Tag: Railway Department

  • ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ

    ಭಾರತೀಯ ರೈಲ್ವೆ ಮೇಲೆ ಆಗಂತುಕರ ಕಣ್ಣು – ಆಗಸ್ಟ್ ತಿಂಗಳಲ್ಲೇ 18 ಬಾರಿ ರೈಲು ಹಳಿ ತಪ್ಪಿಸಲು ಯತ್ನ

    – ಕಳೆದೊಂದು ವರ್ಷದಲ್ಲಿ 24 ಪ್ರಕರಣಗಳು

    ನವದೆಹಲಿ: ಆಗಸ್ಟ್ ತಿಂಗಳು ಒಂದರಲ್ಲೇ ದೇಶದಾದ್ಯಂತ ರೈಲುಗಳ  ಹಳಿ ತಪ್ಪಿಸಲು (Train Derailment) 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೇ ಅಧಿಕಾರಿಗಳು (Railway Department) ಹೇಳಿದ್ದಾರೆ. ಕಾನ್ಪುರ ಮತ್ತು ಅಜ್ಮೀರ್‌ನಲ್ಲಿ ಭಾನುವಾರ ಎರಡು ಪ್ರಯತ್ನಗಳು ವರದಿಯಾಗಿದ್ದು, ಜೂನ್ 2023ರಿಂದ ಇಲ್ಲಿಯವರೆಗೆ ಇಂತಹ 24 ಘಟನೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

    ಎಲ್‌ಪಿಜಿ ಸಿಲಿಂಡರ್‌ಗಳು, ಬೈಸಿಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ರೈಲು ಹಳಿಗಳ ಮೇಲೆ ಇರಿಸಲಾದ ವಿವಿಧ ರೀತಿಯ ವಸ್ತುಗಳನ್ನು ಪತ್ತೆ ಮಾಡಲಾಗಿದೆ. ರೈಲ್ವೆಯ ವರದಿಯ ಪ್ರಕಾರ, 18 ಘಟನೆಗಳಲ್ಲಿ 15 ಆಗಸ್ಟ್‌ನಲ್ಲಿ ಮತ್ತು ಮೂರು ಸೆಪ್ಟೆಂಬರ್‌ನಲ್ಲಿ ಸಂಭವಿಸಿವೆ. ಘಟನೆಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಉಳಿದವು ಪಂಜಾಬ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ತೆಲಂಗಾಣದಿಂದ ವರದಿಯಾಗಿದೆ. ಇದನ್ನೂ ಓದಿ: ಭಯೋತ್ಪಾದನಾ ಚಟುವಟಿಕೆ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚಿಸಿ: ಅಶೋಕ್ ಆಗ್ರಹ

    ಕಳೆದ ಆಗಸ್ಟ್‌ನಲ್ಲಿ ಟ್ರ‍್ಯಾಕ್‌ನಲ್ಲಿ ಇರಿಸಲಾದ ವಸ್ತುವಿಗೆ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲಿನ 20 ಬೋಗಿಗಳು ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಹಳಿತಪ್ಪಿದವು. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಮಣಿಪುರದ ಮೂರು ಜಿಲ್ಲೆಗಳಲ್ಲಿ ಕರ್ಫ್ಯೂ

    ಈ ಭಾನುವಾರ ಎರಡು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಕಾನ್ಪುರದಲ್ಲಿ ಕಾಳಿಂದಿ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಹಳಿ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ನಿಂತಿತು. ಟ್ರ‍್ಯಾಕ್‌ನಲ್ಲಿ ಸಿಲಿಂಡರ್, ಪೆಟ್ರೋಲ್ ಬಾಟಲಿ, ಬೆಂಕಿಕಡ್ಡಿ ಸೇರಿದಂತೆ ಇತರ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿದ ನಂತರ ಲೊಕೋ ಪೈಲಟ್ ಬ್ರೇಕ್ ಹಾಕಿದ್ದರು. ಕಾನ್ಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈವರೆಗೆ ಆರು ಮಂದಿಯನ್ನು ಬಂಧಿಸಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಸರಕು ರೈಲು ಸಂಚರಿಸುತ್ತಿದ್ದು, ಹಳಿಗಳ ಮೇಲೆ ತಲಾ 70 ಕೆಜಿ ತೂಕದ ಎರಡು ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಲಾಗಿತ್ತು. ಇದಕ್ಕೆ ಡಿಕ್ಕಿ ಹೊಡೆದ ನಂತರ ರೈಲು ಯಾವುದೇ ಹಾನಿಯಾಗದೆ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಇದನ್ನೂ ಓದಿ: ವಯನಾಡು ದುರಂತದ ಬಳಿಕ ಸರ್ಕಾರ ಅಲರ್ಟ್- ಕಾಫಿನಾಡಲ್ಲಿ 40 ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳಿಗೆ ನೋಟಿಸ್

    ಸೆಪ್ಟೆಂಬರ್ 4 ರಂದು ಇದೇ ರೀತಿಯ ಘಟನೆಯಲ್ಲಿ, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ರೈಲು ಹಳಿ ಮೇಲೆ ಬೃಹತ್ ಕಲ್ಲನ್ನು ಹಾಕಿರುವುದನ್ನು ಟವರ್ ವ್ಯಾಗನ್‌ನ ಲೋಕೋ ಪೈಲಟ್‌ಗಳು ಗಮನಿಸಿದರು ಮತ್ತು ಅದಕ್ಕೆ ಡಿಕ್ಕಿಯಾಗುವ ಮೊದಲೇ ರೈಲು ನಿಲ್ಲಿಸಿದರು. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ. 2023ರಲ್ಲಿ ಒಡಿಶಾ ಮತ್ತು ರಾಜಸ್ಥಾನದಲ್ಲಿ ಕ್ರಮವಾಗಿ ಜೂನ್ ಮತ್ತು ಅಕ್ಟೋಬರ್‌ನಲ್ಲಿ ಎರಡು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ರೈಲ್ವೆ ಕ್ರಾಸಿಂಗ್‌ನಲ್ಲಿ ಮರದ ದಿಮ್ಮಿ ಇಡಲಾಗಿದ್ದು, ರಾಜಸ್ಥಾನದ ಚಿತ್ತೋರ್‌ಗಢದಲ್ಲಿ ಹಳಿಯಲ್ಲಿ ಕಲ್ಲು ಪತ್ತೆಯಾಗಿತ್ತು. ಇದನ್ನೂ ಓದಿ: ಸ್ಫೋಟಕ್ಕೆ ಉಗ್ರರ ಸಂಚು – ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆ ಹೆಚ್ಚಳ

  • ಬೆಂಗಳೂರು ರೈಲುಗಳು ಹೈಟೆಕ್- 6 ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಜಾರಿ

    ಬೆಂಗಳೂರು ರೈಲುಗಳು ಹೈಟೆಕ್- 6 ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಜಾರಿ

    ಬೆಂಗಳೂರು: ಭಾರತೀಯ ರೈಲ್ವೆ (Indian Railway) ಬಡವರು ಹಾಗೂ ಮಧ್ಯಮ ವರ್ಗದ ಪಾಲಿನ ನೆಚ್ಚಿನ ಸಂಚಾರ ನಾಡಿ. ಬೆಂಗಳೂರಿನ ರೈಲಿನ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಕೆಗೆ ಮುಂದಾಗಿದೆ.

    ಹೆಚ್ಚಿನ ಪ್ರಮಾಣದಲ್ಲಿ ರೈಲುಗಳ ಸಂಚಾರಕ್ಕೆ ಅನುಕೂಲವಾಗಲು ಹಾಗೂ ರೈಲು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಸಿಸ್ಟಮ್ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಒಟ್ಟು 639 ಕಿ.ಮೀ ದೂರದಲ್ಲಿ ಇದಕ್ಕೆ ಅನುಮತಿ ಸಿಕ್ಕಿದ್ದು, ಸುಮಾರು 874 ಕೋಟಿ ರೂಪಾಯಿ ವೆಚ್ಚ ತಗುಲಲಿದೆ.

    ಆಟೋಮೆಟಿಕ್ ಸಿಗ್ನಲಿಂಗ್ ಸಿಸ್ಟಂ ಎಲ್ಲೆಲ್ಲಿ?
    * ಕೆಎಸ್‍ಆರ್ ಬೆಂಗಳೂರು ಸಿಟಿ- ಯಶವಂತಪುರ- ಯಲಹಂಕ
    * ಯಶವಂತಪುರ To ಅರಸೀಕೆರೆ
    * ಲೊಟ್ಟೆಗೊಲ್ಲಹಳ್ಳಿ To ಹೊಸೂರು
    * ವೈಟ್‍ಫೀಲ್ಡ್ To ಜೋಲಾರಪೇಟೆ
    * ಬೈಯಪ್ಪನಹಳ್ಳಿ To ಪೆನುಕೊಂಡ- ಚನ್ನಸಂದ್ರ
    * ಬೆಂಗಳೂರು ನಗರ To ಮೈಸೂರು

    ಪ್ರಸ್ತುತ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಕೆಎಸ್‍ಆರ್ ಬೆಂಗಳೂರು ನಗರ-ವೈಟ್‍ಫೀಲ್ಡ್ ವಿಭಾಗದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದುವರೆಗೂ ರೈಲ್ವೆಯ ರಿಲೇರೂಮ್‍ನಲ್ಲಿ ಸಿಗ್ನಲ್‍ಗಳನ್ನು ಸಿಬ್ಬಂದಿ ಕಂಟ್ರೋಲ್ ಮಾಡ್ತಿದ್ದಾರೆ. ಈಗ ರಿಲೇರೂಮ್‍ನಲ್ಲಿ ಆಟೋಮೆಟಿಕ್ ಆಗಿ ಆನ್ ಆಂಡ್ ಆಫ್ ಆಗಲಿವೆ. ಇದರಿಂದಾಗಿ ಒಂದು ಸಮಯದಲ್ಲಿ ಒಂದು ರೈಲಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೊತೆಗೆ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹೋಗಲು ಹಾಗೂ ಬರಲು ಅನುಕೂಲವಾಗಲಿದೆ. ಇದರಿಂದ ರೈಲುಗಳ ದಕ್ಷತೆ ಹೆಚ್ಚಾಗಲಿದೆ. ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ಕ್ರಮ ಪ್ರಯಾಣಿಕರಲ್ಲಿ ಸಂತಸ ತರಿಸಿದೆ.

