Tag: Rahul Bose

  • Bhairathi Ranagal: ಶಿವಣ್ಣನ ಸಿನಿಮಾದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್

    Bhairathi Ranagal: ಶಿವಣ್ಣನ ಸಿನಿಮಾದಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್

    ‘ಮಫ್ತಿ’ ನೋಡಿ ಮೆಚ್ಚಿಕೊಂಡ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಅವರು ‘ಭೈರತಿ ರಣಗಲ್’ (Bhairathi Ranagal) ಸಿನಿಮಾ ಅಪ್‌ಡೇಟ್ ಕೊಡುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಎದುರಾಳಿಯಾಗಿ ಬಾಲಿವುಡ್ ನಟ ರಾಹುಲ್ ಬೋಸ್ (Rahul Bose) ನಟಿಸಲಿದ್ದಾರೆ.

    ನರ್ತನ್ ನಿರ್ದೇಶನ, ಗೀತಾ ಪಿಕ್ಚರ್ ನಿರ್ಮಾಣದಲ್ಲಿ ‘ಭೈರತಿ ರಣಗಲ್’ ಪ್ರೀಕ್ವೆಲ್ ಮೂಡಿ ಬರುತ್ತಿದೆ. ಇದು ‘ಮಫ್ತಿ’ (Mufti) ಸಿನಿಮಾ ಹಿನ್ನೆಲೆ ಚಿತ್ರವಾಗಿ ಮೂಡಿ ಬರಲಿದೆ. ಈಗಾಗಲೇ ಕಥೆ ಸಿದ್ಧವಾಗಿದ್ದು, ಜೂನ್ 10ರಿಂದ ಶೂಟಿಂಗ್ ಶುರುವಾಗಲಿದೆ.

    ಹ್ಯಾಟ್ರಿಕ್ ಹೀರೋ ಶಿವಣ್ಣ (Shivanna) ಮುಂದೆ ಘರ್ಜಿಸಲು ಬಹುಭಾಷಾ ನಟ ರಾಹುಲ್ ಬೋಸ್ (Rahul Bose) ಬರುತ್ತಿದ್ದಾರೆ. ಚಿತ್ರದಲ್ಲಿ ಶಿವಣ್ಣಗೆ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ರಾಹುಲ್ ಭಾಗದ ಕಥೆ ಕೇಳಿ ಥ್ರಿಲ್ ಆಗಿ, ಈ ಚಿತ್ರದ ಭಾಗವಾಗಲು ರಾಹುಲ್ ಓಕೆ ಎಂದಿದ್ದಾರಂತೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ

    8 ವರ್ಷಗಳ ಹಿಂದೆ ‘ನಿರುತ್ತರ’ ಎಂಬ ಸಿನಿಮಾದಲ್ಲಿ ರಾಹುಲ್ ಬೋಸ್ ನಟಿಸಿದ್ದರು. 8 ವರ್ಷಗಳ ಬಳಿಕ ‘ಭೈರತಿ ರಣಗಲ್’ ಮೂಲಕ ರಾಹುಲ್ ಬೋಸ್ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.

  • 2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    2 ಬಾಳೆಹಣ್ಣಿಗೆ 442 ರೂ. – ಹೋಟೆಲ್ ನಡೆಯನ್ನ ಸಮರ್ಥಿಸಿಕೊಂಡ ಫೆಡರೇಶನ್

    ನವದೆಹಲಿ: ನಟ ರಾಹುಲ್ ಬೋಸ್ ಅವರಿಂದ 2 ಬಾಳೆಹಣ್ಣಿಗೆ 442 ರೂ. ಪಡೆದಿದ್ದ ಹೋಟೆಲ್ ನಡೆಯನ್ನು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಶೀಯೇಷನ್ಸ್ ಆಫ್ ಇಂಡಿಯಾ (FHRAI) ಸಮರ್ಥಿಸಿಕೊಂಡಿದೆ. 442 ರೂ. ಪಡೆದಿದ್ದು ಯಾವುದೇ ಕಾನೂನು ಬಾಹಿರ ಕೆಲಸವಲ್ಲ ಎಂದು ತಿಳಿಸಿದೆ.

    ಬಾಳೆಹಣ್ಣಿನ ಮೇಲೆ ಶೇ.18 ಜಿಎಸ್‍ಟಿ ಪಡೆಯೋದು ತಪ್ಪಲ್ಲ, ಅದು ಕಾನೂನಿನ ಅನಿವಾರ್ಯವಾಗಿದೆ. ಜೆಡಬ್ಲ್ಯೂ ಮ್ಯಾರಿಯಟ್ ಚೈನ್ ಹೋಟೆಲ್ ದೇಶದ ಹಲವು ನಗರಗಳಲ್ಲಿದೆ. ಈ ಎಲ್ಲ ಹೋಟೆಲ್ ಗಳಲ್ಲಿ ಪ್ರಮಾಣೀಕೃತ ಉತ್ತಮ ಶ್ರೇಣಿಯ (Standard operating procedure) ಸೇವೆಯನ್ನು ನೀಡಲಾಗುತ್ತದೆ. ಈ ರೀತಿಯ ಹೋಟೆಲ್ ಗಳು ಕೇವಲ ಹಣ್ಣು, ತರಕಾರಿ ತಂದು ನೇರವಾಗಿ ನೀಡಲ್ಲ. ಸುಸಜ್ಜಿತವಾಗಿ ಸ್ವಚ್ಛವಾದ ಪ್ಲೇಟ್ ನಲ್ಲಿರಿಸಿ ಗ್ರಾಹಕರು ವಾಸ್ತವ್ಯ ಹೂಡಿರುವ ಕೋಣೆಗೆ ತಲುಪಿಸುತ್ತದೆ. ಇದರ ಜೊತೆಗೆ ಪಾನೀಯ ಹಾಗು ಇತರೆ ಖಾದ್ಯಗಳನ್ನು ಜೊತೆಯಾಗಿ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಫೆಡರೇಶನ್ ಹೇಳಿದೆ.

    ಅಂಗಡಿಗಳಲ್ಲಿ ಮಾರುಕಟ್ಟೆಯ ಬೆಲೆ ನೀಡಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೋಟೆಲ್ ನಲ್ಲಿ ಪ್ಲೇಟ್ ಜೊತೆಗೆ ವಿವಿಧ ಚಮಚಗಳು (Cutlery) ಮತ್ತು ಸ್ವಚ್ಛತೆಯಿಂದ ಕೂಡಿದ ಸೇವೆಯ ಜೊತೆಗೆ ಐಷಾರಾಮಿ ಅನುಭವದೊಂದಿಗೆ ಗ್ರಾಹಕರು ಕೇಳಿದ ವಸ್ತು ಲಭ್ಯವಾಗುತ್ತದೆ. ರಸ್ತೆ ಬದಿಯಲ್ಲಿ 10 ರೂ.ಗೆ ಕಾಫಿ ಸಿಕ್ಕರೆ, ಅದೇ ಲಕ್ಷುರಿ ಹೋಟೆಲ್ ಗಳಲ್ಲಿ 250 ರೂ. ಸಿಗುತ್ತದೆ ಎಂದು ಫೆಡರೇಶನ್ ಉಪಾಧ್ಯಕ್ಷ ಗುರುಭಕ್ಷೀಶ್ ಸಿಂಗ್ ಕೊಹ್ಲಿ ಹೇಳಿದ್ದಾರೆ.

    ನಟ ರಾಹುಲ್ ಬೋಸ್ 2 ಬಾಳೆಹಣ್ಣಿಗೆ 442 ರೂ. ಬಿಲ್ ನೀಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದರು.

  • 2 ಬಾಳೆ ಹಣ್ಣಿಗೆ 442 ರೂ. – ಬಿಲ್ ನೋಡಿ ದಂಗಾದ ಬಾಲಿವುಡ್ ನಟ

    2 ಬಾಳೆ ಹಣ್ಣಿಗೆ 442 ರೂ. – ಬಿಲ್ ನೋಡಿ ದಂಗಾದ ಬಾಲಿವುಡ್ ನಟ

    ಚಂಡೀಗಢ: ಪಂಚತಾರಾ ಹೋಟೆಲ್‍ಗೆ ತೆರಳಿದ್ದ ಬಾಲಿವುಡ್ ನಟ ರಾಹುಲ್ ಬೋಸ್ ಎರಡು ಬಾಳೆ ಹಣ್ಣಿಗೆ ಅರ್ಡರ್ ಮಾಡಿದ್ದು, ಇದರೊಂದಿಗೆ ಹೋಟೆಲ್ ಸಿಬ್ಬಂದಿ ನೀಡಿದ ಬಿಲ್ ನೋಡಿ ಶಾಕ್‍ಗೆ ಒಳಗಾಗಿದ್ದಾರೆ.

    51 ವರ್ಷದ ನಟ ರಾಹುಲ್ ಬೋಸ್ ಈ ಕುರಿತು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದಾರೆ. ಅಂದಹಾಗೇ ರಾಹುಲ್ ಬೋಸ್ ತಮ್ಮ ಬೆಳಗಿನ ವ್ಯಾಯಾಮ ಮುಗಿಸಿ ಹೋಟೆಲ್‍ಗೆ ತೆರಳಿದ್ದು, ಈ ಸಂದರ್ಭದಲ್ಲಿ 2 ಬಾಳೆ ಹಣ್ಣು ಅರ್ಡರ್ ಮಾಡಿದ್ದಾರೆ. ಅವರಿಗೆ 445 ರೂ. ಗಳ ಬಿಲ್ ಅನ್ನು ಹೋಟೆಲ್ ಸಿಬ್ಬಂದಿ ನೀಡಿದ್ದಾರೆ.

    ರಾಹುಲ್ ಬೋಸ್ ಅವರ ಈ ಟ್ವೀಟ್‍ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಚಿನ್ನದ ಲೇಪಿತ ಬಾಳೆ ಹಣ್ಣು ನೀಡಿದ್ದಾರೆಯೇ ಎಂದು ನಟನಿಗೆ ಮರು ಪ್ರಶ್ನೆ ಮಾಡಿ, ಇದು ಹಗಲು ದರೋಡೆ ಎಂದು ಹೇಳಿದ್ದಾರೆ. ಪಂಚತಾರಾ ಹೋಟೆಲಿನಲ್ಲಿ 2 ಬಾಳೆ ಹಣ್ಣಿಗೆ ಮಾತ್ರ ಬಿಲ್ ನೀಡುವ ಸಿಸ್ಟಮ್ ಇಲ್ಲದ ಕಾರಣ ಅವರು ಸಂಪೂರ್ಣ ಹಣ್ಣಿನ ಬುಟ್ಟಿಗೆ ಬಿಲ್ ನೀಡಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.