Tag: Radish

  • ಆರೋಗ್ಯಕರವಾದ ಸೊಪ್ಪಿನ ಸಾರು ಮಾಡುವ ವಿಧಾನ

    ಆರೋಗ್ಯಕರವಾದ ಸೊಪ್ಪಿನ ಸಾರು ಮಾಡುವ ವಿಧಾನ

    ಊಟಕ್ಕೆ ಯಾವ ಸಾಂಬರ್‌ ಮಾಡಬೇಕು ಎನ್ನುವ ಯೋಚನೆ ಇದ್ದೆ ಇರುತ್ತದೆ. ಅನ್ನ ಮಾಡಿ ಸಾರು ಮಾಡುವ ಯೋಚನೆ ಇದ್ದರೆ ಇಂದು ಸೊಪ್ಪಿನ ಸಾರು ಮಾಡಿ ಸಖತ್‌ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದಾಗಿದೆ. ಸಾರು ಮಾಡುವುದು ಸುಲಭ ಮತ್ತು ಸರಳವಾಗಿದೆ.
    ಬೇಕಾಗುವ ಸಾಮಗ್ರಿಗಳು:
    * ಮೂಲಂಗಿ ಸೊಪ್ಪು(ನಿಮಗೆ ಬೇಕಾದ ಸೋಪ್ಪು ಆಯ್ಕೆ ಮಾಡಿಕೊಳ್ಳಿ)
    * ಟೊಮೆಟೋ-2
    * ಈರುಳ್ಳಿ-1
    * ಅರಿಶಿಣ- 1ಚಮಚ
    * ರುಚಿಗೆ ತಕ್ಕಷಟು ಉಪ್ಪು
    * ಬೆಲ್ಲ- 1 ಚಮಚ
    * ತೊಗರಿ ಬೇಳೆ – ಅರ್ಧ ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ದನಿಯಾ – ಸ್ವಲ್ಪ
    * ಜೀರಿಗೆ – 1 ಚಮಚ
    * ಉದ್ದಿನ ಬೇಳೆ- 4 ಚಮಚ
    * ಮೆಂತ್ಯ ಬೀಜಗಳು- ಸ್ವಲ್ಪ
    * ಒಣಗಿದ ಕೆಂಪು ಮೆಣಸಿನಕಾಯಿ- 4 ರಿಂದ 5
    * ಕರಿಬೇವಿನ ಎಲೆಗಳು- ಸ್ವಲ್ಪ
    * ತೆಂಗಿನಕಾಯಿ ತುರಿ- ಅರ್ಧ ಕಪ್
    * ಹುಣಸೆ ಹುಳಿ- ಸ್ವಲ್ಪ
    * ಲವಂಗ, ಬೆಳ್ಳುಳ್ಳಿ-2
    * ಸಾಸಿವೆ- 1 ಚಮಚ

    ಮಾಡುವ ವಿಧಾನ:
    * ಮೂಲಂಗಿ ಸೊಪ್ಪು, ಟೊಮೆಟೊ, ಈರುಳ್ಳಿ, ಅರಿಶಿಣ, ನೀರು ಮತ್ತು ಟೀಸ್ಪೂನ್ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

    * ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಜೀರಿಗೆ, ಉದ್ದಿನ ಬೇಳೆ, ಮೆಂತೆ, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಹುರಿಯಬೇಕು. ಇದನ್ನೂ ಓದಿ: ಪನೀರ್ ಭುರ್ಜಿ ಮಾಡುವುದು ಹೇಗೆ ಗೊತ್ತಾ?

    * ಹುರಿದ ಮಸಾಲೆಗಳು, ತೆಂಗಿನಕಾಯಿ, ಹುಣಸೆಹಣ್ಣು ಮತ್ತು 1 ಲವಂಗ ಬೆಳ್ಳುಳ್ಳಿ ಸೇರಿಸಿ ಮಸಾಲೆ ರುಬ್ಬಿಕೊಳ್ಳಬೇಕು.
    * ಮಸಾಲಾ ಪೇಸ್ಟ್ ಹಾಗೂ ಬೇಯಿಸಿದ ಮೂಲಂಗಿ ಸೊಪ್ಪು, ಬೆಲ್ಲ, ಉಪ್ಪು, ಬೇಯಿಸಿದ ತೊಗರಿ ಬೇಳೆ ಸೇರಿಸಿ ಮಿಶ್ರಣ ಮಾಡಬೇಕು.
    * ಬೇಯಿಸಿದ ತೊಗರಿ ಬೇಳೆ ಸೇರಿಸಿ ಕುದಿಸಬೇಕು. ಇದನ್ನೂ ಓದಿ: ಕ್ಯಾಪ್ಸಿಕಂ ಚಟ್ನಿ ಮಾಡಿ ಅಕ್ಕಿ ರೊಟ್ಟಿ ಜೊತೆಗೆ ಸೂಪರ್

    * ಈಗ ಅಡುಗೆ ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಬಿಸಿ ಮಾಡಿ.
    * ಕುದಿಯುತ್ತಿರುವ ಸಾರಿನ ಮೇಲೆ ಒಗ್ಗರಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಾರು ಸಿದ್ಧವಾಗುತ್ತದೆ.

  • ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರುಚಿಯಾದ ಮೂಲಂಗಿ ಪರೋಟ ಮಾಡುವ ವಿಧಾನ ನಿಮಗಾಗಿ

    ರೋಟ ಎಂದರೆ ಕೆಲವರು ಇಷ್ಟ ಪಟ್ಟು ಸವಿಯುತ್ತಾರೆ. ನಾವು ಇಂದು ಪರೋಟ ಪ್ರಿಯರಿಗಾಗಿ ಮೂಲಂಗಿ ಪರೋಟವನ್ನು ಮಾಡುವ ವಿಧಾನವನ್ನು ನಾವು ಹೇಳಲಿದ್ದೇವೆ. ಮೂಲಂಗಿಯೊಂದಿಗೆ ಮಿಶ್ರ ಮಾಡುವ ಮಸಾಲೆ ಪದಾರ್ಥಗಳು ಈ ಪರೋಟದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸತ್ವಪೂರ್ಣ ತಿಂಡಿಯನ್ನು ನಿಮಗೆ ಒದಗಿಸುತ್ತದೆ. ಹಾಗಿದ್ದರೆ ಅತಿ ಸುಲಭವಾಗಿ ತಯಾರಿಸಬಹುದಾದ ಈ ಪರೋಟ ರೆಸಿಪಿಯ ತಯಾರಿ ವಿಧಾನವನ್ನು ಕೆಳಗೆ ನಾವು ನೀಡಿದ್ದೇವೆ. ಇಂದೆ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಮೂಲಂಗಿ – 2 ಕಪ್
    * ಈರುಳ್ಳಿ – 1
    * ಬೆಳ್ಳುಳ್ಳಿ ಪೇಸ್ಟ್ – 3 ಚಮಚ
    * ಜೀರಿಗೆ ಪುಡಿ – 1 ಚಮಚ
    * ಗರಮ್ ಮಸಾಲಾ -1 ಚಮಚ
    * ಕಾಳುಮೆಣಸು ಪುಡಿ- 1 ಚಮಚ
    * ದನಿಯಾ ಪುಡಿ – 3 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಗೋಧಿ ಹಿಟ್ಟು- 1 ಕಪ್
    * ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
    * ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದಿನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿಕೊಳ್ಳಿ. ಇದನ್ನೂ ಓದಿ:  ಕೆಲವೇ ಸಾಮಗ್ರಿಗಳಲ್ಲಿ ಮಾಡಿ ರುಚಿಯಾದ ಮೊಟ್ಟೆ ಪಲ್ಯ

    * ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ.
    * ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ.
    * ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿಕೊಳ್ಳಿ.

    * ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ. 10. ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿಕೊಳ್ಳಿ.

  • ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಡುಗೆಗೆ ಬಳಸುವ ತರಕಾರಿಯಲ್ಲಿ ಕೆಲವೊಂದು ಮಾತ್ರ ಆಯ್ಕೆ ಮಾಡಿಕೊಂಡು ತಿನ್ನುವುದು ಹೆಚ್ಚು. ಆದರೆ ನಾವು ಬೇಡ ಎಂದು ದೂರ ತಳ್ಳುವ ಮೂಲಂಗಿಯಿಂದ ನಮ್ಮ ಆರೋಗ್ಯಕ್ಕೆ ಹಲವು ಉತ್ತಮ ಪೋಷಕಾಂಶಗಳು ಸಿಗುತ್ತವೆ. ಮೂಲಂಗಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಸಿಗುವ ಅಂಶಗಳನ್ನು ಕೇಳಿದರೆ ಖಂಡಿತವಾಗಿಯೂ ಮೂಲಂಗಿಯನ್ನು ತಿನ್ನಲು ಪ್ರಾರಂಭಿಸುತ್ತಿರಿ.

    * ಪ್ರತಿದಿನ ಬೆಳಗ್ಗೆ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಅಲ್ಲದೆ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು
    * ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ.
    * ಮೂಲಂಗಿ ರಸದೊಂದಿಗೆ ಶುಂಠಿ ರಸವನ್ನು ಬೆರಸಿ ಕುಡಿಯುವುದರಿಂದ ಹಸಿವು ಹೆಚ್ಚುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತದೆ.

    * ಒಂದು ಚಮಚ ಜೇನು ತುಪ್ಪಕ್ಕೆ, ಒಂದು ಚಮಚ ಮೂಲಂಗಿ ರಸ ಸೇರಿಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.
    * ಮೂಲಂಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
    * ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಮೂಲಂಗಿ ರಾಮಬಾಣದಂತೆ ಕೆಲಸ ಮಾಡುತ್ತದೆ.
    * ಮೂಲಂಗಿ ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರಿದು ಚೇಳು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ಚೇಳಿನ ವಿಷ ಏರುವುದಿಲ್ಲ

    ಮೂಲಂಗಿಯಿಂದ ಆರೋಗ್ಯಕ್ಕೆ ಬೇಕಾಗುವ ಉತ್ತಮ ಪ್ರಮಾಣದ ಫೈಬರ್ ಸಿಗುತ್ತದೆ. ಮೂಲಂಗಿಯನ್ನು ಬೇಡ ಎಂದು ದೂರ ತಳ್ಳುವ ಬದಲಾಗಿ ಇನ್ನಾದರೂ ಪ್ರತಿನಿತ್ಯದ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಾದರೂ ಸೇರಿಸಿಕೊಳ್ಳಿ.