  • ಆಂಧ್ರದಲ್ಲಿ ರೈಲು ದುರಂತ – 12 ರೈಲುಗಳ ಸಂಚಾರ ರದ್ದು

    ಆಂಧ್ರದಲ್ಲಿ ರೈಲು ದುರಂತ – 12 ರೈಲುಗಳ ಸಂಚಾರ ರದ್ದು

    ಅಮರಾವತಿ: ಆಂಧ್ರ ಪ್ರದೇಶದಲ್ಲಿ (Andhra Pradesh) ಭಾನುವಾರ ರಾತ್ರಿ ಸಂಭವಿಸಿದ ರೈಲು ದುರಂತದಲ್ಲಿ (Train Tragedy) ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದಿಂದಾಗಿ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ (Cancelled) ಎಂದು ರೈಲ್ವೆ ಇಲಾಖೆ (Railway Department) ತಿಳಿಸಿದೆ.

    ಭಾನುವಾರ ಆಂಧ್ರ ಪ್ರದೇಶದ ವಿಜಯನಗರದಲ್ಲಿ (Vijayanagara) ಎರಡು ಪ್ಯಾಸೆಂಜರ್ ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದ ನಂತರ 12 ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 15 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದ್ದು, 7 ಇತರ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಕರ ರೈಲು ದುರಂತ ಪ್ರಕರಣ- ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ

    ಘಟನೆಯಲ್ಲಿ ಇಲ್ಲಿಯವರೆಗೆ 40 ಮಂದಿ ಗಾಯಗೊಂಡಿದ್ದಾರೆ. 32 ಮಂದಿಯನ್ನು ವಿಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಡಿಕೋವರ್ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಿದ್ದು, ಎನ್‌ಆರ್‌ಐ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. 4 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಗಾಯಗೊಂಡವರೆಲ್ಲರೂ ಆಂಧ್ರಪ್ರದೇಶದವರಾಗಿದ್ದಾರೆ ಎಂದು ವಿಜಯನಗರ ಜಿಲ್ಲಾಡಳಿತ ತಿಳಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಸ್ಫೋಟ ಪ್ರಕರಣ- ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

    ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ಬೋಗಿಗಳು ಹಳಿತಪ್ಪಿವೆ. ಮಾನವ ದೋಷದಿಂದ ದುರಂತ ಸಂಭವಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿದ್ದು, ಸಿಗ್ನಲಿಂಗ್ ಅನ್ನು ಲೋಕೋ ಪೈಲಟ್ ಗಮನಿಸದ ಪರಿಣಾಮ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡು ಪ್ರಮುಖ ಮಸೀದಿಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್

    ಎರಡು ಪ್ರಮುಖ ಮಸೀದಿಗಳ ತೆರವಿಗೆ ರೈಲ್ವೆ ಇಲಾಖೆ ನೋಟೀಸ್

    ನವದೆಹಲಿ: 15 ದಿನಗಳಲ್ಲಿ ಅತಿಕ್ರಮಣವನ್ನು ತೆರವು ಮಾಡುವಂತೆ ದೆಹಲಿಯ ಎರಡು ಪ್ರಮುಖ (Delhi Mosques) ಮಸೀದಿಗಳಾದ ಬೆಂಗಾಲಿ ಮಾರ್ಕೆಟ್ ಮಸೀದಿ (Bengali Market Mosque) ಮತ್ತು ಬಾಬರ್ ಷಾ ಟಾಕಿಯಾ ಮಸೀದಿಗಳಿಗೆ (Babar Shah Takiya Mosque) ಉತ್ತರ ರೈಲ್ವೇ ಆಡಳಿತವು ನೋಟೀಸ್ ನೀಡಿದೆ. ನಿಗದಿತ ಅವಧಿಯೊಳಗೆ ಒತ್ತುವರಿ ತೆರವು ಮಾಡದಿದ್ದಲ್ಲಿ ಜಮೀನು ವಾಪಸ್ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು (Railway Officers) ಎಚ್ಚರಿಕೆ ನೀಡಿದ್ದಾರೆ.

    ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ ಎಂದು ತಿಳಿದಿದ್ದು, ಈ ಆಸ್ತಿಯಲ್ಲಿ ನಿರ್ಮಿಸಲಾದ ಯಾವುದೇ ಅನಧಿಕೃತ ಕಟ್ಟಡಗಳು, ದೇವಾಲಯಗಳು, ಮಸೀದಿಗಳು ಅಥವಾ ಮಂದಿರಗಳನ್ನು ಸ್ವಯಂಪ್ರೇರಣೆಯಿಂದ ತೆಗೆದುಹಾಕುವಂತೆ, ಒಂದು ವೇಳೆ ನಿರ್ದೇಶನ ಪಾಲಿಸದಿದ್ದಲ್ಲಿ ಅತಿಕ್ರಮಣ ಭೂಮಿಯನ್ನು ವಾಪಸ್ ಪಡೆಯಲು ರೈಲ್ವೇ ಕಾಯಿದೆಗೆ ಅನುಗುಣವಾಗಿ ರೈಲ್ವೆ ಆಡಳಿತವು ಕ್ರಮ ಕೈಗೊಳ್ಳಲಿದೆ ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    ನೋಟೀಸ್ ಗೆ ಬಾಬರ್ ಶಾ ಟಕಿಯಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಗಫಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಸೀದಿಯು ಸುಮಾರು 400 ವರ್ಷಗಳಷ್ಟು ಹಳೆಯದು, ಮಸೀದಿ ಬದಲು ಮಲೇರಿಯಾಕ್ಕಾಗಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‍ನ ಪಕ್ಕದ ಕಚೇರಿಗೆ ರೈಲ್ವೆ ಅಧಿಕಾರಿಗಳು ನೋಟೀಸ್ ನೀಡಿದ್ದು, ಆ ಆವರಣವನ್ನು ತೆರವು ಮಾಡುವಂತೆ ಒತ್ತಾಯಿಸಿದ್ದರು.

