Tag: rahil gandhi

  • ನಿಮ್ಮ ಮನವಿ ಲೇಟ್ ಆಗಿಲ್ವಾ ಮೋದಿಜೀ: ರಮ್ಯಾ ಟಾಂಗ್

    ನಿಮ್ಮ ಮನವಿ ಲೇಟ್ ಆಗಿಲ್ವಾ ಮೋದಿಜೀ: ರಮ್ಯಾ ಟಾಂಗ್

    ಬೆಂಗಳೂರು: ಮತದಾನ ಜಾಗೃತಿಯ ಬಗ್ಗೆ ನೀವು ಮಾಡಿದ ಮನವಿ ಲೇಟ್ ಆಗಿಲ್ವಾ ಎಂದು ಪ್ರಶ್ನಿಸಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಇಂದು ಮೋದಿ ಅವರು ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಸಾಧಕರಿಗೆ ಟ್ವೀಟ್ ಮಾಡಿ, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದಿದ್ದರು. ಅಷ್ಟೇ ಅಲ್ಲದೆ ತಮ್ಮ ವಿರುದ್ಧ ಸದಾ ಕಿಡಿಕಾರುವ ಪ್ರತಿಪಕ್ಷ ನಾಯಕರನ್ನು ಕೂಡ ಟ್ಯಾಗ್ ಮಾಡಿ ಮನದಾನದ ಬಗ್ಗೆ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದ್ದರು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಯಾಗ್ ಆಗಿರುವ ಮೋದಿ ಅವರ ಟ್ವೀಟ್ ಅನ್ನು ರಮ್ಯ ರೀ-ಟ್ವೀಟ್ ಮಾಡಿದ್ದಾರೆ. ನೀವು ಈಗ ಮಾಡುತ್ತಿರುವ ಕೆಲಸವನ್ನು ನಾವು ಮೊದಲೇ ಮಾಡಿದ್ದೇವೆ. ಮತದಾನಕ್ಕೆ ಮನವಿ ಮಾಡ್ತಿರೋದು ತಡವಾಗಿದೆ ಅನಿಸುತ್ತಿಲ್ವಾ ಎಂದು ಪ್ರಶ್ನಿಸಿ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನೀವು ಈಗ ಮಾಡುತ್ತಿರುವ ಕೆಲಸವನ್ನು ನಾವು ಮೊದಲೇ ಮಾಡಿದ್ದೇವೆ, ಇದನ್ನ ನಾವು ಚುನಾವಣೆಯ ದಿನಾಂಕ ಘೋಷಣೆಯಾದ ದಿನದಿಂದಲೇ ಮಾಡುತ್ತಿದ್ದೇವೆ #RegisterToVote. ಇದನ್ನೊಮ್ಮೆ ನೋಡಿ, ಮತದಾನಕ್ಕೆ ಮನವಿ ಮಾಡುತ್ತಿರೋದು ತಡವಾಯ್ತು ಅಂತ ನಿಮಗೆ ಅನಿಸುತ್ತಿಲ್ವಾ. ಹಾಗೆಯೇ ರಾಹುಲ್ ಗಾಂಧಿ ಅವರು ಸ್ಟೆಲ್ಲಾ ಮೇರಿಸ್ ವಿದ್ಯಾರ್ಥಿಗಳ ಜೊತೆ ಮಾಡಿರುವ ಸಂವಾದ ಕಾರ್ಯಕ್ರಮ ಕೂಡ ಯಶಸ್ವಿಯಾಗಿದೆ. #VanakkamRahulGandhi ಎಂದು ಬರೆದು ಮೋದಿ ಅವರ ಟ್ವೀಟ್‍ಗೆ ರಮ್ಯಾ ರೀ-ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv