ಹಾಸನ: ಜಿಲ್ಲೆಯ ಹಲವೆಡೆ ಕಾಡಾನೆ ಹಾವಳಿಗಳು ಮುಂದುವರೆದಿದ್ದು, ಆನೆಗಳ ಚಲನವಲನದ ಬಗ್ಗೆ ಗಮನಹರಿಸಲು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿದೆ. ಎರಡನೇ ದಿನದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬೇಲೂರಿನ ಬಿಕ್ಕೋಡು ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನಲೆ ಶುಕ್ರವಾರ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿತ್ತು. ಇಂದು ಶನಿವಾರ ಅರವಳಿಕೆ ತಜ್ಞರು ಹೆಣ್ಣಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಸ್ವಲ್ಪ ಓಡಿದ ಹೆಣ್ಣಾನೆ ಆಮೇಲೆ ನಿಂತಿದೆ. ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ರೇಡಿಯೋ ಕಾಲರ್ ಅಳವಡಿಸಿ ಅದೇ ಎಸ್ಟೇಟ್‌ನಲ್ಲೇ ಕಾಡಾನೆಯನ್ನು ಬಿಡಲಾಗಿದೆ.
ಸಾಕಾನೆ ಭೀಮಾ ನೇತೃತ್ವದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆದಿದ್ದು ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಹೆಸರಿನ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಹಾಸನ: ಕಾಡಾನೆ ಚಲನ-ವಲನ ಅರಿಯಲು ಕಳೆದೆರಡು ದಿನಗಳ ಹಿಂದಷ್ಟೇ ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲೂಕಿನ ಬಿಕ್ಕೋಡು ಬಳಿ ಕಾಡಾನೆಯೊಂದಕ್ಕೆ (Wild Elephant) ಅಳವಡಿಸಿದ್ದ ರೇಡಿಯೋ ಕಾಲರ್ (Radio collar) ಅದರ ಕುತ್ತಿಗೆಯಿಂದ ಕಳಚಿ ಬಿದ್ದಿದೆ.
ಶುಕ್ರವಾರ ಓಲ್ಡ್ ಬೆಲ್ಟ್‌ನ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಆದರೆ ಅದು ಹಳೇಬೀಡು ಹೋಬಳಿ ಕೋಡಿಹಳ್ಳಿ ಗ್ರಾಮದ ಬಳಿ ಬಿದ್ದು ಹೋಗಿದೆ. 6 ಸಾಕಾನೆಗಳೊಂದಿಗೆ ಶುಕ್ರವಾರ ಸುದೀರ್ಘ ಕಾರ್ಯಾಚರಣೆ ನಡೆಸಿ ಓಲ್ಡ್ ಬೆಲ್ಟ್ ಹೆಸರಿನ ಗುಂಪಿನಲ್ಲಿರುವ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.
ಚಿಕ್ಕಬಿಕ್ಕೋಡು ಬಳಿ 6 ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ರೇಡಿಯೋ ಕಾಲರ್ ಅಳವಡಿಸಿದ ನಂತರ ಹೆಣ್ಣಾನೆಯನ್ನು ಅಲ್ಲೇ ಕಾಫಿ ತೋಟದೊಳಗೆ ಇದ್ದ ಹಿಂಡಿನೊಂದಿಗೆ ಬಿಡಲಾಗಿತ್ತು. ಇದೀಗ ಹೆಣ್ಣಾನೆ ರೇಡಿಯೋ ಕಾಲರನ್ನೇ ಬೀಳಿಸಿಕೊಂಡು ಹೋಗಿದ್ದು, ಶ್ರಮವಹಿಸಿ ಅಳವಡಿಸಿದ್ದ ಕಾಲರ್ ವ್ಯರ್ಥವಾಗಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!
ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ. ಕಳೆದ ಶುಕ್ರವಾರ ಒಂದು ಕಾಡಾನೆಗೆ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ಒಟ್ಟುಗೂಡಿ ರೇಡಿಯೋ ಕಾಲರ್ ಹಾಕಲಾಗಿತ್ತು.
ಆದರೆ ಅದು ಈಗ ಕಳಚಿ ಬಿದ್ದಿದೆ. ಆದರೂ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸ. ಬೆಲ್ಟ್ ಅಳವಡಿಸುವಾಗ ಭದ್ರತಾ ಕ್ರಮ ಅನುಸರಿಸದೇ ಇರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಜನ ಸಾಮಾನ್ಯರ ತೆರಿಗೆ ಹಣ ಹೀಗೆ ಪೋಲು ಮಾಡಿರುವುದು ಖಂಡನೀಯ. ಇನ್ನಾದರೂ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 4ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭ
ಭೋಪಾಲ್: ಕಳೆದ ವಾರ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) 2 ಚೀತಾಗಳು (Cheetah) ಸಾವನ್ನಪ್ಪಿದ್ದು, ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ನ (Radio Collar) ಸುತ್ತಲೂ ತೀವ್ರವಾದ ಗಾಯಗಳು ಕಂಡುಬಂದಿತ್ತು. ಇದೀಗ ರೇಡಿಯೋ ಕಾಲರ್‌ನಿಂದಾಗಿ ಮತ್ತೊಂದು ಚೀತಾಗೆ ತೀವ್ರ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಇತ್ತೀಚೆಗೆ ತೇಜಸ್ ಹಾಗೂ ಸೂರಜ್ ಎಂಬ ಚೀತಾಗಳ ಸಾವಿನ ಬಳಿಕ ವೈದ್ಯರ ತಂಡ ಪವನ್ ಎಂಬ ಚೀತಾವನ್ನು ಪ್ರಜ್ಞಾಹೀನಗೊಳಿಸಿ, ಅದನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅದರ ಕುತ್ತಿಗೆಗೆ ಜೋಡಿಸಲಾಗಿದ್ದ ರೇಡಿಯೋ ಕಾಲರ್‌ನ ಸುತ್ತ ನಂಜು ಹಾಗೂ ತೀವ್ರವಾದ ಗಾಯ ಕಂಡುಬಂದಿದೆ. ತಕ್ಷಣವೇ ಅದರ ರೇಡಿಯೋ ಕಾಲರ್ ಅನ್ನು ತೆಗೆದುಹಾಕಲಾಗಿದ್ದು, ಸೋಂಕನ್ನು ಗುಣಪಡಿಸಲು ಚಿಕಿತ್ಸೆ ಪ್ರಾರಂಭಿಸಿದ್ದಾರೆ.
ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಪರಿಸ್ಥಿತಿಯ ತೀವ್ರತೆಯನ್ನು ಗುರುತಿಸಿ ಚಿಕಿತ್ಸೆಯಲ್ಲಿ ಇನ್ನಷ್ಟು ಸಹಾಯ ಮಾಡಲು ಗ್ವಾಲಿಯರ್ ಹಾಗೂ ಭೋಪಾಲ್‌ನಿಂದ ಹೆಚ್ಚುವರಿ ನಾಲ್ವರು ವೈದ್ಯರನ್ನು ಕರೆಸಲಾಗಿದೆ. 8 ವೈದ್ಯರ ತಂಡ ಚೀತಾಗಳನ್ನು ಶಾಂತಗೊಳಿಸಲು ಹಾಗೂ ಅಗತ್ಯ ಔಷಧಿಗಳನ್ನು ನೀಡಲು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: 2 ಚೀತಾಗಳ ಸಾವಿಗೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್!
ಸದ್ಯ ರೇಡಿಯೋ ಕಾಲರ್‌ಗಳಿಲ್ಲದಿದ್ದರೂ ಚೀತಾಗಳ ಚಲನವಲನಗಳ ಬಗ್ಗೆ ಗಮನಹರಿಸಲು ಡ್ರೋನ್ ಕ್ಯಾಮೆರಾಗಳ ಬಳಕೆ ಸಹಾಯವಾಗಲಿದೆ. ಭಾರತದಲ್ಲಿ ಚೀತಾಗಳ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕಳೆದ ವರ್ಷ ನಮೀಬಿಯಾ ಹಾಗೂ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ತರಿಸಲಾಯಿತು. ಆದರೆ ಕಳೆದ 5 ತಿಂಗಳಿನಿಂದ ಅವುಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿವೆ. ಇದನ್ನೂ ಓದಿ: ISI ನಂಟಿನ ಶಂಕೆ – ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ತೀವ್ರ ವಿಚಾರಣೆ
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇತ್ತೀಚೆಗೆ ಕೇವಲ 3 ದಿನಗಳ ಅಂತರದಲ್ಲಿ 2 ಚೀತಾಗಳು (Cheetah) ಸಾವನ್ನಪ್ಪಿದ್ದವು. ಅವುಗಳ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್‌ಗಳಿಂದ (Radio Collar) ಉಂಟಾಗಿದ್ದ ಸೋಂಕೇ ಆ 2 ಚೀತಾಗಳ ಸಾವಿಗೆ ಕಾರಣ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿತ್ತು. ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಆದರೆ ಬಳಿಕ ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ ಅದರ ಸಾವಿಗೆ ಕಾರಣ ಎಂಬುದು ತಿಳಿದುಬಂದಿದೆ.
ತೇಜಸ್ ಹಾಗೂ ಸೂರಜ್ ಎರಡೂ ಚೀತಾಗಳ ಕತ್ತಿನ ಸುತ್ತಲೂ ರೇಡಿಯೋ ಕಾಲರ್‌ಗಳಿಂದಾಗಿ ಸೋಕು ಉಂಟಾಗಿದ್ದು, ಅದರ ಗಾಯಗಳಿಂದಾಗಿ ಅವು ಸಾವನ್ನಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದು ಕಳವಳಕ್ಕೆ ಕಾರಣವಾಗಿದೆ ಎಂದು ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ರಾಜೇಶ್ ಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಮತ್ತೊಂದು ಚೀತಾ ಸಾವು – 4 ತಿಂಗಳಲ್ಲಿ 8ನೇ ಘಟನೆ
ಇದೀಗ ರೇಡಿಯೋ ಕಾಲರ್ ಅಳವಡಿಸಲಾಗಿರುವ ಎಲ್ಲಾ ಚೀತಾಗಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಈ ಘಟನೆಗಳು ದುರದೃಷ್ಟಕರವಾಗಿದ್ದರೂ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಚೀತಾದ ಸಂತತಿಯ ಪುನರುತ್ಥಾನದ ಯೋಜೆನೆಯ ಅನುಷ್ಠಾನದಲ್ಲಿ ನೈಸರ್ಗಿಕ ಸಾವು ಸಹಜ. ಇದು ಸರಾಸರಿ ಸಾವಿನ ಪ್ರಮಾಣವನ್ನು ದಾಟಿಲ್ಲ. ಭಾರತಕ್ಕೆ ತರಲಾಗಿರುವ ಚೀತಾಗಳ ಪೈಕಿ 75% ರಷ್ಟು ಜೀವಂತವಾಗಿದ್ದು, ಆರೋಗ್ಯವೂ ಆಗಿವೆ. ಹೀಗಾಗಿ ಈ ಬಗ್ಗೆ ಆತಂಕ ಪಟುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ
-ಕೋವಿಡ್ 19 ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯಾಚರಣೆ
ಹಾಸನ: ಜಿಲ್ಲೆಯ ಸಕಲೇಶಪುರ, ಅಲೂರು ಭಾಗದಲ್ಲಿ ಉಪಟಳ ನೀಡುತಿದ್ದ ಎರಡೂ ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದ್ದು, ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ ಬಸವರಾಜ್ ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ನಡೆದ ಆನೆಗಳ ಸರೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿ, ಆನೆಗಳ ಮಾವುತರು, ಆರೈಕೆಗಾರರೆಲ್ಲರಿಗೂ ಒಂದು ದಿನ ಮೊದಲೇ ಕೋವಿಡ್ ಪರೀಕ್ಷೆ ನಡೆಸಿ ಸೋಂಕು ಇಲ್ಲದೆ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮಾಡಲಾಯಿತು. ಇದನ್ನು ಓದಿ: ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!
ಮೂರು ದಿನಗಳ ಕಾರ್ಯಾಚರಣೆ ಯೋಜನೆ ರೂಪಿಸಿಕೊಳ್ಳಲಾಗಿತ್ತು. ಆದರೆ ಸಮರ್ಥ ಹಾಗೂ ನುರಿತ ಅಧಿಕಾರಿಗಳು, ಸಿಬ್ಬಂದಿ, ಅಭಿಮನ್ಯು ಸೇರಿಂದಂತೆ ಅನುಭವಿ ಆನೆಗಳ ಪ್ರಯತ್ನದಿಂದ ಒಂದೇ ದಿನದಲ್ಲಿ ಎರಡೂ ಆನೆಗಳು ಸೆರೆ ಸಿಕ್ಕಿದೆ. ಎರಡೂ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ದೂರದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.