Tag: Raigarh

  • ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ರಾಯ್ಪುರ: 18 ವರ್ಷದ ಮಗನನ್ನು ಕೊಂದು ಆತನ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಅಪಘಾತವಾಗಿ (Accident) ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ಛತ್ತಿಸ್‌ಗಢದ (Chattisgarh) ರಾಯ್‌ಗಢ (Raigarh) ಜಿಲ್ಲೆಯಲ್ಲಿ ನಡೆದಿದೆ.

    ಲೈಲುಂಗಾ (Lailunga) ಪೊಲೀಸ್ ಠಾಣಾ ವ್ಯಾಪ್ತಿಯ ಲೋಹದಪಾನಿ ಗ್ರಾಮದ ನಿವಾಸಿ ಕುಹ್ರು ಸಿಂಗರ್ ಅವರ ಪುತ್ರ ಟೆಕ್ಮಣಿ ಪೈಕಾರ ಅವರ ಮೃತದೇಹ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಪತ್ತೆಯಾಗಿದೆ ಎಂದು ಲೈಲುಂಗಾ ಉಪವಿಭಾಗಾಧಿಕಾರಿ ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣ – ಮೂವರು ಅರೆಸ್ಟ್

    CRIME 2

    ಬೈಕ್ ಅಪಘಾತವಾಗಿ ಟೆಕ್ಮಾಣಿ ಸಾವನ್ನಪ್ಪಿದ್ದಾರೆ ಎಂದು ಮೃತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದರು. ಪ್ರಥಮ ಪಿಯುಸಿ ಓದುತ್ತಿದ್ದ ಟೆಕ್ಮಾಣಿ ಹಾಸ್ಟೆಲ್‌ನಿಂದ ಮನೆಗೆ ಬಂದಿದ್ದು, ಮತ್ತೆ ಬೈಕಿನಲ್ಲಿ ಹಿಂದಿರುಗಿದ್ದಾನೆ. ಬಳಿಕ ತಮ್ಮ ಮನೆಯ ಸಮೀಪವಿರುವ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮೃತನ ತಾಯಿ ಕರಮವತಿ ಪೈಕಾರ (40) ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರ ಕಪ್ಪಗಿದ್ದಾನೆ, ನನಗಿಂತ ತುಂಬಾ ವಯಸ್ಸಾಗಿದೆ- ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಮೃತನ ಮರಣೋತ್ತರ ಪರೀಕ್ಷೆಯು ಆತನ ದೇಹದಲ್ಲಿ ಗಂಭೀರವಾದ ಗಾಯಗಳನ್ನು ಬಹಿರಂಗಪಡಿಸಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೃತನ ಮನೆಯಲ್ಲಿ ತನಿಖೆ ನಡೆಸಿದಾಗ ಮನೆಯ ಅಲ್ಲಲ್ಲಿ ಹೊಸದಾಗಿ ಪೈಂಟ್‌ಗಳನ್ನು ಮಾಡಿಸಲಾಗಿತ್ತು. ಅಲ್ಲದೇ ಮನೆಯ ಅಂಗಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇದು ಮನುಷ್ಯನ ರಕ್ತ ಎಂದು ದೃಢಪಟ್ಟಿದೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

    ಈ ಕುರಿತು ಪೋಷಕರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಗನಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲದೇ ಇದ್ದುದ್ದರಿಂದ ಹಾಸ್ಟೆಲ್‌ನಿಂದ ಮನೆಗೆ ಬಂದ ತಕ್ಷಣ ಆತನಿಗೆ ಹೊಡೆದಿದ್ದೇನೆ. ಇದರಿಂದ ಆತ ಮೃತಪಟ್ಟಿದ್ದು ಆತನ ಮೃತದೇಹ ಹಾಗೂ ಬೈಕನ್ನು ರಸ್ತೆ ಪಕ್ಕ ಇರಿಸಿ ಕೊಲೆಯನ್ನು ಮರೆಮಾಚುವ ಪ್ರಯತ್ನ ಮಾಡಿದ್ದೇವೆ ಎಂದು ಮೃತನ ತಂದೆ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

    ಮಗನನ್ನು ಹತ್ಯೆಗೈದ ಪೋಷಕರನ್ನು ಬಂಧಿಸಿ ಕೊಲೆ, ಸಾಕ್ಷ್ಯ ನಾಶಪಡಿಸುವಿಕೆ ಮತ್ತು ಇತರ ಅಪರಾಧಗಳ ಆರೋಪವನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

  • ಬಹು ಮಹಡಿ ಕಟ್ಟಡ ಕುಸಿತ- 15 ಜನರ ರಕ್ಷಣೆ, ಅವಶೇಷದಡಿ ಸಿಲುಕಿದ 70 ಮಂದಿ

    ಬಹು ಮಹಡಿ ಕಟ್ಟಡ ಕುಸಿತ- 15 ಜನರ ರಕ್ಷಣೆ, ಅವಶೇಷದಡಿ ಸಿಲುಕಿದ 70 ಮಂದಿ

    -ಎನ್‍ಡಿಆರ್‍ಎಫ್ ತಂಡದಿಂದ ಕಾರ್ಯಾಚರಣೆ

    ಮುಂಬೈ/ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ನಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿತವಾಗಿದೆ. ಸದ್ಯ 15 ಜನರನ್ನು ರಕ್ಷಿಸಲಾಗಿದ್ದು, ಸುಮಾರು 70 ಮಂದಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ವರದಿಯಾಗಿದೆ.

    ಘಟನಾ ಸ್ಥಳಕ್ಕೆ ಮೂರು ಎನ್‍ಡಿಆರ್‍ಎಫ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಸಂಜೆ ಸುಮಾರು 6.30ಕ್ಕೆ ಮಹಾಡ್ ನಲ್ಲಿಯ ತಹಸೀಲ್ ನ ಕಾಜಲಪುರ ಇಲಾಖೆಯಲ್ಲಿಯ 5 ಮಹಡಿ ಕಟ್ಟಡವೊಂದು ಬಿದ್ದಿದೆ.ಸದ್ಯ ಅವಶೇಷಗಳಡಿ 50 ಜನರು ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಲ್ಲ ಉಪಕರಣಗಳ ಜೊತೆ ಎನ್‍ಡಿಆರ್‍ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ತಿಂಗಳು ಮುಂಬೈನಲ್ಲಿ ನಿರಂತರ ಮಳೆಯಿಂದ ಬಹುಮಹಡಿ ಕಟ್ಟಡ ಬಿದ್ದಿತ್ತು. ಈ ಘಟನೆಯಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದರು. ಶನಿವಾರ ರಾತ್ರಿ ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಕುಸಿದು ಇಬ್ಬರು ಗಾಯಗೊಂಡಿದ್ದರು.

  • ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    ವಿಶಾಖಪಟ್ಟಣಂ ವಿಷಾನಿಲ ದುರಂತದ ಬೆನ್ನಲ್ಲೇ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್

    – 7 ಮಂದಿ ಅಸ್ವಸ್ಥ, ಮೂವರ ಸ್ಥಿತಿ ಗಂಭೀರ

    ರಾಯಗಢ: ವಿಶಾಖಪಟ್ಟಣಂನಲ್ಲಿ ವಿಷಾನಿಲ ಸೋರಿಕೆಯಾಗಿ 11 ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಅಸ್ವಸ್ಥಗೊಂಡ ಬೆನ್ನಲ್ಲೇ ಇದೀಗ ಛತ್ತೀಸಗಢದಲ್ಲೂ ಗ್ಯಾಸ್ ಲೀಕ್ ಆಗಿ 7 ಮಂದಿ ಅಸ್ವಸ್ಥಗೊಂಡಿರುವ ದುರ್ಘಟನೆ ನಡೆದಿದೆ.

    ಛತ್ತೀಸಗಢದ ರಾಯಗಢ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೇಪರ್ ಮಿಲ್ ಅನ್ನು ಶುದ್ಧಿಕರಿಸುತ್ತಿದ್ದ ವೇಳೆ ವಿಷಾನಿಲ ಸೋರಿಕೆಯಾಗಿ ಏಳು ಮಂದಿ ಕಾರ್ಮಿಕರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಯ ಬಗ್ಗೆ ನಮಗೆ ಪೇಪರ್ ಮಿಲ್ ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ಆದರೆ ಆಸ್ಪತ್ರೆಯಿಂದ ನಾವು ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇವೆ ಎಂದು ರಾಯಗಢದ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಇಷ್ಟು ದಿನ ಪೇಪರ್ ಮಿಲ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ಸಡಿಲಗೊಂಡು ಕಾರ್ಖಾನೆ ತೆರೆಯಲು ಸರ್ಕಾರ ಅವಕಾಶ ನೀಡಿದ ಹಿನ್ನೆಲೆ ಬುಧವಾರ ಸಂಜೆ ಮಿಲ್ ಅನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಆಗ ರಾತ್ರಿ ವೇಳೆ ವಿಷಾನಿಲ ಸೋರಿಕೆ ಆಗಲು ಆರಂಭವಾಗಿತ್ತು.

    ಇಂದು ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್.ಆರ್.ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಹಳ್ಳಿಗಳಿಗೂ ಹರಡಿದೆ. ಕಾರ್ಖಾನೆಯಲ್ಲಿ ಇದ್ದ ಎರಡು ಟ್ಯಾಂಕ್‍ಗಳಲ್ಲಿದ್ದ ವಿಷಾನಿಲ ಸೋರಿಕೆಯಾಗಿದ್ದು, ಒಟ್ಟು 10 ಸಾವಿರ ಟನ್ ವಿಷ ಅನಿಲ ಸೋರಿಕೆಯಾಗಿದೆ.

    ಕಾರ್ಖಾನೆಯ ವಿಷ ಅನಿಲ ಸೋರಿಕೆ ದುರಂತ ಒಟ್ಟು 11 ಮಂದಿಯನ್ನು ಬಲಿಪಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳೀವೆ. ಇದರ ಜೊತೆ ಸುಮಾರು 180 ಮಂದಿಯ ಸ್ಥಿತಿ ಗಂಭೀರವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥವಾಗಿದ್ದಾರೆ.