Tag: Radhika pandith

  • ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ವೈಜಿಎಫ್ 2- ಎರಡನೇ ಮಗುವಿನ ತಂದೆಯಾಗ್ತಿದ್ದಾರೆ ಯಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಗಳ ಮುದ್ದಾದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಯಶ್ ಈಗ ಎರಡನೇ ಮಗುವಿಗೆ ತಂದೆಯಾಗುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು 4 ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಸ್ವತಃ ಯಶ್ ಅವರೇ ತಮ್ಮ ಮಗಳ ವಿಡಿಯೋ ಮೂಲಕ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಇದೇ 23ರಂದು ಯಶ್ ದಂಪತಿ ತಮ್ಮ ಮಗಳಿಗೆ ಐರಾ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಯಶ್ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ವೈಜಿಎಫ್ ಚಾಪ್ಟರ್ 2, ಮತ್ತೊಂದು ಸಿಹಿ ಸುದ್ದಿ ನಿಮ್ಮ ಪ್ರೀತಿ ಹಾರೈಕೆ ನಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಮಗಳ ವಿಡಿಯೋ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಭಾನುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನಡೆದ ಅದ್ಧೂರಿ ನಾಮಕರಣ ಸಮಾರಂಭದಲ್ಲಿ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಾದ ಮಗಳಿಗೆ `ಐರಾ’ ಎಂದು ಹೆಸರಿಟ್ಟಿದ್ದರು. ಯಶ್ ಹಾಗೂ ರಾಧಿಕಾ ಹೆಸರಿನ ಅಕ್ಷರಗಳನ್ನು ಜೋಡಿಸಿ ಈ ಹೆಸರಿಟ್ಟಿರುವುದು ಒಂದು ವಿಶೇಷವಾದರೆ ಇದರ ಅರ್ಥ ಇನ್ನೊಂದು ವಿಶೇಷತೆ ಹೊಂದಿದೆ.

    ಸೋಶಿಯಲ್ ಮಿಡಿಯಾದಲ್ಲಿ ಮಗಳ ಫೋಟೋ ಅಪ್ಲೋಡ್ ಮಾಡುತ್ತಿದ್ದಾಗ `Baby YR’ ಎಂದೇ ಕರೆಯುತ್ತಿದ್ದರು. ಈಗ ಮಗಳಿಗೆ AYRA ಎಂದು ಹೆಸರನ್ನಿಟ್ಟಿದ್ದಾರೆ. ನಡುವಿನಲ್ಲಿ YR ಎಂದಿದೆ. ಅಷ್ಟೇ ಅಲ್ಲ ರಾ (ರಾಧಿಕಾ) ಹಾಗೂ ಯ (ಯಶ್) ಅಕ್ಷರಗಳೂ ಇದೆ.

    ಅರೇಬಿಕ್‍ನಲ್ಲಿ ‘ಐರಾ’ ಎಂದರೆ `ಕಣ್ಣು ತೆರೆಸುವವರು’ ಅಥವಾ `ಗೌರವಾನ್ವಿತರು’ ಎನ್ನುವ ಅರ್ಥ ಬರುತ್ತದೆ. ಕನ್ನಡದಲ್ಲಿ ‘ಭೂದೇವಿಯಲ್ಲಿ ಸನ್ನಿಹಿತಳಾದ ಲಕ್ಷ್ಮೀ’ ಎನ್ನುವ ಅರ್ಥ ಬರುತ್ತದೆ.

  • ರಾಕಿಂಗ್ ದಂಪತಿಯಿಂದ ಮಗಳ ಫೋಟೋ ರಿವೀಲ್

    ರಾಕಿಂಗ್ ದಂಪತಿಯಿಂದ ಮಗಳ ಫೋಟೋ ರಿವೀಲ್

    ಬೆಂಗಳೂರು: ರಾಕಿಂಗ್ ದಂಪತಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಮಗುವಿನ ಫೋಟೋ ಹಾಕಿ, “ನಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿದ್ದೇವೆ. ನಾವು ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ಹೆಸರು ಇಡುವವರೆಗೂ ಎಲ್ಲರೂ ‘ಬೇಬಿವೈಆರ್’ ಎಂದು ಕರೆಯಿರಿ. ನೀವು ಎಲ್ಲರೂ ಸೇರಿ ನನ್ನ ಮಗಳಿಗೆ ಪ್ರೀತಿ ಹಾಗೂ ಆರ್ಶೀವಾದ ನೀಡಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ನಟ ಯಶ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಟ್ವಿಟ್ಟರಿನಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, “ನೀವು ಹೇಳಿದ್ದೇ ಸರಿ. ಇವಳು ಬರೋವರ್ಗು ಮಾತ್ರ ನನ್ನ ಹವಾ. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ?. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ರಾಧಿಕಾ, “ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ” ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಬರೆದುಕೊಂಡಿದ್ದರು.

    ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2018ರ ಡಿಸೆಂಬರ್ 2ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಇದುವರೆಗೂ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ.

  • ಅಕ್ಷಯ ತೃತೀಯದಂದು ಯಶ್-ರಾಧಿಕಾ ಮಗಳ ಫೋಟೋ ರಿವೀಲ್!

    ಅಕ್ಷಯ ತೃತೀಯದಂದು ಯಶ್-ರಾಧಿಕಾ ಮಗಳ ಫೋಟೋ ರಿವೀಲ್!

    ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಯಶ್, ರಾಧಿಕಾ ಪಂಡಿತ್ ದಂಪತಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಯಶ್ ಮಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದು ಮೇ 7ರಂದು ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಹೇಳಿದ್ದಾರೆ.

    ಹೌದು. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, ಮೇ 7ರಂದು ಅಕ್ಷಯ ತೃತೀಯವಿದೆ. ಹೀಗಾಗಿ ಆ ಶುಭ ದಿನದಂದೇ ಮಗಳ ಫೋಟೋವನ್ನು ನಿಮ್ಮೆಲ್ಲರ ಮುಂದಿಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನು, ಯಶ್ ನಿಮ್ಮನ್ನು ಪ್ರೀತಿಸ್ತೇವೆ, ಆರಾಧಿಸ್ತೇವೆ: ವೈದ್ಯೆಯ ಬರ್ತ್ ಡೇಗೆ ರಾಧಿಕಾ ವಿಶ್

     ಫೇಸ್ ಬುಕ್ ನಲ್ಲಿ ಬರೆದಿದ್ದೇನು?:
    ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳು, ಪತ್ನಿ ಜೊತೆ ರಾಕಿಂಗ್ ಸ್ಟಾರ್ ಮಾತು

    ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2018ರ ಡಿಸೆಂಬರ್ 2ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಇದುವರೆಗೂ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ. ಹೀಗಾಗಿ ಇದೇ ತಿಂಗಳ 7ರಂದು ಅಭಿಮಾನಿಗಳಿಗಾಗಿ ಮಗಳ ಫೋಟೋ ಬಿಡುಗಡೆ ಮಾಡಲಿದ್ದಾರೆ.

  • ರಾಧಿಕಾ ಮನವಿಗೆ ನಾಚಿ ನೀರಾದ ರಾಮಾಚಾರಿ!

    ರಾಧಿಕಾ ಮನವಿಗೆ ನಾಚಿ ನೀರಾದ ರಾಮಾಚಾರಿ!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ನಟಿ ರಾಧಿಕಾ ಪಂಡಿತ್ ಅವರ ಮನವಿಗೆ ನಾಚಿಕೆ ಪಟ್ಟಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಟಿ ರಾಧಿಕಾ ಪಂಡಿತ್ ಅವರು ಯಶ್ ಫೋಟೋವನ್ನು ತನ್ನ ಫೇಸ್‍ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಯಶ್ ಮತ್ತು ರಾಧಿಕಾ ಅವರು ಒಟ್ಟಿಗೆ ಹೋಟೆಲ್ ಗೆ ಹೋಗಿದ್ದು, ಅಲ್ಲಿ ನಟ ಯಶ್ ತಮ್ಮ ಎರಡು ಕೈಗಳಿಂದ ನಾಚಿಕೊಂಡು ಮುಖಮುಚ್ಚಿಕೊಂಡು ಕುಳಿತಿದ್ದಾರೆ. ಯಶ್ ಎದುರು ಕುಳಿತಿದ್ದ ರಾಧಿಕಾ ಅವರು ಕೂಡಲೇ ಯಶ್ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಯಶ್ ಅವರ ಫೋಟೋಗೆ “ತಮ್ಮ ಪತ್ನಿ ಫೋಟೋಗೆ ಪೋಸ್ ಕೊಡಿ ಎಂದು ಕೇಳಿದಾಗ ರಾಕಿಂಗ್ ಸ್ಟಾರ್ ಯಶ್ ಹೀಗೆ ತುಂಬಾ ನಾಚಿಕೊಂಡಿದ್ದಾರೆ” ಎಂದು ನಟಿ ರಾಧಿಕಾ  ಫೋಟೋದೊಂದಿಗೆ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

    ರಾಧಿಕಾ ಅವರು ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅನೇಕ ಅಭಿಮಾನಿಗಳು ಕೂಟ್, ಸೂಪರ್, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಫೋಟೋ ಅಪ್ಲೋಡ್ ಮಾಡಿ 12 ಗಂಟೆಯಲ್ಲಿಯೇ 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    https://www.instagram.com/p/Bvb5yvwBTIb/

  • ಅಭಿಮಾನಿಗಳು ಸೂಚಿಸಿದ ಹೆಸರನ್ನೇ ಮಗ್ಳಿಗೆ ಇಡಲಿದ್ದಾರೆ ರಾಕಿಂಗ್ ಜೋಡಿ

    ಅಭಿಮಾನಿಗಳು ಸೂಚಿಸಿದ ಹೆಸರನ್ನೇ ಮಗ್ಳಿಗೆ ಇಡಲಿದ್ದಾರೆ ರಾಕಿಂಗ್ ಜೋಡಿ

    ಬೆಂಗಳೂರು: ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಎಂಟ್ರಿ ಕೊಟ್ಟು ಮೂರು ತಿಂಗಳಾಗಿದೆ. ಮೂರು ತಿಂಗಳಾದರೂ ಯಶ್ ಹಾಗೂ ರಾಧಿಕಾ ತಮ್ಮ ಮಗಳ ನಾಮಕರಣವನ್ನು ಮಾಡಲಿಲ್ಲ. ಈಗ ಅಭಿಮಾನಿಗಳು ಸೂಚಿಸಿದ ಹೆಸರನ್ನೇ ತಮ್ಮ ಮಗಳಿಗೆ ನಾಮಕರಣ ಮಾಡುತ್ತಿದ್ದಾರೆ.

    ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗಳಿಗೆ ಹೆಸರು ಸೂಚಿಸಲು ಪ್ರಾರಂಭಿಸಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳಿಗೆ ‘ಯಶಿಕಾ’ ಎಂದು ಹೆಸರಿಡಬೇಕೆಂದು ಅಭಿಮಾನಿಗಳು ಸೂಚಿಸಿದ್ದರು.

    ಯಶ್ ಹಾಗೂ ರಾಧಿಕಾ ಇಬ್ಬರ ಹೆಸರು ಸೇರಿಸಿ ‘ಯಶಿಕಾ’ ಎಂದು ಹೆಸರಿಡಲು ಅಭಿಮಾನಿಗಳು ಸ್ಟಾರ್ ಜೋಡಿ ಬಳಿ ಮನವಿ ಮಾಡಿಕೊಂಡಿದ್ದರು. ಈಗ ಈ ಹೆಸರೇ ತಮ್ಮ ಮಗಳಿಗೆ ನಾಮಕರಣ ಮಾಡಲು ಯಶ್ ಒಪ್ಪಿಕೊಂಡಿದ್ದಾರೆ. ಸದ್ಯ ಮಗುವಿಗೆ ಈಗ ಮೂರು ತಿಂಗಳಾಗಿದ್ದು, 5ನೇ ತಿಂಗಳಿನಲ್ಲಿ ನಾಮಕರಣ ಮಾಡಲಿದ್ದಾರೆ.

    ಈ ಬಗ್ಗೆ ಸ್ವತಃ ರಾಧಿಕಾ ಪಂಡಿತ್ ಅವರು, “ನಮ್ಮ ಮಗಳಿಗೆ ಯಶಿಕಾ ಎಂದು ಹೆಸರಿಡಲು ನಿರ್ಧರಿಸಿದ್ದೇವೆ. ಅಲ್ಲದೇ ಮಗುವಿಗೆ 5ನೇ ತಿಂಗಳು ತುಂಬಿದ್ದಾಗ ನಾಮಕರಣ ಮಾಡಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

    ಬಾಲಿವುಡ್ ಶಾಹಿದ್ ಕಪೂರ್ ಅವರು ಕೂಡ ತಮ್ಮ ಮೊದಲ ಮಗುವಿಗೆ ತನ್ನ ಹಾಗೂ ಪತ್ನಿ ಮೀರಾ ಹೆಸರು ಸೇರಿಸಿ ‘ಮಿಶಾ’ ಎಂದು ಹೆಸರಿಟ್ಟಿದ್ದರು. ಸ್ಟಾರ್ ಜೋಡಿಗಳಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರನ್ನು ವಿರುಷ್ಕಾ ಎಂದು ಕರೆದರೆ, ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್‍ನನ್ನು ದೀಪ್‍ವೀರ್ ಜೋಡಿ ಎಂದು ಕರೆಯಲಾಗುತ್ತದೆ.

    https://www.youtube.com/watch?v=VxelNRK-5H0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್- ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿ

    ಯಶ್- ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿ

    ಬೆಳಗಾವಿ: ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯಾಸೆ ನನಸಾಗಿದೆ. ಅಂಬಿ ಕನಸಿನಂತೆ ಯಶ್-ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿಯಾಗಿದ್ದು ಇಂದು ಬೆಂಗಳೂರು ತಲುಪಲಿದೆ.

    ಮಂಡ್ಯದ ಗಂಡು ದಿವಂಗತ ನಟ ಅಂಬರೀಶ್ ಅವರ ಕನಸು ನನಸಾಗಿದೆ. ನಟಿ ರಾಧಿಕಾ ಪಂಡಿತ್ ನಮ್ಮ ಮನೆಯ ಮಗಳು ಅವರ ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ನಮ್ಮ ಮನೆಯಿಂದಲೇ ತೊಟ್ಟಿಲು ಹೋಗಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತು. ಅದರಂತೆ ರಾಧಿಕಾ-ಯಶ್ ಮಗಳಿಗಾಗಿ ಅಂಬಿ ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧಗೊಂಡಿದೆ. ಕಿತ್ತೂರು ಕಲ್ಮಠದಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆ ಮಾಡಿ ತೊಟ್ಟಿಲನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಶೇಷ ತೊಟ್ಟಿಲು ಇಂದು ಅಂಬಿ ಮನೆ ತಲುಪಲಿದೆ.

    ಕಲಘಟಗಿಯ ಸಾಹುಕಾರ್ ಕುಟುಂಬದ ಗರಡಿಯಲ್ಲಿ ಟಿಕ್‍ವುಡ್‍ನಿಂದ ಈ ತೊಟ್ಟಿಲು ತಯಾರಿಸಲಾಗಿದೆ. ಸಾವಯವ ಬಣ್ಣದಿಂದ ಲೇಪನವಾದ ಪೇಂಟಿಂಗ್, ವಿಷ್ಣುವಿನ ದಶಾವತಾರವನ್ನು ತೊಟ್ಟಿಲಿನಲ್ಲಿ ಕೆತ್ತಲಾಗಿದೆ. ಈ ತೊಟ್ಟಿಲು ವಿಭಿನ್ನ ಡಿಸೈನ್‍ಗಳಿಂದ ಕೂಡಿದ್ದು ಪ್ರಾಚೀನ ಕಾಲದ ಶೈಲಿಯಲ್ಲಿ ತಯಾರಿಸಲಾಗಿದೆ. ಇಬ್ಬರು ಸೇರಿಕೊಂಡು ಮಾಡಿರುವ ಈ ತೊಟ್ಟಿಲಿಗೆ ಖರ್ಚಾಗಿದ್ದು 1 ಲಕ್ಷದ 20 ಸಾವಿರ ರೂಪಾಯಿ. ಅದೂ ಅಲ್ಲದೇ ನೂರು ವರ್ಷಗಳ ಕಾಲ ಈ ಬಣ್ಣಕ್ಕೆ ಏನೂ ಆಗುವುದಿಲ್ಲ ಎನ್ನುವುದು ವಿಶೇಷ.

