Tag: Raghu Pandeshwar

  • ರಘು ಪಾಂಡೇಶ್ವರ ಈಗ ಅಧಿಪತ್ರದ ಪಟ್ಟಾಭಿರಾಮ!

    ರಘು ಪಾಂಡೇಶ್ವರ ಈಗ ಅಧಿಪತ್ರದ ಪಟ್ಟಾಭಿರಾಮ!

    ಯನ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಅಧಿಪತ್ರ’ (Adhipatra) ಈ ವಾರ ಅಂದರೆ, ಫೆಬ್ರವರಿ 7ರಂದು ತೆರೆಗಾಣಲಿದೆ. ರೂಪೇಶ್ ಶೆಟ್ಟಿ (Roopesh Shetty) ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಸೇರಿದಂತೆ ನಾನಾ ರೀತಿಯಲ್ಲಿ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಗೆಲುವಿನ ಎಲ್ಲ ಲಕ್ಷಣಗಳೂ ಇದೀಗ ಅಧಿಪತ್ರದ ಮುಂದಿದೆ. ಇಂಥಾದ್ದೊಂದು ಸಕಾರಾತ್ಮಕ ವಾತಾವರಣ ಒಂದಿಡೀ ಚಿತ್ರತಂಡವನ್ನು ಖುಷಿಗೊಳಿಸಿದೆ. ಈ ಚಿತ್ರದಲ್ಲಿ ಅನುಭವೀ ನಟರದ್ದೊಂದು ದಂಡೇ ಇದೆ. ಕಡಲ ತಡಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿರುವ ರಘು ಪಾಂಡೇಶ್ವರ ‘ಅಧಿಪತ್ರ’ದ ಪ್ರಮುಖವಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ಸಾಮಾನ್ಯವಾಗಿ ಕಡಲ ತಡಿಯ ಕಥೆಯೆಂದರೆ, ಅಲ್ಲಿ ಆ ಭಾಗದ ನಂಬಿಕೆಗಳ ಇರುವಿಕೆ ಖಾಯಂ. ಅಧಿಪತ್ರದಲ್ಲೂ ಕೂಡಾ ಅಂಥಾ ಅಪರೂಪದ ಆಚರಣೆಗಳ ಹಾಜರಿ ಇದೆ. ಆ ವಿಚಾರ ಟ್ರೈಲರ್ ಮೂಲಕವೇ ಸಾಬೀತಾಗಿದೆ. ನಿರ್ದೇಶಕ ಚಯನ್ ಶೆಟ್ಟಿ ಇದರ ಪ್ರತೀ ಪಾತ್ರಗಳನ್ನೂ ವಿಶಿಷ್ಟವಾಗಿ ರೂಪಿಸಿದ್ದಾರಂತೆ. ಟ್ರೈಲರ್ ನೋಡಿದವರಿಗೆಲ್ಲ ಅಧಿಪತ್ರದಲ್ಲಿ ಟ್ವಿಸ್ಟುಗಳ ಹಂಗಾಮವೇ ಇದೆ ಎಂಬ ವಿಚಾರ ಖಾತರಿಯಾಗಿದೆ. ಅಂಥಾ ಮಹತ್ವದ ತಿರುವಿನೊಂದಿಗೆ, ಪ್ರೇಕ್ಷಕರ ಅಂದಾಜನ್ನೇ ಅದುರಿಸುವಂಥಾ ಪಾತ್ರವಿಲ್ಲಿ ರಘು ಪಾಂಡೇಶ್ವರರಿಗೆ ಸಿಕ್ಕಿದೆ. ಇದನ್ನೂ ಓದಿ:ಡಿಸಿಎಂ ಡಿಕೆಶಿ ಮನೆಗೆ ಕಿಚ್ಚ ಸುದೀಪ್‌ ಭೇಟಿ- ಕಾರಣವೇನು?

    ಅಂದಹಾಗೆ, ಅವರಿಲ್ಲಿ ಪಟ್ಟಾಭಿರಾಮ ಎಂಬ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಈ ಪಾತ್ರ ಆರಂಭದಲ್ಲಿ ಸೀದಾ ಸಾದ ಶೈಲಿಯಲ್ಲಿ ಸಾಗುತ್ತೆ. ಅದರ ಮೂಲಕವೇ ನಿರ್ದೇಶಕರು ಒಂದಷ್ಟು ಬೆರಗುಗಳನ್ನಿಟ್ಟಿದ್ದಾರಂತೆ. ಅದೇನೆಂಬುದು ಈ ವಾರವೇ ಎಲ್ಲರೆದುರು ಜಾಹೀರಾಗಲಿದೆ. ಇಂಥಾದ್ದೊಂದು ಪಾತ್ರ ತಮಗೊಲಿದು ಬಂದ ಬಗ್ಗೆ ರಘು ಅವರಲ್ಲೊಂದು ಧನ್ಯತೆಯ ಭಾವವಿದೆ. ಹೊಸಬರೆಂಬ ಸುಳಿವನ್ನೇ ಕೊಡದಂತೆ ಕೆಲಸ ಮಾಡಿರುವ ಚಯನ್ ಶೆಟ್ಟಿಯಂಥಾ ನಿರ್ದೇಶಕರು ಮತ್ತು ಪ್ರತಿಭಾನ್ವಿತರ ತಂಡದೊಂದಿಗೆ ಕೆಲಸ ಮಾಡಿದ ತುಂಬು ಖುಷಿಯೂ ಅವರಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಭಿನ್ನವಾಗಿ ನಿಲ್ಲಬಲ್ಲ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆಂಬ ಭರವಸೆ ರಘು ಪಾಂಡೇಶ್ವರರದ್ದು.


    ಪ್ರತೀ ಸೀನುಗಳೂ ಚೆಂದಗೆ ಮೂಡಿ ಬರಬೇಕೆಂಬ ನಿರ್ದೇಶಕರ ಹಂಬಲ, ಅದಕ್ಕೆ ನಿರ್ಮಾಪಕರ ಕಡೆಯಿಂದ ಸಿಗುತ್ತಿದ್ದ ಸಹಕಾರ ಮತ್ತು ಚಿತ್ರತಂಡದ ಉತ್ಸಾಹಗಳೆಲ್ಲ ಅಧಿಪತ್ರದ ಅನುಭವವನ್ನು ರಘು ಅವರೊಳಗೆ ಅಚ್ಚಾಗಿಸಿದೆ. ಬಹುಶಃ ಈ ಚಿತ್ರ ರಘು ಪಾಂಡೇಶ್ವರರ ಸಿನಿಮಾ ಯಾನದಲ್ಲಿ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಗಳಿವೆ. ಇಷ್ಟೆಲ್ಲ ವಿಶೇಷತೆಗಳನ್ನು ಒಡಲಲ್ಲಿಟ್ಟುಕೊಂಡಿರುವ ಅಧಿಪತ್ರ ಫೆಬ್ರವರಿ ೭ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

  • ವಿನೂತನ ಶೀರ್ಷಿಕೆಯ ಇತ್ಯಾದಿ ಸಿನಿಮಾಗೆ ಮುಹೂರ್ತ

    ವಿನೂತನ ಶೀರ್ಷಿಕೆಯ ಇತ್ಯಾದಿ ಸಿನಿಮಾಗೆ ಮುಹೂರ್ತ

    ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಇತ್ಯಾದಿ’ ಚಿತ್ರ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ಆಚರಿಸಿಕೊಂಡಿತು. ’ಮದಗಜ’ ಖ್ಯಾತಿ ನಿರ್ದೇಶಕ ಮಹೇಶ್‌ಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ರಂಗಭೂಮಿಯಲ್ಲಿ ಅನುಭವ ಪಡೆದುಕೊಂಡು, ’ಬೆಟ್ಟದ ಆಸೆ’ ಎಂಬ ಕಲಾತ್ಮಕ ಚಿತ್ರವನ್ನು ನಿರ್ದೇಶನ ಮಾಡಿರುವ ಚಿತ್ರದುರ್ಗದ ವಿಕಾಸ್‌ ನಾಗರಾಜ್.ಬಿ.ಎನ್ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೀಲಕಂಠ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಯೋಗರಾಜ್.ಡಿ ನಿರ್ಮಾಣ ಮಾಡುವ ಜತೆಗೆ ಛಾಯಾಗ್ರಹಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

    ನಿರ್ದೇಶಕರು ಅವರ ಮನಸ್ಸಿನಲ್ಲಿರುವ ಒಂದಷ್ಟು ಪಾತ್ರಗಳನ್ನು ಪೋಣಿಸಿಕೊಂಡು ಕಥೆಯನ್ನು ಬರೆದಿದ್ದಾರೆ. ಜನರು ಸಾಹಸ, ಮಾಯಾಜಾಲದಲ್ಲಿ ಇದ್ದರೆ ಹಂಗೇ ಇರ‍್ತಾರೆ ಎಂಬುದನ್ನು ಹೇಳ ಹೊರಟಿದ್ದಾರೆ. ಅಂದರೆ ಒಂದು ಪಾತ್ರಕ್ಕೂ ಒಂದು ಪಾತ್ರಗಳು ಮುಂತಾದವುಗಳು ಆಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿರುವ ಪಾತ್ರವನ್ನು ಬೇರೆಯವರು ಹುಡುಕುತ್ತಾರೆ. ನಿಮ್ಮಲ್ಲಿರುವ ಪಾತ್ರವನ್ನು ಅವನು ಹುಡುಕುತ್ತಾನೆ. ನಾವು ಹಂಗೇ ನೋಡ್ತೆವೋ ಅದೇ ರೀತಿ ಸಿನಿಮಾ ಸಾಗುತ್ತದೆ. ಎಲ್ಲರ ಮನಸ್ಥಿತಿಗೂ ಬೇರೆ ಬೇರೆ ಅರ್ಥ ಕಲ್ಪಿಸುತ್ತಾ ಹೋಗುತ್ತದೆ. ಮಾಯಾಜಾಲದಲ್ಲಿ ಪಾತ್ರಗಳೇ ಕಥೆಯನ್ನು ಹುಟ್ಟು ಹಾಕುತ್ತವೆ. ಪ್ರತಿ ರೋಲ್‌ಗೂ ಸಂಬಂದ ಇರುತ್ತದೆ. ಒಂದು ದೃಶ್ಯ ತಪ್ಪಿಹೋದರೂ ಕಥೆ ಅರ್ಥವಾಗುವುದಿಲ್ಲವೆಂದು ವಿಕಾಸ್‌ನಾಗರಾಜ್ ಹೇಳುತ್ತಾರೆ. ಇದನ್ನೂ ಓದಿ: ನಾಲ್ಕು ಗೋಡೆ ಮ‌ಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್

     

    ನಾಯಕನಾಗಿ ಸಚ್ಚಿನ್, ಇವರೊಂದಿಗೆ ರಘುಪಾಂಡೇಶ್ವರ್, ವೀರೇಶ್‌ಮುತ್ತಿನಮಠ, ರೇಷ್ಮಾ, ರಶ್ಮಿತಾ, ಪ್ರೀತಂ, ರಾಧಿಕಾ ಮುಂತಾದವರು ನಟಿಸುತ್ತಿದ್ದಾರೆ. ಒಂದರೆಡು ಚಿತ್ರಗಳಲ್ಲಿ ನಟಿಸಿರುವ ಕಲಾವಿದೆ ನಾಯಕಿಯಾಗುವ ಸಾಧ್ಯತೆ ಇದೆ. ಉಳಿದಂತೆ ಸಂಗೀತ, ಸಂಕಲನ, ಸಾಹಸ ಇವೆಲ್ಲಕ್ಕೂ ತಂತ್ರಜ್ಘರನ್ನು ಸದ್ಯದಲ್ಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಸುಂದರ ಸಮಾರಂಭದಲ್ಲಿ ’ರಥಾವರ’ ನಿರ್ಮಾಪಕ ಧರ್ಮಶ್ರೀ ಮಂಜುನಾಥ್, ಸಂಭಾಷಣೆಗಾರ ಮಾಸ್ತಿ ಮುಂತಾದವರು ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]