Tag: Rahman

  • Breaking- ಕಿಚ್ಚನ ‘ವಿಕ್ರಾಂತ್ ರೋಣ’ ನಿರ್ಮಾಪಕರಿಗೆ ನಷ್ಟ ಮಾಡಿತಾ? : ಜಾಕ್ ಮಂಜು ಖಡಕ್ ಉತ್ತರ

    Breaking- ಕಿಚ್ಚನ ‘ವಿಕ್ರಾಂತ್ ರೋಣ’ ನಿರ್ಮಾಪಕರಿಗೆ ನಷ್ಟ ಮಾಡಿತಾ? : ಜಾಕ್ ಮಂಜು ಖಡಕ್ ಉತ್ತರ

    ಸುದೀಪ್ (Sudeep) ಅವರ ಮೇಲಿನ ಆರೋಪ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಎನ್. ಕುಮಾರ್ ನಂತರ ನಿರ್ಮಾಪಕರ ಸಂಘದಲ್ಲಿ ‘ಹುಚ್ಚ’ ಸಿನಿಮಾ ಖ್ಯಾತಿಯ ರೆಹಮಾನ್ (Rahman) ಕೂಡ ಹಲವು ಆರೋಪಗಳನ್ನು ಕಿಚ್ಚನ ಮೇಲೆ ಮಾಡಿದ್ದರು. ಜೊತೆಗೆ ವಿಕ್ರಾಂತ್ ರೋಣ (Vikrant Rona) ನಷ್ಟ ಮಾಡಿತು ಎಂದು ಜಾಕ್ ಮಂಜು (Jack Manju) ತಮಗೆ ಹೇಳಿದ್ದರು ಎಂದು ರೆಹಮಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಎಲ್ಲದಕ್ಕೂ ಉತ್ತರ ಎನ್ನುವಂತೆ ಜಾಕ್ ಮಂಜು ನಿರ್ಮಾಪಕರ ಸಂಘಕ್ಕೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?

    ಎಲ್ಲರಿಗೂ ನಮಸ್ಕಾರ, ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಾನೂ ಓರ್ವ ನಿರ್ಮಾಪಕ-ವಿತರಕನಾಗಿದ್ದೇನೆ. ಅದೃಷ್ಟವಶಾತ್ ನಾನೂ ನಿರ್ಮಾಪಕರ ಸಂಘದ ಸದಸ್ಯನಾಗಿದ್ದೇನೆ. ಮೊನ್ನೆ ನನಗೂ ನಿರ್ಮಾಪಕರ ಸಂಘದ ಕಚೇರಿಗೆ ದಿಢೀರನೆ ಬಂದು ಪತ್ರಕರ್ತರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಯಾವುದೇ ಮುನ್ಸೂಚನೆ ಇಲ್ಲದೇ ಗೋಷ್ಠಿ ನಡೆಸಿ ಸತ್ಯವನ್ನು ಬಟಾಬಯಲು ಮಾಡಬೇಕೆಂದನಿಸಿತು.

    ಆದರೆ, ನನಗೆ ಆ ಸ್ಥಳದ ಬಗ್ಗೆ ಗೌರವವಿದೆ. ನಿರ್ಮಾಪಕರ ಸಂಘ ಈ ಹಿಂದಿನಿಂದಲೂ ಸಮಸ್ತ ನಿರ್ಮಾಪಕರುಗಳನ್ನು ಕಾಪಾಡಿಕೊಂಡು ಬರಲು ಹಾಕಿಕೊಂಡಿರುವ ಸ್ವಯಂ ಕಟ್ಟುಪಾಡುಗಳ ಅರಿವಿದೆ. ತಪ್ಪು-ಸರಿಗಳ ನ್ಯಾಯ ತೂಗುವ ನಿರ್ಮಾಪಕರ ಸಂಘದ ಘನತೆಯ ಬಗ್ಗೆ ಅರಿವಿದೆ.  ಹಾಗಾಗಿ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಯಸದೇ ನನ್ನ ಉತ್ತರ ಅಭಿಪ್ರಾಯಗಳನ್ನು ನಿಮಗೇ ಬರೆಯುತ್ತಿದ್ದೇನೆ. ಪತ್ರಿಕಾಗೋಷ್ಟಿ ಕರೆದು ಸಕುಚಮರ್ಧನ ಮಾಡಿಕೊಳ್ಳುವ ಸುಳ್ಳುಗಳ ರಾಶಿ ತಂದೊಡ್ಡಿ ನಿರ್ಮಾಪಕರದಷ್ಟೇ ಅಲ್ಲ ಸಂಘದ ಮರೆಯಾದೆಯನ್ನೂ ತೆಗೆಯುವ ಇರಾದೆ ನನಗಿಲ್ಲ. ನಾನು ಹೇಳುವುದರಲ್ಲಿ ಸುಳ್ಳಿದ್ದರೆ ಕುರಾನಿನ ಅಲ್ಲಾ,  ಭಗವದ್ಗೀತೆಯ ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ. ಇದನ್ನೂ ಓದಿ:ನಯನತಾರಾ ಪತಿಗೆ ‘ಹುಷಾರ್’ ಎಂದ ಶಾರುಖ್ ಖಾನ್

    ನನಗಂತೂ ನಿರ್ಮಾಪಕರ ಸಂಘವು “ನಿರ್ಮಾಪಕರ ಹಿತ ಕಾಯುವಲ್ಲಿ ಬಳಸುತ್ತಿರುವ ತಾರತಮ್ಯ ಮಲತಾಯಿ ಧೋರಣೆಗಳ ಬಗ್ಗೆ ಅತೀವವಾದ ಸಂಕಟವಿದೆ. ಆದರೂ ತಮ್ಮ ಘನ ಸಮಕ್ಷಮಕ್ಕೆ ಉತ್ತರಿಸುತ್ತೇನೆ. ಸಂಘ ನಾಲ್ಕಾರು ಜನರ ಹಿತಕಾಯುವ ಮಾಫಿಯಾ ಮಾತ್ರ ಆಗದಿರಲಿ, ಸ್ವಯಂ ಕಟ್ಟುಪಾಡು- ಎಲ್ಲರ ಹಿತಾಸಕ್ತಿಗೆ ಒಗಲಿ ಎಂಬುದು ನನ್ನ ಮನವಿ ನನಗೆ ಸುದೀಪ್ ನಾಯಕತ್ವದ ಪ್ಯಾನ್  ಇಂಡಿಯಾ ಸಿನಿಮಾ ‘ವಿಕಾಂತ್ ರೋಣ’ ದಿಂದ ಯಾವುದೇ ನಷ್ಟವಾಗಿಲ್ಲ. ತನ್ನ ಕೋಟಿಗಟ್ಟಲೇ ಸಂಭಾವನೆ ಪಡೆಯದೇ ಸುದೀಪ್ ಎಂದಿನಂತೆ ನನ್ನ ಕೈ ಹಿಡಿದಿದ್ದಾರೆ. ಅದಿರಲಿ ಅದು ನಮ್ಮ ಮನೆಯ ಸಹೋದರರ ವಿಷಯ.

    ಖಾವಂದರೆ ರಹಮಾನ್ ಅವರ ಹೇಳಿಕೆಯಲ್ಲಿನ ದ್ವಂದ ಕಾಡುತ್ತಿದೆ. ಸಾವಿರಾರು ಸಲ ಫೋನ್ ಮಾಡಿದರೂ ಅವರ ಕರೆ ಸ್ವೀಕರಿಸದ ನಾನು, ನನಗೆ ವಿಕ್ರಾಂತ್ ರೋಣ ಸಿನಿಮಾದಿಂದ ನಷ್ಟವೇ ಆಗಿದ್ದರೆ – ಇದೇ ವ್ಯಕ್ತಿ ಅಂದರೆ ಸಾವಿರಾರು ಕರೆಗಳನ್ನು ಸ್ವೀಕರಿಸದ ರೆಹಮಾನ್ ಅವರನ್ನೇ ಹುಡುಕಿ ನನಗೆ ನಷ್ಟವಾಯಿತು ಎಂದು ಹೇಳಿಕೊಂಡೆನೇ? ಎಷ್ಟು ಹಾಸ್ಯಾಸ್ಪದ ಹೇಳಿಕೆಯಲ್ಲವೇ? ಅವರಿಗೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಲು ನನ್ನ – ರೆಹಮಾನ್ ಸಂಬಂಧವೇನು? ರಹಮಾನ್ ಅವರ ಸತ್ಯಾಸತ್ಯತೆ ನಿಮಗೆ ತಿಳಿಯಲಿಲ್ಲವೇ?

