Tag: ragging

  • ಸಿಆರ್ ಎಲೆಕ್ಷನ್ ಸೋತಿದ್ದಕ್ಕೆ ರ‍್ಯಾಗಿಂಗ್- ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಸಿಆರ್ ಎಲೆಕ್ಷನ್ ಸೋತಿದ್ದಕ್ಕೆ ರ‍್ಯಾಗಿಂಗ್- ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

    ಮೇಘನಾ(18) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೇಘನಾ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು.

    ಕಾಲೇಜಿನಲ್ಲಿ ನಡೆದ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್ ನಲ್ಲಿ ಮೇಘನಾ ಭಾಗವಹಿಸಿದ್ದಳು. ಆದರೆ ಆ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ತರಗತಿಯ ಇತರೆ ವಿದ್ಯಾರ್ಥಿಗಳು ಮೇಘನಾಳನ್ನು ರ‍್ಯಾಗಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರದ ಬಗ್ಗೆ ಮೇಘನಾ ತನ್ನ ಪೋಷಕರ ಹತ್ತಿರ ಹೇಳಿಕೊಂಡಿದ್ದಳು.

    ನನ್ನ ಮಗಳು ಸಿಆರ್ ಆಗಬೇಕೆಂದು ಸೌದಾಮಿನಿ ವಿರುದ್ಧ ಎಲೆಕ್ಷನ್ ನಲ್ಲಿ ನಿಂತಳು. ಮೆಜಾರಿಟಿ ಇದೆ, ನಾನು ಎಲೆಕ್ಷನ್ ಗೆ ನಿಲ್ಲುತ್ತೇನೆ ಎಂದು ಹೇಳಿದ್ದಳು. ಆಗ ಅವಳು ನಾಯಿ ಎಂದು ಹೇಳಿದ್ದಾಳೆ. ಆಗ ನನ್ನ ಮಗಳು ಕೂಡ ನಾಯಿ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ಕ್ಲಾಸಿನಲ್ಲಿದ್ದ 70 ಜನರಿಗೆ ನನ್ನ ಮಗಳು ಕೆಟ್ಟವಳು ಎಂದು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್‍ನಿಂದ ನನ್ನ ಮಗಳ ಜೊತೆ ಯಾರೂ ಮಾತನಾಡುತ್ತಿರಲಿಲ್ಲ. ಸೌದಾಮಿನಿ, ನಿಖಿಲ್, ನಿಖಿತಾ, ಪೂಜಾ ಹಾಗೂ ಸಂಧ್ಯಾ ಇವರನ್ನ ಕೂಡಲೇ ಬಂಧಿಸಬೇಕು ಎಂದು ಮೇಘನಾ ತಾಯಿ ಹೇಳಿದ್ದಾರೆ.

    ನನ್ನ ಮಗಳು ರ‍್ಯಾಂಕ್ ವಿದ್ಯಾರ್ಥಿನಿ. ಅವಳು ನೋಟ್ಸ್ ಕೇಳಿದರು ಯಾರೂ ಆಕೆಗೆ ನೀಡುತ್ತಿರಲಿಲ್ಲ. ಮಗಳ ಸಮಸ್ಯೆ ಬಗ್ಗೆ ಮಾತನಾಡಲು ಕಾಲೇಜಿನ ಎಚ್‍ಒಡಿ ರಾಜ್‍ಕುಮಾರ್ ಮರಿಸ್ವಾಮಿ ಅವರನ್ನು ಕೇಳಲು ಹೋದಾಗ ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿಮ್ಮ ಮಗಳು ಸಿಇಟಿ ಕೋಟಾದಿಂದ ಬಂದಿರೋದೋ ಅಥವಾ ಪೇಮೆಂಟ್ ಕೋಟಾದಿಂದ ಬಂದಿರೋದೋ ಎಂದು ಹಿಯಾಳಿಸಿದರು. ನಿಖಿಲ್ ನಾನು ಪೇಮೆಂಟ್ ಕೋಟಾದಿಂದ ಬಂದಿದ್ದೇನೆ ಎಂದು ಹೇಳಿದ ಕೂಡಲೇ ಆತನನ್ನು ಅಲ್ಲಿಂದ ಕಳುಹಿಸಿದರು. ನಾನು ನನ್ನ ಮಗಳು ಸಿಇಟಿ ಕೋಟಾದಿಂದ ಬಂದಿದ್ದಾಳೆಂದು ಹೇಳಿದ್ದಕ್ಕೆ ಸ್ವಲ್ಪ ಅನುಸರಿಸಿ ಹೋಗಬೇಕೆಂದು ಹೇಳಿದ್ರು ಅಂತ ತಿಳಿಸಿದ್ದಾರೆ.

    ಸ್ವಲ್ಪ ದಿನದ ನಂತರ ಪರೀಕ್ಷೆಯ ಫಲಿತಾಂಶ ಬಂದಾಗ ಆ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಮೇಘನಾ ಹೇಳಿದ್ದಳು. ನಂತರ ಮಾರನೇ ದಿನವೇ ದುಡ್ಡು ಕೊಟ್ಟು ಆ ವಿಷಯದಲ್ಲಿ ಪಾಸ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದಳು. ಅಷ್ಟೇ ಅಲ್ಲದೇ ನನ್ನ ಮಗಳು ಕಾಲೇಜಿಗೆ ರಜೆ ಹಾಕಿ ಮಾರನೇ ದಿನ ಹೋಗಿ ನೋಟ್ಸ್ ಕೇಳಿದರೆ ನಾನು ಕೋಡುವುದಿಲ್ಲ ಎಂದು ಹೇಳುತ್ತಿದ್ದರು. ಸೌದಾಮಿನಿ ಸಿಆರ್ ಆದ ನಂತರ ವಾಟ್ಸಪ್ ಗ್ರೂಪ್ ನಲ್ಲಿ ನನ್ನ ಮಗಳ ನಂಬರ್ ಬ್ಲಾಕ್ ಮಾಡಿದ್ದಳು. ಅವಳಿಗೆ ಯಾವ ನೋಟ್ಸ್ ಬರದಂತೆ ಮಾಡಿದ್ದಳು ಎಂದು ಮೇಘನಾ ತಾಯಿ ತಿಳಿಸಿದ್ದಾರೆ.

    ನನ್ನ ಮಗಳಿಗೆ ಆದ ಅನ್ಯಾಯ ಕೇಳಿದಾಗ ಯಾರೂ ನನ್ನ ಮಾತನ್ನು ಕೇಳುತ್ತಿರಲಿಲ್ಲ. ಅಲ್ಲಿ ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ. ಎಲ್ಲ ಒಂದು ಗುಂಪಾಗಿದ್ದಾರೆ. ಅವರ ಮುಂದೆ ನಾವು ಗೆಲ್ಲಲ್ಲು ಆಗಲ್ಲ, ನಾವು ಸೋತಿದ್ದೇವೆ. ನಾವೇ ಇವರ ಮುಂದೆ ಸೋಲಬೇಕು ಎಂದು ಮೇಘನಾ ಹೇಳುತ್ತಿದ್ದಳು. ಸಿಆರ್ ವಿಷಯಕ್ಕೆ ಜಗಳ ಆಗಿ ಸೌದಾಮಿನಿ ಇಡೀ ಕ್ಲಾಸ್‍ಗೆ ನನ್ನ ಮಗಳ ಜೊತೆ ಸೇರಬಾರದು ಎಂದು ಮೆಸೇಜ್ ಮಾಡುತ್ತಿದ್ದಳು. ಇದ್ದರಿಂದ ನನ್ನ ಮಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೇಘನಾ ತಾಯಿ ಹೇಳಿದ್ದಾರೆ.

    ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೇಘನಾ ಪೋಷಕರು ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

    ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಹಾಸ್ಟೆಲ್‍ನಲ್ಲಿ ಕಿರಿಯರ ಮೇಲೆ ರ್‍ಯಾಗಿಂಗ್‌: 54 ಮೆಡಿಕಲ್ ವಿದ್ಯಾರ್ಥಿನಿಯರಿಗೆ ದಂಡ

    ಪಾಟ್ನಾ: ವಿದ್ಯಾರ್ಥಿನಿಯರ ಮೇಲೆ ರ್‍ಯಾಗಿಂಗ್‌ ಎಸಗಿದ್ದಕ್ಕೆ 54 ವಿದ್ಯಾರ್ಥಿನಿಯರಿಗೆ ಬಿಹಾರದ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ. 54 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದನ್ನು ಒಪ್ಪಿಕೊಂಡ ಕಾಲೇಜು, ಎಲ್ಲ ವಿದ್ಯಾರ್ಥಿಗಳಿಂದ ಒಟ್ಟು 13.50 ಲಕ್ಷ ರೂ. ಹಣವನ್ನು ಸಂಗ್ರಹಿಸಿದೆ.

    ಹಾಸ್ಟೆಲ್ ನಲ್ಲಿದ್ದ ಪ್ರಥಮ ವರ್ಷದ ಸೆಮಿಸ್ಟರ್ ಓದುತ್ತಿದ್ದ ಓರ್ವ ಸಂತ್ರಸ್ತೆ ನವೆಂಬರ್ 11 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಗೆ ತನಗೆ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡು ಈ ಮೇಲ್ ಮೂಲಕ ದೂರನ್ನು ನೀಡಿದ್ದಳು.

    ವಿದ್ಯಾರ್ಥಿನಿಯ ವಿವರವನ್ನು ಬಹಿರಂಗ ಪಡಿಸದೇ ಈ ದೂರಿನ ಪ್ರತಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಂಸಿಐ ಆದೇಶಿಸಿತ್ತು.

    ಎಂಸಿಐ ಆದೇಶದ ಅನ್ವಯ ಈಗ ಮೂರನೇ ಸೆಮಿಸ್ಟರ್ ಓದುತ್ತಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಥಮ ವರ್ಷ ಓದುತ್ತಿರುವ 26 ಮಂದಿ ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೂ ದಂಡವನ್ನು ವಿಧಿಸಿದೆ.

    ರ್‍ಯಾಗಿಂಗ್‌ ಆಗುತ್ತಿರುವ ವಿಚಾರ ತಿಳಿದಿದ್ದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಘಟನೆಯನ್ನು ಮರೆಮಾಚಲು ಯತ್ನಿಸಿದ್ದಕ್ಕೆ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 26 ವಿದ್ಯಾರ್ಥಿನಿಯರಿಗೆ ದಂಡ ಹಾಕಲಾಗಿದೆ. ಒಂದು ವೇಳೆ ನವೆಂಬರ್ 25ರ ಒಳಗಡೆ ಈ ದಂಡವನ್ನು ಪಾವತಿಸದೇ ಇದ್ದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ.

     

  • ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವಿಜಯಪುರ: ಯುವತಿವೊಬ್ಬಳನ್ನು ಚೂಡಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿಂದಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಂಕರ್(43) ಎಂಬಾತ ತಾಂಡಾದಲ್ಲಿರುವ ಯವತಿನ್ನು ಚೂಡಾಯಿಸುತ್ತಿದ್ದ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಶಂಕರ್‍ಗೆ ಲಂಗ ತೊಡಿಸಿ, ಅರ್ಧ ತಲೆ ಬೋಳಿಸಿ ಊರು ತುಂಬ ಮೆರವಣಿಗೆ ಮಾಡಿದ್ದಾರೆ.

    ಈ ಘಟನೆ ಜುಲೈ 11 ರಂದು ನಡೆದಿದದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಶಂಕರ್‍ನನ್ನು ಬಂಧಿಸಿದ್ದು ಪೊಲೀಸರು ತನಿಖೆ ಮಂದುವರೆಸಿದ್ದಾರೆ.

    https://youtu.be/E56QglLzlbM