Tag: ragi gudda

  • ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಘಟನೆ ಕುರಿತು ಅಲ್ಲಿನ ಮಹಿಳೆಯರು ಮಾತನಾಡಿದ್ದನ್ನು ನೋಡಿ ಆತಂಕವಾಗಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಈದ್ ಮಿಲಾದ್ (Shivamogga EidMilad) ಮೆರವಣಿಗೆ ಘರ್ಷಣೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಮನೆಗೆ ನುಗ್ಗಿ ಕಲ್ಲು ಹೊಡೆದು ಮಾನ, ಪ್ರಾಣಕ್ಕೆ ಬೆದರಿಕೆ ಹಾಕಿದ್ದಾರೆ. ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಕರ್ನಾಟಕವನ್ನು ಹಿಂದಿನ ಕಾಶ್ಮೀರ ಮಾಡಲು ಹೊರಟಿದೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾವು ಎಂತವರು ಗೊತ್ತಲ್ಲಾ.. ಇಷ್ಟರೊಳಗೆ ರಾಜ್ಯಕ್ಕೆ ಬೆಂಕಿ ಹಾಕ್ಬೇಕಿತ್ತು: ಪೊಲೀಸರಿಗೆ ಕಿಡಿಗೇಡಿಯಿಂದ ಆವಾಜ್

    ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿಲ್ಲ ಯಾಕೆ?. ಗಲಭೆ ಮಾಡಿದವರನ್ನು ಅಮಾಯಕರ ಪಟ್ಟಿಯಲ್ಲಿ ಸೇರಿಸಿ, ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ತಲ್ವಾರ್ ಪ್ರದರ್ಶಿಸಿ, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿಗೂ ಕಲ್ಲು ತೂರಲಾಗಿದೆ. ಗೃಹ ಸಚಿವರು ಮರದ ತಲ್ವಾರ್‍ಗೆ ಬಣ್ಣ ಬಳಿಯಲಾಗಿದೆ ಅಂತಾರೆ. ತನಿಖೆಯ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಮುಸಲ್ಮಾನರ ಓಲೈಕೆಗಾಗಿ ಪೊಲೀಸರಿಗೆ ಇದುವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಶಿವಮೊಗ್ಗಕ್ಕೆ ಭೇಟಿ ಕೊಡಲಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸುತ್ತೇವೆ. ಸರ್ಕಾರದ ವಿರುದ್ಧ ಯಾವ ರೀತಿಯ ಹೋರಾಟವನ್ನು ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈದ್ ಮಿಲಾದ್‍ಗೆ ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವು

    ಈದ್ ಮಿಲಾದ್‍ಗೆ ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವು

    ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈದ್ ಮಿಲಾದ್‍ಗೆ (Eid Milad) ಹಾಕಿದ್ದ ಬ್ಯಾನರ್, ಹಸಿರು ಬಣ್ಣದ ಬಟ್ಟೆ ತೆರವುಗೊಳಿಸಲಾಗಿದೆ.

    ಸಾಕಷ್ಟು ವಿವಾದದ ನಂತರ ತೆರವು ಕಾರ್ಯಾಚರಣೆ ನಡೆದಿದೆ. ರಾಗಿಗುಡ್ಡದ ಮುಖ್ಯರಸ್ತೆಯ ಹಮೀರ್ ಅಹಮದ್ ಸರ್ಕಲ್‍ನಲ್ಲಿ ಬ್ಯಾನರ್ ಗಳನ್ನು ಹಾಕಲಾಗಿತ್ತು. ಇದೀಗ ನಗರಪಾಲಿಕೆ ಸಿಬ್ಬಂದಿ ಈ ಕಮಾನನ್ನ ತೆರವುಗೊಳಿಸಿದ್ದಾರೆ. ಈ ಮೂಲಕ ನಗರದಲ್ಲಿದ್ದ ಎಲ್ಲಾ ಕಟೌಟ್‍ಗಳನ್ನು ಪಾಲಿಕೆ ತೆರವುಗೊಳಿಸಿದೆ. ಪವಿತ್ರ ಹೋಟೆಲ್ ಬಳಿ ಇದ್ದ ಖಡ್ಗ ಕೂಡ ತೆರವುಗೊಳಿಸಲಾಗಿದೆ.

    ಮಾಜಿ ಸಚಿವ ಈಶ್ವರಪ್ಪ ಅವರು ಕಟೌಟ್ ತೆರವುಗೊಳಿಸುವಂತೆ ಆಗ್ರಹಿಸಿದ್ದರು. ತೆರವು ಮಾಡದಿದ್ರೆ ಎಲ್ಲಾ ಕಡೆ ತ್ರಿಶೂಲ ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ

    ಈದ್ ಮಿಲಾದ್ ಮೆರವಣಿಗೆ (Eid Milad Procession) ವೇಳೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಶಾಂತಿನಗರದಲ್ಲಿ ನಡೆದಿದೆ. 2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದಾರೆ. 7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]