Tag: Raghu Achar

  • ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ – ಡಿಕೆಶಿ ವಿರುದ್ಧ ರಘು ಆಚಾರ್ ಕಿಡಿ

    ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ – ಡಿಕೆಶಿ ವಿರುದ್ಧ ರಘು ಆಚಾರ್ ಕಿಡಿ

    ಚಿತ್ರದುರ್ಗ: ನಂಬಿಸಿ ಕುತ್ತಿಗೆ ಕೊಯ್ದ ಅಧ್ಯಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ವಿರುದ್ಧ ಚಿತ್ರದುರ್ಗ ಮಾಜಿ ಎಂಎಲ್‍ಸಿ ರಘು ಆಚಾರ್ (Raghu Achar) ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಗುರುವಾರ ಕೋಟೆನಾಡಲ್ಲಿ ಭಿನ್ನಮತ ಭುಗಿಲೆದ್ದಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಪರಿಷತ್ ಸದಸ್ಯ ರಘು ಆಚಾರ್ ಪಕ್ಷದ ವಿರುದ್ಧ ರೆಬಲ್ ಆಗಿದ್ದಾರೆ. ಇದನ್ನೂ ಓದಿ: ದಾಖಲೆ ಇಲ್ಲದ ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದ ಖತರ್ನಾಕ್ ವ್ಯಕ್ತಿಗಳು!

    ಎಂಎಲ್‍ಸಿಯಾಗಿದ್ದ ನನಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದರು. 2ನೇ ಬಾರಿಗೆ ಎಂಎಲ್‍ಸಿ ಆಗುವುದು ಬೇಡ, ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಂತೆ ಕೈ ನಾಯಕರು ಹೇಳಿ ನಂಬಿಸಿ ಅರ್ಧ ದಾರಿಯಲ್ಲೇ ಕತ್ತು ಕೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಜ್ಯದಲ್ಲಿ ಜಾತಿಯ ಜನಸಂಖ್ಯೆ ಇಲ್ಲವೆಂಬ ಸಣ್ಣ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದಕ್ಕೆ ಜಿಲ್ಲೆಯ ಜನ ಉತ್ತರಿಸಲಿದ್ದಾರೆ. ಕಾಂಗ್ರೆಸ್ ಕೇವಲ ನನಗೊಬ್ಬನಿಗೆ ಅಲ್ಲ, ತರಿಕೆರೆ ಕ್ಷೇತ್ರದ ಗೋಪಿಕೃಷ್ಣ ಅವರಿಗೂ ಅನ್ಯಾಯೆಸಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ರಾಜ್ಯದ 197 ಸಣ್ಣ ಸಮುದಾಯಗಳಿಗೆ ಕಾಂಗ್ರೆಸ್ ಒಂದು ಸ್ಥಾನ ನೀಡಿಲ್ಲ. ಸಣ್ಣ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ರಘು ಆಚಾರ್ ಅಸಮಧಾನ ಹೊರಹಾಕಿದ್ದಾರೆ.

    ಟಿಕೆಟ್ ಹಂಚಿಕೆ ವೇಳೆ ಸಾಮಾಜಿಕ ನ್ಯಾಯ ಮರೆತು ಕಾಂಗ್ರೆಸ್ ತೀರ್ಮಾನಿಸಿದೆ. ಪಕ್ಷಕ್ಕೆ ಸೇವೆ ಸಲ್ಲಿಸಿದ್ದ ನನ್ನನ್ನು ನಿರ್ಲಕ್ಷ್ಯಿಸಿದೆ. ಇಡೀ ರಾಜ್ಯ ಸುತ್ತಿ ವಿಶ್ವಕರ್ಮ ಸಮಾಜ ಕಾಂಗ್ರೆಸ್‍ಗೆ (Congress) ಮತ ಹಾಕದಂತೆ ಹೋರಾಟ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.

