Tag: rahul gandi

  • ದಲಿತರ ಮನೆಯಲ್ಲಿ ಅಡುಗೆ ಮಾಡಿ `ಪಾಕ ಪ್ರವೀಣ’ನಾದ ರಾಹುಲ್ ಗಾಂಧಿ

    ದಲಿತರ ಮನೆಯಲ್ಲಿ ಅಡುಗೆ ಮಾಡಿ `ಪಾಕ ಪ್ರವೀಣ’ನಾದ ರಾಹುಲ್ ಗಾಂಧಿ

    ನವದೆಹಲಿ: ಕಾಂಗ್ರೆಸ್ ನಾಯಕ ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಲಿತ ಕುಟುಂಬದವರೊಂದಿಗೆ ಸೇರಿ ಪಾಕಪದ್ಧತಿ ರುಚಿಯನ್ನು ಸವಿದರು. ಈ ವೀಡಿಯೋವನ್ನು ತಮ್ಮ ಎಕ್ಸ್ (X) ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

    ಅ.5 ರಂದು ಮಹಾರಾಷ್ಟ್ರದ (Maharashtra) ಕೊಲ್ಲಾಪುರದ (Kolhapur) ಉಂಚಾನ್ ಗ್ರಾಮದಲ್ಲಿ ದಲಿತ ರೈತ ಅಜಯ್ ತುಕಾರಾಂ ಸನಡೆ ಹಾಗೂ ಅಂಜನಾ ತುಕಾರಾಂ ಸನಡೆ ಎನ್ನುವವರ ಮನೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರ ಪಾಕ ಪದ್ಧತಿ, ಅವರ ಊಟ ಹೇಗಿರುತ್ತದೆ ಎನ್ನುವ ಮಹತ್ವವನ್ನು ತಿಳಿದುಕೊಂಡರು.ಇದನ್ನೂ ಓದಿ:2026ರ ವೇಳೆಗೆ ಸಂಪೂರ್ಣ ನಕ್ಸಲಿಸಂ ಮಟ್ಟ ಹಾಕಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು: ಅಮಿತ್‌ ಶಾ

    ಅವರ ಕುಟುಂಬದವರೊಂದಿಗೆ ಸೇರಿ ಮಸಾಲೆ ಭರಿತ ಊಟವನ್ನು ಮಾಡಿ, ತಾವೂ ವಿದರು. ಈ ವೇಳೆ ರಾಹುಲ್ ಗಾಂಧಿಯವರೊAದಿಗೆ `ದಲಿತ್ ಕಿಚನ್ಸ್ ಆಫ್ ಮರಾಠವಾಡ’ ಪುಸ್ತಕದ ಲೇಖಕ ಶಾಹು ಪಟೋಲೆ ಅವರು ಜೊತೆಗಿದ್ದರು.

    ನಿಮ್ಮ ದೈನಂದಿನ ಊಟ ಏನು? ಅಡುಗೆ ಪದ್ಧತಿ ಹೇಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅದನ್ನು ತಿಳಿಯಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದರು. ದಲಿತರು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಸಮಸ್ಯೆ ಹೀಗೆ ಬೇರೆ ವಿಷಯಗಳ ಕುರಿತು ಮಾತನಾಡಿದರು. ನಾನಿರುವ ಸ್ಥಾನವನ್ನು ಜನರು ಗೌರವಿಸುತ್ತಾರೆ. ಆದರೆ ನಾನು ಜಾತಿಯನ್ನು ಗೌರವಿಸುವುದಿಲ್ಲ ಎಂದರು.

    ಈ ಕುರಿತು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂವಿಧಾನವು ಬಹುಜನರಿಗೆ ಪಾಲು ಮತ್ತು ಹಕ್ಕನ್ನು ನೀಡಿದೆ. ನಾವೆಲ್ಲರೂ ಸಹೋದರತ್ವ ಮನೋಭಾವದಿಂದ ಶ್ರಮಿಸಿದಾಗ ಸಮಾನತೆ ಸಾಧ್ಯ ಎಂದರು. ನಾವು `ಚಾನೆ ಕೆ ಸಾಗ್ ಕಿ ಸಬ್ಜಿ’,`ಹರಭಾರಿಯಾಚಿ ಭಾಜಿ’ ಹಾಗೂ ಬೆಗನ್ ದಾಲ್ ಅಡುಗೆ ಮಾಡಿರುವುದಾಗಿ ತಿಳಿಸಿದ್ದಾರೆ. ಹಂಚಿಕೊಂಡಿರುವ ವೀಡಿಯೋದಲ್ಲಿ ರಾಹುಲ್ ಗಾಂಧಿ ಅಡುಗೆ ಮಾಡಿ, ಅವರೊಟ್ಟಿಗೆ ಊಟ ಮಾಡಿರುವುದು ವೈರಲ್ ಆಗಿದೆ.ಇದನ್ನೂ ಓದಿ:ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

  • ಚುನಾವಣೆಗೆ ರಾಹುಲ್ ಗಾಂಧಿಗೆ ಎಷ್ಟು ಹಣ ನೀಡಲಾಗಿದೆ? – ಲೆಕ್ಕ ನೀಡಿದ ಕಾಂಗ್ರೆಸ್‌

    ಚುನಾವಣೆಗೆ ರಾಹುಲ್ ಗಾಂಧಿಗೆ ಎಷ್ಟು ಹಣ ನೀಡಲಾಗಿದೆ? – ಲೆಕ್ಕ ನೀಡಿದ ಕಾಂಗ್ರೆಸ್‌

    ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabah Election) ರಾಯ್ ಬರೇಲಿ (Raebareli) ಮತ್ತು ವಯನಾಡ್‌ನಿಂದ (Wayanad) ಸ್ಪರ್ಧಿಸಿದ್ದ ರಾಹುಲ್ ಗಾಂಧಿ (Rahul Gandhi) ಅವರಿಗೆ ಚುನಾವಣಾ ಖರ್ಚು ವೆಚ್ಚಗಳಿಗೆ ತಲಾ 70 ಲಕ್ಷ ರೂಪಾಯಿ ಪಕ್ಷದ ಕಡೆಯಿಂದ ನೀಡಲಾಗಿತ್ತು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಕಾಂಗ್ರೆಸ್‌ ತಿಳಿಸಿದೆ.

    ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕ ಕಾಂಗ್ರೆಸ್‌ ಮಾಹಿತಿ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಕಂಗನಾ ರನೌತ್ ವಿರುದ್ಧ ಸ್ಪರ್ಧಿಸಿದ್ದ ವಿಕ್ರಮಾಧಿತ್ಯ ಸಿಂಗ್ ಅವರಿಗೆ 87 ಲಕ್ಷ ನೀಡಲಾಗಿದೆ. ಇದು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ನೀಡಿದ ಹಣದ ಪೈಕಿ ಹೆಚ್ಚು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿದ್ದ ಕಿಶೋರಿ ಲಾಲ್ ಶರ್ಮಾ, ಕೇರಳದ ಅಲಪ್ಪುಳದಿಂದ ಸ್ಪರ್ಧಿಸಿದ್ದ ಕೆ.ಸಿ ವೇಣುಗೋಪಾಲ್, ತಮಿಳುನಾಡಿನ ವಿರುಧುನಗರದಿಂದ ಸ್ಪರ್ಧಿಸಿದ್ದ ಮಾಣಿಕಂ ಟ್ಯಾಗೋರ್, ಗುಲ್ಬರ್ಗದ ಕಾಂಗ್ರೆಸ್ ಅಭ್ಯರ್ಥಿಗಳಾದ ರಾಧಾಕೃಷ್ಣ ಮತ್ತು ಪಂಜಾಬ್‌ನ ಆನಂದಪುರ ಸಾಹಿಬ್ ಅಭ್ಯರ್ಥಿ ವಿಜಯ್ ಇಂದರ್ ಸಿಂಗ್ಲಾಗೆ ತಲಾ 70 ಲಕ್ಷ ರೂ. ನೀಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಆನಂದ್ ಶರ್ಮಾ ಮತ್ತು ದಿಗ್ವಿಜಯ್ ಸಿಂಗ್ ಇಬ್ಬರೂ ಚುನಾವಣೆಯಲ್ಲಿ ಸೋತಿದ್ದು ಕ್ರಮವಾಗಿ 46 ಲಕ್ಷ ಮತ್ತು 50 ಲಕ್ಷ ರೂ. ನೀಡಿದೆ. ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

    ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಲೋಕಸಭೆ ಚುನಾವಣೆಗೆ 70 ಲಕ್ಷ ರೂ.ನಿಂದ ದಿಂದ 95 ಲಕ್ಷ ರೂ.ಗೆ ತ್ತು ವಿಧಾನಸಭೆ ಚುನಾವಣೆಗೆ 28 ​​ಲಕ್ಷ ರೂ.ನಿಂದ 40 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. 2024ರ ಲೋಕಸಭಾ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸಲಾಗಿತ್ತು ಮತ್ತು ಜೂನ್ 4 ರಂದು ಫಲಿತಾಂಶ ಪ್ರಕಟವಾಗಿತ್ತು.

     

  • ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ

    ಜೀವನವನ್ನ ಕೊನೆ ಮಾಡ್ಕೋಬೇಕು ಅಂದ್ಕೊಂಡಿದ್ದೆ ಅವ್ರು ಉಳಿಸಿದ್ರು: ರಮ್ಯಾ

    ಟಿವಿ ಲೋಕದ ಕನ್ನಡಿಗರ ನೆಚ್ಚಿನ ಶೋ ವೀಕೆಂಡ್ ವಿತ್ ರಮೇಶ್ ವಾರಾಂತ್ಯದಲ್ಲಿ ರಮ್ಯಾ ಭಾಗವಹಿಸಿದ್ದರು. ತನ್ನ ಸಾಧನೆಯ ಕಥೆಯನ್ನ ಈ ಶೋ ಮೂಲಕ ಅಭಿಮಾನಿಗಳಿಗೆ ತಿಳಿಸಿಕೊಟ್ಟರು. ಈ ವೇಳೆ ರಾಜಕೀಯ (Politics) ಜೀವನದ ಬಗ್ಗೆ ನಟಿ ಮಾತನಾಡಿದ್ದಾರೆ. ತನ್ನ ಜೀವನದಲ್ಲಿ ರಾಹುಲ್‌ ಗಾಂಧಿ ಅವರು ಪ್ರಭಾವ ಬೀರಿರುವ ಬಗ್ಗೆ ರಮ್ಯಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

    ಮೋಹಕತಾರೆ ರಮ್ಯಾ (Ramya) ಸಿನಿ ಜರ್ನಿಗೆ ಇದೀಗ 20 ವರ್ಷಗಳಾಗಿದೆ. ಅಂದು ಸಿನಿಮಾ ಕೆರಿಯಲ್‌ನಲ್ಲಿ ಬೇಡಿಕೆಯಿರುವಾಗಲೇ ಚಿತ್ರರಂಗ ತೊರೆದು ರಾಜಕೀಯ ಅಖಾಡಕ್ಕೆ ನಟಿ ಕಾಲಿದ್ದರು. 2013 ರಾಜಕೀಯಕ್ಕೆ ಪ್ರವೇಶಿಸಿದ್ದರು. Weekend With Ramesh ವೇದಿಕೆಯಲ್ಲಿ ತಮ್ಮ ರಾಜಕೀಯ ಜೀವನ ನೆನಪಿಸಿಕೊಂಡ ರಮ್ಯಾ, ಅಚಾನಕ್ಕಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟೆ. ಆದರೆ ಅದೇ ಸಮಯದಲ್ಲಿ ತಂದೆಯನ್ನು ಕಳೆದುಕೊಂಡಿದ್ದು ನನ್ನ ಜೀವನದ ಬಹಳ ದುಃಖದ ಸಮಯವಾಗಿತ್ತು. ಅಪ್ಪ ತೀರಿಕೊಂಡ ಹತ್ತು ದಿನದಲ್ಲೇ ನಾನು ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದೆ. ಮಂಡ್ಯ ಜನರ ಪ್ರೀತಿಯನ್ನು, ಅವರು ನೀಡಿದ ಧೈರ್ಯವನ್ನು ಮರೆಯುವಂತಿಲ್ಲ ಎಂದರು. ತಂದೆ ಕಳೆದುಕೊಂಡು ದುಃಖದಲ್ಲಿದ್ದ ತಮಗೆ ರಾಹುಲ್ ಗಾಂಧಿಯವರು (Rahul Gandhi) ಮಾಡಿದ ಸಹಾಯವನ್ನು (Help) ಸಹ ರಮ್ಯಾ ನೆನಪಿಸಿಕೊಂಡರು.

    ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ ಎಂದು ಹೇಳಿಕೊಂಡು ರಮ್ಯಾ ಗದ್ಗದಿತರಾದರು. ನಾನು ಸುಳ್ಳು ಹೇಳಲ್ಲ. ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ತುಂಬಾ ರಾಹುಲ್ ಗಾಂಧಿ ಸಹಾಯ ಮಾಡಿದ್ರು. ಸಾವು ಅಂದ್ರೇನು ಬದುಕು ಅಂದ್ರೇನು ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ಎಂದು ರಾಹುಲ್ ಗಾಂಧಿ ಬಗ್ಗೆ ರಮ್ಯಾ ಮಾತನಾಡಿದ್ದರು.

    ಇದೀಗ ಮತ್ತೆ ರಮ್ಯಾ ಸಿನಿಮಾರಂಗ ಮತ್ತು ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ʻಉತ್ತರಾಕಾಂಡʼ ಸಿನಿಮಾ ಮೂಲಕ ಡಾಲಿಗೆ ನಾಯಕಿಯಾಗಿ ರಮ್ಯಾ ಕಂಬ್ಯಾಕ್ ಮಾಡ್ತಿದ್ದಾರೆ.

  • ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ: ರಾಹುಲ್ ಗಾಂಧಿ

    ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧ: ರಾಹುಲ್ ಗಾಂಧಿ

    ನವದೆಹಲಿ: ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನ ಪಾಲಿಸಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬಿ. ಆರ್ ಅಂಬೇಡ್ಕರ್, ಬುದ್ಧ, ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ಧವಾದ ಸಂದೇಶಗಳನ್ನು ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ ಎಂದಿದ್ದಾರೆ. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು

    ಕರ್ನಾಟಕದ ಒಂದು ಕೋಟಿ ಮಕ್ಕಳ ಭವಿಷ್ಯದ ನಿರ್ಧಾರವನ್ನು ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನು, ಲೇಖಕರನ್ನು ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ ಎಂದು ಹೇಳಿದರು. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ

    ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಂದಾಗಿ ಅದನ್ನ ಮೆಟ್ಟಿನಿಲ್ಲುತ್ತಾರೆ ಎನ್ನುವುದನ್ನ ಕನ್ನಡಿಗರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ. ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದರು.

  • ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ: ರಾಹುಲ್ ವಿರುದ್ಧ ಜೋಶಿ ಕಿಡಿ

    ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ: ರಾಹುಲ್ ವಿರುದ್ಧ ಜೋಶಿ ಕಿಡಿ

    ನವದೆಹಲಿ: ರಾಹುಲ್ ಗಾಂಧಿ ಅವರು ತಮ್ಮ ಬುದ್ಧಿಯ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಗೊಂದಲಕ್ಕೊಳಗಾಗಿದ್ದಾರೆ. ಅವರು ಭಾರತ ಒಂದು ರಾಷ್ಟ್ರವಲ್ಲ. ಭಾರತ ಇತಿಹಾಸಕ್ಕೆ ಒಳಪಟ್ಟಿಲ್ಲ. ಚೀನಾ ದೃಷ್ಟಿಕೋನ ಸರಿಯಾಗಿದೆ ಎಂದ ಹೇಳುತ್ತಾರೆ. ಅವರೇನು ಸಂಸತ್ತಿನಲ್ಲಿ ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನೀವು ಸಂವಿಧಾನವನ್ನು ಓದಿದರೆ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

    ರಾಹುಲ್ ಗಾಂಧಿಗೆ ನೆನಪಿನ ಶಕ್ತಿ ಹೋಗಿದೆ ಅನ್ನಿಸುತ್ತದೆ. ಭಾರತವಷ್ಟೇ ಅಲ್ಲ, ಇಡೀ ಜಗತ್ತು ಕೊರೊನಾ ಸೋಂಕಿನಿಂದ ಸುತ್ತುವರಿದಿದೆ. ಹಾಗಾಗಿ ಆಯಾ ರಾಷ್ಟ್ರಗಳು ದ್ವೀಪದಂತೆ ಪ್ರತ್ಯೇಕಗೊಂಡಿವೆ. ಹಾಗಾಗಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಯನ್ನು ಭಾರತ ಆಹ್ವಾನಿಸಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

    ರಾಹುಲ್ ಗಾಂಧಿ ಹೇಳಿದ್ದೇನು?: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ರಾಜ್ಯದ ಒಕ್ಕೂಟದ ದನಿ ಅಡಗಿಸಲು ಕೇಂದ್ರ ಸಕಾರವು ನ್ಯಾಯಾಂಗ ವ್ಯವಸ್ಥೆ ಹಾಗೂ ಪೆಗಾಸಸ್ ಸ್ಪೈವೇರ್‍ಗಳನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತವಾಗಿದೆ.

    ಭಾರತವು ಒಂದು ದೇಶವಲ್ಲ ಇದು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನ ಹೇಳುತ್ತದೆ. ಯಾವುದೇ ಒಬ್ಬ ವ್ಯಕ್ತಿ ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಲು ಆಗದು. ದೇಶದಲ್ಲಿ ಬಹುಸಂಸ್ಕøತಿ ಹಾಗೂ ಬಹುಭಾಷೆ ಇವೆ. ಇವನ್ನು ದಮನಿಸಲು ಆಗದು. ಇದು ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಸಾಮ್ರಾಜ್ಯವಲ್ಲ ಎಂದಿದ್ದರು. ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಸಿಗುತ್ತಾ ವರಿಷ್ಠರ ಗ್ರೀನ್ ಸಿಗ್ನಲ್- ಯಾರೆಲ್ಲ ಸಚಿವಾಕಾಂಕ್ಷಿಗಳು?

    ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಅಪರಾಧವನ್ನು ಕೇಂದ್ರ ಸರ್ಕಾರ ಮಾಡಿದೆ. ದೊಡ್ಡ ವ್ಯೂಹಾತ್ಮಕ ತಪ್ಪು ಮಾಡಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ಇದನ್ನೂ ಓದಿ: ರಾಜಕೀಯ ಪುನರ್‌ ಪ್ರವೇಶಕ್ಕೆ ರೆಡ್ಡಿ ಯತ್ನ – ಅನುಮತಿ ನೀಡುತ್ತಾ ಹೈಕಮಾಂಡ್‌?

  • ಕೊರೊನಾದಿಂದ 4 ಕೋಟಿಗೂ ಅಧಿಕ ಜನ ಬಡವರಾಗಿದ್ದಾರೆ: ರಾಹುಲ್ ಗಾಂಧಿ

    ಕೊರೊನಾದಿಂದ 4 ಕೋಟಿಗೂ ಅಧಿಕ ಜನ ಬಡವರಾಗಿದ್ದಾರೆ: ರಾಹುಲ್ ಗಾಂಧಿ

    ನವದೆಹಲಿ: ಕೊರೊನಾದಿಂದ 4 ಕೋಟಿಗೂ ಅಧಿಕ ಜನರನ್ನು ಪ್ರಧಾನಿ ನರೇಂದ್ರ ಮೋದಿ ಬಡತನಕ್ಕೆ ತಳ್ಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.

    ಈ ಕುರಿತು ಟ್ವೀಟ್ ಮಾಡಿರುವ ಅವರು, 4 ಸಾವಿರಕ್ಕೂ ಅಧಿಕ ಜನರು 2020ರ ನಂತರ ಕೊರೊನಾದಿಂದಾಗಿ ಭಾರತೀಯರು ಬಡವರಾಗಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ಕೊರೊನಾದಿಂದ ಶ್ರೀಮಂತರಾಗಿದ್ದಾರೆ ಆಗಿದ್ದಾರೆ ಎಂದ ಅವರು ಡಾಟಾವನ್ನು ಉಲ್ಲೇಖಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:  ನಮ್ಮ 4 ಕೋಟಿ ಸಹೋದರರು ಮತ್ತು ಸಹೋದರಿಯರು ಬಡತನಕ್ಕೆ ತಳ್ಳಿದ್ದಾರೆ. ಈ 4 ಕೋಟಿ ಇದು ಕೇವಲ ಸಂಖ್ಯೆಯಲ್ಲ. ನಿಜವಾದ ಬಡವರು. ಈ 4 ಕೋಟಿ ಜನರು ಉತ್ತಮ ಅರ್ಹತೆಯನ್ನು ಹೊಂದಿದವರಾಗಿದ್ದಾರೆ. 4 ಕೋಟಿ ಜನರು ಭಾರತೀಯರು.

    ಈ ಹಿಂದೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ, ಸಾರ್ವಜನಿಕ ಹಕ್ಕುಗಳನ್ನು ಮೊದಲಿನಿಂದಲೂ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕುಗಳು ಇಲ್ಲವೆಂದು ಆರೋಪಿಸಿದ್ದರು. ಪಾರದರ್ಶಕತೆ ಎಂಬುದು ಪ್ರಜಾಪ್ರಭುತ್ವದ ಇನ್ನೊಂದು ಹೆಸರು ಮತ್ತು ಅದನ್ನು ಪ್ರಶ್ನಿಸುವ ಹಕ್ಕು ಜನರಿಗೆ ಇದೆ ಎಂದು ಹೇಳಿದ್ದರು. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಯುವಜನರನ್ನು ಅವಕಾಶಗಳಿಂದ ವಂಚಿತಗೊಳಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿ 24 ಗಂಟೆಗಳಿಗೊಮ್ಮೆ ಸುಮಾರು 880 ಯುವಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಕಳೆದ 5 ವರ್ಷಗಳಲ್ಲಿ 16 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್

  • ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಈಗಿನಂತೆ ಗಡಿ ಸಮಸ್ಯೆ ಇದ್ದಿದ್ರೆ ರಾಜೀನಾಮೆ ಕೊಡ್ತಿದ್ರು: ಮೋದಿ ವಿರುದ್ಧ ರಾಗಾ ವಾಗ್ದಾಳಿ

    ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಈಗಿನಂತೆ ಗಡಿ ಸಮಸ್ಯೆ ಇದ್ದಿದ್ರೆ ರಾಜೀನಾಮೆ ಕೊಡ್ತಿದ್ರು: ಮೋದಿ ವಿರುದ್ಧ ರಾಗಾ ವಾಗ್ದಾಳಿ

    ನವದೆಹಲಿ: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

    ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

    ವೀಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಚೀನಾವು ಭಾರತದ ಭೂಮಿಯನ್ನು ಅಕ್ರಮಿಸಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ ಚೀನಾ, ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡರೂ ಮೋದಿ ಸುಮ್ಮನಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲೇ ಪರಸ್ಪರ ಹೊಡೆದಾಡಿಕೊಂಡ ಜನಪ್ರತಿನಿಧಿಗಳು

    ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಗುಂಪು ದ್ವೇಷವನ್ನು ಹರಡುತ್ತಿದೆ. ಇದನ್ನು ಪ್ರೀತಿಯಿಂದ ಎದುರಿಸಬೇಕಾಗಿದೆ. ಕಾಂಗ್ರೆಸ್‌ನ ಸಿದ್ಧಾಂತಗಳು ದೇಶದ ಜನರನ್ನು ತಲುಪುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹುಸಿ ರಾಷ್ಟ್ರೀಯತೆ ಪ್ರಚಾರಗಳ ವಿರುದ್ಧ ನಾವು ಒಟ್ಟುಗೂಡಬೇಕು ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಬಿಜೆಪಿ ಮತ್ತು ಆರ್‌ಎಸ್‌ಎಸ್ ಧರ್ಮ ರಾಜಕಾರಣ ಮಾಡುತ್ತಿವೆ. ಅವರಿಗೆ ಬೇರೆ ಏನೂ ಕೆಲಸ ಇಲ್ಲ. ಕಾಂಗ್ರೆಸ್ ಈ ದೇಶದ ಜನರ ಹೃದಯವನ್ನು ಗೆದ್ದಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

  • ಮೋದಿ ವಿರುದ್ಧ ಪೋಸ್ಟ್: ರಮ್ಯಾರನ್ನು ಶಿಲ್ಪಾಗಣೇಶ್ ತರಾಟೆಗೆ ತೆಗೆದುಕೊಂಡಿದ್ದು ಹೀಗೆ

    ಮೋದಿ ವಿರುದ್ಧ ಪೋಸ್ಟ್: ರಮ್ಯಾರನ್ನು ಶಿಲ್ಪಾಗಣೇಶ್ ತರಾಟೆಗೆ ತೆಗೆದುಕೊಂಡಿದ್ದು ಹೀಗೆ

    ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ಮೋದಿಗೆ ಸಂಬಂಧಿಸಿದಂತೆ ಪ್ರಕಟಿಸಿದ ಎಫ್‍ಬಿ ಪೋಸ್ಟ್ ಗೆ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಅವರು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ರಮ್ಯಾ ಅವರು ಆಗಸ್ಟ್ 5 ರಂದು ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ಫೋಟೋದಲ್ಲಿ ರಾಹುಲ್ ಗಾಂಧಿ ಜನರ ಜೊತೆ ಮಾತನಾಡುತ್ತಿರುವ ಫೋಟೋಗೆ ‘ಜನರ ನಾಯಕ’ ಎಂಬುದಾಗಿ, ಮೋದಿ ಅವರು ಗುಜರಾತ್ ನೆರಯ ವೈಮಾನಿಕ ಸಮೀಕ್ಷೆಯನ್ನು ವೀಕ್ಷಿಸುತ್ತಿರುವ ಫೋಟೋಗೆ ‘ಸೀಟ್ ಬೆಲ್ಟ್ ಲೀಡರ್’ ಎನ್ನುವ ತಲೆ ಬರಹವನ್ನು ಹಾಕಿ ಪ್ರಕಟಿಸಿದ್ದರು.

    ಈ ಪೋಸ್ಟಿಗೆ ಸಂಬಂಧಿಸಿದಂತೆ ಶಿಲ್ಪಾ ಗಣೇಶ್ ಅವರು, ಗುಜರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ. ನಿಮ್ಮ ರಾಹುಲ್ ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ ಎಂದು ಬರೆಯುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಶಿಲ್ಪಾ ಗಣೇಶ್ ರಮ್ಯಾರನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ
    ರಮ್ಯಾರವರೇ,
    ಮೊದಲಿಗೆ ತಾವೊಬ್ಬರೇ ಬುದ್ಧಿವಂತರು ಎನ್ನುವ ತಮ್ಮ ಭ್ರಮೆಗೆ ನಮಸ್ಕಾರಗಳು. ಇನ್ನು ನೀವು ಹೋಲಿಕೆ ಮಾಡುತ್ತಿರುವ ಈ ಫೋಟೋ ವಿಚಾರಕ್ಕೆ ಬಂದರೆ ಯಾವ ಜಾಗಗಳಲ್ಲಿ ವಾಹನ ಹೋಗಲೂ ಕೂಡ ಕಷ್ಟವೋ ಅಲ್ಲಿ ವೈಮಾನಿಕ ಸಮೀಕ್ಷೆ ಮಾಡುವುದು ಅನಿವಾರ್ಯ ಎನ್ನುವುದು ಅರಿವಿರಲಿ, ಪ್ರಧಾನಿಗಳು ನಂತರದಲ್ಲಿ ಜನರೊಂದಿಗೆ ನೇರವಾಗಿ ಮಾತಾಡಿರುವುದನ್ನು ತಾವು ಮರೆತಿದ್ದರೂ ಅಲ್ಲಿನ ಜನ ಮರೆತಿಲ್ಲ.

    ನಿಮ್ಮ ರಾಹುಲ್ ರವರಿಗೆ ಜನರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ ಅಂತಹ ಪ್ರವಾಹದ ಪರಿಸ್ಥಿತಿಯಲ್ಲಿ ಗುಜರಾತಿನ ತಮ್ಮದೇ ಪಕ್ಷದ ಶಾಸಕರನ್ನು ಬೆಂಗಳೂರಿನಲ್ಲಿ ಮೋಜು ಮಾಡಲು ಕಳುಹಿಸಿ ತಾವು ಭಾರಿ ಸಭ್ಯರಂತೆ ಜನರೆದುರು ಬಂದು ಮೊಸಳೆ ಕಣ್ಣೀರು ಸುರಿಸಿದರೆ ಅದನ್ನು ನಂಬಲು ಜನ ಮೂರ್ಖರಲ್ಲ. ನಿಮ್ಮ ರಾಹುಲ್ ರವರು ನಿಜವಾದ ಪ್ರವಾಹ ಸಂತ್ರಸ್ತರ ಜೊತೆಗೆ ಕುಳಿತು ಮಾತಾಡಿದ್ದಾರೆ ಎನ್ನಲು ಯಾವುದೇ ಸಾಕ್ಷಿ ಇಲ್ಲ. ನಿಮ್ಮದೇ ಮಂಡ್ಯದಲ್ಲಿ ರಾಹುಲ್ ಭೇಟಿಯಾದಾಗ ತಾವು ಸೃಷ್ಟಿಸಿದ ನಕಲಿ ರೈತರ ಕಥೆ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಇದರಿಂದಾಗಿ ತಾವು ಮಂಡ್ಯದ ಮಾರುಕಟ್ಟೆಯಲ್ಲಿ ಅವಮಾನ ಪಟ್ಟಿದ್ದು ತಮ್ಮ ಮಂಡ್ಯದಿಂದ ವಾಸಸ್ಥಾನ ಬದಲಾಯಿಸಿದ್ದು ಕೂಡಾ ಜನ ಮರೆತಿಲ್ಲ.

    ರಾಹುಲ್ ರವರು ತಾವು ಸಂಸದರಾದ ಕ್ಷೇತ್ರದಲ್ಲೇ ಯಾವುದೇ ಅಭಿವೃದ್ಧಿ ಮಾಡದೇ ಜನರಿಂದ ಉಗಿಸಿಕೊಂಡಿದ್ದು ಜನ ಮರೆತಿಲ್ಲ. ಇನ್ನು ರಾಹುಲ್ ರವರು ಗುಜರಾತಿನ ಪ್ರವಾಹ ಸಂತ್ರಸ್ತರನ್ನು ನೋಡಲು ಹೋದಾಗ ತಮ್ಮ ಕಾರಿನ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದರು ಎಂದು ಹೇಳಿಕೆ ನೀಡಿದ್ದು ನೋಡಿದರೆ ಇದರ ಹಿಂದೆ ನಿಮ್ಮ ಬುದ್ಧಿವಂತಿಕೆ ಎದ್ದು ಕಾಣುತ್ತದೆ, ತಾವೇ ಕಲ್ಲು ಹೊಡೆಸಿಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವುದು ತಿಳಿದ ವಿಚಾರವೇ ಅಲ್ಲವೇ? ಈಗಾಗಲೇ ತಾವು ಮಂಡ್ಯದಲ್ಲಿ ಇದೇ ತರ ನಾಟಕ ಮಾಡಿ ಯಶಸ್ವಿಯಾದವರು ತಾನೇ?

    ಮೂರು ಬಾರಿ ಮುಖ್ಯಮಂತ್ರಿ ಆದವರು ದೇಶದ ಪ್ರಧಾನಿಯಾದವರಿಗೆ ಆಡಳಿತ ಮಾಡುವುದನ್ನು ತಾವು ಕಲಿಸಿಕೊಡಲು ಹೋಗಬೇಡಿ. ನೀವೇ ಹೇಳಿದಂತೆ ರಾಹುಲ್ ರನ್ನು ಮೋದಿಜೀ ಲೆವೆಲ್ಲಿಗೆ ಕೊಂಡೊಯ್ಯುತ್ತೇನೆ ಎಂದ ಮಾತನ್ನು ಮೋದಿಜೀ ಹೆಸರಿಗೆ ಮಣ್ಣೆರೆಚುವ ಬದಲು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಮನಸ್ಸನ್ನು ಗೆಲ್ಲಿರಿ. ನಿಮ್ಮ ನಾಟಕಗಳನ್ನು ಜನ ನಂಬುವ ಕಾಲ ಹೊರಟುಹೋಗಿದೆ, ಜವಾಬ್ದಾರಿಯಿಂದ ಮಾತಾಡುವುದನ್ನು ಕಲಿಯಿರಿ.
    ಧನ್ಯವಾದಗಳು.

    ಭಾನುವಾರ ಬಿಜೆಪಿಯ ಐಟಿ ವಿಭಾಗ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು. ಮೋದಿ ಸರ್ಕಾರದ ಸಾಧನೆಯನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು. ಪಕ್ಷಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಬರುವ ಅಪಪ್ರಚಾರಗಳಿಗೆ ಸರಿಯಾಗಿ ತಿರುಗೇಟು ನೀಡಬೇಕು ಎಂದು ಹೇಳಿದ್ದರು.