Tag: rafel jet

  • ನಾಚಿಕೆಯಾಗಲ್ವೇ, ರಫೇಲ್ ಖರೀದಿ ವಿಳಂಬಕ್ಕೆ ನೀವೇ ನೇರ ಹೊಣೆ: ಪ್ರಧಾನಿ ವಿರುದ್ಧ ರಾಹುಲ್ ಕಿಡಿ

    ನಾಚಿಕೆಯಾಗಲ್ವೇ, ರಫೇಲ್ ಖರೀದಿ ವಿಳಂಬಕ್ಕೆ ನೀವೇ ನೇರ ಹೊಣೆ: ಪ್ರಧಾನಿ ವಿರುದ್ಧ ರಾಹುಲ್ ಕಿಡಿ

    ನವದೆಹಲಿ: ರಫೇಲ್ ಖರೀದಿ ವಿಳಂಬಕ್ಕೆ ನೀವೇ ನೇರ ಹೊಣೆ, ನೀವು ನಿಮ್ಮ ಸ್ನೇಹಿತ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಜನತೆಯ ಹಣ ಕದ್ದು ಕೊಟ್ಟಿದ್ದೀರಾ. ನಿಮಗೆ ನಾಚಿಕೆಯಾಗಲ್ವಾ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ರಫೇಲ್ ಖರೀದಿ ವಿಳಂಬಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಏರ್‌ಸ್ಟ್ರೈಕ್ ಮಾಡುವ ಮೂಲಕ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್‍ನ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ. ಇದೇ ಬೆನ್ನಲ್ಲೆ ಈಗ ರಫೇಲ್ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ಪರಿಸ್ಥಿತಿಯಲ್ಲಿ ರಫೇಲ್ ಇದ್ದಿದ್ರೆ ಕಥೆಯೇ ಬೇರೆ ಇರ್ತಿತ್ತು: ಪ್ರಧಾನಿ ಮೋದಿ

    ಏರ್‌ಸ್ಟ್ರೈಕ್ ವೇಳೆ ಭಾರತದ ಬಳಿ ರಫೇಲ್ ವಿಮಾನಗಳು ಇದ್ದಿದ್ದರೆ ಪರಿಣಾಮವೇ ಬೇರೆಯಾಗಿರುತಿತ್ತು ಎಂದು ಮೋದಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.

    ಇದಕ್ಕೂ ಮೊದಲು ಕನ್ಯಾಕುಮಾರಿಯಲ್ಲಿ ಚುನಾವಣೆ ಪ್ರಚಾರದ ವೇಳೆ ಪ್ರತಿಪಕ್ಷಗಳು ಮೋದಿಯ ಮೇಲಿರುವ ದ್ವೇಷಕ್ಕೆ ದೇಶವನ್ನು ಕೂಡ ದ್ವೇಷಿಸಲು ಆರಂಭಿಸಿದೆ. ಈ ರೀತಿ ಮಾಡಿ ಶತ್ರುಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಟೀಕಿಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ರಫೇಲ್ ಯುದ್ಧ ವಿಮಾನಗಳ ಖರೀದಿ ವಿಳಂಬಕ್ಕೆ ಪ್ರಧಾನಿ ಮೋದಿಯೇ ಕಾರಣ, ಅವರಿಂದಲೇ ರಫೇಲ್ ಇನ್ನೂ ಭಾರತೀಯ ಸೇನೆಗೆ ಸೇಪರ್ಡೆಯಾಗಿಲ್ಲ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಮಾನ್ಯ ಪ್ರಧಾನಿಗಳೇ, ನಿಮಗೆ ನಾಚಿಕೆಯಾಗಲ್ವಾ? ನೀವು 30 ಸಾವಿರ ಕೋಟಿ ಹಣವನ್ನು ಕದ್ದು, ನಿಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ನೀಡಿದ್ದೀರಾ. ರಫೇಲ್ ಖರೀದಿ ವಿಳಂಬಕ್ಕೆ ನೀವೇ ಹೊಣೆ. ಇದರಿಂದ ವಿನೂತನ ಜೆಟ್‍ಗಳಿಲ್ಲದೆ, ಹಳೆಯ ಜೆಟ್ ಬಳಸಿದ್ದಕ್ಕೆ ನಮ್ಮ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರು ಅಪಾಯದಲ್ಲಿ ಸಿಲುಕುವಂತೆ ಆಯಿತು ಎಂದು ಆರೋಪಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv