Tag: Railway minister

  • 35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    35 ರೂಪಾಯಿ ಹಿಂಪಡೆಯಲು 5 ವರ್ಷಗಳಿಂದ ಹೋರಾಟ – 3 ಲಕ್ಷ ಜನರಿಗೆ ಪ್ರಯೋಜನ

    ಜೈಪುರ: 35 ರೂಪಾಯಿಗಳನ್ನು ಮರಳಿಪಡೆಯುವ ಸಲುವಾಗಿ ರಾಜಾಸ್ಥಾನದ ಕೋಟಾ ಮೂಲದ ವ್ಯಕ್ತಿಯೊಬ್ಬರು ಕಳೆದ 5 ವರ್ಷಗಳಿಂದ ನಡೆಸಿದ ಕಾನೂನು ಹೋರಾಟ ಕೊನೆಗೂ ಯಶಸ್ವಿಯಾಗಿದ್ದು, ಸುಮಾರು 3 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.

    2.98 ಬಳಕೆದಾರರಿಗೆ ಪ್ರತಿ ಟಿಕೆಟ್ ಬೆಲೆ 35 ರೂಪಾಯಿಯಂತೆ ಒಟ್ಟಾರೆ 2.43 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಹಿಂಪಡೆಯಲಿದ್ದಾರೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ. ಇದನ್ನೂ ಓದಿ: ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್

    Railway

    ಸುಮಾರು 50 ಆರ್‌ಟಿಐ ಅರ್ಜಿ ಮತ್ತು 4 ಸರ್ಕಾರಿ ಇಲಾಖೆಗೆ ಹಲವು ಪತ್ರ ಬರೆದು ಜಿಎಸ್‌ಟಿ ಅನುಷ್ಟಾನವಾಗುವುದಕ್ಕೂ ಮುನ್ನ ತನ್ನ ಟಿಕೆಟ್ ರದ್ದಾಗಿದ್ದರೂ ಸೇವಾ ಶುಲ್ಕವಾಗಿ ಪಡೆದಿದ್ದ 35 ರೂಪಾಯಿಯನ್ನು ಹೋರಾಟದೊಂದಿಗೆ ಮತ್ತೆ ಪಡೆದುಕೊಂಡಿದ್ದಾರೆ. ಇದರಿಂದ ಇದೇ ಪರಿಸ್ಥಿತಿಯಲ್ಲಿದ್ದ 2.98 ಲಕ್ಷ ಐಆರ್ ಸಿಟಿಸಿ ಬಳಕೆದಾರರಿಗೆ ರೈಲ್ವೆಯು 2.43 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಕೋಟಾ ಮೂಲದ ಎಂಜಿನಿಯರ್ ಸುಜೀತ್ ಸ್ವಾಮಿ ಉತ್ತರಿಸಿದ್ದಾರೆ.

    Railway

    ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಿಎಸ್‌ಟಿ ಕೌನ್ಸಿಲ್ ಮತ್ತು ಹಣಕಾಸು ಸಚಿವರಿಗೆ ಪದೇ ಪದೇ ಮಾಡಿದ ಟ್ವೀಟ್ ಗಳಿಂದ 2.98 ಲಕ್ಷ ಬಳಕೆದಾರರು ರೂ.35 ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    Railway

    ಏನಿದು ಘಟನೆ?: ಜಿಎಸ್‌ಟಿ ಅನುಷ್ಠಾನವಾಗುವ ಮುನ್ನವೇ ತಾನು ಟಿಕೆಟ್ ರದ್ದುಗೊಳಿಸಿದ್ದರೂ ಸೇವಾ ಶುಲ್ಕವಾಗಿ 35 ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗಿತ್ತು. ನಂತರ ರೈಲ್ವೆ ಮತ್ತು ಹಣಕಾಸು ಸಚಿವಾಲಯಕ್ಕೆ ಆರ್‌ಟಿಐ ಸಲ್ಲಿಸುವ ಮೂಲಕ 35 ರೂಪಾಯಿ ವಾಪಸ್ ಪಡೆದುಕೊಳ್ಳಲು ಹೋರಾಟ ಆರಂಭಿಸಿದ್ದರು. ಇದೀಗ ಹೆಚ್ಚುವರಿಯಾಗಿ ಪಡೆಯಲಾಗಿದ್ದ 35 ರೂಪಾಯಿ ತನಗೆ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

  • ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

    ರೈಲ್ವೆ ಸಚಿವರಿಗೆ ಸಂಸದ ಬಿ.ವೈ ರಾಘವೇಂದ್ರ ಮನವಿ

    ಶಿವಮೊಗ್ಗ: ಜಿಲ್ಲೆಯ ಕೋಟೆಗಂಗೂರು ಬಳಿ ನಿರ್ಮಾಣವಾಗುತ್ತಿರುವ ಕೋಚಿಂಗ್ ಡಿಪೋಗೆ ಅನುದಾನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ ಸಚಿವ ಗೋಯಲ್ ಅವರನ್ನು ಭೇಟಿಯಾದ ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈಲ್ವೆಗೆ ಸಂಬಂಧಪಟ್ಟಂತೆ ಆಗಬೇಕಾದ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವರ ಗಮನ ಸೆಳೆದರು.

    ಶಿವಮೊಗ್ಗ – ಶಿಕಾರಿಪುರ – ರಾಣಿಬೆನ್ನೂರು ಹೊಸ ರೈಲ್ವೆ ಯೋಜನೆಗೆ ಸಿವಿಲ್ ಕಾಮಗಾರಿ ಆರಂಭಿಸುವಂತೆ ಕೋರಿದರು. ಶಿವಮೊಗ್ಗ – ಬೀರೂರು ಮಧ್ಯೆ ಡಬ್ಲಿಂಗ್ ಕಾಮಗಾರಿ, ವಾರದಲ್ಲಿ ಒಂದು ದಿನ ಸಂಚರಿಸುತ್ತಿರುವ ಶಿವಮೊಗ್ಗ – ರೇಣುಗುಂಟ ಹಾಗೂ ಶಿವಮೊಗ್ಗ – ಚೆನ್ನೈ ಮಧ್ಯೆ ರೈಲನ್ನು ನಿತ್ಯ ಓಡಿಸಬೇಕು. ಯಶವಂತಪುರ – ಶಿವಮೊಗ್ಗ – ಯಶವಂತಪುರ ರೈಲು ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತಿದ್ದು, ಅದನ್ನು ಸಹ ನಿತ್ಯ ಓಡಿಸಬೇಕು ಎಂದರು.

    ಜೊತೆಗೆ ಪ್ರಸಿದ್ಧ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕೆಯಲ್ಲಿ ರೈಲು ನಿಲುಗಡೆ ಮಾಡಬೇಕು. ಇದರಿಂದ ಸಾವಿರಾರು ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.

  • ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ತೊಂದರೆಯನ್ನು ಆಲಿಸಿದ ಸುರೇಶ್ ಅಂಗಡಿ – ವಿಡಿಯೋ

    ರೈಲಿನಲ್ಲಿ ಪ್ರಯಾಣಿಸಿ ಪ್ರಯಾಣಿಕರ ತೊಂದರೆಯನ್ನು ಆಲಿಸಿದ ಸುರೇಶ್ ಅಂಗಡಿ – ವಿಡಿಯೋ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೋದಿ ಸಚಿವ ಸಂಪುಟದಲ್ಲಿ ನೂತನ ರಾಜ್ಯ ರೈಲ್ವೇ ಸಚಿವರಾದ ಸುರೇಶ್ ಅಂಗಡಿ ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆ ಅಲಿಸಿದ್ದಾರೆ.

    ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಸಮಸ್ಯೆಗಳನ್ನು ಅಲಿಸಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆದಷ್ಟೂ ಬೇಗ ಪರಿಹಾರ ನೀಡುತ್ತೇವೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.

    https://twitter.com/AngadiMp/status/1135609308190715904

    ಇಂದು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸುರೇಶ್ ಅಂಗಡಿಯವರು, ಆ ರೈಲು ನಿಲ್ದಾಣದ ಆಡಳಿತ ವ್ಯವಸ್ಥೆ ಮತ್ತು ಕುಂದು ಕೊರೆತಗಳ ಬಗ್ಗೆ ಪರಿಶೀಲನೆ ಮಾಡಿ. ಅಲ್ಲಿನ ರೈಲ್ವೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆದಿದರು. ನಿಲ್ದಾಣದಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ಪಡೆದ ಅಂಗಡಿ ಅವರು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.

  • ಯುವತಿಗೆ ಋತುಸ್ರಾವ: ಟ್ವೀಟ್‍ಗೆ ತಡರಾತ್ರಿಯೇ ಅರಸೀಕೆರೆಯಲ್ಲಿ ಗೋಯಲ್‍ರಿಂದ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ

    ಯುವತಿಗೆ ಋತುಸ್ರಾವ: ಟ್ವೀಟ್‍ಗೆ ತಡರಾತ್ರಿಯೇ ಅರಸೀಕೆರೆಯಲ್ಲಿ ಗೋಯಲ್‍ರಿಂದ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ

    – ಟೆಕ್ಕಿಯ ಒಂದೇ ಒಂದು ಟ್ವೀಟ್‍ಗೆ ಸಿಕ್ಕಿತು ವೈದ್ಯಕೀಯ ಸೌಲಭ್ಯ

    ಬೆಂಗಳೂರು: ರೈಲಿನಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಮಾಸಿಕ ಋತುಸ್ರಾವ ಕಾಣಿಸಿಕೊಂಡಿದ್ದು, ಒಂದೇ ಒಂದು ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ತಡರಾತ್ರಿಯೇ ವಿದ್ಯಾರ್ಥಿನಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಿದ್ದಾರೆ.

    ಆಗಿದ್ದೇನು?:
    ಬೆಂಗಳೂರು-ಬಳ್ಳಾರಿ-ಹೊಸಪೇಟೆ ಪ್ಯಾಸೆಂಜರ್ ಟ್ರೈನ್ ನಲ್ಲಿ ಆರ್ಕಿಟೆಕ್ಟ್ ವಿದ್ಯಾರ್ಥಿನಿಯೊಬ್ಬಳು ಜನವರಿ 14ರಂದು ಪ್ರಯಾಣಿಸುತ್ತಿದ್ದಳು. ಮಾರ್ಗಮಧ್ಯದಲ್ಲಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡು ಋತುಸ್ರಾವವಾಗಿದೆ. ಈ ಕುರಿತು ಯುವತಿ ತನ್ನ ಜೊತೆಗೆ ಪ್ರಯಾಣಿಸುತ್ತಿದ್ದ ಯುವಕ ವಿಶಾಲ್ ಖಾನಾಪುರೆ ಹೇಳಿಕೊಂಡಿದ್ದಾಳೆ.

    ಯುವತಿಯ ತೊಳಲಾಟ ಕೇಳಿದ ಟೆಕ್ಕಿ ವಿಶಾಲ್ ಖಾನಾಪುರೆ, ಹೊಸಪೇಟೆ ಪ್ಯಾಸೆಂಜರ್ ಟ್ರೈನ್ ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪ್ರಯಾಣಿಸುತ್ತಿರುವ ನನ್ನ ಸ್ನೇಹಿತೆಯೊಬ್ಬಳಿಗೆ ಮಾಸಿಕ ಋತುಸ್ರಾವವಾಗಿದೆ. ಆಕೆಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಸ್ಯಾನಿಟರಿ ಪ್ಯಾಡ್ ಅಗತ್ಯವಿದೆ. ಆದಷ್ಟು ಬೇಗ ಸೌಲಭ್ಯಗಳನ್ನು ಒದಗಿಸಿ ಸರ್ ಎಂದು ಟ್ವೀಟ್ ಮಾಡಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ರೈಲ್ವೇ ಇಲಾಖೆಗೆ ಟ್ಯಾಗ್ ಮಾಡಿದ್ದರು. ಅಷ್ಟೇ ಅಲ್ಲದೆ ಯುವತಿ ಕುಳಿತಿರುವ ಟ್ರೈನ್, ಸೀಟ್ ನಂಬರ್ ಅನ್ನು ವಿಶಾಲ್ ಖಾನಾಪುರೆ ಟ್ವೀಟ್‍ನಲ್ಲಿ ತಿಳಿಸಿದ್ದರು.

    ಟ್ವೀಟ್ ನೋಡಿ ತಕ್ಷಣವೇ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು, ವಿದ್ಯಾರ್ಥಿನಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ರೈಲ್ವೇ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ರೈಲ್ವೇ ಇಲಾಖೆ ಸಿಬ್ಬಂದಿ, ಅರಸೀಕೆರೆ ಜಂಕ್ಷನ್‍ಗೆ ಟ್ರೈನ್ ಬರುತ್ತಿದ್ದಂತೆ ವಿದ್ಯಾರ್ಥಿನಿಗೆ ಅಗತ್ಯವಿದ್ದ ಸ್ಯಾನಿಟರಿ ಪ್ಯಾಡ್, ಮಾತ್ರೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ತಡರಾತ್ರಿ 2 ಗಂಟೆಗೆ ಒದಗಿಸಿದ್ದಾರೆ.

    ವಿದ್ಯಾರ್ಥಿನಿಗೆ ಅಗತ್ಯವಿದ್ದ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ಸೌಲಭ್ಯ ಸಿಕ್ಕ ಬಳಿಕ ಟ್ವೀಟ್ ಮಾಡಿರುವ ವಿಶಾಲ್ ಖಾನಾಪುರೆ ಅವರು, ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಕೇವಲ ನಾಲ್ಕು ವರ್ಷದಲ್ಲಿ ದೇಶವು ಇಷ್ಟು ಬದಲಾಗಿದೆ. ಇದು ಅಚ್ಛೇ ದಿನ್. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿ ಸಚಿವರ ಪಿಯೂಷ್ ಗೋಯಲ್, ರೈಲ್ವೇ ಇಲಾಖೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv