Tag: Railway Employee

  • ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಗಾಂಧಿನಗರ: ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶಕ್ಕಾಗಿ ರೈಲು ಹಳಿತಪ್ಪಿಸುವ ಸಂಚು ರೂಪಿಸಿದ್ದಕ್ಕಾಗಿ ಮೂವರು ರೈಲ್ವೇ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಸೂರತ್ (Surat) ಜಿಲ್ಲೆಯ ಕಿಮ್ ಬಳಿ ನಡೆದಿದೆ.

    ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶದಿಂದ ಫಿಶ್ ಪ್ಲೇಟ್‌ಗಳು (Fish Plates) ಮತ್ತು ಇತರ ಭಾಗಗಳನ್ನು ತೆಗೆದು ಮತ್ತೆ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ರೈಲ್ವೆ ಸಿಬ್ಬಂದಿಗಳಾದ ಸುಭಾಷ್ ಪೊದಾರ್, ಮನೀಶ್ ಮಿಸ್ತ್ರಿ, ಶುಭಂ ಜಯಸ್ವಾಲ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್

    ಮೂವರ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಬೆಳಗಿನ ಜಾವ 5:15ರ ಸುಮಾರಿಗೆ ಕಿಮ್ ಮತ್ತು ಕೊಸಾಂಬಾ ಗ್ರಾಮಗಳ ನಡುವಿನ ಹಳಿಯ ಬಳಿ ಮೂವರು ಓಡಿ ಹೋಗುವುದನ್ನು ಗಮನಿಸಿದ್ದೇವೆ. ಜೊತೆಗೆ ರೈಲು ಹಳಿಯಲ್ಲಿ 71 ಎಲಾಸ್ಟಿಕ್ ರೈಲ್ ಕ್ಲಿಪ್ ಕೀಗಳು (Elastic Rail Clip Keys) ಮತ್ತು ಎರಡು ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿರುವುದು ಕಂಡುಬಂದಿದೆ ಹಾಗೂ ಅದಾದ 25 ನಿಮಿಷಗಳಲ್ಲಿ ಅವುಗಳು ಮತ್ತೆ ಅಳವಡಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

    ಸೂರತ್ ಎಸ್ಪಿ ಹಿತೇಶ್ ಜೋಯ್ಸರ್ ಮಾತನಾಡಿ, ಇಷ್ಟು ಕಡಿಮೆ ಅವಧಿಯಲ್ಲಿ ಅಳವಡಿಸಿರುವುದು ಅನುಮಾನ ಉಂಟು ಮಾಡಿತ್ತು. ಬಳಿಕ ಮೂವರ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ನ ಬಿನ್‌ನಲ್ಲಿ ತೆಗೆದ ಭಾಗಗಳ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಲಭ್ಯವಾಗಿದೆ. ಫೋಟೋಗಳು ರಾತ್ರಿ 2 ರಿಂದ 3 ನಡುವೆ ತೆಗೆದಿರುವುದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗ ವಿವರಣೆ ಅಸಾಧ್ಯವಾದಾಗ ಅವರು ಭಾಗಿಯಾಗಿರುವುದು ಅನುಮಾನ ಉಂಟು ಮಾಡಿತ್ತು. ಮತ್ತಷ್ಟು ಪ್ರಶ್ನೆ ಮಾಡಿದಾಗ ನಿಜವಾದ ವಿವರ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಹಳಿತಪ್ಪಿಸುವ ಯತ್ನದಂತೆ ತೋರಲು ಹಳಿಗಳ ಭಾಗಗಳನ್ನು ತೆಗೆದಿದ್ದಾರೆ. ಜೊತೆಗೆ ಅವುಗಳ ವೀಡಿಯೊ ಮತ್ತು ಫೋಟೋವನ್ನು ತೆಗೆದುಕೊಂಡಿದ್ದಾರೆ. ಅಪಘಾತವನ್ನು ತಪ್ಪಿಸಲು ಪ್ರಶಂಸೆ ಪಡೆಯುವ ಪ್ರಯತ್ನದಲ್ಲಿ ತೆಗೆದಿದ್ದ ಹಳಿ ಭಾಗಗಳನ್ನು ಮತ್ತೆ ಅಳವಡಿಸಿದ್ದು, ತನಿಖೆಯ ವೇಳೆ ಕಂಡು ಬಂದಿದೆ ಎಂದು ತಿಳಿಸಿದರು.

    ಸದ್ಯ ಪೊಲೀಸರು ಪ್ರಕರಣವನ್ನು ವಿಶೇಷ ಕಾರ್ಯಾಚರಣೆ ತಂಡಕ್ಕೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ

  • ಹಾಡಹಗಲೇ ರೈಲ್ವೆ ನೌಕರನಿಗೆ ಚಾಕು ಇರಿತ!

    ಹಾಡಹಗಲೇ ರೈಲ್ವೆ ನೌಕರನಿಗೆ ಚಾಕು ಇರಿತ!

    ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ಮಾರಕಾಸ್ತ್ರಗಳು ಸದ್ದು ಮಾಡಿವೆ. ದುಷ್ಕರ್ಮಿಗಳು ರೈಲ್ವೆ ನೌಕರನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಗರದ ರೇಲ್ವೆ ಶೆಡ್ ಮುಂಭಾಗದಲ್ಲಿ ನಡೆದಿದೆ.

    ಹುಬ್ಬಳ್ಳಿ – ಗದಗ ರಸ್ತೆಯಲ್ಲಿರುವ ಲೋಕೋ ಶೆಡ್ ಮುಂಭಾಗದಲ್ಲಿಯೇ ಚಂದ್ರಶೇಖರ್ ನಾಯ್ಡು ಎಂಬವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂರ್ನಾಲ್ಕು ಬಾರಿ ಇರಿದಿದ್ದರಿಂದ ಅವರಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ.

    ತಕ್ಷಣವೇ ಚಂದ್ರಶೇಖರ್ ಅವರನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಕೇಶ್ವಾಪುರ ಠಾಣೆಯ ಇನ್ಸ್‍ಪೆಕ್ಟರ್ ಜಗದೀಶ್ ಹಂಚಿನಾಳ ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇದನ್ನೂ ಓದಿ:  ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ಮನೆಗಳ್ಳತನ – ಆತಂಕದಲ್ಲಿ ಗಡಿಭಾಗದ ಜನರು

    ಘಟನೆಯ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು

    ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಷ್ಟು ದಿನ ನಿರಾಳವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿಗೂ ಕೊರೊನಾ ಕಾಲಿಟ್ಟಿದ್ದು, 39 ವರ್ಷದ ವ್ಯಕ್ತಿ (ರೋಗಿ ನಂಬರ್-246) ಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಕೊರೊನಾ ಸೋಂಕಿತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮಿಷಿನ್ ಮೈಂಟೈನರ್ ಆಗಿದ್ದು, ಮಾರ್ಚ್ 14 ರಿಂದ 18ರ ನಡುವೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ನಿಜಾಮುದ್ದೀನ್ ನಿಂದ ವಾಪಸ್ಸಾಗಿದ್ದರು. ಈ ವೇಳೆ ಇವರು ಪ್ರಯಾಣಿಸಿದ ರೈಲಿನಲ್ಲೇ ಕಾಚಿಗುಡವರೆಗೂ ಜಮಾತ್ ನಲ್ಲಿ ಭಾಗಿಯಾಗಿದ್ದ ತಬ್ಲಘಿಯೋರ್ವ ಸಹ ಪ್ರಯಾಣಿಸಿದ್ದ ಎನ್ನಲಾಗಿದೆ. ಹೀಗಾಗಿ ತಬ್ಲಿಘಿಯಿಂದಲೇ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಮಾರ್ಚ್ 18ರಂದು ವಾಪಸ್ಸಾದ ಸೋಂಕಿತ ಎಂದಿನಂತೆ ಓಡಾಡಿಕೊಂಡಿದ್ದರು. ಆದರೆ ಮಾರ್ಚ್ 26ರಂದು ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸ್ವತಃ ತಾವೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಕೊರೊನಾ ಲಕ್ಷಣಗಳು ಅಂತ ಭಾವಿಸಿರಲಿಲ್ಲ. ವೈದ್ಯರು ದೆಹಲಿ ಟ್ರಾವೆಲ್ ಹಿಸ್ಟರಿ ಕೇಳಿದಾಗ ಅನುಮಾನಗೊಂಡು ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ರು. ಇನ್ನೂ ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರವೂ ಇವರಲ್ಲಿ ಜ್ವರ ಇತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಸ್ಪತ್ರೆಗೆ ಐಸೋಲೇಷನ್ ಮಾಡಲಾಗಿತ್ತು.

    ಏಪ್ರಿಲ್ 11 ಹಾಗೂ 12 ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿ ಕೊರೊನಾ ಪಾಸಿಟಿವ್ ಅಂತ ದೃಢಪಟ್ಟಿದೆ. ಸದ್ಯ ಸೋಂಕಿತನ ಪತ್ನಿ ಹಾಗೂ ಮಗುವನ್ನ ಸಹ ಕ್ವಾರಂಟೈನ್ ಮಾಡಲಾಗಿದೆ. 40 ರಿಂದ 50 ಮನೆ ಇರುವ ಇವರ ಗ್ರಾಮಕ್ಕೆ ಆರೋಗ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಪಬ್ಲಿಕ್ ಟಿವಿಗೆ ತಿಳಿಸಿದರು.

  • ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    – ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶಂಕೆ
    – ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿಲ್ಲ

    ಹೈದರಾಬಾದ್: ಮದುವೆಯಾದ ಐದೇ ತಿಂಗಳಿಗೆ ರೈಲ್ವೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ರಾಹುಲ್ ಯಾದವ್(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಮವಾರ ರಾಹುಲ್ ಮೃತದೇಹ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೌಟುಂಬಿಕ ಕಲಹದಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಐದು ತಿಂಗಳ ಹಿಂದೆ ರಾಹುಲ್ ಮದುವೆಯಾಗಿದ್ದನು. ಸೋಮವಾರ ಬೆಳಗ್ಗೆ ರಾಹುಲ್ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಆತ ಸುತ್ತಮುತ್ತ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆತನನ್ನು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ತಕ್ಷಣ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ವೈದ್ಯರು ರಾಹುಲ್ ಮೃತಪಟ್ಟಿದ್ದಾನೆ ಅಂತ ತಿಳಿಸಿದರು ಎಂದರು.

    ಈ ಘಟನೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಗಾಗಿ ಆತನ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಕೌಟುಂಬಿಕ ಸಮಸ್ಯೆಯಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ರಾಹುಲ್ ಮೃತದೇಹದ ಬಳಿ ಪೊಲೀಸರಿಗೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ.

    ಈ ಬಗ್ಗೆ ನೆರೆಡ್ಮೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಚಲಿಸ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಪ್ರಯಾಣಿಕ

    ಚಲಿಸ್ತಿದ್ದ ರೈಲು ಹತ್ತಲು ಹೋಗಿ ಜಾರಿ ಬಿದ್ದ ಪ್ರಯಾಣಿಕ

    ಬಳ್ಳಾರಿ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಭದ್ರತಾ ಸಿಬ್ಬಂದಿ ಬದುಕುಳಿಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

    ಭಾನುವಾರ ಸಂಜೆ ಹೊಸಪೇಟೆಯಿಂದ ತಿರುಪತಿಗೆ ತೆರಳುತ್ತಿದ್ದ ರೈಲಿಗೆ ಕೊನೆಗಳಿಗೆಯಲ್ಲಿ ಯಮನಪ್ಪ ಎನ್ನುವ ಪ್ರಯಾಣಿಕ ಚಲಿಸುವ ರೈಲು ಹತ್ತಲು ಮುಂದಾದ್ದರು. ಈ ವೇಳೆ ಪ್ರಯಾಣಿಕ ಯಮನಪ್ಪ ಕಾಲುಜಾರಿ ಹಳಿಗೆ ಬಿಳುವುದರಲ್ಲಿ ಇದ್ದರು.

    ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಎಸ್ ಕಾಳಣ್ಣರ ಸಮಯ ಪ್ರಜ್ಞೆಯಿಂದ ಪ್ರಯಾಣಿಕನನ್ನು ಹೊರಗೆ ಎಳೆದು ಹಾಕಿ ಬದುಕುಳಿಸಿದ್ದಾರೆ. ರೈಲ್ವೆ ಭದ್ರತಾ ಸಿಬ್ಬಂದಿ ಕಾಳಣ್ಣರ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಭದ್ರತಾ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.