Tag: Railway Ministry

  • ರೈಲು ದುರಂತಕ್ಕೆ ಸಂಚು ಹೆಚ್ಚಾಗುತ್ತಿದ್ದಂತೆ 75 ಲಕ್ಷ AI ಕ್ಯಾಮೆರಾ ಖರೀದಿಗೆ ಮುಂದಾದ ಇಲಾಖೆ

    ರೈಲು ದುರಂತಕ್ಕೆ ಸಂಚು ಹೆಚ್ಚಾಗುತ್ತಿದ್ದಂತೆ 75 ಲಕ್ಷ AI ಕ್ಯಾಮೆರಾ ಖರೀದಿಗೆ ಮುಂದಾದ ಇಲಾಖೆ

    ನವದೆಹಲಿ: ಹಳಿಗಳ ಮೇಲೆ ವಸ್ತುಗಳು ಇರಿಸಿ ದುಷ್ಕೃತ್ಯ ಎಸಗುವ ಪ್ರಕರಣಗಳ ಹೆಚ್ಚಾಗುತ್ತಿದ್ದಂತೆ ಇವುಗಳಿಗೆ ಕಡಿವಾಣ ಹಾಕಲು ರೈಲ್ವೇ ಸಚಿವಾಲಯ (Railway Ministry) ಈಗ 75 ಲಕ್ಷ ಎಐ ಕ್ಯಾಮೆರಾ (Artificial Intelligence Camera) ಖರೀದಿಸಲು ಮುಂದಾಗಿದೆ.

    ರೈಲುಗಳನ್ನು ಹಳಿತಪ್ಪಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ರೈಲುಗಳಲ್ಲಿ ಬಹು ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಘೋಷಿಸಿದ್ದಾರೆ. ಇದನ್ನೂ ಓದಿ: ಭಾರತದ ರೈಲು, ಪೆಟ್ರೋಲ್ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿ -ರಾಮೇಶ್ವರಂ ಕೆಫೆ ಸ್ಫೋಟ ಸಂಚುಕೋರನಿಂದ ಕರೆ

    ಇಂಜಿನ್ ಮತ್ತು ಗಾರ್ಡ್ ಕೋಚ್‌ನ ಮುಂಭಾಗ, ಹಿಂಭಾಗ, ಎರಡು ಬದಿಗಳಲ್ಲಿ, ಕೋಚ್‌ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಸಾಧನಗಳಿಂದ ತುಣುಕನ್ನು ಸಂಗ್ರಹಿಸಲು ಮತ್ತು ಪರಿಶೀಲಿಸಲು ಕೇಂದ್ರೀಯ ಡೇಟಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ.

    ಒಟ್ಟು 75 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಕ್ಯಾಮೆರಾ ಅಳವಡಿಕೆಯೆ ಟೆಂಡರ್ ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗೆ ಮುಕ್ತಾಯವಾಗಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ

    40,000 ಕೋಚ್‌ಗಳು, 14,000 ಲೊಕೊಮೊಟಿವ್‌ಗಳು ಮತ್ತು 6,000 ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್‌ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ.

     

  • ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

    ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ

    ನವದೆಹಲಿ: ರೈಲಿನಲ್ಲಿ ರಾತ್ರಿ ಪ್ರಯಾಣದ ಸಮಯದಲ್ಲಿ ಫೋನ್‍ಗಳಲ್ಲಿ ಜೋರಾಗಿ ಮಾತನಾಡುವುದನ್ನು ಮತ್ತು ಹಾಡುಗಳನ್ನು ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ.

    ರೈಲ್ವೆ ತನ್ನ ಎಲ್ಲಾ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಿದೆ. ಭಾರತೀಯ ರೈಲ್ವೆ ಹೊರಡಿಸಿದ ಪ್ರಯಾಣಿಕರ ಸ್ನೇಹಿ ಮಾರ್ಗಸೂಚಿಗಳಲ್ಲಿ ರೈಲು ಸಿಬ್ಬಂದಿ ಕೂಡ ತಮ್ಮ ಕೆಲಸ ರಾತ್ರಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತದೆ. ಇದರರ್ಥ ಟಿಕೆಟ್ ತಪಾಸಣೆ ಸಿಬ್ಬಂದಿ, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣಾ ಸಿಬ್ಬಂದಿ ಮಲಗುವ ವಿಶ್ರಾಂತಿ ಪಡೆಯುತ್ತಿರುವ ಪ್ರಯಾಣಿಕರ ಸುತ್ತಲೂ ಕೆಲಸ ಮಾಡಬೇಕಾಗುತ್ತದೆ.

    ಯಾವುದೇ ವ್ಯಕ್ತಿಗೆ ಮೊಬೈಲ್‍ನಲ್ಲಿ ಜೋರಾಗಿ ಮಾತನಾಡಲು ಅವಕಾಶವಿಲ್ಲ ಅಥವಾ ಕಂಪಾರ್ಟ್‍ಮೆಂಟ್ ಕೋಚ್‍ನಲ್ಲಿದ್ದಾಗ ಜೋರು ಧ್ವನಿಯಲ್ಲಿ ಹಾಡುಗಳನ್ನು ಕೇಳುವಂತಿಲ್ಲ ಎಂದು ಮಾರ್ಗಸೂಚಿಯು ಸ್ಪಷ್ಟವಾಗಿ ಹೇಳುತ್ತದೆ.

    ಪ್ರಯಾಣದ ವೇಳೆ ಪ್ರಯಾಣಿಕರ ನಿದ್ರೆಗೆ ಯಾವುದೇ ತೊಂದರೆಯಾಗದಂತೆ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರು ಮೊಬೈಲ್ ಫೋನ್‍ಗಳಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಷ್ಟಾದರೂ ಯಾವುದಾದರು ದೂರುಗಳು ಬಂದರೆ ಆ ರೈಲಿನಲ್ಲಿರುವ ರೈಲ್ವೆ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

    ಇವುಗಳಲ್ಲದೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರು, ದೈಹಿಕವಾಗಿ ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬ್ಬಂದಿಯಿಂದ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುವುದು. ರೈಲ್ವೆ ಸಚಿವಾಲಯವು ವಲಯ ರೈಲ್ವೆಗಳಿಗೆ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ಕೇಳಿದೆ. ಅಲ್ಲಿ ಟಿಕೆಟ್ ತಪಾಸಣೆ ಸಿಬ್ಬಂದಿ ಮತ್ತು ಇತರ ರೈಲ್ವೆ ಸಿಬ್ಬಂದಿ ತಮ್ಮ ಫೋನ್‍ಗಳಲ್ಲಿ ಜೋರಾಗಿ ಮಾತನಾಡುವುದರ ವಿರುದ್ಧ ಪ್ರಯಾಣಿಕರಿಗೆ ಸಲಹೆ ನೀಡುತ್ತಾರೆ. ಇಯರ್‌ಫೋನ್ ಇಲ್ಲದೆ ಸಂಗೀತ ಕೇಳದಂತೆ ಪ್ರಯಾಣಿಕರಿಗೆ ಸಿಬ್ಬಂದಿ ಸಲಹೆ ನೀಡುತ್ತಾರೆ.

    ಈ ಹಿಂದೆ ಬೆಂಕಿಯ ಘಟನೆಗಳ ವಿರುದ್ಧ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಯಾಣಿಕರು ರಾತ್ರಿ 11 ರಿಂದ ಬೆಳಗ್ಗೆ 5 ರ ನಡುವೆ ರೈಲುಗಳಲ್ಲಿ ಮೊಬೈಲ್ ಚಾಜಿರ್ಂಗ್ ಸ್ಟೇಷನ್‍ಗಳನ್ನು ಬಳಸುವುದನ್ನು ನಿಷೇಧಿಸುವ ನಿರ್ಧಾರವನ್ನು ರೈಲ್ವೆ ತೆಗೆದುಕೊಂಡಿತ್ತು.

  • ರೈಲು ಪ್ರಯಾಣಿಕರೇ ಗಮನಿಸಿ: ಟೀ-ಕಾಫಿಗೆ 7 ರೂ. ಮಾತ್ರ ನೀಡಿ, ಜಾಸ್ತಿ ಹಣ ಕೇಳಿದ್ರೆ ದೂರು ಕೊಡಿ

    ರೈಲು ಪ್ರಯಾಣಿಕರೇ ಗಮನಿಸಿ: ಟೀ-ಕಾಫಿಗೆ 7 ರೂ. ಮಾತ್ರ ನೀಡಿ, ಜಾಸ್ತಿ ಹಣ ಕೇಳಿದ್ರೆ ದೂರು ಕೊಡಿ

    ಎಕ್ಸ್ ಪ್ರೆಸ್ ರೈಲಿನಲ್ಲಿ ವೇಯ್ಟಿಂಗ್ ಟಿಕೆಟ್ ಇದ್ದರೆ ರಾಜಧಾನಿ, ಶತಾಬ್ದಿಯಲ್ಲಿ ಪ್ರಯಾಣಿಸಬಹುದು

    ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ, ತಿಂಡಿ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚು ಹಣ ಕೇಳಿದ್ರೆ ದೂರು ನೀಡಿ ಎಂದು ರೈಲ್ವೆ ಇಲಾಖೆ ಹೇಳಿದೆ.

    ರೈಲಿನಲ್ಲಿ ಊಟ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ಮಾಹಿತಿ ನೀಡಿದೆ. ಕಾಫಿ, ಟೀ, ತಿಂಡಿ, ಊಟ ಹಾಗೂ ನೀರಿನ ಬಾಟಲಿಯ ಬೆಲೆ ಎಷ್ಟು ಎಂಬ ಪಟ್ಟಿಯನ್ನು ರೈಲ್ವೆ ಇಲಾಖೆ ಟ್ವಿಟ್ಟರ್‍ನಲ್ಲಿ ಹಾಕಿದ್ದು, ಕ್ಯಾಟರಿಂಗ್ ಸೇವೆ ಪಡೆದಾಗ ಬಿಲ್ ಕೇಳಿ ಎಂದು ಸೂಚಿಸಿದೆ.

    ಒಂದು ವೇಳೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಕೇಳಿದ್ರೆ ರೈಲ್ವೆ ಇಲಾಖೆಯ ಟ್ವಿಟ್ಟರ್ ಖಾತೆಗೆ ದೂರು ನೀಡಬಹುದು. ನಾವು ನಿಮಗಾಗಿ 24*7 ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದೆ.

    ಇದರ ಜೊತೆಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪ್ರಯಾಣಿಕರು ಬೇರೆ ಯಾವುದೇ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರೂ ರಾಜಧಾನಿ ಹಾಗೂ ಶತಾಬ್ದಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಈ ಹೊಸ ಯೋಜನೆಯನ್ನು ಏಪ್ರಿಲ್‍ನಿಂದ ರೈಲ್ವೆ ಇಲಾಖೆ ಜಾರಿಗೆ ತರಲಿದ್ದು, ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಅದೇ ಹಾದಿಯಲ್ಲಿ ಹೋಗುವ ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯಬಹುದಾಗಿದೆ. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಮಾಡುವಾಗಲೇ ಪ್ರಯಾಣಿಕರು ಈ ಆಯ್ಕೆಯನ್ನು ಮಾಡಿಕೊಂಡಿರಬೇಕಾಗುತ್ತದೆ.

    ಈ ಯೋಜನೆಗೆ ವಿಕಲ್ಪ್ ಎಂದು ಹೆಸರಿಡಲಾಗಿದ್ದು, ರಾಜಧಾನಿ, ಶತಾಬ್ದಿ, ದುರಂತೊ ಹಾಗೂ ಇನ್ನಿತರೆ ರೈಲುಗಳಲ್ಲಿ ಖಾಲಿ ಬರ್ತ್‍ಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

    ಈ ಸೌಲಭ್ಯ ಪಡೆಯೋದು ಹೇಗೆ?: ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡುವಾಗ ವಿಕಲ್ಪ್ ಸ್ಕೀಮ್ ಆಯ್ಕೆ ಮಾಡಿಕೊಂಡರೆ, ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವ ಬಗ್ಗೆ ಅವರ ಮೊಬೈಲ್‍ಗೆ ಒಂದು ಸಂದೇಶ ಬರುತ್ತದೆ. ಬದಲಿ ರೈಲಿನಲ್ಲಿ ಸೀಟ್ ಸಿಕ್ಕರೆ ಅವರ ಹೆಸರು ಟಿಕೆಟ್ ಬುಕ್ ಮಾಡಿದ ರೈಲಿನ ವೇಯ್ಟಿಂಗ್ ಲಿಸ್ಟ್ ಪಟ್ಟಿಯಲ್ಲಿ ತೋರಿಸುವುದಿಲ್ಲ. ಬದಲಿ ರೈಲಿಗೆ ವರ್ಗಾಯಿಸಲಾದ ಪ್ರಯಾಣಿಕರ ಹೆಸರುಗಳ ಪಟ್ಟಿಯನ್ನು ಕನ್ಫರ್ಮ್ ಲಿಸ್ಟ್ ಹಾಗೂ ವೇಯ್ಟಿಂಗ್ ಲಿಸ್ಟ್ ಪಟ್ಟಿಯ ಜೊತೆ ಅಂಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸ್ಕೀಮ್‍ನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುವುದಿಲ್ಲ. ಹಾಗೂ ಟಿಕೆಟ್ ದರದಲ್ಲಿ ವ್ಯತ್ಯಾಸವಿದ್ದರೆ ಅದನ್ನು ಹಿಂದಿರುಗಿಸುವುದಿಲ್ಲ. ಈ ಸೌಲಭ್ಯ ಸದ್ಯಕ್ಕೆ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಲಭ್ಯವಿದ್ದು, ಸಾಫ್ಟ್ ವೇರ್ ಸಿದ್ಧವಾದ ನಂತರ ಕೌಂಟರ್‍ನಲ್ಲಿ ಟಿಕೆಟ್ ಪಡೆಯುವವರೂ ಈ ಸೌಲಭ್ಯ ಪಡೆಯಬಹುದಾಗಿದೆ.

    ಅನೇಕ ಕಾರಣಗಳಿಗಾಗಿ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದಾಗ ಹಣ ಹಿಂದಿರುಗಿಸಲು ರೈಲ್ವೆ ಇಲಾಖೆ ವರ್ಷಕ್ಕೆ ಸುಮಾರು 75 ಸಾವಿರ ರೂ. ವ್ಯಯಿಸುತ್ತಿದೆ ಎಂದು ವರದಿಯಾಗಿದೆ.