Tag: radhika

  • ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ: ನಗರದ ಎಸ್ಪಿ ರಾಧಿಕಾ ನಿವಾಸದಲ್ಲಿ ಆರ್ಡಲಿ ಪದ್ಧತಿ ಇದ್ದು, ತಮ್ಮ ಮನೆ ಕೆಲಸಕ್ಕೆ 18 ಜನ ಪೇದೆಗಳ ನಿಯೋಜನೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ತಮ್ಮ ನಿವಾಸದ ಗಾರ್ಡನ್ ಮತ್ತು ಬಟ್ಟೆ ತೊಳೆಯುವ ಕೆಲಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ತಮ್ಮ ಮನೆ ಕೆಲಸಕ್ಕೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಸ್ವತಃ ಅವರೇ ಈ ಬಗ್ಗೆ ಮಾತನಾಡಿದ್ದು, ನಾನು ಅನಧಿಕೃತವಾಗಿ ಯಾವುದೇ ಸಿಬ್ಬಂದಿಗಳಿಂದ ನಮ್ಮ ಮನೆ ಕೆಲಸ ಮಾಡಿಸುತ್ತಿಲ್ಲ ಎಂದು ಎಸ್‍ಪಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

    ಸರ್ಕಾರ ಓರ್ವ ಉನ್ನತ ಅಧಿಕಾರಿಯ ಸಹಾಯಕ್ಕಾಗಿ ಕೊಟ್ಟಿರುವ ಸೌಲಭ್ಯವನ್ನೆ ಬಳಸಿಕೊಳ್ಳುತ್ತಿದ್ದೇನೆ. ಸಹಾಯಕರಿಲ್ಲದೆ ಓರ್ವ ಅಧಿಕಾರಿಯಾಗಿ ಹೇಗೆ 24 ಗಂಟೆ ಕೆಲಸ ಮಾಡೋದು, ಕೊಟ್ಟಿರುವ ಸಿಬ್ಬಂದಿಗಳಿಂದ ನಾನು ಯಾವುದೇ ನನ್ನದಾಗಲಿ, ನನ್ನ ಮನೆಯದಾಗಲಿ ಅಥವಾ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಫೋನ್ ರಿಸೀವ್ ಮಾಡಲು, ಭದ್ರತೆ ನೀಡಲು ಮತ್ತು ಕಚೇರಿ ಸಹಾಯಕ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

    ಇದೇ ವೇಳೆ ಯಾರೋ ನಮ್ಮ ಇಲಾಖೆಯವರೇ ಆಗದವರು ಈ ರೀತಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸಿದ್ದಾರೆ. ನಮ್ಮಲ್ಲಿ ಆ ರೀತಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಮಾಲಿ ಕೆಲಸ ಮಾಡಿಸುತ್ತಿಲ್ಲ. ಗೊಂದಲ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತಿಳಿಸಿದ್ದಾರೆ.

  • ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಶೂಟಿಂಗ್ ಸೆಟ್ ನಿಂದ ಸನ್ ಗ್ಲಾಸ್ ಕದ್ದ ರಾಧಿಕಾ ಪಂಡಿತ್!

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ರಾಧಿಕಾ ಒಂದು ವಸ್ತುವನ್ನ ಕದ್ದು ತಂದಿದ್ದಾರೆ. ಈ ಬಗ್ಗೆ ಖುದ್ದು ರಾಧಿಕಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

    ಯಶ್ ಅವರನ್ನು ಭೇಟಿ ಮಾಡಲು ರಾಧಿಕಾ `ಕೆಜಿಎಫ್ ಸೆಟ್’ ಗೆ ಹೋಗಿದ್ದರು. ಅಲ್ಲಿಂದ ಸ್ಪೆಷಲ್ ಆಗಿ ಕಣ್ಣಿಗೆ ಕಂಡ ಒಂದು ವಸ್ತುವನ್ನು ತೆಗೆದುಕೊಂಡು ಬಂದಿದ್ದಾರೆ. ರಾಧಿಕಾ ಕೆಜಿಎಫ್ ಸೆಟ್ ನಲ್ಲಿದ್ದ ಹಳದಿ ಬಣ್ಣ ಸನ್ ಗ್ಲಾಸ್ ಅನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ತೆಗೆದುಕೊಂಡು ಬಂದಿದ್ದಾರೆ. ನಂತರ ಅದನ್ನು ಹಾಕಿಕೊಂಡು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

    ಆ ಫೋಟೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಯಾರಿಗೂ ತಿಳಿಯದಂತೆ ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ. ಫೋಟೋ ನೋಡಿರುವ ಅಭಿಮಾನಿಗಳು ರಾಧಿಕಾ ಅವರ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮೂಲಕ ತಿಳಿಸಿದ್ದಾರೆ.

    ಕೆಲವರು ಈ ಫೋಟೋಗೆ ಲೈಕ್ ಕೊಟ್ಟು ಕೆಜಿಎಫ್ ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದ್ದು, ಕೆಜಿಎಫ್ ಸೆಟ್ ಗೆ ಹೋದಾಗ ನೀವಾದರೂ ನಿರ್ದೇಶಕರಿಗೆ ಹೇಳಿ ಬೇಗ ಸಿನಿಮಾ ಬಿಡುಗಡೆ ಮಾಡಿಸಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ. ಅದರ ಜೊತೆಯಲ್ಲಿ ಯಶ್ ಅಣ್ಣನಿಗೂ ಚಿತ್ರ ರಿಲೀಸ್ ಮಾಡಿಸುವಂತೆ ತಿಳಿಸಿ ಎಂದಿದ್ದಾರೆ.

  • ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

    ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಮದುವೆಯಾದ ಹೊಸತರಲ್ಲಿ ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಿಗೆ ಹೋಗಿದ್ದರು. ವರ್ಷಕಳೆದರೂ ಒಬ್ಬೊಬ್ಬರನ್ನು ಬಿಟ್ಟು ಸುತ್ತಾಡ್ತಿರಲಿಲ್ಲ. ಅಷ್ಟೊಂದು ಅನ್ಯೋನ್ಯತೆ ಅವರಲ್ಲಿದೆ. ಆದ್ರೆ ದಿಢೀರ್ ಅಂತ ರಾಧಿಕಾ ಪಂಡಿತ್ ಪತಿ ಯಶ್ ಅವರನ್ನ ಬೆಂಗಳೂರಲ್ಲೇ ಬಿಟ್ಟು ಫ್ಲೈಟ್ ಹತ್ತಿ ವಿದೇಶಕ್ಕೆ ಹಾರಿದ್ದಾರೆ.

    ಸ್ಯಾಂಡಲ್‍ವುಡ್ ಪರ್ಫೆಕ್ಟ್ ಜೋಡಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ. ಯಾವಾಗಲೂ ಜೊತೆಯಾಗಿ ಸುತ್ತಾಡುತ್ತಿದ್ದರು. ಮದುವೆಯಾದ ಮೇಲೆ ಯಶ್ `ಕೆಜಿಎಫ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದರು. ರಾಧಿಕಾ ಈಗ ಹೊಸ ಚಿತ್ರದ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿದ ಮೇಲೆ ರಿಲ್ಯಾಕ್ಸ್ ಆಗೋಕೆ ಯೋಚಿಸಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ರಾಧಿಕಾ ಮದುವೆಯಾದ ಮೇಲೆ ಒಬ್ಬರೇ ವಿದೇಶಕ್ಕೆ ಪ್ರಯಾಣ ಬೆಳಸಿದ್ದು, ಚಿಕಾಗೋಗೆ ಹೋಗಿದ್ದಾರೆ. ಏರ್‍ಫೋರ್ಟ್‍ನಲ್ಲಿ ಒಬ್ಬರೇ ಇದ್ದ ಫೋಟೋ ಕ್ಲಿಕ್ಕಿಸಿ ತಮ್ಮ ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕಾಗೋದಲ್ಲಿ ರಾಧಿಕಾ ಅವರ ಸಹೋದರ ಕುಟುಂಬ ನೆಲೆಸಿದೆ. ಹೀಗಾಗಿ ಸಹೋದರನ ಜೊತೆ ಒಂದಿಷ್ಟು ಸಮಯ ಕಳೆಯೋದಕ್ಕಾಗಿ ರಾಧಿಕಾ ವಿದೇಶ ಪ್ರಯಾಣ ಬೆಳೆಸಿದ್ದಾರೆ.

    ಯಶ್ ಅಭಿನಯದ ಕೆಜಿಎಫ್ ಸಿನಿಮಾ ಚಿತ್ರೀಕರಣ ಕಾರಣಾಂತರಗಳಿಂದ ಸ್ವಲ್ಪ ದಿನ ಮುಂದಕ್ಕೆ ಹೋಗಿದೆ. ಫೆಬ್ರವರಿ 13ಕ್ಕೆ ಯಶ್ ಕೂಡ ವಿದೇಶಕ್ಕೆ ಹೋಗುತ್ತಾರೆ. ಯಾಕೆಂದರೆ ಈ ವರ್ಷದ ಪ್ರೇಮಿಗಳ ದಿನವನ್ನು ವಿದೇಶದಲ್ಲಿ ಆಚರಣೆ ಮಾಡುವ ಯೋಜನೆಯನ್ನು ಈ ಕ್ಯೂಟ್ ದಂಪತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

  • `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

    `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

    ಬಳ್ಳಾರಿ: ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಸೂಪರ್ ಹಿಟ್ ಚಲನಚಿತ್ರಗಳಾದ ರಾಜಕುಮಾರ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ್ ಸಪ್ತಪದಿ ತುಳಿಯಲು ಸಿದ್ಧರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

    ಮೂಲತಃ ಉಡುಪಿ ಮೂಲದವರಾದ ಸಂತೋಷ್ ಆನಂದರಾಮ್, ಬಳ್ಳಾರಿಯ ಅಲ್ಲಭವನದಲ್ಲಿ ಉದ್ಯಮಿ ಶ್ರೀನಿವಾಸ್‍ರಾವ್ ಪುತ್ರಿ ಸುರಭಿ ಅವರ ಜೊತೆ ಭಾನುವಾರ ಸಂಪ್ರದಾಯಕವಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

    ಸಂತೋಷ್ ಅವರು ಮದುವೆ ಸಮಾರಂಭವೊಂದರಲ್ಲಿ ಸುರಭಿಯನ್ನು ನೋಡಿ ಮನಸೋತಿದ್ದು, ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಸುರಭಿ-ಸಂತೋಷ್ ಕೈಗೆ ರಿಂಗ್ ತೊಡಿಸುವುದರ ಮೂಲಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

    ಸಂತೋಷ್ ನಿಶ್ಚಿತಾರ್ಥಕ್ಕೆ ನಟ ಯಶ್-ರಾಧಿಕಾ ದಂಪತಿ ಬಂದು ಶುಭಾಶಯ ಕೋರಿ ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ರಾಜಕುಮಾರ ಚಿತ್ರದ ನಂತರ ಸಂತೋಷ್ ಜೊತೆ ಆಪ್ತರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಬಂದು ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಅಲ್ಲಭವನದಲ್ಲಿ ಮುಗಿಬಿದ್ದರು.

    ಸುರಭಿಗೆ ಕೈಗೆ ರಿಂಗ್ ತೊಡಿಸಿದ ಆನಂದವನ್ನು ಹಚ್ಚಿಕೊಂಡ ಸಂತೋಷ್, ಇದೀಗ ನಾನು ಬಳ್ಳಾರಿ ಅಳಿಯನಾಗಿದ್ದೇನೆ ಎಂದು ಹೇಳಿ ಹರ್ಷವನ್ನು ವ್ಯಕ್ತಪಡಿಸಿದರು. ಅದ್ಧೂರಿ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಿರುವ ಸಂತೋಷ್ ಆನಂದರಾಮ್ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮದುವೆಗೆ ಸಿದ್ಧರಾಗಿದ್ದಾರೆ.

     

     

  • 501 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಯಶ್, ರಾಧಿಕಾ ದಂಪತಿ ಭಾಗಿ

    501 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಯಶ್, ರಾಧಿಕಾ ದಂಪತಿ ಭಾಗಿ

    ರಾಯಚೂರು: ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ತಮ್ಮ ಪುತ್ರನ ಮದುವೆ ಹಿನ್ನೆಲೆಯಲ್ಲಿ ಲಿಂಗಸುಗೂರಿನಲ್ಲಿ ಆಯೋಜಿಸಿದ್ದ 501 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚಿತ್ರನಟ ಯಶ್, ರಾಧಿಕಾ ಪಂಡಿತ್ ದಂಪತಿ ಭಾಗವಹಿಸಿದ್ದರು.

    ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವ ಜೋಡಿಗಳಿಗೆ ಯಶ್ ದಂಪತಿಗಳು ಶುಭ ಹಾರೈಸಿದರು. ಯಶ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

    ಈ ಕಾರ್ಯಕ್ರಮಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿ ಹಲವಾರು ರಾಜಕೀಯ ಮುಖಂಡರು ಭಾಗವಹಿಸಿ ನವ ಜೋಡಿಗಳಿಗೆ ಶುಭಕೋರಿದರು.

    ಇದನ್ನೂ ಓದಿ: ಯಶೋಮಾರ್ಗ ಪರಿಶ್ರಮಕ್ಕೆ ಸಿಕ್ತು ಪ್ರತಿಫಲ: ಭರ್ತಿಯಾಯ್ತು ಬತ್ತಿ ಹೋಗಿದ್ದ ತಲ್ಲೂರು ಕೆರೆ- ಸೋಮವಾರ ಬಾಗಿನ ಅರ್ಪಣೆ

  • ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

    ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

    – ರಾಕಿಂಗ್ ಸ್ಟಾರ್ ದಂಪತಿಗೆ ರೈತರ ಕೃತಜ್ಞತೆ

    ಕೊಪ್ಪಳ: ಜಿಲ್ಲೆಯಲ್ಲಿರೋ ಕೆರೆ ಬಾವಿ ಬತ್ತಿ ಹೋಗಿದ್ದು, ಭೀಕರ ಬರ ತಾಂಡವಾಡ್ತಿದೆ. ಹೀಗಾಗಿ ಒಂದು ಕೆರೆಯ ಹೂಳು ತೆಗೆಯುವ ಮೂಲಕ ಬರ ನೀಗಿಸಲು ನಟ ಯಶ್ ದಂಪತಿ ಮುಂದಾಗಿದ್ದಾರೆ. ಒಂದು ತಿಂಗಳ ಹಿಂದೆ ಈ ಕೆರೆಗೆ ಭೂಮಿ ಪೂಜೆ ಸಲ್ಲಿಸಿ ಹೂಳು ತೆಗೆಯಲು ಆರಂಭಿಸಿದ್ದು, ಈಗ ನೀರು ಚಿಮ್ಮುತ್ತಿದೆ. ಕೆರೆಯಲ್ಲಿ ನೀರು ಚಿಮ್ಮುತ್ತಿರೋದನ್ನು ನೋಡಿ ಜನ ಸಂತಸಪಟ್ಟಿದ್ದಾರೆ.

    ಸುಮಾರು ಐವತ್ತು ವರ್ಷಗಳಿಂದಲೂ ಕೊಪ್ಪಳದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. 96 ಎಕರೆಯಲ್ಲಿ ತುಂಬಿರೋ ಹೂಳನ್ನ ತಗೆಯಲು ಬೆಂಗಳೂರಿನ ಯಶೋಮಾರ್ಗ ಫೌಂಡೇಶನ್ ಮುಂದಾಯ್ತು. ಕಳೆದ ಫೆಬ್ರವರಿ 28 ರಂದು ಯಶ್ ದಂಪತಿ ಕೆರೆಯಲ್ಲಿ ಹೂಳು ತಗೆಯಲು ಭೂಮಿ ಪೂಜೆ ಮಾಡಿದ್ರು. ಯಶೋಮಾರ್ಗ ಫೌಂಡೇಶನ್ 4 ಕೋಟಿ ವೆಚ್ಚದಲ್ಲಿ ಕೆರೆಯಲ್ಲಿರೋ ಹೂಳು ತಗೆದು ಮಾದರಿ ಕೆರೆಯನ್ನಾಗಿಸಲು ಸಂಕಲ್ಪ ಮಾಡಿದೆ. ಕಳೆದ ಒಂದು ತಿಂಗಳಿಂದ ಈ ಕೆರೆಯಿಂದ ಹೂಳು ತಗೆಯಲಾಗ್ತಿದೆ. ಸದ್ಯ ನಾಲ್ಕೈದು ದಿನಗಳಿಂದ ಹೂಳು ತೆಗೆಯೋ ವೇಳೆ ನೀರು ಚಿಮ್ಮಿದೆ.

    ತಲ್ಲೂರು ಕೆರೆಯಲ್ಲಿ 10 ಅಡಿ ಆಳದಷ್ಟು ಅಗೆದು ಹೂಳು ತೆಗೆಯಲಾಗ್ತಿದ್ದು, ನೀರು ಜಿನುಗುತ್ತಿರೋದ್ರಿಂದ ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ. ಈ ಭಾಗದಲ್ಲಿ 400 ಅಡಿ ಭೂಮಿ ಅಗೆದರೂ ಹನಿ ನೀರು ಸಿಗುತ್ತಿರಲಿಲ್ಲ. ಸತತ ಮೂರು ವರ್ಷಗಳ ಭೀಕರ ಬರದಿಂದ ಹನಿ ನೀರು ಕೂಡ ಸಿಗುತ್ತಿರಲಿಲ್ಲ. ಅಲ್ಲದೆ ಜಿಲ್ಲೆಯಲ್ಲಿರೋ ಬಹುತೇಕ ಕೆರೆಗಳು ಬರಿದಾಗಿ ಬಾಯಿ ತೆರೆದಿವೆ. ಇದೀಗ ತಲ್ಲೂರು ಕೆರೆಯಲ್ಲಿ ನೀರು ಚಿಮ್ಮುತ್ತಿರೋದ್ರಿಂದ ಕೆರೆಯಲ್ಲಿ ನೀರು ಆವರಿಸಿದೆ. ಈ ಭಾಗದಲ್ಲಿರೋ ರೈತರು ಹಾಗೂ ದನಕರುಗಳಿಗೆ ತಲ್ಲೂರು ಕೆರೆ ಆಸರೆಯಾಗಿದೆ.

    ತಲ್ಲೂರು ಕೆರೆಯಲ್ಲಿ ನೀರು ಬಂದಿರೋದ್ರಿಂದ ಈ ಭಾಗದ ಜನರ ಮೊಗದಲ್ಲಿ ಸಂತಸ ಕಾಣ್ತಿದೆ. ಹೂಳು ತೆಗೆಯೋ ವೇಳೆ ನೀರು ಬಂದಿರೋದ್ರಿಂದ ಕೆರೆಯ ಹೂಳನ್ನ ತಗೆಯೋ ಕಾರ್ಯ ಇನ್ನಷ್ಟು ವೇಗಗೊಳಿಸಿದ್ರೆ ಕೆರೆಯಲ್ಲಿ ಇನ್ನಷ್ಟು ನೀರು ಬರಹಬುದು ಅನ್ನೋ ನಿರೀಕ್ಷೆ ರೈತರದ್ದಾಗಿದೆ. ಏನೇ ಆಗ್ಲೀ ಬತ್ತಿ ಹೋಗಿದ್ದ ಕೆರೆಯಲ್ಲಿ ನೀರು ಚಿಮ್ಮಿರೋದು ಜನರಲ್ಲಿ ಆಶ್ಚರ್ಯ ಹಾಗೂ ಸಂತಸ ತರಿಸಿದೆ.

  • ರಾಧಿಕಾ ಪಂಡಿತ್‍ಗೆ ಹುಟ್ಟುಹಬ್ಬ: ವಿಶ್ ಮಾಡಲು ಬಂದ ಅಭಿಮಾನಿಗಳಿಗೆ ಯಶ್ ದಂಪತಿಯಿಂದ ಗಿಫ್ಟ್!

    ರಾಧಿಕಾ ಪಂಡಿತ್‍ಗೆ ಹುಟ್ಟುಹಬ್ಬ: ವಿಶ್ ಮಾಡಲು ಬಂದ ಅಭಿಮಾನಿಗಳಿಗೆ ಯಶ್ ದಂಪತಿಯಿಂದ ಗಿಫ್ಟ್!

    ಬೆಂಗಳೂರು: ಇಂದು ನಟಿ ರಾಧಿಕಾ ಪಂಡಿತ್ ಅವರಿಗೆ 33ನೇ ಹುಟ್ಟುಹಬ್ಬದ ಸಂಭ್ರಮ. ನಟ ಯಶ್ ಅವರನ್ನು ಕೈಹಿಡಿದ ಬಳಿಕ ರಾಧಿಕಾ ಪಂಡಿತ್ ಗೆ ಮೊದಲ ಹುಟ್ಟುಹಬ್ಬ ಇದಾಗಿದೆ.

    ರಾಧಿಕಾ ತಮ್ಮ ಹುಟ್ಟು ಹಬ್ಬವನ್ನು ನಗರದ ಮಲ್ಲೇಶ್ವರಂನಲ್ಲಿರೋ ತವರು ಮನೆಯಲ್ಲಿ ಆಚರಣೆ ಮಾಡ್ತಿದ್ದಾರೆ. ಏಳೂವರೆ ಕೆಜಿಯ ವಿಭಿನ್ನವಾದ ಕೇಕ್ ತಂದು ಅಭಿಮಾನಿಗಳು ರಾಧಿಕಾ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬಂದಿರೋ ಅಭಿಮಾನಿಗಳಿಗೆ ಯಶ್ ಹಾಗು ರಾಧಿಕಾ ಕನಕಾಂಬರ ಹೂವಿನ ಸಸಿ ನೀಡಿದ್ದಾರೆ.

    ಬರ್ತ್ ಡೇ ಅಂದ್ರೆ ತುಂಬಾ ಇಷ್ಟ: ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರುವ ರಾಧಿಕಾ ಪಂಡಿತ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನನಗೆ ಬರ್ತ್‍ಡೇ ಆಚರಣೆ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ಆ ದಿನ ನಮಗೆ ಜಾಸ್ತಿ ಪ್ರಾಮುಖ್ಯತೆ ಇರತ್ತೆ. ಮಾತ್ರವಲ್ಲದೇ ಕೇಕ್ ಕಟ್ ಮಾಡೋದು, ಬಲೂನ್ಸ್, ಹ್ಯಾಪಿ ಬರ್ತ್ ಡೇ ಅಂತಾ ಹಾಡು ಹೇಳೊದು ಅಂದ್ರೆ ನನಗೆ ಮೊದಲಿಂದಲೂ ತುಂಬಾ ಇಷ್ಟ ಅಂತಾ ತನ್ನ ಖುಷಿ ಹಂಚಿಕೊಂಡ್ರು.

    ಮೂರು ಕಡೆ ಹುಟ್ಟುಹಬ್ಬ: ಇನ್ನು ಸಿನಿಮಾ ವೃತ್ತಿಗೆ ಬಂದ ಬಳಿಕ ಅಭಿಮಾನಿಗಳ ಜೊತೆ, ಅಪ್ಪ-ಅಮ್ಮನ ಜೊತೆ ಇಷ್ಟು ವರ್ಷ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಆದ್ರೆ ಈ ಬಾರಿ ಅತ್ತೆ-ಮಾವನ ಜೊತೆನೂ ಆಚರಣೆ ಮಾಡ್ತಾ ಇದ್ದೇನೆ. ಮನೆಯಲ್ಲಿ ಅತ್ತೆ ನನಗೆ ಇಷ್ಟವಾದ ಅಡುಗೆ ಮಾಡಿರುತ್ತಾರೆ. ಒಟ್ಟಿನಲ್ಲಿ ಈ ದಿನವನ್ನು ತುಂಬಾ ಖುಷಿಯಿಂದ ಕಳೆಯುತ್ತಿದ್ದೇನೆ ಅಂತಾ ರಾಧಿಕಾ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.

    ಈ ಬಾರಿ ಜೊತೆಗಿದ್ದೇ ವಿಶ್ ಮಾಡ್ದೆ:  ಪತ್ನಿ ಹುಟ್ಟು ಹಬ್ಬದ ಬಗ್ಗೆ ಮಾತನಾಡಿದ ನಟ ಯಶ್, ಮೊದಲೆಲ್ಲ ಫೋನಲ್ಲೆ ವಿಶ್ ಮಾಡ್ತಾ ಇದ್ದೆ. ಅದು ಹುಟ್ಟು ಹಬ್ಬದ ದಿನ ರಾತ್ರಿ. ಯಾಕಂದ್ರೆ ಬರ್ತ್ ಡೇ ದಿನದಂದು ಅವರು ಸಿಗುತ್ತಿರಲಿಲ್ಲ. ಅದು ನನ್ನ ಬರ್ತ್ ಡೇ ಆಗ್ಲಿ ರಾಧಿಕಾ ಅವರ ಬರ್ತ್ ಡೇ ಆಗಿರಲಿ. ಬೆಳಗ್ಗೆ ಹೊತ್ತು ಅಭಿಮಾನಿಗಳ ಜೊತೆ ಆಚರಣೆಯಲ್ಲಿ ಬ್ಯುಸಿಯಾಗಿರ್ತೀವಿ. ಆದ್ರೆ ಈ ಬಾರಿ ಮಾತ್ರ ಮದುವೆ ಆಗಿರೋದ್ರಿಂದ ಒಟ್ಟಿಗೆ ಇದ್ದು, ವಿಶ್ ಮಾಡಿದೆ ಅಂತಾ ಹೇಳಿದ್ರು.

    ಯಶ್ ದಂಪತಿ ಸಸಿ ಗಿಫ್ಟ್ ನೀಡುವುದು ಹೊಸದೆನಲ್ಲ. ಈ ಹಿಂದೆ ಅತಿಥಿಗಳಿಗೆ ಸಂಪಿಗೆ ಸಸಿ ನೀಡಿ ಮದುವೆಯ ಆಹ್ವಾನ ಪತ್ರಿಕೆಯನ್ನು ಯಶ್ ನೀಡಿದ್ದರು.

    ಯಶ್ ದಂಪತಿ ಸಸಿ ಗಿಫ್ಟ್ ನೀಡುವುದು ಹೊಸದೆನಲ್ಲ. ಈ ಹಿಂದೆ ಅತಿಥಿಗಳಿಗೆ ಸಂಪಿಗೆ ಸಸಿ ನೀಡಿ ಮದುವೆಯ ಆಹ್ವಾನ ಪತ್ರಿಕೆಯನ್ನು ಯಶ್ ನೀಡಿದ್ದರು.