Tag: Raft

  • ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

    ಕಾರವಾರ: ಕಡಲ ತೀರಕ್ಕೆ ತೇಲಿಬಂದ ಹಡಗಿನ ರಾಫ್ಟ್‌ – ಕೇರಳ ಕೊಚ್ಚಿಯಲ್ಲಿ ಮುಳುಗಿದ್ದ ಹಡಗಿನದ್ದಾ?

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಡ ಕಡಲತೀರದಲ್ಲಿ ಹಡಗಿನ ರಾಫ್ಟ್‌ (Raft) ಪತ್ತೆಯಾದ ಘಟನೆ ನಡೆದಿದೆ.‌

    ನಿನ್ನೆ ರಾತ್ರಿ ವೇಳೆ ಕಡಲ ತೀರಕ್ಕೆ ತೇಲಿ ಬಂದ ರಾಫ್ಟ್‌ ಮಾದರಿಯ ವಸ್ತುಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ಕಾವಲುಪಡೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಈ ವಸ್ತುಗಳು ಕೇರಳದ ಕೊಚ್ಚಿಯಲ್ಲಿ ಮುಳುಗಿರುವ ಹಡಗಿನ ರಾಫ್ಟ್ ಎಂಬ ಶಂಕೆ ವ್ಯಕ್ತವಾಗಿದೆ. ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು (ಎಂಎಸ್ಸಿ ಎಲ್ಸಾ 3 ಎಂಬ ಹಡಗು) ಕೊಚ್ಚಿ ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಈ ಹಡಗಿನ ರಾಫ್ಟ್‌ ಆಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

  • ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ – ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಮುಕ್ತಾಯ

    ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ – ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಮುಕ್ತಾಯ

    ವಿಜಯಪುರ: ಕೃಷ್ಣಾ ನದಿಯಲ್ಲಿ (Krishna River) ತೆಪ್ಪ (Raft) ಮಗುಚಿ ಐವರು ಜಲಸಮಾಧಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಐವರ ಮೃತದೇಹವನ್ನೂ ಪತ್ತೆ ಮಾಡಿ ನೀರಿನಿಂದ ಹೊರತೆಗೆದಿದ್ದು, ಕಾರ್ಯಾಚರಣೆ ಮುಕ್ತಾಯಗೊಂಡಿದೆ.

    ಜಲ ಸಮಾಧಿಯಾಗಿದ್ದ ಐವರ ಪೈಕಿ ಮೂವರ ಶವಗಳ್ನು ಬುಧವಾರ ಹೊರ ತೆಗೆಯಲಾಗಿದೆ. ಪುಂಡಲಿಕ ಯಂಕಂಚಿ, ತಯ್ಯಬ್ ಚೌಧರಿ ಹಾಗೂ ದಶರಥ ಗೌಡರ್ ಶವಗಳನ್ನು ಈಗಾಗಲೇ ಹೊರ ತೆಗೆಯಲಾಗಿದೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿತ್ತು. ಇಂದು 30 ಜನ ಸಿಬ್ಬಂದಿ ಹಾಗೂ ಐದು ಬೋಟ್‌ಗಳ ಸಹಾಯದಿಂದ ಶೋಧಕಾರ್ಯ ಪ್ರಾರಂಭಿಸಿದ್ದು, ರಫೀಕ್ ಆಲಮೇಲ (40) ಹಾಗೂ ಮೆಹಬೂಬ್ ವಾಲಿಕಾರ್ (35) ಮೃತದೇಹವನ್ನು ಪತ್ತೆಹಚ್ಚಿ ನೀರಿನಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪ್ರಾಪ್ತರ ಬಳಕೆ ಆಗಿಲ್ಲ- ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ಪಷ್ಟನೆ

    ಜುಲೈ 2ರ ಮಂಗಳವಾರ ಸಂಜೆ 4:30ರ ಸುಮಾರಿಗೆ ಘಟನೆ ನಡೆದಿತ್ತು. ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ಏಳು ಜನ ನೀರುಪಾಲಾಗಿದ್ದರು. ಈ ಪೈಕಿ ಓರ್ವ ಈಜಿ ದಡ ಸೇರಿದ್ದರೆ ಮತ್ತೊರ್ವನನ್ನು ರಕ್ಷಣೆ ಮಾಡಲಾಗಿತ್ತು. ಇನ್ನು ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್‌! – ಇಂದು ಸಂಜೆ ಮುಂಬೈನಲ್ಲಿ ರೋಡ್‌ ಶೋ

  • ಚಿಕ್ಕಮಗಳೂರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ

    ಚಿಕ್ಕಮಗಳೂರಿನಲ್ಲಿ ತೆಪ್ಪ ಮುಳುಗಿ ಮೂವರು ಪ್ರವಾಸಿಗರು ದುರ್ಮರಣ

    ಚಿಕ್ಕಮಗಳೂರು: ತೆಪ್ಪ (Raft) ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.

    ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಮೃತ ದುರ್ದೈವಿಗಳು. ಮೂವರು ಪ್ರವಾಸಿಗರು ಭದ್ರಾ ನದಿಯ ಬ್ಯಾಕ್ ವಾಟರ್‌ನಲ್ಲಿ ತೆಪ್ಪದಲ್ಲಿ ಹೋಗಿದ್ದರು. ಈ ವೇಳೆ ತೆಪ್ಪ ಮುಳುಗಿ ಘಟನೆ ಸಂಭವಿಸಿದೆ. ಮೃತರು ಶಿವಮೊಗ್ಗ (Shivamogga) ಜಿಲ್ಲೆಯ ವಿದ್ಯಾನಗರ ಮೂಲದವರು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಗುರುವಾರ 224 ಕ್ಷೇತ್ರಗಳಲ್ಲಿ ಬಿಜೆಪಿ ರಸ್ತೆತಡೆ: ಎನ್ ರವಿಕುಮಾರ್

    ಘಟನಾ ಸ್ಥಳಕ್ಕೆ ವನ್ಯಜೀವಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೂರನೇ ರೇಪ್ ಕೇಸ್‍ನಲ್ಲಿ ಪ್ರಜ್ವಲ್‍ಗೆ ಮತ್ತೆ 5 ದಿನ ಪೊಲೀಸ್ ಕಸ್ಟಡಿ

  • ತೆಪ್ಪ ಮಗುಚಿಬಿದ್ದು ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು

    ತೆಪ್ಪ ಮಗುಚಿಬಿದ್ದು ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು

    ದಾವಣಗೆರೆ: ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು (Jagalur) ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಿತ್ತೂರು ಗ್ರಾಮದ ನಿವಾಸಿ ಮೂರ್ತಿ (40) ಮೃತ ದುರ್ದೈವಿ. ಮೂರ್ತಿ ನಿತ್ಯ ಮೀನು (Fish) ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಅದೇ ರೀತಿ ಎಂದಿನಂತೆ ಮೂರ್ತಿ ಮೀನು ಹಿಡಿಯಲು ತೆಪ್ಪದಲ್ಲಿ (Raft) ಹೋಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ತೆಪ್ಪ ಮಗುಚಿ ಬಿದ್ದು ಮೀನಿಗೆ ಹಾಕಿದ್ದ ಬಲೆ ಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ – ಬಾಂಬರ್‌ ಬಳ್ಳಾರಿಯಿಂದ ಭಟ್ಕಳಕ್ಕೆ ತೆರಳಿರುವ ಶಂಕೆ

    ಮೀನಿನ ಬಲೆ ಕಾಲಿಗೆ ಸಿಲುಕಿದ ಹಿನ್ನೆಲೆ ಮೂರ್ತಿ ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಸ್ಥಳೀಯರು ಮೂರ್ತಿ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಬಿಳಚೋಡು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವಪ್ರಸಿದ್ಧ ಯಾಣದಲ್ಲಿ ದೇಶದ ಮೊದಲ WiFi-7 ಸೇವೆ

