Tag: rahul thonse

  • ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು

    ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು

    ಬೆಂಗಳೂರು: ನಟಿ ಸಂಜನಾ ಗಲ್ರಾನಿ (Sanjana Galrani) ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ತೋನ್ಸೆಗೆ (Rahul Thonse) ಬೆಂಗಳೂರಿನ ನ್ಯಾಯಾಲಯ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

    ಸಂಜನಾ ಗಲ್ರಾನಿ ಅವರ ಸ್ನೇಹಿತ ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್‌ ಅವರು ದಂಡ ಮತ್ತು ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.

    ದಂಡದ ಮೊತ್ತದಲ್ಲಿ 10 ಸಾವಿರ ರೂ. ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂ.ವನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದ ಒಳಗಡೆ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಏನಿದು ಪ್ರಕರಣ?
    ರಾಹುಲ್ ತೋನ್ಸೆ ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ (Colombo Casino) ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಈತ ಸಂಜನಾಗೆ ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಹೇಳಿದ್ದ. ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

    ರಾಹುಲ್‌ ಮಾತು ಕೇಳಿ 2018-19 ರಲ್ಲಿ 45 ಲಕ್ಷ ರೂ.ಗಳನ್ನು ಸಂಜನಾ ಹೂಡಿಕೆ ಮಾಡಿದ್ದರು. ಆದರೆ ನಂತರ ಯಾವುದೇ ವ್ಯವಹಾರ ಆಗದೇ ವಂಚನೆ ಮಾಡಿದ್ದ. ನಂತರ ಹೂಡಿಕೆ ಮಾಡಿದ್ದ ಹಣವನ್ನು ಮರಳಿಸುವಂತೆ ಒತ್ತಾಯ ಮಾಡಿದರೂ ರಾಹುಲ್‌ ಎರಡು ಚೆಕ್ ನೀಡಿದ್ದ. ಚೆಕ್‌ನಿಂದಲೂ ಹಣ ವಾಪಸ್ ಆಗದ ಹಿನ್ನೆಲೆ ಸಂಜನಾ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

  • ಗೆಳೆಯನ ನಂಬಿ ಕ್ಯಾಸಿನೋದಲ್ಲಿ 40 ಲಕ್ಷ ಬಂಡವಾಳ- ಸಂಜನಾಗೆ ಎದುರಾಗುತ್ತಾ ಸಂಕಷ್ಟ..?

    ಗೆಳೆಯನ ನಂಬಿ ಕ್ಯಾಸಿನೋದಲ್ಲಿ 40 ಲಕ್ಷ ಬಂಡವಾಳ- ಸಂಜನಾಗೆ ಎದುರಾಗುತ್ತಾ ಸಂಕಷ್ಟ..?

    ಬೆಂಗಳೂರು: ಗೆಳೆಯ ರಾಹುಲ್ ತೋನ್ಸೆಯನ್ನ ನಂಬಿ ನಟಿ ಸಂಜನಾ ಗಲ್ರಾನಿ ಕೈ ಸುಟ್ಟುಕೊಂಡಿದ್ದಾರೆ. ಆದರೆ ಸಂಜನಾಗೆ ದೋಖ ಆಗಿರೋದು ಒಂದಲ್ಲ, ಎರಡಲ್ಲ. ಬರೋಬ್ಬರಿ 40-45 ಲಕ್ಷ ಹಣ.

    ಕ್ಯಾಸಿನೋದಲ್ಲಿ ಹಣ ಹೂಡಿದ್ರೆ ಹೆಚ್ಚು ಲಾಭ ಬರುತ್ತೆ ಅಂತ ನಂಬಿದ್ದ ನಟಿ ಸಂಜನಾ ತನ್ನ ಆತ್ಯಾಪ್ತ ಗೆಳೆಯ ರಾಹುಲ್ ತೋನ್ಸೆ ಕೈಯಲ್ಲಿ 40-45 ಲಕ್ಷ ಹಣ ನೀಡಿದ್ರಂತೆ. 2018ರಲ್ಲಿ ಶೇ.15 ಬಡ್ಡಿ ನೀಡುವುದಾಗಿ 40 ಲಕ್ಷ ಪಡೆದಿದ್ದ ರಾಹುಲ್, ಮೂರೇ ತಿಂಗಳಲ್ಲಿ 40 ಲಕ್ಷಕ್ಕೆ 70 ಲಕ್ಷ ಕೊಡ್ತೀನಿ ಅಂತ ಹೇಳಿದ್ನಂತೆ. ಆದರೆ ಇದೀಗ ಲಾಭ ಹೋಗ್ಲಿ ಅಸಲು ಹಣವನ್ನೂ ನೀಡದೆ ಉಂಡೇನಾಮ ಹಾಕಿದ್ದಾನೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಇದೇ ಕೇಸ್ ಸಂಜನಾಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

    ಆಪ್ತ ಗೆಳೆಯನಿಂದ ವಂಚನೆ ಬಗ್ಗೆ ದೂರು ಕೊಟ್ಟಿದ್ದ ಸಂಜನಾಗೂ ಕಂಟಕ ಫಿಕ್ಸ್ ಆಂತ ಹೇಳಲಾಗ್ತಿದೆ. ಎಫ್‍ಐಆರ್ ಬೆನ್ನಲ್ಲೇ ಇಂದಿರಾನಗರ ಪೊಲೀಸರು 3 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ರಾಹುಲ್‍ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಈ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ವಿಚಾರಣೆ ನಡೆಸಲಿರುವ ಪೊಲೀಸರು, ಕ್ಯಾಸಿನೋಗೆ ಹಣ ಹೂಡಿಕೆ ಮಾಡಿದ್ದರ ಮೂಲ ಕೆದಕಿದ್ದಾರೆ. ಈ ಸಂಬಂಧ ಐಟಿ ಇಲಾಖೆಗೂ ಪೊಲೀಸರು ಪತ್ರ ಬರೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಗೆ ಕ್ಯಾಸಿನೋ ದೋಖಾ – ಸ್ನೇಹಿತನಿಂದಲೇ ಹಣ ದುಪ್ಪಟ್ಟು ಆಮಿಷ

    ಒಟ್ಟಿನಲ್ಲಿ ಸಂಜನಾಗೆ ತಾನೇ ನೀಡಿದ ದೂರು ಕಂಟಕವಾಗಿ ಕಾಡುವ ಸಾಧ್ಯತೆ ಇದೆ. ಒಮದು ವೇಳೆ 40 ಲಕ್ಷ ಹಣದ ಮೂಲ ಸರಿಯಾಗಿ ನೀಡಿದ್ದೇ ಆದಲ್ಲಿ ಮಾತ್ರ ಸಂಜನಾ ಪಾರಾಗಲಿದ್ದಾರೆ.