Tag: radhika parents wedding

  • ರಾಧಿಕಾ ಪಂಡಿತ್ ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವ ಸಂಭ್ರಮ

    ರಾಧಿಕಾ ಪಂಡಿತ್ ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವ ಸಂಭ್ರಮ

    ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಸದ್ಯಕ್ಕೆ ಸಿನಿಮಾಗೆ ಬ್ರೇಕ್ ನೀಡಿ, ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಾಧಿಕಾ ಅವರ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಸೆಲೆಬ್ರೇಶ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡ ನಟಿ, ಮದುವೆಯ ಬಳಿಕ ಕುಟುಂಬ ಕಡೆ ಹೆಚ್ಚಿನ ಗಮನ ನೀಡ್ತಿದ್ದಾರೆ. ಇದೀಗ ರಾಧಿಕಾ ತನ್ನ ತಾಯಿಯ ಮದುವೆ ವಾರ್ಷಿಕೋತ್ಸವ ಸಂಭ್ರಮವನ್ನ ಆಚರಿಸಿದ್ದಾರೆ. ತಂದೆ ಕೃಷ್ಣಪ್ರಸಾದ್ ಪಂಡಿತ್, ತಾಯಿ ಮಂಗಳಾ ಪಂಡಿತ್ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ರಾಧಿಕಾ ಮಕ್ಕಳು ಮತ್ತು ರಾಧಿಕಾ ಸಹೋದರನ ಮಕ್ಕಳ ಜತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?

     

    View this post on Instagram

     

    A post shared by Radhika Pandit (@iamradhikapandit)

    ಇನ್ನು ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಸಕ್ಸಸ್ ಬಳಿಕ ಯಶ್ ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಕನಕಪುರದ ಝೂಗೆ ಭೇಟಿ ನೀಡಿ, ಪ್ರಾಣಿ ಪಕ್ಷಿಗಳ ಜೊತೆ ಯಶ್ ಕುಟುಂಬ ಸಮಯ ಕಳೆದಿತ್ತು.

    Live Tv