Tag: rahulgandhi

  • ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನವದೆಹಲಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ  (Social Media) ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ತನ್ನು (Biscuit )ನೀಡಿದ್ದಾರೆ. ಆದರೆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ:  ಕೇಂದ್ರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಮಂಡನೆ

    ಘಟನೆ ಕುರಿತು ಬಿಜೆಪಿ ನಾಯಕಿ ಪಲ್ಲವಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ, ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವೀಯ ಅವರು ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಬರೆದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಹೈಕೋರ್ಟ್‌ ಆದೇಶ

  • ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ 54 ಕೋಟಿ ಹಣ ಬಿಡುಗಡೆಗೆ ಆದೇಶ – ಇದು ಸ್ವಾಭಿಮಾನಕ್ಕೆ ಧಕ್ಕೆ ಎಂದ ಡಿಕೆಶಿ

    ಬೆಳಗಾವಿ: ಕರ್ನಾಟಕ ರಾಜ್ಯದ 865 ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ (Maharashtra Government) 54 ಕೋಟಿ ರೂ. ಬಿಡುಗಡೆಗೆ ಆದೇಶ ಹೊರಡಿಸಿದೆ. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾರ್ಚ್ 20ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದೆ. ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಹಾತ್ಮ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿದ ಜಾಗವೇ ಬೇಕು ಅಂತಾ ಅವರು ಬೆಳಗಾವಿ (Belagavi) ಆಯ್ಕೆ ಮಾಡಿಕೊಂಡಿದ್ದಾರೆ. ಯಾವ ವಿಚಾರ ಇಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರು ಅನ್ನೋದನ್ನ ತಿಳಿಸಲಿದ್ದಾರೆ. ಆ ಮೂಲಕ ನಮಗೆ ಶಕ್ತಿ ತುಂಬಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಡಿ.ಕೆ ಶಿವಕುಮಾರ್ ಸ್ಪರ್ಧಿಸಲಿ – ಸ್ಥಳೀಯ ಕಾಂಗ್ರೆಸ್ ನಾಯಕರ ಮನವಿ

    ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಸಂವಿಧಾನದ ಅಡಿಯಲ್ಲಿ ಕೆಲಸ ಮಾಡ್ತಿದ್ದೇವೆ. ಇವತ್ತು ನಮ್ಮ ನೆಲ, ಜಲ, ಭಾಷೆ, ಗಡಿ ಇವೆಲ್ಲ ನಿಗದಿಯಾಗಿದೆ. ನಾವೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಾಗಿ ಬದುಕುತ್ತಿದ್ದೇವೆ. ಗಡಿವಿವಾದ ಮಹಾಜನ್ ವರದಿಯಲ್ಲಿ ತೀರ್ಮಾನ ಆಗಿದೆ. ನಮ್ಮ ರಾಜ್ಯ ಈ ಭಾಗಕ್ಕೆ ಶಕ್ತಿ ಕೊಡಲು ಸುವರ್ಣಸೌಧ ಕಟ್ಟಿ ಈ ಭಾಗದ ಹಿತಕ್ಕಾಗಿ ಇಡೀ ರಾಜ್ಯದ ಶಾಸಕರು ಬಂದು ಇಲ್ಲಿಯ ಸಮಸ್ಯೆ ಚರ್ಚಿಸಿ ಪರಿಹಾರಕ್ಕೆ ಬಂದಿದ್ದೇವೆ. ಗಡಿ ಜಿಲ್ಲೆಯಲ್ಲಿ ಧರ್ಮ ಇರಲಿ, ಭಾಷೆ ಇರಲಿ ಯಾವುದೇ ತಾರತಮ್ಯ ಇಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ (BJP Government) ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಶಿವಸೇನೆ ಸರ್ಕಾರ ಇದ್ದು, ಕನ್ನಡಿಗರನ್ನು ಕೆಣಕಿ ಶಾಂತಿಭಂಗಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಸೌಹಾರ್ದಯುತ ಕೆಲಸ ಮಾಡ್ತಿದ್ದೀವಿ. ಆದರೆ ಇವತ್ತು ಮಹಾರಾಷ್ಟ್ರ ಸರ್ಕಾರ ಇಲ್ಲಿಯ 800ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಕೊಡಲು ತೀರ್ಮಾನ ಮಾಡಿದೆ. 865 ಹಳ್ಳಿಗಳಿಗೆ 54 ಕೋಟಿ ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ. ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾನು ಸಿಎಂಗೆ ಹೇಳೋದಿಷ್ಟೆ. ನಮ್ಮ ರಾಜ್ಯದ ಸ್ವಾಭಿಮಾನವನ್ನ ನೀವು ಅಡ ಇಟ್ಟಿದ್ದೀರಿ. ನಿಮ್ಮ ಅಧಿಕಾರಕ್ಕಾಗಿ ಯಾರೂ ಬೇಕಾದರೂ ಇಲ್ಲಿ ಆಡಳಿತ ನಡೆಸಬಹುದು ಅಂದುಬಿಟ್ಟಿದ್ದೀರಿ. ಕೂಡಲೇ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನ ವಜಾ ಮಾಡಬೇಕು. ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ಬೆಂಬಲ ಕೊಡುತ್ತಿದೆ. ಸಂವಿಧಾನದ ಆರ್ಟಿಕಲ್ 356 ಪ್ರಕಾರ ಮಹಾರಾಷ್ಟ್ರ ಸರ್ಕಾರವನ್ನೂ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಸಹ ನಾವು ಪಂಜಾಬ್, ತಮಿಳುನಾಡು, ಕೇರಳಕ್ಕೆ ಹೋಗಿ ದರ್ಬಾರ್ ಮಾಡೋಕೆ ಆಗಲ್ಲ. ಏನಾದರೂ ಸಮಸ್ಯೆ ಇದ್ರೆ ನೀರು ಇಲ್ಲದಾಗ ನೀರು, ವಿದ್ಯುತ್ ಇಲ್ಲದಿದ್ದಾಗ ವಿದ್ಯುತ್ ಸೌಲಭ್ಯ ಕೊಡುವುದು ನಡೆದುಕೊಂಡು ಬಂದಿದೆ. ಆದ್ರೆ ಅವರ ಹಣ ತಂದು ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡೋದು ಖಂಡನೀಯ. 26 ಜನ ಲೋಕಸಭಾ ಸದಸ್ಯರು, ಈ ಭಾಗದಲ್ಲಿ 5-6 ಮಂದಿ ಸಚಿವರಿದ್ದಾರೆ. ಇವರೆಲ್ಲ ಸ್ವಾಭಿಮಾನ ಉಳಿಸಿಕೊಳ್ಳಲು ಪ್ರಯತ್ನ ಮಾಡಿಲ್ಲ. ಅವರೆಲ್ಲ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರವನ್ನ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಇದು ನೆಹರೂ ಭಾರತವಲ್ಲ.. ಮೋದಿ ಭಾರತ – ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

    ಇದು ನೆಹರೂ ಭಾರತವಲ್ಲ.. ಮೋದಿ ಭಾರತ – ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

    ನವದೆಹಲಿ: ಗಡಿಯಲ್ಲಿ ಚೀನಾ (China) ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ನಿದ್ರಿಸುತ್ತಿದೆ ಎಂದು ಟೀಕಿಸಿದ್ದ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಗೆ (Rahul Gandhi) ಇದು ನೆಹರೂ (Jawaharlal Nehru) ಭಾರತವಲ್ಲ ಮೋದಿ ಭಾರತ ಎಂದು ಬಿಜೆಪಿ (BJP) ತಿರುಗೇಟು ನೀಡಿದೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಮಾಧ್ಯಮಗೋಷ್ಠಿ ನಡೆಸಿ ರಾಹುಲ್ ಗಾಂಧಿ, ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‍ನಲ್ಲಿ ಉಭಯ ದೇಶಗಳ ಸೈನಿಕರು ಕಾದಾಡಿದ ಬಳಿಕ ಈ ಬಗ್ಗೆ ಆತಂಕ ಮೂಡುತ್ತಿದೆ. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ. ಅತಿಕ್ರಮಣಕ್ಕೆ ಅಲ್ಲ, ಯುದ್ಧಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅವರ ಬಳಿ ಇರುವ ಅಸ್ತ್ರಗಳ ಮಾದರಿ ನೋಡಿ. ಅವರು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಆದರೆ ಇದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ನಮ್ಮ ಸರ್ಕಾರ ಯುದ್ಧ ಸನ್ನಿವೇಶವನ್ನು ಅಲ್ಲಗಳೆಯುತ್ತಿದೆ. ಇದನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದು ಟೀಕಿಸಿದ್ದರು. ಇದನ್ನೂ ಓದಿ: ಚೀನಾ ಯುದ್ಧ ತಯಾರಿ ನಡೆಸುತ್ತಿದೆ – ನಮ್ಮ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

    ಇದೀಗ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ (Rajyavardhan Singh Rathore) ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಅವರ ಅಜ್ಜ ಮಲಗಿದ್ದರು. ಅವರು ನಿದ್ದೆ ಮಾಡುವಾಗ ಭಾರತದ 37 ಸಾವಿರ ಚದರ ಕಿ.ಮೀ. ಪ್ರದೇಶ ಚೀನಾ ಪಾಲಾಗಿತ್ತು. ಆ ನಂತರ ರಾಹುಲ್ ಗಾಂಧಿ ಚೀನಾದೊಂದಿಗೆ ಸ್ನೇಹ ಬೆಳೆಸಬೇಕು ಎಂದು ಭಾವಿಸಿದ್ದರು. ಈಗ ಸ್ನೇಹವು ಅದೆಷ್ಟು ಆಳವಾಗಿದೆ ಎಂದರೆ, ಚೀನಾ ಏನು ಮಾಡುತ್ತಿದೆ ಎಂಬುದು ಅವರಿಗೆ ಮೊದಲೇ ಗೊತ್ತಿದೆ. ರಾಜೀವ್ ಗಾಂಧಿ ಫೌಂಡೇಶನ್ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ 1.35 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈಗ ಮೊದಲಿನಂತಿಲ್ಲ, ಭಾರತ ಬದಲಾಗಿದೆ. ಇದು ನೆಹರೂ ಭಾರತ ಅಲ್ಲ.. ಮೋದಿ ಭಾರತ. ದೇಶವನ್ನು ರಕ್ಷಿಸಲು ಸೇನೆಗೆ ಮುಕ್ತ ಅವಕಾಶವಿದೆ. ನಮ್ಮ ಸೈನ್ಯವು ಆಕ್ರಮಣ ನಡೆಸಿದರೆ ಸುಮ್ಮನಿರಲ್ಲ. 2014ರ ಬಳಿಕ ನಮ್ಮ ಸೈನ್ಯ ಗಡಿಯ ಭದ್ರತೆಯನ್ನು ಬಹಳ ಕಟ್ಟುನಿಟ್ಟಿನಿಂದ ಮಾಡುತ್ತಿದೆ. ಸರ್ಕಾರ ಸೈನ್ಯಕ್ಕೆ ಸಂಪೂರ್ಣ ಅವಕಾಶ ನೀಡುತ್ತಿದೆ ಎಂದರು. ಇದನ್ನೂ ಓದಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    ರಾಹುಲ್ ಗಾಂಧಿ ಗಡಿ ಘರ್ಷಣೆ ಕುರಿತು ಮಾತನಾಡುತ್ತಾ, ಚೀನಾ ನಮ್ಮ ದೇಶದ ಮೇಲೆ ದಾಳಿ ನಡೆಸಲು ಸಿದ್ಧವಾಗುತ್ತಿದೆ. ಚೀನಿ ಯೋಧರು ನಮ್ಮ ಯೋಧರಿಗೆ ಹೊಡೆಯುತ್ತಿದ್ದಾರೆ. ಇದರಿಂದ ಚೀನಾದ ಬೆದರಿಕೆ ನಮಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ ಸರ್ಕಾರ ಅದನ್ನು ನಿರ್ಲಕ್ಷಿಸುತ್ತಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ ದಾಳಿಗೆ ತಯಾರಿ ನಡೆಸುತ್ತಿದೆ. ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಚೀನಿ ಸೈನಿಕರು 17,000 ಅಡಿ ಎತ್ತರದ ಶಿಖರದ ತುದಿಗೆ ಪ್ರವೇಶಿಸಲು ಪ್ರಯತ್ನಿಸಿ, ಭಾರತೀಯ ಪೋಸ್ಟ್ ಅನ್ನು ಕಿತ್ತುಹಾಕಲು ಯತ್ನಿಸಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್ ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ ಪೈಪೋಟಿ – ಆಪ್ ಅಸ್ತಿತ್ವಕ್ಕಾಗಿ ಹೋರಾಟ

    ಗುಜರಾತ್ ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ ಪೈಪೋಟಿ – ಆಪ್ ಅಸ್ತಿತ್ವಕ್ಕಾಗಿ ಹೋರಾಟ

    ಗಾಂಧೀನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Assembly polls) ದಿನಾಂಕ ಘೋಷಣೆಯಾಗಿದೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೂ ಆರು ತಿಂಗಳು ಮುನ್ನವೇ ಕಾಂಗ್ರೆಸ್ (Congress), ಬಿಜೆಪಿ (BJP) ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಈ ಬಾರಿ ಆಪ್ (AAP) ಅಸ್ತಿತ್ವಕ್ಕಾಗಿ ಹೋರಾಟ ಆರಂಭಿಸಿದೆ.

    ಆಪ್ ಕೂಡಾ ಸಾಕಷ್ಟು ಕ್ರಿಯಾಶೀಲವಾಗಿ ಕೆಲಸ ಆರಂಭಿಸಿದ್ದು, ಜನರಿಂದ ಸಿಎಂ ಅಭ್ಯರ್ಥಿಯನ್ನು ಅಯ್ಕೆ ಮಾಡುವ ಪ್ರಯತ್ನ ಮಾಡಿದೆ. ಗುಜರಾತ್ ಚುನಾವಣಾ ಅಖಾಡಕ್ಕೆ ಆಪ್ ಇಳಿದಿರುವ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಒತ್ತಡ ಹೆಚ್ಚುವಂತೆ ಮಾಡಿದ್ದು, ಆಪ್ ಯಾರ ಮತಗಳಿಗೆ ಕನ್ನ ಹಾಕಲಿದೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್‌ನಗರ ಉತ್ತರದಿಂದ ಬಿಜೆಪಿ ಟಿಕೆಟ್

    1985 ರಿಂದ 2017ರ ನಡುವಿನ ಆರು ಚುನಾವಣೆಗಳಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಾಗಿ ನಲವತ್ತರ ಗಡಿ ದಾಟಿದೆ. ಆದರೆ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. ಇದು ಮೂವತ್ತು ಮತ್ತು ಅದಕ್ಕೂ ಹೆಚ್ಚಿನ ಮತ ಪ್ರಮಾಣವನ್ನು ಗಳಿಸಿದೆ. ಕಳೆದ ಚುನಾವಣಾ ಸಮಯದಲ್ಲಿ 40% ಅಂಕವನ್ನು ಮೀರಿದೆ. ರಾಹುಲ್ ಗಾಂಧಿ (Rahul Gandhi)  ಅವರು ಉತ್ಸಾಹಭರಿತ ಪ್ರಚಾರದ ಬಳಿಕವೂ ಕಾಂಗ್ರೆಸ್ ಚುನಾವಣೆ ಸೋತಿತು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ – ನದಿಗೆ ಹಾರಿ ಜನರ ಪ್ರಾಣ ಉಳಿಸಿದ ಮಾಜಿ ಶಾಸಕನಿಗೆ ಬಿಜೆಪಿಯಿಂದ ಟಿಕೆಟ್

    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಚಾರವನ್ನು ಹೆಚ್ಚಿಸಿದ ನಂತರ ಸೂರತ್ ಭಾಗ ಬಿಜೆಪಿಯ ರಕ್ಷಣೆಗೆ ಬಂದಿತು ಎಂದು ಹಿರಿಯ ರಾಜಕೀಯ ಪತ್ರಕರ್ತ ಇಫ್ತಿಕರ್ ಗಿಲಾನಿ ವಿಶ್ಲೇಷಿಸುತ್ತಾರೆ. 1995 ರಿಂದ ಬಿಜೆಪಿ-ಕಾಂಗ್ರೆಸ್ ನಡುವಿನ ಅಂತರವು ಹೆಚ್ಚುತ್ತಲೇ ಇತ್ತು ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಅದು ಕಡಿಮೆಯಾಗಿದೆ, 2012 ಮತ್ತು 2017 ರಲ್ಲಿ ಗಮನಾರ್ಹ ಬದಲಾವಣೆಯಾಗಿದೆ.

    ನಗರ-ಗ್ರಾಮೀಣ ವಿಭಜನೆ:
    ಇಡೀ ಗುಜರಾತ್‍ನಲ್ಲಿ ಕಾಂಗ್ರೆಸ್ ದುರ್ಬಲ ಪಕ್ಷವಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ ಎಂದು ಸ್ಥಳೀಯ ಚುನಾವಣಾ ತಜ್ಞರು ಹೇಳುತ್ತಾರೆ. ಗ್ರಾಮೀಣ ಪ್ರದೇಶವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಲ್ಲಿ, 2017ರ ಚುನಾವಣೆಯಲ್ಲಿ ಪಕ್ಷವು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‍ನ ಸಂಖ್ಯೆ 57 ರಿಂದ 71ಕ್ಕೆ ಏರಿತು. ಬಿಜೆಪಿ 77 ರಿಂದ 63 ಕ್ಕೆ ಇಳಿದಿತ್ತು. ವಿಧಾನಸಭೆ ಚುನಾವಣೆ ಬಳಿಕ ನಡೆದ 42 ನಗರ ಸ್ಥಾನಗಳ ಚುನಾವಣೆಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 14 ಮಂದಿ ಮಹಿಳೆಯರು ಸೇರಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ

    ಆದರೆ ಈ ಚುನಾವಣಾ ಫಲಿತಾಂಶದಲ್ಲಿ ಆಸಕ್ತಿದಾಯಕ ಹೊಸ ವಿಚಾರ ಸೇರ್ಪಡೆಗೊಂಡಿದೆ. ಈ ಚುನಾವಣೆಯಲ್ಲಿ ಎಎಪಿ ಮೂರನೇ ಪಕ್ಷವಾಗಿ ಹೊರ ಹೊಮ್ಮಿದೆ. ಎಎಪಿ ಪ್ರಾಥಮಿಕವಾಗಿ ನಗರ ಕೇಂದ್ರಿತ ಪಕ್ಷವಾಗಿದೆ. ಅದರ ನಾಯಕ ಅರವಿಂದ್ ಕೇಜ್ರಿವಾಲ್‍ಗೆ (Arvind Kejriwal) ಅಹಮದಾಬಾದ್, ಸೂರತ್ ಮತ್ತು ಇತರ ನಗರಗಳಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. 2021ರ ಸೂರತ್ ಮುನ್ಸಿಪಲ್ ಚುನಾವಣೆಯಲ್ಲಿ, ಎಎಪಿ ಕಾಂಗ್ರೆಸ್ ಬದಲಿಗೆ ವಿರೋಧ ಪಕ್ಷವಾಯಿತು. ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಗಾಂಧಿನಗರದಲ್ಲೂ ಕಾಂಗ್ರೆಸ್‍ಗೆ ಭಾರಿ ಹಾನಿ ಮಾಡಿದೆ. ಇದು ಎಎಪಿ ಕಾಂಗ್ರೆಸ್ ಮತಗಳನ್ನು ಕಡಿತಗೊಳಿಸುತ್ತದೆ ಮತ್ತು ಬಿಜೆಪಿಗೆ ಸಹಾಯ ಮಾಡುತ್ತದೆ ಎಂಬ ಸಾಮಾನ್ಯ ಗ್ರಹಿಕೆಗೆ ಕಾರಣವಾಗುತ್ತದೆ.

    ಆದರೆ ಎಎಪಿಯನ್ನು ಕೇವಲ ಕಾಂಗ್ರೆಸ್ ವೋಟ್ ಕಟ್ಟರ್ ಎಂದು ತಳ್ಳಿಹಾಕುವುದು ಮೂರ್ಖತನವಾಗಬಹುದು, ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ನಗರ ಪ್ರದೇಶಗಳಲ್ಲಿ ಕೆಲವು ಕಾಂಗ್ರೆಸ್ ಮತಗಳನ್ನು ಪಡೆಯಬಹುದು ಆದರೆ ಈ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಬಲಿಷ್ಠವಾಗಿಲ್ಲ ಎನ್ನುವ ಅಂಶವನ್ನು ಮರೆಯುವಂತಿಲ್ಲ. ಇಲ್ಲಿ ಆಪ್ ಕಾಂಗ್ರೆಸ್‍ಗಿಂತ ಬಿಜೆಪಿಗೂ ಹೆಚ್ಚು ಹಾನಿ ಮಾಡುವ ನಿರೀಕ್ಷೆಗಳಿದೆ.

    ನಗರ ಪ್ರದೇಶಗಳಲ್ಲಿ ಬಿಜೆಪಿಯ ಒಂದಷ್ಟು ಮತಗಳನ್ನು ಆಪ್ ಕಿತ್ತುಕೊಂಡರು ಕಾಂಗ್ರೆಸ್ ಪ್ರಬಲವಾಗಿರುವ ನಗರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಗ್ರಾಮೀಣ ಪ್ರದೇಶಗಳನ್ನು ಉಳಿಸಿಕೊಂಡು ನಗರ ಕ್ಷೇತ್ರಗಳಲ್ಲಿ ಆಪ್‍ನಿಂದ ಲಾಭವಾದಲ್ಲಿ ಕೈ ಪಡೆ ಗೆಲುವಿನ ದಡಕ್ಕೆ ಸನಿಹವಾಗಬಹುದು. ಒಂದು ವೇಳೆ ನಗರ ಭಾಗದಲ್ಲಿ ಆಪ್ ಕೆಲವು ಸ್ಥಾನಗಳನ್ನು ಗೆದ್ದರು, ಬಲಿಷ್ಠವಾಗಿರುವ ಕಾಂಗ್ರೆಸ್ ಒಟ್ಟಾಗುವ ಸಾಧ್ಯತೆಗಳಿದೆ. ಈ ಹಿಂದೆ ದೆಹಲಿಯಲ್ಲಿ ಮೈತ್ರಿ ಸರ್ಕಾರ ನಡೆಸಿದ ಉದಾಹರಣೆಯೂ ಇದೆ.

    ಕಾಂಗ್ರೆಸ್‍ಗೆ ಸವಾಲುಗಳು:
    ಬಿಜೆಪಿ ಕಳೆದ 27 ವರ್ಷಗಳಿಂದ ಸತತವಾಗಿ ಅಧಿಕಾರದಲ್ಲಿದೆ. ಪಕ್ಷಕ್ಕೆ ಸಂಪೂರ್ಣ ಜನಪ್ರಿಯತೆಯಿಲ್ಲದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಬಲದಿಂದ ಅದು ಗೆಲ್ಲಬಹುದು. ಕಳೆದ ಬಾರಿ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ರಾಹುಲ್ ಗಾಂಧಿ ಈ ಬಾರಿ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ. ಗುಜರಾತ್ ಚುನಾವಣಾ ಮಾಂತ್ರಿಕ ಅಹ್ಮದ್ ಪಟೇಲ್ ನಿಧನರಾಗಿದ್ದಾರೆ. ಸೋನಿಯಾಗಾಂಧಿ ಪೂರ್ಣ ಪ್ರಮಾಣದಲ್ಲಿ ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಹೊಸ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುಜರಾತ್‍ನಲ್ಲಿ ಪ್ರಭಾವ ಬೀರಬಲ್ಲರು ಎನ್ನಲು ಸಾಧ್ಯವಿಲ್ಲ. ಈ ನಡುವೆ ಪಾಟಿದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಬಿಜೆಪಿ ಸೇರಿದ್ದಾರೆ. ಹೀಗಾಗಿ ಸ್ಥಳೀಯ ನಾಯಕರ ಮೇಲೆ ಚುನಾವಣೆ ಹೆಚ್ಚು ಕೇಂದ್ರಿಕೃತವಾಗಿದ್ದು, ಇವುಗಳನ್ನು ಮೀರಿ ಕಾಂಗ್ರೆಸ್ ಜನರ ಮನ ಗೆಲ್ಲಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬೊಮ್ಮಾಯಿ ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ RSS ನಾಯಕರ ಪಾದಪೂಜೆ ಮಾಡಲೇಬೇಕು: ಸಿದ್ದರಾಮಯ್ಯ

    ಬೊಮ್ಮಾಯಿ ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದರೆ RSS ನಾಯಕರ ಪಾದಪೂಜೆ ಮಾಡಲೇಬೇಕು: ಸಿದ್ದರಾಮಯ್ಯ

    ಬೆಂಗಳೂರು: ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ನಿಮ್ಮ ಧಮ್, ತಾಕತ್‍ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್‌ಎಸ್‌ಎಸ್‌ (RSS) ನಾಯಕರ ಮನೆಗೆ ತೆರಳಿ ಪಾದಪೂಜೆ ಮಾಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಕಾಂಗ್ರೆಸ್ (Congress) ನಾಯಕರ ಅಕ್ರಮದ ದಾಖಲೆಗಳನ್ನು ರಾಹುಲ್ ಗಾಂಧಿ (Rahul Gandhi) ಅವರಿಗೆ ಕಳುಹಿಸಿ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಸದ್ಯಕ್ಕೆ ದೇಶದ ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರು, ರಾಹುಲ್ ಗಾಂಧಿ ಅಲ್ಲ ಎನ್ನುವುದು ನಿಮ್ಮ ನೆನಪಲ್ಲಿ ಇರಲಿ. ಇದನ್ನೂ ಓದಿ: ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್‌ ಪಟ್ಟ

    ಕಾಂಗ್ರೆಸ್ ನಾಯಕರ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಅವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸ ನಾವು ಮಾಡುತ್ತೇವೆ. ಕೊಟ್ಟ ಕುದರೆ ಏರಲಿಕ್ಕಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಗಾದೆಯನ್ನು ಮತ್ತೆ ಮತ್ತೆ ನಿಜಮಾಡಲು ಹೊರಟಿರುವ ಬೊಮ್ಮಾಯಿ ಅವರೇ, ವಿರೋಧಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲಕಳೆಯುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆದುಕೊಳ್ಳಬೇಡಿ. ಇದನ್ನೂ ಓದಿ: 137 ವರ್ಷಗಳ ಇತಿಹಾಸದಲ್ಲಿ 6 ಚುನಾವಣೆ – ಒಮ್ಮೆ ಮಾತ್ರ ಗಾಂಧಿ ಪರಿವಾರ ಸ್ಪರ್ಧೆ!

    ಅಕ್ರಮಗಳು ಯಾರ ಕಾಲದಲ್ಲಿ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದವನು ನಾನು. ಇದಕ್ಕಾಗಿಯೇ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಹಿಂದೆ ಮಾಡಿರುವ ಒತ್ತಾಯವನ್ನು ಪುನರುಚ್ಚರಿಸುತ್ತೇನೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ. ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ.

    ಸಾರ್ವಜನಿಕ ಸಭೆಗಳಲ್ಲಿ ವಿರೋಧ ಪಕ್ಷದ ವಿರುದ್ಧ ಅಬ್ಬರಿಸುತ್ತಿರುವ ನಿಮಗೆ, ನೀವು ಎರಡುವರೆ ಸಾವಿರ ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ಇಲ್ಲ. ಇದೆಂತಹ ನಿಮ್ಮ ಹೇಡಿತನ ಕಾಂಗ್ರೆಸ್ ನಾಯಕರ ಬಗ್ಗೆ ರಾಹುಲ್ ಗಾಂಧಿ ಅವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿಕೆ ಶಿವಕುಮಾರ್ (D.K Shivakumar) ವಿರುದ್ಧ ಇಡಿ (ED), ಐಟಿಗಳನ್ನು (IT) ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ್ ಗಾಂಧಿಯವರಿಗೆ ಕಳಿಸಿಬಿಡಿ ಎಂದು ಸರಣಿ ಟ್ವೀಟ್ ಮೂಲಕ ಸಿದ್ಧರಾಮಯ್ಯ ಗುಡುಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • BJPಯವರಿಗೆ ಮಾನ ಮುಚ್ಚಿಕೊಳ್ಳೋದೇ ಕಷ್ಟವಾಗಿದೆ – ದಿನೇಶ್ ಗುಂಡೂರಾವ್

    BJPಯವರಿಗೆ ಮಾನ ಮುಚ್ಚಿಕೊಳ್ಳೋದೇ ಕಷ್ಟವಾಗಿದೆ – ದಿನೇಶ್ ಗುಂಡೂರಾವ್

    ಬೆಂಗಳೂರು: ಭಾರತ್ ಜೋಡೋ (Bharat Jodo Yatra) ಯಾತ್ರೆಯ ಯಶಸ್ಸು ಕಂಡು ಬಿಜೆಪಿಯವರಿಗೆ (BJP) ತಮ್ಮ ಮಾನ ಮುಚ್ಚಿಕೊಳ್ಳುವುದೇ ಕಷ್ಟವಾಗಿದೆ ಎಂದು ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh GunduRao) ಬಿಜೆಪಿ (BJP) ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಹೆಜ್ಜೆ ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು (Rahul Gandhi) ನಿಂದಿಸಿದ್ದರು. ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ ಬಿಜೆಪಿಯವರಿಗೆ (BJP) ಕಷ್ಟವಾಗಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಮೀಕ್ಷೆ ಏನೇ ಹೇಳಿದ್ರೂ ಈ ಬಾರಿ JDSಗೆ ಅಧಿಕಾರ- HDK

    ಟ್ವೀಟ್‌ನಲ್ಲಿ ಏನಿದೆ?
    ರಾಜ್ಯದಲ್ಲಿ ಸಾಗಿದ `ಭಾರತ ಐಕ್ಯತಾ ಯಾತ್ರೆ’ ನಾವು ನಿರೀಕ್ಷಿಸದಷ್ಟು ಮಟ್ಟಿಗೆ ಅಭೂತಪೂರ್ವ ಯಶಸ್ಸು ಕಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಯಾತ್ರೆಗೆ ರಾಜ್ಯದ ಜನ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಅಭಾರಿಗಳು. ಕರ್ನಾಟಕದವರು ದ್ವೇಷದ ಆರಾಧಕರಲ್ಲ, ಪ್ರೀತಿಯ ಆರಾಧಕರು ಎಂಬುದು ಈ ಯಾತ್ರೆಗೆ ಸಿಕ್ಕ ಜನಬೆಂಬಲವೇ ಸಾಕ್ಷಿ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

    ಮೊದಲು ಅಪಮಾನಿಸುತ್ತಾರೆ, ನಂತರ ಅನುಮಾನಿಸುತ್ತಾರೆ, ಕೊನೆಗೆ ಸನ್ಮಾನಿಸುತ್ತಾರೆ ಎಂಬಂತೆ ಜೋಡೋ ಯಾತ್ರೆ ಪ್ರಾರಂಭದಲ್ಲಿ ಬಿಜೆಪಿಯವರು ಯಾತ್ರೆಯನ್ನು ಅಪಮಾನಿಸುವ ಕೆಲಸ ಮಾಡಿದ್ದರು. ಹೆಜ್ಜೆ-ಹೆಜ್ಜೆಗೂ ರಾಹುಲ್ ಗಾಂಧಿಯವರನ್ನು (Rahul Gandhi) ನಿಂದಿಸಿದ್ದರು. ಈಗ ಯಾತ್ರೆಯ ಯಶಸ್ಸು ಕಂಡು ತಮ್ಮ ಮಾನ ಮುಚ್ಚಿಕೊಳ್ಳುವುದೇ ಬಿಜೆಪಿ ಅವರಿಗೆ ಕಷ್ಟವಾಗಿದೆ.

    ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ. ಈಗಾಗಲೇ ತಮಿಳುನಾಡು (Tamilnadu), ಕೇರಳ (Kerala) ಮತ್ತು ಕರ್ನಾಟಕದಲ್ಲಿ (Kerala) ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ. ಏಕೆಂದರೆ ಇದು ಹೃದಯ ಬೆಸೆಯುವ ಯಾತ್ರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎತ್ತು ಏರಿಗೆಳೀತು ಕೋಣ ನೀರಿಗಿಳೀತು: ಬಿಜೆಪಿ ವ್ಯಂಗ್ಯ

    ಎತ್ತು ಏರಿಗೆಳೀತು ಕೋಣ ನೀರಿಗಿಳೀತು: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಎತ್ತು ಏರಿಗೆಳೀತು ಕೋಣ ನೀರಿಗಿಳೀತು. ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ (Rahul Gandhi) ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ ಎಂದು ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ (D.K Shivakumar), ಸಿದ್ದರಾಮಯ್ಯ (Siddaramaiah) ಜೋಡಿಯನ್ನು ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ಕಾಲೆಳೆದಿದೆ.

    ಎತ್ತು ಏರಿಗೆಳೀತು ಕೋಣ ನೀರಿಗಿಳೀತು. ಕರ್ನಾಟಕಕ್ಕೆ ವಿದಾಯ ಹೇಳುವ ಮುನ್ನ ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ನೆನಪಿಸುತ್ತಿದ್ದೇವೆ. ಮುಂದಿನ ಯಾತ್ರೆಗೆ ಕರ್ನಾಟಕದಲ್ಲೇ ಇಂಧನ ತುಂಬಿಸಿ. ಡಿಸೇಲ್ (Diesel) ದರ/ಲೀ. ಆಂಧ್ರಪ್ರದೇಶ – 99.15 ರೂ., ತೆಲಂಗಾಣ – 97.82 ರೂ., ರಾಜಸ್ಥಾನ – 93.72 ರೂ. ಕರ್ನಾಟಕ – 87.94 ರೂ. ಬಿಜೆಪಿಯೇತರ ರಾಜ್ಯದಲ್ಲಿ ಬೆಲೆ ಏರಿಕೆಯ ಬಿಸಿ ತಾಗಬಹುದು! ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ

    ಕೋವಿಡ್ (Covid-19) ಸಂಕಷ್ಟದ ನಡುವೆ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿದ್ದರೂ ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಅಮೆರಿಕ (America) ದೇಶಕ್ಕಿಂತಲೂ ಮುಂದಿದೆಯೆಂದು ಐಎಂಎಫ್ (IMF) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಷ್ಟರ ಮೇಲೂ, ಕಾಂಗ್ರೆಸ್ (Congress) ಭಾರತದ ಸಾಧನೆಯನ್ನು ತುಚ್ಛವಾಗಿ ಕಾಣುತ್ತಿದೆ ಎಂದರೆ ಇವರು ಜೋಡಿಸಲು ಹೊರಟಿರುವುದಾದರೂ ಏನನ್ನು?

    ಮೇಕ್ ಇನ್ ಇಂಡಿಯಾ (Make in India) ಯೋಜನೆ ಮೂಲಕ ಕೋಲಾರದಲ್ಲಿ ‘ಐ ಫೋನ್’ (IPhone) ತಯಾರಾಗುತ್ತಿದೆ. ಪೆನಕೊಂಡದಲ್ಲಿ ‘ಕಿಯಾ’ (Kia) ಕಾರು ತಯಾರಾಗುತ್ತಿದೆ. ವೈಜಾಗ್‍ನಲ್ಲಿ ‘ಶೋಮಿ’ (Xiaomi) ಮೊಬೈಲ್ ತಯಾರಾಗುತ್ತಿದೆ. ಇಟಲಿಯಿಂದ ಬಂದವರು, ತಮ್ಮ ಆಡಳಿತದ ಅವಧಿಯಲ್ಲಿ ತಮ್ಮ ಕುಟುಂಬದ ಜೋಳಿಗೆ ತುಂಬಿಸಿಕೊಂಡಿದ್ದೇ ಸಾಧನೆಯೇ? ಕಾಂಗ್ರೆಸ್ ಸರ್ಕಾರದ ಆಡಳಿತ ಸ್ವರ್ಗದಂತಿತ್ತು ಎನ್ನುವ ರಾಹುಲ್ ಗಾಂಧಿ ಅವರೇ, ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ

    ಯುಪಿಎ ಸರ್ಕಾರ – ಸಾಮಾನ್ಯ ಜನರ ಆದಾಯ 2.5 ಲಕ್ಷ ದಾಟಿದ ಕೂಡಲೇ ಆದಾಯ ತೆರಿಗೆ ಕಟ್ಟಬೇಕಿತ್ತು. ಮೋದಿ (Narendra Modi) ಸರ್ಕಾರ – ಸಾಮಾನ್ಯ ಜನರು 5 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟ ಬೇಕಿಲ್ಲ. ಯಾವುದು ಸ್ವರ್ಗದ ಆಡಳಿತ, ಯಾವುದು ನರಕದ ಆಡಳಿತ ಎಂದು ಬಿಜೆಪಿ ಪ್ರಶ್ನಿಸಿದೆ.

    ಗೊತ್ತಾಯ್ತು. ಅವರನ್ನು ನೋಡಿಯೇ ನಿಮಗೆ ಬೆವರಿಳೀತು ಎಂದು ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಪಾದಯಾತ್ರೆ ವೇಳೆ ಡಿಕೆಶಿ ಕೈಹಿಡಿದು ಓಡಿದ ರಾಹುಲ್

    ಪಾದಯಾತ್ರೆ ವೇಳೆ ಡಿಕೆಶಿ ಕೈಹಿಡಿದು ಓಡಿದ ರಾಹುಲ್

    ತುಮಕೂರು: ಭಾರತ್ ಜೋಡೋ ಯಾತ್ರೆಯಲ್ಲಿ (Bharath Jodo Yatra) ಜಡಿ ಮಳೆಗೂ ಜಗ್ಗದ ರಾಹುಲ್‌ಗಾಂಧಿ (Rahul Gandhi) ರನ್ನಿಂಗ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಹುರಿದುಂಬಿಸಿಸುತ್ತಿದ್ದಾರೆ.

    ತುಮಕೂರಿನಲ್ಲಿ (Tumkur) ರಾಹುಲ್‌ಗಾಂಧಿ ಪಾದಯಾತ್ರೆ ವೇಳೆ, ರಾಹುಲ್ ಗಾಂಧಿ ಕಾಂಗ್ರೆಸ್ ಬಾವುಟ (Congress Flag) ಹಿಡಿದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಜೊತೆ ಓಡಿದ್ದಾರೆ. ಇದನ್ನೂ ಓದಿ: ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ

    ಮೊನ್ನೆಯಷ್ಟೇ ಸಿದ್ದರಾಮಯ್ಯ (Siddaramaiah) ಜೊತೆ ಓಡಿದ್ದ ರಾಹುಲ್ ಗಾಂಧಿ, ಇಂದು ಬಸವನಗುಡಿ ಬಳಿ ಡಿಕೆ ಶಿವಕುಮಾರ್ ಕೈ ಹಿಡಿದುಕೊಂಡು ಹೈಸ್ಪೀಡ್ ರನ್ನಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೆಹಲಿ ಸಚಿವ ರಾಜೀನಾಮೆ

    ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್‌ನಷ್ಟು ದೂರ ಒಂದೇ ಸಮನೇ ಓಡಿದ್ದಾರೆ. ಈ ವೇಳೆ ರಾಹುಲ್ ಕಾಲನ್ನು ಉಳುಕಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್‌ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ, ಪ್ರಿಯಾಂಕಾ ಭಾಗಿ – ಡಿಕೆಶಿ

    ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ, ಪ್ರಿಯಾಂಕಾ ಭಾಗಿ – ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ (Congress) ನಾಯಕ ರಾಹುಲ್‌ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯಲಿರುವ ಭಾರತ್ ಜೋಡೋ (Bharath Jodo Yatra) ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮಹಾ ನಾಯಕಿಯರಾದ ಸೋನಿಯಾ ಗಾಂಧಿ (Sonia Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ (DK Shivakumar), ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಭಾರತ ಜೋಡೋ ಯಾತ್ರೆಯಲ್ಲಿ ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ದಿನಾಂಕ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ನೆಪ ಹೇಳೋ ಬದಲು PFIಯನ್ನು ನಿಷೇಧಿಸಲಿ: ದಿನೇಶ್ ಗುಂಡೂರಾವ್

    ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (KC Venugopal) ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೇವಾಲ ಅವರು ಭಾರತ ಜೋಡೋ ಯಾತ್ರೆಯ ಸಿದ್ಧತೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಈ ಯಾತ್ರೆ ಪ್ರಮುಖ 5 ವಿಚಾರಗಳನ್ನು ಒಳಗೊಂಡಿದೆ. ಈ ಯಾತ್ರೆಯಲ್ಲಿ ಎಲ್ಲಾ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಹೇಗಿರಲಿದೆ ರೂಪುರೇಷೆ?
    ರಾಜ್ಯದಲ್ಲಿ ಸೆ.30 ರಂದು ಬೆಳಗ್ಗೆ 9 ಗಂಟೆಗೆ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಅ.2 ರಂದು ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಂತರ ದಸರಾ (Mysuru Dasara) ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಯಾತ್ರೆಗೆ ಬಿಡುವು ನೀಡಲಾಗುವುದು. ಆಮೇಲೆ ಬಳ್ಳಾರಿಯಲ್ಲಿ (Bellary) ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಫಿಸಿಕಲ್ ಟ್ರೈನರ್‌ಗೆ ಉಂಗುರ ತೊಡಿಸಿ ಎಂಗೇಜ್ಡ್ ಆದ ಆಮೀರ್ ಖಾನ್ ಪುತ್ರಿ

    ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು, ರೈತರು, ನಾಗರಿಕ ಸಮುದಾಯಗಳು, ವಿದ್ಯಾರ್ಥಿಗಳು, ಬುಡಕಟ್ಟು ಜನರ ಜೊತೆ ಒಂದೊಂದು ದಿನ ಮಾತುಕತೆ ನಡೆಸಲಿದ್ದಾರೆ. ಪ್ರತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಘಟಕಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಕರೆ ತಂದ ದಿನ ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ನಾಗರಿಕ ಸಮಾಜದ ಗಣ್ಯರು, ಕಲಾವಿದರು, ಕೈಗಾರಿಕೋದ್ಯಮಿಗಳು, ಚಿಂತಕರು ಸೇರಿದಂತೆ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಯಾತ್ರೆ ಮಾರ್ಗದಲ್ಲಿ ಬರುವ ಅತಿ ದೊಡ್ಡ ನಗರ ಮೈಸೂರು ಆಗಿದ್ದು, ಮೈಸೂರು ಜನರು ಬೆಳಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಜತೆಗೆ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

    ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ (Congress Presidential Election) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ರಾಹುಲ್ ಗಾಂಧಿಯವರು ಪಕ್ಷದ ಮುಂದಾಳತ್ವ ವಹಿಸಬೇಕು ಎಂದು ನಮ್ಮ ರಾಜ್ಯದ ಎಲ್ಲಾ ನಾಯಕರ ಒತ್ತಾಸೆಯಾಗಿದೆ. ಆದರೆ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್

    ಪಕ್ಷ ಗೆದ್ದ ಬಳಿಕವೇ ಮುಖ್ಯಮಂತ್ರಿ ವಿಚಾರ – ಮುಂದಿನ ಸಿಎಂ ಚರ್ಚೆಗೆ ರಾಹುಲ್ ಗಾಂಧಿ ಬ್ರೇಕ್

    ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿದ್ದು ಸಿಎಂ ಹಾಗೂ ಡಿಕೆಶಿ ಸಿಎಂ ಕೂಗಿಗೆ ತಾತ್ಕಾಲಿಕ ವಿರಾಮ ಬಿದ್ದಂತೆ ಕಾಣ್ತಿದೆ. ಸೈಲೈನ್ಸ್ ಪ್ಲೀಸ್ ಅಂತ ಪದೇ ಪದೇ ಮುಂದಿನ ಸಿಎಂ ಎಂದು ಕೂಗುವ ಆಪ್ತ ನಾಯಕರಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಇಂತದೊಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.

    ಸಿಎಂ ಕೂಗಿಗೆ ತಾತ್ಕಾಲಿಕ ವಿರಾಮವನ್ನ ಎರಡೂ ಬಣ ಘೋಷಿಸಲು ನಿರ್ಧರಿಸಿವೆ. ಸಿದ್ದರಾಮೋತ್ಸವದ ಸಂದರ್ಭದಲ್ಲಿ ನಡೆದ ಸಿಎಂ ಕುರ್ಚಿ ಕದನಕ್ಕೆ ಹೈ ಕಮಾಂಡ್ ಒಗ್ಗಟ್ಟಿನ ಮಂತ್ರ ಭೋದಿಸಿತ್ತು. ಅದನ್ನ ಪಾಲಿಸುವಂತೆ ಇಬ್ಬರು ನಾಯಕರಿಗೂ ಹೈಕಮಾಂಡ್ ಸೂಚನೆ ನೀಡಿದೆ. ಇದನ್ನೂ ಓದಿ: ಡಿಕೆಶಿ ಕೈಎತ್ತಿದ ಬಳಿಕ ಕುಮಾರಸ್ವಾಮಿ ಅಬ್ಬೇಪಾರಿ ಆಗಿ ಬೀದಿಗೆ ಬಂದ್ರು, ಸಿದ್ದರಾಮಯ್ಯಗೂ ಇದೇ ಗತಿ: ಆರ್. ಅಶೋಕ್

    ಮುಂದಿನ ಚುನಾವಣೆಯನ್ನ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಇದಕ್ಕೆ ವ್ಯತಿರಿಕ್ತವಾದ ವಿಚಾರ ಮುಂದಿಟ್ಟುಕೊಂಡು ಆಂತರಿಕ ರಾಜಕೀಯದಲ್ಲಿ ತೊಡಗುವವರು ಅದೆಷ್ಟೇ ದೊಡ್ಡ ನಾಯಕರಾಗಿದ್ದರೂ ಹೈಕಮಾಂಡ್ ಸಹಿಸುವುದಿಲ್ಲ. ಸಿದ್ದರಾಮಯ್ಯ ಜನ್ಮ ದಿನದ ಅಮೃತ ಮಹೋತ್ಸವ ಸಮಾರಂಭದ ಹಿಂದಿನ ದಿನ ರಾಜ್ಯ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ 35 ಮಂದಿ ನಾಯಕರನ್ನು ಉದ್ದೇಶಿಸಿ ವರಿಷ್ಠ ರಾಹುಲ್ ಗಾಂಧಿ ಇಂತಹದೊಂದು ಸ್ಪಷ್ಟನಿರ್ದೇಶನ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಖರ್ಗೆ ಸಮ್ಮುಖದಲ್ಲಿ ನ್ಯಾಷನಲ್‌ ಹೆರಾಲ್ಡ್‌ ಕಚೇರಿ ಶೋಧ: ಅಧಿವೇಶನದ ಮಧ್ಯೆ ಸಮನ್ಸ್‌ ಜಾರಿಗೆ ಕಾಂಗ್ರೆಸ್‌ ಕಿಡಿ

    ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳು ಹಾಗೂ ಪಕ್ಷ ಸಂಘಟನೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ರಾಜ್ಯ ನಾಯಕರ ನಡುವೆ ನಡೆದಿರುವ ಸಿಎಂ ಹುದ್ದೆ ರೇಸ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೈಕಮಾಂಡ್ ಹೇಳಿದ್ದರೂ ರಾಜ್ಯದ ಕೆಲ ನಾಯಕರು ಹಾಗೂ ಅವರ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ವಿಚಾರವನ್ನು ಪ್ರಸ್ತಾಪಿಸಿ ಗೊಂದಲ ನಿರ್ಮಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

    ಆಗ ಮಧ್ಯಪ್ರವೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯ ದುರಾಡಳಿತದ ಬಗ್ಗೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ಇಂತಹ ಪೂರಕ ವಾತಾವರಣ ಇರುವ ಸನ್ನಿವೇಶದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಪ್ರತಿಯೊಬ್ಬರೂ ತಮ್ಮ ಗಮನ ಕೇಂದ್ರೀಕರಿಸಬೇಕು. ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಇದಕ್ಕೆ ಭಿನ್ನವಾಗಿ ಯಾರಾದರೂ ಆಂತರಿಕ ರಾಜಕೀಯದಲ್ಲಿ ತೊಡಗಿದರೆ, ಅಂತಹವರು ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಹೈಕಮಾಂಡ್‌ನ ಸಂಪೂರ್ಣ ಸಹಮತಿ ಇರುತ್ತದೆ. ಇಂತಹ ನಡವಳಿಕೆಯನ್ನು ಹೈಕಮಾಂಡ್ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]