Tag: Radhika pandith

  • ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!

    ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಹುಟ್ಟುವ ಮಗುವಿಗೆ ರೆಬೆಲ್ ಸ್ಟಾರ್ ಅಂಬರೀಶ್ ಭರ್ಜರಿ ಗಿಫ್ಟ್ ವೊಂದನ್ನು ರೆಡಿ ಮಾಡಿಸಿದ್ದರು. ಸದ್ಯ ಯಶ್ ಮಗಳಿಗೆ ಈ ಉಡುಗೊರೆಯನ್ನು ಸುಮಲತಾ ಅವರು ನೀಡಿದ್ದಾರೆ.

    ಅಂಬರೀಶ್ ಮತ್ತು ಯಶ್ ನಡುವಿನ ಪ್ರೀತಿ ಅಪ್ಪ-ಮಗನಂತೆ ಇತ್ತು. ಅಂಬಿ ಅಪ್ಪಾಜಿ ಕರೆದಾಗಲೆಲ್ಲಾ ಯಶ್ ಎದ್ದು ಹೊರಡುತ್ತಿದ್ದರು. ಪತ್ನಿ ರಾಧಿಕಾ ಗರ್ಭಿಣಿಯಾದಾಗಿನಿಂದ ಇವರಿಬ್ಬರ ಕುಟುಂಬದ ಒಡನಾಟ ಇನ್ನಷ್ಟು ಹೆಚ್ಚಾಗಿತ್ತು. ಸ್ನೇಹ, ಪ್ರೀತಿ ತುಂಬಿತ್ತು. ಆಗಲೇ ಅಂಬರೀಶ್ ತೊಟ್ಟಿಲು ಉಡುಗೊರೆಯನ್ನಾಗಿ ಕೊಡಲು ನಿರ್ಧರಿಸಿದ್ದರು.

    ಅಂಬರೀಶ್ ಯಾರಿಗೂ ಗೊತ್ತಾಗದಂತೆ, ಯಾರಿಗೂ ತಿಳಿಯದಂತೆ ತೊಟ್ಟಿಲ ಕೆಲಸವನ್ನು ಮಾಡಿದ್ದರು. ಯಶ್ ಮತ್ತು ರಾಧಿಕಾ ಮಗುವಿಗೆ ತೊಟ್ಟಿಲನ್ನು ಮಾಡಿಸಿಟ್ಟಿದ್ದರು. ಈ ತೊಟ್ಟಿಲ ಬಗ್ಗೆ ಯಾರಿಗೂ ಕಿಂಚಿತ್ತೂ ಮಾಹಿತಿ ಇರಲಿಲ್ಲ. ಅದೆಲ್ಲ ಗೊತ್ತಾಗಿದ್ದು ಅಂಬಿ ಇಲ್ಲದ ಹೊತ್ತು ಹಾಗೂ ಯಶ್ ಮಗಳು ಈ ಲೋಕಕ್ಕೆ ಬಂದ ಈ ಘಳಿಗೆಯಲ್ಲಿ.

    ಅಂಬಿ ನಿಧನವಾಗಿ ಹೆಚ್ಚು ಕಮ್ಮಿ ಹನ್ನೆರಡು ದಿನಗಳಾಗುತ್ತಿವೆ. ಅಂಬಿ ಪತ್ನಿ ಸುಮಲತಾ, ಮಗ ಅಭಿಷೇಕ್ ನಿಧಾನವಾಗಿ ಮತ್ತೆ ಸಹಜ ಜೀವನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೂ ಕೂಡ ಮತ್ತೆ ಬದುಕು ನಡೆಸುತ್ತಿದ್ದಾರೆ. ಅಂಬಿಯ ನೆನಪಲ್ಲೇ ದಿನಗಳನ್ನು ತಳ್ಳುತ್ತಿದ್ದಾರೆ. ಈ ನಡುವೆ ಸುಮಲತಾ ಅವರ ಮೊಬೈಲ್‍ಗೆ ವಾಟ್ಸಪ್ ಸಂದೇಶವೊಂದು ಬಂತು. ವಾಟ್ಸಾಪ್ ಸಂದೇಶದ ಜೊತೆಗೆ ತೊಟ್ಟಿಲಿನ ಚಿತ್ರವೂ ಇತ್ತು.

    ಸುಮಲತಾಗೆ ನಿಜಕ್ಕೂ ಅಚ್ಚರಿ ಮತ್ತು ಕುತೂಹಲವಾಗಿತ್ತು. ತೊಟ್ಟಿಲನ್ನು ಆರ್ಡರ್ ನಾವ್ಯಾರೂ ಕೊಟ್ಟಿಲ್ಲವಲ್ಲ. ಮತ್ತೆ ತಪ್ಪಾಗಿ ಈ ಸಂದೇಶ ಬಂದಿದೆಯಾ? ಏನಿದರ ಅಸಲಿಯತ್ತು? ಹೀಗಂದುಕೊಂಡೇ ಆ ಮೊಬೈಲ್ ನಂಬರಿಗೆ ಫೋನ್ ಮಾಡಿದ್ದಾರೆ. ಆಗ ಸತ್ಯ ಗೊತ್ತಾಗಿದೆ. ಅದು ಖುದ್ದು ಅಂಬಿಯೇ ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲು. ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಶ್ ಎನ್ನುವುದು ಆ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ. ಸಂಪರ್ಕಕ್ಕಾಗಿ ಅಂಬರೀಶ್ ತಮ್ಮ ಪತ್ನಿ ಸುಮಲತಾ ಮೊಬೈಲ್ ನಂಬರ್ ಮಾಲೀಕನಿಗೆ ಕೊಟ್ಟಿದ್ದರು.

    ಅಂಬರೀಶ್ ಯಶ್ ಮತ್ತು ರಾಧಿಕಾ ಮಗುವಿಗೆ ತೊಟ್ಟಿಲನ್ನು ಕಾಣಿಕೆಯನ್ನಾಗಿ ಕೊಟ್ಟಿದ್ದರು. ಯಾವಾಗ ಸುಮಲತಾಗೆ ಈ ವಿಷಯ ಗೊತ್ತಾಯಿತೋ, ಅವರು ಯಶ್‍ಗೆ ಫೋನ್ ಮಾಡಿ ಹೇಳಿದ್ದೊಂದೇ ಮಾತು, `ನಿಮ್ಮ ಅಪ್ಪಾಜಿ ಸ್ವರ್ಗದಿಂದಲೇ ನಿಮ್ಮ ಮಗಳಿಗೆ ತೊಟ್ಟಿಲು ಕಳಿಸಿದ್ದಾರೆ. ಮಗಳು ಪುಣ್ಯವಂತೆ. ಅಲ್ವಾ.?’ ತಾಯಿ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಯಶ್ ಮೌನವಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಪ್ರೀತಿಗೆ ನಟಿ ರಾಧಿಕಾ ಪಂಡಿತ್ ಫಿದಾ

    ಅಭಿಮಾನಿಗಳ ಪ್ರೀತಿಗೆ ನಟಿ ರಾಧಿಕಾ ಪಂಡಿತ್ ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಅಭಿಮಾನಿಗಳ ಪ್ರೀತಿ ಕಂಡು ಫೀದಾ ಆಗಿದ್ದಾರೆ.

    ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ಇರುವ ಚಿತ್ರವನ್ನು ತಮ್ಮ ಎದೆ ಮೇಲೆ ಟ್ಯಾಟೂ ಬಿಡಿಸಿಕೊಂಡಿದ್ದಾರೆ. ಅಲ್ಲದೇ ಮತ್ತೊಬ್ಬ ಅಭಿಮಾನಿ ತಮ್ಮ ಬಲಗೈ ಮೇಲೆ “ಪ್ರಿನ್ಸೆಸ್ ರಾಧಿಕಾ” ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡ ಫೋಟೋವನ್ನು ರಾಧಿಕಾ ಪಂಡಿತ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಿಮ್ಮ ಪ್ರೀತಿ ನಮ್ಮನ್ನು ಮೂಕವಿಸ್ಮಿತವಾಗಿಸಿದೆ. ಧನ್ಯವಾದಗಳು. ಆದರೆ ನಮಗೆ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಅಷ್ಟೇ ಬೇಕು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತೀಚೆಗೆ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದ್ದು, ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದರು. ಗೌಡರ ಸಂಪ್ರದಾಯದಂತೆ ಸೀಮಂತ ನಡೆದಿತ್ತು. ಇವರಿಬ್ಬರ ಮದುವೆ ಕಾರ್ಯಕ್ರಮವೂ ಇದೇ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಸೀಮಂತ ಕೂಡ ಅಲ್ಲೇ ನಡೆದಿದ್ದು ವಿಶೇಷವಾಗಿತ್ತು.

    ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸೀಮಂತ ಕಾರ್ಯಕ್ರಮ ನಡೆದಿದ್ದು, ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುತ್ತಿರುವ ಖುಷಿಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾಗೆ ರೆಡ್ಡಿಯಿಂದ ಭಾರೀ ಗಿಫ್ಟ್

    ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾಗೆ ರೆಡ್ಡಿಯಿಂದ ಭಾರೀ ಗಿಫ್ಟ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಇಂದು ನಡೆದಿದ್ದು, ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾಗೆ ಭಾರೀ ಉಡುಗೊರೆಯೊಂದನ್ನು ನೀಡಿದ್ದಾರೆ.

    ನಟರಾದ ಅಂಬರೀಶ್-ಸುಮಲತಾ ದಂಪತಿ, ಪುನೀತ್ ರಾಜ್ ಕುಮಾರ್-ಅಶ್ವಿನಿ ದಂಪತಿ, ನಿರ್ದೇಶಕ ಯೋಗರಾಜ್ ಭಟ್ ಕುಟುಂಬ, ರವಿಚಂದ್ರನ್ ಪತ್ನಿ, ತಾರಾ, ಸುಧಾರಾಣಿ, ನಿರ್ದೇಶಕ ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ಇತರ ಗಣ್ಯರು ಆಗಮಿಸಿ ರಾಧಿಕಾಗೆ ಶುಭ ಹಾರೈಸಿದ್ದಾರೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದ್ದು, ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದಾರೆ.  ಗೌಡರ ಸಂಪ್ರದಾಯದಂತೆ ಸೀಮಂತ ನಡೆದಿದೆ. ಇವರಿಬ್ಬರ ಮದುವೆ ಕಾರ್ಯಕ್ರಮವೂ ಇದೇ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಸೀಮಂತ ಕೂಡ ಅಲ್ಲೇ ನಡೆದಿದ್ದು ವಿಶೇಷವಾಗಿದೆ.

    ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇಂದು ಸೀಮಂತ ಕಾರ್ಯಕ್ರಮ ನಡೆದಿದ್ದು, ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುತ್ತಿರುವ ಖುಷಿಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಯಾವ ಮಗು ಬೇಕು ಎಂಬುದನ್ನು ರಿವೀಲ್ ಮಾಡಿದ್ರು ರಾಕಿಂಗ್ ಸ್ಟಾರ್!

    ಯಾವ ಮಗು ಬೇಕು ಎಂಬುದನ್ನು ರಿವೀಲ್ ಮಾಡಿದ್ರು ರಾಕಿಂಗ್ ಸ್ಟಾರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‍ಗೆ ಜನಿಸಲಿರುವ ಮಗುವಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯೇ ಆಗುತ್ತಿದೆ. ಅಭಿಮಾನಿಗಳಂತೂ ಮರಿ ಬಾಸ್ ಎಂದೇ ನಾಮಕರಣ ಮಾಡಿಬಿಟ್ಟಿದ್ದಾರೆ. ಆದರೆ ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ರಿವೀಲ್ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ನನಗೆ ಹೆಣ್ಣು ಮಗು ಬೇಕು ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

    ಈ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಜಾಗರೂಕತೆಯಿಂದ ಇರುತ್ತಾರೆ. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾಗಿರುವಾಗ ನೂರಾರು ಕನಸುಗಳನ್ನ ಕಾಣುತ್ತಾರೆ. ಆ ಎಲ್ಲಾ ಬಯಕೆಗಳನ್ನ ಈಡೇರಿಸುವುದು ಗಂಡನ ಕರ್ತವ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಾಲು ನೋವು, ಬೆನ್ನು ನೋವು ಬರುತ್ತವೆ. ಅವರಿಗೆ ನೋವು ಬಂದಾಗ ಕಾಲು ಒತ್ತಬೇಕು, ಇವೆಲ್ಲವನ್ನು ಗಂಡನಾಗಿ ಮಾಡಬೇಕು ಅದು ಅವನ ಜವಾಬ್ದಾರಿ ಜೊತೆಗೆ ಖುಷಿಯಾಗಿ ಮಾಡಬೇಕು. ಈ ವೇಳೆ ನನಗೆ ಹೆಣ್ಣು ಮಗು ಬೇಕು. ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಆ.12 ಮುಖ್ಯವಾದ ದಿನ – ರಾಧಿಕಾ ಅವರಿಂದ ಮೊದಲ ಗರ್ಭಿಣಿ ಫೋಟೋ ಶೇರ್

    ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿಕೊಳ್ಳಬೇಕು ಅನ್ನೋದು ರಾಧಿಕಾ ಅವರ ಮಹದಾಸೆಯಾಗಿತ್ತು. ಆದ್ದರಿಂದ ಇತ್ತೀಚೆಗಷ್ಟೆ ಕೆಜಿಎಫ್ ಶೂಟಿಂಗ್ ಮುಗಿಯುತ್ತಿದ್ದಂತೆ ಗಡ್ಡವನ್ನು ಕತ್ತರಿಸಿಕೊಂಡಿದ್ದಾರೆ. ರಾಧಿಕಾ ಅವರಿಗೆ ಏಳು ತಿಂಗಳು ತುಂಬಿದ ಮೇಲೆ ಸೀಮಂತ ಕಾರ್ಯಕ್ರಮವನ್ನೂ ಮಾಡಲಿದ್ದಾರೆ.

    ಇತ್ತೀಚೆಗೆ ಯಶ್ ಮತ್ತು ರಾಧಿಕಾ `ಮೈ ನೇಮ್ ಇಸ್ ಕಿರಾತಕ’ ಸಿನಿಮಾ ಶೂಟಿಂಗ್ ಗಾಗಿ ದುಬೈಗೆ ಹೋಗಿದ್ದರು. ರಾಧಿಕಾ ಅವರು ದುಬೈಗೆ ಹೋಗಬೇಕು ಎಂದ ತಕ್ಷಣ ಯಶ್ ಫ್ಲೈಟ್ ಟಿಕೆಟ್‍ನ ಬುಕ್ ಮಾಡಿದ್ದರು. ಬಳಿಕ ಡಾಕ್ಟರ್ ಪರ್ಮಿಷನ್ ಕೊಟ್ಟ ತಕ್ಷಣ ದುಬೈ ಹೋಗಿ ಅಲ್ಲಿನ ಸುಂದರ ತಾಣಗಳನ್ನು ನೋಡಿ ಬಂದಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಕಾಲ ಜೊತೆಗಿದ್ದಿದ್ದನ್ನು ಕಳೆದುಕೊಂಡ ಯಶ್- ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ!

    ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ!

    – ಮತ್ತೆ ಅರಳಿತು ಮೊಗ್ಗಿನ ಮನಸು!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಮರೆಯಾದಂತಿದ್ದ ಮೊಗ್ಗಿನ ಮನಸಿನ ಹುಡುಗಿ ಮತ್ತೆ ಬಂದಿದ್ದಾರೆ. ಮದುವೆಯ ಬಳಿಕ ಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾದಂತಿದ್ದ ರಾಧಿಕಾ ಪಂಡಿತ್ ಮತ್ತೆ ನಾಯಕಿಯಾಗಿ ಮರಳಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ರಾಧಿಕಾ ನಾಯಕಿಯಾಗಲಿದ್ದಾರೆಂಬುದು ಲೇಟೆಸ್ಟ್ ಸುದ್ದಿ!

    ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸಾಗಿಲ್ಲ. ಆದರೆ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಮಾತ್ರ ಜಾಹೀರಾಗಿದೆ. ಇದೀಗ ಈ ಚಿತ್ರಕ್ಕೆ ಸಕಲ ತಯಾರಿಗಳೂ ಭರದಿಂದ ಸಾಗುತ್ತಿವೆ. ಇನ್ನೇನು ತಿಂಗಳ ಅಂತರದಲ್ಲಿಯೇ ಚಿತ್ರೀಕರಣ ಶುರು ಮಾಡಲಿರೋ ಈ ಚಿತ್ರವನ್ನು ಈ ವರ್ಷದ ಕಡೆಯ ಹೊತ್ತಿಗೆ ತೆರೆ ಕಾಣಿಸುವ ಗುರಿಯೂ ಚಿತ್ರ ತಂಡಕ್ಕಿದೆ.

    ಅಲ್ಲಿಗೆ ತಮ್ಮಿಷ್ಟದ ತಾರೆ ಮದುವೆಯಾದ ನಂತರ ಚಿತ್ರ ರಂಗದಿಂದ ದೂರಾಗುತ್ತಾರೆಂಬ ಕಸಿವಿಸಿಯಿಂದಿದ್ದ ರಾಧಿಕಾ ಪಂಡಿತ್ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಗೊಂಡಿದ್ದಾರೆ. ರಾಧಿಕಾ ನಟಿಸುತ್ತಿರೋ ಈ ಚಿತ್ರದ ಕಥೆಯೇನೆಂಬುದರಿಂದ ಹಿಡಿದು ಎಲ್ಲ ವಿಚಾರಗಳನ್ನೂ ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಆದರೆ ರಾಧಿಕಾ ಅಳೆದೂ ತೂಗಿ ಈ ಕಥೆಯ ಕಸುವು ನೋಡಿಯೇ ಒಪ್ಪಿಕೊಂಡಿದ್ದಾರೆಂಬುದು ಮಾತ್ರ ಸತ್ಯ. ಯಾಕೆಂದರೆ ಮದುವೆ ಗೌಜಿನ ನಂತರದಲ್ಲಿ ರಾಧಿಕಾ ಮುಂದೆ ಸಾಕಷ್ಟು ಕಥೆಗಳು ಬಂದಿದ್ದವಂತೆ. ಆದರೆ ಅದ್ಯಾವುದನ್ನೂ ಒಪ್ಪಿಕೊಳ್ಳದ ರಾಧಿಕಾ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂದರೆ ಕಥೆ ಚೆನ್ನಾಗಿದೆ ಅಂತಲೇ ಅರ್ಥ.

    ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಧಿಕಾ ಆ ನಂತರದಲ್ಲಿ ನಂಬರ್ ಒನ್ ನಟಿಯಾಗಿ ಹೊರ ಹೊಮ್ಮಿದ್ದು ತನ್ನ ನಟನೆಯ ಕಾರಣದಿಂದಲೇ. ವಿವಾದ ತಗಾದೆಗಳಿಂದ ಸದಾ ದೂರವಿರುವ ರಾಧಿಕಾ ಅನೂಪ್ ಭಂಡಾರಿಗೆ ಜೊತೆಯಾಗಿ ರೀ ಎಂಟ್ರಿ ಕೊಟ್ಟಿರೋದು ಸಹಜವಾಗಿಯೇ ಚಿತ್ರ ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

  • ಸ್ಯಾಂಡಲ್ ವುಡ್ ಸಿಂಡ್ರೆಲಾಗೆ ಇಂದು 33ನೇ ಹುಟ್ಟುಹಬ್ಬದ ಸಂಭ್ರಮ

    ಸ್ಯಾಂಡಲ್ ವುಡ್ ಸಿಂಡ್ರೆಲಾಗೆ ಇಂದು 33ನೇ ಹುಟ್ಟುಹಬ್ಬದ ಸಂಭ್ರಮ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್‍ಗೆ ಇಂದು 33ನೇ ಹುಟ್ಟು ಹಬ್ಬದ ಸಂಭ್ರಮ.

    ನಗರದ ಮಲ್ಲೇಶ್ವರಂನ ನಿವಾಸದಲ್ಲಿ ಪತಿ ಯಶ್ ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸುವ ಮೂಲಕ ರಾಧಿಕಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ನೂರಾರು ಅಭಿಮಾನಿಗಳು ಯಶ್ ಹಾಗೂ ರಾಧಿಕಾ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

    ಇದೇ ವೇಳೆ ಮಾತನಾಡಿದ ರಾಧಿಕಾ, ನನ್ನ ಹುಟ್ಟುಹಬ್ಬ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದೇನೆ. ಅಭಿಮಾನಿಗಳೇ ಪ್ರತಿ ವರ್ಷ ಕೇಕ್ ತಂದು ಹುಟ್ಟು ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡೆ ಎಂದು ಸಂತಸ ವ್ಯಕ್ತಪಡಿಸಿದರು.

  • ರ‍್ಯಾಂಪ್ ಮೇಲೆ ಮಿಂಚಿದ ರಾಕಿಂಗ್ ಜೋಡಿ- ಯಶ್, ರಾಧಿಕಾ ಡೈಲಾಗ್‍ಗಳು ಮಾಡಿತು ಮೋಡಿ

    ರ‍್ಯಾಂಪ್ ಮೇಲೆ ಮಿಂಚಿದ ರಾಕಿಂಗ್ ಜೋಡಿ- ಯಶ್, ರಾಧಿಕಾ ಡೈಲಾಗ್‍ಗಳು ಮಾಡಿತು ಮೋಡಿ

    ಬೆಂಗಳೂರು: ಫಾರಿನ್ ಟ್ರಿಪ್ ಮುಗಿಸಿ ಬಂದಿರೋ ರಾಕಿಂಗ್ ಜೋಡಿ ಸುಂದರ ಸಂಜೆಯಲ್ಲಿ ರ‍್ಯಾಂಪ್ ಮೇಲೆ ಫುಲ್ ಮಿಂಚಿದ್ದಾರೆ.

    ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿಗಳಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆ ಆಯೋಜಿಸಿದ್ದ ಯುಗಾದಿ ಹಬ್ಬದ ಬಟ್ಟೆ ಕಲೆಕ್ಷನನ್ನು ರಾಮಾಚಾರಿ ಜೋಡಿ ಲಾಂಚ್ ಮಾಡಿತು. ಮಾಡೆಲ್‍ಗಳ ಜೊತೆ ರ‍್ಯಾಂಪ್ ಮೇಲೆ ಬಂದ ಯಶ್-ರಾಧಿಕಾ ಜೋಡಿಯನ್ನು ಅಭಿಮಾನಿಗಳು ನೋಡಿ ಫುಲ್ ಖುಷಿಯಾದರು. ಒಂದು ಡೈಲಾಗ್ ಹೇಳು ಗುರು. ಯಶ್ ಒಂದು ಹಾಡು ಹಾಡಿ ಎಂದು ಫ್ಯಾನ್ಸ್ ಕೂಗುತ್ತಿದಂತೆ ಯಶ್ ಮೈಕ್ ಹಿಡಿದು ಭರ್ಜರಿ ಮನರಂಜನೆ ನೀಡಿದರು.

    ಯಶ್-ರಾಧಿಕಾ ಜೋಡಿ ಡೈಲಾಗ್ ಎಲ್ಲರನ್ನು ಖುಷಿಪಡಿಸಿತು. ರೀಲ್ ಹಾಗೂ ರಿಯಲ್ ಎರಡೂ ಕಡೆ ಸೂಪರ್ ಜೋಡಿ ಎನಿಸಿಕೊಂಡಿರೋ ಯಶ್ ಮತ್ತು ರಾಧಿಕಾ ಪಂಡಿತ್ ಅಡ್ವಾನ್ಸ್ ಆಗಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಹೊಸ ಡಿಸೈನ್‍ಗಳನ್ನ ಕೂಡ ಲಾಂಚ್ ಮಾಡಿದ್ದಾರೆ.

  • ಮಗುವಿನೊಂದಿಗಿರೋ ಯಶ್ ಫೋಟೋ ಹಾಕಿ ಪತ್ನಿ ರಾಧಿಕಾ ಹೀಗೆ ತಮಾಷೆ ಮಾಡಿದ್ರು!

    ಮಗುವಿನೊಂದಿಗಿರೋ ಯಶ್ ಫೋಟೋ ಹಾಕಿ ಪತ್ನಿ ರಾಧಿಕಾ ಹೀಗೆ ತಮಾಷೆ ಮಾಡಿದ್ರು!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಸದ್ಯ ಅಮೆರಿಕದಲ್ಲಿದ್ದಾರೆ. ಪತಿ ಯಶ್ ತನ್ನ ಸಹೋದರನ ಮಗುವನ್ನ ಎತ್ತಿಕೊಂಡಿರೋ ಫೋಟೋವೊಂದನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮಗುವನ್ನು ಮಡಿಲಲ್ಲಿ ಹಾಕಿಕೊಂಡು ರಾಧಿಕಾ ಇತ್ತೀಚೆಗಷ್ಟೇ ಫೋಟೋ ಹಾಕಿದ್ದರು. ಇದೀಗ ಯಶ್ ಫೋಟೋವನ್ನೂ ಕೂಡ ಹಂಚಿಕೊಂಡಿದ್ದಾರೆ. ರಿಯಾ ಎಂದು ಕಂದಮ್ಮನಿಗೆ ಹೆಸರಿಡಲಾಗಿದೆಯಂತೆ. ಮಗುವನ್ನು ಯಶ್ ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ, `ಬಹುಶಃ ರಿಯಾಗೆ ಅಂಕಲ್ ಯಶ್ ಅವರ ಗಡ್ಡ ಇಷ್ಟವಾಗಿರಬೇಕು. ಇಲ್ಲಾ ಅದನ್ನು ತೆಗಿ ಅಂತ ಹೇಳುತ್ತಿರಬೇಕು’ ಅಂತ ಫೋಟೋದೊಂದಿಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ರಾಧಿಕಾ ಸಹೋದರ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದು, ಇತ್ತೀಚೆಗಷ್ಟೇ ಅವರಿಗೆ ಹೆಣ್ಣು ಮಗುವಾಗಿದೆ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ನಂತರ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಪತಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿದ ಫೋಟೋವನ್ನ ರಾಧಿಕಾ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

    https://www.instagram.com/p/Bfi6kgZgN2v/?hl=en&tagged=radhikapandit

  • ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

    ಬೆಂಗಳೂರು: ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಲವ್ ಮಾಡಿ, ಮದುವೆ ಆದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಅಂತಲೇ ಕರೆಯಿಸಿಕೊಳ್ಳುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ.

    ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡ ಈ ಜೋಡಿ, ಬಳಿಕ ಬೆಳ್ಳಿತೆರೆ ಮೇಲೂ ಯಶಸ್ವಿಯಾಗಿದ್ದಾರೆ. ಈ ಜೋಡಿ ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಸಿಲುಕಿದ್ದವರು. ದಂಪತಿಯಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ `ಪ್ರೇಮಿಗಳ ದಿನ’ ಅಂದರೆ ತುಂಬಾ ಸ್ಪೆಷಲ್. ಆದ್ದರಿಂದ ಈ ಬಾರಿ ಪ್ರೇಮಿಗಳ ದಿನವನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅಮೆರಿಕದ ಚಿಕಾಗೋದಲ್ಲಿ ಆಚರಿಸಿದ್ದಾರೆ.

    ಪ್ರೇಮಿಗಳ ದಿನದಂದು ರಾಧಿಕಾ ಪಂಡಿತ್ ಒಂದು ಅಪರೂಪದ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಶಕದ ಹಿಂದೆ ಅಂದರೆ 2006 ರಲ್ಲಿ ಕ್ಲಿಕ್ ಆದ ಈ ಫೋಟೋವನ್ನ ರಾಧಿಕಾ ಪಂಡಿತ್ `ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

    “ಈ ಫೋಟೋ ತೆಗೆದಿದ್ದಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಈ ಫೋಟೋನ ಈಗ ನೋಡಿದರೆ ಆಗಲೇ ನಮ್ಮ ಪ್ರೀತಿ ಹೃದಯಾಳದಲ್ಲಿ ಅಡಗಿತ್ತು. ಅದು ನಮ್ಮ ಅರಿವಿಗೆ ಬಂದಿರಲಿಲ್ಲವೇನೋ ಎಂಬ ಭಾವನೆ ಮೂಡುತ್ತದೆ” ಎಂದು ಫೇಸ್ ಬುಕ್ ನಲ್ಲಿ ಬರೆದು ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

    ಸದ್ಯಕ್ಕೆ ರಾಧಿಕಾ ಪಂಡಿತ್ ಅಮೆರಿಕಾದ ಚಿಕಾಗೋದಲ್ಲಿದ್ದಾರೆ. ಪ್ರೇಮಿಗಳ ದಿನದಂದು ಪತ್ನಿಯ ಜೊತೆಗಿರಲು ಯಶ್ ಕೂಡ ಅಮೆರಿಕಗೆ ಹೋಗಿದ್ದಾರೆ. ರಾಧಿಕಾ ಪಂಡಿತ್ ಸಹೋದರನಿಗೆ ಹೆಣ್ಣು ಮಗುವಾಗಿದೆ. ರಾಧಿಕಾ ಸಹೋದರ ನೆಲೆಸಿರುವುದು ಚಿಕಾಗೋದಲ್ಲಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ಈಗ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಯಶ್ ಜೊತೆಗಿನ ಫೋಟೋವನ್ನೂ ಕೂಡ ರಾಧಿಕಾ ಹಂಚಿಕೊಂಡಿದ್ದಾರೆ.