Tag: Rafale Fighter Jet

  • ನಾಳೆ ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ಮುರ್ಮು

    ನಾಳೆ ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ಮುರ್ಮು

    – ರಫೇಲ್ ಏರಿದ ಮೊದಲ ರಾಷ್ಟ್ರಪತಿ

    ಚಂಡೀಗಢ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ (Droupadi Murmu) ಮುರ್ಮು ಬುಧವಾರ (ಅ.29) ರಫೇಲ್ ಫೈಟರ್ ಜೆಟ್‌ನಲ್ಲಿ (Rafale Fighter Jet) ಹಾರಾಟ ನಡೆಸಲಿದ್ದಾರೆ.

    67 ವರ್ಷದ ದ್ರೌಪದಿ ಮುರ್ಮು ಬುಧವಾರ (ಅ.29) ಹರಿಯಾಣದ ಅಂಬಾಲಾ ಏರ್‌ಬೇಸ್‌ಗೆ (Ambala Airbase) ತೆರಳಿ ಅಲ್ಲಿ ರಫೇಲ್ ಫೈಟರ್ ಜೆಟ್‌ನಲ್ಲಿ ಹಾರಾಟ ನಡೆಸಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಫೇಲ್ ಏರಿದ ರಾಷ್ಟ್ರಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀತಿಪಾಠ: ಪ್ರಹ್ಲಾದ್ ಜೋಶಿ

    ಈ ಮೊದಲು 2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ಏರ್‌ಬೇಸ್‌ನಲ್ಲಿ ಸುಖೋಯ್ -30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದಕ್ಕೂ ಮುನ್ನ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲ್ ಮತ್ತು ಅಬ್ದುಲ್ ಕಲಾಂ ಅಬ್ದುಲ್ ಅವರು ಸುಖೋಯ್-30 ಫೈಟರ್ ಜೆಟ್‌ಗಳಲ್ಲಿ ಹಾರಾಟ ನಡೆಸಿದ್ದರು.

    `ಆಪರೇಷನ್ ಸಿಂಧೂರ’ದ (Operation Sindoor) ವೇಳೆ ಅಂಬಾಲಾ ಏರ್‌ಬೇಸ್‌ನಿಂದ ಟೇಕಾಫ್ ಆದ ನಮ್ಮ ಫೈಟರ್ ಜೆಟ್‌ಗಳು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಿದ್ದವು.ಇದನ್ನೂ ಓದಿ:ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು

     

  • ಇನ್ಮುಂದೆ ಭಾರತದಲ್ಲೇ ತಯಾರಾಗುತ್ತೆ ರಫೇಲ್ ಬಿಡಿಭಾಗಗಳು – ಟಾಟಾ ಜೊತೆ ಡಸಾಲ್ಟ್ ಒಪ್ಪಂದ

    ಇನ್ಮುಂದೆ ಭಾರತದಲ್ಲೇ ತಯಾರಾಗುತ್ತೆ ರಫೇಲ್ ಬಿಡಿಭಾಗಗಳು – ಟಾಟಾ ಜೊತೆ ಡಸಾಲ್ಟ್ ಒಪ್ಪಂದ

    ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಫೇಲ್ ಜೆಟ್‌ಗಳ ಬಿಡಿ ಭಾಗಗಳು ಇನ್ನು ಮುಂದೆ ನಮ್ಮ ದೇಶದಲ್ಲೇ ತಯಾರಾಗಲಿವೆ. ಈ ಮಹತ್ವದ ಯೋಜನೆಗಾಗಿ ರಫೇಲ್ (Rafale Fighter Jet) ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್ (Dassault) ಟಾಟಾ ಗ್ರೂಪ್‌ನೊಂದಿಗೆ (Tata) ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

    ಡಸ್ಸಾಲ್ಟ್ ಏವಿಯೇಷನ್ ​​ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ರಫೇಲ್ ಯುದ್ಧ ವಿಮಾನದ ಫ್ಯೂಸ್‌ಲೇಜ್ ತಯಾರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಇನ್ನೂ ಫೈಟರ್‌ ಜೆಟ್‌ಗಳ ಬಿಡಿಭಾಗಗಳನ್ನು ತಯಾರಿಸಲು ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇದನ್ನೂ ಓದಿ: ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ರಫೇಲ್‌ನ ಪ್ರಮುಖ ಬಿಡಿಭಾಗಗಳಾದ ಹಿಂಭಾಗದ ಫ್ಯೂಸ್‌ಲೇಜ್‌ನ ಲ್ಯಾಟರಲ್ ಶೆಲ್‌ಗಳು, ಕೇಂದ್ರ ಫ್ಯೂಸ್‌ಲೇಜ್ ಮತ್ತು ವಿಮಾನದ ಮುಂಭಾಗ ಸೇರಿದಂತೆ ಹಲವಾರು ಪ್ರಮುಖ ಬಿಡಿಭಾಗಗಳು ಹೈದರಾಬಾದ್‌ನಲ್ಲಿಯೇ ತಯಾರಾಗಲಿವೆ. ಫ್ರಾನ್ಸ್‌ನ ಹೊರಗೆ ಇವುಗಳನ್ನು ಉತ್ಪಾದಿಸಲಾಗುತ್ತಿರುವುದು ಇದೇ ಮೊದಲಾಗಿದೆ.

    2028ರ ಹಣಕಾಸು ವರ್ಷದ ವೇಳೆಗೆ ಎರಡು ವಿಮಾನಗಳನ್ನು ತಯಾರಿಸುವ ಗುರಿಯನ್ನು ಡಸ್ಸಾಲ್ಟ್ ಏವಿಯೇಷನ್ ​​ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಹೊಂದಿವೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

  • Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    ನವದೆಹಲಿ/ಪ್ಯಾರಿಸ್‌: ಈ ಹಿಂದೆ ಫ್ರಾನ್ಸ್‌ನಿಂದ (France) 36 ರಫೇಲ್‌ ಯುದ್ಧ ವಿಮಾನಗಳನ್ನ (Rafale Fighter Jet) ಖರೀದಿ ಮಾಡಿದ್ದ ಭಾರತ ಸರ್ಕಾರ ಇದೀಗ, ಇನ್ನೂ 26 ಯುದ್ಧ ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

    ಭಾರತೀಯ ರಕ್ಷಣಾ ಪಡೆಗಳು ಸಚಿವಾಲಯದ ಮುಂದೆ ರಫೇಲ್‌ ಖರೀದಿಸುವ ಪ್ರಸ್ತಾವನೆಯನ್ನಿಟ್ಟಿವೆ. ಈ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತ ಸರ್ಕಾರವು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಫೇಲ್‌ ಡೀಲ್‌ – ಆಫ್‌ಸೆಟ್‌ ನಿಯಮವನ್ನೇ ಕೈಬಿಟ್ಟ ಸರ್ಕಾರ

    ರಫೇಲ್ ಯುದ್ಧ ವಿಮಾನಗಳ ಜೊತೆಗೆ ಭಾರತವು ಫ್ರಾನ್ಸ್‌ನಿಂದ 3 ಸ್ಕಾರ್ಪೀನ್ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿ (Submarines) ನೌಕೆಗಳನ್ನೂ ಖರೀದಿಸಲಿದೆ. 26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ ಮೇಲೆ ಲಂಚ ಸ್ವೀಕಾರ ಆರೋಪ

    ಮೂಲಗಳ ಪ್ರಕಾರ, ಭಾರತೀಯ ನೌಕಾ ಪಡೆಯು ನಾಲ್ಕು ಟ್ರೈನರ್ ಏರ್‌ಕ್ರಾಫ್ಟ್‌ಗಳ ಸಹಿತ 22 ಸಿಂಗಲ್ ಸೀಟೆಡ್ (ಏಕ ಆಸನಗಳನ್ನು ಒಳಗೊಂಡ) ರಫೇಲ್ ಯುದ್ಧ ವಿಮಾನಗಳನ್ನು ಹೊಂದಲಿದೆ. ದೇಶಾದ್ಯಂತ ಭದ್ರತಾ ಸವಾಲುಗಳ ದೃಷ್ಟಿಯಿಂದ ಭಾರತೀಯ ನೌಕಾಪಡೆಯು ಕೊರತೆ ಎದುರಿಸುತ್ತಿರುವ ಕಾರಣ ಈ ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಸರ್ಕಾರದ ಮೇಲೆ ರಕ್ಷಣಾಪಡೆಗಳು ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ.

    ವಿಮಾನಗಳನ್ನು ಹೊತ್ತೊಯ್ಯುವ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ (INS Vikrant), ಮಿಗ್-19 ಫೈಟರ್‌ಜೆಟ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಎರಡೂ ಯುದ್ಧ ಹಡಗುಗಗಳಿಗೆ ರಫೇಲ್ ಯುದ್ಧವಿಮಾನಗಳ ಅಗತ್ಯವಿದೆ. ಈ ಮಧ್ಯೆ, ಸ್ಕಾರ್ಪೀನ್ ಕ್ಲಾಸ್ ಸಬ್‌ಮರೀನ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಾಜೆಕ್ಟ್-75ರ ಭಾಗವಾಗಿ ನೌಕಾಪಡೆಯು ಈ ಜಲಾಂತರ್ಗಾಮಿಗಳನ್ನ ಮುಂಬೈನ ಮಜಗಾಂವ್ ಡಾಕ್‌ಯಾರ್ಡ್‌ನಲ್ಲಿ ನಿರ್ಮಾಣಗೊಳ್ಳಲಿವೆ.

    26 ರಫೇಲ್ ಮತ್ತು ಸ್ಕಾರ್ಪೀನ್ ವರ್ಗದ 3 ಸಬ್‌ಮರೀನ್‌ಗಳ ಖರೀದಿಗೆ ಭಾರತವು ಸುಮಾರು 90 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಪೂರ್ಣ ಮಾತುಕತೆ ಒಪ್ಪಂದ ಮುಕ್ತಾಯಗೊಂಡ ನಂತರ ಅಂತಿಮ ವೆಚ್ಚ ಸ್ಪಷ್ಟವಾಗಲಿದೆ. ಈ ನಡುವೆ ಭಾರತವು ಈ ಒಪ್ಪಂದಲ್ಲಿ ರಿಯಾಯಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ನವದೆಹಲಿ: ಎಚ್‍ಎಎಲ್(ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನೊಂದಿಗೆ ರಫೇಲ್ ಯುದ್ದ ವಿಮಾನದ ಒಪ್ಪಂದವನ್ನು ಕೈಬಿಟ್ಟಿದ್ದೇಕೆ ಎಂಬುದರ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

    ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಸಂಪಾದಕರು ಮತ್ತು ವರದಿಗಾರರ ಜೊತೆ ಸಂವಾದ ನಡೆಸಿದ ಸೀತಾರಾಮನ್ ಕಾಂಗ್ರೆಸ್ ಅವಧಿಗಿಂತ ನಮ್ಮ ಒಪ್ಪಂದ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

    ಫ್ರಾನ್ಸ್ ಡಸಾಲ್ಟ್ ಏವಿಯೇಶನ್ ಸಹಯೋಗದೊಂದಿಗೆ ರಫೇಲ್ ಯುದ್ದ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‍ಎಎಲ್‍ಗೆ ಇರಲಿಲ್ಲ. ಇದು ಯುಪಿಎ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೆಲ್ ಯುದ್ದ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಪ್ರಮಖ ಕಾರಣ. ರಫೇಲ್ ಯುದ್ದ ವಿಮಾನಗಳ ಖರೀದಿ ಸಂಬಂಧ ಎಚ್‍ಎಎಲ್ ಮತ್ತು ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಜೊತೆಗೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಮಾತುಕತೆ ವೇಳೆ ರಫೇಲ್ ಯುದ್ದ ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಮುಂದಾದರೆ ಅದರ ಬೆಲೆ ಮೂಲ ಬೆಲೆಗಿಂತ ದುಪ್ಪಟ್ಟಾಗುವ ವಿಚಾರ ಬೆಳಕಿಗೆ ಬಂದಿತ್ತು. ಒಂದು ವೇಳೆ ವಿಮಾನಗಳನ್ನು ಭಾರತದಲ್ಲೇ ತಯಾರಿಸಿದರೆ, ಅವುಗಳಿಗೆ ಗ್ಯಾರೆಂಟಿ ಕೊಡಬೇಕಾಗಿತ್ತು. ಆದರೆ ವಿಮಾನಗಳಿಗೆ ಗ್ಯಾರಂಟಿ ಕೊಡುವ ಪರಿಸ್ಥಿತಿಯಲ್ಲಿ ಎಚ್‍ಎಎಲ್ ಇರಲಿಲ್ಲ. ಹೀಗಾಗಿ ಡಸಾಲ್ಟ್ ಕಂಪೆನಿಯು ಜಂಟಿಯಾಗಿ ರಫೇಲ್ ವಿಮಾನಗಳನ್ನು ನಿರ್ಮಿಸುವ ಮಾತುಕತೆಯನ್ನು ನಿಲ್ಲಿಸಿತ್ತು ಎಂದು ವಿವರಿಸಿದರು.

    ಯುಪಿಎ ಸರ್ಕಾರದ ಅವಧಿಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ, ಮುಂದಿನ ವರ್ಷ 2019ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ರಫೇಲ್ ಯುದ್ಧವಿಮಾನಗಳು ಸೇನೆಗೆ ಸಿಗಲಿವೆ. ಇವುಗಳು ಶಸ್ತ್ರಬಳಕೆ, ಏವಿಯೋನಿಕ್ಸ್ ತಂತ್ರಜ್ಞಾನ ಹಾಗೂ ಇನ್ನೂ ಅನೇಕ ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿವೆ. 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಫ್ರಾನ್ಸ್’ನೊಂದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಈ ವಿಚಾರದಲ್ಲಿ ಬಹುಕೋಟಿ ಹಗರಣ ನಡೆದಿದ್ದು, ಎಚ್‍ಎಎಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲವೆಂದು ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡುತ್ತಿದೆ ಎಂದು ತಿಳಿಸಿದರು.

    ಕಾಂಗ್ರೆಸ್‍ಗೆ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯಗಳು ಸಿಗಲಿಲ್ಲ. ಹೀಗಾಗಿ ಅವರು ರಫೇಲ್ ಒಪ್ಪಂದದಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಹೇಳಲು ಮುಂದಾದರು. ಆದರೆ ನಮ್ಮದು ದೇಶಕಂಡ ಅತ್ಯಂತ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಎಂಬುದು ಜನರಿಗೆ ಗೊತ್ತಿದೆ. ಹತಾಶಾ ಮನೋಭಾವನೆಗೆ ತಲುಪಿರುವ ಕಾಂಗ್ರೆಸ್ ನಮ್ಮ ಸರ್ಕಾರದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟು ಇವೆ ಎಂದು ಹೇಳಿದರು.

    ರಫೇಲ್ ಒಪ್ಪಂದದ ಕುರಿತು ವಿರೋಧ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಆಸಕ್ತಿ ನಮಗಿಲ್ಲ. ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯು ಹೇಗೆ ಇರಬೇಕೆಂಬುದರ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 526 ಕೋಟಿಗೆ ಒಪ್ಪಂದ ಆಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 1,670 ಕೋಟಿ ರೂಪಾಯಿ ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಾನು ಇಷ್ಟಂತು ಹೇಳಬಲ್ಲೆ, ಯುಪಿಎ ಅವಧಿಯಲ್ಲಿನ ಒಪ್ಪಂದದ ವಿಮಾನಗಳು ಕೇವಲ ಹಾರುವ ಮತ್ತು ಇಳಿಯುವ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದವು. ಆದರೆ ನಮ್ಮ ಅವಧಿಯಲ್ಲಿನ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಸಹಿತ ಶತ್ರುಗಳೊಂದಿಗೆ ಹೋರಾಡುವ ಶಕ್ತಿಯನ್ನು ಸಹ ಹೊಂದಿವೆ ಎಂದು ತಿಳಿಸಿದರು.

    ಏನಿದು ರಫೇಲ್ ಒಪ್ಪಂದ?
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು.

    ಎಚ್‍ಎಎಲ್ ಕೈ ಬಿಡಲು ಕಾರಣಗಳೇನು?
    ಎಚ್‍ಎಎಲ್ ಸಂಸ್ಥೆಗೆ ರಫೇಲ್ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯವಿಲ್ಲವೆಂಬುದೇ ಪ್ರಮುಖ ಕಾರಣ. ಅಲ್ಲದೇ ಎಚ್‍ಎಎಲ್‍ನಲ್ಲಿ ಉತ್ಪಾದನೆಯಾಗುವ ವಿಮಾನಗಳ ವೆಚ್ಚವು ಫ್ರಾನ್ಸ್’ನಲ್ಲಿ ತಯಾರಾಗುವ ವಿಮಾನಗಳ ವೆಚ್ಚಕ್ಕಿಂತ ದುಬಾರಿಯಾಗಿತ್ತು. ಸಂಸ್ಥೆಗೆ ವಿಮಾನಗಳ ಉತ್ಪಾದನೆಗೆ ಬೇಕಾಗುವ ಸಂಪನ್ಮೂಲಗಳ ಬಗ್ಗೆ ಅಂದಿನ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಇದಲ್ಲದೇ 2013ರ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಪದೇ ಪದೇ ಯುದ್ಧ ವಿಮಾನಗಳ ಖರೀದಿ ಮಾತುಕತೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದರಿಂದ ಫ್ರಾನ್ಸ್ ಕಂಪೆನಿಯು ಜಂಟಿ ತಯಾರಿಕೆಗೆ ಹಿಂದೇಟು ಹಾಕಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv