Tag: radhika serial

  • ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿಗೆ ‘ರಾಧಿಕಾ’ ಸೀರಿಯಲ್‌ ಬಿಟ್ಟೆ- ನಟಿ ಕಾವ್ಯಾ ಶಾಸ್ತ್ರಿ

    ಟಿ ಕಾವ್ಯಾ ಶಾಸ್ತ್ರಿ (Kavya Shastry) ಅವರು ರಾಧಿಕಾ (Radhika) ಸೀರಿಯಲ್‌ನಿಂದ ಹೊರಬಂದಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಉತ್ತರ ನೀಡಿದ್ದಾರೆ. ಸೀರಿಯಲ್, ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿಸಿದ ಕಾವ್ಯಾ ಶಾಸ್ತ್ರಿ ಅವರು ರಾಧಿಕಾ ಸೀರಿಯಲ್ ಅರ್ಧಕ್ಕೆ ಕೈ ಬಿಟ್ಟಿದ್ಯಾಕೆ ಎಂದು ಮೌನ ಮುರಿದ್ದಾರೆ.

     

    View this post on Instagram

     

    A post shared by Kaavya Shastry (@kaavya.shastry)

    ‘ರಾಧಿಕಾ’ ಧಾರಾವಾಹಿಯ ಮುಖ್ಯಪಾತ್ರಧಾರಿ ರಾಧಿಕಾ ಆಗಿ ಕಾವ್ಯಾ ಶಾಸ್ತ್ರಿ ನಟಿಸುತ್ತಿದ್ದರು. 400 ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದರು. ನರ್ಸ್ ಪಾತ್ರಕ್ಕೆ ಕಾವ್ಯ ಜೀವತುಂಬಿದ್ದರು. ಸಡನ್ ಆಗಿ ಈ ಸೀರಿಯಲ್ ಕೈಬಿಟ್ಟಿದ್ಯಾಕೆ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಟಿ ರಿಯಾಕ್ಟ್ ಮಾಡಿದ್ದಾರೆ.

     

    View this post on Instagram

     

    A post shared by Prashanth Agari (@agari_photo_studio)

    ನನಗೆ ‘ರಾಧಿಕಾ’ ಸೀರಿಯಲ್‌ನ ಬಿಟ್ಟೆ ಅಂತ ಅನೇಕರು ಕೇಳುತ್ತಿದ್ದಾರೆ. ಇದು ವಾಹಿನಿ, ಪ್ರೊಡಕ್ಷನ್ ಹೌಸ್, ನಾನು ಸೇರಿ ತೆಗೆದುಕೊಂಡ ನಿರ್ಧಾರವಿದು. ಎಲ್ಲೋ ಒಂದು ಕಡೆ ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿ, ಚಾನೆಲ್, ಪ್ರೊಡಕ್ಷನ್ ಹೌಸ್, ಕಲಾವಿದರ ನಡುವಿನ ಸಾಮರಸ್ಯದಲ್ಲಿ ಒಂದಷ್ಟು ತಕರಾರು ಇತ್ತು. ಎಲ್ಲ ಸೇರಿ ಈ ಪಾತ್ರಕ್ಕೆ ನನ್ನ ಅಗತ್ಯತೆ ಮುಗಿದಿದೆ. ರಾಧಿಕಾ ಪಾತ್ರಕ್ಕೆ ಮುಂದೆ ಬರುವವರು ಸಮರ್ಥವಾಗಿ ನಟಿಸ್ತಾರೆ ಅಂತ ನಮ್ಮೆಲ್ಲರಿಗೂ ಅನಿಸಿತು. ಹಾಗಾಗಿ ನಾನು ಧಾರಾವಾಹಿ ಬಿಟ್ಟೆ. ಇರಲಿ ಇನ್ನೊಂದು ಪಾತ್ರ, 20 ವರ್ಷಗಳಿಂದ ನೀವು ನನ್ನನ್ನು ನೋಡುತ್ತಿದ್ದೀರಿ, ಇನ್ಮುಂದೆಯೂ ನೋಡ್ತೀರಿ ಎಂದು ಅಭಿಮಾನಿಗಳ ಪ್ರಶ್ನೆಗೆ ನಟಿ ಕಾವ್ಯಾ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ವೀಕೆಂಡ್ ವಿತ್ ರಮೇಶ್ ಮುಕ್ತಾಯ : ಡಿಕೆಶಿ ಎಪಿಸೋಡ್ ಲಾಸ್ಟ್

     

    View this post on Instagram

     

    A post shared by Kaavya Shastry (@kaavya.shastry)

    ಒಮ್ಮೊಮ್ಮೆ ಕಲಾವಿದರಿಗೆ ರೂಮ್, ಬಾತ್‌ರೂಮ್ ವ್ಯವಸ್ಥೆ ಇರೋದಿಲ್ಲ. ನಿತ್ಯ ಮೂರು ಕ್ಯಾಮೆರಾ ಇಟ್ಟುಕೊಂಡು ಶೂಟಿಂಗ್ ಮಾಡೋದು ತುಂಬ ಕಷ್ಟ ಆಗತ್ತೆ. ಕಲಾವಿದರು ಈ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಹೀರೋಯಿನ್‌ಗಳನ್ನು ಬದಲಾಯಿಸಿದರೆ, ಟಿಆರ್‌ಪಿ ಚೆನ್ನಾಗಿ ಬರುತ್ತದೆ ಅಂತ ಕೆಲವರು ಅಂದುಕೊಂಡಿರುತ್ತಾರೆ. ನಮ್ಮ ಸಮಸ್ಯೆಗಳನ್ನು ಕೇಳದೆ ಪ್ರೊಡಕ್ಷನ್ ಹೌಸ್, ವಾಹಿನಿಯವರು ಕಲಾವಿದರನ್ನು ಕೈಬಿಡುವ ನಿರ್ಧಾರಕ್ಕೆ ಬಂದಿರುತ್ತಾರೆ ಎಂದು ನಟಿ ಮಾತನಾಡಿದ್ದಾರೆ.

    ಈ ಧಾರಾವಾಹಿಯಲ್ಲಿಯೂ ಕೂಡ ನನ್ನ ಸಮಸ್ಯೆಯನ್ನು ಯಾರೂ ಕೇಳಲಿಲ್ಲ. ನನಗೆ ಒಂದು ಮಾತು ಹೇಳದೆ ನನ್ನ ಪಾತ್ರಕ್ಕೆ ಬೇರೆ ಕಡೆ ಆಡಿಷನ್ ಮಾಡುತ್ತಿರೋದು ನನಗೆ ತಿಳಿಯಿತು. ಅದನ್ನು ನೋಡಿ ನನಗೆ ಅವಮಾನ ಆಯ್ತು. ಹಾಗಾಗಿ ‘ರಾಧಿಕಾ’ ಸೀರಿಯಲ್‌ನಿಂದ ಹೊರ ಬಂದೆ ಎಂದಿದ್ದಾರೆ.

  • ‘ರಾಧಿಕಾ’ ಸೀರಿಯಲ್‌ಗೆ ಕಾವ್ಯಾ ಶಾಸ್ತ್ರಿ ಗುಡ್ ಬೈ- ಹೊಸ ನಟಿ ಆಗಮನ

    ‘ರಾಧಿಕಾ’ ಸೀರಿಯಲ್‌ಗೆ ಕಾವ್ಯಾ ಶಾಸ್ತ್ರಿ ಗುಡ್ ಬೈ- ಹೊಸ ನಟಿ ಆಗಮನ

    ಕಿರುತೆರೆಯಲ್ಲಿ ವೀಕ್ಷಕರ ಮನಗೆದ್ದ ‘ರಾಧಿಕಾ’ ಧಾರಾವಾಹಿಯಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ರಾಧೆ ಆಗಿ ಮಿಂಚ್ತಿದ್ದ ಕಾವ್ಯಾ ಶಾಸ್ತ್ರಿ ಅವರು ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಇದೀಗ ರಾಧಿಕಾ ಪಾತ್ರಧಾರಿಯಾಗಿ ಬೇರೆಯೊಬ್ಬ ನಟಿಯ ಆಗಮನವಾಗಿದೆ.

    ಶುಭವಿವಾಹ, ಬಿಗ್ ಬಾಸ್ ಸೀಸನ್ 4 (Bigg Boss Kannada) ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಗಮನ ಸೆಳೆದ ನಟಿ ಕಾವ್ಯಾ ಶಾಸ್ತ್ರಿ ಅವರು ಪ್ರಸ್ತುತ ರಾಧಿಕಾ ಸೀರಿಯಲ್‌ಗೆ ಗುಡ್ ಬೈ ಹೇಳಿದ್ದಾರೆ. ಕಾರಣಾಂತರಗಳಿಂದ ರಾಧಿಕಾ (Radhika Serial) ಸೀರಿಯಲ್ ಅರ್ಧಕ್ಕೆ ಕೈಬಿಟ್ಟಿದ್ದಾರೆ. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ರಾಧಿಕಾ (Radhika) ಸೀರಿಯಲ್‌ಗೆ ತೇಜಸ್ವಿನಿ ಶೇಖರ್ (Tejaswini Shekar) ಎಂಟ್ರಿಯಾಗಿದ್ದಾರೆ. ಇನ್ಮುಂದೆ ರಾಧಿಕಾಳಾಗಿ ಕಿರುತೆರೆ ಪ್ರೇಕ್ಷಕರ ಮನೆ ಬೆಳಗಲಿದ್ದಾರೆ. ಮಹಾನದಿ, ಸಂಘರ್ಷ, ಸೀರಿಯಲ್‌ನಲ್ಲಿ ಈ ಹಿಂದೆ ನಟಿಸಿದ್ದರು. ಇದೀಗ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲವ್ವ’ ಧಾರಾವಾಹಿಯಲ್ಲಿ ಇಂದುಮತಿ ಪಾತ್ರ ಮಾಡ್ತಿದ್ದಾರೆ. ಜೊತೆಗೆ ರಾಧಿಕಾ ಧಾರಾವಾಹಿ ಕೂಡ ಮಾಡಲಿದ್ದಾರೆ.

    ‘ಸೌಭಾಗ್ಯವತಿ’ ಸೀರಿಯಲ್ ಮೂಲಕ ಅನಿರಿಕ್ಷಿತವಾಗಿ ಬಣ್ಣದ ಬದುಕಿಗೆ ಕಾಲಿಟ್ಟ ತೇಜಸ್ವಿನಿ ಅವರು ಬಳಿಕ ಸಾಲು ಸಾಲು ಧಾರಾವಾಹಿಯಲ್ಲಿ ನಾಯಕಿಯಾಗಿ, ಖಳನಟಿಯಾಗಿ ಛಾಪೂ ಮೂಡಿಸಿದ್ದರು.