Tag: Rahkeem Cornwall

  • ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

    ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

    ಡೊಮಿನಿಕಾ: ಟೀಂ ಇಂಡಿಯಾ (Team India) ಹಾಗೂ ವೆಸ್ಟ್ ಇಂಡೀಸ್ (West Indies) ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ರಕೀಮ್ ಕಾರ್ನ್‍ವಾಲ್ (Rahkeem Cornwall) ತಮ್ಮ ದೇಹದ ತೂಕದಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

    ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿದ್ದ ರಕೀಮ್ ಕಾರ್ನ್‍ವಾಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿದ್ದರು. ಇವರು ಬೌಲಿಂಗ್‍ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್‌ ಕೊಹ್ಲಿ ಅವರನ್ನು ಔಟ್ ಮಾಡಿದ್ದರು. ಹೀಗಿದ್ದರೂ ಇವರನ್ನು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಆಯ್ಕೆ ಮಾಡಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಂಶಯವನ್ನು ವ್ಯಕ್ತಪಡಿಸಿದ್ದರು. ಇಷ್ಟು ತೂಕದ ವ್ಯಕ್ತಿ ಹೇಗೆ ಕ್ರಿಕೆಟ್‍ಗೆ ಆಯ್ಕೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಕೊಹ್ಲಿಗೆ ಯುವ ಆಟಗಾರರನ್ನು ಬೆಳೆಸುವ ಕಲೆ ಚೆನ್ನಾಗಿ ಗೊತ್ತಿದೆ – ಇಶಾಂತ್ ಶರ್ಮಾ

    ಈ ಬಗ್ಗೆ ಬಹಳ ಹಿಂದೆಯೇ ರಕೀಮ್ ಕಾರ್ನ್‍ವಾಲ್ ಮಾತಾಡಿದ್ದರು. ನನ್ನ ದೇಹದ ರಚನೆಯನ್ನು ನನ್ನಿಂದ ಬದಲಿಸಲು ಸಾಧ್ಯವಿಲ್ಲ. ನಾನು ತುಂಬಾ ದಪ್ಪಗಿದ್ದೇನೆ ಹಾಗೂ ತುಂಬಾ ಎತ್ತರವಾಗಿದ್ದೇನೆಂದು ನಾನು ಹೇಳಲು ಹೋಗುವುದಿಲ್ಲ. ನಾನು ಇದೆಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೌಶಲ್ಯದ ಮೇಲೆ ನಾನು ಅಪಾರವಾದ ನಂಬಿಕೆಯನ್ನು ಇಟ್ಟಿದ್ದೇನೆ ಎಂದಿದ್ದರು.

    2019ರಲ್ಲಿ ಭಾರತ ತಂಡದ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ನಲ್ಲಿ ರಕೀಮ್ ಕಾರ್ನ್‍ವಾಲ್ ಪಾದಾರ್ಪಣೆ ಮಾಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ದೇಹದ ತೂಕದ ಆಟಗಾರ ಎಂದು ಕರೆಸಿಕೊಂಡಿದ್ದರು. ರಕೀಮ್ ಕಾರ್ನ್ ಆಫ್ ಸ್ಪಿನ್ನರ್ ಜೊತೆ ಉತ್ತಮ ಬ್ಯಾಟ್ಸ್‍ಮನ್ ಕೂಡ ಆಗಿದ್ದಾರೆ.

    ವೆಸ್ಟ್ ಇಂಡೀಸ್ ದೈತ್ಯ ಆಲ್‍ರೌಂಡರ್ ರಕೀಮ್ ಕಾರ್ನ್‍ವಾಲ್ ಅವರು ಪ್ರಸ್ತುತ 143 ಕೆ.ಜಿ ತೂಕ, 6.8 ಅಡಿ ಎತ್ತರ ಹೊಂದಿದ್ದಾರೆ. ಇಲ್ಲಿಯವರೆಗೂ ಇವರು ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ರನ್‍ಗಳು ಹಾಗೂ 35 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. 2021ರ ಬಳಿಕ ಫಾರ್ಮ್ ಕಳೆದುಕೊಂಡಿದ್ದ ಕಾರಣ ತಂಡದಿಂದ ಹೊರ ಬಿದ್ದಿದ್ದರು.

    ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಕೀಮ್ ಕಾರ್ನ್‍ವಾಲ್ ಅವರನ್ನು ಆಡಿಸುವ ಯೋಚನೆ ಇರಲಿಲ್ಲ. ಆದರೆ ಸ್ಪಿನ್ನರ್ ಗುಡಕೇಶ್ ಮಾಟಿ ಗಾಯಕ್ಕೆ ತುತ್ತಾದ ಬಳಿಕ ಅವರ ಸ್ಥಾನಕ್ಕೆ ರಕೀಮ್ ಅವರನ್ನು ಮೊದಲನೇ ಟೆಸ್ಟ್‍ಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಮೊದಲನೇ ಟೆಸ್ಟ್‌ನಲ್ಲಿ ಬೌಲ್ ಮಾಡಿದ 15 ಓವರ್‌ಗಳಲ್ಲಿ 5 ಮೇಡನ್‍ನೊಂದಿಗೆ 32 ರನ್ ನೀಡಿ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದ್ದರು. ಇದನ್ನೂ ಓದಿ: ವಿಶ್ವಕಪ್ ಸೆಮಿಫೈನಲ್‍ಗೆ 5 ಟೀಂ ಹೆಸರಿಸಿದ ಗಂಗೂಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 22 ಸಿಕ್ಸ್‌, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್‌ ಬ್ಲ್ಯಾಸ್ಟ್‌

    22 ಸಿಕ್ಸ್‌, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್‌ ಬ್ಲ್ಯಾಸ್ಟ್‌

    ಅಟ್ಲಾಂಟಾ: ಟಿ 20 ಕ್ರಿಕೆಟ್‌ನಲ್ಲಿ(T20) ಶತಕ ಹೊಡೆಯುವುದು ಈಗ ಸಾಮಾನ್ಯವಾಗಿದೆ. ಆದರೆ ಈಗ ಟಿ20ಯಲ್ಲಿ ವಿಂಡೀಸ್‌ ಆಟಗಾರರೊಬ್ಬರು ಅಮೆರಿಕದಲ್ಲಿ ದ್ವಿಶತಕ ಹೊಡೆದು ಅಪರೂಪದ ಸಾಧನೆ ಮಾಡಿದ್ದಾರೆ.

    ಅಮೆರಿಕದ ಅಟ್ಲಾಂಟಾದಲ್ಲಿ ನಡೆಯುತ್ತಿರುವ ಟಿ20 ಲೀಗ್‌ನಲ್ಲಿ ಅಟ್ಲಾಂಟಾ ಫೈರ್‌ ಆಟಗಾರ ಕಾರ್ನ್‌ವಾಲ್(Cornwall) ಸ್ಕ್ವಾರ್‌ ಡ್ರೈವರ್‌ ವಿರುದ್ಧ 77 ಎಸೆತಗಳಲ್ಲಿ ಔಟಾಗದೇ 205 ರನ್‌ ಹೊಡೆದಿದ್ದಾರೆ.

    ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಕಾರ್ನ್‌ವಾಲ್ 266.23 ಸ್ಟ್ರೈಕ್‌ ರೇಟ್‌ನಲ್ಲಿ 22 ಸಿಕ್ಸ್‌ ಮತ್ತು 17 ಬೌಂಡರಿ ಚಚ್ಚಿದ್ದಾರೆ. ಬೌಂಡರಿ, ಸಿಕ್ಸರ್‌ ಮೂಲಕವೇ 200 ರನ್‌ ಬಂದಿದೆ. ಕಾರ್ನ್‌ವಾಲ್ ಆಟದಿಂದ ಅಟ್ಲಾಂಟಾ ಫೈರ್‌ ತಂಡ 172 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಟೂರ್ನಿಯಲ್ಲಿ ಜಯಗಳಿಸುವ ತಂಡಕ್ಕೆ 75 ಸಾವಿರ ಡಾಲರ್‌ ಬಹುಮಾನವನ್ನು ನೀಡಲಾಗುತ್ತದೆ.

    ಕಾರ್ನ್‌ವಾಲ್ ದ್ವಿಶತಕ ಸಾಧನೆ ಇತಿಹಾಸದ ಪುಟದಲ್ಲಿ ದಾಖಲಾಗುವುದಿಲ್ಲ. ಅಟ್ಲಾಂಟಾ ಕ್ರಿಕೆಟ್‌ ಟೂರ್ನಿಗೆ ಐಸಿಸಿಯ ಯಾವುದೇ ಮಾನ್ಯತೆ ಇಲ್ಲ. ಇದನ್ನೂ ಓದಿ: ನೆಟ್ಸ್‌ನಲ್ಲಿ ಬೆವರಿಳಿಸಿದ ಬ್ಯೂಟಿ – ಶಹಬ್ಬಾಸ್‌ಗಿರಿ ನೀಡಿ ಫ್ಯಾನ್ಸ್ ಕ್ಲೀನ್ ಬೌಲ್ಡ್


    ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ದಾಖಲೆ ಕ್ರಿಸ್‌ ಗೇಲ್‌(Chris Gayle) ಹೆಸರಿನಲ್ಲಿದೆ. ರಾಯಲ್‌ ಚಾಲೆಂಜರ್ಸ್‌ ಪರ ಆಡಿದ್ದ ಗೇಲ್‌ 2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಔಟಾಗದೇ 175 ರನ್‌(66 ಎಸೆತ,13 ಬೌಂಡರಿ, 17 ಸಿಕ್ಸರ್‌, 265.15 ಸ್ಟ್ರೈಕ್‌ ರೇಟ್‌) ಹೊಡೆದಿದ್ದರು.

    Live Tv
    [brid partner=56869869 player=32851 video=960834 autoplay=true]