Tag: raicgur

  • ಸ್ಕಿಡ್ ಆಗಿ ಬಿದ್ದು ನಡುರಸ್ತೆಯಲ್ಲೇ ಧಗಧಗನೆ ಉರಿದ ಬೈಕ್- ವಿದ್ಯಾರ್ಥಿ ದಾರುಣ ಸಾವು

    ಸ್ಕಿಡ್ ಆಗಿ ಬಿದ್ದು ನಡುರಸ್ತೆಯಲ್ಲೇ ಧಗಧಗನೆ ಉರಿದ ಬೈಕ್- ವಿದ್ಯಾರ್ಥಿ ದಾರುಣ ಸಾವು

    ರಾಯಚೂರು: ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯ ಬಳಿ ಬೈಕ್ ಅಪಘಾತವಾಗಿದ್ದು, ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಮೃತನನ್ನ ಯರಮರಸ್ ಗ್ರಾಮದ 23 ವರ್ಷದ ವಿಜಯ್ ಕುಮಾರ್ ಅಂತ ಗುರುತಿಸಲಾಗಿದೆ. ಮೃತ ಯುವಕ ಕೃಷಿ ವಿವಿಯಲ್ಲಿ ಮೊದಲ ವರ್ಷದ ಎಂಎಸ್ಸಿ ಅಗ್ರಿ ಓದುತ್ತಿದ್ದನು.

    ಮಂಗಳವಾರ ರಾತ್ರಿ ವಿವಿ ಆವರಣದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಾಯಚೂರು ಲಿಂಗಸುಗೂರು ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಬೈಕ್ ಉರಿದಿದೆ.

    ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.