Tag: raha kapoor

  • ಮಗಳ ಫೋಟೋ ತೆಗೆದರೆ ಕಾನೂನು ಕ್ರಮ: ಆಲಿಯಾ ಭಟ್ ವಾರ್ನಿಂಗ್

    ಮಗಳ ಫೋಟೋ ತೆಗೆದರೆ ಕಾನೂನು ಕ್ರಮ: ಆಲಿಯಾ ಭಟ್ ವಾರ್ನಿಂಗ್

    ಬಾಲಿವುಡ್ ನಟ ರಣಬೀರ್ ಕಪೂರ್‌ ‌(Ranbir Kapoor) ಮತ್ತು ಆಲಿಯಾ ಭಟ್ (Alia Bhatt) ದಂಪತಿ ಮಗಳು ರಾಹಾ (Raha Kapoor) ಸುರಕ್ಷತೆಗಾಗಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಮಗಳ ಫೋಟೋವನ್ನು ಕ್ಲಿಕ್ಕಿಸಬೇಡಿ, ಒಂದು ವೇಳೆ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಲಿಯಾ ಪಾಪರಾಜಿಗಳಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಮಾ.15ರಂದು ಆಲಿಯಾ ಭಟ್ 32ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆ 2 ದಿನ ಮುಂಚಿತವಾಗಿ ನಿನ್ನೆ (ಮಾ.13) ಮಾಧ್ಯಮಗಳ ಜೊತೆ ಹುಟ್ಟುಹಬ್ಬವನ್ನು ನಟಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಆಲಿಯಾ, ಯಾರೂ ಕೂಡ ತಮ್ಮ ಮಗಳ ಫೋಟೋ ತೆಗೆಯಬಾರದು ಮತ್ತು ಅನಧಿಕೃತವಾಗಿ ಬಳಸಬಾರದು ಎಂದು ಮನವಿ ಮಾಡಿದ್ದಾರೆ.

    ಒಂದು ವೇಳೆ ಕೆಲವರು ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದಿದ್ದಾರೆ. ಕೇರ್ ಮಾಡದೇ ಇರುವವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಟಿ ಎಚ್ಚರಿಕೆ ನೀಡಿದ್ದಾರೆ. ನಟಿಯ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ 2022ರಲ್ಲಿ ರಣಬೀರ್ ಕಪೂರ್ ಜೊತೆ ಆಲಿಯಾ ಮದುವೆ ನಡೆಯಿತು. ಇವರ ಸುಂದರ ದಾಂಪತ್ಯಕ್ಕೆ 2 ವರ್ಷದ ಮಗಳು ರಾಹಾ ಸಾಕ್ಷಿಯಾಗಿದ್ದಾಳೆ.

  • ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

    ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಯುರೋಪ್ ವೆಕೇಷನ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಅಂಬಾನಿ ಮನೆಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಮುಗಿಸಿ ಮುಂಬೈ ಏರ್‌ಪೋರ್ಟ್‌ನಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು, ಅಪ್ಪನ ಜೊತೆಗಿನ ರಾಹಾ ತುಂಟಾಟದ ಪೋಸ್ ನೆಟ್ಟಿಗರ ಗಮನ ಸೆಳೆದಿದೆ. ರಾಹಾಗೆ ಮುದ್ದು ರಾಜಕುಮಾರಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಮುಂಬೈ ವಿಮಾನ ನಿಲ್ದಾಣದಿಂದ ರಣ್‌ಬೀರ್ ಜೊತೆ ಮನೆಗೆ ತೆರಳುವಾಗ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾಳೆ. ರಾಹಾ ಮುದ್ದು ಮುಖ ನೋಡಿ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ರಿಷಿ ಕಪೂರ್ ಹೋಲಿಸಿ ರಾಹಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಪಡ್ಡೆಹುಡುಗರಿಗೆ ಶಾಕ್ ಕೊಟ್ಟ ಕೃತಿ ಶೆಟ್ಟಿ

    ರಾಹಾಳನ್ನು ಕ್ಯಾಮೆರಾ ಕಣ್ಣಿಂದ ರಣ್‌ಬೀರ್ ಕಪೂರ್ ದಂಪತಿ ದೂರವಿಟ್ಟಿದ್ದಾರೆ. ವರ್ಷಗಳ ಬಳಿಕ ಕಳೆದ ಕ್ರಿಸ್‌ಮಸ್ ವೇಳೆ ಮಗಳ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದರು.

    ಅಂದಹಾಗೆ, ‘ರಾಮಾಯಣ’ ಮತ್ತು ‘ಅನಿಮಲ್’ ಪಾರ್ಕ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್, ವಾರ್ 2 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  • ಮತ್ತೆ ಕಾಣಿಸಿಕೊಂಡ ರಾಹಾ: ರಣ್‌ಬೀರ್ ದಂಪತಿ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

    ಮತ್ತೆ ಕಾಣಿಸಿಕೊಂಡ ರಾಹಾ: ರಣ್‌ಬೀರ್ ದಂಪತಿ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

    ಬಾಲಿವುಡ್ ನಟ ರಣ್‌ಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ದಂಪತಿ ಪುತ್ರಿ ರಾಹಾಳನ್ನ ಸಾರ್ವಜನಿಕ ವಲಯದಿಂದ ದೂರವಿಟ್ಟಿದ್ದಾರೆ. ಇದೀಗ ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಅಯಾನ್ ಮುಖರ್ಜಿ ಜೊತೆ ರಾಹಾ (Raha) ಕಾಣಿಸಿಕೊಂಡಿದ್ದು, ಆಕೆಯ ಮುದ್ದಾದ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ:‘ಯುನಿಸೆಫ್ ಇಂಡಿಯಾ’ಗೆ ರಾಯಭಾರಿಯಾದ ಕರೀನಾ ಕಪೂರ್

    ರಾಹಾ ಹುಟ್ಟಿದ ದಿನದಿಂದಲೂ ಆಕೆಯ ಮುಖವನ್ನು ಆಲಿಯಾ ದಂಪತಿ ರಿವೀಲ್ ಮಾಡಿರಲಿಲ್ಲ. ಅದಾದ ಬಳಿಕ ಕಳೆದ ವರ್ಷ ಅಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬದಂದು ಮೊದಲ ಬಾರಿಗೆ ರಾಹಾಳ ಮುಖ ರಿವೀಲ್ ಮಾಡಿದ್ದರು. ಆ ನಂತರ ಇದೀಗ 2ನೇ ಬಾರಿ ರಾಹಾ ಕಾಣಿಸಿಕೊಂಡಿದ್ದಾಳೆ.

     

    View this post on Instagram

     

    A post shared by Snehkumar Zala (@snehzala)

    ರಾಹಾಳ ಮುದ್ದು ಮುಖ ಆಕೆಯ ಕಣ್ಣೋಟ ತುಂಟಾಟದ ವಿಡಿಯೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಕೆಲವರು ರಾಹಾ ಲುಕ್ ಅನ್ನು ರಣ್‌ಬೀರ್ ಹೋಲಿಸಿದ್ರೆ, ಇನ್ನೂ ಕೆಲವರು ನಟ ರಿಷಿ ಕಪೂರ್‌ಗೆ ಹೋಲಿಸಿ ಮೆಚ್ಚುಗೆ ಸೂಚಿಸಿದ್ದಾರೆ. ತಾತನಂತೆಯೇ ಮೊಮ್ಮಗಳು ಎಂದು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

    ಅಂದಹಾಗೆ, ರಣ್‌ಬೀರ್ ಕಪೂರ್ ಅನಿಮಲ್ ಸಕ್ಸಸ್ ನಂತರ ‘ರಾಮಾಯಣ’ (Ramayana) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಭಟ್ ಕೂಡ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • 250 ಕೋಟಿ ಮೌಲ್ಯದ ಬಂಗಲೆಗೆ ಒಡತಿಯಾದ ರಣ್‌ಬೀರ್, ಆಲಿಯಾ ಭಟ್ ಪುತ್ರಿ

    250 ಕೋಟಿ ಮೌಲ್ಯದ ಬಂಗಲೆಗೆ ಒಡತಿಯಾದ ರಣ್‌ಬೀರ್, ಆಲಿಯಾ ಭಟ್ ಪುತ್ರಿ

    ಬಾಲಿವುಡ್ ನಟ ರಣ್‌ಬೀರ್ ಕಪೂರ್- ಆಲಿಯಾ ಭಟ್ (Alia Bhatt) ಜೋಡಿ ತಮ್ಮ ಕನಸಿನ ಮನೆ ಕಟ್ಟುವುದಕ್ಕೆ ಮುಂದಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಬಂಗಲೆಗೆ ಸ್ಟಾರ್ ಜೋಡಿ ಭೇಟಿ ನೀಡಿದೆ. 250 ಕೋಟಿ ರೂ.ಗೂ ಅಧಿಕ ಮೌಲ್ಯದ ಈ ಬಂಗಲೆ ಈಗ ರಾಹಾ (Raha Kapoor) ಹೆಸರಿಗೆ ರಿಜಿಸ್ಟರ್ ಮಾಡಿಸಿದ್ದಾರೆ.

    ಕಪೂರ್ ಕುಟುಂಬದ ಕುಡಿ ರಾಹಾ ಕಪೂರ್ ಇದೀಗ 250 ಕೋಟಿ ರೂ. ಮೌಲ್ಯದ ಬಂಗಲೆಗೆ ಒಡತಿಯಾಗಿದ್ದಾಳೆ. ಮುಂಬೈನ ಐಷಾರಾಮಿ ಬಂಗಲೆಯನ್ನು ಮಗಳು ರಾಹಾ ಹೆಸರಿಗೆ ರಣ್‌ಬೀರ್- ಆಲಿಯಾ ಭಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಅತೀ ಸಣ್ಣ ವಯಸ್ಸಿನ ಅತೀ ಹೆಚ್ಚು ಆಸ್ತಿ ಹೊಂದಿದ ಸ್ಟಾರ್‌ ಕಿಡ್‌ ಎನ್ನುವ ಖ್ಯಾತಿಗೆ ರಾಹಾ ಗಳಿಸಿದ್ದಾಳೆ.

    ಈ ಬಂಗಲೆಗೂ ಕಪೂರ್ ಕುಟುಂಬಕ್ಕೂ ನಂಟಿದೆ. ರಣ್‌ಬೀರ್ (Ranbir Kapoor) ತಂದೆ ರಿಷಿ ಕಪೂರ್ ಅವರು ಸಾಯುವ ಮೊದಲು ಈ ಸೈಟ್‌ಗೆ ಭೇಟಿ ನೀಡಿದ್ದರು. ಈ ಬಂಗಲೆಯನ್ನು ರಿಷಿ ಕಪೂರ್ ಇಷ್ಟಪಟ್ಟಿದ್ದರು. ಹಾಗಾಗಿ ದುಬಾರಿ ಮೌಲ್ಯದ ಬಂಗಲೆಯನ್ನು ರಾಹಾ ಹೆಸರಿಗೆ ರಿಜಿಸ್ಟರ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ರುಚಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಓರ್ರಿ

    ಮುಂಬೈ ಬಾಂದ್ರಾದಲ್ಲಿ ಈಗಾಗಲೇ ರಣ್‌ಬೀರ್-ಆಲಿಯಾ ಹೆಸರಲ್ಲಿ ದುಬಾರಿ ಫ್ಲಾಟ್‌ಗಳಿವೆ. ಅದರ ಜೊತೆಗೆ ಇದೀಗ ಖರೀದಿಸಿರುವ ಬಂಗಲೆ ಬಗ್ಗೆ ಹೆಚ್ಚು ಟಾಕ್ ಆಗುತ್ತಿದೆ.‌ ಇದನ್ನೂ ಓದಿ:ಮಾಜಿ ಪ್ರೇಯಸಿಯಿಂದ ಹಾಲಿವುಡ್ ಗಾಯಕನ ಮೇಲೆ ಅತ್ಯಾಚಾರ ಆರೋಪ

    ಅಂದಹಾಗೆ, ರಣ್‌ಬೀರ್‌ ಕಪೂರ್‌ ಮತ್ತು ಆಲಿಯಾ ಬಾಲಿವುಡ್‌ನ ಬಹುಬೇಡಿಕೆ ಸ್ಟಾರ್ಸ್‌ ಆಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.