Tag: Rahul

  • ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ಬೆಂಗಳೂರು: ಸಿಸಿಬಿ ವಶದಲ್ಲಿರುವ ರಾಹುಲ್ ನನಗೆ ಮಾತ್ರವಲ್ಲ ಸಾಕಷ್ಟು ಸಿನಿಮಾ ಸ್ಟಾರ್ ಗಳಿಗೆ ಪರಿಚಯ ಇದ್ದಾರೆ ಎಂದು ನಟಿ ಸಂಜನಾ ಗಲ್ರಾನಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಟಿ ಸಂಜನಾಳ ಅಪ್ತ ರಾಹುಲ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಜನಾ, ಮೂರು-ನಾಲ್ಕು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ನನಗೆ ಮಾತ್ರ ಅಲ್ಲ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ ಇದ್ದಾರೆ. ಆಲ್ ಮೋಸ್ಟ್ ಇಡೀ ಬೆಂಗಳೂರಿಗೆ ರಾಹುಲ್ ಪರಿಚಯ ಎಂದರು.

    ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದಾರೆ. ಇದನ್ನು ಓದಿ: ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನಾನು ತನಿಖೆಗೆ ಸಹಕರಿಸುತ್ತೇನೆ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಕಳೆದ ಡಿಸೆಂಬರ್ ಆದಮೇಲೆ ನಾನು ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ನಾನು ಅಟೆಂಡ್ ಆಗಿರೊ ಯಾವುದೇ ಪಾರ್ಟಿಗಳಲ್ಲೂ ಡ್ರಗ್ಸ್ ಇರಲಿಲ್ಲ. ಕ್ರಿಸ್ ಮಸ್ ಪಾರ್ಟಿ ಮಾಡಿದ್ದೆ ಲಾಸ್ಟ್ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನನ್ನ ಗ್ರಹಚಾರ ನಾನು ಅಂದು ಆ ಜಾಗಕ್ಕೆ ಹೋಗಬೇಕಾಗಿ ಬಂತು ಎಂದು ಡ್ರಗ್ಸ್ ಆರೋಪವನ್ನು ಸಂಜನಾ ತಳ್ಳಿ ಹಾಕಿದ್ದಾರೆ.

  • ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಗಿಣಿ ಆಪ್ತ ರವಿಶಂಕರ್ ನನ್ನು ಬಂಧಿಸಿದ್ದರೆ, ಸಂಜನಾ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆಯ ಗೆಳೆಯ ಕಾರ್ತಿಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಪ್ರಕಟವಾಗುತ್ತಿದೆ.

    ಬೆಂಗಳೂರಿನಲ್ಲಿ ಹೈಟೆಕ್ ಡ್ರಗ್ ದಂಧೆ ಮಾಡುತ್ತಿದ್ದ ಮೂವರು ಡ್ರಗ್ ಡೀಲರ್ ಗಳನ್ನು ಎನ್‍ಸಿಬಿ ಪೊಲೀಸರ ಬಂಧಿಸಿದ್ದರು. ಇವರ ಕೊಟ್ಟ ಮಾಹಿತಿ ಮೇರೆಗೆ ಈಗ ನಟಿ ಸಂಜನಾಗೆ ಅಪ್ತನಾಗಿದ್ದ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಓರ್ವ ಡ್ರಗ್ ಡೀಲರ್ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

    ರಾಹುಲ್ ಬೆಂಗಳೂರಿನ ಬನಶಂಕರಿ ನಗರದ ನಿವಾಸಿಯಾಗಿದ್ದಾನೆ. ಈತ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಈ ಕ್ಯಾಸಿನೋಗೆ ಗ್ರಾಹಕರನ್ನು ಪ್ಯಾಕೇಜ್‍ನಲ್ಲಿ ಕಳಿಸಿಕೊಡುತ್ತಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಜೊತೆಗೆ ಈತ ಪಾರ್ಟಿಗಳನ್ನು ಆಯೋಜನೆ ಮಾಡೋದರಲ್ಲಿ ಪಂಟರ್ ಆಗಿದ್ದ, ಹೀಗೆ ಒಂದು ಪಾರ್ಟಿಯಲ್ಲೇ ಸಂಜನಾಗೆ ಪರಿಚಯವಾಗಿದ್ದ. ಅಂದಿನಿಂದ ಯಾವುದೇ ಪಾರ್ಟಿಯಿದ್ದರೂ ಸಂಜನಾಗೆ ಆಹ್ವಾನ ಕೊಡುತ್ತಿದ್ದ ಎಂದು ತಿಳಿದು ಬಂದಿದೆ.