    ಐತಿಹಾಸಿಕ ಮಸೀದಿಗಳು ದೆಹಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಭೂದೃಶ್ಯದ ಅವಿಭಾಜ್ಯ ಅಂಗವಾಗಿದೆ. ಆದಾಗ್ಯೂ, ರೈಲ್ವೆಯು ಭೂಮಿಯ ಮಾಲೀಕತ್ವದ ಹಕ್ಕು ಸ್ಥಳೀಯ ಸಮುದಾಯದೊಳಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ರೈಲ್ವೆ ಅಧಿಕಾರಿಗಳು ತಮ್ಮ ಭೂಮಿಯಲ್ಲಿ ಅನುಮತಿಯಿಲ್ಲದೆ ಕಟ್ಟಡಗಳು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದರೆ, ಮಸೀದಿ ಸಮಿತಿಯು ಈ ಪೂಜಾ ಸ್ಥಳಗಳು ಗಮನಾರ್ಹ ಐತಿಹಾಸಿಕ ಮೌಲ್ಯವನ್ನು ಹೊಂದಿವೆ ಮತ್ತು ಶತಮಾನಗಳಿಂದ ಎದ್ದು ನಿಂತಿವೆ ಎಂದು ವಾದಿಸುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ದುರಂತ – ಮೊದಲ ಬಾರಿ ವರದಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ

    ಒಡಿಶಾ ರೈಲು ದುರಂತ – ಮೊದಲ ಬಾರಿ ವರದಿ ಬಿಡುಗಡೆ ಮಾಡಿದ ರೈಲ್ವೆ ಇಲಾಖೆ

    ನವದೆಹಲಿ: ಕಳೆದ ತಿಂಗಳು ಜೂನ್ ಆರಂಭದಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ (Odisha Train Tragedy) ಸಿಗ್ನಲ್ ದೋಷವೇ ಕಾರಣ ಎಂದು ರೈಲ್ವೆ ಸಚಿವಾಲಯ ರಾಜ್ಯಸಭೆಯಲ್ಲಿ ವರದಿಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ.

    ರಾಜ್ಯಸಭೆಯಲ್ಲಿ ಸಂಸದ ಡಾ. ಜಾನ್ ಬಿಟ್ರಾಸ್ ಅವರು ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತ್ರಿವಳಿ ರೈಲು ಅಪಘಾತ ಸಿಗ್ನಲ್ ಸರ್ಕ್ಯೂಟ್ ಆಲ್ಟರೇಶನ್‌ನಲ್ಲಿ ತಪ್ಪಾಗಿದ್ದರಿಂದ ಸಂಭವಿಸಿದೆ. ಇದರಿಂದ ಸಿಗ್ನಲ್ ತಪ್ಪಾಗಿ ಪ್ರದರ್ಶನವಾಗಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ನಿಲ್ದಾಣದ ನಾರ್ತ್ ಸಿಗ್ನಲ್ ಗೂಮ್ಟಿಯಲ್ಲಿ ಸಿಗ್ನಲಿಂಗ್ ಸರ್ಕ್ಯೂಟ್ ಮಾರ್ಪಾಡು ಹಾಗೂ ನಿಲ್ದಾಣದ ಲೆವೆಲ್ ಕ್ರಾಸಿಂಗ್ ಗೇಟ್ ನಂ.94ಕ್ಕೆ ಎಲೆಕ್ಟ್ರಿಕ್ ಲಿಫ್ಟಿಂಗ್ ಬ್ಯಾರಿಯರ್ ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಸಿಗ್ನಲಿಂಗ್ ಕಾರ್ಯದ ವೇಳೆ ಸಿಗ್ನಲಿಂಗ್-ಸರ್ಕ್ಯೂಟ್ ಬದಲಾವಣೆಯಲ್ಲಿನ ಲೋಪಗಳಿಂದ ರೈಲುಗಳು ಡಿಕ್ಕಿಯಾಗಿವೆ ಎಂದು ಉತ್ತರಿಸಿದ್ದಾರೆ.

    ಈ ದೋಷಗಳ ಪರಿಣಾಮವಾಗಿ ರಾಂಗ್ ಲೈನ್‌ಗೆ ಹಸಿರು ಸಿಗ್ನಲ್ ಪ್ರದರ್ಶಿಸಲಾಯಿತು. ಇದು ನಿಂತಿದ್ದ ಸರಕು ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿಯಾಗಲು ಕಾರಣವಾಯಿತು. ಈ ತಪ್ಪುಗಳು ರೈಲ್ವೆ ಅಧಿಕಾರಿಗಳ ಲೋಪ ಹಾಗೂ ನಿರ್ಲಕ್ಷ್ಯದಿಂದ ಸಂಭವಿಸಿರುವುದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಪೈಕಿ 41 ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಸರ್ಕಾರ ಬಹಿರಂಗಪಡಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಸರ್ವೇಗೆ ಕೋರ್ಟ್ ಅನುಮತಿ

    ಕಳೆದ ತಿಂಗಳು ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 293 ಜನರು ಸಾವನ್ನಪ್ಪಿದ್ದಾರೆ. 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತ ಕಳೆದ 3 ದಶಕಗಳಲ್ಲೇ ಭಾರತದಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ದುರಂತವಾಗಿದೆ.

    ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ತನಿಖಾ ದಳ ಮೂವರು ಭಾರತೀಯ ರೈಲ್ವೆ ಉದ್ಯೋಗಿಳಾದ ಅರುಣ್ ಕುಮಾರ್ ಮಹಂತ, ಮೊಹಮ್ಮದ್ ಅಮೀರ್ ಖಾನ್ ಹಾಗೂ ಪಪ್ಪು ಕುಮಾರ್‌ರನ್ನು ಬಂಧಿಸಿದೆ. ಇದನ್ನೂ ಓದಿ: ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಜೆಡಿಎಸ್‌-ಬಿಜೆಪಿ ಹೊಂದಾಣಿಕೆ: ಕಾಲೆಳೆದ ಕಾಂಗ್ರೆಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಇಳಿಕೆ ಸಾಧ್ಯತೆ

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಇಳಿಕೆ ಸಾಧ್ಯತೆ

    ನವದೆಹಲಿ: ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲು ನಿಗದಿತ ಪ್ರಮಾಣದಲ್ಲಿ ಭರ್ತಿಯಾಗದ ಹಿನ್ನೆಲೆ ಕೆಲವು ಮಾರ್ಗಗಳಲ್ಲಿ ಅದರ ಟಿಕೆಟ್ ದರ (Ticket Price) ಇಳಿಕೆ ಮಾಡಲು ರೈಲ್ವೆ ಇಲಾಖೆ (Railway Department) ಚಿಂತಿಸಿದೆ. ಈ ಮೂಲಕ ಬಹು ನಿರೀಕ್ಷಿತ ರೈಲು ಸೇವೆಯನ್ನು ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ.

    ಇಂದೋರ್-ಭೋಪಾಲ್, ಭೋಪಾಲ್-ಜಬಲ್‌ಪುರ್ ಮತ್ತು ನಾಗ್ಪುರ-ಬಿಲಾಸ್‌ಪುರ ಮಾರ್ಗದ ವಂದೇ ಭಾರತ್ ರೈಲಿನ ಟಿಕೆಟ್ ದರದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿದೆ. ಭೋಪಾಲ್-ಜಬಲ್ಪುರ್ ವಂದೇ ಭಾರತ್ ಸೇವೆಯು 29% ರಷ್ಟು, ಇಂದೋರ್-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 21% ರಷ್ಟು ಪ್ರಯಾಣಿಕರನ್ನು ಮಾತ್ರ ಹೊಂದಿದೆ. ಇದನ್ನೂ ಓದಿ: ದೆಹಲಿಗೆ ಮಾನ್ಸೂನ್ ಎಂಟ್ರಿ- ರಾಷ್ಟ್ರ ರಾಜಧಾನಿ ಕೂಲ್ ಕೂಲ್

    ಈ ಮಾರ್ಗದಲ್ಲಿ ಪ್ರಯಾಣಕ್ಕೆ ಎಸಿ ಚೇರ್ ಕಾರ್ ಟಿಕೆಟ್‌ಗೆ 950 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ 1,525 ರೂ. ಟಿಕೆಟ್ ದರ ನಿಗದಿಪಡಿಸಿದೆ. ರೈಲ್ವೆ ಇಲಾಖೆಯ ಪರಿಶೀಲನೆ ಬಳಿಕ ಈ ಮಾರ್ಗಗಳಲ್ಲಿ ಗಣನೀಯವಾಗಿ ಟಿಕೆಟ್ ದರ ಇಳಿಸಿ ಜನರು ಹೆಚ್ಚು ಸೇವೆಯನ್ನು ಪಡೆಯುವಂತೆ ಮಾಡುವ ಚಿಂತನೆ ಹೊಂದಲಾಗಿದೆ. ಇದನ್ನೂ ಓದಿ: ಮಣಿಪುರ ಹಿಂಸಾಚಾರ – ಇಂಟರ್ನೆಟ್ ಸೇವೆ ನಿಷೇಧ ಜು.10 ರವರೆಗೆ ವಿಸ್ತರಣೆ

    ನಾಗ್ಪುರ-ಬಿಲಾಸ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಟಿಕೆಟ್ ದರದಲ್ಲೂ ಇಳಿಕೆಯಾಗಬಹುದು ಎನ್ನಲಾಗುತ್ತಿದೆ. ಸದ್ಯ 55% ರಷ್ಟು ರೈಲು ಭರ್ತಿಯಾಗುತ್ತಿದ್ದು, ದರ ಇಳಿಕೆಯಾದಲ್ಲಿ ಜನರ ಪ್ರಮಾಣ ಹೆಚ್ಚಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈವರೆಗೂ 46 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶಾದ್ಯಂತ ಹಲವು ಮಾರ್ಗಗಳಲ್ಲಿ ಸೇವೆ ನೀಡುತ್ತಿವೆ. ಇದನ್ನೂ ಓದಿ: ಯುಪಿಯಲ್ಲಿ ಮುಂದುವರೆದ ಬುಲ್ಡೋಜರ್ ಅಸ್ತ್ರ – ಲವ್ ಜಿಹಾದ್ ಆರೋಪಿ ಮನೆ ಉಡೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

    ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ ನಡೆದ ಸರಣಿ ರೈಲು ದುರಂತದ (Train Tragedy) ಬಳಿಕ ರೈಲ್ವೆ ಇಲಾಖೆ (Railway Department) ಎಚ್ಚೆತ್ತುಕೊಂಡಿದೆ. ಆಗ್ನೇಯ ರೈಲ್ವೆಯ ಎಲ್ಲಾ ಹಳಿಗಳನ್ನು ಡೀಪ್ ಸ್ಕ್ರೀನಿಂಗ್‌ (Deep Screening) ಮಾಡಲು ನಿರ್ಧರಿಸಿದ್ದು, 370 ಕೋಟಿ ರೂ. ಟೆಂಡರ್ ಕರೆಯಲಾಗಿದೆ.

    ಆಗ್ನೇಯ ರೈಲ್ವೆಯ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳಲ್ಲಿ ಮುಖ್ಯ ಮಾರ್ಗದ ಹಳಿಗಳ ಆಳವಾದ ಸ್ಕ್ರೀನಿಂಗ್‌ ಮಾಡಲಾಗುತ್ತದೆ. ಈ ದೊಡ್ಡ ಕಸರತ್ತಿಗೆ 150ಕ್ಕೂ ಹೆಚ್ಚು ಬಾಲಾಸ್ಟ್‌ ಕ್ಲೀನಿಂಗ್‌ ಮೆಷಿನ್ (BCM) ಬಳಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಟ್ರ್ಯಾಕ್‌ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ ಮತ್ತು ಒಳಚರಂಡಿಯನ್ನು ಪುನಃ ಸ್ಥಾಪಿಸುತ್ತದೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ

    ಈ ಪ್ರಕ್ರಿಯೆ ಬಳಿಕ ಟ್ರ್ಯಾಕ್‌ನ ಸ್ಥಿರತೆಯನ್ನು ಪುನಃ ಸ್ಥಾಪಿಸಲು ಡೈನಾಮಿಕ್ ಟ್ರ್ಯಾಕ್‌ ಸ್ಟೇಬಿಲೈಸರ್ ಮತ್ತು ಬ್ಯಾಲೆಸ್ಟ್ ರೆಗ್ಯುಲೇಟಿಂಗ್ ಯಂತ್ರಗಳನ್ನು ಬಳಸಿ ಪರಿಶೀಲಿಸಲಾಗುತ್ತದೆ. ರೈಲು ಜಾಯಿಂಟ್‌ಗಳ ನಯಗೊಳಿಸುವಿಕೆ, ಜೋಗಲ್ಡ್ ಫಿಶ್ ಪ್ಲೇಟ್‌ಗಳನ್ನು ತೆರೆಯುವುದು ಮತ್ತು ಮರುಸ್ಥಾಪಿಸುವಂತಹ ಇತರ ಚಟುವಟಿಕೆಗಳನ್ನು ಸಹ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ನಟಿ ಖುಷ್ಬೂ ವಿರುದ್ಧ ಆಕ್ಷೇಪಾರ್ಹ ಹೇಳಿಕೆ- ಡಿಎಂಕೆ ನಾಯಕ ಅರೆಸ್ಟ್, ಪಕ್ಷದಿಂದ ಉಚ್ಛಾಟನೆ

    ಆಗ್ನೇಯ ರೈಲ್ವೆ ವಲಯವು ಒಡಿಶಾ ಮತ್ತು ಪಶ್ಚಿಮ ಬಂಗಾಳವನ್ನು ಒಳಗೊಂಡಿದೆ. ಅಪಘಾತದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತ (CRS) ಹಾಗೂ ಸಿಬಿಐ ತನಿಖೆ ನಡೆಸುತ್ತಿದ್ದು, ಸಿಗ್ನಲ್ ದೋಷವೇ ಅಪಘಾತಕ್ಕೆ ಕಾರಣ ಎಂದು ಊಹಿಸಲಾಗುತ್ತಿದೆ. ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನ್‌ನಲ್ಲಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 271 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

  • ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

    ನವದೆಹಲಿ: ನಾವು ಯಾರ ಜೊತೆಗೂ ರಾಜಿ ಮಾಡಿಕೊಂಡಿಲ್ಲ, ಹೋರಾಟದಿಂದ ಹಿಂದೆಯೂ ಸರಿಯುವುದಿಲ್ಲ, ನ್ಯಾಯಕ್ಕಾಗಿ ಒಗ್ಗಟ್ಟಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, ನಮ್ಮನ್ನು ದುರ್ಬಲಗೊಳಿಸಲು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸಾಕ್ಷಿ ಮಲಿಕ್ (Sakshi Malik) ಹಾಗೂ ಅವರ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ (Satyawart Kadian) ಸ್ಪಷ್ಟನೆ ನೀಡಿದ್ದಾರೆ.

    ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೊತೆಗೆ ಸಭೆ ನಡೆಸಿದ ಬೆನ್ನಲ್ಲೇ ಭಾರತೀಯ ಕುಸ್ತಿ ಫೆಡರೇಷನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ (Brij Bhushan Sharan Singh)
    ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಹೋರಾಟದಿಂದ ಹಿಂದೆ ಸರಿದಿದ್ದು, ತಮ್ಮ ಕೆಲಸಕ್ಕಾಗಿ ರೈಲ್ವೇ ಇಲಾಖೆಗೆ (Railway Department) ಮರಳಿದ್ದಾರೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಪ್ರತಿಭಟನೆಯಿಂದ ಹಿಂದೆ ಸರಿದ ಕುಸ್ತಿಪಟುಗಳು – ಮರಳಿ ರೈಲ್ವೇ ಉದ್ಯೋಗಕ್ಕೆ

    ಈ ವರದಿ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಾಕ್ಷಿ ಮಲಿಕ್ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ ಹೋರಾಟ ಹಿಂದಕ್ಕೆ ಪಡೆದಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಹೋರಾಟ ಮುಂದುವರಿಯಲಿದ್ದು, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ಟ್ವಿಟ್ಟರ್‌ನಲ್ಲಿ (Twitter) ಈ ಬಗ್ಗೆ ಖುದ್ದು ಸಾಕ್ಷಿ ಮಲಿಕ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಹೋರಾಟದಿಂದ ಹಿಂದೆ ಸರಿದಿರುವ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದಿಂದ ನಾವು ಹಿಂದೆ ಸರಿದಿಲ್ಲ, ನಾವೂ ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೇಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

  • ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ಒಡಿಶಾ ರೈಲು ದುರಂತ- ಪತ್ರದ ಮೂಲಕ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

    ನವದೆಹಲಿ: ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ಸರಣಿ ರೈಲು ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಎಐಸಿಸಿ (AICC) ಅಧ್ಯಕ್ಷ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪತ್ರ ಬರೆದಿದ್ದು, ಇಲಾಖೆ ಮೇಲಿನ ನಿರ್ಲಕ್ಷ್ಯಗಳನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ನಾಲ್ಕು ಪುಟಗಳ ಪತ್ರ (Letter) ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ, ತಾಂತ್ರಿಕ ಸಮಸ್ಯೆ ಮತ್ತು ಹಿಂದಿನ ತನಿಖೆಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೇ ಇಲಾಖೆಯಲ್ಲಿ (Railway Department) ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿ ಇವೆ. ಅಪಘಾತದ ನಡೆದ ವಿಭಾಗದಲ್ಲೂ ಸುಮಾರು 8,278 ಹುದ್ದೆಗಳು ಖಾಲಿ ಇವೆ. 90ರ ದಶಕದಲ್ಲಿ 18 ಲಕ್ಷಕ್ಕೂ ಹೆಚ್ಚು ರೈಲ್ವೇ ಉದ್ಯೋಗಿಗಳಿದ್ದು, ಈಗ ಅದನ್ನು ಸುಮಾರು 12 ಲಕ್ಷಕ್ಕೆ ಇಳಿಸಲಾಗಿದೆ. ಅದರಲ್ಲೂ 3.18 ಲಕ್ಷ ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಏಕೆ ಭರ್ತಿ ಮಾಡಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

    ಲೊಕೊ ಪೈಲಟ್‌ಗಳು ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಾರೆ ಎಂದು ಮಂಡಳಿ ಹೇಳಿದೆ. ಲೊಕೊ ಪೈಲಟ್‌ಗಳ ನೇಮಕಾತಿ ಯಾಕೆ ನಡೆದಿಲ್ಲ? ಅವರ ಮೇಲೆ ಹೊರೆ ಹಾಕುವುದು ಜನರ ಸುರಕ್ಷತೆ ಸವಾಲು ಸ್ವೀಕರಿಸಿದಂತೆ. ಮೈಸೂರಿನಲ್ಲಿ ಎರಡು ರೈಲುಗಳ ಡಿಕ್ಕಿ ಸಾಧ್ಯತೆ ಉಲ್ಲೇಖಿಸಿ ಸಿಗ್ನಲ್ ಸಮಸ್ಯೆ ಕ್ರಮಕ್ಕೆ ಒತ್ತಾಯಿಸಿತ್ತು. ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಮಂಡಳಿಯ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ಟೀಕಿಸಿದೆ. ಇದರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ರೈಲ್ವೆ ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಸಿಎಜಿ ಕೂಡ ವರದಿ ನೀಡಿದೆ. 68% ಪ್ರಕರಣಗಳಲ್ಲಿ ತಡವಾಗಿ ತನಿಖಾ ವರದಿ ಸಲ್ಲಿಸಿದ್ದು, ಸೂಕ್ತ ಕ್ರಮವೂ ತೆಗೆದುಕೊಂಡಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತ – ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ

    2011ರ ಹಿಂದಿನ ಸರ್ಕಾರದ ಅವಧಿಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಯಶಸ್ವಿಯಾಗಿ ರಕ್ಷಾ ಕವಚ್ ಪರೀಕ್ಷಿಸಿತು. ಇದು ರೈಲುಗಳ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿತ್ತು. ನಿಮ್ಮ ಸರ್ಕಾರ ಕವಚ್ ಮರು ನಾಮಕರಣ ಮಾಡಿತು. ಇದಾದ ಮೇಲೂ ಈವರೆಗೂ ಕೇವಲ 4% ಅನುಷ್ಠಾನವಾಗಿದೆ. 100% ತಂತ್ರಜ್ಞಾನ ಅಳವಡಿಕೆಗೆ ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

    ಇನ್ನೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಜವಾಬ್ದಾರಿ ಹೊರದೆ ಸಿಬಿಐ (CBI) ತನಿಖೆಗೆ ನೀಡಿದ್ದಾರೆ. ಸಿಬಿಐ ಅಪರಾಧಗಳ ತನಿಖೆಗಿದೆ. ಸಿಬಿಐ ಅಥವಾ ಯಾವುದೇ ಇತರ ಕಾನೂನು ಜಾರಿ ಸಂಸ್ಥೆಯು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಅವರಿಗೆ ರೈಲ್ವೇ ಸಿಗ್ನಲ್ ಬಗ್ಗೆ ಜ್ಞಾನವೂ ಇರುವುದಿಲ್ಲ. ಅವರಿಂದ ತನಿಖೆ ಹೇಗೆ ನಿರೀಕ್ಷಿಸಬಹುದು? 2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿ 150 ಮಂದಿ ಪ್ರಾಣ ಕಳೆದುಕೊಂಡರು. ಚುನಾವಣೆ ವೇಳೆ ಪಿತೂರಿ ಎಂದು ಆರೋಪಿಸಿ ಎನ್‌ಐಎ (NIA) ತನಿಖೆಗೆ ನೀಡಿದ್ದಿರಿ. 2018ರಲ್ಲಿ ಎನ್‌ಐಎ ತನಿಖೆಯನ್ನು ಮುಕ್ತಾಯಗೊಳಿಸಿತು. ಆದರೆ ಆರೋಪ ಪಟ್ಟಿ ಸಲ್ಲಿಸಲು ನಿರಾಕರಿಸಿತು. 150 ಮಂದಿಯ ಸಾವಿಗೆ ಹೊಣೆ ಯಾರು ಎಂದು ಕೇಳಿದವರು ಇನ್ನಾದರೂ ಜನರ ಸುರಕ್ಷತೆ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

  • Odisha Train Accident; 48 ರೈಲು ಸಂಚಾರ ರದ್ದು, 39 ರೈಲುಗಳ ಮಾರ್ಗ ಬದಲಾವಣೆ

    Odisha Train Accident; 48 ರೈಲು ಸಂಚಾರ ರದ್ದು, 39 ರೈಲುಗಳ ಮಾರ್ಗ ಬದಲಾವಣೆ

    ನವದೆಹಲಿ: ಒಡಿಶಾದಲ್ಲಿ (Odisha) ಸಂಭವಿಸಿದ ಭೀಕರ ರೈಲು ಅಪಘಾತದಿಂದಾಗಿ (Train Accident) 238 ಮಂದಿ ಮೃತಪಟ್ಟಿದ್ದು, ಸುಮಾರು 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನಲೆ 48 ರೈಲು ಸಂಚಾರವನ್ನು ರದ್ದುಗೊಳಿಸಿದ್ದು, 39 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

    ಅಪಘಾತದ ಹಿನ್ನಲೆ ಹಲವಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅಲ್ಲದೇ 10 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದನ್ನೂ ಓದಿ: Odisha Train Tragedy; ಪುಣ್ಯಕ್ಷೇತ್ರಕ್ಕೆ ಹೊರಟಿದ್ದ ಚಿಕ್ಕಮಗಳೂರಿನ 110 ಮಂದಿ ಯಾತ್ರಾರ್ಥಿಗಳು ಸೇಫ್

    ತಿರುವನಂತಪುರಂ-ಕೋಲ್ಕತ್ತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22641), ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12509) ಮತ್ತು ಹೌರಾ-ತಿರುಪತಿ ಹಮ್ಸಾಫರ್ ಎಕ್ಸ್‌ಪ್ರೆಸ್ (20889) ರೈಲುಗಳು ರದ್ದಾಗಿವೆ. ಕನ್ಯಾಕುಮಾರಿ-ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್ (22503) ಮತ್ತು ಹೌರಾ-ಮೈಸೂರು ಎಕ್ಸ್‌ಪ್ರೆಸ್ (22817) ರೈಲು ಮಾರ್ಗ ಬದಲಾಯಿಸಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಇದರೊಂದಿಗೆ ರದ್ದಾದ ಮತ್ತು ಮಾರ್ಗ ಬದದಲಾವಣೆ ಮಾಡಿ ಸಂಚರಿಸಲಿರುವ ರೈಲುಗಳ ಪಟ್ಟಿ ಈ ಕೆಳಗಿನಂತಿವೆ. ರೈಲುಗಳಲ್ಲಿ ಸಂಚರಿಸುವವರು ಮಾಹಿತಿಯನ್ನು ಪಡೆದುಕೊಂಡು ಸಂಚರಿಸಬೇಕೆಂದು ರೈಲ್ವೆ ಇಲಾಖೆ ಮನವಿ ಮಾಡಿದೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