Tag: Raghavendra Swamy

  • ಕಿರುತೆರೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾತ್ಮೆ

    ಕಿರುತೆರೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಾತ್ಮೆ

    ಕರ್ನಾಟಕದ ಎಲ್ಲರ ಅಚ್ಚುಮೆಚ್ಚಿನ ವಾಹಿನಿ ಜೀ ಕನ್ನಡ (Zee Kannada) ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ನಿರಂತರವಾಗಿ ಲಗ್ಗೆ ಇಡುತ್ತಾ ಬಂದಿದೆ. ಇದಕ್ಕೂ ಮೊದಲು ಉಘೆ ಉಘೆ ಮಾದೇಶ್ವರ ಮತ್ತು ವಿಷ್ಣು ದಶಾವತಾರ ಎಂಬ ಭಕ್ತಿಪ್ರಧಾನ ಧಾರಾವಾಹಿಗಳನ್ನು ನೀಡಿ ಕನ್ನಡಿಗರ ಮನಗೆದ್ದ ಜೀ ಕನ್ನಡ ಈಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಜನರ ಮುಂದಿಡಲು ಸಜ್ಜಾಗಿದೆ. `ಶ್ರೀ ರಾಘವೇಂದ್ರ ಮಹಾತ್ಮೆ’ (Shree Raghavendra Mahatme) ಎಂಬ ಧಾರಾವಾಹಿ ಇದೇ ಸೆಪ್ಟೆಂಬರ್ 1ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ ಮತ್ತು ಇದರಲ್ಲಿ ರಾಯರ ಬಾಲ್ಯ, ಪವಾಡಗಳು ಮತ್ತು ಅವರ ಜೀವನದಲ್ಲಿ ನಡೆದ ಅನೇಕ ಕಥೆಗಳು ನಮಗೆ ಕಾಣಸಿಗಲಿದೆ.

    ಜೀ ಕನ್ನಡವು ನಂಬಿಕೆ, ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಬೇರು ಬಿಟ್ಟಿರುವ ಭವ್ಯವಾದ ಕಥೆಗಳನ್ನು ನಿರಂತರವಾಗಿ ಪ್ರೇಕ್ಷಕರಿಗೆ ಕೊಡುವುದರ ಜೊತೆಗೆ ಅರ್ಥಪೂರ್ಣ ಮನರಂಜನೆಯನ್ನು ನೀಡುವ ತನ್ನ ಮುಖ್ಯಧ್ಯೇಯಕ್ಕೆ ಬದ್ಧವಾಗಿದೆ. ಈ ಪರಂಪರೆಯನ್ನು ಇನ್ನಷ್ಟು ಬಲಪಡಿಸುತ್ತಾ, ಜೀ ಕನ್ನಡ ಈಗ `ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಭಕ್ತಿಪರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಇದು ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆಯನ್ನು ವಿವರಿಸುತ್ತದೆ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು ಮತ್ತು ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಕಥಾಶೈಲಿ, ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಆತ್ಮಚರಿತ್ರೆ ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಲಿದೆ.ಇದನ್ನೂ ಓದಿ: ಕನ್ನಡದಲ್ಲಿ ಹೊಸ ಮೆಗಾ ಸೀರಿಯಲ್ – ಮಂಗಳವಾರ ʻಮಾಂಗಲ್ಯʼವಾರ 

    ಧಾರಾವಾಹಿಯಲ್ಲಿ ಪ್ರತಿಭಾನ್ವಿತ ತಾರಾ ಬಳಗ ಇದ್ದು, ಇದರ ನಿರ್ಮಾಣ ಮತ್ತು ಕ್ರಿಯೇಟಿವ್ ಹೆಡ್ ಆಗಿ ಮಹೇಶ್ ಸುಖಧರೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಟಾಲೆಂಟೆಡ್ ಆಕ್ಟರ್, ಡೈರೆಕ್ಟರ್ ನವೀನ್ ಕೃಷ್ಣ ಅವರು ಹೊತ್ತಿದ್ದಾರೆ. ಇನ್ನು ಈ ಧಾರಾವಾಹಿಗೆ ಮಣಿಕಾಂತ್ ಕದ್ರಿ ಅವರ ಅಮೋಘ ಸಂಗೀತ ಇರಲಿದ್ದು, ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ಅವರು ನಟಿಸಿದ್ದಾರೆ. ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದು, ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರು ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಅನೇಕ ಪ್ರತಿಭಾನ್ವಿತ ಕಲಾವಿದರ ದಂಡು ಕಾಣಸಿಗಲಿದೆ. ಅಷ್ಟೇ ಅಲ್ಲದೆ, ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಆಗಿ ಲೂಸಿಯಾ ಚೆಲುವೆ ಶ್ರುತಿ ಹರಿಹರನ್ ಈ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಇನ್ನು ರಾಯರು ಯಾರು ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ. ಒಟ್ಟಿನಲ್ಲಿ ಇದು ಪ್ರೇಕ್ಷಕರಿಗೆ ಮನರಂಜನೆಯ ಹಬ್ಬವನ್ನು ಕೊಡುವುದಂತೂ ಗ್ಯಾರಂಟಿ.