    ಇದು ನನ್ನ ಸಹೋದರರಾದ ಸುದೀಪ್ ಮತ್ತು ನನ್ನ ನಡುವೆ ತಂದಿಟ್ಟು ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ ಅಲ್ಲವೇ? ಇದಕ್ಕೆ ಹೇಳಿದ್ದು ಶ್ರೀಯುತರಾದ ಸುದೀಪ್ ಅವರು ಪ್ರತಿಕ್ರಿಯಿಸಲು ಯೋಗ್ಯವಾದರೆ ಮಾತ್ರ ಉತ್ತರಿಸುತ್ತಾರೆಂದು. ನನ್ನ ಎಲ್ಲ ಕಷ್ಟ ನಷ್ಟ ಹೇಳಿಕೊಳ್ಳಲು ಹಿತೈಷಿಗಳಿದ್ದಾರೆ ನಿರ್ಮಾಪಕರ ಸಂಘದ ಖಾವಂದರುಗಳಾದ ತಾವಿದ್ದೀರಿ, ಎಲ್ಲ ಬಿಟ್ಟು ರಹಮಾನ್ ಅವರಿಗೆ ಕರೆ ಮಾಡಿದನೆ?

    ನಾನೇ ನನ್ನ ಕೈಯಾರೆ, ಆಸ್ಪತ್ರೆ ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸುದೀಪ್ ಅವರು ನೀಡಿದ ಸಹಾಯವನ್ನು ರೆಹಮಾನ್ ಅವರಿಗೆ ತಲುಪಿಸಿ ಜೀವಂತ ಸಾಕ್ಷಿಯಾಗಿದ್ದೇನೆ. ಎರಡು ಗಂಟೆಗಳ ಕಾಲ ಸುಳ್ಳಿನ ‘ಪ್ರವಾಹ ಗೋಷ್ಠಿ’ಗೆ ಅವಕಾಶ ಮಾಡಿಕೊಟ್ಟಿರಿ. ನನ್ನ ಹೆಸರೂ ಅದರಲ್ಲಿ ಸಾಕ್ಷಿಯಾಗಿ ಬಂತು. ಆ ಎರಡು ಗಂಟೆಗಳ ದಿಢೀರ್ ಗೋಷ್ಠಿಯ ಸುಳ್ಳುಗಳಿಗೆ ಶ್ರೀಯುತರಾದ ಸುದೀಪ್ ಅವರು ಓರ್ವ ನಿರ್ಮಾಪಕರಾಗಿ ಉತ್ತರ ಕೊಡದೇ ನಿರ್ಲಕ್ಷ್ಯ ಮಾಡಬಹುದು. ಅದು ಉತ್ತರ ಕೊಡಲು ಯೋಗ್ಯವಾದ ಸಂಗತಿಯಾದರೆ ಪ್ರತಿಕ್ರಿಯಿಸಬಹುದು.

     

    ಎಲ್ಲದಕ್ಕೂ ಒಂದು ಪರಿವೀಕ್ಷಣೆ, ಆಪ್ತ ಸಮಾಲೋಚನೆ ಮಾಡಬೇಕು. ನಂತರ ನನ್ನಂತಹ ಓರ್ವ ನಿರ್ಮಾಪಕ – ವಿತರಕನ ಮೇಲೆ ಇಲ್ಲ ಸಲ್ಲದ ಸುಳ್ಳು ಹೇಳಲು ಸಂಘದ ಕಚೇರಿಯನ್ನೇ ಪತ್ರಿಕಾ ಗೋಷ್ಟಿಗೆ ಈಡುಮಾಡುವಾಗ ನನ್ನ ದೂರವಾಣಿಗಾದರೂ ಒಂದು ಸಂದೇಶ ಕೊಡಬಹುದಿತ್ತಲ್ಲವೇ? ನಿರ್ಮಾಪಕರ ಹಿತಕಾಯುವಲ್ಲಿ ತಾವು ಹಿಡಿಯುತ್ತಿರುವ ಮಾರ್ಗ ಸಂಘದ ಘನತೆಯನ್ನೂ ಕುಗ್ಗಿಸುತ್ತಿದೆ. ಇನ್ನು ಮುಂದಾದರೂ ಇದಾಗದಿರಲಿ ಎಂದು ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತಾ… ಹೀಗೆ ಸುದೀರ್ಘ ಪತ್ರ ಬರೆದಿದ್ದಾರೆ ಜಾಕ್ ಮಂಜು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂದು ಮತ್ತೆ ಸುದೀಪ್ ಪರ ಜಾಕ್ ಮಂಜು ಬ್ಯಾಟಿಂಗ್

    ಇಂದು ಮತ್ತೆ ಸುದೀಪ್ ಪರ ಜಾಕ್ ಮಂಜು ಬ್ಯಾಟಿಂಗ್

    ಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಟ ಸುದೀಪ್ (Sudeep) ಸುದೀರ್ಘವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber), ಚಲನಚಿತ್ರ ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ ಬರೆದರೂ, ಆರೋಪಗಳು ಮಾತ್ರ ನಿಲ್ಲುತ್ತಿಲ್ಲ. ವಾರದ ಹಿಂದೆಯಷ್ಟೇ ನಿರ್ಮಾಪಕ ಎನ್.ಎಂ. ಕುಮಾರ್ (NM Kumar) ತಮಗೆ ಸುದೀಪ್ ಕಾಲ್ ಶೀಟ್ ನೀಡುತ್ತಿಲ್ಲವೆಂದು ಆರೋಪ ಮಾಡಿದ್ದರೆ, ನಿನ್ನೆಯಷ್ಟೇ ಮತ್ತೋರ್ವ ನಿರ್ಮಾಪಕ ರೆಹಮಾನ್ (Rahman) ಕೂಡ ಸುದೀಪ್ ಅವರಿಂದ ತಮಗೆ ಹಾನಿಯಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು.

    ಇವತ್ತು ಸುದೀಪ್ ಅವರ ಆಪ್ತ ಜಾಕ್ ಮಂಜು (Jack Manju) ಮತ್ತೊಂದು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ್ದಾರೆ. ಸುದೀಪ್ ಬಗ್ಗೆ ಆರೋಪ ಮಾಡಿದ ರೆಹಮಾನ್ ಜೊತೆಯಲ್ಲೇ ಪತ್ರಿಕಾಗೋಷ್ಠಿ ಮಾಡುವುದಾಗಿ ತಿಳಿಸಿದ್ದಾರೆ. ರೆಹಮಾನ್ ಬರುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಸುದೀಪ್ ಮೇಲಿನ ಆರೋಪಗಳಿಗೆ ತಾವು ಉತ್ತರಿಸುವುದಾಗಿ ಜಾಕ್ ಮಂಜು ಹೇಳಿದ್ದಾರೆ. ಜೊತೆಗೆ ಸುದೀಪ್ ಅವರ ಅಭಿಮಾನಿಗಳು ಕೂಡ ಇಂದು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುವುದಾಗಿ ಸಂದೇಶವನ್ನು ರವಾನಿಸಿದ್ದಾರೆ.

    ಕುಮಾರ್ ಅವರು ಮಾಡಿದ ಆರೋಪಕ್ಕೆ ಈಗಾಗಲೇ ಸುದೀಪ್ ಕಾನೂನು ಮೂಲಕವೇ ಉತ್ತರಿಸಿದ್ದಾರೆ. ತಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡಿ, ತಮ್ಮ ವ್ಯಕ್ತಿತ್ವಕ್ಕೆ ಕುಮಾರ್ ಧಕ್ಕೆ ತರುತ್ತಿದ್ದಾರೆ ಎಂದು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಮಾನನಷ್ಟ ಕಟ್ಟಿಕೊಡಬೇಕು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ನೋಟಿಸ್ ಕಳುಹಿಸುತ್ತಿದ್ದಂತೆಯೇ ಕುಮಾರ್ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಸುದೀಪ್ ತಮಗೆ ಮೋಸ ಮಾಡಿದ್ದು ನಿಜ ಎಂದು ಮತ್ತೆ ನುಡಿದಿದ್ದರು.

    ಈ ಎಲ್ಲ ಆರೋಪ ಪ್ರತ್ಯಾರೋಪಕ್ಕೆ ಉತ್ತರ ಎನ್ನುವಂತೆ ಸುದೀಪ್, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಕ್ಕೆ ಪತ್ರ ಬರೆದಿದ್ದಾರೆ. ಮೂರು ಸಂಸ್ಥೆಗಳು ನಿರ್ಮಾಪಕರ ಪರ ನಿಲ್ಲಬೇಕೋ ಅಥವಾ ಕಲಾವಿದರ ಪರ ನಿಲ್ಲಬೇಕೋ ಎನ್ನುವ ಸಂದಿಗ್ಧತೆಗೆ ಒಳಗಾಗದೇ ನನ್ನ ಮೇಲೆ ಬಲವಂತದ ಒತ್ತಡ ಹಾಕದೆ, ನ್ಯಾಯಾಲಯದಲ್ಲೇ ಇದನ್ನು ಬಗೆಹರಿಸಿಕೊಳ್ಳಲು ಬಿಡಿ. ನಾನೇನಾದರೂ ತಪ್ಪು ಮಾಡಿದ್ದರೆ, ನ್ಯಾಯಾಯಲದಲ್ಲೇ ಶಿರಬಾಗಿ ಒಪ್ಪಿಕೊಂಡು ದಂಡ ಕಟ್ಟುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ‘ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ. ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೇ ತಕರಾರು ಇರುವುದಿಲ್ಲ. ಯಾವುದೇ ನಿರ್ಮಾಪಕರು, ಯಾರೇ ಕಲಾವಿದರು, ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ ಎಂದು ಮಾತೃ ಸಂಸ್ಥೆಗಳಿಗೂ ಕಿಚ್ಚ ಪಾಠ ಮಾಡಿದ್ದಾರೆ.

    27 ವರ್ಷಗಳ ಕಾಲ ನಾನೂ ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೇಯೆ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ, 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟತನಕ್ಕಲ್ಲ ಎಂದು ಹೇಳುವ ಮೂಲಕ ತಮಗೂ ನಿರ್ಮಾಪಕರಿಂದ ಬಾಕಿ ಬರಬೇಕಾಗಿದ್ದನ್ನೂ ನೆನಪಿಸಿದ್ದಾರೆ.

    ಚಿತ್ರರಂಗದ ಮುಂದಿನ ಭವಿಷ್ಯಕ್ಕೆ ಕೆಟ್ಟ ಉದಾಹರಣೆ ದಕ್ಕಬಾರದು ಎಂದು ಇಷ್ಟು ಕಠಿಣವಾದ ಹೋರಾಟ ಮಾಡುತ್ತಿರುವುದಾಗಿ ಕಿಚ್ಚ ಪತ್ರದಲ್ಲಿ ಬರೆದಿದ್ದಾರೆ. ಯಾರದ್ದೋ ಆಗಲಿ ಜೀವನ-ಜೀವ ಉಳಿಸಲು ಪ್ರಯತ್ನಿಸಿದ್ದೇನೇ ಹೊರತು, ಯಾರ ಜೀವ ಹೋಗಲೂ ನಾನು ಬದುಕಿನುದ್ದಕ್ಕೂ ಸಾಕ್ಷಿಯಾಗಲಾರೆ ಎಂದು ಹೇಳುವ ಮೂಲಕ ಎನ್.ಎಂ. ಸುರೇಶ್ ಅವರಿಗೂ ಇದೇ ಪತ್ರದಲ್ಲಿ ಉತ್ತರ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ತಮಿಳಿನ ಮಣಿರತ್ನಂ (Mani Ratnam) ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಆಗಿ ಮೂರೇ ದಿನಕ್ಕೆ 230 ಕೋಟಿಗೂ ಅಧಿಕ ಹಣ ಗಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮೂರೇ ದಿನಕ್ಕೆ ಬಾಕ್ಸ್ ಆಫೀಸಿನಲ್ಲಿ(Box Office) ಧೂಳೆಬ್ಬಿಸಿದೆ.

    ತಮಿಳು ಸಿನಿಮಾ ರಂಗದ ವಿಶ್ಲೇಷಕ ರಮೇಶ್ ಬಾಲಾ ಈ ಕುರಿತು ಬರೆದುಕೊಂಡಿದ್ದು, ಪೊನ್ನಿಯಿನ್ ಸೆಲ್ವನ್ (PS1) ಸಿನಿಮಾ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸಿನಲ್ಲಿ 130 ಕೋಟಿಗಳನ್ನು ಗಳಿಸಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ಇದು ವಿಶ್ವದಾದ್ಯಂತ ಗಳಿಸಿದ ಬಾಕ್ಸ್ ಆಫೀಸ್ ರಿಪೋರ್ಟ್ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಕಾದಂಬರಿಕಾರ ಕಲ್ಕಿ ಕೃಷ್ಣಮೂರ್ತಿ (Kalki Krishnamurthy) ಅವರ ಕಾದಂಬರಿಯನ್ನು ಆಧರಿಸಿ ಪೊನ್ನಿಯಿನ್ ಸೆಲ್ವನ್ ಸಿನಿಮಾವನ್ನು ತಯಾರಿ ಮಾಡಿದ್ದು, ಐಶ್ವರ್ಯ ರೈ (Aishwarya Rai) , ತ್ರಿಶಾ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ದಿಗ್ಗಜ ಕಲಾವಿದರೇ ಈ ಸಿನಿಮಾದಲ್ಲಿ ಇದ್ದಾರೆ. ಎ.ಆರ್.ರೆಹಮಾನ್ (Rahman) ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರವಿವರ್ಮನ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿದೆ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಸಾಮಾನ್ಯರು ಅಸಾಮಾನ್ಯ ಕನಸುಗಳನ್ನು ಕಾಣುವುದು ಸಹಜ. ಆದರೆ, ಸೂಪರ್ ಸ್ಟಾರ್ ನಟರೊಬ್ಬರು ನಾಲ್ಕು ಕನಸುಗಳನ್ನು ಕಂಡು, ಒಂದೇ ಒಂದು ಕನಸನ್ನು ಈಡೇರಿಸಿಕೊಂಡರು ಅನ್ನುವುದು ಅಚ್ಚರಿ. ಈ ವಿಷಯವನ್ನು ಸ್ವತಃ ಸ್ಟಾರ್ ನಟರ ಸಹೋದರರೇ ಹೇಳಿಕೊಂಡಿದ್ದು, ಆ ಕನಸು ಈಡೇರಿದ ಕುರಿತು ಲಕ್ಕಿ ಮ್ಯಾನ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

    ಅಗಲಿದ ಚೇತನ ಪುನೀತ್ ರಾಜ್ ಕುಮಾರ್ ಅವರು ಏನೆಲ್ಲ ಸಾಧನೆ ಮಾಡಿದ್ದರೂ, ಅವರೂ ನಾಲ್ಕು ಕನಸುಗಳನ್ನು ಕಂಡಿದ್ದರಂತೆ. ಆ ನಾಲ್ಕರಲ್ಲಿ ಒಂದೇ ಒಂದು ಕನಸು ಈಡೇರಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಈ ವಿಷಯವನ್ನು ಹಂಚಿಕೊಂಡರು. ನಾಲ್ಕು ಕನಸುಗಳಲ್ಲಿ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡಬೇಕು ಎನ್ನುವುದು ಅಪ್ಪ ಆಸೆ ಆಗಿತ್ತಂತೆ. ಅದನ್ನು ಲಕ್ಕಿ ಮ್ಯಾನ್ ಸಿನಿಮಾದ ಮೂಲಕ ಅಪ್ಪು ಈಡೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಾದರೆ, ಅಪ್ಪು ಕಂಡ ಇತರ ಕನಸುಗಳು ಅಂದರೆ, ತಾವು ಸ್ಟಾರ್ ನಟ ಆದ ನಂತರ ತಂದೆಯೊಂದಿಗೆ ನಟಿಸುವ ಆಸೆ ಹೊಂದಿದ್ದರಂತೆ. ಮಣಿರತ್ನಂ ಅವರು ನಿರ್ದೇಶನದಲ್ಲಿ ಕೆಲಸ ಮಾಡಲು ಬಯಸಿದ್ದರಂತೆ ಮತ್ತು ಅಪ್ಪು ಚಿತ್ರಕ್ಕೆ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ಅಲ್ಲದೇ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡುವಂತಹ ಅವಕಾಶಕ್ಕೆ ಕಾದಿದ್ದರು. ಅದೊಂದು ಇದೀಗ ಈಡೇರಿದೆ.

    Live Tv
    [brid partner=56869869 player=32851 video=960834 autoplay=true]