ ಕಲ್ಲುಗಳಿಂದ ಕೂಡಿದ್ದು ಸುತ್ತಲೂ ಅರಣ್ಯ ಗುಡ್ಡವನ್ನು ಹೊಂದಿದೆ. ಜಲಪಾತ 30 ಅಡಿ ಎತ್ತರದಲ್ಲಿದೆ. ಪಕ್ಕದಲ್ಲೇ ವಿಶ್ವ ಪ್ರಸಿದ್ಧ ಯಾಣ ಸಹ ಇದೆ. ಇದೇ ಭಾಗದಲ್ಲಿ ಸಹ ಸುಣ್ಣದ ಕಲ್ಲುಗಳಿದ್ದು, ಇವುಗಳ ಮೂಲಕ ಹರಿದುಬರುವುದರಿಂದ ಈ ಜಲಪಾತಕ್ಕೆ ವಿಭೂತಿ ಜಲಪಾತ ಎಂದು ಹೆಸರು ಬಂದಿದೆ.

    ಪ್ರತಿ ಮಳೆಗಾಲದಲ್ಲಿ ಬಂದ್ ಇರುತ್ತಿದ್ದು, ಅಕ್ಟೋಬರ್ ತಿಂಗಳ ನಂತರ ಈ ಜಲಪಾತ ನೋಡಬಹುದಾಗಿದೆ. ಜೊತೆಗೆ ಪಕ್ಕದಲ್ಲೇ ಯಾಣ ಸಹ ಇರುವುದರಿಂದ ಕರಾವಳಿ ಪ್ರವಾಸ ಮಾಡುವವರು ಈ ಭಾಗಕ್ಕೆ ಬಂದು ಹೋಗಬಹುದಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಕೇಸ್; ಮಾಜಿ ಸಚಿವ ನಾಗೇಂದ್ರ, ದದ್ದಲ್ ಮನೆ ಮೇಲೆ ಇಡಿ ದಾಳಿ

    ಗೋಕರ್ಣ (Gokarna) ದಿಂದ ನೇರವಾಗಿ ಇಲ್ಲಿಗೆ ಬರಲು ಉತ್ತಮ ರಸ್ತೆಗಳಿವೆ‌. ಸದ್ಯ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಮಳೆ ಇಳಿಕೆಯಾದ ನಂತರ ಎಂದಿನಂತೆ ಜನರಿಗೆ ಪ್ರವೇಶ ದೊರೆಯಲಿದೆ.