Tag: Rain News

  • Bengauru Rains Photo Gallery – ಮತ್ತೆ ಮಳೆಯಾಗಿದೆ…!

    Bengauru Rains Photo Gallery – ಮತ್ತೆ ಮಳೆಯಾಗಿದೆ…!

    ಮಳೆ ಅಂದ್ರೆ ಏನೋ ಹರುಷ, ಸಂಭ್ರಮ.. ಆದ್ರೆ ಹಳ್ಳಿಯಲ್ಲಿ ಮಳೆ ಅಂದ್ರೆ ಸಂಮೃದ್ಧಿ. ಬೇಸಿಗೆಯ ಬೇಗೆಯನ್ನು ತೊಲಗಿಸಿ ಭೂರಮೆಯ ಬಂಜೆತನವ ತೊಡೆದು, ಹಸಿರು ಸೀರೆಯನುಡಿಸುವ ಅಮೃತ ಸಿಂಚನ. ಮಳೆಯ ಬಗ್ಗೆ ಹೇಳುತ್ತಾ ಹೋದ್ರೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಮಕ್ಕಳನ್ನು ಬಿಟ್ಟರೆ ಮಳೆಯನ್ನು ಹೆಚ್ಚು ಇಷ್ಟಪಡುವ ಜೀವವೆಂದರೆ ಅದು ನಮ್ಮ ರೈತ. ಅನ್ನದಾತ ತನ್ನ ಅನ್ನ ಹುಟ್ಟಿಸುವ ಕಾಯಕ ನಡೆಸಲು ಮಳೆರಾಯನ ಕೃಪೆ ಬೇಕೇ ಬೇಕು. ನಾವು ಚಿಕ್ಕವರಿದ್ದಾಗ ಈ ಮಳೆಯ ಹಿಂದೆಯೂ ಒಂದೊಂದು ಕಥೆ ಇರೋದನ್ನ ಅಜ್ಜಿ-ತಾತನಿಂದ ಕೇಳಿರ್ತೀವಿ. ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳನ್ನು ನೋಡಿದಾಗ ಮಳೆ ಯಾಕಾದ್ರೂ ಬರುತ್ತದೋ ಅನ್ನಿಸುತ್ತೆ.

    ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆ ಇಂದು ಮಧ್ಯಾಹ್ನದಿಂದ ಮತ್ತೆ ಶುರುವಾಗಿದೆ. ನಗರದ ಮೇಖ್ರಿ ಸರ್ಕಲ್, ಸದಾಶಿವನಗರ, ಶಿವಾಜಿನಗರ, ವಸಂತನಗರ, ಹೈಗ್ರೌಂಡ್ಸ್, ವಿಧಾನಸೌಧ, ಸೆಂಟ್ರಲ್ ಸಿಲ್ಕ್ ಬೋರ್ಡ್, ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ಶೇಷಾದ್ರಿಪುರಂ, ಚಿಕ್ಕಪೇಟೆ, ಅರಮನೆ ಮೈದಾನ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಯಾಗಿದೆ. ಮಳೇ ಬಂದು ರಸ್ತೆಯಲ್ಲಾ ನೀರು ತುಂಬಿಕೊಂಡರೂ ಯಾರೇ ಕೂಡಾಗಲಿ ಊರೇ ಹೋರಾಡಲಿ ಅನ್ನೋ ತರ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ಜನ ಒಂದುಕಡೆಯಾದ್ರೆ, ಅವಾಂತರಕ್ಕೆ ಸಿಕ್ಕಿ ನಲುಗಿದವರನ್ನ ರಕ್ಷಿಸುವ ಕೆಲಸ ಮತ್ತೊಂದೆಡೆ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದ ಒಂದಿಷ್ಟು ಚಿತ್ರಗಳು ಕಣ್ಣಿಗೆ ಕಟ್ಟಿದಂತಿವೆ…. ಮುಂದೆ ನೋಡಿ…

  • ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಲ್ಲಿ ಬಿಸಿಲು ಮಳೆ ಆಟ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 29-22
    ಮೈಸೂರು: 30-22

    ಮಂಡ್ಯ: 27-22
    ಮಡಿಕೇರಿ: 27-20
    ರಾಮನಗರ: 28-22
    ಹಾಸನ: 26-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 27-22
    ತುಮಕೂರು: 27-22
    ಉಡುಪಿ: 30-24
    ಕಾರವಾರ: 32-27
    ಚಿಕ್ಕಮಗಳೂರು: 28-19
    ದಾವಣಗೆರೆ: 29-23

    weather

    ಹುಬ್ಬಳ್ಳಿ: 30-23
    ಚಿತ್ರದುರ್ಗ: 28-22
    ಹಾವೇರಿ: 31-23
    ಬಳ್ಳಾರಿ: 33-24
    ಗದಗ: 31-23
    ಕೊಪ್ಪಳ: 32-24

    weather

    ರಾಯಚೂರು: 35-26
    ಯಾದಗಿರಿ: 34-24
    ವಿಜಯಪುರ: 33-24
    ಬೀದರ್: 34-24
    ಕಲಬುರಗಿ: 34-25
    ಬಾಗಲಕೋಟೆ: 32-24

  • ರಾಜ್ಯದಲ್ಲಿ ಮಳೆಯ ಆರ್ಭಟ – ವಿವಿಧೆಡೆ ಶಾಲಾ, ಕಾಲೇಜುಗಳಿಗೆ ರಜೆ

    ರಾಜ್ಯದಲ್ಲಿ ಮಳೆಯ ಆರ್ಭಟ – ವಿವಿಧೆಡೆ ಶಾಲಾ, ಕಾಲೇಜುಗಳಿಗೆ ರಜೆ

    ಹಾವೇರಿ: ರಾಜ್ಯದಲ್ಲಿ ಬಿಟ್ಟೂ ಬಿಡದೆ ಮಳೆ (Heavy Rains) ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಸರ್ಕಾರಿ, ಖಾಸಗಿ ಅಂಗನವಾಡಿ ಕೇಂದ್ರಗಳು, ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ, ಪ್ರೌಢಶಾಲೆ (Schools) ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

    ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಗುರುವಾರ (ಇಂದು) ಹಾವೇರಿ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು, ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (PU College) ರಜೆ ಘೋಷಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಪದವಿ, ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಅಲ್ಲದೇ ಧಾರವಾಡ (Dharwad), ಬೆಳಗಾವಿ (Belagavi), ಉಡುಪಿ (Udupi), ಕೊಪ್ಪಳ (Koppal) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಂಗನವಾಡಿ ಕೇಂದ್ರಗಳೂ ಸೇರಿದಂತೆ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಬೆಳಗಾವಿ:
    ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಖಾನಾಪುರ ತಾಲೂಕಿನಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು ಜನರು ಮುಂಜಾಗ್ರತಾ ವಹಿಸುವಂತೆ ಸೂಚನೆ ನೀಡಲಾಗಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ಪಶ್ಚಿಮ ಭಾಗದಲ್ಲಿ ಸರಿ ಸುಮಾರು 14, ಉಪನದಿಗಳು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲ ಗ್ರಾಮದ ಜನರು ತಮ್ಮ ಜೀವವನ್ನ ಪಣಕ್ಕಿಟ್ಟು ತಾತ್ಕಾಲಿಕ ಸೇತುವೆಗಳನ್ನ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಖಾನಾಪುರ ತಾಲೂಕಿನ ಗವಾಳಿ, ಕೊಂಗಳಾ, ಪಾಸ್ತೋಲಿ ಗ್ರಾಮಗಳಲ್ಲಿ ಜನ ಸೇತುವೆ ನಿರ್ಮಾಣ ಮಾಡಿಕೊಂಡಿದ್ದು, ದಿನದೂಡುತ್ತಿದ್ದಾರೆ. ಸದ್ಯ ಅಂಗನವಾಡಿ ಕೇಂದ್ರಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಮುಂದುವರೆದ ಮಳೆಯಾರ್ಭಟ – ಭೀಮಾ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ

    ಮಂಗಳೂರು:
    ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಕಡಲ ಅಬ್ಬರವೂ ಹೆಚ್ಚಾಗಿದ್ದು ಮಂಗಳೂರಿನ ಉಳ್ಳಾಲ ಕಡಲ ತೀರದಲ್ಲಿ ಅರಬ್ಬೀ ಸಮುದ್ರ ಭೋರ್ಗರೆಯುತ್ತಿದೆ. ಜಿಲ್ಲೆಯ ಎಲ್ಲಾ ಜೀವ ನದಿಗಳು ತುಂಬಿ ಹರಿದು ಸಮುದ್ರ ಸೇರುತ್ತಿದ್ದು, ಮಳೆ ಹಾಗೂ ನೆರೆಯಿಂದ ನದಿಯಲ್ಲಿ ಬರೋ ಮಣ್ಣು ಮಿಶ್ರಿತ ನೀರು ಸಮುದ್ರಕ್ಕೆ ಸೇರಿ ಕಡಲ ತೀರದ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಕಡಲ ತೀರದಲ್ಲಿ ಜೀವರಕ್ಷಕ ದಳ, ಗೃಹರಕ್ಷಕ ದಳ ಹಾಗೂ ಪೊಲೀಸರು ಪಹರೆ ಕಾಯುತ್ತಿದ್ದಾರೆ. ಸದ್ಯ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

    ಕೊಡಗು:
    ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅನೇಕ ಅವಾಂತರಗಳಿಗೆ ಕಾರಣವಾಗಿದೆ. ಎಲ್ಲಿ ನೋಡಿದ್ರು ಹೆಚ್ಚಾಗಿ ಕಾವೇರಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಹಾರಂಗಿ ಜಲಾಶಯ ಕ್ಕೂ ಒಳಹರಿವು ಹೆಚ್ಚಾಗಿದು ಕುಶಾಲನಗರದ ಅನೇಕ ಬಡಾವಣೆಗಳಿಗೆ ಕೃತಕ ಪ್ರವಾಹ ಉಂಟಾಗುವ ಅಂತಕ ಎದುರಾಗಿದೆ. ಹೀಗಾಗಿ ಹಾರಂಗಿ ಡ್ಯಾಂನಲ್ಲೇ ಕಾವೇರಿ ನದಿಗೆ ಹೊರ ಹರಿವು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬಡಾವಣೆಗಳಿಗೆ ಯಾವುದೇ ರೀತಿಯ ತೊಂದರೆ ಅಗದಂತೆ ಅಧಿಕಾರಿಗಳು ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]