Tag: Railway Department

  • ರೈಲ್ವೆಯಲ್ಲಿ ಕೆಲಸ ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ

    ರೈಲ್ವೆಯಲ್ಲಿ ಕೆಲಸ ಸಿಗದಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ

    ಲಕ್ನೋ: ರೈಲ್ವೇ ಇಲಾಖೆ (Railway Department) ಯಲ್ಲಿ ಕೆಲಸ ಸಿಗುತ್ತಿಲ್ಲವೆಂದು ಮನನೊಂದ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶ (Uttarapradesh) ದ ಲಕ್ನೋದಲ್ಲಿ ನಡೆದಿದೆ.

    ನಾನು ಎಷ್ಟೇ ಪ್ರಯತ್ನ ಮಾಡಿದರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗುತ್ತಿಲ್ಲ. ಹೀಗಾಗಿ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದೇನೆ. ನನ್ನ ಹೆತ್ತವರು ತುಂಬಾ ಒಳ್ಳೆಯವರು. ಪ್ರತಿಯೊಬ್ಬರೂ ನನ್ನಂತಹ ತಂದೆ-ತಾಯಿಗಳನ್ನು ಹೊಂದಿರಬೇಕೆಂದು ನಾನು ಬಯಸುತ್ತೇನೆ. ನನ್ನ ಸಾವಿಗೆ ನಾನೇ ಹೊಣೆ ಎಂದು ಯುವಕ ಬರೆದುಕೊಂಡಿದ್ದಾನೆ.

    ಹನುಮಾನ್ ರಾವತ್ ರೈಲ್ವೆ ಇಲಾಖೆಯಿಂದ ನಿವೃತ್ತಿ ಹೊಂದಿದ್ದರು. ಆ ಬಳಿಕದಿಂದ ಕಿರಿಯ ಮಗನ ಜೊತೆ ಲಕ್ನೋದ ಕರಣ್‍ಪುರ ಗ್ರಾಮದಲ್ಲಿ ನೆಲೆಸಿದ್ದರು. ಇವರ ಕಿರಿಯ ಮಗ ಸಂದೀಪ್ ರಾವತ್ ಸೈನ್ಯದಲ್ಲಿದ್ದು, ಇನ್ನೊಬ್ಬ ಮಗ ದಿಲೀಪ್ ರಾವತ್ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದನು. ಇದನ್ನೂ ಓದಿ: ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಆದರೆ ಇದೀಗ ರೈಲ್ವೆಯಲ್ಲಿ ಕೆಲಸ ಸಿಕ್ಕಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತದೇಹವನ್ನು ಮರಣೀತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಡೆತ್‍ನೋಟ್ ಪತ್ತೆಯಾಗಿದೆ.

    ಮಗನ ಆತ್ಮಹತ್ಯೆ ಹಿಂದೆ ದಿಲೀಪ್ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ದಕ್ಷಿಣ ವಲಯ ಎಡಿಸಿಪಿ ಮನಿಶ್ ಅವರು ತನಿಖೆ ಕೈಗೊಂಡಿದ್ದು, ಕುಟುಂಬಸ್ಥರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ

    ಚಿತ್ರದುರ್ಗ: 2023ರ ರೈಲ್ವೆ ಬಜೆಟ್‌ (Budget)ನಲ್ಲಿ ಚಿತ್ರದುರ್ಗ – ಆಲಮಟ್ಟಿ ಹೊಸ ರೈಲು ಮಾರ್ಗಕ್ಕೆ (Railway Tracking) 8,431.44 ಕೋಟಿ ರೂ. ಅನುದಾನ ಕಲ್ಪಿಸುವಂತೆ ಸಂಸದ ಕರಡಿ ಸಂಗಣ್ಣ (Karadi Sanganna Amarappa) ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

    2018ರಲ್ಲಿ ಕೇಂದ್ರ ಸರ್ಕಾರದಿಂದ (Central Government) ನೂತನ ರೈಲುಮಾರ್ಗ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು 279.94 ಕಿಮೀ ಉದ್ದದ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಇಂಜಿನಿಯರ್ 8,431.44 ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆ ತಯಾರಿಸಿ ರೈಲ್ವೆ ಮಂಡಳಿಗೆ ಅನುಮೋದನೆಗಾಗಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ಸಾಂದರ್ಭಿಕ ಚಿತ್ರ

    ಈ ರೈಲು ಮಾರ್ಗವು ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ಸಂಪರ್ಕಿಸಲಿದೆ. ಹಾಗಾಗಿ ಈ ಯೋಜನೆಗೆ 2023-2024ನೇ ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ

    ಟಿಪ್ಪು ಎಕ್ಸ್‌ಪ್ರೆಸ್‌ಗೆ ಒಡೆಯರ್ ಎಕ್ಸ್‌ಪ್ರೆಸ್ ಬೋರ್ಡ್ ನೇತಾಕಿದ ರೈಲ್ವೆ ಇಲಾಖೆ

    ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ (Tipu Express) ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ (Wodeyar Express) ಹೆಸರಿನ ಬೋರ್ಡ್ ಅನ್ನು ರೈಲ್ವೆ ಇಲಾಖೆ (Railway Department) ಇಂದು ನೇತು ಹಾಕಿದೆ.

    ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾಯಿಸಿ ಕೇಂದ್ರ ರೈಲ್ವೆ ಮಂಡಳಿ ಶುಕ್ರವಾರ ಆದೇಶ ಹೊರಡಿಸಿತ್ತು. ಮರುನಾಮಕರಣ ಬಳಿಕ ಮೊದಲ ಬಾರಿಗೆ ಒಡೆಯರ್ ಎಕ್ಸ್‌ಪ್ರೆಸ್ ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ (Krantiveera sangolli rayanna station) ಇಂದು ಬೆಳಗ್ಗೆ ಆಗಮಿಸಿತ್ತು.  ಇದನ್ನೂ ಓದಿ: ಟಿಪ್ಪು ಎಕ್ಸ್‌ಪ್ರೆಸ್ ಇನ್ನುಮುಂದೆ ಒಡೆಯರ್ ಎಕ್ಸ್‌ಪ್ರೆಸ್ – ಶಿವಮೊಗ್ಗಕ್ಕೆ ಕುವೆಂಪು ಎಕ್ಸ್‌ಪ್ರೆಸ್

    ಮೈಸೂರು – ಬೆಂಗಳೂರು ನಡುವಿನ ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾಯಿಸಿ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದ್ದು, ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‍ಗೆ ಕುವೆಂಪು ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕುರಿತಂತೆ ಶುಕ್ರವಾರ ಟ್ವೀಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ (Pratap Simha) ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಶುಕ್ರವಾರದ ಶುಭ ಸುದ್ದಿ. ಇನ್ನು ಮುಂದೆ ಟಿಪ್ಪು ಎಕ್ಸ್‌ಪ್ರೆಸ್ ಬದಲು ‘ಒಡೆಯರ್ ಎಕ್ಸ್‌ಪ್ರೆಸ್’ ನಿಮಗೆ ಸೇವೆ ನೀಡಲಿದೆ. ಮೈಸೂರು-ತಾಳಗುಪ್ಪ ರೈಲು “ಕುವೆಂಪು ಎಕ್ಸ್‌ಪ್ರೆಸ್” ಆಗಲಿದೆ. ಅಶ್ವಿನಿ ವೈಷ್ಣವ್ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಅವರಿಗೆ ಥಾಂಕ್ಯೂ ಎಂದು ಹೇಳಿದರು.

    ಈ ಹಿಂದೆ ಪ್ರತಾಪ್ ಸಿಂಹ ಅವರು ದೆಹಲಿಯಲ್ಲಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟಿದೆ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್ ಹೆಸರಿಡುವಂತೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಬೀಸಾಡಿದ ಸಿಬ್ಬಂದಿ – ವೈರಲ್ ವೀಡಿಯೋಗೆ ರೈಲ್ವೆ ಇಲಾಖೆ ಸ್ಪಷ್ಟನೆ

    ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಬೀಸಾಡಿದ ಸಿಬ್ಬಂದಿ – ವೈರಲ್ ವೀಡಿಯೋಗೆ ರೈಲ್ವೆ ಇಲಾಖೆ ಸ್ಪಷ್ಟನೆ

    ಡಿಸ್ಪೂರ್: ರೈಲಿನಲ್ಲಿ ಬರುವ ಪಾರ್ಸೆಲ್‍ಗಳನ್ನು ಕೆಲಸಗಾರರು ಬೀಸಾಡುವ ವೀಡಿಯೋವೊಂದು ಇತ್ತೀಚೆಗಷ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವೀಡಿಯೋ ಕುರಿತಂತೆ ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಪಷ್ಟನೆ ನೀಡಿದೆ.

    ಹೌದು, ಗುವಾಹಟಿ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಬಂದ ರಾಶಿಗಟ್ಟಲೆ ಪಾರ್ಸೆಲ್‍ಗಳನ್ನು ಕೆಳಗಿಳಿಸುವಾಗ ಕೆಲಸಗಾರರು ಬೇಜವಾಬ್ದಾರಿಯಿಂದ ಇಷ್ಟಬಂದಂತೆ ಬೀಸಾಡಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ವೀಟ್ ಮಾಡುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಈ ವೀಡಿಯೋ 2 ಮಿಲಿಯನ್‍ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿತ್ತು.

    ರೈಲಿನಲ್ಲಿ ಬರುವ ನಿಮ್ಮ ಪಾರ್ಸೆಲ್‍ಗಳನ್ನು ಎಷ್ಟು ಚೆನ್ನಾಗಿ ಪರಿಗಣಿಸುತ್ತಾರೆ ಎಂಬುವುದನ್ನು ನೋಡಿ. ಈ ವೀಡಿಯೋ ಮಾರ್ಚ್ 22ರ ಗುವಾಹಟಿ ರೈಲ್ವೆ ನಿಲ್ದಾಣದ್ದಾಗಿದೆ. ನವದೆಹಲಿ ದಿಬ್ರುಗಢ ರಾಜಧಾನಿ ಎಕ್ಸ್‍ಪ್ರೆಸ್ (12424) ರೈಲಿನಲ್ಲಿ ಬಂದ ಈ ಪಾರ್ಸೆಲ್‍ಗಳು ಅಮೆಜಾನ್, ಫ್ಲಿಪ್‍ಕಾರ್ಟ್ ಮುಂತಾದ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಂದ ಬಂದಿವೆ ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಕೇಂದ್ರ ಸಚಿವರ ಮನೆಯಲ್ಲಿ ಗಣೇಶನಿಗೆ ಆರತಿ ಮಾಡಿದ ಮೋದಿ

    ಈ ವೀಡಿಯೋಗೆ ಅನೇಕ ಮಂದಿ ಕಾಮೆಂಟ್ ಮಾಡಿದ್ದರು. ಭಾರತೀಯ ರೈಲ್ವೆಗೆ ನಾಚಿಕೆಯಾಗಬೇಕು. ಇವರನ್ನೆಲ್ಲಾ ಗುರುತಿಸಿ ಶಿಕ್ಷೆ ನೀಡಬೇಕು. ಇದರಿಂದಾಗಿ ಅನೇಕ ಬಾರಿ ಗ್ರಾಹಕರು ಮುರಿದು ಹೋಗಿರುವ ವಸ್ತುಗಳನ್ನು ಪಡೆದು, ತೊಂದರೆ ಪಡುತ್ತಾರೆ ಎಂದು ಕಿಡಿಕಾರಿದ್ದರು.

    ಇದೀಗ ಈ ವೀಡಿಯೋಗೆ ಸ್ಪಷ್ಟನೆ ನೀಡಿರುವ ಈಶಾನ್ಯ ಫ್ರಾಂಟಿಯರ್ ರೈಲ್ವೆ, ಇದೊಂದು ಹಳೆಯ ವೀಡಿಯೋ. ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವವರು ರೈಲ್ವೆ ಉದ್ಯೋಗಿಗಳಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಮನ ಸೆಳೆಯುತ್ತಿದೆ 60 ಸಾವಿರ ಗೋಲಿಗಳಿಂದ ಮಾಡಿದ ಗಣೇಶ ಮೂರ್ತಿ!

    ಇದು ಮಾರ್ಚ್ 2022ರ ಹಳೆಯ ವೀಡಿಯೋ ಆಗಿದ್ದು, ಗುವಾಹಟಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಬಂದ ಪಾರ್ಸೆಲ್‍ಗಳನ್ನು ಕೆಳಗಿಳಿಸುತ್ತಿರುವ ವ್ಯಕ್ತಿಗಳು ವಸ್ತುಗಳಿಗೆ ಸಂಬಂಧಪಟ್ಟವರಾಗಿದ್ದಾರೆ. ರೈಲ್ವೆಯು ವಿವಿಧ ಪಾರ್ಟಿಗಳಿಗೆ ಗುತ್ತಿಗೆ ಆಧಾರದ ಮೇಲೆ ಪಾರ್ಸೆಲ್ ಜಾಗವನ್ನು ಬುಕ್ಕಿಂಗ್ ನೀಡುತ್ತದೆ ಎಂದು ಈಶಾನ್ಯ ಫ್ರಾಂಟಿಯರ್ ರೈಲ್ವೆಯ ಟ್ವೀಟ್ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಹೆಣ್ಣುಮಗುವಿಗೆ ಅನುಕಂಪ ನೌಕರಿ ಆಫರ್‌

    ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಹೆಣ್ಣುಮಗುವಿಗೆ ಅನುಕಂಪ ನೌಕರಿ ಆಫರ್‌

    ರಾಯ್ಪುರ: ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯು ಅನುಕಂಪ ನೌಕರಿ ಆಫರ್‌ ನೀಡಿದೆ.

    ಛತ್ತೀಸಗಢದಲ್ಲಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವಿಗೀಡಾದರು. ಅವರ 10 ತಿಂಗಳ ಮಗುವಿಗೆ ನೌಕರಿ ಆಫರ್‌ ನೀಡಿದೆ. ಆಕೆ 18 ವರ್ಷ ವಯಸ್ಸಿನ ನಂತರ ರಾಷ್ಟ್ರೀಯ ಸಾರಿಗೆಯಲ್ಲಿ ಕೆಲಸ ಮಾಡಬಹುದು. ಅನುಕಂಪದ ಆಧಾರದ ಮೇಲೆ ಈ ವಯಸ್ಸಿನ ಮಗುವಿಗೆ ಇಂತಹ ಆಫರ್‌ ನೀಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆರಿಗೆ ಪಾವತಿ ತಪ್ಪಿಸಲು 62,476 ಕೋಟಿ ರೂ.ಗಳನ್ನ ಚೀನಾಕ್ಕೆ ಕಳುಹಿಸಿದ ವಿವೋ- ED ತನಿಖೆ ವೇಳೆ ಅಕ್ರಮ ಬಯಲು

    ಜುಲೈ 4 ರಂದು, ರಾಯ್‌ಪುರ ರೈಲ್ವೆ ವಿಭಾಗದ ಆಗ್ನೇಯ ಕೇಂದ್ರ ರೈಲ್ವೆಯ ಸಿಬ್ಬಂದಿ ಇಲಾಖೆ (SECR)ಯಲ್ಲಿ 10 ತಿಂಗಳ ಹೆಣ್ಣು ಮಗುವಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿಗಾಗಿ ನೋಂದಾಯಿಸಲಾಗಿದೆ.

    ಮಗುವಿನ ತಂದೆ ರಾಜೇಂದ್ರ ಕುಮಾರ್ ಭಿಲಾಯಿಯ ರೈಲ್ವೆ ಯಾರ್ಡ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಜೂನ್ 1 ರಂದು ಅವರು ತಮ್ಮ ಪತ್ನಿಯೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಮಗು ಅಪಾಯದಿಂದ ಪಾರಾಯಿತು. ರಾಯಪುರ ರೈಲ್ವೆ ವಿಭಾಗವು ನಿಯಮಗಳ ಪ್ರಕಾರ ಕುಮಾರ್ ಅವರ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ಒದಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ದಾಖಲೆಗಳಲ್ಲಿ ಅಧಿಕೃತ ನೋಂದಣಿ ಮಾಡಲು ಮಗುವಿನ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನಕ್ಕೆ ಕೊಂಕು

    Live Tv
    [brid partner=56869869 player=32851 video=960834 autoplay=true]

  • ಕಚ್ಚಾ ಬಾದಾಮ್ ಗಾಯಕನಿಗೆ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ – ಅಸಲಿ ಸುದ್ದಿ ಏನು?

    ಕಚ್ಚಾ ಬಾದಾಮ್ ಗಾಯಕನಿಗೆ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ – ಅಸಲಿ ಸುದ್ದಿ ಏನು?

    ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ನೆಟ್ಟಿಗರ ಮನಗೆದ್ದಿದ್ದ ಕಚ್ಚಾ ಬಾದಾಮ್ ಎಂಬ ಹಾಡವೊಂದನ್ನು ಹಾಡಿ ಪಶ್ಚಿಮ ಬಂಗಾಳದ ಗಾಯಕರಾದ ಬುಬನ್ ಗದ್ಯಾಕರ್ ರಾತ್ರೋರಾತ್ರಿ ವಿಶ್ವದಾದ್ಯಂತ ಪ್ರಖ್ಯಾತಿ ಪಡಿದಿದ್ದರು. ಬೀದಿ ಬದಿ ಕಡಲೆಕಾಯಿ ಮಾರುತ್ತಿದ್ದ ಇವರಿಗೆ ಭಾರತೀಯ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ ನೀಡಲಾಗಿದೆ ಎನ್ನುವ ಸುದ್ದಿ ಓಡಾಡುತ್ತಿದೆ.

    ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಬುಬನ್ ರೈಲ್ವೆಯ ಬೋಗಿಯೊಂದರ ಬಾಗಿಲಲ್ಲಿ ನಿಂತು ವಾಕಿಟಾಕಿ ಹಿಡಿದು ನಿಂತಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಬಿಳಿ ಸಮವಸ್ತ್ರ ಧರಿಸಿದ್ದಾರೆ. ಇದನ್ನೂ ಓದಿ:  ಕಚ್ಚಾ ಬದಾಮ್ ಎಂದು ಹಾಡಿದ್ದವನ ಆತಂಕವೇನು ಗೊತ್ತಾ?

    ಆದರೆ ವೀಡಿಯೋದ ಅಸಲಿಯತ್ತನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಿಕ್ಕ ಮಾಹಿತಿಯೇ ಬೇರೆಯಾಗಿದ್ದು, ವೀಡಿಯೋದಲ್ಲಿ ಇರುವುದು ಬುಬನ್ ಅಲ್ಲ. ಅವರನ್ನು ಹೋಲುವ ಈಗಾಗಲೇ ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೇರೊಬ್ಬ ವ್ಯಕ್ತಿಯೆಂದು ತಿಳಿದು ಬಂದಿದೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು

    ಬುಬನ್ ರೈಲ್ವೆ ಇಲಾಖೆಯಲ್ಲಿ ಯಾವುದೇ ಕೆಲಸ ಮಾಡುತ್ತಿಲ್ಲ. ಅಲ್ಲದೆ ವೀಡಿಯೋವನ್ನು ‘ಡೈಲಿ ಟ್ರಾವೆಲ್ ಹ್ಯಾಕ್’ ಎನ್ನುವ ವ್ಲಾಗ್ ನಡೆಸುವ ಬಿಹಾರ ಮೂಲದ ಧನಂಜಯ್ ಕುಮಾರ್ ಅವರು ಚಿತ್ರಿಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರೇ ಸೃಷ್ಟಿಸಿರುವಂತೆ ವೀಡಿಯೋದಲ್ಲಿರುವುದು ಬುಬನ್ ಅಲ್ಲ. ಅವರನ್ನ ಹೋಲುವ ಮತ್ತೊಬ್ಬ ವ್ಯಕ್ತಿ. ವೀಡಿಯೋವನ್ನು ಅಗರ್ತಲ್-ಆನಂದ್ ವಿಹಾರ್ ತೇಜಸ್ ರಾಜಧಾನಿ ಎಕ್ಸಪ್ರೆಸ್‍ನಲ್ಲಿ ಚಿತ್ರಿಕರಿಸಲಾಗಿದೆ. ಈ ಮೂಲಕ ಬುಬನ್ ಅವರಿಗೆ ಯಾವುದೇ ರೈಲ್ವೆ ಇಲಾಖೆಯ ಕೆಲಸ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.

  • ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ – ಕಾಮಗಾರಿ ಸ್ಥಗಿತಕ್ಕೆ ಆಗ್ರಹ

    ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ – ಕಾಮಗಾರಿ ಸ್ಥಗಿತಕ್ಕೆ ಆಗ್ರಹ

    – ರೈಲ್ವೆ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

    ಚಿಕ್ಕಬಳ್ಳಾಪುರ: ಅವೈಜ್ಞಾನಿಕ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕೈಬಿಡುವಂತೆ ಚಿಕ್ಕಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಹತ್ತೂರ ಜನರ ಓಡಾಟಕ್ಕೆ ಅನುಕೂಲ ಆಗಲಿ ಅಂತ ಇರೋ ರೈಲ್ವೆ ಗೇಟ್ ಗೆ ಅಂಡರ್ ಬ್ರಿಡ್ಜ್ ಮಾಡಲು ರೈಲ್ವೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡಲಾಗ್ತಿದೆ ಅಂತ ಚಿಕ್ಕಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಗಲಗುರ್ಕಿ ರೈಲ್ವೆ ಗೇಟ್ ಮೂಲಕ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ರಸ್ತೆ ಇದೆ. ಇದೆ ರಸ್ತೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹತ್ತಾರು ವಿದ್ಯಾ ಸಂಸ್ಥೆಗಳಿವೆ. ಹಗಲು ರಾತ್ರಿ ನಿರಂತರ ವಿದ್ಯಾರ್ಥಿಗಳು ನಡೆದಾಡುವ ಹಾಗೂ ಬಸ್ ಸಂಚಾರ ಇರುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿವೆ.

    ಕಿಷ್ಕಿಂದೆ ರೀತಿಯಲ್ಲಿ ಎರಡು ಬಸ್ ಗಳು ಒಂದೇ ಸಮಯದಲ್ಲಿ ಸಂಚರಿಸದ ಹಾಗೆ ಮಳೆ ಬಂದ್ರೆ ಬ್ರಿಡ್ಜ್ ಜಲಾವೃತವಾಗುತ್ತದೆ. ಸದ್ಯದ ಗೇಟ್ ಗೆ ನೇರವಾಗಿ ಮೇಲ್ಸುತುವೆ ನಿರ್ಮಾಣ ಮಾಡಿ ಅಂತ ಧರಣಿ ಮಾಡಿ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ರೈಲ್ವೆ ಇಲಾಖೆ ಕ್ಯಾರೆ ಮಾಡಿಲ್ಲವೆಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

    ಜನರ ಅನುಕೂಲಕ್ಕಾಗಿ ಕಾಮಗಾರಿ ನಡೆಸುವುದನ್ನ ಕೇಳಿದ್ದೇವೆ. ಆದ್ರೆ ನೀವು ಜನರ ವಿರೋಧದ ನಡುವೆ ಅವೈಜ್ಞಾನಿಕವಾಗಿ ರೈಲ್ವೆ ಗೇಟ್ ಗೆ ಅಂಡರ್ ಬ್ರಿಡ್ಜ್ ಮಾಡಲು ಮುಂದಾಗಿದ್ದೀರಿ, ಮೊದಲು ಕಾಮಗಾರಿ ನಿಲ್ಲಿಸಿ ಅಂತ ಗ್ರಾಮಸ್ಥರು ರೈಲ್ವೇ ಇಲಾಖೆ ವಿರುದ್ದ ಆಕ್ರೋಶ ಹೊರಹಾಕಿದರು.

    ಜನ ಸಂದಣಿಯ ರಸ್ತೆಯಲ್ಲಿ ಅವೈಜ್ಞಾನಿಕ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚು. ಈಗಾಗಲೇ ಜಿಲ್ಲೆಯ ಹಲವು ರೈಲ್ವೇ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಇಂತದ್ರಲ್ಲಿ ಅಗಲಗುರ್ಕಿ ಬಳಿ ನಿರ್ಮಾಣವಾಗುತ್ತಿರುವ ಅವೈಜ್ಜಾನಿಕ ರೈಲ್ವೇ ಅಂಡರ್ ಪಾಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗಲಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

  • ಸಾರ್ವಜನಿಕ ಪ್ರಯಾಣಕ್ಕೆ ಭಾರತೀಯ ರೈಲ್ವೆಯಿಂದ 10 ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಸಾರ್ವಜನಿಕ ಪ್ರಯಾಣಕ್ಕೆ ಭಾರತೀಯ ರೈಲ್ವೆಯಿಂದ 10 ವಿಶೇಷ ಎಕ್ಸ್‌ಪ್ರೆಸ್‌ ರೈಲು

    ಹುಬ್ಬಳ್ಳಿ: ಲಾಕ್‍ಡೌನ್ ಸಡಿಲಿಕೆ ಬಳಿಕ ಭಾರತೀಯ ರೈಲ್ವೆ ಇಲಾಖೆ ಕೆಲವು ಸೂಕ್ತ ನಿರ್ದೇಶನಗಳನ್ನು ಜಾರಿ ಮಾಡಿ ಸಾರ್ವಜನಿಕರ ಸೇವೆಗೆ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಪ್ರಾರಂಭಿಸಲಿದೆ.

    ಭಾರತೀಯ ರೈಲ್ವೆ ವಲಯದ ನೈಋತ್ಯ ವಿಭಾಗದಲ್ಲಿ ಸುಮಾರು ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಕಾರ್ಯಾರಂಭ ಮಾಡಲು ಸಿದ್ಧಗೊಂಡಿದ್ದು, ಗಾಡಿ ಸಂಖ್ಯೆ 06587/06588 ಯಶವಂತಪುರ ದಿಂದ ಬಿಕಾನೇರ್ ವಾರಕ್ಕೊಮ್ಮೆ ಸಂಚರಿಸಲಿದೆ.

    ಗಾಡಿ ಸಂಖ್ಯೆ 06535/36 ರೈಲು ಮೈಸೂರು-ಸೊಲ್ಲಾಪೂರ ಮಧ್ಯೆ ಪ್ರತಿದಿನವೂ ಸಂಚರಿಸಲಿವೆ. 02253/02254 ರೈಲು ಯಶವಂತಪುರ ಹಾಗೂ ಬಿಜಾಪುರ ಮಧ್ಯೆ ವಾರಕ್ಕೊಮ್ಮೆ ಸಂಚಾರ ನಡೆಸಲಿವೆ. 02627/02628 ಬೆಂಗಳೂರು-ದೆಹಲಿ ಮಧ್ಯೆದಲ್ಲಿ ದಿನವೂ ಸಂಚಾರ ನಡೆಸಲಿವೆ. ಇನ್ನೂ 06539/40 ರೈಲು ಬೆಂಗಳೂರು ಮತ್ತು ಮೈಸೂರು ಮಧ್ಯೆ ಭಾನುವಾರ ಹೊರತು ಪಡಿಸಿ ವಾರದ ಆರು ದಿನದಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಅನ್‍ಲಾಕ್ 4 ಜಾರಿಯಾದ ಬಳಿಕ ಗೃಹ ಸಚಿವಾಲಯ ವಿಶೇಷ ರೈಲು ಸಂಚಾರ ಆರಂಭಿಸಲು ಅನುಮತಿ ನೀಡಿತ್ತು. ಸುಮಾರು 100 ಹೆಚ್ಚು ವಿಶೇಷ ರೈಲುಗಳು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗಳಲ್ಲೂ ಸಂಚಾರ ಮಾಡಲಿದೆ. ಬೇಡಿಕೆ ಹಾಗೂ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಹೆಚ್ಚಿನ ರೈಲುಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ಕಳೆದ ತಿಂಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

  • ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು – ವಿಶೇಷ ರೈಲುಗಳು ಓಡುತ್ತೆ

    ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು – ವಿಶೇಷ ರೈಲುಗಳು ಓಡುತ್ತೆ

    ನವದೆಹಲಿ: ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಸಾಮಾನ್ಯ ರೈಲು ಟಿಕೆಟ್‍ಗಳನ್ನು ರದ್ದುಗೊಳಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ.

    ವಿಶೇಷ ರೈಲುಗಳಲ್ಲಿ ಕಾಯ್ದಿರಿಸಿದ ಎಲ್ಲ ಪ್ರಯಾಣಿಕರ ಟಿಕೆಟ್‍ಗಳನ್ನು ರದ್ದುಪಡಿಸಲಾಗಿದೆ ಮತ್ತು ಬುಕ್ಕಿಂಗ್ ಮಾಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದು ಭಾರತೀಯ ರೈಲ್ವೇ ಇಲಾಖೆ ಪ್ರಕಟಿಸಿದೆ.

    ಮೇ 12 ರಿಂದ ಓಡಲು ಪ್ರಾರಂಭಿಸಿರುವ ಶ್ರಮಿಕ್ ವಿಶೇಷ ರೈಲುಗಳು ಮತ್ತು ವಿಶೇಷ ರೈಲುಗಳು ಎಂದಿನಿಂದ ತಮ್ಮ ಓಡಾಟ ನಡೆಸಲಿವೆ. ಶ್ರಮಿಕ್ ವಿಶೇಷ ರೈಲುಗಳು ಲಾಕ್‍ಡೌನ್‍ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದುಕೊಂಡು ಹೋಗುತ್ತಿವೆ. 15 ವಿಶೇಷ ರೈಲುಗಳು ದೆಹಲಿಯಿಂದ ರಾಜ್ಯಗಳ ರಾಜಧಾನಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

    ಜೂನ್ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್ 22ಕ್ಕೂ ಮುನ್ನ ಕಾಯ್ದಿರಿಸಲಾಗಿರುವ ರೈಲು ಟಿಕೆಟ್‍ಗಳನ್ನು ರದ್ದು ಪಡಿಸಲಾಗಿದೆ. ಐಆರ್‌ಸಿಟಿಸಿ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿರುವವರು ಟಿಕೆಟ್ ರದ್ದು ಪಡಿಸಬೇಕಿಲ್ಲ. ಟಿಕೆಟ್ ಹಣ ಅದಾಗಿಯೇ ಬ್ಯಾಂಕ್ ಖಾತೆಗೆ ಮರುಪಾವತಿಯಾಗಲಿದೆ. ಆದರೆ ರಿಸರ್ವೇಷನ್ ಕೌಂಟರ್‌ಗಳಲ್ಲಿ ಟಿಕಿಟ್ ಬುಕ್ ಪಡೆದರಿಗೆ ಮೂರು ತಿಂಗಳ ಒಳಗಾಗಿ ಹಣ ಸಿಗುತ್ತದೆ. ಸದ್ಯಕ್ಕೆ ರೈಲ್ವೇ ಕೌಂಟರ್ ಮುಚ್ಚಿರುವುದರಿಂದ ಪ್ರಯಾಣಿಕರು ಹೋಗಿ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

    ಮೇ 12 ರಂದು ಭಾರತೀಯ ರೈಲ್ವೇ 15 ವಿಶೇಷ ರೈಲುಗಳ ಓಡಾಟವನ್ನು ಲಾಕ್‍ಡೌನ್ ವೇಳೆ ಪ್ರಾರಂಭಿಸಿತ್ತು. ಕೊರೊನಾ ವೈರಸ್‍ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ಮೇಲ್, ಎಕ್ಸ್‌ಪ್ರೆಸ್, ಪ್ರಯಾಣಿಕ ಮತ್ತು ಉಪನಗರ ರೈಲು ಸೇವೆಗಳನ್ನು ಮಾರ್ಚ್ 25 ರಿಂದ ಸ್ಥಗಿತಗೊಳಿಸಿತ್ತು.

    ಇತ್ತೀಚೆಗೆ ಕೇಂದ್ರ ಸರ್ಕಾರ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಜೊತೆಗೆ ಮುಂಗಡವಾಗಿ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಅನುಮತಿ ನೀಡಿತ್ತು. ಅದರಂತೆಯೇ ಐಆರ್‌ಸಿಟಿಸಿಯಲ್ಲಿ ಮೊದಲ ದಿನ 80,000 ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ್ದರು. ಇದರಿಂದ ಭಾರತೀಯ ರೈಲ್ವೆಗೆ 16 ಕೋಟಿ ರೂ. ಆದಾಯ ಬಂದಿತ್ತು.

  • ರೈಲು ಪ್ರಯಾಣಿಕರೇ ಎಚ್ಚರ – ನಾಳೆಯಿಂದ ರೈಲ್ವೆ ಪ್ರಯಾಣದಲ್ಲಿ ವ್ಯತ್ಯಯ

    ರೈಲು ಪ್ರಯಾಣಿಕರೇ ಎಚ್ಚರ – ನಾಳೆಯಿಂದ ರೈಲ್ವೆ ಪ್ರಯಾಣದಲ್ಲಿ ವ್ಯತ್ಯಯ

    ಬೆಂಗಳೂರು: ವಿಶ್ವದ್ಯಂತ ಕೊರೊನಾ ವೈರಸ್ ಭೀತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಹಂತ ಹಂತವಾಗಿ ಬಂದ್ ಮಾಡುವ ಬಗ್ಗೆ ಚಿಂತನೆ ನಡೆದಿದೆ.

    ಮೊದಲ ಹಂತವಾಗಿ ಇಂದು ಸುಮಾರು 32 ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ನಾಳೆಯಿಂದ ಕೊರೊನಾ ವೈರಸ್ ಹಬ್ಬುತ್ತಿರುವ ಪ್ರಮಾಣವನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.

    ರೈಲುಗಳ ಸೇವೆಯಲ್ಲಿ ವ್ಯತ್ಯಯದ ವಿಚಾರ ತಿಳಿದ ಸಾರ್ವಜನಿಕರು ಕೂಡ ಗುರುವಾರದಿಂದಲೇ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದು, ಇಂದು ನಗರದ ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ಬಹುತೇಕ ಕಡೆಗಳ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ.

    ಬಹುತೇಕ ಜನರು ಕೊರೊನಾ ಭೀತಿಯಲ್ಲಿ ಮಾಸ್ಕ್ ಗಳನ್ನು ಹಾಕಿಕೊಂಡೇ ಓಡಾಡುತ್ತಿದ್ದಾರೆ. ಇನ್ನೂ ಗುರುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಸ್ಥಿತಿ ಹೊರತುಪಡಿಸಿ ಉಳಿದಂತೆ ಯಾರು ಮನೆಯಿಂದ ಹೊರಬರಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

    ಈ ರೈಲುಗಳು ಸಿಗಲ್ಲ

    ರೈಲು ಸಂಖ್ಯೆ            ಎಲ್ಲಿಂದ-ಎಲ್ಲಿಗೆ

    19667             ಉದಯ್‍ಪುರ್-ಮೈಸೂರು ವೀಕ್ಲಿ ಹಮ್‍ಸಫರ್ ಎಕ್ಸ್‌ಪ್ರೆಸ್‌
    19668            ಮೈಸೂರು – ಉದಯ್‍ಪುರ್ ವೀಕ್ಲಿ ಹಮ್‍ಸಫರ್ ಎಕ್ಸ್‌ಪ್ರೆಸ್‌
    22625            ಚೆನ್ನೈ-ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್‌
    22626            ಬೆಂಗಳೂರು-ಚೆನ್ನೈ ಡೈಲಿ ಎಕ್ಸ್‌ಪ್ರೆಸ್‌
    11047             ಮೀರಜ್-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌
    11303             ಮಂಗಳೂರು-ಕೊಲ್ಹಾಪುರ್ ಎಕ್ಸ್‌ಪ್ರೆಸ್‌
    11304             ಕೊಲ್ಹಾಪುರ್-ಮಂಗಳೂರು ಎಕ್ಸ್‌ಪ್ರೆಸ್‌
    16023            ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್‌


    16024            ಯಲಹಂಕ-ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್‌
    16541             ಯಶವಂತಪುರ-ಪಂಡರಪುರ ಎಕ್ಸ್‌ಪ್ರೆಸ್‌
    16542            ಪಂಡರಪುರ-ಯಶವಂತಪುರ ಎಕ್ಸ್‌ಪ್ರೆಸ್‌
    12079            ಹುಬ್ಬಳ್ಳಿ-ಬೆಂಗಳೂರು ಜನಶತಾಬ್ಧಿ ಎಕ್ಸ್‌ಪ್ರೆಸ್‌
    12080           ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್‌ಪ್ರೆಸ್‌
    16557            ಮೈಸೂರು-ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್‌
    16558           ಬೆಂಗಳೂರು-ಮೈಸೂರು ರಾಜರಾಣಿ ಎಕ್ಸ್‌ಪ್ರೆಸ್‌
    06539          ಯಶವಂತಪುರ-ಶಿವಮೊಗ್ಗ ತತ್ಕಾಲ್ ಎಕ್ಸ್‌ಪ್ರೆಸ್‌


    06540          ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್‌
    17325           ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್‌
    17326           ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್‌
    11065           ಮೈಸೂರು-ರೆನಿಗುಂಟ ಎಕ್ಸ್‌ಪ್ರೆಸ್‌
    11066          ರೆನಿಗುಂಟ-ಮೈಸೂರು ಎಕ್ಸ್‌ಪ್ರೆಸ್‌
    16217           ಮೈಸೂರು-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌
    16218          ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌
    16565          ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌


    16566          ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌
    12027         ಚೆನ್ನೈ-ಬೆಂಗಳೂರು ಶತಾಬ್ಧಿ ಎಕ್ಸ್‌ಪ್ರೆಸ್‌
    12028         ಬೆಂಗಳೂರು-ಚೆನ್ನೈ ಶತಾಬ್ಧಿ ಎಕ್ಸ್‌ಪ್ರೆಸ್‌
    16569         ಯಶವಂತಪುರ-ಕಾಚಿಗುಡ ಎಕ್ಸ್‌ಪ್ರೆಸ್‌
    16570         ಕಾಚಿಗುಡ-ಯಶವಂತಪುರ ಎಕ್ಸ್‌ಪ್ರೆಸ್‌
    16585         ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌
    16586         ಮಂಗಳೂರು-ಯಶವಂತಪುರ ಎಕ್ಸ್‌ಪ್ರೆಸ್‌