Tag: Rafael Deal

  • 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    – ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪಂಚ ಸವಾಲು
    – 1.1 ಮಿಲಿಯನ್ ಯುರೋ ಗಿಫ್ಟ್

    ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದ ಹೊಸ ತಿರುವು ಪಡೆದುಕೊಂಡಿದೆ. ಫ್ರಾನ್ಸ್ ದೇಶದ ಪಬ್ಲಿಕೇಷನ್ ಮೀಡಿಯಾಪಾರ್ಟ್ ವರದಿ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ.

    ಮೀಡಿಯಾಪಾರ್ಟ್ ವರದಿಯನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಮತ್ತೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನ ಮಾಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಬಿಜೆಪಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ.

    ಗಿಫ್ಟ್ ಟು ಕ್ಲೈಂಟ್: ಈ ಸಂಪೂರ್ಣ ವ್ಯವಹಾರಕ್ಕೆ ಗ್ರಾಹಕರಿಗೆ ಕಾಣಿಕೆ ಶೀರ್ಷಿಕೆಯನ್ನ ನೀಡಲಾಗಿದೆ. ಇದೊಂದು ಪಾರದರ್ಶಕ ವ್ಯವಹಾರವಾಗಿದ್ರೆ ಗಿಫ್ಟ್ ಹೆಸರು ಹೇಳಿದ್ಯಾಕೆ? ಬಹುಶಃ ಇದು ಮುಚ್ಚಿಟ್ಟ ವ್ಯವಹಾರನಾ ಎಂದು ಸುರ್ಜೆವಾಲಾ ಶಂಕೆ ವ್ಯಕ್ತಪಡಿಸಿದ್ದಾರೆ. 60 ಸಾವಿರ ಕೋಟಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಸತ್ಯ ಹೊರ ಬಂದಿದೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಇದು ಫ್ರಾನ್ಸ್ ಏಜೆನ್ಸಿ ವರದಿಯಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

    ಕಾಂಗ್ರೆಸ್ ‘ಪಂಚ’ ಸವಾಲು
    1. 1.1 ಮಿಲಿಯನ್ ಯುರೋ ಗ್ರಾಹಕರಿಗೆ ಗಿಫ್ಟ್ ಎಂದು ಡಸಾಲ್ಟ್ ಅಡಿಟ್ ನಲ್ಲಿ ದಾಖಲಿಸಲಾಗಿದೆ. ಮಧ್ಯಂತರ ವ್ಯಕ್ತಿಗೆ ಕಮೀಷನ್ ನೀಡುವ ಮೂಲಕ ರಫೇಲ್ ಒಪ್ಪಂದ ಆಗಿತ್ತಾ?
    2. ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಒಪ್ಪಂದವಾದಾಗ ಮಧ್ಯಂತರ ಅಥವಾ ಏಜೆಂಟ್ ಹೇಗೆ ಭಾಗಿ ಆಗ್ತಾರೆ?
    3. ಈ ವರದಿ ರಫೇಲ್ ಒಪ್ಪಂದದ ಪಾರದರ್ಶಕತೆಯನ್ನ ಪ್ರಶ್ನೆ ಮಾಡಲ್ವಾ?
    4. ಈ ಡೀಲ್ ಯಾರಿಗೆ, ಎಷ್ಟು ಹಣ ಸಿಕ್ಕಿದೆ ಎಂಬುವುದು ತಿಳಿದುಕೊಳ್ಳಲು ತನಿಖೆಗೆ ಅವಶ್ಯಕತೆ ಇದೆ ಅಲ್ವಾ?
    5. ಪ್ರಧಾನ ಮಂತ್ರಿಗಳು ಈ ಬಗ್ಗೆ ಉತ್ತರ ನೀಡ್ತಾರಾ?

