Tag: Railway Flyover

  • ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರು

    ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರು

    ನವದೆಹಲಿ: ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರಾಗಿವೆ. ರೈಲ್ವೆ ಸಚಿವಾಲಯದಿಂದ ಸೇತುವೆಗಳನ್ನು ಮಂಜೂರು ಮಾಡಲಾಗಿದೆ.

    ಹೊಳೆನರಸೀಪುರದ ಅಕ್ಕಿಹೆಬ್ಬಾಳು–ಮಂಡಗೆರೆ, ಮಂಡಗೆರೆ–ಹೊಳೆನರಸೀಪುರ ಮತ್ತು ಕಡೂರು ಜಂಕ್ಷನ್‌–ಬಿರೂರು ಜಂಕ್ಷನ್‌ ನಡುವೆ ಮೇಲ್ಸೇತುವೆ ನಿರ್ಮಾಣವಾಗಲಿವೆ.

    ಈ ಯೋಜನೆಗಳನ್ನು ವಿಶೇಷ ರೈಲ್ವೆ ಯೋಜನೆಗಳೆಂದು ಪರಿಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.

  • ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿತ – ಕಾರ್ಮಿಕ ಸಾವು

    ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಅಂಡರ್‌ಗ್ರೌಂಡ್ ಪೈಪ್‌ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಶಿವಮೊಗ್ಗದ (Shivamogga) ಸವಳಂಗ ರಸ್ತೆಯಲ್ಲಿ ನಡೆದಿದೆ.

    ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪ ನಿವಾಸಿ ಸತೀಶ್ ನಾಯ್ಕ (30) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಇದನ್ನೂ ಓದಿ: ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಕಾಮಗಾರಿಯ ಹಿನ್ನೆಲೆಯಲ್ಲಿ ಅಂಡರ್‌ಗ್ರೌಂಡ್ ಪೈಪ್‌ಲೈನ್ ಹಾಕಲು 11 ಅಡಿ ಆಳದಷ್ಟು ಜೆಸಿಬಿಯಿಂದ ಗುಂಡಿ ತೆಗೆಯಲಾಗುತ್ತಿತ್ತು. ಈ ವೇಳೆ ಕಾರ್ಮಿಕ ಸತೀಶ್ ನಾಯ್ಕ ಗುಂಡಿಯೊಳಗೆ ನಿಂತುಕೊಂಡು ಕೆಲಸ ಮಾಡುತ್ತಿದ್ದ. ಈ ವೇಳೆ ಮಣ್ಣು ಕುಸಿದುಬಿದ್ದ ಪರಿಣಾಮ ಕಾರ್ಮಿಕ ಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡಿದ್ದಾನೆ.

    ಕಾರ್ಮಿಕನನ್ನು ರಕ್ಷಿಸಲು ಜೆಸಿಬಿಯನ್ನು ಬಳಸಲಾಗಿದೆ. ಜೆಸಿಬಿಯ ಬಕೆಟ್ ಕಾರ್ಮಿಕನ ತಲೆಗೆ ತಗುಲಿ, ಆತನ ಮೆದುಳು ತಲೆಯಿಂದ ಹೊರಗೆ ಬಂದಿದೆ. ತಕ್ಷಣ ಗುಂಡಿಯಿಂದ ಮೇಲೆ ಎತ್ತಿದ ಇತರೆ ಕಾರ್ಮಿಕರು ಸ್ಥಳೀಯರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಕಾರ್ಮಿಕ ಮೃತಪಟ್ಟಿದ್ದಾನೆ. ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೂಟಿ‌ ಮಾಡೋರಿಗೆ ನಮ್ಮ ಸರ್ಕಾರ ಅಂತ ಪ್ರೂವ್‌ ಮಾಡಿದ್ದಾರೆ – ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದ HDK