Tag: Raghu Mukherjee

  • ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನಟಿ ಅನುಪ್ರಭಾಕರ್ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡಿದ್ದರು. ಜೀವನದಲ್ಲಿ ಸಾಕಷ್ಟು ಸವಾಲುಗಳನ್ನ ನಟಿ ಎದುರಿಸಿದ್ದಾರೆ. ಇದೀಗ ವೇದಿಕೆಯೊಂದರಲ್ಲಿ ಪತಿ ರಘು ಮುಖರ್ಜಿ ಮಾತು ಕೇಳಿ, ಅನುಪ್ರಭಾಕರ್ ಕಣ್ಣೀರಿಟ್ಟಿದ್ದಾರೆ.

    90ರ ದಶಕದಲ್ಲಿ ಸಾಕಷ್ಟು ಸೂಪರ್ ಸ್ಟಾರ್‌ಗಳ ಜೊತೆ ನಾಯಕಿಯಾಗಿ ಮಿಂಚಿದ ಪ್ರತಿಭಾನ್ವಿತ ನಟಿ ಅನುಪ್ರಭಾಕರ್, ಸದ್ಯ ಸಿನಿಮಾ ಜೊತೆ ಮದುವೆ, ಸಂಸಾರ ಮಗಳ ಪಾಲನೆ ಎಂದು ಬ್ಯುಸಿಯಾಗಿದ್ದಾರೆ. ಪ್ರಸ್ತುತ `ನನ್ನಮ್ಮ ಸೂಪರ್ ಸ್ಟಾರ್ 2′ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಟಿ ಅನು ಅವರ ಹುಟ್ಟುಹಬ್ಬದ ಅಂಗವಾಗಿ ವೀಕೆಂಡ್ ಎಪಿಸೋಡ್‌ನಲ್ಲಿ ಪತಿ ರಘು ಕೂಡ ಕಾಣಿಸಿಕೊಂಡಿದ್ದಾರೆ. ತಮ್ಮ ಹಳೆಯ ಜೀವನದ ಬಗ್ಗೆ ರಘು ಮುಖರ್ಜಿ ಮುಕ್ತವಾಗಿ ಮಾತನಾಡಿದ್ದಾರೆ. ಪತಿಯ ಮಾತಿಗೆ ಅನುಪ್ರಭಾಕರ್ ಗಳಗಳನೆ ಅತ್ತಿದ್ದಾರೆ. ಇದನ್ನೂ ಓದಿ:ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ನಟಿ ಅನುಪ್ರಭಾಕರ್ (ನ.9)ರಂದು ಅವರ ಹುಟ್ಟುಹಬ್ಬವಾಗಿದ್ದು, ಶೋನಲ್ಲಿ ಅನು ಅವರ ಜೊತೆ ಪತಿ ರಘು ಮುಖರ್ಜಿ ಸಾಥ್ ನೀಡಿದ್ದಾರೆ. ‌ʻನನ್ನಮ್ಮ ಸೂಪರ್ ಸ್ಟಾರ್ 2ʼನಲ್ಲಿ ಅದ್ದೂರಿಯಾಗಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಮನುಷ್ಯನಿಗೆ ಒಳ್ಳೆಯ ಸಂಗಾತಿ ಸಿಕ್ಕರೆ, ಜೀವನ ಪೂರ್ಣ ಎನ್ನಿಸುತ್ತೆ ಎಂದಿದ್ದಾರೆ. ಎಲ್ರಿಗೂ ಗೊತ್ತಿರುವ ವಿಷ್ಯನೇ, ಅನು ಒಂದು ಲೈಫ್ ಇತ್ತು. ನನಗೆ ಒಂದು ಲೈಫ್ ಇತ್ತು. ಆದರೆ ಹಳೆಯ ಜೀವನ ಸರಿಇರಲಿಲ್ಲ. ಈಗ ಇಬ್ಬರೂ ಖುಷಿಯಾಗಿದ್ದೇವೆ ಎಂದು ರಘು ಮಾತನಾಡಿದ್ದಾರೆ.

    ಪತಿ ರಘು ಹೇಳಿದ ಮಾತಿಗೆ ಅನುಪ್ರಭಾಕರ್ ಕಣ್ಣೀರು ಹಾಕಿದ್ದಾರೆ. ನನಗೆ ಜೀವಿಸಲು ಮತ್ತೊಂದು ಅವಕಾಶ ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ್ದಾರೆ. ದೇವರು ನಮಗೆ ಒಂದು ಅವಕಾಶ ಮಾಡಿಕೊಟ್ಟಿದ್ದಾನೆ. ನಮ್ಮನ್ನ ಒಂದು ಕಾರಣಕ್ಕೆ ಒಟ್ಟಿಗೆ ತಂದಿದ್ದಾನೆ ಎಂದು ನಟಿ ಭಾವುಕರಾಗಿದ್ದಾರೆ. ರಘು ಮುಖರ್ಜಿ ತಮ್ಮ ಜೀವನಕ್ಕೆ ಬಂದ ನಂತರ ಜೀವನ ಖುಷಿಯಾಗಿದೆ ಎಂದು ಅನುಪ್ರಭಾಕರ್‌ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕತಾರ್ ನಲ್ಲಿ ಬೀಸಲಿದೆ ಚಂದನವನದ `ಕಾಫಿ ತೋಟ’ದ ಪರಿಮಳ

    ಕತಾರ್ ನಲ್ಲಿ ಬೀಸಲಿದೆ ಚಂದನವನದ `ಕಾಫಿ ತೋಟ’ದ ಪರಿಮಳ

    ಬೆಂಗಳೂರು: ಕತಾರ್ ರಾಜಧಾನಿ ದೋಹಾದಲ್ಲಿ ಅಕ್ಟೋಬರ್ 13ರಂದು ಕನ್ನಡದ ವಿನೂತನ ಸಿನಿಮಾ, ಸ್ಯಾಂಡಲ್‍ವುಡ್ ಮೇಷ್ಟ್ರು ಟಿ.ಎನ್.ಸೀತಾರಂ ನಿರ್ದೇಶಿಸಿರುವ `ಕಾಫಿ ತೋಟ’ ಬಿಡುಗಡೆಯಾಗಲಿದೆ.

    ಸಿನಿಮಾ ಬಿಡುಗಡೆ ವೇಳೆಯಲ್ಲಿ ಸಿನಿಮಾದ ನಾಯಕ ನಟ ರಘು ಮುಖರ್ಜಿ, ನಟಿಯರಾದ ರಾಧಿಕಾ ಚೇತನ್, ಅಪೇಕ್ಷ ಪುರೋಹಿತ್ ಭಾಗಿಯಾಗಲಿದ್ದಾರೆ. ಕೇವಲ ಒಂದು ವರ್ಷದ ಅವಧಿಯಲ್ಲಿ ರಂಗಿತರಂಗ, ಹೆಬ್ಬುಲಿ, ಕೋಟಿಗೊಬ್ಬ-2, ರಾಜಕುಮಾರ, ಚೌಕ, ಕಿರಿಕ್ ಪಾರ್ಟಿ, ಒಂದು ಮೊಟ್ಟೆಯ ಕಥೆ, ದೊಡ್ಮನೆ ಹುಡುಗ ಮತ್ತು ತುಳು ಚಿತ್ರ ಅರೈಮರ್ಲೆರ್ ಯಶಸ್ವಿಯಾಗಿ ಪ್ರದರ್ಶನಗೊಂಡಿವೆ ಎಂದು ಪ್ರದರ್ಶನದ ಮುಖ್ಯ ಆಯೋಜಕರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ.

    ಎಲ್ಲರಿಗಿಂತಲೂ ಭಿನ್ನವಾಗಿ ಕಥೆ ಹೇಳುವ ಸೀತಾರಂ ಇಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಾಯಾಮೃಗ, ಮುಕ್ತ, ಮುಕ್ತ..ಮುಕ್ತ.. ಧಾರವಾಹಿಗಳ ಮೂಲಕ ಹಾಗೂ ಸೆಸ್ಪನ್ಸ್ ಕಥೆಗಳನ್ನು ನಿರ್ದೇಶಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೀತಾರಂ ಹೊಂದಿದ್ದಾರೆ. ಚಿತ್ರವು ಸಂಪೂರ್ಣ ಹೊಸ ಕಲಾವಿದರನ್ನು ಒಳಗೊಂಡಿದ್ದು, ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದೆ. ಟ್ರೇಲರ್‍ನಲ್ಲಿ ತೋರಿಸಿರುವಂತೆ ಸಿನಿಮಾ ಕೊಲೆಯ ಕೇಸನ್ನು ಭೇದಿಸುವ ರಹಸ್ಯ ಕಥಾನಕವನ್ನು ಹೊಂದಿದೆ. ಇದೂವರೆಗೂ ಸೀತಾರಂ ಅವರ ಧಾರವಾಹಿಗಳಲ್ಲಿ ನಟಿಸಿರುವ ಅನುಭವಿ ಕಲಾವಿದರ ಬಳಗವನ್ನೇ ಚಿತ್ರತಂಡ ಹೊಂದಿದೆ.

    ಚಿತ್ರದ ಮುಖ್ಯಭೂಮಿಕೆಯಲ್ಲಿ ರಂಗಿತರಂಗ ಬೆಡಗಿ ರಾಧಿಕಾ ಚೇತನ್ ಮತ್ತು ರಘು ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ವಕೀಲರ ಪಾತ್ರದಲ್ಲಿ ಸೀತಾರಂ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಂಯುಕ್ತ ಹೊರನಾಡ್, ಅಚ್ಯುತ್ ಕುಮಾರ್, ರಾಹುಲ್ ಮಾಧವ್, ಅಪೇಕ್ಷ ಪುರೋಹಿತ್, ವೀಣಾ ಸುಂದರ್, ಸುಂದರ್ ರಾಜ್, ಅಮೋಘ (ಡ್ರಾಮ ಜ್ಯೂನಿಯರ್ಸ್) ಮುಂತಾದವರಿದ್ದಾರೆ. ಬಿ.ಸಿ. ಪಾಟೀಲ್ ಹಾಗೂ ಅಂಬಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಜಯಂತ್ ಕಾಯ್ಕಿಣಿ ಹಾಗೂ ಜೋಗಿಯವರು ಬರೆದಿರುವ ಹಾಡುಗಳಿಗೆ ಅನೂಪ್ ಸೀಳಿನ್, ಹರಿಚರಣ್, ಸಿಂಚನಾ ದೀಕ್ಷಿತ್, ಮಿಥುನ್ ಮುಕುಂದನ್, ರಾಜಗುರು ಹೊಸಕೋಟೆ, ಅನನ್ಯಾ ಭಗತ್ ಹಾಗೂ ಇನ್ನಿತರರು ತಮ್ಮ ಸುಮಧುರ ಧ್ವನಿ ನೀಡಿದ್ದಾರೆ.