Tag: Raghavendra Swamy Mutt

  • ಹಾವೇರಿ | ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಹಾವೇರಿ | ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಹಾವೇರಿ: ನಗರದಲ್ಲಿರುವ (Haveri) ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt) ಕಳ್ಳರು ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ.

    ನಗರದ ಹೃದಯ ಭಾಗದಲ್ಲಿರೋ ಮಠದಲ್ಲಿ ಎರಡು ಕೋಣೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮಠದಲ್ಲಿರೋ ಚಿನ್ನಾಭರಣ, ಬೆಳ್ಳಿಯ ಆಭರಣ, ಹಾಗೂ ತಾಮ್ರದ ವಸ್ತುಗಳನ್ನ ಖದೀಮರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳವಾದ ವಸ್ತುಗಳು
    1) 15 ಗ್ರಾಂ ಬಂಗಾರದ ಸರದ ಹುಕ್ಕು, 1,79,550 ರೂ. ಮೌಲ್ಯದ್ದು
    2) 18 ಗ್ರಾಂ ಬಂಗಾರದ ಸರ, ಒಂದು ಹುಕ್ಕು, 2,15,460 ರೂ. ಮೌಲ್ಯದ್ದು
    3) 06 ಗ್ರಾಂ ತೂಕದ ಬಂಗಾರದ ಸಣ್ಣ ಪುಷ್ಪ ಎಲೆ 71,820 ರೂ. ಮೌಲ್ಯದ್ದು
    4) 2 ಬೆಳ್ಳಿಯ ತಂಬಿಗೆ, 6 ಬೆಳ್ಳಿಯ ಆಚುಮ್ಯ ಲೋಟ,
    6) ಬೆಳ್ಳಿಯ ಉದ್ದರಣಿ, 2 ಬೆಳ್ಳಿಯ ತಟ್ಟೆಗಳು, 1 ಬೆಳ್ಳಿಯ ಆರತಿ ಇವುಳ, 2,70,920 ರೂ. ಮೌಲ್ಯದ್ದು
    5) 75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 03 ಕಳಸ, 1,00,00 ರೂ. ಮೌಲ್ಯದ್ದು
    6) 60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು, 42,000 ರೂ. ಮೌಲ್ಯದ್ದು
    7) 18 ಕೆ.ಜಿ ತಾಮ್ರದ 50 ತಂಬಿಗಳು 17,928 ರೂ. ಮೌಲ್ಯದ್ದು
    8) 207 ಕೆ.ಜಿ ಹಿತ್ತಾಳೆಯ 02 ಸಾಲು ದೀಪಗಳು, 42,000 ರೂ. ಮೌಲ್ಯದ್ದು
    9) 40 ಕೆ.ಜಿ ಹಿತ್ತಾಳೆಯ 20 ಗಂಟೆಗಳು, 20,000 ರೂ. ಮೌಲ್ಯದ್ದು
    ಒಟ್ಟು 10,67,668 ರೂ. ಮೌಲ್ಯದ ಆಭರಣ, ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳು ಕಳವಾಗಿದ್ದು, ಈ ಬಗ್ಗೆ ಡಾ. ವೀಣಾ ಎಸ್, ಶ್ರೀನಿವಾಸ ವೈದ್ಯ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಾವೇರಿ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

    ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

    ರಾಯಚೂರು: ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಂತ್ರಾಲಯಕ್ಕೆ (Mantralayam) ಭೇಟಿ ನೀಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದಿದ್ದಾರೆ. ಮಂಚಾಲಮ್ಮ ದೇವಿ ದರ್ಶನ ಬಳಿಕ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳನ್ನ ಭೇಟಿ ಮಾಡಿ ಆಶಿರ್ವಚನ ಪಡೆದರು. ಸಚಿವರಿಗೆ ಫಲಮಂತ್ರಾಕ್ಷತೆ, ಶೇಷವಸ್ತ್ರ ಸ್ಮರಣಿಕೆಯನ್ನು ನೀಡಿ ಶ್ರೀಗಳು ಆಶೀರ್ವದಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ರಾಯರ ಆರಾಧನಾ ಮಹೋತ್ಸವಕ್ಕೆ ಶ್ರೀಗಳು ಇದೇ ವೇಳೆ ಆಹ್ವಾನಿಸಿದ್ದಾರೆ‌. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್

    ಬಳಿಕ ಮಂತ್ರಾಲಯದ ಕರ್ನಾಟಕ ಛತ್ರದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ಮಾಣ ಮಾಡಿರುವ ನೂತನ ಹಾಗೂ ಹಳೆ ಕಟ್ಟಡಗಳ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಗುರುಪೂರ್ಣಿಮೆ ಸಂಭ್ರಮ – ಅದ್ದೂರಿಯಾಗಿ ನಡೆದ ಮೃತ್ತಿಕಾ ಸಂಗ್ರಹ ಮಹೋತ್ಸವ

  • ಮಂತ್ರಾಲಯ | ಗುರುರಾಯರ ದರ್ಶನ ಪಡೆದ ಪ್ರಹ್ಲಾದ್ ಜೋಶಿ

    ಮಂತ್ರಾಲಯ | ಗುರುರಾಯರ ದರ್ಶನ ಪಡೆದ ಪ್ರಹ್ಲಾದ್ ಜೋಶಿ

    ರಾಯಚೂರು: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮಂತ್ರಾಲಯ (Mantralayam) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಗುರುರಾಯರ ದರ್ಶನ ಪಡೆದರು.

    ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ ಅವರು, ರಥೋತ್ಸವದಲ್ಲಿ ಭಾಗವಹಿಸಿ ಹರಕೆ ತೀರಿಸಿದರು.‌‌ ಉತ್ಸವರಾಯರ ಪಾದಪೂಜೆ, ಮಂಚಾಲಮ್ಮ ದೇವಿ ಪೂಜೆ, ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ – 8 ತಾಲೂಕುಗಳ ಶಾಲೆಗಳಿಗೆ ಜೂ.17 ರಂದು ರಜೆ

    ಮಠದಲ್ಲಿ ಸಂಜೆ ನಡೆದ ಉತ್ಸವಗಳಲ್ಲಿ ಭಾಗವಹಿಸಿದರು.‌ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶಿರ್ವಚನ ಪಡೆದರು. ಫಲ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶಿರ್ವದಿಸಿದರು. ಇದನ್ನೂ ಓದಿ: ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು

  • ಮಂತ್ರಾಲಯದಲ್ಲಿ 2.95 ಕೋಟಿ ರೂ. ಕಾಣಿಕೆ ಸಂಗ್ರಹ

    ಮಂತ್ರಾಲಯದಲ್ಲಿ 2.95 ಕೋಟಿ ರೂ. ಕಾಣಿಕೆ ಸಂಗ್ರಹ

    ರಾಯಚೂರು: ಕಲಿಯುಗ ಕಾಮಧೇನು ಕಲ್ಪವೃಕ್ಷ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt Mantralaya) ಕಳೆದ 26 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಡಿಸೆಂಬರ್ ತಿಂಗಳ (December) 26 ದಿನಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು ಒಟ್ಟು 2,95,74,004 ರೂ. ಕಾಣಿಕೆ ಸಂಗ್ರಹವಾಗಿದೆ. ಇದನ್ನೂ ಓದಿ: ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ – ಯುಜಿಸಿ

    ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 2, 89, 63,504 ರೂಪಾಯಿ ಕರೆನ್ಸಿ ನೋಟುಗಳು ಹಾಗೂ 6,10,500 ರೂ. ನಾಣ್ಯಗಳ ಸಂಗ್ರಹವಾಗಿದೆ. 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.

    ಕಾಣಿಕೆ ಹುಂಡಿ‌ ಎಣಿಕೆ ಕಾರ್ಯದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು , ಗುರುಪಾದ ಕರಸೇವಕರು, ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

     

  • ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

    ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ರಜನಿಕಾಂತ್‌ ಭೇಟಿ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swampy Mutt)ಭೇಟಿ ನೀಡಿದ್ದಾರೆ. ಜೈಲರ್ ಸಕ್ಸಸ್ ಬಳಿಕ ರಾಘವೇಂದ್ರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಜೈಲರ್‌’ ಬಳಿಕ ಹೆಚ್ಚಿದ ಬೇಡಿಕೆ- ‘ದಿ ಕೇರಳ ಸ್ಟೋರಿ’ ಡೈರೆಕ್ಟರ್ ಜೊತೆ ಶಿವಣ್ಣ ಸಿನಿಮಾ?

    ರಜನಿಕಾಂತ್ ಅವರು ದೇವರನ್ನು ನಂಬುವ ಆರಾಧಿಸುವ ವ್ಯಕ್ತಿ. ಜೈಲರ್ (Jailer)  ರಿಲೀಸ್ ಸಂದರ್ಭದಲ್ಲಿ ಹಲವು ದೇವಸ್ಥಾನಗಳಿಗೆ ತಲೈವಾ ಭೇಟಿ ನೀಡಿದ್ದರು. ಈಗ ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಇಂದು (ಆಗಸ್ಟ್ 29) ಬೆಳಗ್ಗೆ 10:15ರ ವೇಳೆಗೆ ಬಂದು ತಲೈವಾ ಅರ್ಚನೆ ಮಾಡಿಸಿದ್ದಾರೆ. ಈ ಬಗ್ಗೆ ಹಿರಿಯ ವ್ಯವಸ್ಥಾಪಕರಾದ ವೆಂಕಣ್ಣಾಚಾರ್ ಮಾಹಿತಿ ನೀಡಿದ್ದಾರೆ.

    ಪ್ರತಿಬಾರಿ ಬೆಂಗಳೂರಿಗೆ ಬಂದಾಗ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ಸಲ ಬಂದಾಗಲೂ ಸರ್ಪ್ರೈಸ್ ವಿಸಿಟ್ ಮಾಡುತ್ತಾರೆ. ಮಠಕ್ಕೆ ಬಂದಾಗ 10 ನಿಮಿಷ ಪ್ರಾರ್ಥನೆ ಮಾಡ್ತಾರೆ. ರಜನಿಕಾಂತ್ ಅವರು ತುಂಬಾ ಸರಳಜೀವಿ, ಅಹಂಕಾರ ಇಲ್ಲದ ವ್ಯಕ್ತಿಯಾಗಿದ್ದಾರೆ. ಅವರು ಭೇಟಿ ನೀಡಿದ್ದು, ಖುಷಿಯಾಗಿದೆ ಎಂದು ದೇವಾಲಯದ ವ್ಯವಸ್ಥಾಪಕರು ಮಾತನಾಡಿದ್ದಾರೆ. ಇದಷ್ಟೇ ಅಲ್ಲ, ಬೆಂಗಳೂರಿನ(Bengaluru) ಜಯನಗರದ ಡಿಪೋಗೆ ತಲೈವಾ ಭೇಟಿ ನೀಡಿ ಕಂಡೆಕ್ಟರ್‌, ಚಾಲಕರ ಜೊತೆ 10 ನಿಮಿಷಗಳ ಕಾಲ ಮಾತನಾಡಿದ್ದಾರೆ.

    ಆಗಸ್ಟ್ 10ರಂದು ತೆರೆ ಕಂಡ ‘ಜೈಲರ್’ (Jailer) ಸಿನಿಮಾ, 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರಸ್ತುತ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಅತಿಥಿ ರೋಲ್‌ನಲ್ಲಿ ನಟಿಸುವ ಮೂಲಕ ಮೋಡಿ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಈಶ್ವರಪ್ಪ

    ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಈಶ್ವರಪ್ಪ

    ರಾಯಚೂರು: ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ದಂಪತಿ ಸಮೇತರಾಗಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

     

     

    ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ಭೇಟಿ ನೀಡಿದ ಈಶ್ವರಪ್ಪ ಮೊದಲಿಗೆ ಗ್ರಾಮದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದಿದ್ದಾರೆ. ಬಳಿಕ ರಾಯರ ಮೂಲ ಬೃಂದಾವನ ದರ್ಶನ ಮಾಡಿದ್ದಾರೆ. ರಾಯರ ಮೂಲ ಬೃಂದಾವನದಲ್ಲಿ ಈಶ್ವರಪ್ಪ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಪೆ ಚರ್ಚಾ ಸಂವಾದ- ಪೂರಕ ವಿಚಾರ, ಒಳನೋಟಗಳನ್ನು ಆಹ್ವಾನಿಸಿದ ಪ್ರಧಾನಿ

    ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯಿಂದ ಆಶೀರ್ವಚನ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಈಶ್ವರಪ್ಪ ದಂಪತಿಗೆ ಶ್ರೀಗಳು ಸನ್ಮಾನ ಮಾಡಿ ಆಶೀರ್ವದಿಸಿದ್ದಾರೆ. ರಾಯರ ಪರಮ ಭಕ್ತರಾಗಿರುವ ಈಶ್ವರಪ್ಪ ಕಾರ್ಯಕ್ರಮ ನಿಮಿತ್ತ ಕೂಡಲ ಸಂಗಮಕ್ಕೆ ತೆರಳುವ ಮಾರ್ಗಮಧ್ಯೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ ತನಿಖೆಯಿಂದ ಕಾಂಗ್ರೆಸ್‌ಗೆ ನಡುಕ – ಕೈಪಡೆಗೆ ಬಿಜೆಪಿ ಗುದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k