    ಶೀಘ್ರದಲ್ಲೇ ಚಿತ್ರದುರ್ಗದಲ್ಲಿ (Chitradurga) ನನ್ನ ಬೆಂಬಲಿಗರೊಂದಿಗೆ ಸಭೆ ನಡೆಸುತ್ತೇನೆ. ಬಳಿಕ ಮಾ.17 ರಂದು ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಈ ವೇಳೆ ರಘು ಆಚಾರ್ ನಿವಾಸದ ಬಾಗಿಲಿಗೆ ಅಂಟಿಸಿದ್ದ ರಘು ಆಚಾರ್ ಭಾವಚಿತ್ರ ಸಹಿತ ಇದ್ದ ಕಾಂಗ್ರೆಸ್ ಸ್ಟಿಕ್ಕರನ್ನು ಬೆಂಬಲಿಗರು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಶಾಸಕ ಪ್ರೀತಂ ಗೌಡರಿಂದ 100 ಕೋಟಿ ಗುಳುಂ- ಹೆಚ್.ಕೆ.ಮಹೇಶ್ ಆರೋಪ

  • ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್

    ಚಿತ್ರದುರ್ಗ: ಕಾಂಗ್ರೆಸ್ (Congress) ಮಾಜಿ ಎಂಎಲ್‌ಸಿ ರಘು ಆಚಾರ್ (Raghu Achar) ನೂತನ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರದುರ್ಗದ (Chitradurga) ಜಿಜೆಪಿ (BJP) ಶಾಸಕ ಜಿಹೆಚ್ ತಿಪ್ಪಾರೆಡ್ಡಿಯವರ (GH Thippareddy) ಕಾಲು ಮುಗಿದು ಗೃಹಪ್ರವೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಕೈ ಕಾರ್ಯಕರ್ತರು ಆಚಾರ್ ನಡೆ ವಿರುದ್ಧ ಕಿಡಿ ಕಾರಿದ್ದಾರೆ.

    ಮುಂಬರುವ 2023ರ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳೆಂದು ಬಿಂಬಿತವಾಗಿರುವ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹಾಗೂ ರಘು ಆಚಾರ್ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವ ಆಚಾರ್, ಆಹ್ವಾನ ಪತ್ರಿಕೆ ಕೊಟ್ಟು, ಶಾಸಕ ತಿಪ್ಪಾರೆಡ್ಡಿ ಕಾಲಿಗೆ ಬಿದ್ದಿರುವುದು ಹೊಸ ಚರ್ಚೆಗೆ ದಾರಿಯಾಗಿದೆ.

    ಬಿಜೆಪಿ ಶಾಸಕರಲ್ಲದೇ, ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಮನೆಗೂ ಭೇಟಿ ನೀಡಿರುವ ಆಚಾರ್ ಅವರು, ಬಸವರಾಜನ್ ಪತ್ನಿ ಹಾಗೂ ಮಾಜಿ ಜಿ.ಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ (Soubhagya Basavarajan) ಕಾಲು ಮುಗಿದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಇನ್ನೇನು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರತಿಸ್ಪರ್ಧಿಗಳ ಕಾಲು ಮುಗಿದು ಆಹ್ವಾನಿಸಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ 2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಜ್ಜಾಗಿರುವ ಆಚಾರ್ ನಡೆ ಬಗ್ಗೆ ಭಾರೀ ಅನುಮಾನ ಮೂಡಿಸಿದೆ.

    ಬಿಜೆಪಿಯಿಂದ ಸ್ಪರ್ಧಿಸಲಿರುವ ಶಾಸಕ ತಿಪ್ಪಾರೆಡ್ಡಿ ಹಾಗೂ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಸವರಾಜನ್ ಪತ್ನಿ ಕಾಲಿಗೆ ಬಿದ್ದಿರುವ ಆಚಾರ್ ನಡೆ ಬಗ್ಗೆ ಕೋಟೆನಾಡಲ್ಲಿ ಹೊಸ ಚರ್ಚೆ ಶುರುವಾಗಿದೆ. ಇದು ರಾಜಿ ಸಂಧಾನದ ಯತ್ನವೋ ಅಥವಾ ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಸಂಬಂಧದ ಬಾವವೇ ಬೇರೆ ಎಂದು ಸಂದೇಶ ನೀಡುವ ಯತ್ನವೋ ಎಂಬ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಏಕವಚನದಲ್ಲಿಯೇ ವಾಗ್ದಾಳಿ ನಡೆಸಿ ಹೆಚ್‍ಡಿಕೆಗೆ ಶಿವನಗೌಡ ಸವಾಲ್

  • ರಘು ಆಚಾರ್‌ಗೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಟಿಕೆಟ್ – ಸಿದ್ದರಾಮಯ್ಯ ಸುಳಿವು

    ರಘು ಆಚಾರ್‌ಗೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಟಿಕೆಟ್ – ಸಿದ್ದರಾಮಯ್ಯ ಸುಳಿವು

    ಮೈಸೂರು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ(Chitradurga Vidhan Sabha Constituency) ಕಾಂಗ್ರೆಸ್(Congress) ಟಿಕೆಟ್ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್‌ಗೆ ನೀಡುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

    ಎಚ್.ಡಿ. ಕೋಟೆಯಲ್ಲಿ ಇಂದು ನಡೆದ ವಿಶ್ವಕರ್ಮ ಸಮುದಾಯದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಶ್ವ ಕರ್ಮ ಸಮುದಾಯದ ರಘು ಅಚಾರ್(Raghu Achar) ಚಿತ್ರದುರ್ಗದ ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದಾನೆ. ನೋಡೋಣಾ ತಡಿ ಎಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ


    ಈ ನಡುವೆ ರಘು ಆಚಾರ್‌ಗೆ ಟಿಕೆಟ್ ಬಹಿರಂಗವಾಗಿ ಘೋಷಿಸಿ ಎಂದು ಸಿದ್ದರಾಮಯ್ಯನವರಿಗೆ ಅದೇ ವೇದಿಕೆಯಲ್ಲಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ(K. P. Nanjundi) ಚೀಟಿಯಲ್ಲಿ ಬರೆದು ಕೊಟ್ಟರು. ಆಗ ಸಿದ್ದರಾಮಯ್ಯ, ಹೇ, ಸುಮ್ನಿರಯ್ಯ‌‌‌. ನನ್ನ ಏನೂ ಮಾಡಬೇಕು ಅಂದು ಕೊಂಡಿದ್ದಿಯಾ? ನಾನು ರಘು ಆಚಾರ್‌ಗೂ ಹೇಳಿದ್ದೇನೆ. ಸ್ವಾಮೀಜಿಗೂ ಹೇಳಿದ್ದೇನೆ‌. ನೀನು ವೈಯಕ್ತಿಕವಾಗಿ ಸಿಗು ನಿನಗೂ ಅದನ್ನು ಹೇಳುತ್ತೇನೆ ಎಂದು ಟಿಕೆಟ್ ನಿಶ್ಚಿತ ಎಂಬ ಸುಳಿವು ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ನೋ ಕಾಮೆಂಟ್, ಅವರವರ ಭಾವ ಅವರವರದ್ದು- ರಘು ಆಚಾರ್ ಆರೋಪಕ್ಕೆ ವಿನಯ್ ಗುರೂಜಿ ಪ್ರತಿಕ್ರಿಯೆ

    ನೋ ಕಾಮೆಂಟ್, ಅವರವರ ಭಾವ ಅವರವರದ್ದು- ರಘು ಆಚಾರ್ ಆರೋಪಕ್ಕೆ ವಿನಯ್ ಗುರೂಜಿ ಪ್ರತಿಕ್ರಿಯೆ

    ಬೆಂಗಳೂರು: ನೋ ಕಾಮೆಂಟ್, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ ಎಂದು ಕಾಂಗ್ರೆಸ್‌ ಪರಿಷತ್‌ ಸದಸ್ಯ ರಘು ಆಚಾರ್‌ ಆರೋಪಕ್ಕೆ ವಿನಯ್‌ ಗುರೂಜಿ ಪ್ರತಿಕ್ರಿಯಿಸಿದ್ದಾರೆ.

    ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ಸಂಬಂಧ ಇಂದು ವಿನಯ್‌ ಗುರೂಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

    ಭೇಟಿಯ ಬಳಿಕ ಮಾಧ್ಯಮಗಳು ರಘು ಆಚಾರ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ನಾನೇ ನಿಶ್ಚಯ ಮಾಡಿದ ಮದುವೆ ಇದು. ಲಿಂಗಾಯತರಲ್ಲಿ ಒಂದು ಸಂಪ್ರದಾಯ ಇದೆ. ಗುರುಗಳು ಊಟ ಮಾಡಿದ ಮೇಲೆ ಉಳಿದ ಊಟವನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಇದೆ. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದ್ದೇನೆ. ಲೋಟ ಎಲ್ಲಿಟ್ಟಿದ್ದೇನೆ ಎಂದು ನೋಡುವುದಕ್ಕೆ ಆಗುವುದಿಲ್ಲ. ನನ್ನ ಗಮನಕ್ಕೆ ಬರದೇ ಈ ಪ್ರಸಂಗ ನಡೆದಿದೆ. ನನ್ನ ಗಮನಕ್ಕೆ ಬಂದಿದ್ದರೆ ಗಾಂಧಿವಾದ ರೀತಿ ಖಂಡಿಸುತ್ತಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಸಿಎಂ ಜೊತೆ ಚರ್ಚೆ ನಡೆಸಿದ ವಿಷಯಕ್ಕೆ ಕೇಳಲಾದ ಪ್ರಶ್ನೆಗೆ, ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಷಯ ಕುರಿತು ಚರ್ಚಿಸಲು ಬಂದಿದ್ದೆವು. ಹಿಂದೂ ಧರ್ಮದಲ್ಲಿ ನಾವು ಗೋವುಗಳಿಗೆ ವಿಶೇಷ ಗೌರವ ನೀಡಿದ್ದೇವೆ. ರಾಷ್ಟ್ರೀಯ ಪಕ್ಷಿ, ಪ್ರಾಣಿಗೆ ಹೇಗೆ ಈಗ ಕಾನೂನು ಇದೆಯೇ ಅದೇ ರೀತಿ ಕಾನೂನು ತರಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

    ಗೋಹತ್ಯೆ ನಿಷೇಧ ಅನಿವಾರ್ಯ ಇದೆ. ಅಧಿಕಾರಿಗಳ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇಲ್ಲಿಯವರೆಗೆ ನಿರಾಕರಿಸಿಲ್ಲ. ಈ ಮನವಿಯನ್ನೂ ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.

    ಕಳೆದ ವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್‌, ರಾಜ್ಯ ಸರಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿದೆ. ಜಾನುವಾರುಗಳ ರಕ್ಷಣೆಗೆ ಸರಕಾರ ಹೊಸ ಕ್ರಮಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದರು.

  • ಗುರುಗಳಲ್ಲಿ ಭಗವಂತನನ್ನು ಕಾಣುತ್ತೇವೆ, ಅವರು ಸೇವಿಸಿದ ಆಹಾರ ನಮಗೆ ಪ್ರಸಾದ – ರಘು ಆಚಾರ್‌ಗೆ ಶರವಣ ಟಾಂಗ್

    ಗುರುಗಳಲ್ಲಿ ಭಗವಂತನನ್ನು ಕಾಣುತ್ತೇವೆ, ಅವರು ಸೇವಿಸಿದ ಆಹಾರ ನಮಗೆ ಪ್ರಸಾದ – ರಘು ಆಚಾರ್‌ಗೆ ಶರವಣ ಟಾಂಗ್

    ಬೆಂಗಳೂರು: ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಅವಧೂತ ವಿನಯ್ ಗುರೂಜಿ ವಿರುದ್ಧ ಆರೋಪಿಸಿದ್ದ ರಘು ಆಚಾರ್‌ಗೆ  ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಅವಧೂತ ವಿನಯ್ ಗುರೂಜಿ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಿಸಿದ್ದರು. ಈ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ರಘು ಆಚಾರ್‌ಗೆ ಟಾಂಗ್ ನೀಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಆಚಾರ್ ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿದೆ. ಅವಧೂತ ವಿನಯ್ ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಒಬ್ಬ ಭಕ್ತ. ಮೊದಲನೆಯದಾಗಿ ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗೆ ಒಳಪಟ್ಟಿರುತ್ತದೆ. ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ. ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ ಹಾಗೂ ನಿಮಗೂ ಕೂಡ ಬಲವಂತವಾಗಿ ತಿಳಿಸಿಲ್ಲ.

    ನಂಬಿಕೆ ಇರುವವರು ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಇನ್ನು ನಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿ ಕಾಳಜಿ ಬೇಡ, ಗುರುಗಳು ಆರೋಗ್ಯದಿಂದ ಇದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ. ನಮ್ಮ ಆಚಾರ-ವಿಚಾರಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಕೆಲವರು ಓಲೈಕೆಗಾಗಿ ಕೆಟ್ಟದಾಗಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಈ ತರಹದ ಮಾತುಗಳನ್ನು ನಿಲ್ಲಿಸಿ.

    ನಿಮಗೇನಾದರೂ ವಿನಯ್ ಗುರೂಜಿ ರವರ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದರೆ ನಿಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ. ನೀವು ಗುರುಗಳ ಬಗ್ಗೆ ಇತರ ಹಗುರವಾಗಿ ಮಾತನಾಡಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ರಘು ಆಚಾರ್ ಖಾರವಾದ ಪದಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಬೆಂಗಳೂರು: ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಅವಧೂತ ವಿನಯ್ ಗುರೂಜಿ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಗರಂ ಆಗಿದ್ದಾರೆ.

    ಈ ವಿಚಾರವಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಘು ಆಚಾರ್, ಅಭಿಮಾನಿಗಳಿಂದ ಅವಧೂತರೆನಿಸಿಕೊಂಡಿರುವ ವಿನಯ್ ಗುರೂಜಿ ಗೌರಿಗದ್ದೆ ನಿಮಗೊಂದು ಬಹಿರಂಗ ಬಿನ್ನಹ. ಇಷ್ಟಕ್ಕೂ ಇಂತಹದೊಂದು ಬಹಿರಂಗ ಬಿನ್ನಹ ಬರೆಯಲು ಪ್ರಚೋದಿಸಿದ್ದು, ಸೋಮವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಮ್ಮ ಹಾಗೂ ನಿಮ್ಮ ಶಿಷ್ಯರ ನಡವಳಿಕೆ ಎಂದು ದೂರಿದ್ದಾರೆ.

    https://www.facebook.com/RaghuAcharG/posts/135567878217937

    ಪತ್ರದಲ್ಲಿ ಏನಿದೆ?
    ಭೂತ ಭವಿಷ್ಯ ಬಲ್ಲ ನಿಮಗೆ ಗೊತ್ತಿರುವಂತೆಯೇ ಇಡೀ ಜಗತ್ತನ್ನು ಇಂದು ಕೊರೊನಾ ಎಂಬ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ.

    ಇಂತಹ ಮಹಾಮಾರಿಯಿಂದ ವೈಯಕ್ತಿಕವಾಗಿ ನಮ್ಮನ್ನು ಹಾಗೂ ನಮ್ಮ ಸುತ್ತಮುತ್ತಲೂ ಇರುವವರನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ನಮ್ಮ ದೇಶದ ಸರ್ಕಾರಗಳು ಕೆಲವೊಂದು ಸಾರ್ವಜನಿಕ ನಡವಳಿಕೆಯನ್ನು ನಿಯಮದಂತೆ ವಿಧಿಸಿವೆ. ಅದರಲ್ಲಿ ಮುಖ್ಯವಾದವು ನಮ್ಮ ಉಸಿರು ಅನ್ಯರಿಗೆ ತಗುಲದಂತೆ ಮಾಸ್ಕ್ ಧರಿಸುವುದು ಹಾಗೂ ನಮ್ಮ ಉಗುಳು ಅನ್ಯರಿಗೆ ತಾಗದಂತೆ ವರ್ತಿಸುವುದು. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಹಾಮಹೀಮರಾದ ತಮ್ಮಿಂದ ಹಾಗೂ ತಮ್ಮ ಶಿಷ್ಯರಿಂದ ಈ ಎರಡು ನಿಯಮಗಳ ಬಹಿರಂಗ ಉಲ್ಲಂಘನೆಗೊಂಡು ನಿಜಕ್ಕೂ ಅಚ್ಚರಿ ಹಾಗೂ ಗಾಬರಿ ಮೂಡಿತು.

    ನೀವು ಮಾಸ್ಕ್ ತೊಡದೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಿರಿ. ಆಶೀರ್ವಾದ ಮಾಡುತ್ತಿದ್ದಿರಿ. ಮದುವೆಯ ಊಟ ಮಾಡಿದ ನಂತರ ತಾವು ತಿಂದುಂಡು ಬಿಟ್ಟ ಆಹಾರವನ್ನು ನಿಮ್ಮ ಶಿಷ್ಯರೂ ಎಲ್ಲರಿಗೂ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು. ಗೌರವ, ನಂಬಿಕೆ, ಭಕ್ತಿ ಇವೆಲ್ಲ ಇರಲಿ, ಇರಬೇಕು. ಒಪ್ಪುತ್ತೇನೆ. ಆದರೆ ಕೊರೊನಾದಂತಹ ಮಾರಕ ಸನ್ನಿವೇಶದಲ್ಲಿ ಇಂತಹದೊಂದು ನಡವಳಿಕೆಯನ್ನು ನಿಮ್ಮ ಹಾಗೂ ನಿಮ್ಮ ಶಿಷ್ಯರಿಂದ ಕಂಡು ನನಗೆ ನಂಬಿಕೆಯೇ ಬರಲಿಲ್ಲ.

    ನಿಮ್ಮ ಶಿಷ್ಯರ ನಡವಳಿಕೆ ನಿಮ್ಮ ಗಮನಕ್ಕೆ ಬರದೇ ಈ ಅಚಾತುರ್ಯ ನಡೆಯುತ್ತಿರಬಹುದು ಎಂದು ಭಾವಿಸಿ ಈ ಬಗ್ಗೆ ವಿಚಾರಿಸಿದೆ. ಆಗ ಇದು ನಿಮ್ಮ ಗಮನಕ್ಕೆ ಬಂದೇ ನಡೆಯುತ್ತಿದೆ ಎಂದು ಕೇಳಿಪಟ್ಟೆ. ಇದು ನಿಜಕ್ಕೂ ಆಘಾತ ತರುವಂತಹ ವಿಚಾರ. ಕೊರೊನಾ ಕಾಲದಲ್ಲಿ ನಿಮ್ಮಿಂದ ಇಂತಹ ನಡವಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದರೂ ಜನರ ಜೀವಕ್ಕೆ ಅಪಾಯ ತರುವಂತಹ ಆ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸದೆ ನನಗೆ ಬೇರೆ ವಿಧಿಯಿಲ್ಲ.

    ದಯಮಾಡಿ ಈ ವರ್ತನೆಯನ್ನು ಬದಲಾಯಿಸಿಕೊಳ್ಳಿ. ತನ್ಮೂಲಕ ನೀವು ಕೊಟ್ಟಿದ್ದನ್ನು ಪ್ರಸಾದ ಎಂದು ಭಾವಿಸುವ ಜನರ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಇನ್ನಾದರೂ ನಿಲ್ಲಿಸುವಂತೆ ಕೋರುತ್ತೇನೆ ಎಂದು ರಘು ಆಚಾರ್ ಬಹಿರಂಗ ಪತ್ರವನ್ನು ಬರೆದಿದ್ದಾರೆ.

  • ಕರ್ನಾಟಕ ಶಿಕ್ಷಣ ತಿದ್ದುಪಡಿ ಖಾಸಗಿ ವಿಧೇಯಕ ಚರ್ಚೆಗಾಗಿ ರಘು ಆಚಾರ್ ಏಕಾಂಗಿ ಹೋರಾಟ

    ಕರ್ನಾಟಕ ಶಿಕ್ಷಣ ತಿದ್ದುಪಡಿ ಖಾಸಗಿ ವಿಧೇಯಕ ಚರ್ಚೆಗಾಗಿ ರಘು ಆಚಾರ್ ಏಕಾಂಗಿ ಹೋರಾಟ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇವತ್ತು ಕಾಂಗ್ರೆಸ್ ಸದಸ್ಯ ರಘು ಆಚಾರ್ ಏಕಾಂಗಿ ಹೋರಾಟ ಮಾಡಿ ಗಮನ ಸೆಳೆದರು. ತಾವು 2017ರಲ್ಲಿ ಮಂಡಿಸಿದ್ದ ಕರ್ನಾಟಕ ಶಿಕ್ಷಣ ಖಾಸಗಿ ತಿದ್ದುಪಡಿ ವಿಧೇಯಕವನ್ನ ಚರ್ಚೆ ಮಾಡುವಂತೆ ಒತ್ತಾಯಿಸಿ ಸದನದ ಬಾವಿಗಳಿದು ಹೋರಾಟ ನಡೆಸಿದರು. ಪಕ್ಷದ ನಾಯಕರ ಆದೇಶವನ್ನು ಧಿಕ್ಕರಿಸಿದ ರಘು ಆಚಾರ್ ವಿಧೇಯಕ ಚರ್ಚೆಗೆ ಬಿಗಿಪಟ್ಟು ಹಿಡಿದರು.

    2017ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯ ರಘು ಆಚಾರ್, ಸರ್ಕಾರ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸರ್ಕಾರ ಅನುದಾನ ಪಡೆಯೋ ಪ್ರತಿಯೊಬ್ಬರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಅನ್ನೋ ಕರ್ನಾಟಕ ಶಿಕ್ಷಣ ತಿದ್ದುಪಡಿ ಖಾಸಗಿ ವಿಧೇಯಕ ಮಂಡನೆ ಮಾಡಿದರು. ಆದರೆ ಅವತ್ತು ವಿಧೇಯಕ ಚರ್ಚೆ ಆದರೂ ಕೂಡ ಯಾವುದೇ ನಿರ್ಧಾರ ಸರ್ಕಾರ ತಡೆದುಕೊಂಡಿರಲಿಲ್ಲ. ಹೀಗಾಗಿ ನಿನ್ನೆ ಸದನದಲ್ಲಿ ಮಾತನಾಡಿದ ರಘು ಆಚಾರ್, ನಾಳೆ ನನ್ನ ವಿಧೇಯಕ ಚರ್ಚೆ ಆಗಿಲ್ಲ ಎಂದರೆ ಧರಣಿ ಮಾಡೋದಾಗಿ ತಿಳಿಸಿದ್ದರು.

    ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಗಳು ವಿಧೇಯಕದ ಬಗ್ಗೆ ಮಾತನಾಡಿಲ್ಲ. ಇದಕ್ಕೆ ಆಕ್ರೋಶಗೊಂಡ ರಘು ಆಚಾರ್ ಚರ್ಚೆಗೆ ಅವಕಾಶ ಕೊಡುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯೆ ನೀಡದ ಸಭಾಪತಿಗಳು ವಿಧೇಯಕ ಸಮಿತಿ ಮುಂದೆ ಇದೆ. ಅಲ್ಲಿಂದ ಬಂದ ನಂತರ ವಿಧೇಯದ ಬಗ್ಗೆ ಚರ್ಚೆಗೆ ಅವಕಾಶ ಕೊಡೊದಾಗಿ ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಘು ಆಚಾರ್ ಈಗಲೇ ಚರ್ಚೆಗೆ ಅವಕಾಶ ಕೊಡಬೇಕು ಅಂತ ಒತ್ತಾಯ ಮಾಡಿದರು. ಇದಕ್ಕೆ ಸಭಾಪತಿಗಳು ಒಪ್ಪಲಿಲ್ಲ. ಇದಕ್ಕೆ ಆಕ್ರೋಶಗೊಂಡ ರಘು ಆಚಾರ್ ಸದನದ ಬಾವಿಗಳಿದು ಏಕಾಂಗಿ ಪ್ರತಿಭಟನೆ ನಡೆಸಿದರು.

    ರಘು ಆಚಾರ್ ಪ್ರತಿಭಟನೆಗೆ ತಮ್ಮ ಪಕ್ಷದ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಆಕ್ರೋಶ ಹೊರಹಾಕಿದರು. ಇದು ಪಕ್ಷದ ಶಿಸ್ತು ಉಲ್ಲಂಘನೆ. ಮುಂದೆ ಒಂದು ದಿನ ವಿಧೇಯಕದ ಬಗ್ಗೆ ಸಭೆ ಮಾಡೋಣ. ಈಗ ಧರಣಿ ವಾಪಸ್ ಪಡೆಯಿರಿ ಅಂತ ಎಸ್‍ಆರ್ ಪಾಟೀಲ್ ತಿಳಿಸಿದರು. ಇದಕ್ಕೆ ಒಪ್ಪದ ರಘು ಆಚಾರ್ ನನ್ನನ್ನ ಬೇಕಾದರೆ ಪಕ್ಷದಿಂದ ತೆಗೆದು ಹಾಕಿ. ವಿಧೇಯಕದ ಮೇಲೆ ಚರ್ಚೆಗೆ ಅವಕಾಶ ಕೊಡಿ ಅಂತ ಬಾವಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು.

    ವಿಪಕ್ಷ ನಾಯಕರ ಬಳಿಕ ಸಚಿವ ಈಶ್ವರಪ್ಪ ಕೂಡ ರಘು ಆಚಾರ್‍ಗೆ ಧರಣಿ ವಾಪಸ್ ಪಡೆಯಲು ಮನವಿ ಮಾಡಿದರು. ಯಾವುದೇ ಶಾಸಕರು ಹೀಗೆ ಧರಣಿ ಮಾಡೋವಾಗ ಮುಂದಿನ ಕಾರ್ಯ ಕಲಾಪ ನಡೆದ ಉದಾಹರಣೆ ಇಲ್ಲ. ಈ ವರ್ತನೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಕೂಡಲೇ ಧರಣಿ ವಾಪಸ್ ಪಡೆಯಿರಿ ಚರ್ಚೆ ಮಾಡೋಣ ಅಂತ ಸಚಿವ ಈಶ್ವರಪ್ಪ ಮನವಿ ಮಾಡಿದರು. ಆದರೆ ಈಶ್ವರಪ್ಪ ಮಾತಿಗೂ ಒಪ್ಪದ ರಘ ಆಚಾರ್ ಧರಣಿ ಮುಂದುವರಿಸಿದರು. ಈಶ್ವರಪ್ಪ ಜೊತೆಗೆ ವಿಪಕ್ಷ ಮತ್ತು ಆಡಳಿತ ಸದಸ್ಯರು ರಘು ಆಚಾರ್ ಮನವೊಲಿಸಿದರು. ಅದಕ್ಕೂ ರಘು ಆಚಾರ್ ಒಪ್ಪಲಿಲ್ಲ.

    ಇದಾದ ಬಳಿ ಸಭಾಪತಿಗಳು ಯಾವುದೇ ವಿಷಯ ಚರ್ಚೆ ಮಾಡಬೇಕಾದರೆ ಮೊದಲು ನೋಟಿಸ್ ನೊಟೀಸ್ ಕೊಡಬೇಕು. ಆದರೆ ಸದಸ್ಯರು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆ ಅಸಾಧ್ಯ ಅಂತ ತಿಳಿಸಿದರು. ಸಭಾಪತಿಗಳ ಮಾತಿಗೆ ಹಿರಿಯ ಸದಸ್ಯ ಹೊರಟ್ಟಿ ಧ್ವನಿಗೂಡಿಸಿ, ನೊಟೀಸ್ ನೀಡದೆ ಚರ್ಚೆ ಮಾಡುವುದು ಅಸಾಧ್ಯ. ಹೀಗಾಗಿ ನೊಟೀಸ್ ಕೊಡಿ ಚರ್ಚೆ ಮಾಡೋಣ. ಈಗ ಧರಣಿ ವಾಪಸ್ ಪಡೆಯಿರಿ ಎಂದು ಹೊರಟ್ಟಿ ಮನವಿ ಮಾಡಿದರು. ಹೊರಟ್ಟಿ ಮಾತಿಗೆ ಒಪ್ಪಿದ ರಘು ಆಚಾರ್ ಪ್ರತಿಭಟನೆ ವಾಪಸ್ ಪಡೆದರು.