    ಒಬ್ಬ ತಂದೆಗೆ ಮಗಳ ಕಾಳಜಿ ಎಷ್ಟಿರುತ್ತೆ ಅವಳ ಖುಷಿಗಾಗಿ ತಂದೆ ಏನೆಲ್ಲಾ ಮಾಡ್ತಾನೆ ಎಂಬುದನ್ನು ತಂದೆಯ ಸ್ಥಾನದಲ್ಲಿದ್ದುಕೊಂಡು ಅಂಬಿ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ನಟಿ ರಾಧಿಕಾ ಮಗಳು ಈ ತೊಟ್ಟಿಲಲ್ಲಿ ಆಡಿ ನಲಿದು ಚೆನ್ನಮ್ಮನಂತಾಗಲಿ ಎಂಬುದು ಅಂಬಿ ಅಭಿಮಾನಿಗಳ ಆಸೆಯಾಗಿದೆ.

    https://www.youtube.com/watch?v=8O7gBadMmdI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದುವರಿದ ಐಟಿ ವಿಚಾರಣೆ- ರಾಧಿಕಾ ಡ್ರೈವರನ್ನು ಕರೆದೊಯ್ದ ಅಧಿಕಾರಿಗಳು..!

    ಮುಂದುವರಿದ ಐಟಿ ವಿಚಾರಣೆ- ರಾಧಿಕಾ ಡ್ರೈವರನ್ನು ಕರೆದೊಯ್ದ ಅಧಿಕಾರಿಗಳು..!

    ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟರ ಮನೆ ಮೇಲೆ ಗುರುವಾರ ದಾಳಿ ನಡೆಸುವ ಮೂಲಕ ಐಟಿ ಶಾಕ್ ನೀಡಿದ್ದು, ಇಂದು ಯಶ್ ಮಾವನ ಮನೆಗೆ ಮತ್ತಿಬ್ಬರು ಐಟಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ರಾಧಿಕಾ ಪಂಡಿತ್ ಕುಟುಂಬದ ಕಾರಿನ ಡ್ರೈವರನ್ನು ಅಧಿಕಾರಿಗಳು ಕರೆದೊಯ್ದಿದ್ದು, ತೀವ್ರ ಕುತೂಹಲ ಮೂಡಿಸಿದೆ. ಯಾವುದೋ ಒಂದು ವಿಳಾಸ ಕೇಳಲು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇಂದು ಬೆಳಗ್ಗೆ ಒಟ್ಟು 6 ಜನ ಐಟಿ ಅಧಿಕಾರಿಗಳು ರಾಧಿಕಾ ಮನೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.

    ಕೆಜಿಎಫ್ ಚಿತ್ರ ಸಾಕಷ್ಟು ಬ್ಯುಸಿನೆಸ್ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ದಾಳಿ ನಡೆಸಿರುವುದು ಅಚ್ಚರಿ ಮೂಡಿಸಿದೆ. ಈ ಮೂಲಕ ಯಶ್ ಹಾಗೂ ರಾಧಿಕಾ ಅವರನ್ನು ಬೇರೆ ಬೇರೆಯಾಗಿ ವಿಚಾರಣೆ ನಡೆಸಿ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ರಾಧಿಕಾ ಮನೆಗೆ ಭದ್ರತೆ ಕಲ್ಪಿಸಿದ್ದಾರೆ.

    ಇತ್ತ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಇಂದು ಬೆಳಗ್ಗೆ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿಸಿದ್ದರು. ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಯಶ್ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನಿಟ್ಟುಕೊಂಡು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಯಶ್ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಮನೆಗೆ ಮುಂಜಾನೆ ಮೂರು ಗಂಟೆಗೆ ಬಂದಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸಹನೆಯಿಂದ ಯಶ್ ಅವರ ತಾಯಿ ಉತ್ತರಿಸಿದ್ದಾರೆ. ಯಶ್ ಅವರ ತಾಯಿ ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್‍ನ ಡಿಟೈಲ್ ನೀಡಿದ್ದಾರೆ. ಐಟಿ ಅಧಿಕಾರಿಗಳು ಯಶ್ ಮನೆಯಲ್ಲಿರುವ ಚಿನ್ನ ನಗನಾಣ್ಯ ಯಶ್ ಅವರ ತಾಯಿ ಮುಂದೆ ಲೆಕ್ಕ ಮಾಡಿದ್ದಾರೆ. 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450ಗ್ರಾಂ ಚಿನ್ನ, ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರ ಇರುವುದು ಬೆಳಕಿಗೆ ಬಂದಿದೆ.

    ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ. ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ. ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಅಲ್ಲದೇ 8 ಎಕರೆ ಯಶ್ ಮನೆ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನಗೇನು ಗೊತ್ತಿಲ್ಲ – ಐಟಿ ಅಧಿಕಾರಿಗಳ ಪ್ರಶ್ನೆಗೆ ಯಶ್ ತಾಯಿ ಉತ್ತರ

    ನನಗೇನು ಗೊತ್ತಿಲ್ಲ – ಐಟಿ ಅಧಿಕಾರಿಗಳ ಪ್ರಶ್ನೆಗೆ ಯಶ್ ತಾಯಿ ಉತ್ತರ

    ಬೆಂಗಳೂರು: ಬೆಳ್ಳಂಬೆಳ್ಳಗೆ ಕನ್ನಡದ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ಅವರ ತಾಯಿ, ಸಹೋದರಿ ಮನೆ ಮೇಲೂ ಐಟಿ ದಾಳಿ ನಡೆದಿದೆ.

    ನಟ ಯಶ್ ಅವರ ಮನೆ, ತಾಯಿ, ಸಹೋದರಿ, ಪತ್ನಿ ರಾಧಿಕಾ ಪಂಡಿತ್ ತಂದೆಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.

    ಇಂದು ಮುಂಜಾನೆಯಿಂದ ಐಟಿ ಅಧಿಕಾರಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸದಲ್ಲಿ ತಾಯಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ವೇಳೆ ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಯಶ್ ತಾಯಿ ಗೊತ್ತಿಲ್ಲ ಎನ್ನುವ ಮಾತು ಬಿಟ್ಟರೆ ಬೇರೆ ಏನೂ ಉತ್ತರ ನೀಡುತ್ತಿಲ್ಲ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ. ಅಲ್ಲದೇ ಯಶ್ ಅವರ ಸಹೋದರಿಯನ್ನು ಪ್ರಶ್ನಿಸಿದ್ದರೆ, ನಾನು ಬೇರೆ ಕಡೆ ಇರುವುದು ಅವರ ವ್ಯವಹಾರ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.

    ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಧಿಕಾ ಮನೆಯಲ್ಲಿ ಒಟ್ಟು ಆರು ಜನ ಐಟಿ ಅಧಿಕಾರಿಗಳಿದ್ದು ತಂದೆ- ತಾಯಿ ಹೆಸರಿನಲ್ಲಿರುವ ಆಸ್ತಿ ಪತ್ರ ಕಲೆ ಹಾಕುತ್ತಿದ್ದಾರೆ.

    ಇದೇ ವೇಳೆ ರಾಧಿಕಾ ನಿವಾಸಕ್ಕೆ ಇಬ್ಬರು ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಯಶ್ ಅಂತಾ ಶರ್ಟ್ ಧರಿಸಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೂ.ಸಿಂಡ್ರೆಲಾಳನ್ನು ಎದೆಗಪ್ಪಿಕೊಂಡು ಹೆಜ್ಜೆ ಹಾಕಿದ ರಾಧಿಕಾ

    ಜೂ.ಸಿಂಡ್ರೆಲಾಳನ್ನು ಎದೆಗಪ್ಪಿಕೊಂಡು ಹೆಜ್ಜೆ ಹಾಕಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಮಗಳ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ತಮ್ಮ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇನ್ನು ಮಗು ಜನಿಸಿದ ಬಳಿಕ ಮಗಳ ಫೋಟೋವನ್ನು ಇದೂವರೆಗೂ ರಿವೀಲ್ ಮಾಡಿಲ್ಲ. ಆಸ್ಪತ್ರೆಯ ಕೆಲ ಫೋಟೋಗಳು ಮಾತ್ರ ಲೀಕ್ ಆಗಿದ್ದವು. ತದನಂತರ ಇಂದಿಗೂ ಜೂನಿಯರ್ ಸಿಂಡ್ರೆಲಾ ಹೇಗಿದ್ದಾಳೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

    ಮಗುವನ್ನು ಎತ್ತಿಕೊಂಡು ತೋಳುಗಳಲ್ಲಿ ತೆಗೆದುಕೊಂಡು ಹೋಗುತ್ತಿರುವ ಫೋಟೋ ಹಾಕಿಕೊಂಡು, ನಮ್ಮ ಜೀವನದಲ್ಲಿ ಜೇಂಜ್ ಎನ್ನುವುದು ನಿರಂತರವಾಗಿರುತ್ತದೆ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಖ ಕಾಣಿಸದಿರುವುದು ಬಹುತೇಕ ಅಭಿಮಾನಿಗಳಲ್ಲಿ ಬೇಸರ ತರಿಸಿದೆ.

