Tag: railway children

  • ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಹಳ್ಳಿ ಹೈದನಿಗೆ ಓಲಿದ ಬಂತು ರಾಷ್ಟ್ರ ಮಟ್ಟದ ಪ್ರಶಸ್ತಿ- ಬಾಲಕನಿಗೆ ಈಗ ಭವಿಷ್ಯದ್ದೇ ಚಿಂತೆ!

    ಚಿಕ್ಕಬಳ್ಳಾಪುರ: ಬಡ ಕುಟುಂಬದಲ್ಲಿ ಜನಿಸಿದ ಬಾಲಕ. ನಟನೆ ಆನ್ನೋದು ಆತನ ಗೊತ್ತಿರಲಿಲ್ಲ. ಆದ್ರೆ ಆಕಸ್ಮಿಕವಾಗಿ ಸಿಕ್ಕ ಅವಕಾಶದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಪಡದುಕೊಂಡ ಕನ್ನಡನಾಡಿನ ಹೆಮ್ಮೆಯ ಪ್ರತಿಭೆ. ಪ್ರಶಸ್ತಿ ಏನೋ ಬಂತು ಆದ್ರೆ ಮುಂದೇನು ಅನ್ನೋ ಭವಿಷ್ಯದ ಚಿಂತೆ ಎಂದು ಬಾಲಕನನ್ನು ಕಾಡುತ್ತಿದೆ.

    ರೈಲ್ವೇ ಚಿಲ್ಡ್ರನ್ ಅನ್ನೋ ಒಂದು ಸಾಮಾಜಿಕ ಕಳಿಕಳಿಯ ಚಿತ್ರದಲ್ಲಿ ಮನೋಜ್ಞವಾಗಿ ಅಭಿನಯಸಿ ಅತ್ಯುತ್ತಮ ರಾಷ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡ ಬಾಲಕನ ಹೆಸರು ಕೆ.ಮನೋಹರ್. ಮನೋಹರ್ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಡಲಬಂಡೆ ಗ್ರಾಮದ ನಿವಾಸಿ. ಕೃಷ್ಣಪ್ಪ-ಗಾಯಿತ್ರಮ್ಮ ದಂಪತಿಯ ಪುತ್ರ. ಬದುಕಿನ ಬಂಡಿಗೆ ಕೂಲಿ ಅರಸಿ ಬೆಂಗಳೂರಿನ ಮಹಾನಗರಕ್ಕೆ ಬಂದವರು. ಈ ವೇಳೆ ಜಕ್ಕೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಮನೋಹರ್‍ಗೆ ‘ರೈಲ್ವೇ ಚಿಲ್ಡ್ರನ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

    ಕಾರಣಾಂತರಗಳಿಂದ ಮನೆ ಬಿಟ್ಟು ಹೋಗೋ ಬಹುತೇಕ ಬಾಲಕರು ರೈಲ್ವೇ ಸ್ಟೇಷನ್ ಸೇರಿ ಮಾದಕ ವಸ್ತುಗಳ ಚಟಕ್ಕೆ ದಾಸಾರಾಗಿ ಬದಕು ಹಾಳೋ ಮಾಡಿಕೊಳ್ಳೋ ಹುಡುಗರ ಬದುಕಿನ ಕಥೆ ಅನಾವಾರಣ ಮಾಡಿದ ಸಿನಿಮಾ ಕಥೆ. ಹೀಗಾಗಿ ಮನೆ ಬಿಟ್ಟು ಬರುವ ಬಾಲಕರ ಮನಃ ಪರಿವರ್ತನೆಗೆ ಅಂತಲೇ ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಮಾಡಲಾದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮನೋಹರ್ ಮಾಡಿದ್ದನು.

    ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡದುಕೊಂಡಿರೋ ಮನೋಹರ್ ಸದ್ಯ ದೊಡ್ಡಬಳ್ಳಾಪುರದ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿದ್ದು, ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವ್ಯಾಸಂಗ ಮಾಡಲಿದ್ದಾನೆ. ತೋಡಲಬಂಡೆ ಪುಟ್ಟ ಮನೆಯಲ್ಲಿ ವಾಸವಾಗಿರೋ ಕೃಷ್ಣಪ್ಪ ಗಾಯತ್ರಮ್ಮ ದಂಪತಿಗೆ ಮಗನ ಭವಿಷ್ಯದ್ದೇ ಚಿಂತೆ. ಮಗನ ಭವಿಷ್ಯ ಹಾಗೂ ಬದುಕಿನ ಬಂಡಿಗೆ ಊರೂರು ಅಲೆದು ಕೂಲಿ ಕೆಲಸ ಮಾಡುತ್ತಿದ್ದಾರೆ. ಮಗನಿಗೆ ಪ್ರಶಸ್ತಿಗಳು ಓಲಿದು ಬಂದಿದೆ ಆಂದ್ರೂ ಆ ಪ್ರಶಸ್ತಿಗಳ ಮೌಲ್ಯ, ಬೆಲೆ ಅರಿಯಲಾಗದಷ್ಟು ಅಮಾಯಕತನ ಈ ದಂಪತಿಯದು.

    ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನನಾಗಿರೋ ಮನೋಹರ್ ಗೂ ಮುಂದೆ ತಾನು ಏನು? ಹೇಗೆ? ತನ್ನ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಪ್ರಶ್ನೆ ಕಾಡ್ತಿದೆ. ಹೀಗಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದ್ಬುತ ನಟನೆಯಿಂದ ಅತ್ಯುನ್ನುತ ಪ್ರಶಸ್ತಿ ಗಳಿಸಿಕೊಂಡಿರೋ ಬಾಲಕನ ಭವಿಷ್ಯಕ್ಕೆ ಸಹೃದಯ ಕನ್ನಡಿಗರು ಸಹಾಯ ಮಾಡಬೇಕಿದೆ. ಮನೋಹರ್ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಕಲೆ, ನಟನೆ, ಅಭಿನಯದ ಸಿನಿಮಾ ರಂಗದ ಶಿಕ್ಷಣ ಕೂಡ ದೊರಕುವಂತಹ ಕೆಲಸ ಆಗಬೇಕಿದೆ.

    ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ. ಆದ್ರೆ ಬಡತನದಿಂದ ಮನೋಹರ್ ಪ್ರತಿಭೆ ಬಾಡಿ ಹೋಗದಿರಲಿ. ಸಹೃದಯಿ ದಾನಿಗಳು, ಮನೋಹರ್ ಸಹಾಯಕ್ಕೆ ಸಾಥ್ ಕೊಟ್ಟು ಅವನ ಭವಿಷ್ಯ ಉಜ್ವಲವಾಗುವಂತೆ ಮಾಡಲಿ ಎಂಬುದೇ ನಮ್ಮ ಆಶಯ.

    https://www.youtube.com/watch?v=7HIYFNqTRMI

     

  • ಹಳ್ಳಿ ಹೈದನಿಗೆ ಒಲಿದು ಬಂತು ರಾಷ್ಟ್ರ ಪ್ರಶಸ್ತಿ

    ಹಳ್ಳಿ ಹೈದನಿಗೆ ಒಲಿದು ಬಂತು ರಾಷ್ಟ್ರ ಪ್ರಶಸ್ತಿ

    – ರೈಲ್ವೇ ಚಿಲ್ಡ್ರನ್ ಚಿತ್ರದ ಅಭಿನಯಕ್ಕೆ ಮನೋಹರ್‍ಗೆ ಪ್ರಶಸ್ತಿ

    ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ 64 ನೇ ರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಅದರಲ್ಲಿ ಶ್ರೇಷ್ಠ ಬಾಲ ನಟ ಪ್ರಶಸ್ತಿ ಕನ್ನಡಿಗನ ಪಾಲಾಗಿದೆ. ಕುಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಾಲಕ ಕೆ ಮನೋಹರ್ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಕನ್ನಡಿಗರ ಖುಷಿಗೆ ಕಾರಣವಾಗಿದ್ದಾನೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೋಡಲಬಂಡೆ ಗ್ರಾಮದ ಮನೋಹರ್, ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಕೃಷ್ಣಪ್ಪ ಗಾಯತ್ರಿ ದಂಪತಿಯ ಪುತ್ರ. ಬಡ ಕುಟುಂಬದಲ್ಲಿ ಜನಿಸಿರುವ ಈ ಬಾಲಕನ ಕಲಾ ಪ್ರತಿಭೆಗೆ ಇದೀಗ ರಾಷ್ಟ್ರ ಮಟ್ಟದ ಅತ್ಯುನ್ನತ ಬಾಲ ನಟ ಪ್ರಶಸ್ತಿ ಒಲಿದು ಬಂದಿದೆ.

    `ರೈಲ್ವೆ ಚಿಲ್ಡ್ರನ್’ ಎಂಬ ಸಿನಿಮಾದಲ್ಲಿ ನಟನೆ ಮಾಡಿರುವ ಮನೋಹರ್‍ನ ಮನೋಜ್ಞ ಆಭಿನಯಕ್ಕೆ ಈ ಪ್ರಶಸ್ತಿ ಬಂದಿದೆ. ಈತ ಯಲಹಂಕ ಬಳಿಯ ಜಕ್ಕೂರು ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುವಾಗ `ರೈಲ್ವೆ ಚಿಲ್ಡ್ರನ್’ ಸಿನಿಮಾದ ನಿರ್ದೇಶಕ ಪೃಥ್ವಿ ಕೊಕನೂರು ಶಾಲೆಗೆ ಭೇಟಿ ನೀಡಿದ್ರು. ತನ್ನ ಸಿನಿಮಾಕ್ಕೆ ಕೆಲ ಬಾಲಕರನ್ನ ಆಯ್ದುಕೊಂಡು ಆಡಿಷನ್ ಮಾಡಿದ್ರು. ಅಗ ಅಂತಿಮ ಸುತ್ತಿನಲ್ಲಿ ಮನೋಹರ್ ಆಯ್ಕೆಯಾಗಿದ್ದ.

    ನಟನೆಯ ಗಂಧ-ಗಾಳಿಯೇ ಗೊತ್ತಿಲ್ಲದ ಮನೋಹರ್‍ಗೆ ಸಿನಿಮಾದಲ್ಲಿ ನಟನೆ ಮಾಡೋದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದ್ರೆ ಚಿತ್ರತಂಡ ಮತ್ತು ಡಾನ್ ಬಾಸ್ಕೊ ಸಂಸ್ಥೆ ಕೊಟ್ಟ ತರಬೇತಿಯಿಂದ ನಟನೆ ಮಾಡೋದು ಸುಲಭವಾಯ್ತಂತೆ. ಸದ್ಯ ಮನೋಹರ್ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮುಗಿಸಿದ್ದು ಮುಂದಿನ ಶೈಕ್ಷಣಿಕ ಸಾಲಿನಿಂದ 10 ನೇ ತರಗತಿಗೆ ಸೇರಲಿದ್ದಾನೆ.

    ಶಾಲೆಯ ಪಕ್ಕದಲ್ಲಿರುವ ಹಾಸ್ಟೆಲ್ ನಲ್ಲಿ ನೆಲೆಸಿ ವಿದ್ಯಾಭ್ಯಾಸ ಮಾಡುತ್ತಿರೋ ಮನೋಹರ್, ಸಿನಿಮಾದಲ್ಲಿ ನಟನೆ ಮಾಡಿ ಎರಡು ವರ್ಷಗಳೇ ಕಳೆದು ಹೋಗಿತ್ತು. ಕನಸಿನಲ್ಲೂ ತನಗೆ ಪ್ರಶಸ್ತಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇದೀಗ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರೋದು ತನ್ನ ಖುಷಿಗೆ ಕಾರಣವಾಗಿದೆ ಅಂತಾನೆ.

    ಒಟ್ಟಿನಲ್ಲಿ ಮನೋಹರ್‍ನ ಈ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಬೆಟ್ಟದ ಹೂವು ಸಿನಿಮಾಗೆ ಪುನೀತ್ ರಾಜ್ ಕುಮಾರ್ ರಾಷ್ಟ್ರ ಮಟ್ಟದ ಬಾಲ ನಟ ಪ್ರಶಸ್ತಿ ಪಡೆದಿದ್ದರು. ಅದೇ ರೀತಿ ಇಂದು ಮನೋಹರ್ ರಾಷ್ಟ್ರ ಮಟ್ಟದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದು ಕರುನಾಡ ಕೀರ್ತಿ ಪತಾಕೆಯನ್ನ ಹಾರಿಸಿದ್ದಾನೆ.