    ಏನಿದು ರಫೇಲ್ ಡೀಲ್?:
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಮೋದಿ ವಿರುದ್ಧ ರಫೇಲ್ ಆರೋಪಗಳೇನು?
    ಏಪ್ರಿಲ್ 10, 2015ರಲ್ಲಿ ಪ್ರಧಾನಿ ಮೋದಿ ರಫೆಲ್ ಒಪ್ಪಂದವನ್ನ ಘೋಷಿಸಿದ್ದರು. ಬಳಿಕ ಹೆಚ್‍ಎಎಲ್ ಪಾಲಾಗಬೇಕಿದ್ದ ರಫೇಲ್ ಯುದ್ಧ ವಿಮಾನ ಉತ್ಪಾದನೆ ವ್ಯವಹಾರ ಅನಿಲ್ ಅಂಬಾನಿಗೆ ವಹಿಸಿದ್ದರು. ಇದು ಸಾಕಷ್ಟು ವ್ಯವಹಾರಗಳಲ್ಲಿ ಕೈ ಸುಟ್ಟುಕೊಂಡು ಸಾಲದ ಹೊರೆಯಲ್ಲಿರುವ ಅಂಬಾನಿಗೆ ಮೋದಿಗೆ ವರದಾನ ನೀಡಿದೆ. ರಫೇಲ್ ವ್ಯವಹಾರ ಘೋಷಿಸುವ ವೇಳೆ ಯಾವುದೇ ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಪ್ರಧಾನಿ ಏಕಪಕ್ಷೀಯವಾಗಿಯೇ ವ್ಯವಹಾರ ಘೋಷಿಸಿದ್ದಾರೆ. ರಕ್ಷಣಾ ಸಚಿವರೂ, ಸಮಿತಿಗೂ ಮಾಹಿತಿ ಇಲ್ಲ. 36 ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತಲೂ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ರಫೇಲ್ ವ್ಯವಹಾರ ಘೋಷಣೆಯಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಕಂಪನಿಯೇ ಅಸ್ತಿತ್ವದಲ್ಲಿ ಇರಲಿಲ್ಲ. ರಫೇಲ್ ಡೀಲ್ ಸಿಕ್ಕ ಕೆಲ ದಿನಗಳ ಬಳಿಕವಷ್ಟೇ ಅನಿಲ್ ಅಂಬಾನಿ ವಿಮಾನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಿದ್ದರು. 126 ವಿಮಾನಗಳಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳ ಖರೀದಿ ಮಾಡಲಾಗಿದೆ. 108 ವಿಮಾನಗಳನ್ನು `ಭಾರತದಲ್ಲೇ ಉತ್ಪಾದಿಸಿ’ ಸಹಭಾಗಿತ್ವದಲ್ಲಿ ಭಾರತದಲ್ಲೇ ಉತ್ಪಾದನೆಗೆ ಒಪ್ಪಿಗೆ ನೀಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿತ್ತು. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ಮೋದಿ ಅನಿಲ್ ಅಂಬಾನಿಯ ದಲ್ಲಾಳಿ: ರಾಹುಲ್ ಗಾಂಧಿ ಆರೋಪ

  • ಎಚ್‍ಎಎಲ್ ಕುರಿತ 4 ಪ್ರಶ್ನೆಗಳಿಗೆ ಉತ್ತರಿಸಿ ರಾಹುಲ್ ಜೀ: ಕರ್ನಾಟಕ ಬಿಜೆಪಿಯಿಂದ ಸವಾಲು

    ಎಚ್‍ಎಎಲ್ ಕುರಿತ 4 ಪ್ರಶ್ನೆಗಳಿಗೆ ಉತ್ತರಿಸಿ ರಾಹುಲ್ ಜೀ: ಕರ್ನಾಟಕ ಬಿಜೆಪಿಯಿಂದ ಸವಾಲು

    ಬೆಂಗಳೂರು: ರಫೇಲ್ ಒಪ್ಪಂದವನ್ನು ಖಾಸಗಿ ಸಂಸ್ಥೆಗೆ ನೀಡಿ ಮೋದಿ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ರಾಹುಲ್ ಗಾಂಧಿ ಮುಂದೆ 4 ಪ್ರಶ್ನೆಗಳನ್ನು ಕೇಳಿ ಉತ್ತರಿಸಿ ಎಂದು ಬಹಿರಂಗ ಸವಾಲು ಎಸೆದಿದೆ.

    ರಾಹುಲ್ ಗಾಂಧಿ ಅನಧಿಕೃತವಾಗಿ ಸಂವಾದ ನಡೆಸುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರಾದ ಶಾಸಕ ಸಿಟಿ ರವಿ, ಮುಖಂಡ ಅಶ್ವತ್ಥ ನಾರಾಯಣ್ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ಬಿಜೆಪಿಯ 4 ಪ್ರಶ್ನೆಗಳು
    1. ಜನವರಿ 2012ರಲ್ಲಿ, ಭಾರತೀಯ ವಾಯು ಸೇನೆಗಾಗಿ 126 ಎಂಎಂ ಆರ್‍ಸಿಎ ವಿಮಾನಗಳನ್ನು ಖರೀದಿಸುವುದಕ್ಕಾಗಿ ದಸಾಲ್ಟ್ ಏವಿಯೇಷನ್ ಸಂಸ್ಥೆಯನ್ನು ಯುಪಿಎ ಸರ್ಕಾರ ಎಲ್1 ಎಂದು ಘೋಷಿಸಿತ್ತು. ಆದರೆ 2014 ರ ವರೆಗೂ ಒಪ್ಪಂದವನ್ನು ಅಂತಿಮಗೊಳಿಸಿರಲಿಲ್ಲ. ಇದು ರಾಷ್ಟ್ರದ ಸುರಕ್ಷತೆಯೊಂದಿಗೆ ಯುಪಿಎ ಸರ್ಕಾರ ಮಾಡಿಕೊಂಡ ರಾಜಿಯಲ್ಲವೇ?

    2. ನೀವು ಇಂದು ಎಚ್‍ಎಎಲ್ ನೌಕರರೊಂದಿಗೆ ಸಂವಾದ ಕಾರ್ಯಕ್ರಮ ಆಗಮಿಸಿದ್ದೀರಿ. ಆದರೆ ಯುಪಿಎ ಸರ್ಕಾರವಿದ್ದಾಗ 2012-2014 (ಅವಧಿಯೊಗಳಗೆ) ದಸಾಲ್ಟ್ ಮತ್ತು ಎಚ್‍ಎಎಲ್ ನಡುವಿನ ರಫೇಲ್ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸದೇ ಇದ್ದದ್ದು ನೀವು ಎಚ್‍ಎಎಲ್ ಗೆ ಮಾಡಿದ ದ್ರೋಹವಲ್ಲವೇ? ಈ ಮೂಲಕ ನಿಮ್ಮ ಸರ್ಕಾರ ಎಚ್‍ಎಎಲ್ ಗೆ ದ್ರೋಹ ಬಗೆದು ಅವರನ್ನು ರಫೇಲ್ ಒಪ್ಪಂದದಿಂದ ಆಚೆ ದೂಡಿದೆ ಅಲ್ಲವೇ?

    3. ಯುಪಿಎ ಸರ್ಕಾರ 126ಎಂಎಂಆರ್‍ಸಿಎ ಖರೀದಿಗೆ 2007ರಲ್ಲೇ ಪ್ರಸ್ತಾಪ (ಆರ್‍ಎಫ್‍ಪಿ) ಹೊರಡಿಸಿತ್ತು. ಆದರೆ 2014ರಲ್ಲಿ ನಿಮ್ಮ ಸರ್ಕಾರದ ಪತನದವರೆಗೂ, ರಫೇಲ್ ಒಪ್ಪಂದವನ್ನು ಅಂತಿಮಗೊಳಿಸದೇ ಭಾರತದೊಂದಿಗೆ ಇಂತಹ ಒಪ್ಪಂದಗಳನ್ನು ಕೈಗೊಳ್ಳವುದು ಕಠಿಣ ಎಂಬಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಜೊತೆ ವ್ಯವಹಾರ ನಡೆಸುವ ರೀತಿ ಕುರಿತು ದುರಭಿಪ್ರಾಯವನ್ನು ಮೂಡಿಸಿದ್ದು ಯಾಕೆ?

    4. ಸಾರ್ವಜನಿಕ ಸಭೆಗಳಲ್ಲಿ ರಫೇಲ್ ಖರೀದಿ ಕುರಿತ ಸುಳ್ಳು ಮತ್ತು ಅಸಮಂಜಸ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದೀರಿ. ನೀವು ಹೊರಡಿಸಿದ 2007ರ ಆರ್‍ಎಫ್‍ಪಿ ಪ್ರಕಾರ ಗ್ರೀನ್ ವಿಮಾನ ದರ 737 ಕೋಟಿ ರೂ.ಗಳು, 2015 ರಲ್ಲಿ ಅದೇ ಗ್ರೀನ್ ರಫೇಲ್ ವಿಮಾನಕ್ಕೆ ಎನ್‍ಡಿಎ ಸರ್ಕಾರ ಅಂತಿಮಗೊಳಿಸಿದ್ದು 670 ಕೋಟಿ ರೂ., ಅಂದರೆ 9% ಕಡಿಮೆ ದರ. ಈ ಎಲ್ಲಾ ಸತ್ಯಗಳನ್ನು ಮುಚ್ಚಿಟ್ಟು ದೇಶದ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದೀರಲ್ಲವೇ?

     

  • ಪ್ರಧಾನಿ ಮೋದಿ ಓರ್ವ ದರೋಡೆಕೋರ: ವೀರಪ್ಪ ಮೊಯ್ಲಿ

    ಪ್ರಧಾನಿ ಮೋದಿ ಓರ್ವ ದರೋಡೆಕೋರ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಮೋದಿ 48,000 ಕೋಟಿ ರೂಪಾಯಿ ದರೋಡೆ ಮಾಡಿದ್ದಾರೆ ಅಂತ ಸಂಸದ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

    ನಗರದ ಶಿಡ್ಲಘಟ್ಟ ವೃತ್ತದಲ್ಲಿ ರಫೆಲ್ ಯುದ್ಧ ವಿಮಾನ ಖರೀದಿ ವಿಚಾರ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಮೊಯ್ಲಿ, ಈ ಹಿಂದೆ ಯುಪಿಎ ಸರ್ಕಾರ ಸರ್ಕಾರಿ ಸ್ವಾಮ್ಯದ ಎಚ್ ಎ ಎಲ್ ಕಂಪೆನಿಗೆ ರಫೆಲ್ ಯುದ್ಧ ವಿಮಾನ ತಯಾರಿಗೆ ಅವಕಾಶ ಮಾಡಿಕೊಟ್ಟಿತ್ತು. ಪ್ರಧಾನಿ ಮೋದಿ ಈಗ ತಮ್ಮ ಸ್ನೇಹಿತ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿಗೆ ಯುದ್ಧ ವಿಮಾನ ನಿರ್ಮಾಣ ಗುತ್ತಿಗೆ ಕೊಡಿಸಿದ್ದಾರೆ. ಮೋದಿಯವರೇ ಮುಂದೆ ನಿಂತು ಈ ಕೆಲಸ ಮಾಡಿದ್ದಾರೆ. ಇದು ದೇಶದ ಅತ್ಯಂತ ದೊಡ್ಡ ಹಗರಣವಾಗಿದ್ದು, 48,000 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಮೊಯ್ಲಿ ವಾಗ್ದಾಳಿ ನಡೆಸಿದರು.

    ಈ ಹಗರಣದ ಹಣದಲ್ಲಿ ಮೋದಿ ಏನ್ ಬೇಕಾದರೂ ಮಾಡುತ್ತಾರೆ. ಕರ್ನಾಟಕದಲ್ಲಿ ಅಪರೇಷನ್ ಕಮಲ ಮಾಡೋಕೆ ಒಬ್ಬ ಎಂಎಲ್‍ಎ ಗೆ 50 ಕೋಟಿ ರೂ. ಕೊಡುತ್ತಾರಂತೆ. ಅದಲ್ಲದೆ ಚುನಾವಣೆಗೆ 50 ಕೋಟಿ ಕೊಡುತ್ತಾರಂತೆ. ಹೀಗೆ ಇಂತಹ ಹಣವನ್ನ ಮೋದಿ, ಅಮಿತ್ ಶಾ ಚುನಾವಣೆಗೆ ಬಳಸುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಈ ಹಗರಣದ ಬಗ್ಗೆ ರಾಹುಲ್ ಗಾಂಧಿ ಮೊದಲೇ ಹೇಳುತ್ತಿದ್ದರು. ಆದರೆ ದರೋಡೆಕೋರ ಮೋದಿಗೆ ಯಾವುದೇ ನಾಚಿಕೆ ಗೌರವ ಇಲ್ಲ ಅಂತ ಮೋದಿ ವಿರುದ್ಧ ಖಾರವಾಗಿ ಮಾತನಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv