Tag: Ragini Prajwal

  • ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು: ಪ್ರಜ್ವಲ್ ಕಿಡಿಕಾರಿದ್ದು ಯಾರ ವಿರುದ್ಧ?

    ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು: ಪ್ರಜ್ವಲ್ ಕಿಡಿಕಾರಿದ್ದು ಯಾರ ವಿರುದ್ಧ?

    ಪ್ರಜ್ವಲ್ ದೇವರಾಜ್ (Prajwal Devaraj) ಕರಾವಳಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣವನ್ನ ಬೆಂಗಳೂರಿನ (Bengaluru) ದೊಡ್ಡಾಲದ ಮರದ ಸುತ್ತಮುತ್ತ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಎಕ್ಸ್‌ಕ್ಯೂಸಿವ್‌ ಮಾತುಗಳನ್ನಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಆಗ್ತಿರುವ ಮುಜುಗರದ ಸಂದೇಶಗಳು, ಟ್ರೋಲ್ಸ್ ಹಾಗೂ ಮೀಮ್ಸ್‌ಗಳ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ರಮ್ಯಾಗೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಅದಕ್ಕೆ ತಕ್ಕ ಶಾಸ್ತಿ ಆಗಿದೆ, ಅದೇ ಕಾರಣಕ್ಕೆ ಕೆಲವರು ಕಂಬಿ ಹಿಂದೆ ಕುಳಿತಿದ್ದಾರೆ. ಮತ್ತೊಂದೆಡೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಣೆ ವೇಳೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾರೇ ಎಷ್ಟೇ ಕೆಟ್ಟದಾಗಿ ನಿಂದಿಸಿದರೂ ಯಾರೂ ಪ್ರತಿಕ್ರಿಯೆ ನೀಡಬೇಡಿ. ನಮ್ಮ ಅಭಿಮಾನಿಗಳು ಯಾರಿಗೂ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಾನೇ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ಅಂತಾದ್ರಲ್ಲಿ ನೀವ್ಯಾಕೆ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾ? ಅದರ ಬದಲಾಗಿ ಯಾರಿಗಾದರೂ ಸಹಾಯವಾಗುವ ಒಂದೆರಡು ಒಳ್ಳೆಯ ಕೆಲಸ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಕಿವಿಮಾತನ್ನ ಹೇಳಿದ್ದರು.ಇದನ್ನೂ ಓದಿ: ಕಲ್ಟ್ ಸಿನಿಮಾದ ಅಯ್ಯೊ ಶಿವನೇ ಹಾಡಿನ ರಿಲೀಸ್ ಡೇಟ್ ಫಿಕ್ಸ್

    ಕೆಲತಿಂಗಳ ಹಿಂದೆ ಪ್ರಜ್ವಲ್ ದೇವರಾಜ್ ಮಾಧ್ಯಮಕ್ಕೆ ಹೇಳಿಕೆಕೊಟ್ಟ ವೇಳೆ ಅವರಿಗೂ ಕೆಲವು ಕಿಡಿಗೇಡಿಗಳು ಮಾಡಿದ ಹೇಯ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಸಹೋದರಿಗೆ ಕೆಲವು ಕಿಡಿಗೇಡಿಗಳು ಅಶ್ಲೀಲ ಫೋಟೋಗಳನ್ನ ಕಳುಹಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದರಂತೆ. ಇದಕ್ಕೆ ಕಾನೂನು ರೀತಿಯಲ್ಲಿ ಕಂಪ್ಲೆಂಟ್‌ ಮಾಡಲಾಗಿದ್ದು, ಅವರನ್ನ ಪತ್ತೆಹಚ್ಚಲು ಕಾನೂನು ಮೂಲಕ ಪ್ರಯತ್ನ ಮಾಡಲಾಗ್ತಿದೆಯಂತೆ. ಈ ಬಗ್ಗೆ ಮಾತಾಡಿರುವ ಪ್ರಜ್ವಲ್ ದೇವರಾಜ್ ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಟ್ರೋಲ್ಸ್ ಹಾಗೂ ಮೀಮ್ಸ್‌ನಲ್ಲಿ ರಾಗಿಣಿ ಹಾಗೂ ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ. ಮದುವೆಯಾಗಿ 10 ವರ್ಷವಾದರೂ ಮಗು ಮಾಡಿಕೊಂಡಿಲ್ಲ. ಯಾಕಂದ್ರೆ ರಾಗಿಣಿ ಅವರ ಫಿಗರ್ ಹಾಳಾಗುತ್ತೆ ಅಂತಾ ಮಗು ಮಾಡಿಕೊಂಡಿಲ್ಲ ಅಂತಾ ಮೀಮ್ಸ್‌ನಲ್ಲಿ ಹಾಕಿದ್ದಾಗ ಅದನ್ನ ನೋಡಿ ರಾಗಿಣಿ ಬೇಜಾರಾದ್ರು ನಾನು ಸಮಾಧಾನ ಮಾಡಿದ್ದೇನೆ ಎಂದಿದ್ದಾರೆ.

    ಧೈರ್ಯ ಇದ್ರೆ ಮುಂದೆ ಬಂದು ಹೇಳ್ಬೇಕು, ನಮ್ ಅಭಿಮಾನಿಗಳು ಇನ್ನೊಬ್ರ ಅಭಿಮಾನಿಗಳಂತಲ್ಲ ಎಲ್ಲೋ ಬಚ್ಚಿಟ್ಕೊಂಡು ಬೇಕಾಬಿಟ್ಟಿ ಕಾಮೆಂಟ್ ಹಾಕೋರಿಗೆ ಗಂಡ್ಸು ಅಂತಾ ಹೇಳೋಕೆ ಆಗುತ್ತಾ? ಎಲ್ಲರ ಕೈಯಲ್ಲೂ ಫೋನ್ ಇದೆ. ಅವನಿಗಿರುವ ಪ್ರೆಸ್ಟ್ರೇಷನ್‌ಗೆ ಯಾರಿಗೋ ಬೈಬೇಕು ಅನ್ಸುತ್ತೆ ನಾವು ಈಜಿಯಾಗಿ ಸಿಕ್ತೀವಿ. ಎಲ್ಲೋ ಕುತ್ಕೊಂಡು ಕೆಟ್ಟದಾಗಿ ಮೆಸೇಜ್ ಹಾಕ್ತಾರೆ. ಈ ರೀತಿ ಆಗಬಾರದು ಅಂದರೆ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಬೇಕಾಗುತ್ತೆ. ಎಂದು ಖಾರವಾಗಿ ನುಡಿದಿದ್ದಾರೆ ಪ್ರಜ್ವಲ್ ದೇವರಾಜ್.ಇದನ್ನೂ ಓದಿ: ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ರಶ್ಮಿಕಾ-ವಿಜಯ್ ದೇವರಕೊಂಡ

  • ರಾಗಿಣಿ ಪ್ರಜ್ವಲ್ ಅಭಿನಯದ ‘ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ

    ರಾಗಿಣಿ ಪ್ರಜ್ವಲ್ ಅಭಿನಯದ ‘ಶಾನುಭೋಗರ ಮಗಳು’ ಚಿತ್ರ ಸದ್ಯದಲ್ಲೇ ತೆರೆಗೆ

    ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ‘ಶಾನುಭೋಗರ ಮಗಳು’ (Shanubhogara Magalu) ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ (Ragini Prajwal) ‘ಶಾನುಭೋಗರ ಮಗಳ’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ:‘ಟೋಬಿ’ ನಟಿಗೆ ಸಿಕ್ತು ಬಿಗ್‌ ಚಾನ್ಸ್‌- ತಮಿಳು ನಟ ಸಿದ್ಧಾರ್ಥ್‌ಗೆ ಚೈತ್ರಾ ಆಚಾರ್‌ ನಾಯಕಿ

    ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಿಸಿರುವ ಈ ಚಿತ್ರ ಹಲವು ವಿಶೇಷಗಳನ್ನೊಳಗೊಂಡಿದೆ. ಜೈ ಆನಂದ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಿ.ಎಸ್ ಕೆಂಪರಾಜ್ ಅವರ ಸಂಕಲನವಿದೆ. ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್ (ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ ‘ಶಾನುಭೋಗರ ಮಗಳು’ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.

    ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಖ್ಯಾತ ನಟ ಕಿಶೋರ್ (Kishore) ಅಭಿನಯಿಸಿದ್ದಾರೆ.

  • ಫ್ರೆಂಡ್ಸ್‌-ಫ್ಯಾಮಿಲಿ ಜೊತೆ‌ ಊಟಿಯಲ್ಲಿ ಎಂಜಾಯ್‌ ಮಾಡ್ತಿದ್ದಾರೆ ಮೇಘನಾ ರಾಜ್

    ಫ್ರೆಂಡ್ಸ್‌-ಫ್ಯಾಮಿಲಿ ಜೊತೆ‌ ಊಟಿಯಲ್ಲಿ ಎಂಜಾಯ್‌ ಮಾಡ್ತಿದ್ದಾರೆ ಮೇಘನಾ ರಾಜ್

    ಟಿ ಮೇಘನಾ ರಾಜ್ (Meghana Raj), ನಿರ್ಮಾಪಕ ಪನ್ನಗಭರಣ, ಪ್ರಜ್ವಲ್ ದೇವರಾಜ್ (Prajwal Devraj) ಫ್ಯಾಮಿಲಿ ಸೇರಿದಂತೆ ಊಟಿಯಲ್ಲಿ (Ooty) ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ಫ್ರೆಂಡ್- ಫ್ಯಾಮಿಲಿ ಜೊತೆ ಮಸ್ತ್ ಮಜಾ ಮಾಡ್ತಿದ್ದಾರೆ ಮೇಘನಾ ರಾಜ್. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ‘ತತ್ಸಮ ತದ್ಭವ’ (Tatsama Tadbava) ಚಿತ್ರದ ಮೂಲಕ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ಇತ್ತೀಚಿಗೆ ಈ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ಈ ಬೆನ್ನಲ್ಲೇ ಮೇಘನಾ & ಟೀಂ ಊಟಿಗೆ ಹಾರಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ- ರಾಯನ್, ಪ್ರಜ್ವಲ್ ದಂಪತಿ, ಪನ್ನಗಭರಣ ದಂಪತಿ, ಕುಟುಂಬದವರೆಲ್ಲರೂ ಊಟಿಯಲ್ಲಿ ಬೀಡು ಬಿಟ್ಟಿದ್ದಾರೆ. ಊಟಿಯ ಸುಂದರ ತಾಣಗಳಿಗೆ ಭೇಟಿ ನೀಡುತ್ತಾ ಒಂದೊಳ್ಳೆಯ ಸಮಯ ಕಳೆಯುತ್ತಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್?

     

    View this post on Instagram

     

    A post shared by Prajwal Devaraj (@prajwaldevaraj)

    ಇನ್ನೂ ಮೇಘನಾ ನಟನೆಯ ‘ತತ್ಸಮ ತದ್ಭವ’ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಫೀಮೇಲ್ ಓರಿಯೇಟೆಡ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಕೂಡ ಪೊಲೀಸ್ (Police) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ (Pranam) ದೇವರಾಜ್ ಅಭಿನಯದ ವೈರಂ (Vairam) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಗಿದೆ.  ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ (Ragini Prajwal) ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ,  ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ  ಸಮಯದಲ್ಲಿ ನನ್ನ ಮಗನ 2ನೇ  ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್  ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

    ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ.. ಹಿಂದಿನ  ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.  ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು.  ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.

     ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್,  ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು. ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶಾನುಭೋಗರ ಮಗಳು” (Shanubhogara magalu) ಚಿತ್ರದ ವಿಶೇಷ ಪಾತ್ರದಲ್ಲಿ ಬಹುಬಾಷಾ ನಟ ಕಿಶೋರ್ (Kishore) ಅಭಿನಯಿಸಲಿದ್ದಾರೆ. ರಾಗಿಣಿ ಪ್ರಜ್ವಲ್ (Ragini Prajwal) “ಶಾನುಭೋಗರ ಮಗಳಾ”ಗಿ ಕಾಣಿಸಿಕೊಳ್ಳುತ್ತಿದ್ದು, ಮೇಘಶ್ರೀ, ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ಭಾಗ್ಯಶ್ರೀ,ಟಿ.ಎನ್.ಶ್ರೀನಿವಾಸಮೂರ್ತಿ, ಟೆನ್ನಿಸ್ ಕೃಷ್ಣ  (Tennis Krishna)  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ 5ರ ವಿಜಯದಶಮಿ ಶುಭದಿನದಂದು ಚನ್ನಪಟ್ಟಣದ ಅರಳಾಳು ಸಂದ್ರದಲ್ಲಿ ಆರಂಭವಾಗಲಿದೆ.  ಆನಂತರ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟ, ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ನಾರಾಯಣ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದು ಕೋಡ್ಲು ರಾಮಕೃಷ್ಣ ನಿರ್ದೇಶನದ ಹದಿನಾಲ್ಕನೇ ಕಾದಂಬರಿ ಆಧಾರಿತ ಚಿತ್ರ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

    Live Tv
    [brid partner=56869869 player=32851 video=960834 autoplay=true]

  • ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಗಾಗಲೇ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಲಾ ಸಿನಿಮಾದಲ್ಲಿ ನಟಿಸಿದ್ದು, ಇವರು ಈ ಬಾರಿ ಅವರು ಕಾದಂಬರಿ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಶ್ಯಾನುಭೋಗರ ಮಗಳ ಪಾತ್ರವಂತೆ.

    ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಸ್ವತಂತ್ರ ಪೂರ್ವದ ಕಥೆಯನ್ನು ಇದು ಒಳಗೊಂಡಿದೆ. ಇಡೀ ಸಿನಿಮಾ ಶ್ಯಾನುಭೋಗರ ಮಗಳ ಸುತ್ತಲೇ ಸುತ್ತುವುದು ಕಥೆಯ ವಿಶೇಷ. ಸ್ವತಂತ್ರ ಪೂರ್ವದಲ್ಲಿ ಶ್ಯಾನಭೋಗರ ಮನೆತನಗಳನ್ನೂ ಈ ಸಿನಿಮಾ ಪ್ರತಿನಿಧಿಸಲಿದೆಯಂತೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು.  ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

    “ಶ್ಯಾನುಭೋಗರ ಮಗಳು” ಚಿತ್ರದ ಪ್ರಮುಖಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ. ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ‌ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕಾಗಿ  ಆಯ್ಕೆ ಕಾರ್ಯ ನಡೆಯುತ್ತಿದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • 6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    6 ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ದಾಂಪತ್ಯ ಜೀವನಕ್ಕೆ 6 ವರ್ಷ ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕನ್ನಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಜೋಡಿಗೆ ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿ ಶುಭ ಕೋರುತ್ತಿದ್ದಾರೆ. ಇದನ್ನೂ ಓದಿ:  ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!

     

    View this post on Instagram

     

    A post shared by Prajwal Devaraj (@prajwaldevaraj)

    ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾಗಿದ್ದು, ಇದೀಗ ತಮ್ಮ ಆರನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ರಾಗಿಣಿ ಅವರು ಸಹ ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್‍ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಇಂಡೋನೇಷ್ಯಾ ಸಂಸ್ಥಾಪಕನ ಪುತ್ರಿ ಮತಾಂತರ

    ಪ್ರಜ್ವಲ್ ದೇವರಾಜ್ ಅವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ಷಿಕಫತ್ಸವ ಸಂಭ್ರಮದಲ್ಲಿ ಇರುವ ಈ ಜೋಡಿಗೆ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

  • Do not Disturb : ನಟಿ ರಾಗಿಣಿ ಪ್ರಜ್ವಲ್

    Do not Disturb : ನಟಿ ರಾಗಿಣಿ ಪ್ರಜ್ವಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಕಪಲ್‍ಗಳಲ್ಲಿ ಒಬ್ಬರಾದ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿ ಡೋಂಟ್ ಡಿ ಸ್ಟರ್ಬ್ ಎನ್ನುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಚಂದನವನದ ಮೋಸ್ಟ್ ಹ್ಯಾಪನಿಂಗ್ ಕಪಲ್ ಪ್ರಜ್ವಲ್ ದೇವರಾಜ್ ( Prajwal Devaraj) ಹಾಗೂ ರಾಗಿಣಿ ಪ್ರಜ್ವಲ್ ( Ragini Prajwal) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಈ ಜೋಡಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಒಂದು ಕ್ಯೂಟ್ ಫೋಟೋ ಹಂಚಿಕೊಂಡಿದ್ದು, ಇಬ್ಬರೂ ಸಹ ಕ್ರೇಜಿ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ.

     

    View this post on Instagram

     

    A post shared by Prajwal Devaraj (@prajwaldevaraj)

    ಸ್ಯಾಂಡಲ್‍ವುಡ್‍ನ ಸೆಲೆಬ್ರಿಟಿ ಕಪಲ್ ರಾಗಿಣಿ ಚಂದ್ರನ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಜೋಡಿ ತಮ್ಮ ಫಿಟ್ನೆಸ್ ಹಾಗೂ ಡ್ಯಾನ್ಸಿಂಗ್ ವೀಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ದಂಪತಿ ಒಟ್ಟಿಗೆ ಇರುವ ಫೋಟೋವನ್ನು ಹಂಚಿ ಕೊಳ್ಳುತ್ತಿರುವುದು ಇದೇ ಮೊದಲು ಅಲ್ಲ, ಆದರೆ ಇವರು ಫೋಟೋಕ್ಕೆ ಕೊಟ್ಟಿರುವ ಶೀರ್ಷಿಕೆ ಮಾತ್ರ ವಿಭಿನ್ನವಾಗಿದ್ದು, ಇದೀಗ ಸುದ್ದಿಯಾಗಿದೆ. ಇದನ್ನೂ ಓದಿ:  ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

     

    View this post on Instagram

     

    A post shared by Ragini Prajwal (@iamraginiprajwal)

    ರಾಗಿಣಿ ಇತ್ತೀಚೆಗೆ ಪ್ರಜ್ವಲ್ ಜೊತೆಗಿರುವ ಈ ಚಿತ್ರವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅದಕ್ಕೆ  Do not Disturb ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದೇ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿರುವ ಪ್ರಜ್ವಲ್ ದೇವರಾಜ್ ಐ ಲವ್ ಯೂ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

    ಈ ಜೋಡಿ ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಪ್ರಜ್ವಲ್ ಮಡದಿ ರಾಗಿಣಿಗೆ  ಮುತ್ತಿಡುತ್ತಿದ್ದಾರೆ. ಈ ಕ್ಯೂಟ್ ಫೋಟೋ ಈಗ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಕಷ್ಟು ಮಂದಿ ಕ್ಯೂಟ್ ಜೋಡಿ, ಸೂಪರ್ ಜೋಡಿ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

  • ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಸೋಂಕು

    ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಸೋಂಕು

    ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಷಯವನ್ನ ಪ್ರಜ್ವಲ್ ದೇವರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇಬ್ಬರಿಗೂ ಕೋವಿಡ್ ಸೋಂಕು ತಗುಲಿದ್ದು, ವೈದ್ಯರು ಸೂಚಿಸಿರುವ ಔಷಧಿಯನ್ನ ತೆಗೆದುಕೊಳ್ಳುತ್ತಿದ್ದೇವೆ. ಹಾಗೆ ಕೊರೊನಾಗೆ ಸಂಬಂಧಿಸಿದ ಪರೀಕ್ಷೆಗೂ ಒಳಗಾಗಿದ್ದೇವೆ. ಇಬ್ಬರು ಜೊತೆಯಾಗಿದ್ದು, ಯಾರೂ ಅತಂಕಕ್ಕೊಳಗಾಗೋದು ಬೇಡ. ನಿಮ್ಮ ಪ್ರೀತಿ ಮತ್ತು ಕಾಳಜಿ ಧನ್ಯವಾದಗಳು ಎಂದು ಪ್ರಜ್ವಲ್ ಬರೆದುಕೊಂಡಿದ್ದಾರೆ.

    ಫೆಬ್ರವರಿ 5ರಂದು ಪ್ರಜ್ವಲ್ ದೇವರಾಜ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಂ ಸಿನಿಮಾ ರಿಲೀಸ್ ಆಗಿತ್ತು. ಕೊರೊನಾ ಆತಂಕದ ನಡುವೆಯೂ ಚಿತ್ರತಂಡ ಸಿನಿಮಾವನ್ನ ರಿಲೀಸ್ ಒಪ್ಪಿಕೊಂಡಿತ್ತು. ಇನ್‍ಸ್ಪೆಕ್ಟರ್ ವಿಕ್ರಂ ಅಭಿಮಾನಿಗಳಿಂದ ಮೆಚ್ಚುಗೆ ಸಹ ಪಡೆದುಕೊಂಡಿತ್ತು.

    ರಾಜ್ಯದಲ್ಲಿ ಬುಧವಾರ ಕೊರೊನಾ ಮರಣ ಕೇಕೆ ಹಾಕಿದ್ದು, ಒಂದೇ ದಿನ 26 ಜನರನ್ನ ಬಲಿ ಪಡೆದುಕೊಂಡಿದೆ. ಬುಧವಾರ 4,225 ಪ್ರಕರಣಗಳು ವರದಿಯಾಗಿದ್ದು, 1,492 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

     

    View this post on Instagram

     

    A post shared by Prajwal Devaraj (@prajwaldevaraj)

    ಕೊರೊನಾ ಸೋಂಕಿತರ ಸಂಖ್ಯೆ 9,97,004ಕ್ಕೆ ಏರಿಕೆಯಾಗಿದ್ದು, 28,248 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,567ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 266 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.