Tag: radhika

  • ಮಗನಿಗೆ ಜಾನಿ ಜಾನಿ ಎಸ್ ಪಪ್ಪಾ ಹೇಳಿಕೊಟ್ಟ ಯಶ್ – ವಿಡಿಯೋ ವೈರಲ್

    ಮಗನಿಗೆ ಜಾನಿ ಜಾನಿ ಎಸ್ ಪಪ್ಪಾ ಹೇಳಿಕೊಟ್ಟ ಯಶ್ – ವಿಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಪತಿ ಯಶ್ ಮತ್ತು ಮಗ ಯಥರ್ವ್ ಯಶ್‍ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಲ್ಪೆಯ ಬ್ಲ್ಯಾಕ್ ರಾಕ್ ನಡುವೆ ರಾಕಿಂಗ್ ಸ್ಟಾರ್ ಯಶ್ ಖದರ್

    ಲಾಕ್‍ಡೌನ್ ಸಮಯದಲ್ಲಿ ರಾಕಿಂಗ್ ದಂಪತಿ ಮನೆಯಲ್ಲಿ ತಮ್ಮ ಮಕ್ಕಳ ಜೊತೆ ಕಾಲಕಳೆದಿದ್ದಾರೆ. ಈ ವೇಳೆ ರೆಕಾರ್ಡ್ ಮಾಡಿಕೊಂಡಿದ್ದ ಎರಡು ವಿಡಿಯೋವನ್ನು ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಆ ವಿಡಿಯೋಗೆ ‘ಲಾಕ್‍ಡೌನ್ ಡೈರೀಸ್’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

    ವಿಡಿಯೋದಲ್ಲಿ ಯಶ್ ತಮ್ಮ ಮಗನಿಗೆ ‘ಜಾನಿ ಜಾನಿ ಎಸ್ ಪಪ್ಪಾ’ ಹಾಡನ್ನು ಹೇಳಿಕೊಡುತ್ತಿದ್ದಾರೆ. ಕೊನೆಯಲ್ಲಿ ಅಪ್ಪನ ಹಾಡಿಗೆ ಯಥರ್ವ್ ಕೂಡ ಸಾಥ್ ಕೊಟ್ಟಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಇದೇ ಹಾಡನ್ನು ಯಶ್ ಮಗನಿಗೆ ಹೇಳಿಕೊಂಡಿದ್ದಾರೆ. ಈ ವೇಳೆ ಯಶ್ ಮಗಳು ಐರಾ ಕೂಡ ಹಾಡನ್ನು ಹೇಳಿರುವುದನ್ನು ನೋಡಹುದಾಗಿದೆ.

    ರಾಧಿಕಾ ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‍ಡೌನ್ ಫ್ರೀ ಆದ ನಂತರ ಯಶ್ ‘ಕೆಜಿಎಫ್ 2’ ಸಿನಿಮಾದ ಚಿತ್ರೀಕರಣ ಉಡುಪಿಯ ಮಲ್ಪೆಯಲ್ಲಿ ನಡೆಯುತ್ತಿದೆ.

    ಕಪ್ಪು ಬಣ್ಣದ 8-10 ಕಾರುಗಳು, ಅರಬ್ಬಿ ಸಮುದ್ರದ ತಟದಲ್ಲಿ ಐದಾರು ಬೋಟುಗಳು, ಬ್ರೌನ್ ಅಂಡ್ ವೈಟ್ ಡ್ರೆಸ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಿಂಚಿದ್ದಾರೆ. ಕೊರೊನಾ ಲಾಕ್‍ಡೌನ್ ಮುಗಿಸಿದ ನಂತರ ಕೆಜಿಎಫ್ ಚಿತ್ರತಂಡ ಚಿತ್ರೀಕರಣ ಜೋರಾಗಿ ನಡೆಸುತ್ತಿದೆ. ಪ್ರಶಾಂತ್ ನೀಲ್ ಬೆಟಾಲಿಯನ್ ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆ ಕಡಲಕಿನಾರೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕ ಯಶ್ ಮತ್ತು ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    https://www.instagram.com/p/CGJxEFogdLc/?igshid=1p9wkbmb56nxa

    ಉಡುಪಿಯಲ್ಲಿ ಕೆಜಿಎಫ್ ಚಿತ್ರ ತಂಡ ಮೂರು ದಿನ ಟೆಂಡ್ ಹಾಕಿದೆ. ಮಲ್ಪೆ ಬೀಚ್, ಮಲ್ಪೆ ಬಂದರು, ಪಡುಕೆರೆ ಬ್ರಿಜ್ ಆಸುಪಾಸಿನಲ್ಲಿ ಚಿತ್ರೀಕರಣ ನಡೆಸಲಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿರುವುದರಿಂದ ಮಲ್ಪೆ-ಪಡುಕೆರೆ ಕಡಲ ತೀರವನ್ನು ಮುಂಬೈ ಮಾದರಿಯಲ್ಲಿ ಚಿತ್ರೀಕರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

     

  • ಮಗಳ ಕೈಯಿಂದ ಕರುವಿಗೆ ಬಾಳೆಹಣ್ಣು ತಿನ್ನಿಸಿದ ಯಶ್

    ಮಗಳ ಕೈಯಿಂದ ಕರುವಿಗೆ ಬಾಳೆಹಣ್ಣು ತಿನ್ನಿಸಿದ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಸದ್ಯಕ್ಕೆ ತಮ್ಮ ಇಬ್ಬರು ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ನಟಿ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಪತಿ ಯಶ್ ಮತ್ತು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ದೇಹ ಅಪ್ಪ,ಅಮ್ಮ ಕೊಟ್ಟಿರೋ ಭಿಕ್ಷೆ – ಡ್ರಗ್ಸ್ ಬಗ್ಗೆ ಯಶ್ ಖಡಕ್ ಮಾತು

    ಇತ್ತೀಚೆಗಷ್ಟೆ ಯಶ್ ಮತ್ತು ರಾಧಿಕಾ ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ದಂಪತಿ ತಮ್ಮ ಫಾರ್ಮ್ ಹೌಸ್‍ನಲ್ಲೇ ಸರಳವಾಗಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಾಮಕರಣ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಯಶ್ ತಮ್ಮ ಮಗನಿಗೆ ಯಥರ್ವ್ ಯಶ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯಕ್ಕೆ ರಾಕಿಂಗ್ ದಂಪತಿ ತಮ್ಮ ಮಕ್ಕಳೊಂದಿಗೆ ಫಾರ್ಮ್ ಹೌಸ್‍ನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇದನ್ನೂ ಓದಿ: ಜೂನಿಯರ್ ಯಶ್‍ಗೆ ನಾಮಕರಣ ಸಂಭ್ರಮ

    ಪಾರ್ಮ್ ಹೌಸ್‍ನಲ್ಲಿರುವ ಫೋಟೋವೊಂದು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಯಶ್ ತಮ್ಮ ಮಗಳು ಐರಾಳ ಕೈಯಿಂದ ಹಸುವಿನ ಕರುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವುದನ್ನು ಕಾಣಹುದಾಗಿದೆ. ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚಗೆಷ್ಟೆ ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಯಶ್, ಡ್ರಗ್ಸ್ ಅನ್ನೋದು ದೇಶಕ್ಕೆ, ಜಗತ್ತಿಗೆ ಮಾರಕವಾಗಿದೆ. ಡ್ರಗ್ಸ್ ಅಂದರೆ ಇಡೀ ಯುವ ಜನತೆಗೆ ಮಾರಕ. ಅದರಲ್ಲಿ ಯಾರ‍್ಯಾರು ಇದ್ದಾರೆ ಎಂಬುದನ್ನು ನೋಡಿದ್ರೆ, ಹತ್ತು ಡಿಪಾರ್ಟ್ ಮೆಂಟ್ ಇರುತ್ತೆ. ಆದರೆ ಹೈಲೈಟ್ ಆಗುವುದು ಕನ್ನಡ ಚಿತ್ರರಂಗ ಮಾತ್ರ. ಆದರೆ ಇದರಲ್ಲಿ ಇಡೀ ಚಿತ್ರರಂಗ ಅಂತ ಹೇಳಬೇಡಿ. ಯುವಕರು, ಯುವತಿಯರು, ನಮ್ಮ ರಾಜ್ಯದ ಜನರಿಗೆ ಆಗುತ್ತಿದೆ ಎಂದು ಹೇಳಿ. ಆಗ ನಾವೆಲ್ಲರೂ ಒಟ್ಟಾಗಿ ಸಮಾಜದ ಪ್ರಜೆಯಾಗಿ ಚಿಕ್ಕಮಕ್ಕಳಿಗೂ ಜಾಗೃತಿ ಮೂಡಿಸಬೇಕು ಎಂದಿದ್ದರು.

    https://www.instagram.com/p/CE_FPRFAiIy/?igshid=1ut36kb2xb0id

    ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ. ಅದು ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವುದು. ನಿಮ್ಮ ಪೋಷಕರು ನೀವು ಕೆಳಗೆ ಬಿದ್ದರೆ ಏನಾಗುತ್ತೋ ಎಂದು ಸಾಕಿರುತ್ತಾರೆ. ನನಗೂ ಮಕ್ಕಳಿದ್ದಾರೆ. ಪೋಷಕರು ಒಳ್ಳೆಯ ಊಟ ತಂದು ಮಕ್ಕಳಿಗೆ ಕೊಟ್ಟು ತಿನ್ನಿಸಿ ಬೆಳೆಸಿರುತ್ತಾರೆ. ಅಷ್ಟು ಕಾಳಜಿಯಿಂದ ಬೆಳೆಯಿಸಿರುವ ನಿಮ್ಮನ್ನು ಮುಂದೆ ಏನೋ ಆಗುತ್ತಾರೆ ಎಂದು ಕನಸು ಕಾಣುತ್ತಿರುತ್ತಾರೆ ಎಂದು ಯಶ್ ಹೇಳಿದ್ದರು.

     

    ಯಾರ‍್ಯಾರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೋ ಅವರಿಗೆ ಒಂದು ಮಾತನ್ನ ಹೇಳುವುದಕ್ಕೆ ಇಷ್ಟ ಪಡುತ್ತೀನಿ. ಡ್ರಗ್ಸ್ ಎಂದು ತೆಗೆದುಕೊಂಡು ಹಾಳಾಗಬೇಡಿ. ನಿಮ್ಮ ದೇಹವನ್ನು ನಿಮ್ಮ ಅಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನಿಮಗೆ ಯಾವುದೇ ಅಧಿಕಾರ ಇಲ್ಲ. ನಿಮ್ಮ ಪೋಷಕರಿಗಾಗಿ ಒಳ್ಳೆಯ ಹೆಸರು, ಗೌರವದಿಂದ ಕೆಲಸ ಮಾಡಿ. ಇಂತಹ ದುಶ್ಚಟಗಳನ್ನು ಬಿಡಿ ಎಂದು ಯಶ್ ಖಡಕ್ ಸಂದೇಶವನ್ನು ನೀಡಿದ್ದರು.

  • ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕಾ ದೂರು

    ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕಾ ದೂರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪೈರಸಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನಟಿ ರಾಧಿಕಾ ಅಭಿನಯಿಸಿರುವ ಸಿನಿಮಾವನ್ನು ಆರೋಪಿಗಳು ಕಾನೂನು ಬಾಹಿರವಾಗಿ ಯೂಟ್ಯೂಬ್‍ಗೆ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ರಾಧಿಕಾ ಕಿಡಿಗೇಡಿಗಳ ವಿರುದ್ಧ ಉತ್ತರ ವಿಭಾಗ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಧಿಕಾ ನಟಿಸಿ, ನಿರ್ಮಿಸಿದ್ದ ‘ಸ್ವೀಟಿ ನನ್ನ ಜೋಡಿ’ ಸಿನಿಮಾವನ್ನು ಕಿಡಿಗೇಡಿಗಳು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ದೂರಿನಲ್ಲಿ ಏನಿದೆ?
    ಸುಮಾರು ಮೂರು ಕೋಟಿ ವೆಚ್ಚದಲ್ಲಿ ‘ಸ್ವೀಟಿ ನನ್ನ ಜೋಡಿ’ ಕನ್ನಡ ಸಿನಿಮಾವನ್ನು ನಿರ್ಮಿಸಲಾಗಿತ್ತು. ಆದರೆ ಯಾರೋ ಅಪರಿಚಿತರು ಸಿನಿಮಾ ವಿಡಿಯೋವನ್ನು ನನ್ನ ಅನುಮತಿ ಪಡೆಯದೆ ಹಾಗೂ ಗಮನಕ್ಕೆ ತರದೆ ಯೂಟ್ಯೂಬ್‍ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುವ ಮೂಲಕ ಪೈರಸಿ ಮಾಡಿದ್ದಾರೆ. ಹೀಗಾಗಿ ಸಿನಿಮಾ ಅಪ್ಲೋಡ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ರಾಧಿಕಾ ದೂರು ನೀಡಿದ್ದಾರೆ. ಇದೀಗ ರಾಧಿಕಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

  • ರಾಕಿಂಗ್ ದಂಪತಿಯ ಕ್ಯೂಟ್ ಫ್ಯಾಮಿಲಿ ಫೋಟೋ ವೈರಲ್

    ರಾಕಿಂಗ್ ದಂಪತಿಯ ಕ್ಯೂಟ್ ಫ್ಯಾಮಿಲಿ ಫೋಟೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಕಪಲ್ ಮನೆಗೆ ಜೂನಿಯರ್ ಯಶ್ ಆಗಮಿಸಿ ಆರು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಜೂನಿಯರ್ ರಾಜಾಹುಲಿಯ ದರ್ಶನ ಮಾಡಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ದಂಪತಿಯ ಕುಟುಂಬದ ಫೋಟೋ ವೈರಲ್ ಆಗುತ್ತಿದೆ.

    ಯಶ್, ರಾಧಿಕಾ ಪಂಡಿತ್, ಐರಾ ಮತ್ತು ಜೂನಿಯರ್ ಯಶ್ ನಾಲ್ವರು ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಅಭಿಮಾನಿಗಳು ಇನ್‍ಸ್ಟಾಗ್ರಾಂ, ಫೇಸ್‍ಬುಕ್ ಮತ್ತು ಟ್ವಿಟ್ಟರಿನಲ್ಲಿ ಶೇರ್ ಮಾಡುತ್ತಿದ್ದಾರೆ. ಫೋಟೋದಲ್ಲಿ ಎಲ್ಲರೂ ಬ್ಲಾಕ್ ಆ್ಯಂಡ್ ವೈಟ್ ಕಾಂಬಿನೇಷನ್‍ನಲ್ಲಿ ಉಡುಪು ಧರಿಸಿದ್ದು, ರಾಧಿಕಾ ಅವರು ತಮ್ಮ ಮುದ್ದು ಮಗನನ್ನು ಎತ್ತಿಕೊಂಡಿದ್ದಾರೆ. ಇನ್ನೂ ಯಶ್ ಒಂದು ಕೈಯಲ್ಲಿ ಮಗಳನ್ನು ಎತ್ತಿಕೊಂಡಿದ್ದು, ಇನ್ನೊಂದು ಕೈಯಲ್ಲಿ ರಾಧಿಕಾರನ್ನು ಅಪ್ಪಿಕೊಂಡಿದ್ದಾರೆ. ರಾಕಿಂಗ್ ದಂಪತಿಯ ಕುಟುಂಬದ ಫೋಟೋ ತುಂಬಾ ಕ್ಯೂಟಾಗಿದೆ.

    https://www.instagram.com/p/B_mjSb9AJTb/?utm_source=ig_embed

    ಕಳೆದ ದಿನವೇ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮೊದಲ ಬಾರಿಗೆ ತಮ್ಮ ಪುತ್ರನ ಫೋಟೋವನ್ನು ರಿವೀಲ್ ಮಾಡಿದ್ದಾರೆ. ರಾಧಿಕಾ ಅವರು ಆ ಫೋಟೋಗೆ, “ಇವನೇ ನಮ್ಮ ಕುಟುಂಬದ ಕಾಮನಬಿಲ್ಲು, ಅಮ್ಮನ ಮುದ್ದಿನ ಮಗ. ನಮ್ಮ ಜ್ಯೂನಿಯರ್ ಯಶ್‍ಗೆ ನಿಮ್ಮಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು” ಎಂದು ಬರೆದುಕೊಂಡಿದ್ದರು.

    ಯಶ್ ಕೂಡ ಇದೇ ಫೋಟೋವನ್ನು ಅಪ್ಲೋಡ್ ಮಾಡಿದ್ದು, “ನಿಮ್ಮ ಪ್ರೀತಿ, ಆಶೀರ್ವಾದ, ಹಾರೈಕೆ ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ” ಎಂದು ಪ್ರೀತಿಯಿಂದ ಹೇಳಿದ್ದರು. ಯಶ್ ಮತ್ತು ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಯಶ್ ದಂಪತಿ ಮಕ್ಕಳ ಫೋಟೋವನ್ನು ರಿವೀಲ್ ಮಾಡಲು ಬಹಳ ಚ್ಯೂಸಿಯಾಗಿರುತ್ತಾರೆ. ಈ ಹಿಂದೆ ಮಗಳ ಫೋಟೋವನ್ನು ಕೂಡ ಬಹಳ ದಿನಗಳ ಬಳಿಕ ರಿವೀಲ್ ಮಾಡಿದ್ದರು. ಇದೇ ರೀತಿ ಜೂನಿಯರ್ ಫೋಟೋ ಕೂಡ ರಿವೀಲ್ ಮಾಡಿದ್ದಾರೆ.

  • ಎಸ್‍ಪಿ ರಾಧಿಕಾ ಕಾಳಜಿಗೆ ಪೊಲೀಸರು ಫಿದಾ

    ಎಸ್‍ಪಿ ರಾಧಿಕಾ ಕಾಳಜಿಗೆ ಪೊಲೀಸರು ಫಿದಾ

    ಚಿತ್ರದುರ್ಗ: ರಾಜ್ಯದ ವಿವಿಧೆಡೆ ಪೊಲೀಸರಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆಯಲ್ಲಿ ಚಿತ್ರದುರ್ಗ ಪೊಲೀಸರಿಗೆ ಕೊರೊನಾ ಸೊಂಕು ಹರಡದಂತೆ ಎಸ್‍ಪಿ ರಾಧಿಕಾ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಎಸ್‍ಪಿಯವರ ಕಾಳಜಿಗೆ ಚಿತ್ರದುರ್ಗದ ಪೊಲೀಸರು ಫಿದಾ ಆಗಿದ್ದಾರೆ.

    ಹೌದು. ಪೊಲೀಸರ ಆರೋಗ್ಯ ರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿರುವ ಲೇಡಿ ಸಿಂಗಂ, ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಸ್ವತಃ ಎಸ್‍ಪಿಯವರೇ ಕೀಟನಾಶಕ ಸಿಂಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

    ಪೊಲೀಸ್ ಠಾಣೆಗಳ ಆವರಣ ಹಾಗೂ ಕ್ವಾಟ್ರಸ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಕೊರೊನಾ ಹರಡದಂತೆ ಜಾಗೃತರಾಗಿರುವಂತೆ ಕರೆ ನೀಡಿದರು. ಹಾಗೆಯೇ ಪೊಲೀಸ್ ಕ್ವಾಟ್ರಸ್ ಮತ್ತು ಠಾಣೆಗಳಿಗೆ ಯಾರೂ ಅಪರಿಚಿತರು ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿರುವ ಎಸ್‍ಪಿ ರಾಧಿಕಾ ಅವರು ಪೊಲೀಸರ ಮಕ್ಕಳು ಹಾಗೂ ಕುಟುಂಬಸ್ಥರ ಮೇಲೆ ತೀವ್ರ ಕಾಳಜಿ ವಹಿಸಿರುವುದಕ್ಕೆ ಚಿತ್ರದುರ್ಗ ಪೊಲೀಸರು ಫುಲ್ ಫಿದಾ ಆಗಿದ್ದಾರೆ.

  • ಅಪ್ಪನಿಗೆ ತುತ್ತು ತಿನ್ನಿಸಿದ ಐರಾ

    ಅಪ್ಪನಿಗೆ ತುತ್ತು ತಿನ್ನಿಸಿದ ಐರಾ

    ಬೆಂಗಳೂರು: ಕೊರೊನಾ ವೈರಸ್‍ಗೆ ಕರುನಾಡನೇ ಸ್ತಬ್ಧವಾಗಿದೆ. ಸಿನಿಮಾ, ಸೀರಿಯಲ್ ಎಲ್ಲವೂ ಕ್ಯಾನ್ಸಲ್ ಆಗಿರುವ ಪರಿಣಾಮ ಸ್ಟಾರ್ ನಟ-ನಟಿಯರು ತಮ್ಮ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳು ಐರಾಳಿಗೆ ಶರಣಾಗಿದ್ದಾರೆ.

    ಚಿತ್ರೋದ್ಯಮ ಬಂದ್ ಆದ ಹಿನ್ನೆಲೆಯಲ್ಲಿ ಮನೆಯಲ್ಲಿ ಸ್ಟಾರ್ಸ್ ಬಂಧಿಯಾಗಿದ್ದು, ಸ್ಟೇ ಹೋಮ್- ಸ್ಟೇ ಸೇಫ್ ಎಂದು ಹೇಳುತ್ತಿದ್ದಾರೆ. ಅಲ್ಲದೇ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ನಟ ಯಶ್ ಮಗಳು ಐರಾ ಜೊತೆ ಕಾಲಕಳೆಯುತ್ತಿದ್ದಾರೆ.

    https://www.instagram.com/p/B-FN4PpHKWL/

    ಐರಾ ಹೇಳಿದ ಹಾಗೇ ಯಶ್ ಕೇಳುತ್ತಿದ್ದಾರೆ. ಅಪ್ಪನಿಗೆ ಐರಾ ಸ್ಪೂನ್ ಫೀಡ್ ಮಾಡಿಸುತ್ತಿದ್ದಾಳೆ. ನೀನು ತಿಂದರೆ ಮಾತ್ರ ತಿನ್ನುತ್ತೇನೆ ಎಂದು ಯಶ್ ಹೇಳುತ್ತಿದ್ದಾರೆ. ಆದರೆ ಐರಾಗೆ ತಿನ್ನಿಸೋಕೆ ಯಶ್ ಹರಸಾಹಸ ಪಟ್ಟರೂ ವರ್ಕೌಟ್ ಆಗಿಲ್ಲ. ಐರಾ ಮಾತ್ರ ಅಪ್ಪನಿಗೆ ಮತ್ತೆ ಮತ್ತೆ ತುತ್ತು ತಿನ್ನಿಸಿದ್ದಾಳೆ.

    ಇದನ್ನು ರಾಧಿಕಾ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಪ- ಮಗಳ ಬಾಂಧವ್ಯದ ಈ ಸನ್ನಿವೇಶಕ್ಕೆ ಫ್ಯಾನ್ಸ್ ದಿಲ್ ಖುಷ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೂ 7 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚಿನ ಜನರು ಕಮೆಂಟ್ ಮಾಡಿದ್ದಾರೆ.

  • ಸ್ಥಳ ಪರಿಶೀಲನೆಗೆ ಸೈಕಲಿನಲ್ಲಿ ಆಗಮಿಸಿ ಗಮನ ಸೆಳೆದ ಚಿತ್ರದುರ್ಗ ಎಸ್‍ಪಿ

    ಸ್ಥಳ ಪರಿಶೀಲನೆಗೆ ಸೈಕಲಿನಲ್ಲಿ ಆಗಮಿಸಿ ಗಮನ ಸೆಳೆದ ಚಿತ್ರದುರ್ಗ ಎಸ್‍ಪಿ

    ಚಿತ್ರದುರ್ಗ: ಸಾಮಾನ್ಯವಾಗಿ ಪೊಲೀಸರು ಎಂದರೆ ಖಾಕಿ ಧರಿಸಿ ಲಾಠಿ ಹಿಡಿದು ಜೀಪಿನಲ್ಲಿ ಬೀಟ್ ಹೋಗೋದು ಸಹಜ. ಆದರೆ ಕೋಟೆನಾಡು ಚಿತ್ರದುರ್ಗದ ಲೇಡಿ ಸಿಂಗಂ ಎನಿಸಿರುವ ಎಸ್‍ಪಿ ರಾಧಿಕಾ ಅವರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಸಿದ್ಧತೆ ವೀಕ್ಷಿಸಲು ಸಿಬ್ಬಂದಿ ಜೊತೆ ಸೈಕಲಿನಲ್ಲಿ ಬೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಧ್ಯ ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಅತಿ ದೊಡ್ಡ ಜಾತ್ರೆ ಎನಿಸಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಹೀಗಾಗಿ ಪ್ರತಿ ವರ್ಷದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲನೆಗಾಗಿ ಎಸ್‍ಪಿ ರಾಧಿಕಾ ಅವರು ಸೈಕಲಿನಲ್ಲಿ ಆಗಮಿಸಿದರು. ಚಿತ್ರದುರ್ಗದಿಂದ ಮನಮಯ್ಯನಹಟ್ಟಿ ಗೇಟ್‍ವರೆಗೆ ಕಾರಿನಲ್ಲಿ ಬಂದ ಅವರು, ನಾಯಕನಟ್ಟಿಯವರೆಗೆ ಸೈಕ್ಲಿಂಗ್ ಕ್ರೀಡಾಪಟುವಂತೆ ಆಗಮಿಸಿದರು.

    ಸೈಕಲ್ ಸವಾರಿ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಜಾತ್ರೆ ನಡೆಯುವ ಪ್ರತಿಯೊಂದು ಸೊಂದಿಗೊಂದಿಗಳ ಸ್ಥಳಕ್ಕೂ ಕಾರಿನಲ್ಲಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಸೈಕಲಿನಲ್ಲಿ ಸ್ಥಳ ಪರಿಶೀಲನೆ ನಡೆಸುವ ತಂತ್ರ ಅನುಸರಿಸಿ ಎಂಬುದಾಗಿ ಎಸ್‍ಪಿ ರಾಧಿಕಾ ಅವರು ಸೂಚಿಸಿದ್ದರು. ಅಲ್ಲದೆ ಜಾತ್ರೆಯಲ್ಲಿ ಪಾರ್ಕಿಂಗ್, ಚೆಕ್ ಪೋಸ್ಟ್‍ಗಳು ಹಾಗೂ ಬಿಗಿ ಭದ್ರತೆ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಹೇಳಿದ್ದರು ಎಂದರು.

    ಪ್ರತಿ ವರ್ಷಕ್ಕಿಂತ ಈ ಬಾರಿ ಚೆಕ್ ಪೋಸ್ಟ್ ಗಳ ಸಂಖ್ಯೆ ಹೆಚ್ಚಿಸಿದ್ದು, ಈ ಬಾರಿ 24 ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸಲಿವೆ. ಅಲ್ಲದೆ ಜಾತ್ರೆಯ ರಥೋತ್ಸವದ ವೇಳೆ ಅಡಚಣೆಯಾಗದಂತೆ ವಿಶೇಷ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಸಹ ರಾಧಿಕಾ ಅವರು ತಾಕೀತು ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ. ಬೆಳಗ್ಗೆ ಎಸ್‍ಪಿ ರಾಧಿಕಾ ಅವರಿಗೆ ಎಎಸ್‍ಪಿ ನಂದಗಾವಿ, ಡಿವೈಎಸ್‍ಪಿ ರೋಷನ್ ಬೇಗ್, ಪಿಎಸ್‍ಐ ರಘುನಾಥ್ ಸೇರಿದಂತೆ ಸಿಬ್ಬಂದಿ ಸಾಥ್ ನೀಡಿದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಂಗಳಗೌರಿ ಮದುವೆ’ ಖ್ಯಾತಿಯ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಂಗಳಗೌರಿ ಮದುವೆ’ ಖ್ಯಾತಿಯ ನಟಿ

    ಬೆಂಗಳೂರು: ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ನಟಿ ರಾಧಿಕಾ ಸೌಂದರ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ ರಾಧಿಕಾ ಎನ್ನುವುದಕ್ಕಿಂತ ಸೌಂದರ್ಯ ಎಂದರೆ ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಇವರು ನಟ, ನಿರ್ದೇಶಕ ಶ್ರವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಈ ದಂಪತಿಯ ಮದುವೆಗೆ ಕಿರುತೆರೆ ಕಲಾವಿದರು ಮತ್ತು ಸ್ನೇಹಿತರು ಹೋಗಿ ನವಜೋಡಿಗೆ ಶುಭಾ ಹಾರೈಸಿದ್ದಾರೆ. ನಟಿ ರಾಧಿಕಾ ಸೀರಿಯಲ್‍ನಲ್ಲಿ ನೆಗೆಟಿವ್ ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಮಾತ್ರವಲ್ಲದೇ ನಟ ವಿಜಯ್ ರಾಜ್‍ಕುಮಾರ್ ಅಭಿನಯದ ‘ಗ್ರಾಮಾಯಣ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

    ಶ್ರವಂತ್ ಕೂಡ ನಟರಾಗಿದ್ದು, ‘ಪರಾರಿ’, ‘ಅಂಬರ’ ಮತ್ತು ‘ಚಿಕ್ಕಮಗಳೂರು ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಹಿಂದೆ ‘ಮಧುಬಾಲ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಪ್ರಸ್ತುತ ಧಾರಾವಾಹಿಯೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ.

  • ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ರೌಡಿಗಳ ಚಳಿ ಬಿಡಿಸಿದ ಕೋಟೆನಾಡಿನ ಲೇಡಿ ಸಿಂಗಂ

    – ಅಡ್ಡದಾರಿ ಬಿಟ್ಟು ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಳ್ಳಿ

    ಚಿತ್ರದುರ್ಗ: ಕೋಟೆನಾಡಿನಲ್ಲಿ ನಡೆಯುತಿದ್ದ ಮರಳು ದಂಧೆ, ಓಸಿ, ಮಟ್ಕಾ ಹಾಗೂ ಜೂಜುಕೋರರ ಸಿಂಹ ಸ್ವಪ್ನ ಎನಿಸಿದ್ದ ಎಸ್‍ಪಿ ಡಾ. ಅರುಣ್ ವರ್ಗಾವಣೆಯಾಗುತ್ತಿದ್ದಂತೆ ದಂಧೆಕೋರರು ಹಾಗೂ ರೌಡಿಶೀಟರ್‌ಗಳು ಫುಲ್ ರಿಲಾಕ್ಸ್ ಮೂಡ್‍ನಲ್ಲಿದ್ದರು. ಇದೀಗ ಕೋಟೆನಾಡಿನ ಲೇಡಿ ಸಿಂಗಂ ರಾಧಿಕಾ ಅವರ ಚಳಿ ಬಿಡಿಸಿದ್ದಾರೆ.

    ಕಳೆದ ಒಂದು ವಾರದ ಹಿಂದೆಯಷ್ಟೇ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿರುವ ಚಿತ್ರದುರ್ಗದ ನೂತನ ಎಸ್‍ಪಿ ರಾಧಿಕಾ ಅವರು ಇಂದು ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಈ ವೇಳೆ ರೌಡಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ಸರಿ ದಾರಿಯಲ್ಲಿ ನಡೆದರೆ ಸರಿ, ಇಲ್ಲಾಂದ್ರೆ ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ ಎಂದು ಖಡಕ್ ವಾರ್ನ್ ಕೊಟ್ಟಿದ್ದಾರೆ.

    ನಗರದ ಡಿ.ಆರ್.ಗ್ರೌಂಡ್‍ನಲ್ಲಿ ಹಮ್ಮಿಕೊಂಡಿದ್ದ ರೌಡಿಗಳ ಪರೇಡ್‍ನಲ್ಲಿ ಭಾಗವಹಿಸಿ ರೌಡಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಳ್ಳೆತನದಿಂದ ಇದ್ದು ಸರಿ ದಾರಿಯಲ್ಲಿ ನಡೆಯುತ್ತೀನಿ ಅಂದರೆ ನಮ್ಮ ಸಪೋರ್ಟ್ ಇರುತ್ತೆ. ಮತ್ತೆ ಏನಾದರು ಬಾಲ ಬಿಚ್ಚಿ ತಮ್ಮ ಹಳೆ ಕಸುಬನ್ನು ಮುಂದವರಿಸಿದರೆ, ನಾನು ಮಾತ್ರ ನಿಮ್ಮನ್ನು ಸುಮ್ಮನೆ ಬಿಡಲ್ಲ. ಹಾಗೆಯೇ ಅಡ್ಡದಾರಿಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ದುಡಿದು ತಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಸೂಚಿಸಿದ್ದಾರೆ.

  • ಐರಾಳ ನಗುವಿಗೆ ಮನಸೋತ ನೆಟ್ಟಿಗರು – ತಾಯಿ, ಮಗಳ ಕ್ಯೂಟ್ ವಿಡಿಯೋ ವೈರಲ್

    ಐರಾಳ ನಗುವಿಗೆ ಮನಸೋತ ನೆಟ್ಟಿಗರು – ತಾಯಿ, ಮಗಳ ಕ್ಯೂಟ್ ವಿಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೇವಲ ಯಶ್, ರಾಧಿಕಾ ಮಾತ್ರವಲ್ಲ ಅವರ ಮುದ್ದಾದ ಮಗಳು ಐರಾಳಿಗೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.

    ಆಗಾಗ ರಾಕಿಂಗ್ ದಂಪತಿ ಐರಾಳ ವಿಡಿಯೋ ಪೋಸ್ಟ್ ಮಾಡುತ್ತಿರುತ್ತಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುತ್ತೆ. ಈಗ ರಾಧಿಕಾ ಹಂಚಿಕೊಂಡಿರುವ ವಿಡಿಯೋದಲ್ಲಿ ತನ್ನ ಕ್ಯೂಟ್ ನಗುವಿನಿಂದ ಐರಾ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಇದನ್ನೂ ಓದಿ: ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

    ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರಾಧಿಕಾ ಪಂಡಿತ್ ಐರಾಳ ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಐರಾಳ ವಿಡಿಯೋಗಳನ್ನು ಶೇರ್ ಮಾಡದೆ ತುಂಬಾ ದಿನಗಳಾಗಿದೆ. ಬಹಳಷ್ಟು ಮಂದಿ ಐರಾಳ ಮುದ್ದಾದ ವಿಡಿಯೋ ಹಾಕಿ ಎಂದು ಕೇಳುತ್ತಿದ್ದರು. ನಿಮಗಾಗಿ ಐರಾಳ ಉಗುರು ಕಟ್ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಪ್ರೀತಿಯ ಫೆಬ್ರವರಿ ತಿಂಗಳ ಶುಭಾಶಯ ಎಂದು ಐರಾ ಹಾಗೂ ತಾವು ಇರುವ ವಿಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಐರಾ: ವಿಡಿಯೋ

    ಐರಾಳ ಮುದ್ದಿನ ವಿಡಿಯೋವನ್ನು ಈವರೆಗೆ 4 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ವಿಡಿಯೋದಲ್ಲಿ ತಾಯಿ ಮಗಳ ಪ್ರೀತಿ, ಐರಾಳ ಮುದ್ದಾದ ನಗುವಿಗೆ ಎಲ್ಲರೂ ಫಿದಾ ಆಗಿದ್ದು, ಸದ್ಯ ಐರಾಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    https://www.instagram.com/p/B8BzMWTATZy/

    ಈ ಹಿಂದೆ ಯಶ್ ಹುಟ್ಟುಹಬ್ಬಕ್ಕೆ ಐರಾ ಕೇಕ್ ತಯಾರಿಸಲು ರಾಧಿಕಾ ಪಂಡಿತ್‍ಗೆ ಸಹಾಯ ಮಾಡಿದ ವಿಡಿಯೋ ಸಖತ್ ವೈರಲ್ ಆಗಿತ್ತು. ರಾಧಿಕಾ ತಮ್ಮ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ, “ಸರ್ಪ್ರೈಸ್, ನಿಮ್ಮ ಜೀವನವನ್ನು ನಾವು ವಹಿಸಿಕೊಂಡಂತೆ, ನಿಮ್ಮ ಖಾತೆಯನ್ನು ಸಹ ವಹಿಸಿಕೊಂಡಿದ್ದೇವೆ. ನಿಮ್ಮ ದೊಡ್ಡ ಅಭಿಮಾನಿ ಕಡೆಯಿಂದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.

    ವಿಡಿಯೋದಲ್ಲಿ ರಾಧಿಕಾ, ಯಶ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಪ್ರತಿ ವರ್ಷ ನಾನು ನಿಮ್ಮ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುತ್ತೇನೆ. ಈ ವರ್ಷ ಕೇಕ್ ತಯಾರಿಸಲು ನನಗೆ ಸಹಾಯ ಮಾಡಲು ಐರಾ ಇದ್ದಾಳೆ. ಆದರೆ ಆಕೆ ಕೇಕ್ ತಯಾರಿಸುವುದಕ್ಕಿಂತ ಹೆಚ್ಚಾಗಿ ತಿನ್ನುತ್ತಿದ್ದಾಳೆ. ಆದರೆ ನಾವು ಆಕೆಯ ಶ್ರಮವನ್ನು ಮೆಚ್ಚಲೇಬೇಕು. ನಿಮಗೋಸ್ಕರ ನಾನು ಒಂದು ಪೀಸ್ ಕೇಕ್ ಅನ್ನು ತೆಗೆದಿಟ್ಟಿರುತ್ತೇನೆ ಎಂದು ಹೇಳಿ ರಾಕಿಂಗ್ ಸ್ಟಾರ್‍ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದರು.

    https://www.instagram.com/p/B7CMzQCn_S-/