Tag: Railway officials

  • ಚಲಿಸುತ್ತಿದ್ದಾಗಲೇ ಎರಡು ತುಂಡಾದ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು – ನೂರಾರು ಪ್ರಯಾಣಿಕರು ಗ್ರೇಟ್‌ ಎಸ್ಕೇಪ್‌

    ಚಲಿಸುತ್ತಿದ್ದಾಗಲೇ ಎರಡು ತುಂಡಾದ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು – ನೂರಾರು ಪ್ರಯಾಣಿಕರು ಗ್ರೇಟ್‌ ಎಸ್ಕೇಪ್‌

    ಹೈದರಾಬಾದ್‌: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ಇಂದು ಬೆಳಗ್ಗೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ವಿಶಾಖಪಟ್ಟಣಂ ಮಾರ್ಗವಾಗಿ ಪಶ್ಚಿಮ ಬಂಗಾಳದ ಶಾಲಿಮಾರ್‌ಗೆ ಪ್ರಯಾಣಿಸುತ್ತಿದ್ದ ಫಲಕ್‌ನುಮಾ ಎಕ್ಸ್‌ಪ್ರೆಸ್ ರೈಲು (Falaknuma Superfast Express) ಅನಿರೀಕ್ಷಿತವಾಗಿ ಬೇರ್ಪಟ್ಟಿದೆ (2 ತುಂಡಾಗಿ – Train Splits). ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸದೇ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿಗಳು (Railway Officials), ರೈಲಿನಲ್ಲಿ ಯಾವುದೇ ಅಲರ್ಟ್‌ ತಿಳಿಯದೇ ಏಕಾಏಕಿ ಎರಡು ಎಸಿ ಬೋಗಿಗಳು ಬೇರ್ಪಟ್ಟಿವೆ. ಕೂಡಲೇ ಎಚ್ಚೆತ್ತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ದೊಡ್ಡ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಲಿ‌, ಸಾವು-ನೋವಿಗಳಾಗಲಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

    ಬಳಿಕ ಏನಾಯ್ತು?
    ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಸಿಬ್ಬಂದಿ ಘಟನಾ ಸ್ಥಳಕ್ಕೆ ತ್ವರಿತವಾಗಿ ಭೇಟಿ ನೀಡಿದ್ದಾರೆ. ಅಗತ್ಯ ರಿಪೇರಿ ಮಾಡಿ ಬೇರ್ಪಟ್ಟ ಬೋಗಿಗಳನ್ನು ಮತ್ತೆ ಜೋಡಿಸಿದ್ದಾರೆ. ಸುರಕ್ಷತೆಯ ಎಲ್ಲಾ ಪ್ರೋಟೋಕಾಲ್‌ (ಶಿಷ್ಟಾಚಾರ) ಪಾಲಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಆದಾಗ್ಯೂ ಏಕಾಏಕಿ ಬೋಗಿಗಳು ಬೇರ್ಪಡಲು ಕಾರಣವೇನು ಅನ್ನೋದರ ಕುರಿತು ರೈಲ್ವೇ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

    ರೈಲು ಸಂಚಾರದ ಮೇಲೆ ಪರಿಣಾಮ
    ಫಲಕ್‌ನುಮಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಬೇರ್ಪಟ್ಟ ಕಾರಣದಿಂದಾಗಿ ಬ್ರಹ್ಮಪುರ ಮತ್ತು ವಿಶಾಖಪಟ್ಟಣಂ ನಡುವಿನ ರೈಲು ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿತ್ತು.

  • ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ 9 ತಿಂಗಳ ಮಗು ಜೊತೆ ತಾಯಿ ಬಚಾವ್

    ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ 9 ತಿಂಗಳ ಮಗು ಜೊತೆ ತಾಯಿ ಬಚಾವ್

    ಚೆನ್ನೈ: ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ ತಾಯಿ ಮತ್ತು 9 ತಿಂಗಳ ಮಗು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ತಮಿಳುನಾಡಿನ ಕಟಪಾಡಿ ರೈಲ್ವೆ ಜಂಕ್ಷನ್‍ನಲ್ಲಿ ನಡೆದಿದೆ.

    ಯುವರಾಣಿ (37) ಮಹಿಳೆ ಹಾಗೂ ಮಗು ಅದೃಷ್ಟವಶಾತ್ ಪಾರಾದವರು. ತಾಯಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕಟಪಾಡಿ ರೈಲ್ವೆ ಜಂಕ್ಷನ್ ದಾಟುತ್ತಿದ್ದರು. ಈ ವೇಳೆ ರೈಲು ಹಳಿಯನ್ನು ಎಡವಿ ಕಾಲು ಜಾರಿ ಇಬ್ಬರೂ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ

    ರೈಲು ಬರುತ್ತಿರುವ ಸಂದರ್ಭದಲ್ಲಿ ರೈಲ್ವೇ ಹಳಿಗಳು ಲೈನ್ ಚೇಂಜ್ ಆಗುತ್ತಿರುವದನ್ನು ಯುವರಾಣಿಯವರು ಗಮನಿಸಿರಲಿಲ್ಲ. ಈ ವೇಳೆ ಅವರು ರೈಲು ಬರುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿ ಅವರಿಗೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಕಂಡ ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‍ಪ್ರೆಸ್‍ನ್ನು ಸರಿಯಾದ ಸಮಯಕ್ಕೆ ನಿಲ್ಲಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

    ಯುವರಾಣಿ ತಲೆಗೆ ಗಾಯವಾಗಿತ್ತು. ರೈಲ್ವೇ ಅಧಿಕಾರಿಗಳು ಮತ್ತು ಪ್ರಯಾಣಿಕರು ಅವರನ್ನು ಹಳಿಯಿಂದ ಮೇಲಕ್ಕೆತ್ತಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಘಟನೆಯ ನಂತರ ಯುವರಾಣಿ ಆಘಾತಕ್ಕೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮತ್ತು ಮಗುವನ್ನು ಚಿಕಿತ್ಸೆಗಾಗಿ ವೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.