  • ರಸ್ತೆ ಗುಂಡಿಯಲ್ಲಿ ತೆಪ್ಪ ಹಾಕಿ ಮಕ್ಕಳನ್ನು ಕೂರಿಸಿ ಆಕ್ರೋಶ

    ರಸ್ತೆ ಗುಂಡಿಯಲ್ಲಿ ತೆಪ್ಪ ಹಾಕಿ ಮಕ್ಕಳನ್ನು ಕೂರಿಸಿ ಆಕ್ರೋಶ

    ದಾವಣಗೆರೆ: ದಶಕಗಳಿಂದ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ಇದರಿಂದ ರೋಸಿಹೋದ ಗ್ರಾಮಸ್ಥರು ರಸ್ತೆಗುಂಡಿಗಳಲ್ಲಿ ದೋಣಿ ಬಿಟ್ಟು ಅದರಲ್ಲಿ ಮಕ್ಕಳನ್ನು ಕೂರಿಸಿ ವಿನೂತನವಾದ ಪ್ರತಿಭಟನೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹೀರೇಮ್ಯಾಗಳಗೆರೆ ಗ್ರಾಮದಲ್ಲಿ ನಡೆದಿದೆ.

    ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾದ ಹೀರೇಮ್ಯಾಗಳಗೆರೆ ಗ್ರಾಮದಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದು, ವಾಹನ ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದ ಎರಡು ಲೋಮೀಟರ್‌ಗಳು ಕೂಡ ಗುಂಡಿಮಯವಾಗಿದ್ದು, ರಸ್ತೆಗಳಲ್ಲಿ ಎರಡು ಅಡಿ ಉದ್ದ ಹತ್ತು ಅಡಿ ಆಗಲದ ಗುಂಡಿಗಳಿವೆ. ಇದನ್ನೂ ಓದಿ: ಕಸ ಸಂಗ್ರಹಣಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿದ ಶ್ರೀರಾಮುಲು

    ಗುಂಡಿ ರಸ್ತೆಗಳಿಂದ ರೋಸಿಹೋದ ಗ್ರಾಮಸ್ಥರು ಇಂದು ಗುಂಡಿಗಳಲ್ಲಿ ದೋಣಿ ಮೇಲೆ ಮಕ್ಕಳನ್ನು ಕೂರಿಸಿ ತೆಪ್ಪ ಹೊಡೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಅಲ್ಲದೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣಾಯಲ್ಲಿ ಬರುವ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಂದರೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಪ್ರತಿನಿತ್ಯ ನರಕ ಯಾತನೆಯನ್ನು ವಾಹನ ಸವಾರು ಅನುಭವಿಸುತ್ತಿದ್ದು, ಸಾರ್ವಜನಿಕರು ಜೀವ ಕೈಯಲ್ಲಿಟ್ಟುಕೊಂಡು ಸಂಚರಿಸುವ ಪರಿಸ್ಥಿತಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

  • ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರು ಶವವಾಗಿ ಪತ್ತೆ

    ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರು ಶವವಾಗಿ ಪತ್ತೆ

    – ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

    ರಾಯಚೂರು: ಆಗಸ್ಟ್ 17ರಂದು ಕೃಷ್ಣ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ರಾಯಚೂರಿನ ನಡುಗಡ್ಡೆ ಗ್ರಾಮ ಕುರ್ವಕಲಾದ ನಾಲ್ಕು ಜನ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ.

    ತೆಲಂಗಾಣದ ಪಂಚದೇವಪಾಡಗೆ ದಿನಸಿ ತರಲು ಹೋಗಿದ್ದವರು ಕುರ್ವಾಕುಲಕ್ಕೆ ಮರಳುವಾಗ ತೆಪ್ಪ ಮುಳುಗಿತ್ತು. ಮೊದಲಿಗೆ ಇಬ್ಬರು, ಬಳಿಕ ಒಬ್ಬರು ಒಟ್ಟು ಮೂರು ಜನ ತೆಲಂಗಾಣದ ಜುರಾಲಾ ಇಂದಿರಾ ಪ್ರಿಯದರ್ಶಿನಿ ಜಲಾಶಯದ ಬಳಿ ಶವವಾಗಿ ಪತ್ತೆಯಾಗಿದ್ದರು. ಇಂದು ಬಾಲಕಿ ರೋಜಾ ಸಹ ಜಲಾಶಯ ಬಳಿ ಶವವಾಗಿ ದೊರಕಿದ್ದಾಳೆ.

    ಸುಮಲತಾ, ನರಸಮ್ಮ, ಪಾರ್ವತಿ ಹಾಗೂ ರೋಜಾ ಪತ್ತೆಗಾಗಿ ಎನ್.ಡಿ.ಆರ್.ಎಫ್, ಅಗ್ನಿ ಶಾಮಕ ದಳ ಸತತ ಕಾರ್ಯಾಚರಣೆ ನಡೆಸಿದ್ದರು ಸುಳಿವು ಪತ್ತೆಯಾಗಿರಲಿಲ್ಲ. ಎಲ್ಲ ನಾಲ್ಕು ಜನ ಕೊನೆಗೆ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆವರೆಗೆ ಕೃಷ್ಣ ನದಿಯಲ್ಲಿ ನಾಪತ್ತೆಯಾಗಿದ್ದವರಲ್ಲಿ ಮೂವರ ಶವ ಪತ್ತೆ ಹಿನ್ನೆಲೆ ಮೂವರ ಕುಟುಂಬಕ್ಕೆ ಜಿಲ್ಲಾಡಳಿತ ತಲಾ 5 ಲಕ್ಷ ಪರಿಹಾರ ನೀಡಿದೆ. ಸುಮಲತಾ, ಪಾರ್ವತಿ, ನರಸಮ್ಮ ಕುಟುಂಬಕ್ಕೆ ಒಟ್ಟು 15 ಲಕ್ಷ ಪರಿಹಾರ ನೀಡಲಾಗಿದೆ.

    ರಾಯಚೂರು ತಹಶೀಲ್ದಾರ್ ಖಾತೆಯಿಂದ ಸಂತ್ರಸ್ತ ಕುಟುಂಬಕ್ಕೆ ಆರ್.ಟಿ.ಜಿ.ಎಸ್ ಮೂಲಕ ಪರಿಹಾರ ನೀಡಲಾಗಿದೆ. ರಾಯಚೂರು ಜಿಲ್ಲಾಧಿಕಾರಿ ಮೌಖಿಕ ಆದೇಶ ಹಿನ್ನೆಲೆ ಪರಿಹಾರ ವಿತರಣೆ ಮಾಡಲಾಗಿದೆ. ಈಗ ಬಾಲಕಿ ರೋಜಾ ಸಹ ಶವವಾಗಿ ಪತ್ತೆಯಾಗಿದ್ದಾಳೆ.

  • ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಮಹಿಳೆಯರು

    ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಮಹಿಳೆಯರು

    ಚಿಕ್ಕಬಳ್ಳಾಪುರ: ಬಡತನ ಎಂಬುದು ಮನುಷ್ಯನ ಕೈಯಲ್ಲಿ ಏನ್ ಬೇಕಾದರೂ ಮಾಡಿಸುತ್ತದೆ ಎಂಬುವುದಕ್ಕೆ ಈ ಮಹಿಳೆಯರೇ ಸಾಕ್ಷಿ. ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಮೂವರು ಮಹಿಳೆಯರು ತೆಪ್ಪದಲ್ಲಿ ಕೆರೆಗೆ ಸಾಗಿ ಮೀನು ಹಿಡಿಯುತ್ತಿದ್ದಾರೆ.

    ಈ ಸಾಹಸಿ ಮಹಿಳೆಯರು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೆಂಕಟಾಪುರ ಕೆರೆಯಲ್ಲಿ. ಇಲ್ಲಿನ ಆಂಧ್ರ ಮೂಲದ ಈ ಮಹಿಳೆಯರು ಸಾಹಸ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

    ಆ ಮಹಿಳೆಯರು ಗಂಡ-ಮಕ್ಕಳು ಸಂಸಾರ ಎಲ್ಲವನ್ನು ಕಟ್ಟಿಕೊಂಡು ತೆಪ್ಪ ಏರಿದ್ದಾರೆ ಅಂದರೆ ಸಾಕು ಹೊಟ್ಟೆ ತುಂಬುವವರೆಗೂ ಭೂಮಿ ಮೇಲೆ ಬರಲ್ಲ. ಪ್ರತಿ ದಿನ ಬದುಕಿನ ಬಂಡಿ ಸಾಗಿಸಲು ಇರುವ ಹಳೆ ತೆಪ್ಪದಲ್ಲೇ ಕೆರೆಗೆ ಸಾಗುವ ಮಹಿಳೆಯರು ಭರ್ಜರಿ ಮೀನುಗಳನ್ನು ಹಿಡಿದು ಮರಳಿ ದಡಕ್ಕೆ ವಾಪಸಾಗುತ್ತಾರೆ. ಪ್ರತಿದಿನ ಕೆರೆಗೆ ಸಾಗಿ ಮೀನು ತರುವ ಮಹಿಳೆಯರ ಕಾಯಕ ಕಂಡ ಜನ ಮಹಿಳೆಯರ ಸಾಹಸ ಕಂಡು ಮೆಚ್ಚುಗೆ ಜೊತೆ ಆಶ್ಚರ್ಯ ಮತ್ತು ಆತಂಕವನ್ನೂ ವ್ಯಕ್ತಪಡಿಸ್ತಾರೆ.

    ಬದುಕಿನ ಬಂಡಿ ಸಾಗಿಸಲು ಗಂಡ ಮಕ್ಕಳು ಕುಟುಂಬ ಸಮೇತ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಬಂದಿರೋ ಈ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ಕೆರೆಯಲ್ಲಿ ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಮೀನು ಸಾಕಿರುವ ಗುತ್ತಿಗೆದಾರನಿಗೆ ತಂದ ಮೀನು ಕೊಟ್ಟು ತಲಾ ಕೆಜಿಗೆ 20 ರೂಪಾಯಿ ಪಡೆಯುತ್ತಾರೆ. ಹೀಗೆ ಬಂದ ಹಣದಿಂದಲೇ ತಮ್ಮ ಜೀವನ ಸಾಗಿಸುತ್ತಾ ತೆಪ್ಪದಲ್ಲೊಂದು ಬದುಕು ಕಂಡುಕೊಂಡಿದ್ದಾರೆ.

    ಒಟ್ಟಿನಲ್ಲಿ ಮಹಿಳೆಯರು ಯಾರಿಗೇನು ಕಮ್ಮಿಯಿಲ್ಲ ಬಾಹ್ಯಾಕಾಶಕ್ಕೆ ಹಾರಿದವರು ಉಂಟು, ಆಗಸದಲ್ಲಿ ವಿಮಾನ ಹಾರಿಸದವರು ಉಂಟು ಆದರೆ ಕಡುಬಡತನದ ಈ ಮಹಿಳೆಯರು ತಮ್ಮ ಬದುಕಿನ ಬಂಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲೊಂದು ಬದುಕು ಕಟ್ಟಿಕೊಂಡಿದ್ದಾರೆ. ಇವರ ಬದುಕು ಸಾಹಸ ಹಲವು ಮಂದಿಗೆ ಸ್ಪೂರ್ತಿಯಾಗಲಿದೆ.

  • ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ಕೆರೆಯಲ್ಲಿ ಮೀನಿಗಾಗಿ ಬಲೆ ಬೀಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ್ರು

    ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.

    ಬಿಡದಿ ಸಮೀಪದ ಅವರೆಗೆರೆ ಗ್ರಾಮದ ನಿವಾಸಿಗಳಾದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು.

    ಶನಿವಾರ ಸಂಜೆ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬೀಸಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸ್ಥಳೀಯರಲ್ಲಿ ವಿಚಾರಿಸಿದಾಗ ಮೀನು ಹಿಡಿಯಲು ನೆಲ್ಲಿಗುಡ್ಡೆ ಕೆರೆಗೆ ಹೋಗಿದ್ದಾರೆ ಎಂದು ತಿಳಿಸಿದ್ದರು.

    ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಪೊಲೀಸರು ಘಟನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ತೆಪ್ಪವೂ ಇರಲಿಲ್ಲ. ಇದರಿಂದ ತೆಪ್ಪ ಮುಗುಚಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದ್ದಾರೆ. ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ. ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು, ಹೊರತೆಗೆಯಲಾಗಿದೆ.

    ಶನಿವಾರ ನಗರದಲ್ಲಿ ಮಳೆಯಾಗಿದ್ದು, ಇದರಿಂದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.