    ಶ್ರೀಲಂಕಾದಲ್ಲಿ ನಡೆದಿದ್ದ ಕ್ಯಾಸಿನೋ ಪಾರ್ಟಿಗೆ ಸಂಜನಾ ಸೇರಿದಂತೆ ಬೇರೆ ಬೇರೆ ಚಿತ್ರರಂಗದ ನಟಿಯರನ್ನು ರಾಹುಲ್ ಕರೆಸಿದ್ದ. ಸದ್ಯ ರಾಹುಲ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಸಂಜನಾಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸಮನ್ಸ್ ನೀಡುವ ಸಾಧ್ಯತೆಯಿದೆ.

    ಈತನ ಬಗ್ಗೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ್ದ ಸಂಜನಾ, ಆತ ನನ್ನನ್ನು ಅಕ್ಕ ಎಂದು ಕರೆಯುತ್ತಾನೆ. ತುಂಬ ಒಳ್ಳೆಯವನು ಮತ್ತು ಜ್ಯಾಲಿ ಮನುಷ್ಯ. ರಾಹುಲ್ ಆ ತರದ ಹುಡುಗ ಅಲ್ಲ. ನನಗೆ ಸಹೋದರಿಲ್ಲ, ಪ್ರತಿ ವರ್ಷ ನಾನು ಆತನಿಗೆ ರಾಖಿ ಕಟ್ಟುತ್ತೇನೆ. ಆತನನ್ನು ಪೊಲೀಸರು ಏಕೆ ಕರೆದುಕೊಂಡು ಹೋಗಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅಸಲಿಗೆ ಸ್ಟಾರ್ ನಟ ನಟಿಯರಲ್ಲದೆ ರಾಜಕಾರಣಿಗಳ ಮಕ್ಕಳೂ ಕೂಡ ರಾಹುಲ್‌ಗೆ ಆಪ್ತರು. ರಾಹುಲ್ ಗೆ ಶ್ರೀಲಂಕದಾ ಕ್ಯಾಸಿನೋ ಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ಲೋಕಸಭಾ ಚುನಾವಣೆ- ರಾಹುಲ್ ಗೆ ಸಿದ್ದರಾಮಯ್ಯ ಮನವಿ

    ಲೋಕಸಭಾ ಚುನಾವಣೆ- ರಾಹುಲ್ ಗೆ ಸಿದ್ದರಾಮಯ್ಯ ಮನವಿ

    ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸೀಟು ಹಂಚಿಕೆ ವಿಚಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಗೊಂದಲ ನಿರ್ಮಾಣವಾಗಿದೆ.

    ಮಂಡ್ಯ, ಹಾಸನ ಆಯ್ತು ಈಗ ಮೈಸೂರು ಬೇಕು ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಪಕ್ಷದ ಮೂಲಗಳಿಂದ ಮಾಹಿತಿ ಲಭಿಸಿದೆ.

    ಮೈಸೂರು ಲೋಕಸಭೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಅವರು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಬೇಡಿಕೆ ಇಟ್ಟಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ ಎಂದು ಬಿಟ್ಟು ಕೊಡುವುದು ಬೇಡ. ಮೈಸೂರಿನಲ್ಲಿ ಇದುವರೆಗೂ ಲೋಕಸಭೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಗೆ ಮೈಸೂರು ಕ್ಷೇತ್ರ ಬಿಟ್ಟು ಕೊಡದಂತೆ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ತವರು ಕ್ಷೇತ್ರವನ್ನು ಉಳಿಸಿಕೊಳ್ಳು ಮಾಜಿ ಸಿಎಂ ಹಠಕ್ಕೆ ಬಿದ್ದಿದ್ದಾರೆ.

  • ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ವೇಳೆ ರಮ್ಯಾ ದರ್ಪ!

    ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ವೇಳೆ ರಮ್ಯಾ ದರ್ಪ!

    ಬೆಂಗಳೂರು: ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸುವ ಮೂಲಕ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ದರ್ಪ ಮೆರೆದಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಇದು ಕೆಪಿಸಿಸಿ ಕಾರ್ಯಕ್ರಮ ಅಲ್ಲ ಎಐಸಿಸಿ ಕಾರ್ಯಕ್ರಮ ನೆನಪಿರಲಿ ಎಂದು, ಪೊಲೀಸರ ಮೂಲಕ ಮಾಧ್ಯಮದವರು ಒಳ ಪ್ರವೇಶಿಲು ತಡೆ ನೀಡಲಾಗಿದೆ. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದ ವೇಳೆಯಲ್ಲಿ ರಮ್ಯಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ಕನ್ನಡದ ಮಹಿಳಾ ಸಾಧಕಿಯರ ಜೊತೆ ರಾಹುಲ್ ಅವರ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಜವಾಬ್ದಾರಿಯನ್ನು ರಮ್ಯಾ ಅವರಿಗೆ ವಹಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಆಹ್ವಾನ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರರು ಹೇಳಿದ್ದಾರೆ.

    ಇದಕ್ಕೂ ಮುನ್ನ ರಾಹುಲ್ ಅವರು ಸತತವಾಗಿ ಎರಡು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಮಹಿಳಾ ಸಾಧಕರೊಂದಿಗಿನ ರಾಹುಲ್ ಸಂವಾದ ಕಾರ್ಯಕ್ರಮಕ್ಕೆ ಮಾತ್ರ ಮಾಧ್ಯಮಗಳ ಪ್ರವೇಶ ನಿರಾಕರಿಸಲಾಗಿದೆ.

    https://www.youtube.com/watch?v=bkjsKKPuk24

  • ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಪಣಜಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸೋನಿಯಾ ಗಾಂಧಿ ಅವರು ವಿಶಾಂತ್ರಿಗಾಗಿ ಗೋವಾಕ್ಕೆ ತೆರಳಿದ್ದು, ಈ ವೇಳೆ ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೋನಿಯಾ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ವಿಶಾಂತ್ರಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅವರು ಗೋವಾಕ್ಕೆ ವಿಶ್ರಾಂತಿ ಪಡೆಯಲು ಆಗಮಿಸಿದ್ದಾರೆ. ಜನವರಿ ಮೊದಲ ವಾರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    71 ವರ್ಷದ ಸೋನಿಯಾ ಗಾಂಧಿ ಅವರು ಸತತ 19 ವರ್ಷ ಎಐಸಿಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಡಿ.16ರಂದು ತಮ್ಮ ಮಗ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿದ್ದರು.

  • ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ಕಟಕ್: ಲಂಕಾ ವಿರುದ್ಧ ಮೊದಲ ಟಿ 20 ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 181 ರನ್ ಗಳ ಗುರಿಯನ್ನು ಪಡೆದ ಲಂಕಾ 87 ಆಲೌಟ್ ಆಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 16 ಓವರ್ ಗಳಲ್ಲಿ  ಸರ್ವಪತನ ಕಂಡಿತು. ಚಹಲ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 38 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟಾದರು. 17 ರನ್(13 ಎಸೆತ, 2 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಹೊರ ನಡೆದರು. ನಂತರ ಎರಡನೇ ವಿಕೆಟ್ ಗೆ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಪೇರಿಸಿದರು.

    ಕೆಎಲ್ ರಾಹುಲ್ 61 ರನ್(48 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ್ 24 ರನ್(20 ಎಸೆತ, 3 ಬೌಂಡರಿ) ಹೊಡೆದು ಔಟಾದರು.

    ಶ್ರೇಯಸ್ ಅಯ್ಯರ್ ಔಟಾಗುವ ವೇಳೆ ಟೀಂ ಇಂಡಿಯಾದ ಮೊತ್ತ 14.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ನಂತರ ಧೋನಿ ಮತ್ತು ಮನೀಷ್ ಪಾಂಡೆ ಕೊನೆಯ 34 ಎಸೆತದಲ್ಲಿ 68 ರನ್ ಪೇರಿಸಿದ ಪರಿಣಾಮ ಭಾರತ 180 ರನ್ ಗಳಿಸಿತು.

    ಧೋನಿ ಔಟಾಗದೇ 39 ರನ್(22 ಎಸೆತ, 4 ಬೌಂಡರಿ, 1 ಸಿಕ್ಸರ್), ಮನೀಷ್ ಪಾಂಡೆ 32 ರನ್(18 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 17ನೇ ಓವರ್ ನಲ್ಲಿ 19ರನ್ ಬಂದಿದ್ದರೆ, 18 ನೇ ಓವರ್ ನಲ್ಲಿ 9 ರನ್, 19ನೇ ಓವರ್ ನಲ್ಲಿ 21 ರನ್, 20ನೇ ಓವರ್ ನಲ್ಲಿ 12 ರನ್ ಬಂದಿತ್ತು.

     4 ಓವರ್ ಎಸೆದು 23 ರನ್ ನೀಡಿ 4 ವಿಕೆಟ್ ಪಡೆದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಟಿ20 ಪಂದ್ಯ ಇಂದೋರ್ ನಲ್ಲಿ ಶುಕ್ರವಾರ ನಡೆಯಲಿದೆ.

  • ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರೂ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ

    ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರೂ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ

    ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವು ನಾಯಕರು ಅನಿವಾಸಿ ಭಾರತೀಯ (ಎನ್‍ಆರ್‍ಐ) ಮೂಲದವರು. ಅಲ್ಲದೇ ನಮ್ಮ ಪಕ್ಷವು ಸ್ಥಾಪನೆಯಾಗಿದ್ದು ಎನ್‍ಆರ್‍ಐ ವ್ಯಕ್ತಿಯಿಂದ ಎಂದು ಕಾಂಗ್ರೆಸ್ ಉಪಧ್ಯಾಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಭಾರತದ ನೈಜ ಸ್ವಾತಂತ್ರ್ಯ ಹೋರಾಟ ನಡೆದದ್ದು ಎನ್‍ಆರ್‍ಐಗಳಿಂದ. ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಅಂಬೇಡ್ಕರ್, ಅಜಾದ್, ಪಾಟೀಲ್‍ರಂತಹ ಎಲ್ಲಾ ಹೋರಾಟಗಾರರು ಬ್ರಿಟನ್ ನಿಂದ ಹಿಂದಿರುಗಿ ಭಾರತಕ್ಕೆ ಆಗಮಿಸಿದವರು ಎಂದು ಹೇಳಿದರು.

    ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ರಾಹುಲ್ ಮಾತಾನಾಡಿದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಸುಮಾರು ಎರಡು ಸಾವಿರಕ್ಕೂ ಅಧಿಕ ಎನ್‍ಆರ್‍ಐಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

    ಭಾರತದಿಂದ ವಿದೇಶಕ್ಕೆ ತೆರಳಿದ ಪ್ರತಿಯೊಬ್ಬ ವ್ಯಕ್ತಿಯು ವಿದೇಶದಲ್ಲಿನ ವ್ಯವಸ್ಥೆಗಳ ಕಂಡು ತಮ್ಮ ಹೊಸ ಚಿಂತನೆಗಳೊಂದಿಗೆ ಭಾರತಕ್ಕೆ ಹಿಂದಿರುಗುತ್ತಾರೆ. ಇಂತಹ ಎನ್‍ಆರ್‍ಐಗಳನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ. ಭಾರತದಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ವರ್ಗೀಸ್ ಕುರಿಯನ್‍ರಂತವರು ಈ ಸಾಲಿನಲ್ಲಿದ್ದಾರೆ. ಕುರಿಯನ್ ಅಮೆರಿಕದಿಂದ ಹಿಂದಿರುಗಿದ ನಂತರ ಮಾಡಿದ ಕ್ರಾಂತಿಯಿಂದ ಪ್ರತಿ ಭಾರತೀಯನಿಗೂ ಇಂದು ಹಾಲು ದೊರೆಯುವಂತಾಗಿದೆ. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಕಾರಣದಿಂದ ಎನ್‍ಆರ್‍ಐಗಳು ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ ಎನ್ನುವುದು ತಪ್ಪು. ನಾವು ಅವರನ್ನು ಮತ್ತೆ ಭಾರತಕ್ಕೆ ವಾಪಸ್ ಕರೆತರಬೇಕಿದೆ ಎಂದರು.

    ಅಮೆರಿಕದ ಯಾವುದೇ ಕಂಪನಿಯನ್ನು ತೆಗೆದುಕೊಂಡರು ಅಲ್ಲಿ ಒಬ್ಬ ಭಾರತೀಯ ಕಾರ್ಯನಿರ್ವಹಿಸುತ್ತಿದ್ದಾನೆ. ಹಾಗೆಯೇ ಭಾರತದ ಅಭಿವೃದ್ಧಿಯಲ್ಲಿ ಭಾಗಿಯಾಗುತ್ತಿದ್ದಾನೆ. ಎನ್‍ಆರ್‍ಐಗಳು ದೇಶದ ಬೆನ್ನೆಲುಬು ಇದ್ದಂತೆ. ಕೆಲವರು ಭಾರತವನ್ನು ಭೌಗೋಳಿಕ ಅಂಶಗಳ ಮೂಲಕ ಮಾತ್ರ ನೋಡುತ್ತಾರೆ, ಆದರೆ ನಾನು ಹೊಸ ಕಲ್ಪನೆಗಳ ಆಗರವಾಗಿ ನೋಡುತ್ತೇನೆ ಎಂದು ವಿವರಿಸಿದರು.

    ಭಾರತದಲ್ಲಿ ಹೆಚ್ಚಾಗುತ್ತಿರುವ ಮತೀಯ ಸಮಸ್ಯೆಗಳು ಹಾಗೂ ಕೋಮುಭಾವನೆಗಳ ಹಿನ್ನಲೆಯಲ್ಲಿ ದೇಶವನ್ನು ವಿಭಜಿಸುತ್ತಿರುವುದರ ಕುರಿತು ಎನ್‍ಆರ್‍ಐಗಳ ಸಭೆಯಲ್ಲಿ ಪ್ರಸ್ತಾಪಿಸಿದರು.

    ರಾಹುಲ್ ತಮ್ಮ ಅಮೆರಿಕ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು, ಹಲವು ಉದ್ಯಮಿಗಳು, ರಾಜಕೀಯ ನಾಯಕರು ಸೇರಿದಂತೆ ಜೀವನದ ಎಲ್ಲಾ ಹಂತದ ಜನರ ನಡುವೆ ಸಂವಹನವನ್ನು ನಡೆಸಿದರು. ಈ ಭೇಟಿಯ ವೇಳೆ ದೇಶದಲ್ಲಿ ಉಂಟಾಗುತ್ತಿರುವ ಹಿಂಸಾಚಾರ, ಕೋಮು ಘರ್ಷಣೆಗಳ ಕುರಿತು ನನ್ನೊಂದಿಗೆ ಅತಂಕವನ್ನು ವ್ಯಕ್ತಪಡಿಸಿದರು. ಅದರಲ್ಲಿಯು ದೇಶದಲ್ಲಿ ಸಹಿಷ್ಣುತೆ, ಸಾಮರಸ್ಯ ಕೊರತೆ ಉಂಟಾಗುವಂತೆ ಮಾಡುತ್ತಿರುವ ರಾಜಕೀಯ ನಾಯಕರ ಕುರಿತಾಗಿ ಹೆಚ್ಚು ಪ್ರಶ್ನಿಸಿದ್ದಾರೆ ಎಂದು ರಾಹುಲ್ ಹೇಳಿದರು.

    ದೇಶದಲ್ಲಿ ಅಧಿಕಾರದಲ್ಲಿರುವ ಪಕ್ಷವು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ದೇಶದಲ್ಲಿ 30 ಸಾವಿರ ಯುವಕರು ಉದ್ಯೋಗಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಕೇವಲ 450 ಯುವಕರು ಮಾತ್ರ ಉದ್ಯೋಗವನ್ನು ಪಡೆಯುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಈಗ ನಿರ್ಮಾಣವಾಗಿದೆ. ಯುವ ಜನಾಂಗಕ್ಕೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗದಿದ್ದಾರೆ ಭಾರತದ ಭವಿಷ್ಯವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.