Tag: raghavendra

  • ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ ‘ವೇಷ’ (Vesha)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ ವೇಷ ಚಿತ್ರದ ಟ್ರೈಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ವೇಷದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

    ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ವೇಷ ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ ವೇಷ ಹಾಕುವ ಹಾಗೆ ಮಾಡುತ್ತದೆ. ಟ್ರೈಲರ್ ಮೂಲಕ ಹೊರಬಂದಿರುವ ವೇಷ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬರಲಿದೆ. ಈತನಕ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎನ್ನುತ್ತಾರೆ ನಿರ್ದೇಶಕ ಕೃಷ್ಣ ನಾಡ್ಪಾಲ್. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. ವೇಷ ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಿರ್ಮಾಣವನ್ನು ಮಾಡಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕ – ನಿರ್ಮಾಪಕ ರಾಘವೇಂದ್ರ.

    ನಾಯಕಿ ನಿಧಿ ಮಾರೋಲಿ, ಸೌಖ್ಯ ಗೌಡ, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ, ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಹಾಗೂ ಕ್ರಿಯೇಟಿವ್ ಹೆಡ್ ಕೀರ್ತನ್ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ವೇಷ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ವಿತರಣೆಯನ್ನ ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ನ ಮಾಲೀಕರಾದ ವೆಂಕಟ್ ಗೌಡ ಅವರು ಮಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ಕುರಿಗಾಹಿ ಹನುಮಂತಗೆ ಮದುವೆ ಮಾಡಿಸೋಕೆ ರೆಡಿಯಾದ ಶೋ

    ವರು ಒಟ್ಟು 10 ಮಂದಿ ಕಿಲಾಡಿಗಳು. ಅದ್ರಲ್ಲೊಬ್ಬ ಸಿಂಗರ್. ಇನ್ನೊಬ್ಬ ಡಾನ್ಸರ್. ಮತ್ತೊಬ್ಬ ಹಾಸ್ಯಕ್ಕೆ ಪಂಟರ್. ಹಳ್ಳಿ ಹೈದರಿಗೆ ಮಾತೇ ಬಂಡವಾಳ. ಮಾತಿನಿಂದಲೇ ಸುರಸುಂದರಿಯರನ್ನ ಪಟಾಯಿಸೋದ್ರಲ್ಲಿ ಯಶಸ್ವಿಯಾಗ್ತಾರಾ? ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ಕೊಡ್ತಿರುವ ಹೊಸ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗ್ರ್ಯಾಂಡ್ ಓಪನಿಂಗ್ ಸಖತ್ತಾಗಿತ್ತು.

    ಮಾತಲ್ಲೇ ಮನೆಕಟ್ಟೋ 10 ಹುಡುಗರು. ಮನಸ್ಸು ತುಂಬಾ ದೊಡ್ಡ ದೊಡ್ಡ ಕನಸು ಕಟ್ಟಿಕೊಂಡಿರುವ 10  ಹುಡುಗೀರು. ಈ ಹತ್ತೂ ಹುಡ್ಗೀರದ್ದು ಬಣ್ಣಬಣ್ಣದ ಕನಸು. ಆದರೆ ಈ ಹತ್ತು ಹುಡುಗರದ್ದು ಹುಡುಗಿಯರ ಮನ ಒಲಿಸೋಕೆ ಸರ್ಕಸ್ಸು. ಸೂಟು ಬೂಟು ಹಾಕೊಳ್ಳೋಕೆ ಬರಲ್ಲ. ಹೈಫೈ ಕಾರಂತೂ ಇಲ್ಲವೇ ಇಲ್ಲ. ಇಂಗ್ಲೀಷು ಬರಲ್ಲ. ಕನ್ನಡ ಬಿಟ್ಟು ನಾವಿಲ್ಲ ಎನ್ನುವ ಹಳ್ಳಿ ಹೈಕಳು.

    ಜೀ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಗೆ ಚಾಲನೆ ಸಿಕ್ಕಿದೆ. ನಿರ್ಣಾಯಕರ ಸ್ಥಾನದಲ್ಲಿ ಕನಸುಗಾರ ರವಿಚಂದ್ರನ್ ಹಾಗೂ ಡಿಂಪಲ್‌ ಕ್ವೀನ್ ರಚಿತಾ ಕುಳಿತಿದ್ದಾರೆ. ದಶ ಹುಡುಗರು ದಶ ಹುಡುಗಿಯರು ಈ ರಿಯಾಲಿಟಿ ಶೋ ಮುಖ್ಯ ಸ್ಪರ್ಧಿಗಳು. ತಮ್ಮ ಟ್ಯಾಲೆಂಟ್‌ನಿಂದ ಈಗಾಗ್ಲೇ ಗುರುತಿಸಿಕೊಂಡಿದ್ದಾರೆ ಕಿಲಾಡಿಗಳು. ಆದರೆ ಇವರಿಗೆ ಹುಡ್ಗೀರ್ ಮಾತ್ರಾ ಬೀಳ್ತಿಲ್ಲ. ಯಾಕಂದ್ರೆ ಇವ್ರೆಲ್ಲಾ ಹುಡುಗರ ಬಗ್ಗೆ ದೊಡ್ಡ ದೊಡ್ಡ ಕನಸು ಹೊತ್ತ ಅಲ್ಟ್ರಾ ಮಾಡರ್ನ್ ಹುಡ್ಗೀರು.

    ವಿವಿಧ ಧಾರಾವಾಹಿಗಳಲ್ಲಿ ನಟನೆಯಿಂದ ಹೆಸರು ಮಾಡಿರುವ ನಟಿಯರೇ ಭರ್ಜರಿ ಬ್ಯಾಚುಲರ್ಸ್‍ ಗಳಿಗೆ ಸ್ವಯಂ ವರಕ್ಕೆ ನಿಂತಿರುವ ಸುಂದರಾಂಗಿಯರು. ಅಂದಚಂದ, ನೃತ್ಯ, ಹಾಡು ಓದು ಬರಹದಲ್ಲಿ ಮುಂದಿರುವ ಈ ಸುಂದರಿಯರಿಗೆ ತಕ್ಕಂಥ ಜೋಡಿ ಈ ದಶ ಕಿಲಾಡಿಗಳಲ್ಲಿ ಯಾರಾಗ್ತಾರೆ? ಎಲ್ಲರಿಗೂ ಕುತೂಹಲ ಇದೆ. ಒಬ್ಬೊಬ್ಬರಾಗೇ ಬ್ಯಾಚುಲರ್‌ಗಳು ಅಖಾಡಕ್ಕಿಳಿದು ಸುಂದರಿಯರನ್ನ ಒಲಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ.

    ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಭಾರೀ ಮಿಂಚಿರುವ ಪ್ರತಿಭೆಗಳು ತಮ್ಮ ನಟನೆ, ಮಾತಿನ ಚತುರತೆಯಿಂದ ಹುಡ್ಗೀರ ಮನ ಗೆಲ್ಲಬೇಕಿಗೆ. ಯಾಕಂದ್ರೆ ಲುಕ್ ಇಲ್ಲ. ಆದರೆ ಲಕ್‌ನಿಂದ ಯಾವ ಸುಂದರಿಯರೂ ಮಾತಿಗೆ ಕರುಗುತ್ತಿಲ್ಲ. ಹೀಗಾಗೇ ರಿಯಾಲಿಟಿ ಶೋ ಆರಂಭದಲ್ಲೇ ಹುಡ್ಗೀರ ಮನ ಕದಿಯಲು ಭರ್ಜರಿ ಸರ್ಕಸ್ ಮಾಡ್ತಿದ್ದಾರೆ ಭರ್ಜರಿ ಬ್ಯಾಚುಲರ್ಸ್.

    ಭರ್ಜರಿ ಬ್ಯಾಚುಲರ್ಸ್ ಪಟ್ಟಿಯಲ್ಲಿ ವಿಧ ವಿಧದ ಪ್ರತಿಭೆಗಳಿವೆ. ಮುಗ್ಧತೆಯಿಂದ ಹೆಸರು ಮಾಡಿರುವ ಕುರಿಗಾಹಿ ಸಿಂಗರ್ ಹನುಮಂತ. ಹುಡ್ಗೀರ್ ಕಂಡ್ರೆ ನಾಚಿಕೊಳ್ತಾನೆ. ಈ ಸ್ಪರ್ಧೆಯಲ್ಲಿ ಹೇಗೆ ಕಾಣಿಸ್ಕೊಳ್ತಾನೆ ಅನ್ನೋದು ಕುತೂಹಲ. ಇನ್ನು ಹುಡ್ಗೀರ ಪಾತ್ರದಲ್ಲೇ ಮಿಂಚುವ ರಾಘವೇಂದ್ರಾಗೆ ಹುಡ್ಗೀರ ಸ್ನೇಹವಷ್ಟೇ ಅಲ್ಲದೇ ಪ್ರೀತಿಯೂ ಸಿಗಬೇಕಿದೆ. ಹೇಗೆ ಯಶಸ್ವಿಯಾಗ್ತಾನೆ ಅನ್ನೋದು ನಿರೀಕ್ಷೆ.

    ರಾಕೇಶ್, ಮನೋಹರ್, ಸೂರಜ್ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಸಿಕ್ಕಿರುವ ಜೀ ಪ್ರತಿಭೆಗಳು. ಆದರೆ ನಗಿಸುವಷ್ಟು ಸುಲಭವಾ ಹುಡ್ಗೀರ ಮನ ಗೆಲ್ಲೋದು? ಅದನ್ನ ಸ್ವತಃ ಟ್ರೈ ಮಾಡೋಕೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಕಾಣಿಸ್ಕೊಂಡಿದ್ದಾರೆ. ಈ ಕಿಲಾಡಿಗಳಿಗೆ ಕಾಳ್ ಹಾಕೋದು ಸುಲಭ. ಆದರೆ ಆ ಕಾಳನ್ನ ಆರಿಸಿಕೊಳ್ಳೋಕೆ ಇಲ್ಲಿ ಹುಡ್ಗೀರಂತೂ ಸಿದ್ಧವಿಲ್ಲ.

    ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರೋ ಹಲವು ಪ್ರತಿಭೆಗಳು ಒಂದೆಡೆ ಸೇಕ್ಕೊಂಡು ಮಸ್ತ್ ಮನರಂಜನೆ ಕೊಡಲು ಬಂದಿದ್ದಾರೆ. ಆದರೆ ಹುಡ್ಗೀರ್ ಮಾತ್ರಾ ಪ್ರತಿಭೆ ಜೊತೆ ಪೈಲ್ವಾನ್ ಗುಣದ ಹುಡುಗ ಬೇಕು ಎನ್ನುತ್ತಿದ್ದಾರೆ. ಹೀಗಾಗಿ ಭರ್ಜರಿ ಬ್ಯಾಚುಲರ್‌ಗಳಿಗೆ ಯಾವ ಯಾವ ಹುಡ್ಗೀರು ಸೆಟ್ ಆಗ್ತಾರೋ ನೋಡ್ಬೇಕಿದೆ.

  • ಶಂಕರ್ ನಾಗ್ ನೆನಪಿನ ‘ಸಂಜು ಮತ್ತು ಗೀತಾ’ ಸಿನಿಮಾಗೆ ಮುಹೂರ್ತ

    ಶಂಕರ್ ನಾಗ್ ನೆನಪಿನ ‘ಸಂಜು ಮತ್ತು ಗೀತಾ’ ಸಿನಿಮಾಗೆ ಮುಹೂರ್ತ

    ಟ ಶಂಕರ್ ನಾಗ್ (Shankar Nag) ಅಭಿನಯದ “ಗೀತಾ” ಚಿತ್ರದಿಂದ ಈತನಕ ಸಂಜು ಮತ್ತು ಗೀತಾ (Geeta and Sanju) ಎಂಬ ಹೆಸರು ಜನಪ್ರಿಯ. ಈಗ ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗುತ್ತಿದೆ.ಆರ್ ಕೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮುಹೂರ್ತ (Muhurta) ಸಮಾರಂಭ ಇತ್ತೀಚೆಗೆ ನಡೆಯಿತು.

      

    ಇದೊಂದು ನವೀರಾದ ಪ್ರೇಮಕಥೆ. ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ. ಈ ಹಿಂದೆ ನನ್ನ ನಿರ್ದೇಶನದ “ಕಾಣೆಯಾಗಿದ್ದಾಳೆ” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವಿನಯ್ ಕಾರ್ತಿಕ್ (Vinay Karthik) ಈ ಚಿತ್ರದಲ್ಲೂ ನಾಯಕನಾಗಿ ಅಭಿನಯಿಸಿದ್ದಾರೆ.  “ಮಂಗಳ ಗೌರಿ” ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸನ್ಮಿತ ಈ ಚಿತ್ರದ ನಾಯಕಿ. ರಾಘವೇಂದ್ರ ರಾಜಕುಮಾರ್ ಈ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ,‌ ಹಿರಿಯ ನಟಿ ಭವ್ಯ ನಾಯಕನ ತಾಯಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ , ಸ್ವಾತಿ ಸೇರಿದಂತೆ ಅನೇಕ ಕಲಾವಿದರು ನಮ್ಮ ಚಿತ್ರದ ತಾರಾಬಳಗದಲ್ಲಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಆರ್ ಕೆ ಮಾಹಿತಿ ನೀಡಿದರು. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ ಎಂದರು ಹಿರಿಯ ನಟಿ ಭವ್ಯ. ನನಗೆ ಆರ್ ಕೆ ಅವರ ಜೊತೆ ಎರಡನೇ ಚಿತ್ರ. ರಾಘವೇಂದ್ರ ರಾಜಕುಮಾರ್, ಭವ್ಯ ಅವರಂತಹ ಹಿರಿಯ ನಟರೊಡನೆ ಅಭಿನಯಿಸುತ್ತಿರುವುದು ಖುಷಿಯಾಗಿದೆ ಎಂದು ನಾಯಕ ವಿನಯ್ ಕಾರ್ತಿಕ್ ಹೇಳಿದರು.

    ತಮ್ಮ ಪಾತ್ರದ ಬಗ್ಗೆ ನಾಯಕಿ ಸನ್ಮಿತ ಮಾತನಾಡಿದರು. ನಾನು ಈ ಚಿತ್ರದಲ್ಲೂ ಹೆಣ್ಣಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ “ಮಹಾಭಾರತ” ದ ರಾಘವೇಂದ್ರ (Raghavendra)ತಿಳಿಸಿದರು. ನಿರ್ಮಾಪಕ ಸಂಜಯ್ ಮಾಗನೂರು ಹಾಗೂ ಸಂಗೀತ ನಿರ್ದೇಶಕ ಕೌಶಿಕ್ ಚಿತ್ರದ ಬಗ್ಗೆ ಮಾಹಿತಿ ನೀಡಿದರು.  ಛಾಯಾಗ್ರಾಹಕ ನಾಗರಾಜ್, ಸಂಕಲನಕಾರ ಶಿವರಾಜು ಮೇಹು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ರಾಯರ 401 ನೇ ಪಟ್ಟಾಭಿಷೇಕ

    ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ರಾಯರ 401 ನೇ ಪಟ್ಟಾಭಿಷೇಕ

    ರಾಯಚೂರು: ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ ಮನೆ ಮಾಡಿದೆ. ಇಂದು ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಶ್ರೀ ಮಠದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ರಾಯರ ಪಾದುಕೆಗಳಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು.

    ಶ್ರೀ ಮಠದ ಪ್ರಾಂಗಣದಲ್ಲಿ ಪ್ರಹ್ಲಾದ್ ರಾಜರಿಗೆ ಮುತ್ತು, ರನ್ನ ಮತ್ತು ಕನಕಗಳಿಂದ ಅಭಿಷೇಕ ಮಾಡಿದರು. ಗುರು ವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ಜರುಗಿತು. ರಾಯರ ಪಾದುಕೆಗಳನ್ನು ರಥದಲ್ಲಿಟ್ಟು ಕೋಲಾಟ, ಭಜನೆಯ ಮೆರಗಿನೊಂದಿಗೆ ನಡೆದ ಸ್ವರ್ಣ ರಥೋತ್ಸವ ನಡೆಯಿತು. ರಾಯರ ಪಟ್ಟಾಭಿಷೇಕ ಸಂಭ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

    ಈ ವರ್ಷದ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಐದು ದಿನಗಳ ಕಾಲ ಗುರು ವೈಭವೋತ್ಸವ ನಡೆಯಲಿದ್ದು, ಮಾರ್ಚ್ 9 ರಂದು ರಾಯರ 427 ನೇ ವರ್ಧಂತಿ ಉತ್ಸವ ಜರುಗಲಿದೆ. ಈ ಸಂಭ್ರಮದಲ್ಲಿ ಭಾಗವಹಿಸಲು ಭಕ್ತರ ದಂಡು ಮಂತ್ರಾಲಯಕ್ಕೆ ಹರಿದು ಬರುತ್ತಿದೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

    ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಅಮೃತಾ ರಾಮಮೂರ್ತಿ

    ಬೆಂಗಳೂರು: ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಅವರು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ವಿಚಾರವನ್ನು ಅಮೃತಾ ಅವರ ಪತಿ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇನ್ ಸ್ಟಾ ಸ್ಟೋರಿಯಲ್ಲಿ ಈ ಖುಷಿ ವಿಚಾರವನ್ನು ಶೇರ್ ಮಾಡಿಕೊಂಡಿರುವ ರಾಘವೇಂದ್ರ ಅವರು ‘ದೇವತೆಯ ಆಗಮನವಾಗಿದೆ’ ಎಂದು ಹೇಳುವ ಮೂಲಕ ಹೆಣ್ಣು ಮಗುವಿನ ತಂದೆಯಾಗಿರುವುದಾಗಿ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕಿರುತೆರೆ ನಟ ರಾಘವೆಂದ್ರ ಗೌಡ ಹಾಗೂ ನಟಿ ಅಮೃತಾ ರಾಮಮೂರ್ತಿ ದಂಪತಿ ಇತ್ತೀಚೆಗೆ ಸೀಮಂತ ಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಸೀಮಂತ ಸಮಾರಂಭದ ಫೋಟೋಗಳನ್ನು ಅಮೃತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಒಂದು ಫೋಟೋದಲ್ಲಿ ಕೆಂಪು ಬಣ್ಣದ ಸೀರೆಯುಟ್ಟು ಅಮೃತಾ ಕಾಣಿಸಿಕೊಂಡಿದ್ದರೆ, ಮತ್ತೊಂದರಲ್ಲಿ ಪತಿ ರಾಘವೇಂದ್ರ ಪತ್ನಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ್ದರು. ಇನ್ನೊಂದು ಫೋಟೋದಲ್ಲಿ ಪತ್ನಿ ಹಣೆಗೆ ಪ್ರೀತಿಯಿಂದ ಚುಂಬಿಸುತ್ತಿರುವುದನ್ನು ಕಾಣಬಹುದಾಗಿತ್ತು.

    ಫೋಟೋ ಜೊತೆಗೆ ಅಮೃತಾ, ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು (ತಾಯಿ-ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಾಘವೇಂದ್ರ, ಅತ್ತೆ, ಮಾವ, ಅತ್ತಿಗೆ, ಅಣ್ಣ, ಅಮ್ಮ, ಅಪ್ಪ, ಅಕ್ಕ, ಬಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

    ರಾಘವೇಂದ್ರ ಹಾಗೂ ಅಮೃತಾ ಮೇ ತಿಂಗಳಿನಲ್ಲಿ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಇಬ್ಬರೂ ತಾವು ತಂದೆ-ತಾಯಿಯಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದರು. ಜೊತೆಗೆ ನಾವಿಬ್ಬರು ಈಗ ಮೂವರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

     

    View this post on Instagram

     

    A post shared by RRaGhu N ರಘು (@rraghun.boss21)

  • ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಗ್ರಾಮೀಣ ಜನರ ಗುಳೆಗೆ ನೊಂದಿತು ಮನ- ಗಾರ್ಮೆಂಟ್ಸ್ ಸ್ಥಾಪಿಸಿ ಉದ್ಯೋಗ ನೀಡಿದ್ರು ಹಾವೇರಿಯ ರಾಘವೇಂದ್ರ

    ಹಾವೇರಿ: ಮನಸ್ಸಿದ್ದರೆ ಮಾರ್ಗ ಅನ್ನೋದಕ್ಕೆ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಹಲವರ ಸಾಧನೆಯನ್ನು ತೋರಿಸಿದ್ದೇವೆ. ಅದೇ ರೀತಿ ಇವತ್ತಿನ ಪಬ್ಲಿಕ್ ಹೀರೋ ರಾಘವೇಂದ್ರ ಅವರು ಹಾವೇರಿಯ ಶಿಗ್ಗಾಂವಿ ತಾಲೂಕಿನ ಇವರು ಗಾರ್ಮೆಂಟ್ಸ್ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ.

    ಹೌದು. ಹಾವೇರಿಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿರೋ ಪ್ರಭಂಜನ್ ಗಾರ್ಮೆಂಟ್ಸ್ ಸ್ಥಾಪಕ ರಾಘವೇಂದ್ರ ಮೇಲಗೇರಿ ಅವರೇ ಇವತ್ತಿನ ಪಬ್ಲಿಕ್ ಹೀರೋ. ಬಿ.ಎ ಪದವೀಧರರಾಗಿರೋ ರಾಘವೇಂದ್ರ ಮೊದಲಿಗೆ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಶಿಗ್ಗಾಂವಿ ತಾಲೂಕಿನಲ್ಲಿ ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡ್ತಿದ್ರು. ಆದರೆ, ಉದ್ಯೋಗಕ್ಕಾಗಿ ಪಟ್ಟಣಕ್ಕೆ ಗುಳೆಹೋಗೋ ಗ್ರಾಮೀಣ ಜನತೆಯನ್ನು ನೋಡಿದ ರಾಘವೇಂದ್ರ ಅವರು ಗುತ್ತಿಗೆದಾರ ಕೆಲಸಕ್ಕೆ ಗುಡ್‍ಬೈ ಹೇಳಿದ್ರು. ಸ್ನೇಹಿತರ ಜೊತೆ ಸೇರಿ ಗಾರ್ಮೆಂಟ್ಸ್ ಓಪನ್ ಮಾಡಿದ್ರು.

    ಬಂಕಾಪುರ ಪಟ್ಟಣದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರಭಂಜನ್ ಇಂಡಸ್ಟ್ರೀಸ್ ಗಾರ್ಮೆಂಟ್ಸ್ ಸ್ಥಾಪನೆಯಾಗಿದ್ದು ಈಗ 380ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ವಿಕಲಚೇತನರಿಗೂ ಅವಕಾಶ ಕೊಟ್ಟಿದ್ದಾರೆ. ಇದರಿಂದ ಬೆಂಗಳೂರು, ಹುಬ್ಬಳ್ಳಿಗೆ ಗುಳೇಹೋಗೋದು ತಪ್ಪಿದೆ. ಸಂಬಳ, ಇಎಸ್‍ಐ, ಪಿಎಫ್ ಯಾವ ಸಮಸ್ಯೆಯೂ ಇಲ್ಲ ಅಂತ ಉದ್ಯೋಗಿ ಆಶಾ ಹೇಳಿದ್ದಾರೆ.

    ವಾರ್ಷಿಕ 40 ರಿಂದ 50 ಸಾವಿರ ಶರ್ಟ್ಸ್ ಸಿದ್ಧಪಡಿಸ್ತಿರೋ ಪ್ರಭಂಜನ್ ಗಾರ್ಮೆಂಟ್ಸ್, ಬೆಂಗಳೂರು, ಗುಜರಾತ್ ಸೇರಿದಂತೆ ವಿದೇಶಕ್ಕೂ ರಫ್ತು ಮಾಡ್ತಿದೆ.

  • ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ರಾಘವೇಂದ್ರ ಯಾರ ಮಗ? ಬಿಎಸ್‍ವೈ ಗೆ ಸಿಎಂ ಪ್ರಶ್ನೆ

    ಮೈಸೂರು: ರಾಘವೇಂದ್ರ ಯಾರ ಮಗ? ಒಂದು ಬಾರಿ ಸಂಸದ ಆಗಿಲ್ವಾ. ಆತ ಯಡಿಯೂರಪ್ಪನ ಮಗನಾ ಅಥವಾ ಅವರ ಅಮ್ಮನ ಮಗನಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವಂಶ ಪಾರಂಪರ್ಯ ರಾಜಕೀಯ ಮಾಡಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಗೆ ಟಾಂಗ್ ನೀಡಿದ್ರು. ವರುಣಾದ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತಾಡೋಕೆ ನಾನು ಬಿಜೆಪಿ ವಕ್ತಾರ ಅಲ್ಲ. ವರುಣಾದಲ್ಲಿ ಯಾವ ಬಿಜೆಪಿ ಅಭ್ಯರ್ಥಿಯನ್ನೂ ನಿಲ್ಲಿಸಿದ್ರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಮಗನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಯಡಿಯೂರಪ್ಪ ವೀಕ್ ಆಗಿಲ್ಲ. ಯಡಿಯೂರಪ್ಪ ಯಾವಾಗಲೂ ವೀಕ್. ಕಳಂಕಿತ ವ್ಯಕ್ತಿಯಾಗಿರೋ ಅವರಿಗೆ ಸಾರ್ವಜನಿಕ ಮೌಲ್ಯಗಳಿಲ್ಲ. ಹೀಗಾಗಿ ಯಾವಾಗಲೂ ವೀಕ್ ಆಗಿಯೇ ಇದ್ದಾರೆ ಅಂತ ಅವರು ಲೇವಡಿ ಮಾಡಿದ್ರು. ಇದನ್ನೂ ಓದಿ: ಯಡಿಯೂರಪ್ಪನವರೇ ದಯವಿಟ್ಟು ನನಗೆ ಮೋಸ ಮಾಡ್ಬೇಡಿ, ನಿಮ್ಮ ಕಾಲಿಗೆ ಬೇಕಾದರೂ ಬೀಳ್ತೇನೆ- ಬಿಜೆಪಿ ಅಭ್ಯರ್ಥಿ ಮನವಿ

    ಚಾಮುಂಡೇಶ್ವರಿ ತಿರಸ್ಕರಿಸಿದ್ದಾಳೆ, ಬನಶಂಕರಿಯೂ ತಿರಸ್ಕರಿಸುತ್ತಾಳೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ, ಶ್ರೀರಾಮುಲು ಯಾರ್ ರೀ? ಅವರಿಗೆ ನನ್ನ ರಾಜಕೀಯ ಇತಿಹಾಸ ಗೊತ್ತಿಲ್ಲ. ಶ್ರೀರಾಮುಲು ಶಾಸಕನಾಗಿದ್ದೇ 2004ರಲ್ಲಿ. ನಾನು 1983ರಲ್ಲೇ ಚಾಮುಂಡೇಶ್ವರಿಯಲ್ಲಿ ಶಾಸಕನಾಗಿದ್ದೆ. ನನ್ನ ಬಗ್ಗೆ ಅವರೇನು ಮಾತನಾಡುತ್ತಾರೆ. ನಾನು ಸಮೀಕ್ಷೆಗಳನ್ನು ನಂಬಲ್ಲ. ಆದ್ರೆ ಜನ ಸಮೀಕ್ಷೆಯಲ್ಲಿ ನಾನು ಮುಖ್ಯಮಂತ್ರಿಯಾಗಲಿ ಅನ್ನೋದೇ ಜಾಸ್ತಿ ಅಂದ್ರು. ಇದನ್ನೂ ಓದಿ: ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ನಾನು ಇಂದು ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಮಧ್ಯಾಹ್ನ ಎರಡು ಗಂಟೆ ವೇಳೆಗೆ ನಾಮಪತ್ರ ಸಲ್ಲಿಸುತ್ತೇನೆ. ಅಂಬರೀಶ್ ನಾಮಪತ್ರ ಸಲ್ಲಿಸೋದು ಹೈಕಮಾಂಡ್ ಗೆ ಬಿಟ್ಟಿದ್ದು. ಅದು ನಂಗೆ ಗೊತ್ತಿಲ್ಲ ಅಂತ ಅವರು ಹೇಳಿದ್ರು.

  • ಕೊನೆಗೂ `ಅಮ್ಮ’ನ ಈ ಆಸೆ ಈಡೇರಲಿಲ್ಲ- ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಕೊನೆಗೂ `ಅಮ್ಮ’ನ ಈ ಆಸೆ ಈಡೇರಲಿಲ್ಲ- ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಬೆಂಗಳೂರು: ತನ್ನ ಮೂರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆಂಬ ಆಸೆ ಡಾ. ಪಾರ್ವತಮ್ಮ ರಾಜ್ ಕುಮಾರ್ ಅವರಿಗಿತ್ತು. ಆದ್ರೆ ಇಂದು ಅವರು ವಿಧಿವಶರಾಗಿದ್ದು, ಅವರ ಆಸೆ ಈಡೇರಲೇ ಇಲ್ಲ ಅಂತಾ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಅವರ ಮೂವರು ಮಕ್ಕಳಾದ, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇವರುಗಳನ್ನು ಒಂದೇ ಪೌರಾಣಿಕ ಸಿನಿಮಾದಲ್ಲಿ ನೋಡೋ ದೊಡ್ದ ಆಸೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಲ್ಲಿರುವಾಗ ಬೇಗ ಗುಣಮುಖರಾಗಿ ಬನ್ನಿ ಮಾತನಾಡೋಣ ಅಂತ ಹೇಳಿದ್ದೆ. ಈ ವೇಳೆ ಅವರು ಕಣ್ಣಲ್ಲೇ ಸನ್ನೆ ಮಾಡಿದ್ರು. ಆದ್ರೆ ಇದೀಗ ಅವರು ನಮ್ಮನ್ನು ಅಗಲಿದ್ದಾರೆ. ಈ ಮೂಲಕ ಮೂವರು ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡೋ ಅಮ್ಮನ ಆಸೆ ಈಡೇರಲಿಲ್ಲ ಅಂತಾ ಶ್ರೀನಿವಾಸ ಮೂರ್ತಿ ಗದ್ಗದಿತರಾದ್ರು.

    ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ಪಾರ್ವತಮ್ಮ ಅವರು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.