    `ಶ್ರೀ ರಾಘವೇಂದ್ರ ಮಹಾತ್ಮೆ’ ಕೇವಲ ಪೌರಾಣಿಕ ಕಥೆಯಾಗಿರದೆ ಈಗಿನ ಜನಾಂಗಕ್ಕೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವತ್ತ ಪ್ರಯತ್ನ ಮಾಡಲಿದೆ. ಉನ್ನತ ಮಟ್ಟದ ಟೆಕ್ನಾಲಜಿ, ಭವ್ಯ ಸೆಟ್ಗಳು ಮತ್ತು ಗಟ್ಟಿಯಾದ ಕಥಾಹಂದರದೊಂದಿಗೆ ಈ ಧಾರಾವಾಹಿ ಕನ್ನಡ ಪೌರಾಣಿಕ ಕಥನಶೈಲಿಗೆ ಹೊಸ ಅರ್ಥ ನೀಡಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 1, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರ ಆಗಲಿರುವ `ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯನ್ನು ನೋಡಲು ಮರೆಯದಿರಿ.ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಟಿ ಸಾಯಿ ಧನ್ಸಿಕಾ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

  • ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – 22 ದಿನಗಳಲ್ಲೇ 3.35 ಕೋಟಿ ಒಡೆಯರಾದ ರಾಯರು

    ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – 22 ದಿನಗಳಲ್ಲೇ 3.35 ಕೋಟಿ ಒಡೆಯರಾದ ರಾಯರು

    ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 22 ದಿನಗಳ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಭಕ್ತರಿಂದ 3.35 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.ಇದನ್ನೂ ಓದಿ: ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ

    ಆಗಸ್ಟ್ ತಿಂಗಳಲ್ಲಿ ಮಂತ್ರಾಲಯ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದು ಬಂದಿದ್ದು, ಸಂಗ್ರಹವಾದ ಕಾಣಿಕೆಯಲ್ಲಿ 3,24,52,256 ರೂ. ನೋಟುಗಳು, 10,79,500 ರೂ. ನಾಣ್ಯಗಳು ಸಂಗ್ರಹವಾಗಿವೆ. ಒಟ್ಟು ಕಳೆದ 22 ದಿನಗಳಲ್ಲೇ 3,35,31,756 ರೂ. ಕಾಣಿಕೆ ಸಂಗ್ರಹವಾಗಿದೆ.

    ಇನ್ನೂ 74 ಗ್ರಾಂ ಚಿನ್ನ, 1,440 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಮಂಗಳವಾರ (ಆ.19) ಮಂತ್ರಾಲಯ ಮಠದಲ್ಲಿ ಪ್ರಾರಂಭವಾದ ಹುಂಡಿ ಎಣಿಕೆ ಕಾರ್ಯ ಬುಧವಾರ (ಆ.20) ಮುಕ್ತಾಯವಾಗಿದೆ. ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗಿಯಾಗಿದ್ದರು.ಇದನ್ನೂ ಓದಿ: ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್

  • ಮಂತ್ರಾಲಯದಲ್ಲಿ ರಾಯರ 429 ನೇ ಹುಟ್ಟುಹಬ್ಬದ ಸಂಭ್ರಮ – ಗುರುವೈಭವೋತ್ಸವಕ್ಕೆ ತೆರೆ

    ಮಂತ್ರಾಲಯದಲ್ಲಿ ರಾಯರ 429 ನೇ ಹುಟ್ಟುಹಬ್ಬದ ಸಂಭ್ರಮ – ಗುರುವೈಭವೋತ್ಸವಕ್ಕೆ ತೆರೆ

    ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Raghavendra Swamy) 429 ನೇ ಹುಟ್ಟುಹಬ್ಬದ ಸಂಭ್ರಮ ಮಂತ್ರಾಲಯದಲ್ಲಿ ಮನೆಮಾಡಿದೆ. ಗುರುರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವವನ್ನು ಗುರುವೈಭವೋತ್ಸವವಾಗಿ ಮಂತ್ರಾಲಯದಲ್ಲಿ (Mantralaya) ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

    ರಾಯರ ಹುಟ್ಟುಹಬ್ಬ ಹಿನ್ನೆಲೆ ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಮಹಾ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತಿರುಪತಿ ತಿರುಮಲ ದೇವಾಲಯದಿಂದ ಮಠಕ್ಕೆ ಬಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಣೆ ಮಾಡಲಾಯಿತು. ಚೆನೈನ ಶ್ರೀರಾಘವೇಂದ್ರ ನಾದಹಾರ ಸೇವಾ ಟ್ರಸ್ಟ್‌ನ 150ಕ್ಕೂ ಹೆಚ್ಚು ಕಲಾವಿದರು ನಾದಹಾರ ಸಮರ್ಪಣ ಸೇವೆ ಸಲ್ಲಿಸಿದರು. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ಜರುಗಿತು. ಇದನ್ನೂ ಓದಿ: ಕರ್ನಾಟಕದಲ್ಲಿದ್ದಾರೆ ಒಟ್ಟು 5.42 ಕೋಟಿ ಮತದಾರರು – ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರು?

    ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ರಾಯರ ವರ್ಧಂತಿ ಉತ್ಸವದಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು. ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ರಾಯರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಆರು ದಿನಗಳ ಗುರುವೈಭವೋತ್ಸವಕ್ಕೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂದು ರಾತ್ರಿ ವಿದ್ಯುಕ್ತ ತೆರೆ ಬೀಳಲಿದೆ. ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್‌ ಸರ್ಕಾರದಲ್ಲಿ ದುಡ್ಡಿಲ್ಲ, ಯೋಜನೆ ಹಣ ಕಡಿತವಾಗಿದೆ: ಮೋದಿ

  • ವಿಜಯದಶಮಿ – ಶ್ರೀಗಳಿಂದ ರಾಯರಿಗೆ ವಿಶೇಷ ಪೂಜೆ

    ವಿಜಯದಶಮಿ – ಶ್ರೀಗಳಿಂದ ರಾಯರಿಗೆ ವಿಶೇಷ ಪೂಜೆ

    ರಾಯಚೂರು: ವಿಜಯದಶಮಿ (Vijayadashami) ಹಿನ್ನೆಲೆ ಗುರು ರಾಯರ ಸನ್ನಿಧಿ ಮಂತ್ರಾಲಯದ (Mantralayam) ರಾಘವೇಂದ್ರ ಸ್ವಾಮಿ (Raghavendra Swamy) ಮಠದಲ್ಲಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ವಿಶೇಷ ಪೂಜೆ ನೆರವೇರಿಸಿದರು.

    ಶ್ರೀಗಳು ನರಸಿಂಹ ದೇವರ ಸಾಲಿಗ್ರಾಮಕ್ಕೆ ಮನ್ಯುಸೂಕ್ತ ಪುನಹಚರಣೆ ನಡೆಸಿಕೊಟ್ಟರು. ನಂತರ ಉಂಜಾಳ ಮಂಟಪದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಪ್ರವಚನ ನಡೆಯಿತು. ನಂತರ ಆಯುಧಪೂಜೆ ಅಂಗವಾಗಿ ಶ್ರೀ ಮಠದ ವಾಹನಗಳ ಪೂಜೆ ಮಾಡಲಾಯಿತು. ಇದನ್ನೂ ಓದಿ: ನಾವೆಲ್ಲ ಗೆಲ್ಲುವುದು ಮೋದಿ ಹೆಸರಿಂದ, ಮೋದಿಯೇ ನಮ್ಮ ದೇವರು: ಪ್ರತಾಪ್ ಸಿಂಹ

    ಬಳಿಕ ಶ್ರೀಗಳು ಹಳೆಪೇಟೆಯ ಶ್ರೀನಿವಾಸ ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿಯ ವಸಂತೋತ್ಸವ ನೆರವೇರಿಸಿದರು. ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಹಾಗೂ ಶಿಷ್ಯ ವೃಂದದವರು ಭಾಗಿಯಾಗಿದ್ದರು. ಇದನ್ನೂ ಓದಿ: ನರ್ಸ್‌ಗಳ ಸೌಂದರ್ಯದ ಕುರಿತು ಹೇಳಿಕೆ- ರಾಜು ಕಾಗೆ ಕ್ಷಮೆಯಾಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ

    ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ

    ರಾಯಚೂರು: ಮಂತ್ರಾಲಯದಲ್ಲಿ (Mantralayam) ರಾಘವೇಂದ್ರ ಸ್ವಾಮಿಗಳ (Raghavendra Swamy) 352ನೇ ಆರಾಧನಾ ಮಹೋತ್ಸವದ (Aradhana Mahotsava) ಕೊನೆಯ ಘಟ್ಟ ಉತ್ತರಾಧನೆ ಅದ್ದೂರಿಯಾಗಿ ನಡೆಯಿತು. ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಾಯರ ಆರಾಧನಾ ಮಹೋತ್ಸವದ ವೈಭವದಲ್ಲಿ ಪಾಲ್ಗೊಂಡಿದ್ದರು.

    ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಉತ್ತರಾಧನೆಯಾಗಿ ಆಚರಿಸಲಾಗುತ್ತದೆ. ಉತ್ತರಾಧನೆ ಹಿನ್ನೆಲೆ ನಡೆದ ಮಹಾರಥೋತ್ಸವ ರಾಯರ ಆರಾಧನೆಗೆ ಮೆರಗು ತಂದಿತು. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಎನ್ನುವ ಪ್ರತೀತಿಯಿದೆ. ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯುವ ಮೂಲಕ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಮಹಾರಥೋತ್ಸಕ್ಕೂ ಮುನ್ನ ರಾಮದೇವರು ಮತ್ತು ಎಲ್ಲಾ ಮಠದ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಶ್ರೀಗಳು ವಸಂತೋತ್ಸವ ಆಚರಿಸಿದರು. ಇದನ್ನೂ ಓದಿ: ಜಿ20ಗೂ ಮುನ್ನ ಮೋದಿ – ಬೈಡೆನ್ ನಡುವೆ ದ್ವಿಪಕ್ಷೀಯ ಮಾತುಕತೆ

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು. ಮಹಾ ರಥೋತ್ಸವದ ಹಿನ್ನೆಲೆ ಶ್ರೀಗಳು ರಥದಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

    ಈ ವೇಳೆ ಚಂದ್ರಯಾನ-3 ದೇಶದ ಹೆಮ್ಮೆಯ ಕೊಡುಗೆಯಾಗಿದೆ. ಈ ಯಶಸ್ಸಿನ ಮೂಲಕ ದೇಶ ಅತ್ಯುನ್ನತ ಸ್ಥಾನಕ್ಕೆ ಏರಿದೆ. ಸೂರ್ಯಮಂಡಲಕ್ಕೂ ಇಂದು ಲಗ್ಗೆ ಇಡುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲರೂ ದೇಶಭಕ್ತಿ ಮತ್ತು ಧರ್ಮಶ್ರದ್ದೆಯನ್ನಿಟ್ಟುಕೊಳ್ಳಬೇಕು. ಭಗವಂತ ವಿಶೇಷ ಅನುಗ್ರಹ ಮಾಡಲಿದ್ದಾನೆ ಎಂದರು.

    ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರಾಧನೆ ದಿನ ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಎನ್ನುವ ನಂಬಿಕೆಯಿದೆ. ಹೀಗಾಗಿ ಉತ್ತರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಆಗಮಿಸಿ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

    ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು. ಈ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪ್ರತಿ ವರ್ಷದಂತೆ ರಥಕ್ಕೆ ಪುಷ್ಪವೃಷ್ಠಿ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರು ದಿನಗಳು ಇಂದಿಗೆ ಮುಕ್ತಾಯವಾದವು. ಸಪ್ತರಾತ್ರೋತ್ಸವ ಹಿನ್ನೆಲೆ ಸೆ.4ರ ವರೆಗೆ ಮಠದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆಯುತ್ತವೆ. ಇದನ್ನೂ ಓದಿ: ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಚೆ ಧರಿಸಿ ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ – ರಾಯರ ದರ್ಶನ

    ಪಂಚೆ ಧರಿಸಿ ಮಂತ್ರಾಲಯಕ್ಕೆ ರಾಹುಲ್ ಗಾಂಧಿ ಭೇಟಿ – ರಾಯರ ದರ್ಶನ

    ರಾಯಚೂರು: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇಂದು ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿ (Guru Raghavendra Swamy) ದರ್ಶನ ಪಡೆದರು.

    ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Padayatre) ಇಂದು ಮಂತ್ರಾಲಯ ತಲುಪಿತು. ಸಾಂಪ್ರದಾಯಿಕ ವಸ್ತ್ರ ಧರಿಸಿ ರಾಯರ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ರಾಘವೇಂದ್ರ ಸ್ವಾಮಿ, ಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ರಾಹುಲ್ ಗಾಂಧಿಗೆ ಆಶೀರ್ವಚನ ನೀಡಿದರು.

    ಈ ವೇಳೆ, ಡಿ.ಕೆ. ಶಿವಕುಮಾರ್ (D.K.Shivakumar) ನೀಡಿದ ಬೆಳ್ಳಿ ಖಡ್ಗವನ್ನು ಸ್ವಾಮೀಜಿ ನಯವಾಗಿಯೇ ನಿರಾಕರಿಸಿದರು. ನಾಳೆ ರಾಹುಲ್ ಪಾದಯಾತ್ರೆ ಮತ್ತೆ ಕರ್ನಾಟಕಕ್ಕೆ ಕಾಲಿಡಲಿದೆ. ಭಾರತ್ ಜೋಡೋ ಸ್ವಾಗತಕ್ಕೆ ರಾಯಚೂರು ನಗರ ಸಜ್ಜಾಗಿದೆ. ಇದನ್ನೂ ಓದಿ : 1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ

    ನಾಳೆಯಿಂದ ಮೂರು ದಿನ ರಾಹುಲ್ ನಡಿಗೆ ರಾಯಚೂರು ಜಿಲ್ಲೆಯಲ್ಲಿ ಸಾಗಲಿದೆ. ನಾಡಿದ್ದು ಪ್ರಿಯಾಂಕಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂಭವವಿದೆ. ಇದನ್ನೂ ಓದಿ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಆರಂಭ – ಸಕ್ಕರೆ ಇಲಾಖೆ ತೀರ್ಮಾನ

    Live Tv
    [brid partner=56869869 player=32851 video=960834 autoplay=true]

  • ಮಂತ್ರಾಲಯಕ್ಕೆ ಭೇಟಿ ನೀಡಿದ ಬಿ.ಸಿ.ನಾಗೇಶ್ ದಂಪತಿ

    ಮಂತ್ರಾಲಯಕ್ಕೆ ಭೇಟಿ ನೀಡಿದ ಬಿ.ಸಿ.ನಾಗೇಶ್ ದಂಪತಿ

    ರಾಯಚೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದಂಪತಿ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.

    ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ ಆಗಮಿಸಿರುವ ಬಿ.ಸಿ.ನಾಗೇಶ್ ಅವರು ಮಂತ್ರಾಲಯದಲ್ಲಿ ಮಂಚಾಲಮ್ಮ ದೇವಿ ದರ್ಶನ ಪಡೆದ ಬಳಿಕ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ತೆರಳಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ರಾಯಚೂರಿನಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ತಾಜ್‍ ಮಹಲ್ ನಿರ್ಮಾಣದಿಂದ ಪೆಟ್ರೋಲ್ ಬೆಲೆ ಏರಿಕೆ: ಓವೈಸಿ ವ್ಯಂಗ್ಯ

    ದೇವದುರ್ಗ ಅರಕೇರಾದಲ್ಲಿ ಆಯೋಜಿಸಿರುವ ಮಳೆ ನೀರು ಕೋಯ್ಲು ಯೋಜನೆ ಉದ್ಘಾಟನೆ ಬಳಿಕ ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ‘ಚಾರ್ಲಿ’ ಕೊಟ್ಟಿದ್ದು ಬರೋಬ್ಬರಿ 100 ಕೋಟಿ ರೂ ಲಾಭವಂತೆ!

    Live Tv
    [brid partner=56869869 player=32851 video=960834 autoplay=true]

  • ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    – ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ

    ರಾಯಚೂರು: ರಾಯರ ಆರಾಧನೆಗೆ ಪಾದಯಾತ್ರೆ ಮೂಲಕ ಭಕ್ತರ ದಂಡು ಹರಿದು ಬರುತ್ತಿದೆ. ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಏಳುದಿನಗಳ ಆರಾಧನಾ ಮಹೋತ್ಸವದಲ್ಲಿ ಇಂದು ಮುಖ್ಯವಾದ ದಿನ. ರಾಯರು ಸಶರೀರವಾಗಿ ವೃಂದಾವನಸ್ಥರಾಗಿ ಇಂದಿಗೆ 350 ವರ್ಷ ಸಂದಿವೆ.

    ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಹಿನ್ನೆಲೆ ನಾನಾ ಕಡೆಗಳಿಂದ ಭಕ್ತರು ಬರಿಗಾಲಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಮಂತ್ರಾಲಯಕ್ಕೆ ಪಾದಯಾತ್ರೆ ಬರುತ್ತಿದ್ದಾರೆ. ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ನಟ ಕಾರ್ತಿಕೇಯ ನಿಶ್ಚಿತಾರ್ಥ – ಫೋಟೋ ವೈರಲ್

    ಭಜನಾ ಮಂಡಳಿಗಳು, ಭಕ್ತರ ತಂಡಗಳು ಪ್ರತೀವರ್ಷ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ರಾಯರ ಮಠವನ್ನು ಪಾದಯಾತ್ರೆ ಮೂಲಕ ತಲುಪುತ್ತವೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಆರಾಧನಾ ಮಹೋತ್ಸವವನ್ನ ಮಠದ ಸಿಬ್ಬಂದಿ ಅಷ್ಟೆ ಸರಳವಾಗಿ ಆಚರಿಸಿದ್ದರು. ಈ ಬಾರಿ ಆಂಧ್ರಪ್ರದೇಶದಲ್ಲಿ ಲಾಕ್‍ಡೌನ್ ಸಡಿಲಿಕೆ ಇರುವುದರಿಂದ ವಿಜೃಂಭಣೆಯಿಂದ ರಾಯರ 350 ನೇ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಹೀಗಾಗಿ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಬರುತ್ತಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

    ಪ್ರತೀವರ್ಷದಂತೆ ತಿರುಮಲ ತಿರುಪತಿ ದೇವಾಲಯದಿಂದ ಮಂತ್ರಾಲಯ ಮಠಕ್ಕೆ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರವನ್ನ ತರಲಾಗಿದೆ. ವಾದ್ಯಗೋಷ್ಠಿಯೊಂದಿಗೆ ತಿರುಮಲ ತಿರುಪತಿ ದೇವಾಲಯದ ಅಧಿಕಾರಿಗಳನ್ನ ಶ್ರೀ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿ ಬರಮಾಡಿಕೊಂಡಿತು. ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಶೇಷವಸ್ತ್ರ ಸಮರ್ಪಣೆ ಮಾಡಿದರು. ಇದನ್ನೂ ಓದಿ: ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ: ಎಚ್.ಡಿ ಕುಮಾರಸ್ವಾಮಿ

    350 ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಯರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯಿತು. ಪಂಚಾಮೃತ ಅಭಿಷೇಕ, ಶೇಷವಸ್ತ್ರ ಸಮರ್ಪಣೆ ಬಳಿಕ ಚಿನ್ನದ ರಥೋತ್ಸವ ನಡೆಯಲಿದೆ. ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಲಿದ್ದಾರೆ.

  • ರಾಯರ ಸನ್ನಿಧಿ ಬಗ್ಗೆ ಹಾಡಿಹೊಗಳಿದ ಹರಿಪ್ರಿಯಾ

    ರಾಯರ ಸನ್ನಿಧಿ ಬಗ್ಗೆ ಹಾಡಿಹೊಗಳಿದ ಹರಿಪ್ರಿಯಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿಕೊಟ್ಟು ರಾಯರ ಸನ್ನಿಧಿಯಲ್ಲಿ ಕಳೆದ ದಿನ ತುಂಬಾ ವಿಶೇಷವಾಗಿದೆ ಎಂದು ಕೆಲವು ಸಾಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಂತ್ರಾಲಯಕ್ಕೆ ಹರಿಪ್ರಯಾ ಭೇಟಿಕೊಟ್ಟ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಹರಿಪ್ರಿಯಾ ಭಾಗಿಯಾಗಿದ್ದರು. ಇದೀಗ ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಾರವಾಗಿ ಹಂಚಿಕೊಂಡಿದ್ದಾರೆ.

    ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ಅಪಾರ ಹೆಮ್ಮೆ ಇದೆ. ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ದಿನದಂದು ಗೌರವ ಸಿಕ್ಕಿರುವುದು ಇನ್ನಷ್ಟು ವಿಶೇಷ. ಮಂತ್ರಾಲಯ ನನ್ನನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ಕಮ್ಮಿಯಾಗಿಲ್ಲ. ವಿಶೇಷವಾಗಿ ಅವರ ಆತಿಥ್ಯ ಮತ್ತು ಅಲ್ಲಿನ ಅದ್ಭುತ ವೈಬ್ಸ್ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಹರಿಪ್ರಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೊಂಚ ಬಿಡುವು ಮಾಡಿಕೊಂಡು ರಾಘವೇಂದ್ರ ಸ್ವಾಮಿ ದರ್ಶನವನ್ನು ಮಾಡಿದ್ದಾರೆ.

  • ರಾಯರ 349ನೇ ಆರಾಧನಾ ಮಹೋತ್ಸವ ಯೂ ಟ್ಯೂಬ್‍ನಲ್ಲಿ ಪ್ರಸಾರ

    ರಾಯರ 349ನೇ ಆರಾಧನಾ ಮಹೋತ್ಸವ ಯೂ ಟ್ಯೂಬ್‍ನಲ್ಲಿ ಪ್ರಸಾರ

    – ಮಹೋತ್ಸವಕ್ಕೆ ಇಂದು ಮಂತ್ರಾಲಯ ಶ್ರೀಗಳಿಂದ ಚಾಲನೆ

    ರಾಯಚೂರು: ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಯ 349ನೇ ಆರಾಧನಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು, ಗೋ ಪೂಜೆ, ಗಜ ಪೂಜೆ ಧ್ವಜಾರೋಹಣದ ಮೂಲಕ ಆರಾಧನಾ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

    ಆಗಸ್ಟ್ 2 ರಿಂದ 8 ರವರೆಗೆ ಆರಾಧನೆ ಹಿನ್ನೆಲೆ ಸಪ್ತರಾತ್ರೋತ್ಸವ ನಡೆಯಲಿದೆ. ಕೊರೊನಾ ಹಿನ್ನೆಲೆ ಈ ಬಾರಿ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ. ಹೀಗಾಗಿ ಮಠದ ಆಡಳಿದ ಮಂಡಳಿ ಆರಾಧನಾ ಸಪ್ತರಾತ್ರೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಮಠದ ಅಧಿಕೃತ ಯೂ ಟ್ಯೂಬ್ ಚಾನಲ್ ‘ಮಂತ್ರಾಲಯ ವಾಹಿನಿ’ಯಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಿದೆ.

    ಮಂತ್ರಾಲಯ ಮಠದ ಪ್ರಾಕಾರದಲ್ಲಿ ಮಾತ್ರ ಕಾರ್ಯಕ್ರಮಗಳು ನಡೆಯುತ್ತಿದ್ದು. ಧಾರ್ಮಿಕ, ಆಧ್ಯಾತ್ಮಿಕ, ಉತ್ಸವ, ಪ್ರವಚನ ಸೇರಿ ಎಲ್ಲ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗುವುದು. ನಾಳೆ ಬೆಳಗ್ಗೆಯಿಂದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮೂಲ ರಾಮದೇವರಿಗೆ ಪೂಜೆ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ದೇಶದ ವಿವಿಧೆಡೆಯಿರುವ ಗುರುರಾಘವೇಂದ್ರ ಸ್ವಾಮಿಯ ಶಾಖಾ ಮಠಗಳಲ್ಲೂ ಏಳು ದಿನಗಳ ಕಾಲ ಸಡಗರದಿಂದ ಆರಾಧನಾ ಮಹೋತ್ಸವ ಆಚರಿಸಲಾಗುತ್ತದೆ.