Tag: raghavendra raj kumar

  • ಡಾ.ರಾಜ್ ಕುಟುಂಬದಿಂದ ಮತದಾನ: ಮನವಿ ಮಾಡಿದ ರಾಘಣ್ಣ

    ಡಾ.ರಾಜ್ ಕುಟುಂಬದಿಂದ ಮತದಾನ: ಮನವಿ ಮಾಡಿದ ರಾಘಣ್ಣ

    ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಒಟ್ಟಾಗಿಯೇ ಬಂದು ಮತ ಚಲಾಯಿಸಿದರು. ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ (Raghavendra Raj Kumar), ಅವರ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Raj Kumar) ಒಟ್ಟಾಗಿ ಬಂದು ಮತದಾನ (Voting) ಮಾಡಿದ್ದಾರೆ.

    ಮತದಾನದ ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ‘ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು. ಈ ಹಿಂದೆ ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಆಮೇಲೆ ಅಪ್ಪು ಜೊತೆ ಬಂದೆ. ಈಗ ಒಬ್ಬೊಬ್ಬರೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ಮತದಾನಕ್ಕೆ ಸಜ್ಜಾಗುತ್ತಿದೆ ಎಂದರು.

    ಆರ್.ಆರ್ ನಗರ ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ್ದ ನಟಿ ಅಮೂಲ್ಯ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ನಿಂತಿದ್ದ ಅಮೂಲ್ಯ, ಆ ನಂತರ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗ ವೋಟು ಹಾಕಿದ್ದಾರೆ.

    ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.

     

    ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.

  • ಅಪ್ಪು ಮಗನೇ  ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಅಪ್ಪು ಮಗನೇ ಟ್ರೈಲರ್ ರಿಲೀಸ್‍ಗೆ ನೀನೇ ನನ್ನ ಕರೆದೊಯ್ಯುತ್ತಿರುವೆ- ರಾಘಣ್ಣ ಭಾವುಕ

    ಪುನೀತ್ ರಾಜ್‍ಕುಮಾರ್ (Puneeth RajKumar) ನಟನೆಯ ಗಂಧದ ಗುಡಿ (Gandhada Gudi)  ಡಾಕ್ಯುಮೆಂಟರಿ  ಮಾದರಿಯ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗುತ್ತಿದೆ. ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.

    ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ (Raghevendra RajKumar), ಶಿವರಾಜ್ ಕುಮಾರ್ (Shivaraj Kumar), ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಕೂಡ ಭಾಗಿಯಾಗಲಿದ್ದಾರೆ. ಥಿಯೇಟರ್ ಗೆ ಹೋಗುವ ಮುನ್ನ ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿರುವ ಫೋಟೋ (Photo) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ಸೋಷಿಯಲ್ ಮೀಡಿಯಾದಲ್ಲಿ ಭಾವುಕತೆಯಿಂದ ಕೆಲವು ಸಾಲುಗಳನ್ನು ಬರೆದಿರುವ ರಾಘಣ್ಣ, ಅಪ್ಪು ಮಗನೇ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನೀನೇ ನನ್ನ ಕೈ ಹಿಡಿದು ಕರೆದುಕೊಂಡು ಹೋಗುವಂತೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ತಮ್ಮ ಕೈ ಹಿಡಿದುಕೊಂಡು ನರ್ತಕಿ ಚಿತ್ರಮಂದಿರದ ಒಳಗೆ ಅಪ್ಪು ಕರೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

    ಗಂಧದ ಗುಡಿ ಪುನೀತ್ ರಾಜ್‍ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಲಾಕ್ ಡೌನ್ ವೇಳೆಯಲ್ಲಿ ಕಾಡಿನೊಳಗಿದ್ದು, ಕರುನಾಡ ವನ ಸಂಪತ್ತನ್ನು ಸೆರೆ ಹಿಡಿದಿದ್ದಾರೆ. ಪ್ರಾಣಿ, ಕಾಡು, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ. ಡಾಕ್ಯುಮೆಂಟರಿ ಮಾದರಿಯಲ್ಲಿರುವ ಈ ಚಿತ್ರದಲ್ಲಿ ಪುನೀತ್ ಪ್ರತಿ ದೃಶ್ಯದಲ್ಲೂ ಆವರಿಸಿಕೊಂಡಿದ್ದಾರೆ. ಇದರ ಟ್ರೈಲರ್ ಇಂದು ಬೆಳಗ್ಗೆ 9.45ಕ್ಕೆ ನರ್ತಕಿ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಅಗಲಿ ಹತ್ತು ತಿಂಗಳು: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

    ಅಪ್ಪು ಅಗಲಿ ಹತ್ತು ತಿಂಗಳು: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

    ವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅಗಲಿ ಇಂದಿಗೆ 10 ತಿಂಗಳು ಕಳೆದಿವೆ. ಹಾಗಾಗಿ ಪ್ರತಿ ತಿಂಗಳಿನಂತೆ ಈ ತಿಂಗಳವೂ ಅಪ್ಪು ಸಮಾಧಿಗೆ ತಿಂಗಳ ಪೂಜೆ ಸಲ್ಲಿಸಲಾಯಿತು. ಅಪ್ಪು ಸಮಾಧಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ಅಗಲಿದ ಕುಟುಂಬದ ಸದಸ್ಯನನ್ನು ನೆನಪಿಸಿಕೊಂಡಿತು ಅಪ್ಪು ಕುಟುಂಬ.

    ಈ ಬಾರಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಮೆರಿಕಾಗೆ ತೆರಳಿರುವ ಕಾರಣದಿಂದಾಗಿ, ರಾಘವೇಂದ್ರ ರಾಜ್ ಕುಮಾರ್, ಪತ್ನಿ ಮಂಗಳಾ, ಪುತ್ರ ಯುವ ರಾಜ್ಕುಮಾರ್, ಪೂರ್ಣಿಮಾ ರಾಮ್ ಕುಮಾರ್‌, ಲಕ್ಷ್ಮೀ ಗೋವಿಂದರಾಜು  ಸೇರಿದಂತೆ ಅಪ್ಪು ಕುಟುಂಬಸ್ಥರು ಕಂಠೀರ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದೆ. ತುಸು ಹೊತ್ತು ರಾಘವೇಂದ್ರ ರಾಜ್ ಕುಮಾರ್ ಭಾವುಕರಾಗಿದ್ದೂ ಕಂಡು ಬಂದಿತು. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಅಪ್ಪು ಕುಟುಂಬಸ್ಥರು ಮಾತ್ರವಲ್ಲ, ಪುನೀತ್ ಅಭಿಮಾನಿಗಳು ಕೂಡ ಇಂದು ಸಮಾಧಿ ಬಳಿ ಜಮಾಯಿಸಿದ್ದರು. ನೆಚ್ಚಿನ ನಟನ ಸಮಾಧಿಗೆ ಅವರು ಕೂಡ ಪೂಜೆ ಸಲ್ಲಿಸಿದ್ದರು. ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಇಂದು ಬಂದು ಅವರೂ ಎಡೆ ಇಟ್ಟು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಪುನೀತ್ ರಾಜ್ ಕುಮಾರ್ ಕಂಡ ನಾಲ್ಕು ಕನಸುಗಳಲ್ಲಿ ಈಡೇರಿದ್ದು ಎಷ್ಟು? ರಾಘವೇಂದ್ರ ರಾಜ್ ಕುಮಾರ್ ಬಿಚ್ಚಿಟ್ಟ ರಹಸ್ಯ

    ಸಾಮಾನ್ಯರು ಅಸಾಮಾನ್ಯ ಕನಸುಗಳನ್ನು ಕಾಣುವುದು ಸಹಜ. ಆದರೆ, ಸೂಪರ್ ಸ್ಟಾರ್ ನಟರೊಬ್ಬರು ನಾಲ್ಕು ಕನಸುಗಳನ್ನು ಕಂಡು, ಒಂದೇ ಒಂದು ಕನಸನ್ನು ಈಡೇರಿಸಿಕೊಂಡರು ಅನ್ನುವುದು ಅಚ್ಚರಿ. ಈ ವಿಷಯವನ್ನು ಸ್ವತಃ ಸ್ಟಾರ್ ನಟರ ಸಹೋದರರೇ ಹೇಳಿಕೊಂಡಿದ್ದು, ಆ ಕನಸು ಈಡೇರಿದ ಕುರಿತು ಲಕ್ಕಿ ಮ್ಯಾನ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

    ಅಗಲಿದ ಚೇತನ ಪುನೀತ್ ರಾಜ್ ಕುಮಾರ್ ಅವರು ಏನೆಲ್ಲ ಸಾಧನೆ ಮಾಡಿದ್ದರೂ, ಅವರೂ ನಾಲ್ಕು ಕನಸುಗಳನ್ನು ಕಂಡಿದ್ದರಂತೆ. ಆ ನಾಲ್ಕರಲ್ಲಿ ಒಂದೇ ಒಂದು ಕನಸು ಈಡೇರಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಈ ವಿಷಯವನ್ನು ಹಂಚಿಕೊಂಡರು. ನಾಲ್ಕು ಕನಸುಗಳಲ್ಲಿ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡಬೇಕು ಎನ್ನುವುದು ಅಪ್ಪ ಆಸೆ ಆಗಿತ್ತಂತೆ. ಅದನ್ನು ಲಕ್ಕಿ ಮ್ಯಾನ್ ಸಿನಿಮಾದ ಮೂಲಕ ಅಪ್ಪು ಈಡೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಾದರೆ, ಅಪ್ಪು ಕಂಡ ಇತರ ಕನಸುಗಳು ಅಂದರೆ, ತಾವು ಸ್ಟಾರ್ ನಟ ಆದ ನಂತರ ತಂದೆಯೊಂದಿಗೆ ನಟಿಸುವ ಆಸೆ ಹೊಂದಿದ್ದರಂತೆ. ಮಣಿರತ್ನಂ ಅವರು ನಿರ್ದೇಶನದಲ್ಲಿ ಕೆಲಸ ಮಾಡಲು ಬಯಸಿದ್ದರಂತೆ ಮತ್ತು ಅಪ್ಪು ಚಿತ್ರಕ್ಕೆ ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು. ಅಲ್ಲದೇ ಪ್ರಭುದೇವ ಅವರ ಜೊತೆ ಡಾನ್ಸ್ ಮಾಡುವಂತಹ ಅವಕಾಶಕ್ಕೆ ಕಾದಿದ್ದರು. ಅದೊಂದು ಇದೀಗ ಈಡೇರಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    ಅಪ್ಪು ಅಗಲಿ ಇಂದಿಗೆ 7 ತಿಂಗಳು : ಸಮಾಧಿ ಮುಂದೆ ಜನಸಾಗರ

    ನ್ನಡದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಏಳು ತಿಂಗಳು ಕಳೆದವು. ಏಳು ತಿಂಗಳು ಕಳೆದರೂ, ಅಪ್ಪು ಸಮಾಧಿಗೆ ಹರಿದು ಬರುತ್ತಿರುವ ಜನ ಸಾಗರ ಮಾತ್ರ ಕಿಂಚಿತ್ತೂ ಕಡಿಮೆ ಆಗಿಲ್ಲ. ಅದರಲ್ಲೂ ವೀಕೆಂಡ್ ನಲ್ಲಿ ಸಾವಿರಾರು ಜನರು ಅಪ್ಪು ಸಮಾಧಿಗೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ : ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

    ಇಂದು ಏಳು ತಿಂಗಳ ನಿಮಿತ್ತ ಅಪ್ಪು ಕುಟುಂಬ ಕಂಠೀರವ ಸ್ಟುಡಿಯೋಗೆ ಆಗಮಿಸಿ, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ, ಇಂದು ಅಂಬರೀಶ್ ಅವರ ಹುಟ್ಟು ಹಬ್ಬವೂ ಇರುವುದರಿಂದ, ಅಪ್ಪು ಸಮಾಧಿಯ ಕೂಗಳತೆಯ ದೂರದಲ್ಲಿರುವ ಅಂಬರೀಶ್ ಅವರ ಸಮಾಧಿಗೂ ಅಪ್ಪು ಕುಟುಂಬ ನಮನ ಸಲ್ಲಿಸಿದೆ. ಇದನ್ನೂ ಓದಿ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಸಾರಥಿ ಭಾ.ಮಾ. ಹರೀಶ್

    ಅಪ್ಪು ಅಗಲಿಕೆಯನ್ನು ಇಂದಿಗೂ ಅಭಿಮಾನಿಗಳು ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸಹೋದರ ರಾಘವೇಂದ್ರ ರಾಜ್ ಕುಮಾರ್ ದಿನವೂ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇಂದು ಅಪ್ಪು ಅವರ ವಿಶೇಷ ವಿಡಿಯೋವೊಂದನ್ನು ರಾಘವೇಂದ್ರ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಎಂದೆಂದಿಗೂ ಅಪ್ಪು ನನ್ನ ಹೃದಯದಲ್ಲಿ ಇರುತ್ತಾರೆ ಎಂದು ತೋರಿಸಿದ್ದಾರೆ. ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಅಂಬರೀಶ್ ಅವರ ಹುಟ್ಟು ಹಬ್ಬ ಮತ್ತು ಪುನೀತ್ ಅವರ ಅಗಲಿಕೆಯ 7ನೇ ತಿಂಗಳು ಕಾರ್ಯಕ್ರಮ ಒಂದೇ ಸ್ಥಳದಲ್ಲೇ ನಡೆಯುತ್ತಿರುವುದರಿಂದ ಕಂಠೀರವ ಸ್ಟುಡಿಯೋ ಇಂದು ಇಬ್ಬರ ಅಭಿಮಾನಿಗಳಿಂದ ತುಂಬಿ ಹೋಗಿದೆ. ಒಂದು ಕಡೆ ಇಬ್ಬರೂ ಕಲಾವಿದರ ಅಗಲಿಕೆ ನೋವು ಮತ್ತು ಅಂಬಿ ಹುಟ್ಟು ಹಬ್ಬದ ಸಡಗರಕ್ಕೆ ಕಂಠೀರವ ಸ್ಟುಡಿಯೋ ಸಾಕ್ಷಿಯಾಗಿದೆ.

  • ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಎರಡ್ಮೂರು ವರ್ಷಗಳ ನಂತರ ನಾಳೆ ನಡೆಯುತ್ತಿದೆ. ಈ ಚುನಾವಣೆ ಮಾಡಲು ಏನೆಲ್ಲ ಕಸರತ್ತುಗಳನ್ನು ಮಾಡಲಾಯಿತು. ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಮೂಲಕ ಚುನಾವಣೆ ಮಾಡಲು ಒತ್ತಡ ಹೇರಲಾಗಿತ್ತು. ಇದೆಲ್ಲವೂ ಹೈ ಡ್ರಾಮಾ ಆಗಿ ಇದೀಗ ನಾಳೆ ಚುನಾವಣೆ ನಡೆಯುತ್ತಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಈ ಬಾರಿಯ ಚುನಾವಣೆ ವಿಶೇಷ ಅಂದರೆ, ನಿರ್ಮಾಪಕ ಭಾ.ಮಾ.ಹರೀಶ್ ಮತ್ತು ನಿರ್ಮಾಪಕ ಸಾ.ರಾ. ಗೋವಿಂದ್ ತಂಡದ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಎರಡೂ ತಂಡಕ್ಕೆ ಹಲವರು ತಮ್ಮ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಜಯಮಾಲಾ ಸೇರಿದಂತೆ ಹಲವರು ಭಾ.ಮಾ.ಹರೀಶ್ ತಂಡಕ್ಕೆ ಬೆಂಬಲ ಸೂಚಿಸಿದ್ದರೆ, ಮೊನ್ನೆಯಷ್ಟೇ ಸಾ.ರಾ.ಗೋವಿಂದ್ ಮತ್ತು ತಂಡ ರಾಘವೇಂದ್ರ ರಾಜ್ ಕುಮಾರ್ ಭೇಟಿ ಮಾಡಿದೆ. ಈ ಹಿಂದೆ ಭಾ.ಮಾ.ಹರೀಶ್ ಮತ್ತು ತಂಡ ಶಿವರಾಜ್ ಕುಮಾರ್ ಅವರನ್ನೂ ಭೇಟಿ ಮಾಡಿತ್ತು.  ಇದನ್ನೂ ಓದಿ: ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

    ಸಾಮಾನ್ಯವಾಗಿ ಡಾ.ರಾಜ್ ಕುಮಾರ್ ಕುಟುಂಬ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ನೇರವಾಗಿ ಕಣಕ್ಕೆ ಇಳಿಯುವುದು ಕಡಿಮೆ. ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೇಗೌಡರು ಚುನಾವಣೆ ನಿಂತಾಗಲೂ ಡಾ.ರಾಜ್ ಕುಮಾರ್ ಮಕ್ಕಳು ನೇರವಾಗಿ ಎಲ್ಲಿಯೂ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಒಂದೊಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಹತ್ತು ವರ್ಷಗಳ ನಂತರ ತೆಲುಗಿಗೆ ಡಬ್ ಆಯಿತು ಯಶ್ ನಟನೆಯ ಲಕ್ಕಿ ಸಿನಿಮಾ

    ಹಾಗಂತ ಇದೇ ತಂಡಕ್ಕೆ ನನ್ನ ಬೆಂಬಲ ಎಂದು ಬಹಿರಂಗವಾಗಿ ಹೇಳಿಕೊಳ್ಳದೇ ತಮ್ಮನ್ನು ಭೇಟಿಗೆ ಬಂದ ತಂಡಗಳೊಂದಿಗೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆತ್ಮೀಯವಾಗಿ ಫೋಟೋ ತಗೆಸಿಕೊಂಡು ಕುತೂಹಲಕ್ಕೆ ಕಾರಣವಾಗಿದ್ದಾರೆ. ನಾಳೆ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಯಲಿದ್ದು, ಯಾರೆಲ್ಲ ಈ ಬಾರಿ ಅಧಿಕಾರಿದ ಚುಕ್ಕಾಣೆ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಕಾರಣವಾಗಿದೆ. ಎರಡೂ ತಂಡದಲ್ಲೂ ಪ್ರಭಾವಿ ವ್ಯಕ್ತಿಗಳೇ ಇರುವುದರಿಂದ ಸಂಜೆ ಹೊತ್ತಿಗೆ ಫಲಿತಾಂಶ ಸಿಗಲಿದೆ.

  • ಹಿಜಬ್ ಹಾಕಿ ಅಚ್ಚರಿ ಮೂಡಿಸಿದ ನಟಿ ಶ್ರುತಿ

    ಹಿಜಬ್ ಹಾಕಿ ಅಚ್ಚರಿ ಮೂಡಿಸಿದ ನಟಿ ಶ್ರುತಿ

    ರ್ನಾಟಕದಲ್ಲಿ ಹಿಜಬ್ ಕಾವು ಜೋರಾಗಿದೆ. ಸರಕಾರ ಕೂಡ ಹಿಜಬ್ ಧರಿಸಿದ ಮಕ್ಕಳು ಶಾಲೆಗೆ ಬರಕೂಡದು ಎಂದು ಫಾರ್ಮಾನು ಹೊರಡಿಸಿದೆ. ಈ ಮಧ್ಯೆ ಬಿಜೆಪಿ ನಾಯಕಿ ಶ್ರುತಿ ಹಿಜಬ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಹಾಗಂತ ಅವರು ಸುಖಾಸುಮ್ಮನೆ ಹಿಜಬ್ ಧರಿಸಿಲ್ಲ. ಸಿನಿಮಾವೊಂದರಲ್ಲಿ ಶ್ರುತಿ ಅವರು ಮುಸ್ಲಿಂ ಮಹಿಳೆಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕಾಗಿ ಅವರು ಹಿಜಬ್ ಧರಿಸಿದ್ದಾರೆ. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಶನಿವಾರವಷ್ಟೇ ಆ ಚಿತ್ರಕ್ಕೆ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ಶ್ರುತಿ ಹಿಜಬ್ ಹಾಕಿಯೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಚಿತ್ರಕ್ಕೆ ‘13’ ಎಂದು ಹೆಸರಿಡಲಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದೂ ಬರೋಬ್ಬರಿ 25 ವರ್ಷಗಳ ಬಳಿಕೆ ಎನ್ನುವುದು ವಿಶೇಷ. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ

    ಈ ಹಿಂದೆ ರಾಘವೇಂದ್ರ ರಾಜ್ ಕುಮಾರ್ ಮತ್ತು ಶ್ರುತಿ ‘ಗೆಲುವಿನ ಸರದಾರ’ ಚಿತ್ರದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ತೆರೆ ಹಂಚಿಕೊಂಡಿದ್ದರು. ಆನಂತರ ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಅಂಥದ್ದೊಂದು ಘಳಿಗೆ ಕೂಡಿ ಬಂದಿದೆ. ಹಿಂದೂ ಹುಡುಗ, ಮುಸ್ಲಿಂ ಹುಡುಗಿಯ ಸುತ್ತ ಹೆಣೆದಿರುವ ಕಥಾ ಹಂದರ ಸಿನಿಮಾದಲ್ಲಿದ್ದು, ನರೇಂದ್ರ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ಮುಹೂರ್ತ ಸಮಯದಲ್ಲಿ ಶ್ರುತಿ ಮಾತನಾಡುತ್ತಾ, ಪುನೀತ್ ಅವರ ಜತೆ ನಟಿಸುವ ಅವಕಾಶ ಕೈ ತಪ್ಪಿದ್ದರ ಬಗ್ಗೆ ನೆನಪಿಸಿಕೊಂಡರು. ‘ನಾನು ಪುನೀತ್ ಅವರ ದ್ವಿತ್ವಿ ಸಿನಿಮಾದಲ್ಲಿ ನಟಿಸಬೇಕಿತ್ತು. ಕಥೆ ಕೇಳಿ ಒಪ್ಪಿಕೊಂಡಿದ್ದೆ. ಸಿನಿಮಾ ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಪುನೀತ್ ನಿಧನರಾದರು. ಅವರ ಜತೆ ನಟಿಸಬೇಕು ಎನ್ನುವ ಆಸೆ ಹಾಗೆಯೇ ಉಳಿಯಿತು’ ಎಂದು ಪುನೀತ್ ಅವರನ್ನು ನೆನಪಿಸಿಕೊಂಡರು.

  • ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಬ್ಲಿಕ್ ಟಿವಿ ನಡೆಸಿದ ಎಕ್ಸ್‌ಕ್ಲೂಸೀವ್‌ ಸಂದರ್ಶನದಲ್ಲಿ ನಟ ಯಶ್, ವರನಟ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡರು. ಇದು ಅಣ್ಣಾವ್ರ ನಾಡು. ಈ ನಾಡಿನಲ್ಲಿ ನಾವು ಹುಟ್ಟಿದ್ದೇ ಪುಣ್ಯ ಎಂದರು. ಈ ಮಾತನ್ನು ಅವರು ಆಡುವುದಕ್ಕೂ ಕಾರಣವಿದೆ. ಯಶ್ ಈಗ ಎಲ್ಲೇ ಹೋದರೂ, ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಗೆ ಹೋದಾಗಲೂ ಅಭಿಮಾನಿಗಳು ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಪ್ರೀತಿಯ ಕುರಿತು ಮಾತನಾಡುವಾಗ ಯಶ್, ಅಣ್ಣಾವ್ರನ್ನು ನೆನಪಿಸಿಕೊಂಡರು. ಇದನ್ನು ಓದಿ:`ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್

    ‘ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ಅವರು ಯಾಕೆ ಹಾಗೆ ಕರೆಯುತ್ತಿದ್ದರು ಎಂದು ಈಗೀಗ ನನಗೆ ಅರ್ಥವಾಗುತ್ತಿದೆ. ನನ್ನ ನಟನೆಯ ಕೆಜಿಎಫ್ ಸಿನಿಮಾ ಬಂದು ಮೂರು ವರ್ಷಗಳಾಯಿತು. ಅಷ್ಟೂ ದಿನಗಳ ಕಾಲ ನಾನು ಅಭಿಮಾನಿಗಳ ಜತೆ ಇದ್ದದ್ದು ಕಡಿಮೆ. ನನ್ನ ಯಾವ ಸಿನಿಮಾಗಳು ಬಂದಿಲ್ಲ. ಆದರೂ, ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಅಂದರೆ, ಅದಕ್ಕೆ ಕಾರಣ ಅವರ ನನ್ನ ಮೇಲಿಟ್ಟ ನಂಬಿಕೆ. ಅದಕ್ಕಾಗಿಯೇ ಅಣ್ಣಾವ್ರು ಅವರನ್ನು ಅಭಿಮಾನಿ ದೇವರು ಅಂತ ಕರೆದದ್ದು’ ಎಂದು ನೆನಪಿಸಿಕೊಂಡರು ಯಶ್. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಪಬ್ಲಿಕ್ ಟಿವಿ ಡಿಜಿಟಲ್ ಅಣ್ಣಾವ್ರ ಹುಟ್ಟು ಹಬ್ಬಕ್ಕಾಗಿಯೇ ‘ಡಾ.ರಾಜ್ ಉತ್ಸವ’ ಹೆಸರಿನಲ್ಲಿ ಸ್ಪೆಷಲ್ ಸ್ಟೋರಿಗಳನ್ನು ಮಾಡುತ್ತಿದೆ. ನಾಡಿನ ದಿಗ್ಗಜರು ಮತ್ತು ಡಾ.ರಾಜ್ ಕುಮಾರ್ ಅವರ ಜತೆ ಒಡನಾಡಿದ ಧೀಮಂತರು ಡಾ.ರಾಜ್ ಕುಮಾರ್ ಕುರಿತಾಗಿ ಮಾತನಾಡಿದ್ದಾರೆ. ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಏ.10 ರಿಂದ ಶುರುವಾದ ಈ ವಿಶೇಷ ಕಂತುಗಳು ಏ.24ರವರೆಗೂ ಪಬ್ಲಿಕ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತವೆ.

  • ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ಕ್ಕೆ ಪುನೀತ್ ರಾಜ್ ಕುಮಾರ್ ರಾಯಭಾರಿ

    ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ಕ್ಕೆ ಪುನೀತ್ ರಾಜ್ ಕುಮಾರ್ ರಾಯಭಾರಿ

    ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು ನಟ ಪುನೀತ್ ರಾಜ್ ಕುಮಾರ್. ಈ ಮೂಲಕ ಲಕ್ಷಾಂತರ ಜನರಿಗೆ ಪ್ರೇರಣೆಯೂ ಆಗಿದ್ದರು. ಹಾಗಾಗಿ ಪುನೀತ್ ರಾಜ್ ಕುಮಾರ್ ಅವರನ್ನು ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ ಅರಿವು ಅಭಿಯಾನದ ರಾಯಭಾರಿಯನ್ನಾಗಿ ಮಾಡಲಾಗಿದೆ. ಮಂಗಳವಾರವಷ್ಟೇ ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಆರೋಗ್ಯ ಇಲಾಖೆ, ಡಾ.ರಾಜ್ ಕುಮಾರ್ ಟ್ರಸ್ಟ್ ಮತ್ತು ಎಸ್ಸಿರ್ಲಾ ವಿಷನ್ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ್ ಬೊಮ್ಮಾಯಿ, ‘ನಮ್ಮ ದೃಷ್ಟಿ ನಮ್ಮ ಕರ್ನಾಟಕ’ ಅಭಿಯಾನಕ್ಕೆ ಚಾಲನೆ ನೀಡಿದರು. ತಮ್ಮ ಮೇಲೆ ಪುನೀತ್ ಅವರ ಪ್ರಭಾವ ಹೇಗೆ ಆಗಿದೆ ಎನ್ನುವ ಕುರಿತು ಈ ಸಂದರ್ಭದಲ್ಲಿ ಮಾತನಾಡಿದರು. ಪ್ರತಿ ಸಲವೂ ಪುನೀತ್ ಅವರ ಹೆಸರಿನ ಕಾರ್ಯಕ್ರಮಕ್ಕೆ ಬಂದಾಗ ನನಗೆ ಹೊಸ ಚೈತನ್ಯ ಬರಲಿದೆ’ ಎಂದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ಈ ಕಾರ್ಯಕ್ರಮದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಈ ಅಭಿಯಾನದ ಕುರಿತು ಸುದೀರ್ಘ ಟ್ವಿಟ್ ಮಾಡಿರುವ ಅಶ್ವಿನಿ, ‘ಇದು ಡಾ|| ಪುನೀತ್ ಅವರ ಸಾಮಾಜಿಕ ಕಳಕಳಿ, ಅವಕಾಶ ವಂಚಿತರಿಗೆ ದೃಷ್ಟಿಯನ್ನು ಕಲ್ಪಿಸುವ ಸಲುವಾಗಿ ಇದ್ದ ಬದ್ಧತೆ, ದೂರದೃಷ್ಠಿತ ಹಾಗೂ ನಿಷ್ಠೆಗೆ ನಾವು ಸಲ್ಲಿಸುವ ಭಾವಪೂರ್ಣ ಗೌರವ. ಡಾ|| ರಾಜ್‌ಕುಮಾರ್ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಸ್ಸಿಲಾರ್ ವಿಷನ್ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ‘ನಮ್ಮ ದೃಷ್ಟಿ – ನಮ್ಮ ಕರ್ನಾಟಕ’ ಅರಿವು ಅಭಿಯಾನವನ್ನು ನೆನ್ನೆ ಕಾರ್ಯಾರಂಭ ಮಾಡಲಾಯಿತು’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಅಲ್ಲದೇ, ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ನಟ ರಾಘವೇಂದ್ರ ರಾಜ್ ಕುಮಾರ್, ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಉಪಸ್ಥಿತರಿದ್ದರು.