Tag: radhika

  • ದಮಯಂತಿ ಚಿತ್ರಕ್ಕೆ ಯಾರೂ ಊಹಿಸಲಾರದಷ್ಟು ಸಂಭಾವನೆ ಪಡೆದ ರಾಧಿಕಾ

    ದಮಯಂತಿ ಚಿತ್ರಕ್ಕೆ ಯಾರೂ ಊಹಿಸಲಾರದಷ್ಟು ಸಂಭಾವನೆ ಪಡೆದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ತಮ್ಮ ಮುಂಬರುವ ‘ದಮಯಂತಿ’ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

    ರಾಧಿಕಾ ಅವರು ಬಹುಭಾಷಾ ನಟಿಯಾಗಿದ್ದು, ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ. ಅರುಂಧತಿ, ಭಾಗಮತಿ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ನಟಿಸಿದ್ದ ಚಿತ್ರದ ರೀತಿಯಲ್ಲೇ ಇದೀಗ ಅಂಥದ್ದೇ ಕಥೆಯ ದಮಯಂತಿ ಸಿನಿಮಾ ತಯಾರಾಗುತ್ತಿದೆ.

    ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ತಕ್ಕಂತೆ ರಾಧಿಕಾ ಹೋಲುತ್ತಿದ್ದರು. ಹೀಗಾಗಿ ರಾಧಿಕಾ ಅವರನ್ನು ಅಪ್ರೋಚ್ ಮಾಡಿದಾಗ ಅವರು ಈ ಸಿನಿಮಾವನ್ನು ಒಪ್ಪಿಕೊಂಡರು. ಸದ್ಯ ದಮಯಂತಿ ಚಿತ್ರದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದೆ.

    ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ದಮಯಂತಿ ಬಹುಕೋಟಿ ಬಜೆಟ್ ಚಿತ್ರವಾಗಿದ್ದು, ಇದು ನಾಯಕಿ ಪ್ರಧಾನ ಸಿನಿಮಾ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ನಾಯಕಿ ರಾಧಿಕಾ ಅವರಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ.

    ದಮಯಂತಿ ಚಿತ್ರ ನಿರ್ಮಾಪಕ, ನಿರ್ದೇಶಕ ನವರಸನ್ ಆರಂಭದಲ್ಲಿ ಬಾಹುಬಲಿಯಲ್ಲಿ ಅಭಿನಯಿಸಿದ್ದ ಕನ್ನಡತಿ ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ ಅನುಷ್ಕಾ ಶೆಟ್ಟಿ 2 ವರ್ಷದ ಕಾಲ್ ಶೀಟ್ ಫುಲ್ ಆಗಿದ್ದ ಕಾರಣ ಅಭಿನಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಈ ಚಿತ್ರಕ್ಕೆ ರಾಧಿಕಾ ಅವರೇ ಬೇಕೆಂದು ತೀರ್ಮಾನಿಸಿ 80 ಲಕ್ಷ ಮುಂಗಡ ನೀಡಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ 1 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಲಿಸ್ಟ್‍ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುದ್ದು ಮಗ್ಳನ್ನ ದೂರದಿಂದ್ಲೇ ನೋಡಿದ ಯಶ್

    ಮುದ್ದು ಮಗ್ಳನ್ನ ದೂರದಿಂದ್ಲೇ ನೋಡಿದ ಯಶ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಸಂತಸದಲ್ಲಿ ನಟ ಯಶ್ ತಮ್ಮ ಮುದ್ದು ಮಗಳನ್ನು ದೂರದಿಂದ ನೋಡಿ ಖುಷಿ ಪಟ್ಟಿದ್ದಾರೆ.

    ನಟ ಯಶ್ ಮತ್ತು ರಾಧಿಕಾ ಅವರ ಮಗಳ ಫೋಟೋ ಮಾಧ್ಯಮಗಳಿಗೆ ಲಭ್ಯವಾಗಿದ್ದು, ನಟ ಯಶ್ ಪ್ರೀತಿಯಿಂದ ಆಸ್ಪತ್ರೆಯಲ್ಲಿ ಮಗಳನ್ನು ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮುದ್ದು ಮಗಳ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಮಗುವನ್ನು ನಟ ಯಶ್ ತಮ್ಮ ಎರಡು ಕೈಗಳನ್ನು ಹಿಂದೆ ಹಿಡಿದುಕೊಂಡು ಸೂಕ್ಷ್ಮವಾಗಿ ಮಗಳನ್ನು ಮುಟ್ಟದೇ ದೂರದಿಂದಲೇ ನೋಡುತ್ತಿರುವುದನ್ನು ಕಾಣಬಹುದಾಗಿದೆ.

    ಭಾನುವಾರ ಮುಂಜಾನೆ ರಾಧಿಕಾ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಯಶ್ ಕುಟುಂಬದವರು ಮನಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಅಣ್ಣ ಯಶ್ ಕೂಡ ತಮಗೆ ಹೆಣ್ಣು ಮಗು ಬೇಕೆಂದು ಆಸೆ ಪಟ್ಟಿದ್ದರು. ಅದರಂತೆಯೇ ಅವರ ಮನೆಗೆ ಭಾಗ್ಯಲಕ್ಷ್ಮಿ ಬಂದಿದ್ದಾಳೆ ಎಂದು ಸಹೋದರಿ ಹೇಳಿದ್ದರು.

    ನಾವೆಲ್ಲಾ ಆಪರೇಷನ್ ಥಿಯೇಟರ್ ಒಳಗಡೆ ಇದ್ವಿ. ನಟ ಯಶ್ ಅವರ ಮೊದಲ ರಿಯಾಕ್ಷನ್ ಹೇಳಲು ಪದಗಳ ಮೂಲಕ ಸಾಧ್ಯವಿಲ್ಲ. ಹೆಣ್ಣು ಮಗು ಜನಿಸಿದೆ ಎಂದು ಹೇಳಿದಾಗ ಯಶ್ ಆನಂದಭಾಷ್ಪ ಕಣ್ಣೀರು ಹಾಕಿದರು. ಅದೊಂದು ಲವ್ಲೀ ಕ್ಷಣವಾಗಿತ್ತು ಎಂದು ವೈದ್ಯರು ತಿಳಿಸಿದ್ದರು.

    https://www.youtube.com/watch?v=VxelNRK-5H0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

    ಹೆಣ್ಣು ಮಗು ಎಂದಾಕ್ಷಣ ಯಶ್ ಕಣ್ಣಲ್ಲಿ ಆನಂದಭಾಷ್ಪ: ಡಾ.ಸ್ವರ್ಣಲತಾ

    ಬೆಂಗಳೂರು: ನಟಿ ರಾಧಿಕಾ ಅವರಿಗೆ ಆಪರೇಷನ್ ಮಾಡಿ ನಿಮಗೆ ಹೆಣ್ಣು ಮಗು ಆಗಿದೆ ಎಂದು ಹೇಳಿದಾಕ್ಷಣ ಯಶ್ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು ಎಂದು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ.ಸ್ವರ್ಣಲತಾ ಅವರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸ್ವರ್ಣಲತಾ ಅವರು, ರಾಧಿಕಾ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ಈಗ ತಾಯಿ ರಾಧಿಕಾ ನಾರ್ಮಲ್ ಆಗಿ ಮಾತನಾಡುತ್ತಿದ್ದು, ಎದ್ದು ನಡೆಯಬಹುದು. ತಾಯಿ ಮತ್ತು ಮಗಳು ತುಂಬಾ ಚೆನ್ನಾಗಿದ್ದಾರೆ ಎಂದು ಹೇಳಿದರು.

    ಮಗು ತುಂಬಾ ಚೆನ್ನಾಗಿದ್ದು, ತುಂಬಾ ಕ್ಯೂಟ್ ಆಗಿದೆ. ಮಗುವಿನ ಅಜ್ಜಿ- ತಾತ ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲರೂ ಈಗಾಗಲೇ ಬಂದು ನೋಡಿಕೊಂಡು ಹೋಗಿದ್ದಾರೆ. ಮಗು, ತಾಯಿ ಹೇಗಿದ್ದಾರೆ ಎಂದು ಕಾತರದಿಂದ ಸ್ನೇಹಿತರೆಲ್ಲ ಈಗ ಬಂದು ಭೇಟಿಯಾಗುತ್ತಿದ್ದಾರೆ. ಯಶ್ ಕೂಡ ಸುಸ್ತಾಗಿದ್ದಾರೆ. ಆದ್ದರಿಂದ ಆ ನಂತರ ಸಂದರ್ಶನ ಕೊಡುತ್ತಾರೆ ಎಂದು ವೈದ್ಯರು ತಿಳಿಸಿದರು.

    ನಾವೆಲ್ಲಾ ಆಪರೇಷನ್ ಥಿಯೇಟರ್ ಒಳಗಡೆ ಇದ್ವಿ. ಅವರ ಮೊದಲ ರಿಯಾಕ್ಷನ್ ಹೇಳಲು ಪದಗಳ ಮೂಲಕ ಸಾಧ್ಯವಿಲ್ಲ. ಆದರೆ ತುಂಬಾ ಸಂತೋಷದಿಂದ ಇದ್ದಾರೆ. ಹೆಣ್ಣು ಮಗು ಜನಿಸಿದೆ ಎಂದು ಹೇಳಿದಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿದ್ದವು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರಬಹುದು. ಇದೊಂದು ಲವ್ಲೀ ಕ್ಷಣವಾಗಿತ್ತು ಎಂದು ಸ್ವರ್ಣಲತಾ ಅವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಂದ ಯಶ್-ರಾಧಿಕಾ ಮಗಳಿಗೆ ಹೆಸರಿನ ಸಲಹೆ

    ಅಭಿಮಾನಿಗಳಿಂದ ಯಶ್-ರಾಧಿಕಾ ಮಗಳಿಗೆ ಹೆಸರಿನ ಸಲಹೆ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ರಾಧಿಕಾ ಅವರು ಇಂದು ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಜನಿಸಿದ ಗಂಟೆಗಳಲ್ಲೇ ಅಭಿಮಾನಿಗಳು ಅವರ ಮಗುವಿಗೆ ಹೆಸರಿನ ಸಲಹೆಯನ್ನು ನೀಡುತ್ತಿದ್ದಾರೆ.

    ನಟ ಯಶ್ ತಂದೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹೆಸರಿನ ಸಲಹೆಯನ್ನು ನೀಡಿದ್ದಾರೆ. ಅಭಿಮಾನಿಯೊಬ್ಬರು ‘ಯಶಿಕಾ’ ಎಂದು ನಾಮಕರಣ ಮಾಡಿ ಅಂತ ಕಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ನಟ ಯಶ್ ಅವರ ಮೊದಲ ಪದ ಮತ್ತು ರಾಧಿಕಾ ಅವರ ಕೊನೆಯ ಪದವನ್ನು ತೆಗೆದುಕೊಂಡು ಅವರ ಮಗಳಿಗೆ ಹೆಸರಿಡುವಂತೆ ಸೂಚಿಸಿದ್ದಾರೆ. ಅಪ್ಪನಿಂದ ಯಶ್ ಹಾಗೂ ಅಮ್ಮ ರಾಧಿಕಾರಿಂದ ಕೊನೆಯ ಪದ ‘ಕಾ’ ವನ್ನು ತೆಗೆದುಕೊಂಡು ‘ಯಶಿಕಾ’ ಎಂದು ಹೆಸರನ್ನು ಅಭಿಮಾನಿ ಸೂಚಿಸಿದ್ದಾರೆ.

    ವೈದ್ಯರು ಡಿಸೆಂಬರ್ 10 ರಂದು ಹೆರಿಗೆಯ ದಿನಾಂಕವನ್ನು ಸೂಚಿಸಿದ್ದರು. ಆದರೆ ಇಂದು ಬೆಳಗ್ಗೆ ನಗರದ ಆಸ್ಪತ್ರೆಯಲ್ಲಿ 6.10ಕ್ಕೆ ರಾಧಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭಾನುವಾರ ಮನೆಗೆ ಭಾಗ್ಯಲಕ್ಷ್ಮಿ ಬಂದಿದ್ದಾಳೆ ಎಂದು ಕುಟುಂಬಸ್ಥರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಕೂಡ ಯಶ್ ತಮಗೆ ಹೆಣ್ಣು ಮಗು ಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ ನಟ ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾನು ಗರ್ಭಿಣಿ ಅಂದಾಗ ಯಶ್ ರಿಯಾಕ್ಷನ್ ಹೀಗಿತ್ತು ಅಂದ್ರು ರಾಧಿಕಾ

    ತಾನು ಗರ್ಭಿಣಿ ಅಂದಾಗ ಯಶ್ ರಿಯಾಕ್ಷನ್ ಹೀಗಿತ್ತು ಅಂದ್ರು ರಾಧಿಕಾ

    – ಸೀಮಂತದಲ್ಲಿ ಪತಿಯಿಂದ ಗಿಫ್ಟ್

    ಬೆಂಗಳೂರು: ಈಗಾಗಲೇ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರ ಸೀಮಂತ ಅದ್ಧೂರಿಯಾಗಿ ಮುಗಿದಿದೆ. ಇದೇ ಸಂದರ್ಭದಲ್ಲಿ ತಾನು ಗರ್ಭಿಣಿಯಾದ ಕುರಿತು ಯಶ್ ಗೆ ಹೇಳಿರುವ ವಿಚಾರವನ್ನು ಮೆಲುಕು ಹಾಕಿದ್ದಾರೆ.

    ರಾಧಿಕಾ ಆಸೆಯಂತೆ ರಾಕಿಂಗ್‍ಸ್ಟಾರ್ ಯಶ್ ಸೀಮಂತ ಶಾಸ್ತ್ರವನ್ನ ತಾಜ್‍ವೆಸ್ಟೆಂಡ್‍ನಲ್ಲೇ ಮಾಡಿ ಮುಗಿಸಿದ್ದಾರೆ. ಈ ಹೊತ್ತಲ್ಲಿ ತಾನು ಪ್ರೆಗ್ನೆಂಟ್ ಅಂತ ಹೇಳಿದಾಗ ಯಶ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ರಾಧಿಕಾ ಬಿಚ್ಚಿಟ್ಟಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ತಂದೆಯಾಗುತ್ತಿರುವ ವಿಚಾರವನ್ನು ರಾಧಿಕಾ ಅವರು ವಿಡಿಯೋ ಮೂಲಕ  ತಮ್ಮ ಸಂತಸವನ್ನು ಹಂಚಿಕೊಂಡಿದ್ದರು.

    ಏಪ್ರಿಲ್ 23 ಯಶ್-ರಾಧಿಕಾ ಪಾಲಿಗೆ ಸುದಿನ. ಯಾಕೆಂದರೆ ಅಂದಿನ ದಿನ ರಾಧಿಕಾ ತಾನು ಗರ್ಭಿಣಿ ಎಂಬ ವಿಷಯ ಗೊತ್ತಾಗಿದೆ. ತಕ್ಷಣ ಪತಿ ಯಶ್ ಬಳಿ ಹೇಳಿಕೊಳ್ಳೋಕೆ ಚಡಪಡಿಸುತ್ತಿದ್ರಂತೆ. ಆದರೆ ಅಂದು ಯಶ್ ಮೈಸೂರಿನಲ್ಲಿದ್ದರು. ಆದರೂ ರಾಧಿಕಾ ಅವರು ಯಶ್‍ಗೆ ವಿಡಿಯೋ ಕಾಲ್ ಮೂಲಕ `ಐಯಾಮ್ ಪ್ರೆಗ್ನೆಂಟ್’ ಎಂದು ಸಂತಸದ ವಿಚಾರವನ್ನು ರಾಧಿಕಾ ಹೇಳಿದ್ದಾರೆ.

    ಯಶ್ ಅವರು ತಾನು ಅಪ್ಪನಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಿಂದ ಹೂ, ಹಣ್ಣು, ವೆರೈಟಿ ಸ್ವೀಟ್ಸ್ ಖರೀದಿಸಿ ಕೇವಲ ಮೂರೇ ಮೂರು ತಾಸಿನಲ್ಲಿ ರಾಧಿಕಾ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಯಶ್ ಒಬ್ಬ ಸ್ನೇಹಿತ ಎನ್ನುವ ರಾಧಿಕಾ, ಯಶ್‍ನಂತಹ ಅಪ್ಪನನ್ನ ಪಡೆಯೋದಕ್ಕೆ ನನ್ನ ಮಗು ಏಳೇಳು ಜನ್ಮದ ಪುಣ್ಯಮಾಡಿದೆ ಅಂತ ಹೇಳಿಕೊಂಡಿದ್ದಾರೆ.

    ಸೀಮಂತ ಸಂಭ್ರಮದಲ್ಲಿ ರಾಧಿಕೆಗೆ ಲಕ್ಕಿ ಹ್ಯಾಂಡ್ಸ್ ಕಿಟ್ ಕೊಟ್ಟು ಸದಾಕಾಲ ಖುಷಿಯಾಗಿ ಬಾಳೋಣ ಅಂತ ಭಾಷೆ ಕೊಟ್ಟಿದ್ದಾರೆ. ಸದ್ಯಕ್ಕೆ ಡಿಸೆಂಬರ್ ಲ್ಲಿ ಮನೆಗೆ ಬರಲಿರುವ ಮುದ್ದು ಕಂದಮ್ಮನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರವಿದೆ. ಆದರೆ ಸೀಮಾಂತ ಶಾಸ್ತ್ರದ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಗೌಡ್ರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಫಂಕ್ಷನ್ ಗೆ ಸ್ಯಾಂಡಲ್ ವುಡ್ ಕಲಾವಿದರು ಭಾಗಿ ಆಗಲಿದ್ದಾರೆ.

    ಯಶ್ ಹಾಗೂ ರಾಧಿಕಾ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಸಂತಸದ ವಿಷಯವೆಂದರೆ ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುವ ಸಾಧ್ಯತೆ ಇದೆ.

    ಈಗಾಗಲೇ ರಾಧಿಕಾ ಹಾಗೂ ಯಶ್ ತಾಜ್ ವೆಸ್ಟೆಂಡ್ ಗೆ ಆಗಮಿಸಿದ್ದು, ಮದುವೆ ಆದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆಯುತ್ತಿದೆ. ಈ ಸ್ಥಳ ಯಶ್ ಮತ್ತು ರಾಧಿಕಾರ ಫೇವರಿಟ್ ಸ್ಥಳವಾಗಿದೆ. ಸದ್ಯಕ್ಕೆ ಸೀಮಂತದ ಅರೇಂಜ್ ಮೆಂಟ್ಸ್ ನಡೆಯುತ್ತಿದ್ದು, ಯಶ್ ಹಾಗೂ ರಾಧಿಕಾ ಸೀಮಂತಕ್ಕೆ ರೆಡಿ ಆಗುತ್ತಿದ್ದಾರೆ. ಸಿನಿಮಾರಂಗದವರು, ಆಪ್ತರು ಮತ್ತು ಬಂಧುಗಳೆಲ್ಲರು ಸೀಮಂತಕ್ಕೆ ಹಾಜರಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೊಲೀಸ್ ಅಧಿಕಾರಿಯಾದ ಗರ್ಭಿಣಿ ರಾಧಿಕಾ

    ಪೊಲೀಸ್ ಅಧಿಕಾರಿಯಾದ ಗರ್ಭಿಣಿ ರಾಧಿಕಾ

    ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಬೇಬಿ ಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅವರು ಪೊಲೀಸ್ ಉಡುಪಿನಲ್ಲಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

    ಗರ್ಭಿಣಿ ರಾಧಿಕಾ ಅವರನ್ನು ಪೊಲೀಸ್ ಉಡುಪಿನಲ್ಲಿ ಅಭಿಮಾನಿಗಳು ನೋಡಿ ಫಿದಾ ಆಗಿದ್ದಾರೆ. ಇವರು ತಮ್ಮ ಮುಂದಿನ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಾಡುತ್ತಿದ್ದಾರಾ ಅಥವಾ ಗರ್ಭಿಣಿ ಬಯಕೆಗೆ ಪೊಲೀಸ್ ಉಡುಪು ಧರಿಸಿದ್ದಾರೆ ಎಂಬ ಯೋಚನೆಗಳನ್ನು ಮಾಡುತ್ತಿದ್ದಾರೆ. ಆದರೆ ರಾಧಿಕಾ ಅವರು ಫೋಟೋವನ್ನು ಪೋಸ್ಟ್ ಮಾಡುವಾಗಲೇ ಈ ಬಗ್ಗೆ ಬರೆದುಕೊಂಡಿದ್ದಾರೆ.

    ‘ಇದು ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಾನು ನಟಿಸಿದ ವಿಶೇಷ ಪಾತ್ರದ ಫೋಟೋವಾಗಿದೆ. ಆದ್ರೆ ಈ ಸಿನಿಮಾದಲ್ಲಿ ನಾನು ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡುತ್ತಿಲ್ಲ. ಈ ಚಿತ್ರದಲ್ಲಿ ಒಂದು ಸೀನ್ ನಲ್ಲಿ ಮಾತ್ರ ನಾನು ಈ ಪೊಲೀಸ್ ಡ್ರೆಸ್ ಹಾಕಿದ್ದೇನೆ’ ಅಂತ ಬರೆದುಕೊಂಡಿದ್ದಾರೆ. ರಾಧಿಕಾ ಅವರು ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ತುಂಬಾ ಚೆನ್ನಾಗಿದೆ, ಕ್ಯೂಟ್ ಆಗಿದೆ, ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಎರಡು ದಿನಗಳ ಹಿಂದೆ ದಸರಾ ಹಬ್ಬದ ಪ್ರಯುಕ್ತ ರಾಧಿಕಾ ಅವರು ಸಲ್ವಾರ್ ಹಾಕಿಕೊಂಡು ಸಂಪ್ರದಾಯಿಕವಾಗಿ ಪತಿ ಯಶ್ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ನಾಡಿನ ಜನತೆಗೆ ಹಬ್ಬದ ಶುಭಾಶಯವನ್ನು ತಿಳಿಸಿದ್ದರು.

    https://www.instagram.com/p/BpGq-uTgD05/?hl=en&taken-by=iamradhikapandit

    ರಾಧಿಕಾ ಅವರು ಮದುವೆಯಾದ ನಂತರ ಸಿನಿಮಾವನ್ನು ಮಾಡಿಲ್ಲ. ಆದರೆ ಇತ್ತೀಚೆಗೆ ರಾಧಿಕಾ ಅವರು, ರಂಗಿತರಂಗ ಸಿನಿಮಾದ ನಟ ನಿರೂಪ್ ಭಂಡಾರಿ ಜೊತೆ ಮೊದಲ ಬಾರಿಗೆ ಅಭಿನಯಿಸುವುದರ ಮೂಲಕ ತಮ್ಮ ಸಿನಿಮಾ ಪ್ರಯಾಣವನ್ನು ಮತ್ತೆ ಆರಂಭಿಸಿದ್ದಾರೆ. ರಾಧಿಕಾ ಮತ್ತು ನಿರೂಪ್ ಭಂಡಾರಿ ಒಟ್ಟಿಗೆ `ಆದಿ ಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/BpLZW4AA4ci/?hl=en&taken-by=iamradhikapandit

  • ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

    ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾಗಾಗಿ ರಾಧಿಕಾ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಧಿಕಾ ಕೆಲ ತಿಂಗಳ ಹಿಂದೆ ‘ದಮಯಂತಿ’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈ ಚಿತ್ರದ ಲುಕ್ ಈಗ ಬಿಡುಗಡೆಯಾಗಿದ್ದು, ರಾಧಿಕಾ ಹಿಂದೆಂದೂ ಕಂಡಿರದ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ರಾಧಿಕಾ ಅವರ ಈ ಲುಕ್ ನೋಡಿ ಆಶ್ಚರ್ಯಪಡುತ್ತಿದ್ದಾರೆ.

    ದಮಯಂತಿ ಚಿತ್ರ ಮಹಿಳಾ ಪ್ರಧಾನ ಚಿತ್ರ ಎಂದು ಹೇಳಲಾಗುತ್ತಿದೆ. ತೆಲುಗುನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ ‘ಭಾಗಮತಿ’ ಹಾಗೂ ‘ಅರುಂಧತಿ’ ಚಿತ್ರದ ರೀತಿಯಲ್ಲೇ ದಮಯಂತಿ ಚಿತ್ರ ಇರಲಿದೆ. ಸದ್ಯ ಈ ಚಿತ್ರ ಕನ್ನಡದಲ್ಲಿ ಚಿತ್ರೀಕರಣ ಆದ ನಂತರ ತೆಲುಗು ಹಾಗೂ ತಮಿಳಿನಲ್ಲೂ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ.

    ನಾಯಕ ಹಾಗೂ ನಿರ್ಮಾಪಕರಾಗಿರುವ ನವರಸನ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ರಾಧಿಕಾ ದಮಯಂತಿ ಚಿತ್ರದ ಜೊತೆ ಅರ್ಜುನ್ ಸರ್ಜಾ ಅವರ ಜೊತೆ ‘ಕಾಂಟ್ರಾಕ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಂತರ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಜೊತೆ ‘ರಾಜೇಂದ್ರ ಪೊನ್ನಪ್ಪ’ ಹಾಗೂ ರಮೇಶ್ ಅರವಿಂದ್ ಜೊತೆ ‘ಭೈರಾ ದೇವಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಬ್ಬಿಂಗ್ ಮಾಡಿದ್ರು ಮೊಗ್ಗಿನ ಚೆಲುವೆ – ಫೋಟೋ ಹಾಕಿ ಅಂದಿಗೂ ಇಂದಿಗೂ ವ್ಯತ್ಯಾಸವೇನೆಂದು ಅಭಿಮಾನಿಗಳಿಗೆ ಪ್ರಶ್ನೆ

    ಡಬ್ಬಿಂಗ್ ಮಾಡಿದ್ರು ಮೊಗ್ಗಿನ ಚೆಲುವೆ – ಫೋಟೋ ಹಾಕಿ ಅಂದಿಗೂ ಇಂದಿಗೂ ವ್ಯತ್ಯಾಸವೇನೆಂದು ಅಭಿಮಾನಿಗಳಿಗೆ ಪ್ರಶ್ನೆ

    ಬೆಂಗಳೂರು: ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದು, ತಮ್ಮ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಮಾಡಿದ್ದಾರೆ. ಡಬ್ಬಿಂಗ್ ಮಾಡುವುದರ ಜೊತೆ ಅಭಿಮಾನಿಗಳಿಗೆ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದಾರೆ.

    ರಾಧಿಕಾ ಅವರು ಮದುವೆಯಾದ ನಂತರ ಸಿನಿಮಾವನ್ನು ಮಾಡಿಲ್ಲ. ಆದರೆ ಇತ್ತೀಚೆಗೆ ರಾಧಿಕಾ ಅವರು, ರಂಗಿತರಂಗ ಸಿನಿಮಾದ ನಟ ನಿರೂಪ್ ಭಂಡಾರಿ ಜೊತೆ ಮೊದಲ ಬಾರಿಗೆ ಅಭಿನಯಿಸುವುದರ ಮೂಲಕ ತಮ್ಮ ಸಿನಿಮಾ ಪ್ರಯಾಣವನ್ನು ಮತ್ತೆ ಆರಂಭಿಸಿದ್ದಾರೆ. ರಾಧಿಕಾ ಮತ್ತು ನಿರೂಪ್ ಭಂಡಾರಿ ಒಟ್ಟಿಗೆ ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಈ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಡಬ್ಬಿಂಗ್ ಕೆಲಸ ಮಾತ್ರ ಉಳಿದಿತ್ತು. ಈಗ ರಾಧಿಕಾ ಅವರು ‘ಆದಿ ಲಕ್ಷ್ಮಿ ಪುರಾಣ’ ಸಿನಿಮಾದ ಡಬ್ಬಿಂಗ್ ಮಾಡಿದ್ದಾರೆ. ಡಬ್ಬಿಂಗ್ ಮಾಡುವಾಗ ಫೋಟೋ ತೆಗೆದುಕೊಂಡು ಅದನ್ನು ತಮ್ಮ ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಫೋಟೋ ಜೊತೆಗೆ “ಈಗ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಮದುವೆಯ ನಂತರ ನನ್ನ ಮೊದಲ ಸಿನಿಮಾಗೆ ಡಬ್ಬಿಂಗ್ ಮಾಡುತ್ತಿದ್ದೇನೆ. ಈ ಸಮಯದಲ್ಲಿ ಏನು ವ್ಯತ್ಯಾಸವಿದೆ ಗೆಸ್ ಮಾಡಿ” ಎಂದು ಒಂದು ಫನ್ನಿ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ಕೊನೆಯಲ್ಲಿ ‘ಆದಿ ಲಕ್ಷ್ಮಿಪುರಾಣ’ ಸಿನಿಮಾ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

    ರಾಧಿಕಾ ಅವರು ಈ ರೀತಿ ಪೋಸ್ಟ್ ಹಾಕಿದ್ದ ತಕ್ಷಣ ಅಭಿಮಾನಿಗಳು ವ್ಯತ್ಯಾಸವನ್ನು ಕಂಡು ಹಿಡಿದು ಕಮೆಂಟ್ ಮಾಡುವ ಮೂಲಕ ಉತ್ತರಿಸಿದ್ದಾರೆ. ಕೆಲವರು ನೀವು ಈಗ ಇಬ್ಬರು ಡಬ್ಬಿಂಗ್ ಮಾಡಿದ್ದೀರಾ ಎಂದು ಮಾಡಿದ್ದಾರೆ. ಇನ್ನು ಕೆಲವರು ಜೂನಿಯರ್ ಯಶ್ ನಿಮಗೆ ಸಾಥ್ ಕೊಟ್ಟಿದ್ದಾರೆ ಎಂದು ಮಾಡಿದ್ದಾರೆ. ಬಳಿಕ ಅಭಿಮಾನಿಗಳು ಈ ಸಮಯದಲ್ಲಿ ನೀವು ರೆಸ್ಟ್ ಮಾಡಿ ಎಂದು ಕಾಳಜಿಯನ್ನ ವ್ಯಕ್ತಪಡಿಸಿದ್ದಾರೆ.

    ರಾಧಿಕಾ ಮತ್ತು ಯಶ್ ತಮ್ಮ ಮೊದಲನೆ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ಬೇಬಿಮೂನ್ ಗಾಗಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ತಮ್ಮ ಬೇಬಿಮೂನ್ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.instagram.com/p/BoGBUr0gtrO/?hl=en&taken-by=iamradhikapandit

  • ಗ್ಲಾಮರಸ್ ಲುಕ್‍ನಲ್ಲಿ ಸ್ವೀಟಿ ರಾಧಿಕಾ- ಫೋಟೋ ವೈರಲ್

    ಗ್ಲಾಮರಸ್ ಲುಕ್‍ನಲ್ಲಿ ಸ್ವೀಟಿ ರಾಧಿಕಾ- ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಅವರು ಕಪ್ಪು ಬಣ್ಣದ ಟಾಪ್ ಹಾಗೂ ಶಾರ್ಟ್ ಸ್ಕರ್ಟ್ ಧರಿಸಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಉಡುಪನ್ನು ಧರಿಸಿರುವ ರಾಧಿಕಾ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಆದರೆ ಫಿಟ್ನೆಸ್ ಬಗ್ಗೆ ಗಮನ ಹರಿಸುವ ರಾಧಿಕಾ ಇನ್ನೂ ತೆಳ್ಳಗೆ ಆಗಿದ್ದಾರೆ.

    15 ವರ್ಷಗಳ ಹಿಂದೆ ಇದ್ದಾಗ ಹೇಗಿದ್ದಿರೋ ಈಗಲೂ ಹಾಗೆಯೇ ಇದ್ದೀರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಹಿಂದೆ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವಾಗಲೂ ಪಾಸಿಟೀವ್ ಆಗಿ ಇರುತ್ತೇನೆ. ನಾನು ಯಾವುದೇ ವಿಚಾರಕ್ಕೂ ಟೆನ್ಷನ್ ಮಾಡಿಕೊಳ್ಳುವುದಿಲ್ಲ. ಒತ್ತಡ ಅನ್ನೋದು ಎಲ್ಲರ ಜೀವನದಲ್ಲೂ ಇರುತ್ತದೆ. ಆದರೆ ನಾನು ಅದನ್ನು 5-10 ಮಿನಿಟ್ ತೆಗೆದುಕೊಳ್ಳುತ್ತೇನೆ. ನಂತರ ಅದನ್ನು ಮರೆತು ನನ್ನ ಕೆಲಸದ ಕಡೆ ಗಮನ ಕೊಡುತ್ತೇನೆ. ಯಾವಾಗಲೂ ಸಿನಿಮಾ, ಕುಟುಂಬ ಎಂದು ಬ್ಯುಸಿಯಾಗಿರುತ್ತೇನೆ. ಕುಟುಂಬದೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ತಮ್ಮ ಬ್ಯೂಟಿ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದರು.

    ಸದ್ಯಕ್ಕೆ ರಾಧಿಕಾ `ಭೈರಾದೇವಿ’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾ ಮೂರು ಭಾಷೆಯಾಗಿರುವುದರಿಂದ ಸ್ವಲ್ಪ ತಡವಾಗುತ್ತಿದೆ. ಈ ತಿಂಗಳು ಸಂಪೂರ್ಣ ಶೂಟಿಂಗ್ ಮುಗಿಯುತ್ತದೆ ಎಂದು ಹೇಳಿದ್ದರು. ಜೊತೆಗೆ ರಾಜೇಂದ್ರ ಪೊನ್ನಪ್ಪ, ಹಾಗೂ ದಮಯಂತಿ ಸಿನಿಮಾದಲ್ಲಿಯೂ ಕೂಡ ಬ್ಯುಸಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv