Tag: raghanna

  • ಅಭಿಮಾನಿಗಳ ಜೊತೆ ಪುನೀತ್, ರಾಘಣ್ಣ ಸಖತ್ ಡ್ಯಾನ್ಸ್: ವಿಡಿಯೋ

    ಅಭಿಮಾನಿಗಳ ಜೊತೆ ಪುನೀತ್, ರಾಘಣ್ಣ ಸಖತ್ ಡ್ಯಾನ್ಸ್: ವಿಡಿಯೋ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್‍ಕುಮಾರ್ ಅವರು ಅಭಿಮಾನಿಗಳ ಜೊತೆ ಸೇರಿ ಗಣೇಶನ ಮುಂದೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ನಗರದ ಸದಾಶಿವನಗರದಲ್ಲಿ ಗಣೇಶ ಉತ್ಸವ ನಡೆದಿದೆ. ಸೋಮವಾರ ಸಂಜೆ ಪೂಜೆಯ ನಂತರ ದೊಡ್ಮನೆ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ವಿನಯ್ ತಮಟೆ ನಾದಕ್ಕೆ ಹೆಜ್ಜೆ ಹಾಕಿದ್ದಾರೆ.

    ಗಣಪನ ಮುಂದೆ ದೊಡ್ಮನೆ ಕಲಾವಿದರು ಕುಣಿದು ಕುಪ್ಪಳಿಸಿದ್ದಾರೆ. ಇವರ ಡ್ಯಾನ್ಸ್ ನೋಡಿ ಅಭಿಮಾನಿಗಳ ಜೋಶ್ ಹೆಚ್ಚಾಗಿದ್ದು, ಅವರು ಕೂಡ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಪುನೀತ್ ಹಾಗೂ ರಾಘಣ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

    ಕಳೆದ ವರ್ಷ ಕೂಡ ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಗಣೇಶ ಉತ್ಸವದಲ್ಲಿ ಅಭಿಮಾನಿಗಳ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಸದಾಶಿವನಗರ ಫ್ರೆಂಡ್ಸ್ ಚಿಸೋಸಿಯೇಷನ್ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಪುನೀತ್ ಹಾಗೂ ರಾಘಣ್ಣ ಭಾಗವಹಿಸಿ, ಅಣ್ಣಮ್ಮ ಬೀಟ್ಸ್ ಗೆ ಸ್ಟೆಪ್ಸ್ ಹಾಕಿದ್ದರು.