ಇನ್ನು ಮುಂದೆ ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣಗಳಲ್ಲಿ ಎಐ(Artificial Intelligence) ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಇದು ಮುಂಬೈನ (Mumbai) ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ನವದೆಹಲಿ (New Delhi) ಸೇರಿದಂತೆ ಏಳು ಪ್ರಮುಖ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಆರಂಭಿಸಲಾಗುತ್ತದೆ.
ಭದ್ರತೆಯ ಜೊತೆಗೆ , ಟಿಕೆಟ್ ಪರಿಶೀಲನೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ತಂತ್ರಜ್ಞಾನವು ಪೂರಕವಾಗಿದೆ. ಅಲ್ಲದೇ ಪ್ರಯಾಣಿಕರ ಟಿಕೆಟ್‌ಗಾಗಿ ಕಾಯುವುದನ್ನು ಈ ತಂತ್ರಜ್ಞಾನವು ತಪ್ಪಿಸುತ್ತದೆ. ರೈಲ್ವೆ ನಿಲ್ದಾಣಗಳನ್ನು ಸ್ಮಾರ್ಟ್ ನಿಲ್ದಾಣಗಳನ್ನಾಗಿ ಮಾಡುವ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ. ಇದು ಭದ್ರತೆ, ಕಣ್ಗಾವಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತದೆ. ಈ AI ಬಯೋಮೆಟ್ರಿಕ್ ತಂತ್ರಜ್ಞಾನವು ವಿಮಾನ ನಿಲ್ದಾಣಗಳಂತಹ ಇತರ ಸ್ಥಳಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ.
AI ಬಯೋಮೆಟ್ರಿಕ್ ತಂತ್ರಜ್ಞಾನ ಎಂದರೇನು?
AI ಬಯೋಮೆಟ್ರಿಕ್ ತಂತ್ರಜ್ಞಾನ ಎನ್ನುವುದು ವ್ಯಕ್ತಿಯ ಮುಖದ ಗುರುತನ್ನು ಪತ್ತೆಹಚ್ಚುವ ತಂತ್ರಜ್ಞಾನವಾಗಿದೆ. ಈ ತಂತ್ರಜ್ಞಾನವು ಕಣ್ಣುಗಳು, ಮೂಗು, ಬಾಯಿ ಮತ್ತು ಮುಖದ ರಚನೆಯನ್ನು ಡಿಜಿಟಲ್ ಚಿತ್ರಗಳು ಅಥವಾ ವೀಡಿಯೊ ಫ್ರೇಮ್‌ಗಳಲ್ಲಿ ಸ್ಕ್ಯಾನ್ ಮಾಡುತ್ತದೆ. ಇದು ಡೇಟಾಬೇಸ್‌ನಲ್ಲಿರುವ ಮಾಹಿತಿಯೊಂದಿಗೆ ಮ್ಯಾಚ್ ಮಾಡುತ್ತದೆ.
ರೈಲು ನಿಲ್ದಾಣಗಳಿಗೆ ಯಾಕೆ ಈ ತಂತ್ರಜ್ಞಾನವನ್ನು ಬಳಸಬೇಕು?
ಸುರಕ್ಷತೆ ದೃಷ್ಟಿಯಿಂದ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಈ ತಂತ್ರಜ್ಞಾನವನ್ನು ಬಳಸಲು ಯೋಜಿಸಿದೆ. ರೈಲ್ವೆ ನಿಲ್ದಾಣಗಳು ಜನದಟ್ಟಣೆಯ ಸ್ಥಳಗಳಾಗಿದ್ದು, ಅಲ್ಲಿ ಕಳ್ಳತನ, ಭಯೋತ್ಪಾದಕ ಚಟುವಟಿಕೆಗಳು ಅಥವಾ ಇತರ ಅಪರಾಧಗಳ ಸಾಧ್ಯತೆಗಳು ಹೆಚ್ಚಿರುವುದರಿಂದ ಈ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.
ಈ ತಂತ್ರಜ್ಞಾನವು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ಫೈಲ್ ಆದವರನ್ನು ಗುರುತಿಸುತ್ತದೆ. ಈ ತಂತ್ರಜ್ಞಾನವು ಅನುಮಾನಾಸ್ಪದ ಚಟುವಟಿಕೆಗಳನ ಮಾಹಿತಿ ಕಲೆ ಹಾಕಲು ಮತ್ತು ಆರೋಪಿಗಳನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ. ಈ ತಂತ್ರಜ್ಞಾನವು ರೈಲ್ವೆ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸುತ್ತದೆ.
ಯಾವೆಲ್ಲ 7 ರೈಲ್ವೆ ನಿಲ್ದಾಣಗಳಲ್ಲಿ AI ಬಯೋಮೆಟ್ರಿಕ್ ತಂತ್ರಜ್ಞಾನ ಆರಂಭವಾಗಲಿದೆ?
ಭಾರತದ 7 ರೈಲು ನಿಲ್ದಾಣಗಳಲ್ಲಿ ಈ AI ಬಯೋಮೆಟ್ರಿಕ್ ತಂತ್ರಜ್ಞಾನ ಆರಂಭವಾಗಲಿದ್ದು, ಅವು ಯಾವುವೆಂದರೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ನವದೆಹಲಿಯ ರೈಲ್ವೆ ನಿಲ್ದಾಣ, ಕೋಲ್ಕತ್ತಾದ ಹೌರಾ, ಕೋಲ್ಕತ್ತಾದ ಸೀಲ್ದಾಹ್, ಚೆನ್ನೈನ ಸೆಂಟ್ರಲ್ ರೈಲ್ವೆ ನಿಲ್ದಾಣ, ಹೈದ್ರಾಬಾದ್‌ನ ಸಿಕಂದರಾಬಾದ್ ರೈಲ್ವೆ ನಿಲ್ದಾಣ ಹಾಗೂ ಬಿಹಾರದ ದಾನಾಪುರ ರೈಲು ನಿಲ್ದಾಣಗಳಲ್ಲಿ ಆರಂಭಬವಾಗಲಿದೆ.
ಕಾನೂನು FRT ಯನ್ನು (Face Recongnition Test) ಆಧಾರ್‌ಗೆ ಲಿಂಕ್ ಮಾಡಲು ಅನುಮತಿಸುತಿ ಇದ್ಯಾ?
ಆಧಾರ್ ಕಾಯ್ದೆ, 2016 ರ ಅಡಿಯಲ್ಲಿ, ಆಧಾರ್ ಡೇಟಾವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಉದಾಹರಣೆಗೆ ಸರ್ಕಾರಿ ಯೋಜನೆಗಳಿಗೆ ದೃಢೀಕರಣಗಳಿಗೆ ಬಳಸಬಹುದು ಎಂದು ಹೇಳಿತ್ತು. ಮುಖ ಗುರುತಿಸುವ ಪರೀಕ್ಷೆಗೆ ಆಧಾರ್ ಡೇಟಾವನ್ನು ಬಳಸಲು ವಿಶೇಷ ಅನುಮತಿ ಮತ್ತು ಕಾನೂನು ಪ್ರಕ್ರಿಯೆಯ ಅಗತ್ಯವಿದೆ. ಆಧಾರ್ ಡೇಟಾವನ್ನು ದೃಢೀಕರಣ ಪ್ರಕ್ರಿಯೆಯ ಭಾಗವಾಗಿದ್ದಾಗ ಮಾತ್ರ FRT ಗಾಗಿ ಬಳಸಬಹುದು. ಸಾಮಾನ್ಯ ಕಣ್ಗಾವಲಿಗೆ ಅಲ್ಲ ಎಂದು UIDAI ಹೇಳಿದೆ.
ಈ ತಂತ್ರಜ್ಞಾನ ಹೇಗೆ ಸಹಾಯ ಮಾಡುತ್ತದೆ?
ಈ ತಂತ್ರಜ್ಞಾನವು ಆರೋಪಿಗಳನ್ನು ಅಥವಾ ಶಂಕಿತರನ್ನು ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಾಗುತ್ತದೆ. ಟಿಕೆಟ್ ಪರಿಶೀಲನೆಯ ಸಮಯವು ಉಳಿತಾಯವಾಗುತ್ತದೆ. ಈ ತಂತ್ರಜ್ಞಾನವು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ ಹಂತದಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸುವ ಮೂಲಕ ಅಪರಾಧವನ್ನು ತಡೆಯಲು ಸಹಕರಿಸುತ್ತದೆ.
ಈ ತಂತ್ರಜ್ಞಾನವು ಭಾರತದಲ್ಲಿ ಎಲ್ಲೆಲ್ಲಿ ಚಾಲ್ತಿಯಲ್ಲಿದೆ?
ಎಐ ಬಯೋಮೆಟ್ರಿಕ್ ತಂತ್ರಜ್ಞಾನವು ಈ ಹಿಂದೆಯೇ ವಿಮಾನ ನಿಲ್ದಾಣಗಳಲ್ಲಿ ಬಳಕೆಯಲ್ಲಿದೆ. ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಬಳಸಲಾಗುತ್ತಿದೆ. ಇದು ಜುಲೈ 2019 ರಲ್ಲಿ ಕೆಲವು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಯಿತು.
ದೆಹಲಿ ಮತ್ತು ಚೆನ್ನೈನಲ್ಲಿ ಟ್ರಾಫಿಕ್ ಸಿಗ್ನಲ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ಇತರ ಪ್ರದೇಶಗಳಲ್ಲಿ ಕಣ್ಗಾವಲುಗಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನವು ಪೊಲೀಸರಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ಬಹಳ ಬೇಗನೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಗ್ರಾಹಕರ ಪರಿಶೀಲನೆ ಮತ್ತು ಭದ್ರತೆಗಾಗಿ ಕೆಲವು ಬ್ಯಾಂಕ್‌ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ರಾಮನಗರ: ಬಿಡದಿಯ ರೈಲ್ವೆ ನಿಲ್ದಾಣಕ್ಕೆ (Bidadi Railway Station) ಹುಸಿ ಬಾಂಬ್ ಬೆದರಿಕೆಯೊಂದು (Bomb Threat) ಬಂದಿದ್ದು, ತಡರಾತ್ರಿ ಕಂಟ್ರೋಲ್ ರೂಂಗೆ ಕರೆಮಾಡಿ ಬಾಂಬ್ ಬೆದರಿಕೆ ಹಾಕಲಾಗಿದೆ.
ನವದೆಹಲಿ: ಹೆಚ್ಚಿನ ಜನ ದಟ್ಟಣೆ ಹೊಂದುವ 60 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಶಾಶ್ವತ ಹೋಲ್ಡಿಂಗ್ ವಲಯಗಳನ್ನು ನಿರ್ಮಿಸಲಿದೆ ಮತ್ತು ಜನಸಂದಣಿ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ ರೈಲು ನಿಲ್ದಾಣದಲ್ಲಿ (New Delhi Railway Station) ಜನಸಂದಣಿಯಿಂದಾಗಿ ಉಂಟಾದ ಕಾಲ್ತುಳಿತದಲ್ಲಿ (Stampede) 18 ಜನರು ಸಾವನ್ನಪ್ಪಿದ್ದರು. ಈ ದುರ್ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮಗಳ ಜಾರಿಗೆ ಮುಂದಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಬಣಗಳ ನಡುವೆ ಏಪ್ರಿಲ್ Vs ಡಿಸೆಂಬರ್ ವಾರ್!
ಸ್ಥಳೀಯ ಅಧಿಕಾರಿಗಳಿಗೆ ಪರಿಸ್ಥಿತಿಯ ಅರಿವು ಮತ್ತು ಬಿಕ್ಕಟ್ಟು ನಿರ್ವಹಣೆಯಲ್ಲಿ ತರಬೇತಿ ನೀಡಲಾಗುವುದು. ನಿಲ್ದಾಣದಲ್ಲಿ ನಿರ್ದೇಶನ ಸಹಾಯಕ್ಕಾಗಿ, ಪ್ರಯಾಣಿಕರನ್ನು ಗೊತ್ತುಪಡಿಸಿದ ಹೋಲ್ಡಿಂಗ್ ಪ್ರದೇಶಗಳ ಕಡೆಗೆ ಮಾರ್ಗದರ್ಶನ ಮಾಡಲು ಬಾಣಗಳು ಮತ್ತು ವಿಭಜಕಗಳನ್ನು ರಚಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸಂದೇಶ – ಮಹಾಸ್ಫೋಟಕ ತಿರುವು
ಜನಸಂದಣಿ ನಿಯಂತ್ರಣ ಕ್ರಮಗಳ ಭಾಗವಾಗಿ ಸೇತುವೆಗಳ ಮೇಲೆ ಮತ್ತು ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಜನರನ್ನು ಕ್ಯಾಮೆರಾಗಳು ಮೇಲ್ವಿಚಾರಣೆ ಮಾಡಲಿವೆ. ಜನದಟ್ಟಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲು ರೈಲ್ವೆ ವಿಶೇಷ ಅಭಿಯಾನವನ್ನು ನಡೆಸಲಿದೆ ಮತ್ತು ಪ್ರಯಾಣಿಕರು, ಕೂಲಿಗಳು ಮತ್ತು ಅಂಗಡಿಯವರಿಂದ ಪ್ರತಿಕ್ರಿಯೆ ಪಡೆಯಲಿದೆ. ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಪ್ಲಾಟ್‌ಫಾರ್ಮ್ ಟಿಕೆಟ್ ಬಂದ್, ಹೈ ಸೆಕ್ಯುರಿಟಿ
ಕೋಲಾರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ತಡರಾತ್ರಿ ಘಟನೆ ಸಂಭವಿಸಿದೆ. ರೈಲ್ವೆ ಪ್ಲಾಟ್‌ಫಾರ್ಮ್ ಮೇಲಿಂದ ರೈಲ್ವೆ ಹಳಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮವಾಗಿ ಕಾರು ಮತ್ತು ರೈಲ್ವೆ ಹಳಿಗೆ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಆಕಸ್ಮಿಕ ಬೆಂಕಿ – 40 ಕುರಿಗಳು ಸಜೀವ ದಹನ
ಕಾರು ಮಾಲೀಕ ರಾಕೇಶ್ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಈ ಅವಾಂತರ ಸೃಷ್ಟಿಸಿದ್ದಾನೆ. ರೈಲ್ವೆ ಪೊಲೀಸರು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ.
ತುಮಕೂರು: ನಗರದ ರೈಲು ನಿಲ್ದಾಣವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ₹88.41 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣವನ್ನು ( Railway Station) ಸಿದ್ದಗಂಗಾ ಮಠದ ಮಾದರಿಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಬಹುಮಹಡಿ ಕಟ್ಟಡ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ, ಆಗಮನ- ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳು, ಏರ್- ಕಾನ್‌ಕೋರ್ಸ್, ಲಿಫ್ಟ್, ಎಸ್ಕಲೇಟರ್, ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ ಅರೆಬಿಯನ್ ನೈಟ್ಸ್ ಕಥೆಯಂತಿದೆ: ದರ್ಶನ್ ಪರ ಸಿ.ವಿ ನಾಗೇಶ್ ವಾದ ಹೇಗಿತ್ತು?
ಬೆಂಗಳೂರಿನಂತೆ (Bengaluru) ತುಮಕೂರು ಕೂಡ ಅತಿವೇಗವಾಗಿ ಬೆಳೆಯುತ್ತಿದ್ದು, ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೂ ವಿಶ್ವ ದರ್ಜೆಯ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪೂರ್ವಜನ್ಮದ ಪುಣ್ಯದಿಂದ ಮಂತ್ರಿ ಆಗಿದ್ದೇವೆ – ಸಚಿವ ಚೆಲುವರಾಯಸ್ವಾಮಿ
ಮುಂಬೈ: 20ರ ಹರೆಯದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ (Lover) ಬರ್ಬರವಾಗಿ ಇರಿದು ಕೊಂದು, ಆಕೆಯ ಶವವನ್ನು ರೈಲ್ವೆ ನಿಲ್ದಾಣದ (Railway Station) ಬಳಿಯ ಪೊದೆಯಲ್ಲಿ ಎಸೆದಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಘಟನೆಯ ಕುರಿತು ಉಪ ಪೊಲೀಸ್ ಆಯುಕ್ತ (ನವಿ ಮುಂಬೈ) ವಿವೇಕ್ ಪನ್ಸಾರೆ ಪ್ರತಿಕ್ರಿಯಿಸಿ, ಉರಾನ್ ರೈಲು ನಿಲ್ದಾಣದ ಬಳಿಯ ಪೊದೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ ಎಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಕರೆ ಬಂದಿತ್ತು. ಆಕೆಯ ಮೃತದೇಹ ಅನೇಕ ಗಾಯದ ಗುರುತುಗಳು ಮತ್ತು ಇರಿತದ ಗಾಯಗಳನ್ನು ಒಳಗೊಂಡಿದೆ. ಇದು ಆಕೆಯನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ ಎಂದು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್ ವಿಧಿಸಲು ತೀರ್ಮಾನ – ಫಿಲ್ಮ್ ಚೇಂಬರ್ ಅಸಮಾಧಾನ
ನಮ್ಮ ಪ್ರಾಥಮಿಕ ತನಿಖೆಯ ಪ್ರಕಾರ, ಪ್ರೀತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಯ ಬಳಿಕ ಪ್ರಿಯಕರ ಕೂಡ ನಾಪತ್ತೆಯಾಗಿದ್ದಾನೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೇ ಆರೋಪಿ ಪ್ರಿಯಕರನ ಪತ್ತೆಗೆ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ – ಹಿಂದೂ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ದೂರು
– ಅಪ್ಪ, ಚಿಕ್ಕಪ್ಪ, ದೊಡ್ಡಪ ಮಾವ ಎಲ್ಲರೂ ಅವನೊಬ್ಬನೆ – ಧ್ವನಿ ಬದಲಿಸಿ ಮಾತನಾಡ್ತಿದ್ದ ಕಿಲಾಡಿ
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬರುತ್ತಿದ್ದ ಪೋಷಕರಿಗೆ ವಂಚಿಸುತ್ತಿದ್ದ ಆರೋಪಿಯ ಒಂದೊಂದೇ ಮುಖವಾಡಗಳು ಬಯಲಾಗುತ್ತಿವೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಗುಜರಾತ್, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲೂ ದೋಖಾ ಮಾಡಿರುವ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ.
45 ವರ್ಷ ವಯಸ್ಸಿನ ಆರೋಪಿ (Accused) ನರೇಶ್ ಗೋಸ್ವಾಮಿ ತಾನೇ ಯುವಕನ ತಂದೆ, ಚಿಕ್ಕಪ್ಪ, ದೊಡ್ಡಪ್ಪ, ಮಾವ ಅಂತ ಹೇಳಿಕೊಂಡು ಧ್ವನಿ ಬದಲಿಸಿ ಮಾತನಾಡುತ್ತಿದ್ದ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪರಿಸ್ಥಿತಿಗೆ ತಕ್ಕಂತೆ ಧ್ವನಿ ಬದಲಿಸಿ ಚಿಕ್ಕಪ್ಪನಿಗೆ ಆಕ್ಸಿಡೆಂಟ್ ಆಗಿದೆ, ಮಾವ ಆಸ್ಪತ್ರೆಯಲ್ಲಿದ್ದಾರೆ ಅಂತ ಹೇಳಿ, ಹಣ ಪಡೆದು ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ. ಕೆಲ ಪೋಷಕರ ಬಳಿ ವರದಕ್ಷಿಣೆ ರೂಪದಲ್ಲಿ ಮುಂಚಿತವಾಗಿಯೇ ಹಣ ಪಡೆದು ನಂತರ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಿದ್ದ. ಕೇವಲ ಕರ್ನಾಕದಲ್ಲಿ ಮಾತ್ರವಲ್ಲ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಇದೇ ರೀತಿ ದೋಖಾ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು (Bengaluru Police) ತಿಳಿಸಿದ್ದಾರೆ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಪವನ್ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು.
ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಫೋನ್ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್, ನನ್ನ ಚಿಕ್ಕಪ್ಪ ಟಿಕೆಟ್ ಬುಕ್ಕಿಂಗ್ ಮಾಡಬೇಕು, ಪರ್ಸ್ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ. ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.
ಹಣ ಪಡೆದ ವ್ಯಕ್ತಿ ಟಿಕೆಟ್ ಬುಕ್ಕಿಂಗ್ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿತ್ತು.
ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಸಿಕ್ಕ ವರನನ್ನು ಹುಡುಕಿಕೊಂಡು ಬಂದಿದ್ದ ಪೋಷಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಒಬ್ಬನನ್ನು ಪೊಲೀಸರು (Bengaluru Police) ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ರಾಜಾಜಿನಗರ (Rajajinagar) ನಿವಾಸಿ ಪವನ್ ಅಗರವಾಲ್ ಬಂಧಿತ ಆರೋಪಿ. ನಿಮ್ಮ ಮಗಳು ನನಗೆ ಇಷ್ಟ ಆಗಿದ್ದಾಳೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬರೋಬ್ಬರಿ 250ಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾನೆ. ತಮಿಳುನಾಡು (Tamil Nadu) ಮೂಲದ ದಂಪತಿಗೆ ವಂಚನೆ ಕೇಸ್ ತನಿಖೆ ನಡೆಸುತ್ತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡು ಕೊಯಮತ್ತೂರಿನ ದಂಪತಿ ಮಗಳ 2ನೇ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನ ಹುಡುಕುತ್ತಿದ್ದರು. ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಎಂಬಾತ ಪರಿಚಯವಾಗಿದ್ದ. ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ. ನಾನು ಮದುವೆ ಆಗುವುದಾಗಿ ವರ ಪವನ್ ಅಗರವಾಲ್ ಹೇಳಿದ್ದ. ಪವನ್ ಮಾತನ್ನು ನಂಬಿ ಮಾತುಕತೆಗೆ ಅಂತಾ ಯುವತಿಯ ಪೋಷಕರು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?
ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಫೋನ್ ಮಾಡಿದ ನಂತರ ಪವನ್, ನನಗೆ ಮನೆ ಹತ್ತಿರ ಕೆಲಸ ಇದೆ. ನನ್ನ ಬದಲು ನನ್ನ ಚಿಕ್ಕಪ್ಪ ಬಂದು ನಿಮ್ಮನ್ನ ಮನೆಗೆ ಕರೆದುಕೊಂಡು ಬರ್ತಾರೆ ಎಂದು ಹೇಳಿದ್ದ. ಅದರಂತೆ ಒಬ್ಬ ವ್ಯಕ್ತಿ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದಿದ್ದ. ಆತ ಬಂದ ಕೂಡಲೇ ಮತ್ತೆ ಕರೆ ಮಾಡಿದ ಪವನ್, ನನ್ನ ಚಿಕ್ಕಪ್ಪ ಟಿಕೆಟ್ ಬುಕ್ಕಿಂಗ್ ಮಾಡಬೇಕು, ಪರ್ಸ್ ಮರೆತು ಬಂದಿದ್ದಾರೆ. ನೀವು ಅವರಿಗೆ 10 ಸಾವಿರ ರೂ. ಕೊಡಿ, ಮನೆಗೆ ಬಂದ ಮೇಲೆ ವಾಪಸ್ ಕೊಡುತ್ತೇನೆ ಅಂತ ಹೇಳಿದ್ದಾನೆ. ಪವನ್ ಮಾತು ನಂಬಿದ ದಂಪತಿ ಪವನ್ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ 10 ಸಾವಿರ ರೂ. ಕೊಟ್ಟಿದ್ದಾರೆ.
ಹಣ ಪಡೆದ ವ್ಯಕ್ತಿ ಟಿಕೆಟ್ ಬುಕ್ಕಿಂಗ್ ಮಾಡಿ ಬರ್ತೀನಿ ಅಂತ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಪವನ್ ಮತ್ತು ಆತನ ಚಿಕ್ಕಪ್ಪ ಎಂದು ಹೇಳಿಕೊಂಡ ವ್ಯಕ್ತಿಗೆ ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ತಮ್ಮ ಸಂಬಂಧಿ ಮನೆಗೆ ಹೋಗಿ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಸಿಟಿ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಗೆ ದೂರು ನೀಡಿ ಕೊಯಮತ್ತೂರಿಗೆ ವಾಪಸ್ ತೆರಳಿದ್ದರು. ಇದನ್ನೂ ಓದಿ: ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ನರೇಶ್ ಗೋಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ನಂತರ ಈತನನ್ನು ವಿಚಾರಣೆಗೆ ಒಳಪಡಿಸಿದಾಗಲೇ ಆಸಾಮಿ ಬರೋಬ್ಬರಿ 250 ಜನರಿಗೆ ಇದೇ ರೀತಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.
ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಸಂಪೂರ್ಣ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ (Railway Station) ಉದ್ಘಾಟನೆ ನೆರವೇರಿಸಿದರು.
#WATCH | Prime Minister Narendra Modi inaugurates the Ayodhya Dham Junction railway station, in Ayodhya, Uttar Pradesh
Developed at a cost of more than Rs 240 crore, the three-storey modern railway station building is equipped with all modern features like lifts, escalators,… pic.twitter.com/oJMFLsjBnp
ಬಳಿಕ ರೈಲು ನಿಲ್ದಾಣವನ್ನ ಪರಿಶೀಲಿಸಿದ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ 2 ಅಮೃತ್ ಭಾರತ್ ರೈಲು ಹಾಗೂ 6 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.
ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.
#WATCH | Prime Minister Narendra Modi inaugurates the Ayodhya Dham Junction railway station, in Ayodhya.
Uttar Pradesh Governor Anandiben Patel, CM Yogi Adityanath, Railways Minister Ashwini Vaishnaw are also present. pic.twitter.com/ls97j4eKkE
ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.
ಮೋದಿಗೆ ದಾರಿಯುದ್ಧಕ್ಕೂ ಪುಷ್ಪಾರ್ಚನೆ:
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಾಲುಹೊದಿಸಿ ಪ್ರಧಾನಿ ಮೋದಿ ಅವರನ್ನ ಸ್ವಾಗತಿಸಿದರು. ರೈಲ್ವೆ ನಿಲ್ದಾಣ ಉದ್ಘಾಟನೆಗೂ ಮುನ್ನ ನಡೆದ ರೋಡ್ ಶೋನಲ್ಲಿ ಹಲವು ಅಂಶಗಳು ಗಮನ ಸೆಳೆದವು.
ಮೋದಿ ಬರುವ ದಾರಿಯಲ್ಲಿ ನಿರ್ಮಿಸಲಾಗಿದ್ದ ಸುಮಾರು 40 ವೇದಿಕೆಗಳಲ್ಲಿ 1,400ಕ್ಕೂ ಹೆಚ್ಚು ಕಲಾವಿದರು ವಿವಿಧ ಸಾಂಸ್ಕೃತಿಕ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಅಲ್ಲದೇ ಮೋದಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದ ಜನರು ರೋಡ್‌ಶೋ ಹಾದಿಯುದ್ಧಕ್ಕೂ ವಿವಿಧ ಹೂಗಳಿಂದ ಮೋದಿಗೆ ಪುಷ್ಪಾರ್ಚನೆ ಮಾಡಿ ಜಯಘೋಷ ಹಾಕಿದರು.