Tag: rain. People

  • ಚಿತ್ರದುರ್ಗದಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ- ಮನೆಗಳಿಗೆ ನುಗ್ಗಿತು ನೀರು

    ಚಿತ್ರದುರ್ಗದಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ- ಮನೆಗಳಿಗೆ ನುಗ್ಗಿತು ನೀರು

    – ಸಿನಿಮಾ ನೋಡಲು ಜಮಾಯಿಸಿದ ಅಭಿಮಾನಿಗಳು

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಬೆಳಗ್ಗೆಯೇ ಶುರುವಾದ ವರುಣನ ಆರ್ಭಟಕ್ಕೆ ಪೊಗರು ಸಿನಿಮಾ ಪ್ರದರ್ಶನ ತಡವಾಗಿ ಪ್ರಾರಂಭವಾಗಿದೆ.

    ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಿವಿಧೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ದಿಢೀರ್ ಸುರಿದ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದೆ.

    ಮಳೆಯನ್ನು ಲೆಕ್ಕಿಸದೇ ಪೊಗರು ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಟಾಕೀಸ್ ಮುಂದೆ ನಿಂತು ಕಾಯುತ್ತಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಆರಂಭವಾಗಬೇಕಿದ್ದ ಪ್ರದರ್ಶನ ಮಳೆಯಿಂದಾಗಿ 7.30ಕ್ಕೆ ಆರಂಭವಾಗಿದೆ.