ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಮಗಳು ಐರಾಳ ಮುದ್ದಾದ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಯಶ್ ತಮ್ಮ ಮಗಳ ತೊದಲ ಮಾತಿನ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ನಟ ಯಶ್ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಮಗಳೊಂದಿಗಿದ್ದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ರಾಧಿಕಾ ಅವರು ಇದ್ದು, ಮಗಳಿಗೆ ಮೇಕಪ್ ಮಾಡಲು ಪೌಡರ್ ಡಬ್ಬಿ ಹಿಡಿದು ಕುಳಿತುಕೊಂಡಿದ್ದಾರೆ. ಯಶ್ ಐರಾಳನ್ನು ಆಟವಾಡಿಸುತ್ತಾ ಮಾತನಾಡಿಸಿದ್ದಾರೆ. ಆಗ ಐರಾ ತೊದಲ ಮಾತನ್ನಾಡಿದ್ದಾರೆ. ನಂತರ ಯಶ್ ಐರಾ ಬೇಬಿ ಟಾಟಾ ಮಾಡು ಎಂದು ಹೇಳುತ್ತಾರೆ.
https://www.instagram.com/p/B2ZMjtBHV_X/
ಅಪ್ಪ ಕರೆದ ತಕ್ಷಣ ಐರಾ ಬಂದು ಎಲ್ಲರಿಗೂ ಕೈಯಿಂದ ಹಾಯ್ ಮಾಡಿದ್ದಾಳೆ. ಈ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ ಈ ವಿಡಿಯೋ 4.88 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ.
ಬೆಂಗಳೂರು: ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ತಮ್ಮ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಮಾಡಿದ್ದು, `ಬೇಬಿ ವೈಆರ್’ ಹೆಸರಲ್ಲಿ ಪರಿಚಯ ಮಾಡಿದ್ದ ಮಗಳಿಗೆ ‘ಐರಾ ಯಶ್’ ಎಂದು ನಾಮಕರಣ ಮಾಡಿದ್ದಾರೆ.
ಯಶ್ ಹಾಗೂ ರಾಧಿಕಾ ಅವರು ತಾಜ್ ವೆಸ್ಟ್ ಎಂಡ್ ನಲ್ಲಿ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮವನ್ನು ಮಾಡಿದ್ದು, ಒಕ್ಕಲಿಗರ ಸಂಪ್ರದಾಯದಂತೆ ನಾಮಕರಣ ನೆರವೇರಿಸಿದ್ದಾರೆ. ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆದಿದ್ದು, ಕಾರ್ಯಕ್ರಮದಲ್ಲಿ ಸಂಬಂಧಿಕರು ಮತ್ತು ಆಪ್ತರು ಮಾತ್ರ ಭಾಗವಹಿಸಿ ಮಗುವಿಗೆ ಆಶೀರ್ವಾದ ಮಾಡಿದ್ದಾರೆ. ಐರಾ ಅಂದರೆ ಲಕ್ಷ್ಮಿ ಅರ್ಥ ಬರುವ ಹಿನ್ನೆಲೆಯಲ್ಲಿ ಈ ಹೆಸರನ್ನು ಇರಿಸಿದ್ದಾರೆ.
ನಾಮಕರಣದ ನಂತರ ಕ್ಯಾಮೆರಾ ಮ್ಯಾನ್ ರಾಘವೇಂದ್ರ ಬಿ. ಕೋಲಾರ ತಂಡದಿಂದ ಫೋಟೋಶೂಟ್ ಮಾಡಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಯಶ್ ಮತ್ತು ರಾಧಿಕಾ ಅವರು ಇಂದು ತಮ್ಮ ಬೇಬಿ ವೈಆರ್‍ಗೆ ನಾಮಕರಣ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದರು.
ನಟ ಯಶ್ ಮತ್ತು ರಾಧಿಕಾ ಇಬ್ಬರು, “ಹಾಯ್..ನಂಗೆ ಹೆಸರಿಡುವ ಸಮಯ ಬಂದಿದೆ. ನೀವೆಲ್ಲಾ ತುಂಬಾ ಚೆನ್ನಾಗಿರುವ ಹೆಸರುಗಳನ್ನ ನನಗೋಸ್ಕರ ಆಯ್ಕೆ ಮಾಡಿದ್ರಿ. ಅದನ್ನೆಲ್ಲಾ ಮನಸಲ್ಲಿ ಇಟ್ಟುಕೊಂಡು ನನ್ನ ತಂದೆ ತಾಯಿ ನನಗೊಂದು ಮುದ್ದಾದ ಹೆಸರನ್ನ ಇಡುತ್ತಿದ್ದಾರೆ. ಅದೇನು ಅಂತ ತಿಳಿದುಕೊಳ್ಳಬೇಕು ಅಂದರೆ ನಾವೆಲ್ಲರೂ ಜೂನ್ 23 ತನಕ ಕಾಯಬೇಕು ಪ್ರೀತಿಯಿಂದ ನಿಮ್ಮ ಬೇಬಿ ವೈಆರ್” ಎಂದು ಬರೆದು ಮಗಳ ಫೋಟೋ ಅಪ್ಲೋಡ್ ಮಾಡಿದ್ದರು.
ಬೆಂಗಳೂರು: ನಟಿ ರಾಧಿಕಾ ಪಂಡಿತ್ ಗುರುವಾರವಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿಯ ಬರ್ತ್ ಡೇಗೆ ನಟ ಯಶ್ ವಿಶೇಷವಾಗಿ ವಿಶ್ ತಿಳಿಸಿದ್ದಾರೆ.
ನಟ ಯಶ್ ಅವರು ಟ್ವೀಟ್ಟರ್, ಇನ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಯಶ್ ಅವರು, “ಈ ಜೀವನದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದಕ್ಕಿಂತ, ಈ ಬದುಕಿನಲ್ಲಿ ನನ್ನ ಜೊತೆ ಯಾರಿದ್ದಾರೆ ಎಂಬುದರಿಂದ ನನ್ನ ಬದುಕು ಸುಂದರವಾಗಿದೆ. ನಿನಗೆ ಧನ್ಯವಾದ. ನೀನು ನನಗಾಗಿಯೇ ಹುಟ್ಟಿದ್ದೀಯಾ ಎಂದು ನನಗೆ ಭಾಸವಾಗುತ್ತದೆ. ಹ್ಯಾಪಿ ಬರ್ತ್ ಡೇ ಮೈ ಲವ್” ಎಂದು ಟ್ವೀಟ್ ಮಡಿದ್ದಾರೆ.
ಪ್ರೀತಿಯ ಮಾತುಗಳ ಜೊತೆ ಇಬ್ಬರ ಒಂದು ಸುಂದರವಾದ ಫೋಟೋ ಹಾಕಿದ್ದಾರೆ. ಆ ಫೋಟೋದಲ್ಲಿ ರಾಧಿಕಾ ಅವರನ್ನು ತಮ್ಮ ಕೈಗಳಿಂದ ಯಶ್ ಅಪ್ಪಿಕೊಂಡು ಅವರನ್ನೇ ನೋಡುತ್ತಿರುವುದನ್ನು ಕಾಣಬಹುದಾಗಿದೆ.
ರಾಧಿಕಾ ಅವರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಅವರ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಬರ್ತ್ ಡೇ ದಿನಕ್ಕೂ ಮುನ್ನವೇ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
Life is beautiful… not because of what i have in life… but because of who i have in my life… thank you, for it feels like you are born for me… Happy birthday my Love pic.twitter.com/0UzhTxLNvN
ಬೆಂಗಳೂರು: ‘ಭೈರಾದೇವಿ’ ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿದ್ದು, ಈಗ ಅವರಿಗೆ ಹೆಜ್ಜೆ ಹೆಜ್ಜೆಗೂ ದುಷ್ಟ ಶಕ್ತಿಯ ಸಂಕಷ್ಟ ಎದುರಾಗಿದೆ.
ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ವೇಳೆಯಲ್ಲಿ ರಾಧಿಕಾ ಅವರು ಗೋರಿ ಮೇಲೆ ಕಾಲಿಟ್ಟು ಎಡವಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಗಾಯವಾಗಿತ್ತು. ಇದನ್ನೂ ಓದಿ: ಶೂಟಿಂಗ್ ವೇಳೆ ಬಿದ್ದು ಗಾಯ ಮಾಡಿಕೊಂಡ ಸ್ಟೀಟಿ ರಾಧಿಕಾ
ಈಗ ನಟಿ ರಾಧಿಕಾ ಅವರಿಗೆ ಕಾಳೆ ಮಾತೆ ಕಾಡುತ್ತಿದೆಯಾ ಎಂಬ ಪ್ರಶ್ನೆ ಶುರುವಾಗಿದೆ. ಏಕೆಂದೆರೆ ಕಾಳಿ ಮಾತೆಯನ್ನು ತಣ್ಣಗೆ ಮಾಡಲು ದಿನಕ್ಕೊಂದು ಕುರಿಯನ್ನು ಬಲಿ ಕೊಡಲಾಗುತ್ತಿದೆ. ಭೈರಾದೇವಿ ಶೂಟಿಂಗ್ ಸೆಟ್ ನಲ್ಲಿ ರಾಧಿಕಾ ಅವರು ಬೆನ್ನು ಮುರಿದುಕೊಂಡಿದ್ದು, ಚಿತ್ರತಂಡಕ್ಕೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಎದುರಾಗುತ್ತಿದೆ.
ರಾಧಿಕಾ ಎಡವಿ ಬಿದ್ದ ನಂತರ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ವೈದ್ಯರು 30 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿತ್ತು. ಆದರೆ ರಾಧಿಕಾ ಈ ಗಾಯವನ್ನು ಲೆಕ್ಕಿಸದೆ ಮರುದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಮತ್ತೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಮೇರೆಗೆ ಸದ್ಯ ರಾಧಿಕಾ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು: ನಟಿ ರಾಧಿಕ ಬೈರಾದೇವಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶಾಂತಿನಗರ ಸ್ಮಶಾನದ ಗೋರಿಯ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟಾಗಿದೆ. ಆದರೆ ಶಾಂತಿನಗರದ ಈ ಸ್ಮಶಾನದಲ್ಲಿ ಕೆಲಸಗಾರರು ಮಾತ್ರ ಹೇಳೋದೆ ಬೇರೆ. ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾರಿಗೆ ಕಂಟಕ ಬಂದಿದ್ಯಾ? ಒಂದು ಕ್ಷಣ ಮೈನಡುಗಿಸುತ್ತೆ ಸ್ಮಶಾನದೊಳಗಿನ ಕೆಲಸಗಾರರು ಬಿಚ್ಚಿಟ್ಟ ಕತ್ತಲೆಯ ಕಥೆ.
ಶಾಂತಿನಗರದ ಈ ಸ್ಮಶಾನದ ಹೊರಭಾಗದ ರಸ್ತೆಯಲ್ಲೇ ಜನ ರಾತ್ರಿ ಹೊತ್ತು ಗಾಡಿ ಓಡಿಸೋಕೆ ಭಯ ಪಡ್ತಾರೆ. ಮಧ್ಯರಾತ್ರಿಯ ಕತ್ತಲೆಯಲ್ಲಿ ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಕಾಳಿ ವೇಷ ಹಾಕಿ ಹುಣಸೆಹಣ್ಣಿನ ಮರದ ಕೆಳಗೆ ಬೈರಾದೇವಿ ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿದ್ರು. ಇದೇ ಸಮಯದಲ್ಲಿ ಗೋರಿಯಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡು ಒಂದೂವರೆ ತಿಂಗಳು ಬೆಡ್ ರೆಸ್ಟ್ ನಲ್ಲಿದ್ದಾರೆ.
ಸಾಮಾನ್ಯ ಸ್ಮಶಾನದಂತಿದ್ದ ಶಾಂತಿನಗರದಲ್ಲೀಗ ಮಾಟಮಂತ್ರದಂತಹ ಘಟನೆಗಳು ಹೆಚ್ಚಾಗಿದ್ಯಯಂತೆ. ಅಮಾವಾಸ್ಯೆ ಬಂದ್ರೆ ಸಾಕು ನಾಯಿಗಳನ್ನು ಕೊಂದು ಇಲ್ಲಿ ಕ್ಷುದ್ರ ಶಕ್ತಿಯನ್ನು ಅವಾಹನೆ ಮಾಡ್ತಾರಂತೆ. ಇದನ್ನು ದಾಟಿದ್ರೆ ಬೇರೆಯವರಿಗೆ ಅಪಾಯವಾಗುತ್ತೆ. ಅಲ್ಲದೇ ಇತ್ತೀಚೆಗೆ ಸಂಬಂಧಿಕರ ಸ್ಮಶಾನಕ್ಕೆ ಪೂಜೆ ಸಲ್ಲಿಸೋಕೆ ಜನ ಶಾಂತಿನಗರ ಸ್ಮಶಾನದಲ್ಲಿ ಹಿಂದೇಟು ಹಾಕುತ್ತಿದ್ದಾರಂತೆ. ನೆಗೆಟಿವ್ ಎನರ್ಜಿ ಸ್ಮಶಾನದಲ್ಲಿರೋದ್ರಿಂದ ರಾಧಿಕಾಗೆ ತೊಂದರೆಯಾಗಿರಲೂಬಹುದು, ಇದುವರೆಗೆ ಯಾವ ಶೂಟಿಂಗ್ ಸಂದರ್ಭದಲ್ಲೂ ಈ ರೀತಿ ಅನಾಹುತವಾಗಿಲ್ಲ ಅನ್ನೋದು ಕೆಲಸಗಾರರ ಮಾತು.
ಈ ಸ್ಮಶಾನದಲ್ಲಿ ಎಂಟ್ರಿಯಾಗುತ್ತಲೇ ಕಾಳಿ ದೇವಿಯ ದೇಗುಲವಿದೆ. ಮೂಲವಿಗ್ರಹವಿರುವಾಗ ಇನ್ನೊಂದು ದೇವರ ಸೆಟ್ ಹಾಕಿ ಶೂಟಿಂಗ್ ಮಾಡುವಂತದ್ದು ಅಥವಾ ಸ್ಮಶಾನದ ಅವರಣದಲ್ಲಿ ಗೋರಿಯ ಪಕ್ಕ ಉಪ್ಪು, ಮೆಣಸು ಹಾಕಿ ಮಂತ್ರಪಠನೆ ಮಾಡಿದ್ರಿಂದ ಅನಾಹುತ ಸಂಭವಿಸಿರಬಹುದು. ಇಲ್ಲಿ ಏನೇ ಕೆಲಸ ಮಾಡಿದ್ರೂ ಮೊದಲು ಕಾಳಿಗೆ ಪೂಜೆ ಸಲ್ಲಿಸಲೇಬೇಕು. ಆದರೆ ಸಿನಿಮಾ ಟೀಮ್ ಇದನ್ನು ಮಾಡದೇ ಇದ್ದಿದ್ರಿಂದ ಹೀಗಾಗಿರಬಹುದು ಎಂದು ಸ್ಮಶಾನದ ಸಿಬ್ಬಂದಿ ಪುರಷೋತ್ತಮ್ ಹೇಳುತ್ತಾರೆ.
ಸ್ಮಶಾನ ಅಂದ್ರೆ ಅಲ್ಲೊಂದು ನೆಗೆಟಿವ್ ಎನರ್ಜಿ ಇರುತ್ತೆ ಅನ್ನುವ ನಂಬಿಕೆ ಸಾಮಾನ್ಯ. ಏನೇ ಆಗಲಿ ಅದಷ್ಟು ಬೇಗ ರಾಧಿಕಾ ಚೇತರಿಸಿಕೊಳ್ಳಲಿ ಅವರ ಆರೋಗ್ಯ ಸುಧಾರಿಸಲಿ ಅಂತಾ ಹಾರೈಸೋಣ.
ಬೆಂಗಳೂರು: ಭೈರಾದೇವಿ ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶಾಂತಿನಗರದ ಸ್ಮಶಾನದಲ್ಲಿ ಗುರುವಾರ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ವೇಳೆಯಲ್ಲಿ ರಾಧಿಕಾ ಅವರು ಗೋರಿ ಮೇಲೆ ಕಾಲಿಟ್ಟು ಎಡವಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಗಾಯವಾಗಿದೆ.
ತಕ್ಷಣವೇ ರಾಧಿಕಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ವೈದ್ಯರು 30 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಗಾಯವನ್ನು ಲೆಕ್ಕಿಸದೇ ಮರುದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ಮತ್ತೆ ನೋವು ಕಾಣಿಸಿಕೊಂಡಿದೆ. ವೈದ್ಯರ ಸಲಹೆ ಮೇರೆಗೆ ಸದ್ಯ ರಾಧಿಕಾ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇಂದು 33 ವಸಂತಕ್ಕೆ ಕಾಲಿಟ್ಟಿದ್ದು, ಅವರ ಪತ್ನಿ ರಾಧಿಕಾ ಪಂಡಿತ್ ಅವರು ಸಿಂಪಲ್ ಮತ್ತು ವಿಭಿನ್ನವಾಗಿ ಶುಭಾಶಯವನ್ನು ತಿಳಿಸಿದ್ದಾರೆ.
ನಟಿ ರಾಧಿಕಾ ಅವರು ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಪತಿ ಯಶ್ ಅವರಿಗೆ ಬರ್ತ್ ಡೇ ಶುಭಾಶಯವನ್ನು ಕೋರಿದ್ದಾರೆ. ರಾಧಿಕಾ ಅವರು, ‘Happy birthday to my perfect match’ ಎಂದು ಬರೆದು ಸಿಂಪಲ್ ಆಗಿ ವಿಶ್ ಮಾಡಿದ್ದಾರೆ.
ರಾಧಿಕಾ ವಿಶ್ ಮಾಡಿರುವುದು ಸಿಂಪಲಾಗಿದ್ರೂ ಡಿಫ್ರೆಂಟಾಗಿದೆ. ಈ ಮೂಲಕ ನನ್ನ ಒಳ್ಳೆಯ ಜೋಡಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ಜೊತೆಗೆ ಅವರು ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಇಬ್ಬರು ಒಂದೇ ಬಣ್ಣದ ಉಡುಪು ಧರಿಸಿರುವ ಮೂಲಕ ಇಬ್ಬರೂ ಫರ್ಪೆಕ್ಟ್ ಮ್ಯಾಚ್ ಎಂದು ತೋರಿಸಿ ಕೊಟ್ಟಿದ್ದಾರೆ.
ಯಶ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಎರಡು ದಿನಗಳ ಮುಂಚಿತವಾಗಿಯೇ ಅಭಿಮಾನಿಗಳಿಗೆ ಯಶ್ ತಿಳಿಸಿದ್ದರು. ಹಾಗಾಗಿ ಹೊಸಕೆರೆ ಹಳ್ಳಿಯ ಯಶ್ ನಿವಾಸ ಖಾಲಿ ಖಾಲಿ ಇದೆ. ಅಭಿಮಾನಿಗಳು ಕೂಡ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಫೋಟೋ ಹಾಕಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಬೆಂಗಳೂರು: ಭಾರತದಾದ್ಯಂತ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ಕೆಜೆಎಫ್ ಸಿನಿಮಾವನ್ನು ನೋಡಿಲ್ಲ.
ಹೌದು.. ನಟಿ ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾವನ್ನು ನೋಡಿಲ್ಲ. ಈ ಬಗ್ಗೆ ಯಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾವನ್ನು ಹೊಸ ಸೌಂಡ್‍ನಲ್ಲಿ ನೋಡುವುದಕ್ಕೆ ಓರಾಯನ್ ಮಾಲ್ ಗೆ ಹೋಗಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್, ರಾಧಿಕಾ ಪಂಡಿತ್ ಇನ್ನೂ ಸಿನಿಮಾ ನೋಡಿಲ್ಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!
ರಾಧಿಕಾ ಅವರಿಗೂ ಸಿನಿಮಾ ನೋಡಬೇಕೆಂಬ ಆಸೆ ಇದೆ. ಆದರೆ ನೋಡಲು ಸಾಧ್ಯವಾಗಿಲ್ಲ. ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ. ನಾನು ಸಿನಿಮಾ ನೋಡಲೇಬೇಕು ಎಂದು ಪ್ರತಿದಿನ ಕೇಳುತ್ತಿದ್ದಾರೆ. ಆದರೆ ರಾಧಿಕಾ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಯಾಕೆಂದರೆ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಧಿಕಾ ಸಿನಿಮಾ ನೋಡಲು ಆಗುವುದಿಲ್ಲ ಎಂದು ಯಶ್ ಅಭಿಮಾನಿಗಳ ಬಳಿ ಹೇಳಿದ್ದಾರೆ.
ರಾಧಿಕಾ ಅವರು ಡಿಸೆಂಬರ್ 2 ಭಾನುವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಜೊತೆ ಹೊಸ ಜಗತ್ತಿನಲ್ಲಿ ಹೊಸ ಅನುಭವಗಳನ್ನ ಪಡೆಯುತ್ತಿದ್ದಾರೆ.
ರಾಧಿಕಾಗೆ ಡಾಕ್ಟರ್ ರೆಸ್ಟ್ ಮಾಡಲು ಸೂಚಿಸಿದ್ದಾರೆ. ಆದರೂ ನಾನು ಸಿನಿಮಾ ನೋಡಬೇಕು ಎಂದು ಯಶ್ ಬಳಿ ತುಂಬಾ ಸಾರಿ ಹೇಳಿದ್ದಾರಂತೆ. ಆದರೆ ಡಾಕ್ಟರ್ ಸದ್ಯಕ್ಕೆ ಹೊರಗಡೆ ಹೋಗೋದು ಬೇಡ ಅಂತ ಕೆಜಿಎಫ್ ವೀಕ್ಷಣೆಗೆ ಬ್ರೇಕ್ ಹಾಕಿದ್ದಾರೆ. ಸದ್ಯದಲ್ಲೇ ತಾಯಿ, ಮಗು ಇಬ್ಬರು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎರಡನೇ ಮದುವೆ ವಾರ್ಷಿಕೋತ್ಸವವಾಗಿದೆ. ಆದರೆ ಇಂದೇ ತಮ್ಮ ಮುದ್ದಿನ ಮಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್, ಅಂದಿನ ದಿನ ನಾನು ಬೇರೆ ಕೆಲಸದಲ್ಲಿದ್ದೆ. ಆದ್ದರಿಂದ ನಾನು ಬಂದು ಯಾರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಆದರೆ ನೀವು ನಮ್ಮ ಮಾತಿಗೆ ಗೌರವ ಕೊಟ್ಟಿದ್ದೀರಿ. ಆದ್ದರಿಂದ ಮೊದಲೇಯದಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಮಾಧ್ಯಮದವರಿಗೆ ತಿಳಿಸಿದರು.
ನನ್ನ ಜೀವನದಲ್ಲಿ ಇದೊಂದು ಸ್ಪೆಷಲ್ ಅನುಭವವಾಗಿದೆ. ನಾವು ನಟರು, ಯಾವುದೇ ಭಾವನೆಗಳಿದ್ದರು ಅದನ್ನು ಎಕ್ಸ್ ಪ್ರೆಸ್ ಮಾಡುವುದೇ ನಮ್ಮ ಕೆಲಸವಾಗಿದೆ. ಆದರೆ ಈ ಭಾವನೆ, ಅನುಭವವನ್ನು ಹೇಳಿಕೊಳ್ಳುವ ಶಕ್ತಿ ಇಲ್ಲ. ಅದು ಸಾಧ್ಯನೂ ಇಲ್ಲ, ಇದೆಲ್ಲವನ್ನು ಮೀರಿದ ಅನುಭವವಾಗಿದ್ದು, ತುಂಬಾ ಖುಷಿಯಾಗಿದೆ ಎಂದು ಯಶ್ ಹೇಳಿದರು.
ಹೆಣ್ಣು ಮಕ್ಕಳು ಅಂದರೆ ನಮಗೆ ತುಂಬಾ ತುಂಬಾ ಆಸೆ ಇತ್ತು. ಆ ದೇವರು ಹೆಣ್ಣು ಮಗುವನ್ನೇ ಕೊಟ್ಟಿದ್ದು, ನನ್ನ ಆಸೆ ನೆರವೇರಿದೆ. ಆದ್ದರಿಂದ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಅಪ್ಪ-ಅಮ್ಮ ಮೊಮ್ಮಗಳನ್ನು ನೋಡಿದಾಗ ಪಟ್ಟ ಖುಷಿಗೆ ಬೆಲೆ ಕಟ್ಟೋಕೆ ಹಾಗಲ್ಲ. ಇಬ್ಬರು ಆರೋಗ್ಯವಾಗಿದ್ದಾರೆ, ಎಲ್ಲರೂ ಖುಷಿಯಾಗಿದ್ದೇವೆ ಎಂದು ಹೇಳಿದರು.
ಆಸ್ಪತ್ರೆಯ ಎಲ್ಲಾ ಸಿಬ್ಬಂದಿ, ವೈದ್ಯರು ಕಾಳಜಿಯಿಂದ ಚೆನ್ನಾಗಿ ನೋಡಿಕೊಂಡಿದ್ದಾರೆ. ಅಭಿಮಾನಿಗಳು ವಿಶ್ ಮಾಡಿದ್ದರು. ಆದರೆ ನಾನು ಯಾರಿಗೂ ಪ್ರತಿಕ್ರಿಯಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಕೈಮುಗಿದರು. ಈ ವೇಳೆ ರಾಧಿಕಾ ಅವರು ಮಗು ಅವರ ಅಪ್ಪ ಯಶ್ ತರಹ ಇದೆ. ನನ್ನ ಯಾವುದೇ ಲಕ್ಷಣವೂ ಇಲ್ಲ ಎಂದು ಖುಷಿಪಟ್ಟು ಹೇಳಿದರು.
ಸದ್ಯಕ್ಕೆ ಇಂದು ಸಂಜೆ ಮತ್ತೆ ನಾನು ಹೈದರಾಬಾದ್ ಹೋಗುತ್ತಿದ್ದೇನೆ. ಮಗುವಿನ ಹೆಸರಿನ ಬಗ್ಗೆ ಚರ್ಚೆ ಮಾಡಿಲ್ಲ. ನಾಮಕರಣ ದಿನದಂದೂ ಹೆಸರು ಹೇಳುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ಮಗಳಿಗಾಗಿ ಅಂಬರೀಶ್ ತೊಟ್ಟಿಲು ಮಾಡಿಸಿದ್ದ ಬಗ್ಗೆ ಮಾತನಾಡಿದರು.
ಇಂದು ನಮ್ಮಿಬ್ಬರ ಜೀವನದಲ್ಲಿ ಹೊಸ ಪ್ರಯಾಣವಾಗಿದೆ. ಅದರಲ್ಲೂ ನಾನು ಮುಖ್ಯವಾದ ಪಾತ್ರ ಮಾಡುತ್ತಿದ್ದೇನೆ. ಇಂದು ನಮ್ಮ ಮದುವೆ ವಾರ್ಷಿಕೋತ್ಸವದ ದಿನವಾಗಿದೆ. ನಾನು ಗರ್ಭಿಣಿಯಾಗಿನಿಂದ ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ. ಮಗುವಾದಾಗ ಹೇಗೆ ಎತ್ತಿಕೊಳ್ಳಬೇಕು ಎಂದು ಗೊತ್ತಿರಲಿಲ್ಲ, ಭಯವಾಗುತ್ತಿತ್ತು. ಆಗ ಅಮ್ಮ ಹೇಳಿಕೊಟ್ಟರು. ಎಲ್ಲವೂ ನನ್ನ ಜೀವನದಲ್ಲಿ ಒಂದೊಂದು ಅನುಭವವಾಗುತ್ತಿದೆ ಎಂದು ರಾಧಿಕಾ ಹೇಳಿಕೊಂಡರು.
ಬೆಳಗಾವಿ: ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಆಸೆಯಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಮಗಳಿಗೆ ಉಡುಗೊರೆ ನೀಡುವ ತೊಟ್ಟಿಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತಯಾರಾಗುತ್ತಿದೆ.
ಅಂಬರೀಶ್ ಅವರು ಯಶ್, ರಾಧಿಕಾ ಮಗುವಿಗಾಗಿ ಸ್ವತಃ ಫೋನ್ ಮಾಡಿ ತೊಟ್ಟಿಲು ಆರ್ಡರ್ ಮಾಡಿದ್ದರು. ತೊಟ್ಟಿಲು ತಯಾರಿಸಿ ಕೊಡುವಂತೆ ಬೆಳಗಾವಿ ಮೂಲದ ನಾರಾಯಣ್ ಕಲಾಲ ಅವರ ಜೊತೆ ಅಂಬಿ ಮಾತನಾಡಿದ್ದರು. ನಾರಾಯಣ್ ಕಲಾಲ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ ತೊಟ್ಟಿಲಿಗೆ ಆರ್ಡರ್ ಮಾಡಿದ್ದರು. ಆದರೆ ಶ್ರೀಧರ್ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಅಂಬಿ ನಿಧನದ ಬಳಿಕ ಈ ವಿಷಯ ಗೊತ್ತಾಗಿದೆ.
ಈ ಬಗ್ಗೆ ನಾರಾಯಣ್ ಕಲಾಲ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಂಬರೀಶ್ ನಿಧನರಾಗುವ 8-9 ದಿನಗಳ ಹಿಂದೆ ಅವರು ನನ್ನ ಬಳಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿಯಲ್ಲಿ ತೊಟ್ಟಿಲು ಮಾಡುತ್ತಾರಂತೆ ಅದು ಎಲ್ಲೋ ಎಂದು ಕೇಳಿದರು. ನನಗೂ ಇದರ ಬಗ್ಗೆ ವಿಶೇಷವಾಗಿ ಏನೂ ಗೊತ್ತಿರಲಿಲ್ಲ. ಹೌದು ಎಂದು ಹೇಳಿ ಬಳಿಕ ಬೇರೆಯವರ ಬಗ್ಗೆ ಕೇಳಿಕೊಳ್ಳೊಣ ಎಂದುಕೊಂಡೆ. ಆಗ ಅವರು ಯಶ್- ರಾಧಿಕಾಗೆ ಮಗು ಆಗುತ್ತೆ. ಹಾಗಾಗಿ ನಾನು ಒಂದು ತೊಟ್ಟಿಲು ಮಾಡಿಸಬೇಕು ಎಂದು ಹೇಳಿದರು. ನಾನು ಸರಿ ಅಣ್ಣ ಎಂದು ಹೇಳಿದೆ. ನಾನು ಕಲಘಟಗಿಯಲ್ಲಿ ತೊಟ್ಟಿಲಿನ ವಿಷಯದ ಬಗ್ಗೆ ಕೇಳಿಕೊಂಡು ಅವರಿಗೆ ಕರೆ ಮಾಡಿದ್ದಾಗ ಆರ್ಡರ್ ಮಾಡು ಎಂದು ಹೇಳಿದರು. ಇದನ್ನೂ ಓದಿ: ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!
ಹೆಣ್ಣು ಮಕ್ಕಳಿಗೆ ಮೊದಲ ಮಗುವಾದಾಗ ತವರು ಮನೆಯವರು ತೊಟ್ಟಿಲು ನೀಡುವ ಸಂಪ್ರದಾಯವಿದೆ. ಇದು ಅಂಬರೀಶ್ ಅವರಿಗೂ ಗೊತ್ತು. ಕೆಲವರ ಮನೆಯಲ್ಲಿ ಈ ಸಂಪ್ರದಾಯವಿರುತ್ತದೆ. ಕೆಲವರ ಮನೆಯಲ್ಲಿ ಇರುವುದಿಲ್ಲ. ಯಾರೋ ಕಲಘಟಗಿಯ ತೊಟ್ಟಿಲು ಬಗ್ಗೆ ಅಂಬರೀಶ್ ಅವರಲ್ಲಿ ಹೇಳಿದ್ದರಿಂದ ನಾನು ಅಲ್ಲಿ ಹೋಗಿ ವಿಚಾರಿಸಿದೆ. ಅಲ್ಲಿನ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ ಎಂಬುದು ತಿಳಿಯಿತು. ಕಲಘಟಗಿಯಲ್ಲಿ ತೊಟ್ಟಿಲು ಮಾಡಬೇಕಾದರೆ ಅವರು ಧಾರ್ಮಿಕವಾಗಿ ಮಾಡುತ್ತಾರೆ. ತೊಟ್ಟಲಿನಲ್ಲಿ ಕಥೆಗಳಲ್ಲಿ ಬರುವ ಮುದ್ದು ಕೃಷ್ಣ ಆಟ, ಲೀಲೆಗಳನ್ನು ವಿವರಿಸುವ ಚಿತ್ರಗಳನ್ನು ಬಿಡಿಸಲಾಗುತ್ತದೆ. ಆ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ತೊಟ್ಟಿಲಿಗೆ ಲೇಪನ ಮಾಡುತ್ತಾರೆ ಎಂದು ತಿಳಿಸಿದರು.
ಈ ತೊಟ್ಟಿಲಿಗೆ ಸುಮಾರು 1 ಲಕ್ಷ ರೂ.ವಿರುತ್ತದೆ. ದರವನ್ನು ಕೇಳಿ ಯಶ್ ನೀವು ಹಣ ತೆಗೆದುಕೊಳ್ಳಬೇಕು ಎಂದು ಹೇಳಿದರು. ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಇದು ಅಂಬಿ ಅಣ್ಣನ ಆಸೆ. ಹಣದ ಬಗ್ಗೆ ನಾನು ಅಣ್ಣ ಮಾತನಾಡಿಲ್ಲ. ನೀವು ಹಣ ತೆಗೆದುಕೊಂಡಿಲ್ಲ ಅಂದರೆ ನನಗೆ ಮುಜುಗರ ಆಗುತ್ತೆ ಎಂದು ಯಶ್ ಹೇಳಿದರು. ಇದು ಅಣ್ಣ ಕೊಡುತ್ತಿರುವುದು. ಹಾಗಾಗಿ ದುಡ್ಡಿನ ವಿಚಾರವನ್ನು ಈ ವಿಷಯದಲ್ಲಿ ತರಬೇಡಿ ಎಂಂದು ತಿಳಿಸಿದೆ.
ರಾಧಿಕಾ ಅವರ ಡೆಲಿವರಿ 9 ಅಥವಾ 10 ರಂದು ಆಗುತ್ತದೆ ಎಂದು ಯಶ್ ಪಿಎ ತಿಳಿಸಿದ್ದರು. ಈ ತೊಟ್ಟಿಲನ್ನು ಡಿಸೆಂಬರ್ 26 ರಂದು ಯಶ್ ಅವರಿಗೆ ನೀಡಬೇಕಿತ್ತು. ಆದರೆ ಡೆಲಿವರಿ ಡೇಟ್ ಮೊದಲೇ ರಾಧಿಕಾ ಅವರಿಗೆ ಮಗು ಆಗಿದ್ದ ಕಾರಣ 20ರ ಒಳಗಡೆ ತೊಟ್ಟಿಲು ನೀಡಬೇಕಿದೆ. ಹೀಗಾಗಿ ಈಗ ಹಗಲು ರಾತ್ರಿ ಎನ್ನದೇ ತೊಟ್ಟಿಲಿನ ಕೆಲಸ ನಡೆಯುತ್ತಿದೆ ಎಂದು ನಾರಾಯಣ್ ಕಲಾಲ ಪಬ್ಲಿಕ್ ಟಿವಿಗೆ ತಿಳಿಸಿದರು.