     

    View this post on Instagram

     

    Change.. is the only thing that is constant in life! ???? #radhikapandit #nimmaRP

    A post shared by Radhika Pandit (@iamradhikapandit) on

    ರಾಧಿಕಾ ಪಂಡಿತ್ ಡಿಸೆಂಬರ್ 2 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಧಿಕಾ, ನನಗೆ ಮೊದಲಿಗೆ ಮಗು ಹಿಡಿದುಕೊಳ್ಳುವುದು ಗೊತ್ತಿರಲಿಲ್ಲ. ಅಮ್ಮ ಹೇಳಿಕೊಟ್ಟ ಬಳಿಕ ಮಗುವನ್ನು ಎತ್ತಿಕೊಂಡೆ. ಮಗಳು ಬಂದ ನಂತರದ ಜೀವನ ಸಂಪೂರ್ಣ ಬದಲಾದಂತೆ ಆಗುತ್ತಿದೆ. ಪ್ರತಿಯೊಂದು ಕ್ಷಣವೂ ರೋಮಾಂಚನವನ್ನು ಉಂಟುಮಾಡಿದೆ ಎಂದು ಹೇಳುವ ತಾಯ್ತನದ ಹಿತವನ್ನು ಹಂಚಿಕೊಂಡಿದ್ದರು.

    ಇತ್ತ ಯಶ್ ಮಗಳು ಬೆರಳು ಹಿಡಿದಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪಿನ್ ಮಾಡಿಕೊಂಡಿದ್ದಾರೆ. ನೆಟ್ಟಿಗರು ಮಗಳು ಬಂದ ಮೇಲೆ ಅಪ್ಪ(ಯಶ್)ನ ಜೀವನ ಬದಲಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಸಾವನ್ನಪ್ಪುವ ಮೊದಲೇ ಯಶ್ ಮಗಳಿಗಾಗಿ ತೊಟ್ಟಿಲು ಮಾಡಿಸಿದ್ದರು. ಸದ್ಯ ರಾಧಿಕಾ ಪಂಡಿತ್ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಯಶ್ ಅಭಿನಯದ ಕೆಜಿಎಫ್ ಚಿತ್ರ 100 ಕೋಟಿ ಹಣ ಗಳಿಸಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಪತ್ನಿಯನ್ನ ಬೆಸ್ಟ್ ಸಾಂತಾ ಅಂದು ಕ್ರಿಸ್‍ಮಸ್‍ಗೆ ವಿಶ್ ಮಾಡಿದ್ರು ಯಶ್

    ಬೆಂಗಳೂರು: ತನ್ನ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊತ್ತಲ್ಲೇ ನಾಡಿನಾದ್ಯಂತ ಇಂದು ಕ್ರಿಸ್ ಮಸ್ ಹಬ್ಬ ಆಚರಿಸುವ ದಿನವೂ ಬಂದಿದೆ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ಅವರು ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

    ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ಸೆಲ್ಫಿ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಯಶ್, ನನ್ನ ಪತ್ನಿಯೇ ನನಗೆ ಬೆಸ್ಟ್ ಸಾಂತಾ ಎಂದು ಹೇಳಿದ್ದಾರೆ.

    ಪೋಸ್ಟ್ ನಲ್ಲೇನಿದೆ..?
    ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನನ್ನ ಪತ್ನಿಯೇ ನನ್ನ ಬೆಸ್ಟ್ ಸಾಂತಾ ಹೇಳಿಕೊಂಡಿದ್ದಾರೆ. ಪುಟ್ಟ ಕಂದಮ್ಮಳನ್ನು ಉಡುಗೊರೆಯಾಗಿ ನೀಡಿ ಈ ಬಾರಿಯ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಸುಂದರವಾಗಿ ನನಗೆ ಆಚರಿಸಲು ಅವಕಾಶ ಮಾಡಿಕೊಟ್ಟ ನನ್ನ ಸಾಂತಾಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಕೆಜಿಎಫ್ ಚಿತ್ರದ 4 ದಿನದ ಕಲೆಕ್ಷನ್ ಎಷ್ಟು ಗೊತ್ತೆ?

    ಮನೆಗೆ ಹೋಗೋದೆ ಖುಷಿ:
    ತನ್ನ ಅಭಿನಯದ ಕೆಜಿಎಫ್ ಚಿತ್ರ ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದು, ಈ ಬೆನ್ನಲ್ಲೇ ಅಮೆರಿಕ ಮೂಲದ ಯೂ ಟ್ಯೂಬ್ ಚಾನೆಲ್ ನವರು ಯಶ್ ಅವರನ್ನು ವಿಡಿಯೋ ಮೂಲಕ ಸಂದರ್ಶನ ಮಾಡಿದ್ದರು.

    ಈ ವೇಳೆ ರಾಕಿ, ಕೆಜಿಎಫ್ ಗಿಂತಲೂ ದೊಡ್ಡ ಖುಷಿ ನನಗೆ ಮನೆಗೆ ಹೋದಾಗ ಈಗ ಸಿಗ್ತಿದೆ. ‘ಕೆಲಸದ ಒತ್ತಡ ಎಷ್ಟೇ ಇದ್ದರೂ ಇದೀಗ ನನಗೆ ಮನೆಗೆ ಹೋಗೋದೆ ಒಂದು ಖುಷಿ. ಯಾಕಂದ್ರೆ ನನ್ನ ಮನೆಯಲ್ಲಿ ನನಗೋಸ್ಕರ ಒಬ್ಬಳು ಪುಟ್ಟ ದೇವತೆ ಕಾಯುತ್ತಿರುತ್ತಾಳೆ. ಅವಳೊಂದಿಗೆ ನಾನು ಆಟ ಆಡಬಹುದು ಎಂಬುದೇ ನನಗೆ ಅತ್ಯಂತ ಖುಷಿ ಕೊಡುವ ವಿಚಾರವಾಗಿದೆ. ಅವಳು ನಂಗೆ ಒಂಥರಾ ಅದೃಷ್ಟ ದೇವತೆ’ ಎಂದು ಯಶ್ ತಮ್ಮ ಮಗಳ ಬಗ್ಗೆ ಹೇಳಿಕೊಂಡಿದ್ದರು. ಇದನ್ನೂ ಓದಿ: ತಮಿಳುನಾಡಲ್ಲೂ ಕೆಜಿಎಫ್ ಹವಾ – ತಮಿಳು ಚಿತ್ರಗಳನ್ನು ಹಿಂದಿಕ್ಕಿ ಸ್ಕ್ರೀನ್ ಹೆಚ್ಚಿಸಿಕೊಳ್ಳುತ್ತಿದ್ದಾನೆ ರಾಕಿ ಭಾಯ್

    ಇದೇ ತಿಂಗಳ 2ರಂದು ಭಾನುವಾರ ಯಶ್-ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿತ್ತು. ಹೆಣ್ಣು ಮಗುವಿನ ಸಂತಸದಲ್ಲಿರುವ ಹೊತ್ತಲ್ಲೇ ರಾಕಿಂಗ್ ಜೋಡಿಯ 2ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದು, “ಎರಡು ವರ್ಷದ ಹಿಂದೆ ಹೀಗಿದ್ದೆವು. ಇಂದು ಹೀಗಿದ್ದೇವೆ. ನಮ್ಮ ಜೀವನದ ಹೊಸ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ನನ್ನ ಪ್ರೀತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

    ಇದಾದ ಬಳಿಕ ಇದೀಗ ಯಶ್ ಅಭಿನಯ ಕೆಜಿಎಫ್ ರಿಲೀಸ್ ಆಗಿದ್ದು, ಎಲ್ಲಡೆ ರಾಕಿ ಭಾಯ್ ಗೆ ಉಘೇ ಎನ್ನಲಾಗುತ್ತಿದೆ. ದೇಶ ಹಾಗೂ ಹೊರದೇಶದಲ್ಲಿ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ ಶಾರೂಖ್ ಅಭಿನಯದ ಝೀರೋ ಸಿನಿಮಾ ಕೂಡ ಅಂದೇ ತೆರೆಕಂಡಿದ್ದು, ಆದ್ರೆ ಝೀರೋವನ್ನು ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗುತ್ತಿದೆ.

    https://www.instagram.com/p/BrzIPfVgX6g/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv