Tag: Railway staff

  • ನೀರಿನ ಬಾಟಲಿಗೆ ಜಗಳ – ಚಲಿಸುವ ರೈಲಿನಿಂದ ಹೊರಗೆ ದೂಡಿದ ಸಿಬ್ಬಂದಿ

    ನೀರಿನ ಬಾಟಲಿಗೆ ಜಗಳ – ಚಲಿಸುವ ರೈಲಿನಿಂದ ಹೊರಗೆ ದೂಡಿದ ಸಿಬ್ಬಂದಿ

    ಲಕ್ನೋ: ರೈಲ್ವೇ ಸಿಬ್ಬಂದಿಯೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ದೂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಲಲಿತ್‌ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರವಿ ಯಾದವ್ ತನ್ನ ಸಹೋದರಿಯೊಂದಿಗೆ ರಪ್ತಿಸಾಗರ್ ಎಕ್ಸ್‌ಪ್ರೆಸ್(12591)ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಜಿರೋಲಿ ಗ್ರಾಮದ ಬಳಿ ತಲುಪಿದಾಗ, ನೀರಿನ ಬಾಟಲಿಯನ್ನು ಖರೀದಿಸುವ ಹಾಗೂ ಪಾನ್ ಮಸಾಲವನ್ನು ಉಗುಳುವ ವಿಚಾರದಲ್ಲಿ ರವಿ ಯಾದವ್‌ಗೆ ರೈಲ್ವೇ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಭಾರತದ ಜಲಗಡಿಗೆ ಬಂದಿದ್ದ ಪಾಕ್ ಯದ್ಧನೌಕೆಯನ್ನು ಓಡಿಸಿದ ಡಾರ್ನಿಯರ್

    ಬಳಿಕ ರವಿ ಯಾದವ್ ಸಹೋದರಿ ಲಲಿತ್‌ಪುರ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾರೆ. ಆದರೆ ಸಿಬ್ಬಂದಿ ರವಿ ಯಾದವ್‌ನನ್ನು ಹೊರ ಹೋಗಲು ಬಿಟ್ಟಿರಲಿಲ್ಲ. ಬಳಿಕ ಸಿಬ್ಬಂದಿ ಆತನಿಗೆ ಥಳಿಸಿ, ಚಲಿಸುತ್ತಿದ್ದ ರೈಲಿನಿಂದಲೇ ಟ್ರ್ಯಾಕ್‌ಗೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

    ಸದ್ಯ ರವಿ ಯಾದವ್ ಪ್ರಾಣಾಪಾಯದಿಂದ ಪಾರಾಗಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ರೈಲ್ವೇ ಪೊಲೀಸ್ ಸರ್ಕಲ್ ಅಧಿಕಾರಿ ಮೊಹಮ್ಮದ್ ನಯೀಮ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗ್ರಹಣದ ದಿನವೇ ತಪ್ಪಿದ ಭಾರೀ ದುರಂತ – ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ

    ಗ್ರಹಣದ ದಿನವೇ ತಪ್ಪಿದ ಭಾರೀ ದುರಂತ – ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ

    ಬೆಂಗಳೂರು: ಸಿಲಿಕಾನ್ ಸಿಟಿಯ ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್ ಹೋಗುವ ರೈಲಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

    ಯಶವಂತಪುರ-ಬಿಕಾನೇರ್ ರೈಲಿನ ಎಸಿ ಕೋಚ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ಬಳಿಯ ರೈಲ್ವೆ ನಿಲ್ದಾಣದ ಬಳಿ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ.

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಬೋಗಿಯಲ್ಲಿದ್ದ ಕೆಲ ಸೀಟ್‍ಗಳು ಸುಟ್ಟು ಹೋಗಿದೆ. ರೈಲಿನಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

  • ಹಾಸನದಲ್ಲಿ ಬಂದೂಕುಧಾರಿಗಳು ಪ್ರತ್ಯಕ್ಷ – ಪೊಲೀಸರಿಂದ ಶೋಧ

    ಹಾಸನದಲ್ಲಿ ಬಂದೂಕುಧಾರಿಗಳು ಪ್ರತ್ಯಕ್ಷ – ಪೊಲೀಸರಿಂದ ಶೋಧ

    ಹಾಸನ: ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬಂದೂಕು ತೋರಿಸಿ ಬೆದರಿಕೆ ಹಾಕಿರುವ ಪ್ರಕರಣ ಕಂಡುಬಂದಿದ್ದು, ಪೊಲೀಸರು ಪಶ್ಚಿಮ ಘಟ್ಟದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ.

    ಹಾಸನ ಮಂಗಳೂರು ನಡುವಿನ ರೈಲ್ವೆ ಹಳಿಯ ಯಡಕುಮೇರಿ ಬಳಿ ಪ್ರತ್ಯಕ್ಷವಾಗಿದ್ದ ಇಬ್ಬರು ಶಸ್ತ್ರಾಸ್ತ್ರಧಾರಿಗಳು, ಎರಡು ದಿನಗಳ ಹಿಂದೆ ರೈಲ್ವೆ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.

    ಬಂದೂಕುದಾರಿಗಳನ್ನು ನಕ್ಸಲರೆಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ಅರಣ್ಯ ಇಲಾಖೆ, ರೈಲ್ವೇ ಪೊಲೀಸ್, ಮತ್ತು ಸಕಲೇಶಪುರ ಗ್ರಾಮಾಂತರ ಪೊಲೀಸರಿಂದ ಜಂಟಿಯಾಗಿ ಕಡಗರವಳ್ಳಿ ಮತ್ತು ಯಡಕುಮೇರಿ ಭಾಗದಲ್ಲಿ ಶೋಧಕಾರ್ಯ ಮಾಡುತ್ತಿದ್ದಾರೆ.

  • ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕಿದ್ದ 16 ರೈಲ್ವೇ ಸಿಬ್ಬಂದಿ ರಕ್ಷಣೆ

    ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕಿದ್ದ 16 ರೈಲ್ವೇ ಸಿಬ್ಬಂದಿ ರಕ್ಷಣೆ

    ಹಾಸನ: ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ 16 ರೈಲ್ವೇ ಸಿಬ್ಬಂದಿ ರಕ್ಷಣೆಗೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಟ್ರಕ್ಕಿಂಗ್ ಮೂಲಕ ಸಾಗಿ ಅಪಾಯದಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.

    ಸಕಲೇಶಪುರ ಎಸಿ ನೇತೃತ್ವದ ತಂಡ ಟ್ರೆಕ್ಕಿಂಗ್ ಪರಿಣಿತರೊಂದಿಗೆ ನಡೆದು ಹೋಗಿ ಎಡಕುಮರಿ ಬಳಿ ಗುಡ್ಡ ಕುಸಿದಿಂದ ಸಿಲುಕಿದ್ದ ರೈಲ್ವೇ ಸಿಬ್ಬಂದಿಯನ್ನು ರಕ್ಷಿಸಿ ಪಟ್ಟಣಕ್ಕೆ ಕರೆತಂದಿದ್ದಾರೆ. ಅಪಾಯದಲ್ಲಿ ಸಿಲುಕಿದ್ದ 16 ಮಂದಿ ಸಿಬ್ಬಂದಿಯ ಆರೋಗ್ಯ ಉತ್ತಮವಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಕಲೇಶಪುರ ಉಪವಿಭಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

    ಬೆಂಗಳೂರು- ಮಂಗಳೂರು ಸಂಪರ್ಕದ ರೈಲು ಮಾರ್ಗದಲ್ಲಿ ಸಿಲುಕಿರುವ ಎಲ್ಲಾ ಸಿಬ್ಬಂದಿಗಳನ್ನು ರಕ್ಷಿಸಲು ತಂಡ ಕಾಗಿನೆರಿ ಮೂಲಕ ತೆರಳಿದ್ದರು. ಈ ಮೊದಲು ಸಿಬ್ಬಂದಿಯನ್ನು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿ ರಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಟ್ರಕ್ಕಿಂಗ್ ಮಾರ್ಗದ ಮೂಲಕ ತೆರಳಿ ಸಿಬಂದಿ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಉಪವಿಭಾಗಾಧಿಕಾರಿಗಳು ಭಾಗವಹಿಸಿದ್ದರು. ಸದ್ಯ ಎಲ್ಲಾ ರಕ್ಷಿಸಲಾದ ಎಲ್ಲಾ ಸಿಬ್ಬಂದಿಯನ್ನು ಸಕಲೇಶಪುರ ಪಟ್ಟಣಕ್ಕೆ ಕರೆದ್ಯೊಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv